ವಿಷಯಕ್ಕೆ ಹೋಗಿ

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ !

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ !

ಹಾಗಂತ ಸಾಹಿತಿ ಎಸ್.ಎಲ್. ಬೈರಪ್ಪನವರು ನಮಗೆಲ್ಲಾ ಒಂದು ಒಳ್ಳೆ ಪ್ರಶಸ್ತಿ ನೀಡಿದ್ದಾರೆ. ಯಾವುದೋ ಸಂದರ್ಭದಲ್ಲಿ, ಮಾತಿನ ಭರಾಟೆಯಲ್ಲಿ, ಯಾವುದೋ ಕೋಪದಲ್ಲಿ ಇಂತಹ ಮಾತಾಡಿದ್ದರೆ ... "ಹಿರಿಯರು, ತಿಳಿ ಹೇಳಿದ್ದಾರೆ ಸಹಿಸೋಣ" ಅಂದುಕೊಂಡು ಸುಮ್ಮನಾಗಬಹುದಿತ್ತು. ಆದರೆ ಬೈರಪ್ಪನವರು ಅಷ್ಟು ಹೇಳಿ ಸುಮ್ಮನಾಗಲಿಲ್ಲ, ಬದಲಿಗೆ ಪರಮ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಕನ್ನಡಿಗರು ಅಭಿವೃದ್ಧಿಗೆ ಸಹಕರಿಸುವುದಿಲ್ಲ" ಅಂದಿದ್ದಾರೆ. ಇಷ್ಟಕ್ಕೂ ಯಡ್ಡಿ ಅದೇನು ಅಭಿವೃದ್ಧಿ ಮಾಡುತ್ತಿದ್ದಾರೆ ಅಂತ ರಾಜ್ಯದ ಜನತೆಗೆಲ್ಲಾ ತಿಳಿದಿರುವುದೇ ಆಗಿದೆ. ಅದು ಬೈರಪ್ಪನವರಿಗೆ ತಿಳಿದಿಲ್ಲವೇ ?

ಎಲ್ಲಾ ಕನ್ನಡಿಗರನ್ನೂ ಸಾರಾ ಸಗಟಾಗಿ ತರ್ಲೆಗಳು ಅನ್ನಲು ಇವರ್ಯಾರು ? ಇವರೇನು ಕನ್ನಡಿಗರಲ್ಲವೇ ? ಅಲ್ಲಿಗೇ ಬೈರಪ್ಪ ಅವರೂ ತರ್ಲೆ ಎಂದೇ ಆಯ್ತು. ವಯಸ್ಸೂ ಆಗಿರುವುದರಿಂದ ದೊಡ್ಡ ತರ್ಲೆ ಅನ್ನಬಹುದು.
ಆದರೆ ಬೈರಪ್ಪ ಅವರ ಮಾತಿನ ದಾಟಿ ಬೇರೆ ಇತ್ತು. ಅವರ ಪ್ರಕಾರ ಯಡ್ಡಿ ಏನೋ ಅಭಿವೃದ್ಧಿ ಮಾಡಿ ಬಿಡುತ್ತಿದ್ದರು. ಕರ್ನಾಟಕದ ತರ್ಲೇ ಜನ ಅದಕ್ಕೆ ಬಿಡುತ್ತಿಲ್ಲ ಅನ್ನುವಂತಿತ್ತು. ಅಂದರೆ ಯಡ್ಡಿ ಭೂ ಹಗರಣಕ್ಕೆ ಇವರ ಸಮರ್ಥನೆ ಅದು. "ಹಿಂದಿನವರೂ ಮಾಡಿದ್ದಾರೆ, ಇವರೂ ಮಾಡುತ್ತಿದ್ದಾರೆ" ಎಂದು ಸಮರ್ಥಿಸಿದ್ದಾರೆ. ಹಿಂದಿನವರು ಮಾಡುವಾಗ ಬೈರಪ್ಪ ಎಲ್ಲಿ ಹೋಗಿದ್ದರು? ಯಡ್ಡಿಗೆ ಸಮರ್ಥನೆ ಕೊಡುವ ಬದಲು ಭ್ರಷ್ಟರ ವಿರುದ್ಧ ಹೋರಾಟಕ್ಕಿಳಿದಿರುವ ಲೋಕಾಯುಕ್ತರಿಗೆ ಬೆಂಬಲ ಗೋಷಿಸಿದ್ದರೆ ಬೈರಪ್ಪರ ಮೇಲೆ ಗೌರವ ಮೂಡುತ್ತಿತ್ತು.

ಮತ್ತೆ ಗುಜರಾಥ್‌ನಲ್ಲಿ ಎಲ್ಲರೂ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ ಅಂದಿದ್ದಾರೆ. ಅದು ಮೋದಿ ಬಂದ ಬಳಿಕ. ಅದಕ್ಕೂ ಮೊದಲಿನ ರಾಜಕೀಯ ಕರ್ನಾಟಕಕ್ಕಿಂತಾ ಕಳಪೆ ಇತ್ತು. ಎಷ್ಟೋ ಮುಖ್ಯಮಂತ್ರಿಗಳನ್ನು ಒಂದೆರಡು ತಿಂಗಳಿಗೇ ಕುರ್ಚಿಯಿಂದ ಇಳಿಸಿದ ಉದಾಹರಣೆ ಇದೆ ಅಲ್ಲಿ. ಬೈರಪ್ಪರಿಗೆ ಅದೆಲ್ಲಾ ಗೊತ್ತಿಲ್ಲವೇ ?

ಎಲ್ಲೋ ಒಂದಿಷ್ಟು ಜನ ಏನೋ ಮಾಡಿದರು ಅಂತ ಇಡೀ ಸಮುದಾಯವನ್ನೂ ಮೂದಲಿಸೋದು ಸರಿ ಅಲ್ಲ. ಜನ ಯಾಕೆ ಬೃಹತ್ ಉದ್ದಿಮೆಗಳಿಗೆ ಸ್ಥಾವರಗಳಿಗೆ ಭೂಮಿ ನೀಡಲು ವಿರೋಧಿಸು‌ತ್ತಾರೆ ಅಂದರೆ ಸರ್ಕಾರದ ವೈಖರಿ. ಭೂಮಿ ಕಳಕೊಂಡವರಿಗೆ ಪರಿಹಾರ ಧನ ಸರಿಯಾಗಿ ಕೊಡಲ್ಲ. ಬದಲಿಗೆ ಯಾವುದಕ್ಕೋ ಭೂಮಿ ವಶಪಡಿಸಿಕೊಂಡು ನಂತರ ತಮ್ಮವರಿಗೆ ಮಾರಿಕೊಳ್ಳುತ್ತಾರೆ. ನಿಜವಾಗಿಯೂ ಸೇರಬೇಕಾದವರಿಗೆ ಸೇರದೇ ಇನ್ನಾರದೋ ಪಾಲಾಗುತ್ತೆ. ಉದಾ : ಲಿಂಗನಮಕ್ಕಿ ಜಲಾಶಯಕ್ಕೆ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯ್ತು. ಪಟ್ಟಾ ಪಾಣಿ ಇರುವವರಿಗೆ ಮಾತ್ರ ಪುಡಿಗಾಸು ನೀಡಿದರು. ಹಳ್ಳಿ ಕಡೆ ಎಲ್ಲರೂ ಪಾಣಿ ಮಾಡಿಸಿಕೊಂಡಿರುವುದಿಲ್ಲ. ಅಂತವರೆಲ್ಲಾ ಯಾವ ಯಾವುದೋ ಊರಿಗೆ ಹೋಗಿ ಭಿಕ್ಷುಕರಂತೆ ಬದುಕಬೇಕಾಯ್ತು. ಅಲ್ಲದೇ ಮುಳುಗಡೆ ಆಗದ ಪ್ರದೇಶದಲ್ಲಿ ಉಳಿದುಕೊಂಡವರಿಗೆ ಇನ್ನೂ ವಿದ್ಯುತ್ ಸೌಲಭ್ಯ ಇಲ್ಲ. ಕೇಳಿದರೂ ಕೊಡುತ್ತಿಲ್ಲ. ಹೀಗಾಗಿ ಬೃಹತ್ ಸ್ಥಾವರಗಳಿಗೆ ಜನ ಅಂಜುವಂತಾಗಿದೆ. ಟಾಟಾದವರು ಇಲ್ಲಿಂದ ಕಾಲ್ತೆಗೆಯಲು ಕಾರಣ ಮೋದಿ ವರ್ಚಸ್ಸು. ಕರ್ನಾಟಕದ ರಾಜಕಾರಣ.

ಮೊದಲಿಗೆ ನಮ್ಮವರೇ ನಮ್ಮನ್ನು ಮೂದಲಿಸುವುದನ್ನು ಬಿಡಬೇಕು. ಮುಖ್ಯವಾಗಿ ಬೈರಪ್ಪನವರಂತಾ ಹಿರಿಯರು. "ಕೆಲವು ತರ್ಲೆ ರಾಜಕಾರಣಿಗಳು" ಅಂದಿದ್ದರೆ ಅವರ ಮಾತಿಗೆ ಬೆಲೆ ಇರುತ್ತಿತ್ತು. ಕಡೇ ಪಕ್ಷ ಅವರು ದೇವೇಗೌಡರಿಗಿಂತಾ ತಾನು ಉತ್ತಮ ಅನ್ನೋದನ್ನ ಅವರೇ ತೋರಿಸಿಕೊಳ್ಳಬೇಕೇ ಹೊರತೂ, ನೋಡಿದವರು ಇಬ್ಬರಿಗೂ ಹೋಲಿಕೆ ಮಾಡುವಂತೆ ನಡೆದುಕೊಳ್ಳಬಾರದು.

ಬೈರಪ್ಪನವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕೇ ಹೊರತೂ ರಾಜಕಾರಣಿಗಳಂತೆ ಮಾತನಾಡಬಾರದು. ರಾಜಕಾರಣದ ಬಗ್ಗೆ ಮಾತನಾಡಿದರೂ ಭ್ರಷ್ಟಾಚಾರವನ್ನು ಖಂಡಿಸುವ ಎದೆಗಾರಿಕೆ ಇರಬೇಕು. ಬದಲಿಗೆ ಅವರ ಮಾತಲ್ಲಿ ಯಡ್ಡಿ ಅಂತಹ ತಪ್ಪು ಮಾಡಿಲ್ಲ ಅನ್ನುವ ಭಾವನೆ ಇತ್ತು. ಬೈರಪ್ಪರ ಕಾದಂಬರಿ ಓದಿ ಯಾರು ಉದ್ದಾರ ಆಗಲ್ಲ. ಅವರು ಬರೆಯುವ ವಿಷಯ ವಸ್ತು ೫೦೦ ವರ್ಷಕ್ಕಿಂತಾ ಹಳೆಯದು. ಮುಸ್ಲಿಮರನ್ನು ದ್ವೇಶಿಸುವಂತೆ ಬರೆಯುತ್ತಾರೆ. ಆದರೆ ಹತ್ತಾರು ತಲೆಮಾರು ಕಳೆದಿರುವ ಮುಸ್ಲಿಮರಲ್ಲಿ ಬಹುಪಾಲು ಈ ದೇಶದೊಂದಿಗೆ ಬೆರೆತು ದೇಶಭಕ್ತರಾಗಿದ್ದಾರೆ. ಕವಲುವಿನಲ್ಲಿ ಮಹಿಳೆಯರ ಅವಹೇಳನ ಮಾಡಲಾಗಿದೆ.
ಇವರ ಕಾದಂಬರಿಗಳು ಸುಮಾರು 50-60 ಸಾವಿರ ಪ್ರತಿ ಮಾರಾಟವಾಗುತ್ತವೆ. ಒಂದನ್ನು ನಾಲ್ಕು ಜನ ಓದಿದರೂ ಸುಮಾರು 2 ಲಕ್ಷ ಜನ ಓದಿದಂತಾಯ್ತು. ಆದರೆ ಕನ್ನಡಿಗರ ಸಂಖ್ಯೆ ಸುಮಾರು 6 ಕೋಟಿ. ಇದರಲ್ಲಿ ಬೇರೆ ಲೇಖಕರ ಕೃತಿಗಳನ್ನು ಸುಮಾರು 20 ಲಕ್ಷ ಜನರಂತೂ ಓದುತ್ತಾರೆ. ಇದು ಹೇಗಿದೆ ಅಂದರೆ 40% ಶೇಕಡಾ ಮತ ಪಡೆದು ಗೆದ್ದವ 100% ಜನರನ್ನು ಆಳುವಂತೆ ಇದೆ. ತಮ್ಮ ಕೃತಿಗಳು ಹೆಚ್ಚು ಮಾರಾಟವಾಗುತ್ತವೆ ಅನ್ನುವ ಒಂದೇ ಕಾರಣಕ್ಕೆ ಶ್ರೇಷ್ಠ ಹೇಗಾದರೋ ಏನೋ. ವ್ಯಕ್ತಿಪೂಜೆ ಯಾರಿಗೂ ಒಳ್ಳೆಯದಲ್ಲ.
ಇಲ್ಲಿ ಕನ್ನಡಿಗರನ್ನು ಬೇರೆಯವರು ಅವಹೇಳನ ಮಾಡಿದರೆ ತಪ್ಪು, ನಮ್ಮವರು ಮಾಡಿದ್ರೆ ಸರಿ ಆಗಬಾರದು. ಅದು ಬೈರಪ್ಪ ಇರಲಿ, ದೇವೇಗೌಡ ಇರಲಿ.

ರಾಜಕಾರಣಿಗಳು ತಪ್ಪು ಮಾಡಿದ್ದಾರೆ, ಮತ್ತು ಮಾಡ್ತಿದ್ದಾರೆ. ಅವರನ್ನ ಯಾರೂ ಬೇಕಾದ್ರೂ ಬೈಯ್ಯಬಹುದು. ಆದರೆ ಭ್ರಷ್ಟಾಚಾರ ಕೂಪದಲ್ಲಿ ಸಿಲುಕಿರುವ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡದ್ದು ತಪ್ಪು. ಮತ್ತು ಒಂದು ದಿನ "ಕನ್ನಡದ ಜನ ತರ್ಲೆಗಳು" ಅಂತ ಹೇಳಿ ಮರುದಿನ "ಅದು ರಾಜಕಾರಣಿಗಳಿಗೆ ಮಾತ್ರ" ಅಂತ ಹೇಳಿದ್ದು ತಪ್ಪು. ಹಾಗಂತ ಈಗ ಯಾರೂ ಬೈರಪ್ಪ ಅವರು ರಾಜ್ಯ ಬಿಟ್ಟು ಹೋಗಲಿ ಅಂತ ವಾದಿಸುತ್ತಿಲ್ಲ. ಅವರು ಹಾಗೆ ಸಾರಸಗಟಾಗಿ ಕನ್ನಡಿಗರನ್ನು ಮೂದಲಿಸಿದ್ದು ತಪ್ಪು ಅನ್ನುವುದು ನನ್ನ ಅಭಿಪ್ರಾಯ.

ಆದರೂ ಬೈರಪ್ಪ ಯಾಕೆ ಯಡ್ಡಿಯನ್ನ ಸಮರ್ಥನೆ ಮಾಡಿಕೊಂಡರು ಅನ್ನುವುದಕ್ಕೆ ಈಗ ಉತ್ತರ ದೊರೆತಿದೆ.
ಅದು ಒಂದು ಸೈಟಿಗಾಗಿ...
ಪೂರ್ಣ ಸುದ್ದಿ ಇಲ್ಲಿದೆ ನೋಡಿ...[ http://www.justkannada.in/?p=7685 ]
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ