ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪ್ರೇಮಿಗಳು...

ಆ ಬೆಟ್ಟದ ತುದಿಯ ಬೋಳು ಮರದ ಕೆಳಗೆ
ಸದಾ ಭೇಟಿ ಆಗುವ ಆ ಪ್ರೇಮಿಗಳು...
ಐನ್ ಸ್ಟೈನ್ ನ ವಿಶೇಷ ಸಮಯದ ನಿಯಮ
ಬಹುಶಃ ಇವರಿಗೂ ಅನ್ವಯ ಆಗಿತ್ತೋ ಏನೋ
ನಮ್ಮ ಇಡೀ ಒಂದು ದಿನ ಇವರ ಪಾಲಿಗೆ
ಒಂದು ಗಳಿಗೆಯಷ್ಟೂ ಆಗಿರಲಿಲ್ಲ.ಬೋಳು ಮರ ನೆರಳು ಕೊಡದಿದ್ದರೂ
ಬಿಸಿಲು ಅವರಿಗೆ ತಾಕಲಿಲ್ಲ
ಬೀಸುವ ಗಾಳಿಗೆ ತೂರಿದ
ಆ ಸುಂದರಿಯ ಕೂದಲ ಕಾರಣಕ್ಕೆ
ಆಕೆಯ ಮುಖ ಸರಿಯಾಗಿ ತೋರಲಿಲ್ಲ.ಏನೋ ಮಾತು,
ನಡು ನಡುವೆ ಮುದ್ದು
ಮತ್ತೇನನ್ನೂ ನಾನು ಕದ್ದು ನೋಡಲಿಲ್ಲ.
ಅವರ ಈ ಮುಗಿಯದ ಮಾತಿನ ಸಂತೆಯಲ್ಲಿ
ಕಳೆದು ಹೋಗಿರಬಹುದಾದ ಚಿಂತೆ
ಇತ್ತೋ ಇಲ್ಲವೋ ತಿಳಿಯಲಿಲ್ಲ.ವಸಂತನಾಗಮನ ಹತ್ತಿರವಾದಂತೆ..
ಪ್ರೇಮಿಗಳೆದೆಯಲ್ಲಿ ಹೊಸ ಕಾವ್ಯ
ಹುಟ್ಟಿರಬಹುದೇನೋ ಎಂಬ ನನ್ನ ಕಲ್ಪನೆ..
ಸುಳ್ಳಾಗುತ್ತ ಸಾಗಿದ್ದು ಚಿಗುರೆಲೆಯಷ್ಟೇ ಸತ್ಯ.
ಮುಂಗಾರು ಮೋಡ ಅಂಬರವ ಮುಸುಕಿದಂತೆ
ತೆರೆ ತೆರೆಯಾಗಿ ಮುಸುಕುತಿತ್ತು
ಪ್ರೇಮಿಗಳ ಮೊಗದಲ್ಲಿ ಚಿಂತೆ.ಕೊನೆಗೊಂದು ದಿನ..
ಪ್ರೇಮಿಗಳ ಬೋಳು ಮರದ ಕೆಳಗೆ
ಜನವೋ ಜನ...
ಬಿದ್ದೋಡಿ ಹೋಗಿ ನೋಡಿದರೆ
ಅಲ್ಲೆರಡು ಹೆಣ.
ಮರದೆಲೆಗಳು ಚಿಗಿಯುತ್ತಿದ್ದವು...
ವಸಂತ ಬರುತ್ತಿದ್ದ ಭೂಮಿಗೆ...
ಪ್ರೇಮ ಪಕ್ಷಿಗಳು ಹಾರಿದ್ದವು ಬಾನಿಗೆ.*Download app : https://goo.gl/9ZnKGJ *
ಇತ್ತೀಚಿನ ಪೋಸ್ಟ್‌ಗಳು

ಆಕಾಶವಾಣಿ... ವಾರ್ತೆಗಳು

ಒಂದಾನೊಂದು ಕಾಲದಲ್ಲಿ
ಹಳೇ ಕಾಲದ ರೇಡಿಯೋದಲ್ಲಿ
ಉಪೇಂದ್ರ ರಾವ್, ರಂಗ ರಾವ್
ಸುಧಾ ದಾಸ್ ಅವರುಗಳು
ವಾರ್ತೆ ಓದುತ್ತಿದ್ದುದು
ಬಹಳಾ ಚೆಂದವಿತ್ತು..ಆರ್ಕೆ ದಿವಾಕರ
ಚಿತ್ತರಂಜನ್ ದಾಸ್
ಮುಂತಾದವರ ಪ್ರದೇಶ ಸಮಾಚಾರ
ಮುದವಾಗಿ ಕಿವಿಗೆ ಅಡರುತ್ತಿತ್ತು.ಮುಂದೇನಾಯ್ತೆಂದರೆ..
ರೇಡಿಯೋಗಳ ಜಾಗದಲ್ಲಿ ಬಂದು ಕುಳಿತ
ಮೂರ್ಖರ ಪೆಟ್ಟಿಗೆಯಲ್ಲಿ
ದೂರ ದರ್ಶನವನ್ನು
ಅಡಚಣೆಗಾಗಿ ಕ್ಷಮಿಸುತ್ತ
ಹತ್ತಿರ ಮಾಡಿಕೊಂಡಂತೆಯೇ...
'ಉದಯ'ವಾದವು ಹೊಸ
ಖಾಸಗಿ ವಾಹಿನಿಗಳು...ವಾರ್ತೆಗಳನ್ನು ಓದುತ್ತಿದ್ದವರ
ಕಾಲ ಸರಿದು..
ವಾಕರಿಕೆ ಬರುವಂತೆ ವದರುವವರ
ಕಾಲ ಸುರುವಾಯ್ತು.
ಸುದ್ದಿ ಹೆಕ್ಕಿ ತರುವವರೇ
ಸುದ್ದಿಯನ್ನು ಸೃಷ್ಟಿಸಲಾರಂಭಿಸಿ..
ಸುದ್ಧಿಗಿಂತ ಹೆಚ್ಚಾಗಿ
ಸದ್ದುಗಳೇ ತುಂಬಿ ಹೋಗಿ...ಸಂದರ್ಶನಕ್ಕೆ ಕೂತರೆ..
ಉತ್ತರಕ್ಕಿಂತ ಪ್ರಶ್ನೆಗಳೇ ಉದ್ದವಾಗಿ..
ಮುಗಿಯದ ಪ್ರಶ್ನೆಗೆ ಉತ್ತರಿಸಲು
ಅತಿಥಿಗೆ ಸಮಯ ಸಾಲದೇ ಎದ್ದು ಹೋಗಿ...
ನೋಡುಗರ ತಿಥಿ ಆಗುವ ಹೊತ್ತಿಗೆ
ವಾರ್ತಾ ಪ್ರಸಾರ ಮುಕ್ತಾಯವಾಯಿತು !*Download app : https://goo.gl/9ZnKGJ *

"ಐಚ್ಚಿಕ" ಹೆಸರಲ್ಲಿ "ಕಡ್ಡಾಯ ಹಿಂದಿ" ಹೇರಿಕೆ

ಮೊನ್ನೆ ಮೊನ್ನೆ "ಹಿಂದಿಯಾ" ಅನ್ನೋ ಹೋಟೆಲಿಗೆ ಹೋಗಿದ್ದೆ.

ತಿನ್ನಲು ಏನೇನಿದೆ ? ಅಂತ ಕೇಳಿದ್ದಕ್ಕೆ "ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಚಿತ್ರಾನ್ನ..." ಎಂಬ ಉತ್ತರ ಬಂತು.

"ಇಡ್ಲಿ ಕೊಡಿ" ಅಂದೆ,

"ಕ್ಷಮಿಸಿ, ಇಡ್ಲಿ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.

"ದೋಸೆ ಕೊಡಿ"

"ಕ್ಷಮಿಸಿ, ದೋಸೆ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.

"ಚಿತ್ರಾನ್ನ ಕೊಡಿ"

"ಕ್ಷಮಿಸಿ, ಚಿತ್ರಾನ್ನ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ.

ನನಗೆ ಬೇಕಾದ್ದು ಇಲ್ಲಿ ಸಿಗಲ್ಲ, ಸರಿ ನಾನು ಹೊರಗೆ ಹೋಗ್ತೀನಿ ಎಂದು ಎದ್ದೆ.

ನನ್ನನ್ನು ತಡೆದು ಹೇಳಿದರು.. "ಏನೂ ತಿನ್ನದೆ ಹೋಗುವ ಹಾಗೆಯೇ ಇಲ್ಲ, ಇದು "ಕಡ್ಡಾಯ ತಿನ್ನಣ"

"ಆದರೆ ಚಪಾತಿಯನ್ನೇ ತಿನ್ನಬೇಕು ಅಂತ ಕಡ್ಡಾಯ ಮಾಡ್ತಿದೀರಲ್ಲ? ಇದು ಚಪಾತಿ ಹೇರಿಕೆ ಅಲ್ವಾ ?"

"ಇಲ್ಲ, ಚಪಾತಿ ತಿನ್ನಬೇಕು ಅನ್ನೋದು ಐಚ್ಚಿಕ ವಿಷಯ. ಯಾರಿಗೂ ಹೇರಿಕೆ ಮಾಡುತ್ತಿಲ್ಲ. ಜೊತೆಗೆ ಬೇರೆ ಬೇರೆ ತಿನಿಸುಗಳೂ ಇವೆಯಲ್ಲ, ನಿಮಗೆ ಇಷ್ಟ ಬಂದಿದ್ದನ್ನ ತಿನ್ನಬಹುದು."

"ಆದರೆ ಬೇರೆ ತಿನಿಸು ಯಾವುದೂ ತಯಾರಿಲ್ಲವಲ್ಲ ?"

"ಹೌದು, ಹಾಗಾಗಿ ನೀವು ಚಪಾತಿ ತಿನ್ನಲೇ ಬೇಕು."

ಚಪಾತಿ ಜಾಗದಲ್ಲಿ ಹಿ…

ಜಗತ್ತನ್ನು ಬೆಳಗಿದ ಅನಾಮಿಕ ವಿಜ್ಞಾನಿ : ನಿಕೋಲ ಟೆಸ್ಲಾ !

ಅದು ೧೮೮೪, ಕ್ರೊವೇಶಿಯಾದ ೨೮ ವರ್ಷದ ಒಬ್ಬ ಯುವಕ ತನ್ನ ಅಪ್ರತಿಮ ಬುದ್ದಿವಂತಿಕೆಯನ್ನು ಬಸಿದು ಹಣ ಸಂಪಾದಿಸುವ ಯೋಚನೆಯೊಂದಿಗೆ ಅಮೆರಿಕಾಕ್ಕೆ ಪ್ರವೇಶಿಸಿ ಅಲ್ಲಿ ಅದಾಗಲೇ ಪ್ರಸಿದ್ದಿ ಪಡೆದಿದ್ದ ಇನ್ನೊಬ್ಬ ಯುವ ವಿಜ್ಞಾನಿಯ ಎದುರು ತಾನೇ ಬರೆದುಕೊಂಡು ತಂದಿದ್ದ ಚಿಕ್ಕದೊಂದು ಪತ್ರವನ್ನು ಹಿಡಿದು ನಿಲ್ಲುತ್ತಾನೆ. ಎದುರಿಗಿದ್ದ ವಿಜ್ಞಾನಿಯೋ ಅದಾಗಲೇ ಜಗತ್ಪ್ರಸಿದ್ದಿ ಪಡೆದಿದ್ದ ಮತ್ತು ವಿದ್ಯುತ್‌ ಜನರೆಟರ್‌ಗಳನ್ನು ತಯಾರಿಸಿ ಮಾರುವ ಅತಿ ದೊಡ್ಡ ಸಂಸ್ಥೆಯ ಒಡೆಯ ಕೂಡಾ. ಈ ಯುವಕ ನೀಡಿದ ಆ ಪತ್ರದಲ್ಲಿ ಇದ್ದುದು ಎರಡೇ ಸಾಲು...

"ಈ ಜಗತ್ತಿನಲ್ಲಿ ಈಗ ಇರುವುದು ಇಬ್ಬರೇ ಜೀನಿಯಸ್‌ಗಳು. ಅದರಲ್ಲಿ ಒಬ್ಬರು ನೀವು, ಮತ್ತೊಬ್ಬ ನಾನು!"

ಈತನ ಕ್ರಿಯಾಶೀಲತೆಯನ್ನು ಕಂಡು ಬೆರಗಾದ ಆ ವಿಜ್ಞಾನಿ "ನಿನ್ನ ಯೋಜನೆಗಳನ್ನು ಇಲ್ಲಿ ಮಾಡು, ನಾವು ತಯಾರಿಸುತ್ತಿರುವ ಜನರೇಟರ್‌ಗಳ ರೀ-ಡಿಸೈನ್‌ ಮಾಡಿ ಕೊಡು, ನಿನಗೆ ೫೦ ಸಾವಿರ ಡಾಲರ್‌ ಬೋನಸ್‌ ಕೊಡುತ್ತೇನೆ" ಎಂದು ಭರವಸೆ ನೀಡಿದ.

೫೦ ಸಾವಿರ ಡಾಲರ್‌ ಅನ್ನುವುದು ಆಗ ಊಹೆಗೂ ನಿಲುಕದ ದೊಡ್ಡ ಮೊತ್ತವಾಗಿತ್ತು! ಈಗಲೂ ಕೂಡಾ. ಅತ್ಯಂತ ಕುಶಿಗೊಂಡ ಆ ಬಡ ಯುವಕ ಬೇಗ ಬೇಗನೆ ಅನೇಕ ಜನರೆಟರ್‌ಗಳ ಮಾಡೆಲ್‌ಗಳನ್ನು ಮಾಡಿ ಆ ವಿಜ್ಞಾನಿಗೆ ತೋರಿಸಿದ. ಎಲ್ಲವೂ ಈ ಮೊದಲು ಅವರು ತಯಾರಿಸುತ್ತಿದ್ದ ಜನರೇಟರ್‌ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರು ಮಾಡಬಹುದಾದಂತಹ ಮಾಡೆಲ್‌ಗಳು. ಹೀಗೆ ತನಗೆ ಲಾಭದಾಯಕ…

ನಿರ್ಜೀವ ವಸ್ತುಗಳಿಂದ ಜೀವಕೋಶದ ರಚನೆ...

ಜೀವಿಗಳ ಉಗಮ ಆಕಸ್ಮಿಕವಾದುದು ಎಂಬ ವಿಜ್ಞಾನಿಗಳ ಹೇಳಿಕೆಗೆ ಈಗಾಗಲೇ ಸಾವಿರಾರು ಪುರಾವೆಗಳು ಸಿಕ್ಕಿವೆ. ಅವುಗಳಲ್ಲಿ ಪ್ರಮುಖವಾದುದು ಜೀವಕೋಶಗಳ ರಚನೆ ಆಗುತ್ತಿರುವು ಮುಖ್ಯವಾಗಿ ಕೇವಲ ಐದು ಮೂಲ ವಸ್ತುಗಳಿಂದ. ಅವುಗಳೆಂದರೆ ..
೧. ಹೈಡ್ರೋಜನ್‌ ೨. ಆಕ್ಸಿಜನ್‌ ೩. ಕಾರ್ಬನ್‌ ೪. ನೈಟ್ರೋಜನ್‌ ೫. ಕ್ಯಾಲ್ಸಿಯಂ
ಈ ಐದು ಮೂಲ ವಸ್ತುಗಳೇ ನಮ್ಮ ದೇಹದ ೯೯% ಭಾಗವನ್ನು ಆವರಿಸಿಕೊಂಡಿರುವುದು. ಇದನ್ನು ಹೇಳಿದ ಕೂಡಲೇ ಆಸ್ತಕರು ತಕ್ಷಣ "ಹಾಗಿದ್ದರೆ ಈ ವಸ್ತುಗಳನ್ನು ಕೊಡುತ್ತೇನೆ, ಜೀವಿಯೊಂದನ್ನು ಮಾಡಿ ಕೊಡಿ ನೋಡುವ" ಅನ್ನುವ ಸವಾಲನ್ನು ಒಡ್ಡುತ್ತಾರೆ. ಆ ಸವಾಲನ್ನು ವಿಜ್ಞಾನಿಗಳು ಈಗಾಗಲೇ ಸ್ವೀಕರಿಸಿದ್ದಾರೆ, ಮತ್ತು ನಿರ್ಜೀವ ವಸ್ತುಗಳಿಂದ ಜೀವಕೋಶವನ್ನು ಸೃಷ್ಟಿಸಲು ಹೆಣಗುತ್ತಿದ್ದಾರೆ. 
ಮೇಲೆ ತಿಳಿಸಿದ ಮೂಲವಸ್ತುಗಳ ಯಾವುದೋ ಒಂದು ವಿಶಿಷ್ಟ ಮಿಶ್ರಣದಲ್ಲೇ ಜೀವಿಗಳ ಉದಯ ಆಯ್ತು ಅನ್ನುವುದುವಿಜ್ಞಾನಿಗಳ ಬಲವಾದ ನಂಬಿಕೆ. ಏಕೆಂದರೆ ಮೇಲ್ಕಾಣಿಸಿದ ಎಲ್ಲಾ ಐದೂ ವಸ್ತುಗಳೂ ಸಹ ಜ್ವಾಲಾಮುಖಿಯ ಲಾವಾರಸ ನೀರಿನೊಂದಿಗೆ ಬೆರೆಯುವ ಸ್ಥಳದಲ್ಲಿ ಹೆಚ್ಚಾಗಿ ಇರುವುದನ್ನು ಕಾಣಬಹುದು. ಆ ಜಾಗವು ಒಂದು ವಿಶಿಷ್ಟ ರಾಸಾಯನಿಕ ಕ್ರಿಯೆಯನ್ನು ನಡೆಸುತ್ತಾ ಇರುತ್ತದೆ. ಇಂತಹ ಸಮಯದಲ್ಲೇ ಜೀವಿಯ ಉಗಮ ಆಗಿರುವ ಸಾಧ್ಯತೆ ಬಲವಾಗಿದೆ. ಏಕೆಂದರೆ ಭೂಮಿಯು ರಚನೆಗೊಂಡು ತಂಪಾಗುತ್ತಿದ್ದ ಸಮಯದಲ್ಲಿ ಕೂಡಾ ಇದೇ ತೆರನಾದ ಸ್ಥಿತಿಯು ಲಕ್ಷಾಂತರ ವರ್ಷಗಳ ವರೆಗೆ ಮುಂದುವರಿದಿ…

ಭೂಮಿಯ ಕಾಂತ ವಲಯ ಬದಲಾಗುವ ಹೊತ್ತಲ್ಲಿ..

ಸೂರ್ಯನಿಂದ ಬರುವ ರೆಡಿಯೇಷನ್ ಕಿರಣಗಳನ್ನು ಭೂಮಿಯ ಕಾಂತ ವಲಯ ತಡೆದು ಇಲ್ಲಿನ ಜೀವಿಗಳನ್ನು ಪೊರೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಅಂದರೆ ಒಂದೇ ಒಂದು ನಿಮಿಷ ಭೂಮಿಯ ಈ ಕಾಂತ ವಲಯ ಕೆಲಸ ನಿಲ್ಲಿಸಿದರೂ ಸಾಕು, ಬಹಳಷ್ಟು ಜೀವಿಗಳ ನಾಶ ಮತ್ತು ಉಳಿದರೂ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದ್ದೇ ಇದೆ. 
ಆದರೆ ಹೀಗೆ ಭೂಮಿಯ ಕಾಂತ ವಲಯ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಲು ಸಾದ್ಯವೇ ಎಂದು ನೋಡಲು ಹೋದರೆ "ಹೌದು, ಅದೂ ಆಗುತ್ತದೆ" ಎಂದು ಹೇಳುತ್ತಾರೆ ವಿಜ್ಞಾನಿಗಳು. 
ಭೂಮಿಯ ಕಾಂತ ವಲಯವು ತೆಂಕಣ ಮತ್ತು ಬಡಗಣ ತುದಿಗಳನ್ನು ಹೊಂದಿದೆ ತಾನೇ, ಈ ತುದಿಗಳು ಸುಮಾರು ಐವತ್ತು ಸಾವಿರದಿಂದ ಲಕ್ಷ ವರ್ಷಗಳ ಒಳಗೆ ಒಂದು ಸಲ ತೆಂಕಣ ತುದಿಯು ಬಡಗಣಕ್ಕೂ, ಬಡಗಣ ತುದಿಯು ತೆಂಕಣಕ್ಕೂ ಬದಲಾಗುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂದರೆ ಈಗ ಒಂದು ದಿಕ್ಸೂಚಿಯನ್ನು ಎಲ್ಲಿ ಇಟ್ಟರೂ ಅದು ಈಗ ಬಡಗು ದಿಕ್ಕನ್ನು ತೋರಿಸುತ್ತೆ. ಆದರೆ ಭೂಮಿಯ ಕಾಂತ ವಲಯ ತಲೆ ಕೆಳಗು ಆಯ್ತು ಅಂದರೆ ದಿಕ್ಸೂಚಿಯು ತೆಂಕು ದಿಕ್ಕನ್ನು ತೋರಿಸಲು ತೊಡಗುತ್ತೆ. ಇದು ಸುಮಾರು 50 ಸಾವಿರ ವರ್ಷಗಳಿಗೆ ಒಮ್ಮೆ ಹೀಗೆ ಬದಲಾಗುತ್ತ ಇರುತ್ತೆ ಅನ್ನೋದು ವಿಜ್ಞಾನಿಗಳ ಹೇಳಿಕೆ. ಆದರೆ ಅದು ಯಾಕೆ ಬದಲಾಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಈ ರೀತಿ ಈ ಹಿಂದೆ ಬದಲಾಗಿ ಆಗಲೇ 50 ಸಾವಿರ ವರ್ಶ ಕಳೆದಿದ್ದು ಮುಂದಿನ ಬದಲಾವಣೆ ಯಾವ ಹೊತ್ತಲ್ಲಿ…

ಚಿಂಗ್ರಿ ಶೋಕಿಯವ ಕಾಣುತ್ತಿಲ್ಲ...

ನಾನು ಸಾಗರದ ಜೂನಿಯರ್ ಕಾಲೇಜಿಗೆ ಹೋಗ್ತಾ ಇದ್ದಾಗ ಸಾಗರ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನದು ಒಂತರ ಏಕ ವ್ಯಕ್ತಿ ನಾಟಕದ ರೀತಿಯ ಜೀವನ. ಸಾಗರದ ಎರಡು ಮೂರು ಕಡೆ ಅವನದೇ ಆದ ಜಾಗ ಇತ್ತು. ಅದರಲ್ಲಿ ಒಂದು ಪ್ರಸಿದ್ದ ಜಾಗ ಅಂದರೆ ದೊಡ್ಡ ಅಸ್ಪತ್ರೆಯ ಎದುರಿನ ಪುಟ್ ಪಾತು.
ಮದ್ಯಾಹ್ನ ಸುಮಾರು ಮೂರು ಗಂಟೆಗೆ ಅವನ ಶೋ ಪ್ರಾರಂಭ ಆಗುತ್ತಿತ್ತು. ಶ್ರೀ ಟಾಕಿಸು ಮತ್ತು ಸಾಗರ ಟಾಕಿಸಿನಲ್ಲಿ ಮ್ಯಾಟ್ನಿ ತಪ್ಪಿಸಿಕೊಂಡವರು, ಸಂತೆ ಗಿಂತೆ ಏನೂ ಅಲ್ಲದೆ ಯಾವ್ದೋ ಸರ್ಕಾರಿ ಕಚೇರಿ ಕೆಲಸಕ್ಕೆ ಬಂದವರು, ಆ ಸಮಯಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಇದ್ದವರು... ಹೀಗೆ ಕೆಲವಾರು ಮಂದಿ ಅವನ ಪ್ರದರ್ಶನದ ಗಿರಾಕಿಗಳು ಮತ್ತು ಕುರಿಗಳು. ನಾವು ಮದ್ಯಾಹ್ನದ ಕ್ಲಾಸಿಗೆ ಚಕ್ಕರ್ ಹಾಕಿಯೋ, ಅಥವಾ ಟೀಚರೇ ಚಕ್ಕರ್ ಹಾಕಿದ್ದರಂತಲೂ... ಒಟ್ಟಿನಲ್ಲಿ ನೆಹರು ಮೈದಾನದಲ್ಲಿ ದಾಟಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಇಳಿದರೆ ನೇರ ಹೋಗಿ ನಿಲ್ಲುತ್ತಿದ್ದುದು ಅವನ ಪ್ರದರ್ಶನದ ಎದುರೇ.
ಹಾಗೆ ನೋಡಿದರೆ ಅವನ ಬಳಿ ಏನೂ ಇರಲಿಲ್ಲ, ಒಂದು ತಮಟೆ, ಒಂದು ಪುಂಗಿ ಮತ್ತೊಂದು ಕೇರೆ ಹಾವು! ಅಷ್ಟೇ ಇದ್ದಿದ್ದು. ಅಷ್ಟು ಬಿಟ್ಟರೆ ಉಳಿದಂತೆ ಅವನ ಬಂಡವಾಳ ಮಾತು ಮಾತು ಮಾತು.. ಅಷ್ಟೇ.
ಆ ಕೇರೆ ಹಾವನ್ನು ಅವನು ಯಾವತ್ತೂ ಪೂರ್ತಿ ತೆರೆದು ತೋರಿಸಿದ್ದು ನಾನು ನೋಡಲಿಲ್ಲ. ಒಂದು ದಬ್ಬಾದ ಒಳಗೆ ಅಡನ್ನು ಇಟ್ಟು, ಒಂಚೂರು ಬಾಲ ಮಾತ್ರ ಹೊರಗೆ ಕಾಣಿಸುವಂತೆ ಮಾಡಿರುತ್ತಿದ್ದ. ಆದರೆ ಹೇಳುವುದು ಮಾತ…