ವಿಷಯಕ್ಕೆ ಹೋಗಿ

ಸೂಪರ್ ಸ್ಟಾರ್ ಉಪೇಂದ್ರ !ಬಹು ನಿರೀಕ್ಷೆಯ ಸೂಪರ್ ಗೆದ್ದಿದೆ. ಇದು ಉಪ್ಪಿಯ ಅಥವಾ ರಾಕ್ಲೈನ್ ವೆಂಕಟೇಶ್ ಅವರಿಬ್ಬರ ಗೆಲುವು ಮಾತ್ರವಲ್ಲ, ಕನ್ನಡ ಚಿತ್ರರಸಿಕರ ಗೆಲುವು ಕೂಡಾ ಹೌದು ಎನ್ನಬಹುದು. ಏಕೆಂದರೆ ಉಪ್ಪಿ ಚಿತ್ರಗಳೆಂದರೆ ಅವು ಬರಿಯ ಚಿತ್ರಗಳಷ್ಟೇ ಅಲ್ಲ, ಅಲ್ಲೊಂದು ಸಂದೇಶವಿದ್ದೇ ಇರುತ್ತದೆ. ಸುಧೀರ್ಘ ಎನ್ನಬಹುದಾದ ಹತ್ತು ವರ್ಷಗಳ ನಂತರ ಉಪೇಂದ್ರ ನಿದರ್ೇಶನಕ್ಕಿಳಿದಿದ್ದರೂ ಸಹ ಸಾಕಷ್ಟು ವ್ಯವಸ್ಥೆ ಮಾಡಿಕೊಂಡೇ ಬಂದಿದ್ದಾರೆ ಎಂಬುದು ಚಿತ್ರವನ್ನು ನೋಡಿದಾಗ ತಿಳಿಯುತ್ತದೆ. ಏಕೆಂದರೆ ಚಿತ್ರರಂಗದೊಳಗೆ ಹೋಗಿ ಕುಳಿತರೆ ನಮಗೆ ಎರಡೂಕಾಲು ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ಅಷ್ಟೊಂದು ರಸದೌತಣವನ್ನೀಯುತ್ತದೆ ಸೂಪರ್. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬಂದಿದ್ದಾರೆ ಅನ್ನೋದು ಉಪ್ಪಿ ಅಭಿಮಾನಿಗಳ ಮಾತು.

ಸೂಪರ್ ಎಂಬ ಚಿಹ್ನೆಯೊಂದಿಗೆ ತೆರೆ ಕಂಡಿರುವ ಈ ಚಿತ್ರ ಕನ್ನಡದ ಮಟ್ಟಿಗೆ ಒಂದು ಹೊಸ ದಾಖಲೆ ಹೌದು. ಏಕೆಂದರೆ ಬೃಹತ್ ಬಜೆಟ್ನಲ್ಲಿ ತಯಾರಾದ ಚಿತ್ರ ಇದು. ಸುಮಾರು ಮೂವತ್ತು ಕೋಟಿ ಬಂಡವಾಳ ಹೂಡಿರುವುದಾಗಿ ನಿಮರ್ಾಪಕ ವಲಯ ಹೇಳಿದೆ. ಇದು ಪ್ರತಿ ಫ್ರೇಮ್ನಲ್ಲೂ ದುಡ್ಡು ಕಾಣಿಸುತ್ತದೆ, ಜೊತೆಗೆ ಉಪೇಂದ್ರ ಕಾರ್ಯಶ್ರದ್ಧೆ.

ಈ ಚಿತ್ರದ ಕಥಾ ಹಂದರ ಅಷ್ಟು ಸುಲಲಿತವಾಗಿಲ್ಲ. ಅರ್ಥ ಮಾಡಿಕೊಳ್ಳದಷ್ಟು ಕಷ್ಟವೂ ಇಲ್ಲ. ಹಾಗಂತ ಉಪ್ಪಿ ತಮ್ಮ ಛಾಪು ಬಿಟ್ಟು ಕೊಟ್ಟಿಲ್ಲ. ಆದರೆ ಪ್ರಸ್ತುತ ವಿದ್ಯಮಾನಗಳನ್ನು ಆಧಾರವಾಗಿಟ್ಟುಕೊಂಡು ಈ ರೀತಿಯ ಕಥೆ ಹೆಣೆಯುವುದು ಉಪ್ಪಿಗಷ್ಟೇ ಸಾಧ್ಯವೇನೋ. ಹಿಂದಿ, ತಮಿಳುಗಳಲ್ಲಿ ಈ ರೀತಿಯ ಪ್ರಸ್ತುತ ಘಟನೆಗಳಿಗೆ ಒತ್ತು ಕೊಟ್ಟು ಸಿನೆಮಾ ಮಾಡುವ ಪರಿಪಾಠವಿದೆ. ಆದರೆ ಕನ್ನಡದಲ್ಲಿ ತುಂಬಾ ಕಡಿಮೆ. ಅದರಲ್ಲೀ ಇತ್ತೀಚಿನ ವರ್ಷಗಳಲ್ಲಿ ಬರೇ ಪ್ರಿತಿ, ಪ್ರೇಮ, ರೌಡಿಯಿಸಮ್, ಮಚ್ಚು ಮತ್ತು ಲಾಂಗು - ಇವು ಬಿಟ್ಟರೆ ಬೇರೆ ಕಥೆಗಳೇ ಕನ್ನಡ ಚಿತ್ರಮಂದಿಗೆ ಸಿಗುತ್ತಿಲ್ಲ. ಕೆಲವು ದಿನಗಳ ಹಿಂದೆ ಪುನೀತ್ ಅಭಿನಯದ ಪೃಥ್ವಿ ಸಹ ಪ್ರಸ್ತುತ ಗಣಿಗಾರಿಕೆ ಬಗ್ಗೆ ಕಥಾವಸ್ತುವನ್ನು ಹೊಂದಿತ್ತು. ಮತ್ತು ಪ್ರೇಕ್ಷಕರ ಮೆಚ್ಚುಗೆಗೂ ಕಾರಣವಾಗಿತ್ತು. ಇಂತಹ ವಿಭಿನ್ನ ಕಥಾಬಸ್ತುಗಳನ್ನು ತೆರೆಗೆ ತಂದರೆ ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯಬಹುದು. ಆದರೆ ಸುದೀಪ್ರಂತಹ ಪ್ರತಿಭಾವಂತರು ಪರಭಾಷಾ ಚಿತ್ರಗಳ ರಿಮೇಕ್ ಮಾಡುವುದನ್ನೇ ಕಾಯಕ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಬರಡಾಗಿಸುತ್ತಿದ್ದಾರೆ.

ಸೂಪರ್ನಲ್ಲಿರುವುದೇನು?

ಅದೊಂದು ಅದ್ಧೂರಿ ಚಿತ್ರ. ದುಡ್ಡು ಸಂಪಾದಿಸಿಕೊಂಡರೆ ಒಂದೇ ದಿನದಲ್ಲಿ ಮುಖ್ಯಮಂತ್ರಿ ಸಹ ಆಗಬಹುದು ಅನ್ನುವುದನ್ನು ತೋರಿಸಿದ್ದಾರೆ ಉಪೇಂದ್ರ. ಈ ಚಿತ್ರದ ಸಂಭಾಷಣೆಗಳು ವಿಶೇಷವಾಗಿವೆ. ವಿದೇಶದಲ್ಲಿ ಹುಟ್ಟಿ ಬೆಳೆದ ಕನ್ನಡಿಗರ ಯುವಕನೊಬ್ಬ ಯಾವುದೋ ಕಾರಣಕ್ಕೆ ಕನರ್ಾಟಕಕ್ಕೆ ಬಂದು ಇಲ್ಲಿ ರಾಜಕೀಯ ಮಾಡಿ ರಾಜ್ಯವನ್ನೇ ಬದಲಾಯಿಸುವ ಈ ಕಥೆಯನ್ನು ಒಮ್ಮೆಗೇ ಅರ್ಥ ಮಾಡಿಕೊಳ್ಳುವುದಾಗಲೀ, ಜೀಣರ್ಿಸಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಉಪೇಂದ್ರರ ಫಾಮರ್ುಲಾ ಅರಗಿಸಿಕೊಂಡವರಿಗೆ ಮಾತ್ರ ಒಂದೇ ಏಟಿಗೆ ಅರ್ಥವಾಗಬಹುದು.

ಆದರೆ ಇಲ್ಲಿ ಉಪ್ಪಿ ಅನೇಕ ಸಾಧ್ಯತೆಗಳನ್ನು ಮತ್ತು ನಮ್ಮ ನಡುವಿನ ನ್ಯೂನ್ಯತೆಗಳನ್ನು ತೆರೆದಿಟ್ಟಿದ್ದಾರೆ. ಭಾರತ ಯಾಕೆ ಇಷ್ಟು ಅವನತಿಯಲ್ಲೇ ಬಿದ್ದು ಒದ್ದಾಡುತ್ತಿದೆ ಎಂಬುದರತ್ತ ಬೆಳಕು ಚೆಲ್ಲಿದ್ದಾರೆ. ಅವೆಲ್ಲಾ ನಮಗೆ ತಿಳಿದಿರುವಂತಹ ವಿಷಯಗಳೇ. ಆದರೂ ಅದನ್ನು ಚಿಂತನೆಗೆ ಹಚ್ಚುವ ಪ್ರಯತ್ನವನ್ನು ಉಪ್ಪಿ ಮಾಡಿದ್ದಾರೆ. ಸಾಧಾರಣ ಮಾಸ್ತರರೊಬ್ಬರು 1,650 ರೂಪಾಯಿ ಪಿಂಚಣಿ ಪಡೆಯಲಾಗದೇ ಒದ್ದಾಡುವುದು, ಅದಕ್ಕೆ ನಾಯಕ ನೆರವಾಗಲು ಹೋಗಿ ರೌಡಿಗಳ ಪ್ರವೇಶವಾಗುವುದು, ಕೊನೆಗದು ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯ ಕೊಡಿಸಲು ಹೋದ ನಾಯಕನಿಗೇ ಶಿಕ್ಷೆ, ಮತ್ತು ಬಡ ಮಾಸ್ತರರಿಗೆ ಇನ್ನೂ 1,650 ರೂಪಾಯಿ ದಂಡ ವಿಧಿಸುವ ಸನ್ನಿವೇಶಗಳು ನಮ್ಮ ಸಮಾಜದ ವ್ಯಂಗ್ಯವನ್ನು ಅನಾವರಣಗೊಳಿಸಿದೆ. ವಿದ್ಯೆ ಕಲಿಸಿದ ಒಬ್ಬ ಗುರುವಿನ ಮನೆಗೆ ಪುಂಡರು ನುಗ್ಗಿ ದಾಂಧಲೆ ನಡೆಸಿ ಹೋದರೂ ಅಕ್ಕ ಪಕ್ಕದವರು ನೋಡುತ್ತಾ ನಿಂತಿರುವುದನ್ನು ಮನೋಜ್ಞ ಸಂಭಾಷಣೆಯಲ್ಲಿ ವಿವರಿಸುವ ಉಪ್ಪಿ ಭಾರತದ ಸತ್ಪ್ರಜೆಗಳ ಧಾರುಣ ನಿರ್ಲಕ್ಷ್ಯವನ್ನೂ ಎತ್ತಿ ತೋರಿಸಿದ್ದಾರೆ. ನಾವು ಎಷ್ಟು ಜಡಭರತರಾಗಿದ್ದೇವೆ ಎಂಬುದು ಈ ಸನ್ನಿವೇಶಗಳಲ್ಲಿ ನಮಗೇ ಅರ್ಥವಾಗುತ್ತದೆ. ಈ ಜಿಡ್ಡುಗಟ್ಟಿದ ಸಾಮಾಜಿಕ - ರಾಜಕೀಯ ವ್ಯವಸ್ಥೆಗೆ ಉಪ್ಪಿ ನೀಡಿದ ಉತ್ತರ ಸಮಂಜಸವೇ ಆಗಿದೆ. ಆದರೆ ಅದು ವಾಸ್ತವದಲ್ಲಿ ನಡೆದು ಹೋಗುತ್ತೆ ಅನ್ನುವುದನ್ನು ಮಾತ್ರ ನಾವ್ಯಾರೂ ಊಹಿಸಲೂ ಸಾಧ್ಯವಿಲ್ಲ.

ಚಿತ್ರದಲ್ಲಿ ಅಣಕಗಳು

ಶಾಂತವಾಗಿ ದಕ್ಷ ರೀತಿಯಿಂದ ರಾಜ್ಯವನ್ನಾಳಬೇಕಾಗಿದ್ದ ಮುಖ್ಯಮಂತ್ರಿಯೊಬ್ಬ ಯಾವುದೋ ಹೆಣ್ಣಿನ ಮೋಹದಲ್ಲಿ ವ್ಯಧಾನ ಕಳೆದುಕೊಳ್ಳುವುದು, ಆಕೆ ಮತ್ತೊಬ್ಬ ಮಂತ್ರಿಯ ಬಳಿ ಹೋಗಿದ್ದಾಳೆ ಎಂದು ಸಹಾಯಕ ಬಂದು ಹೇಳಿದಾಗ ವ್ಯಘ್ರನಾಗುವುದು, ರೆಡ್ಡಿ ಬ್ರದಸರ್್ಗಳನ್ನು ಚೆಡ್ಡಿ ಬ್ರದಸರ್್ಗಳನ್ನಾಗಿ ತೋರಿಸಿರುವುದು, ನಾಯಕ ಮುಖ್ಯಮಂತ್ರಿಯಾದ ನಂತರ ಬಳ್ಳಾರಿಯಲ್ಲಿ ಗಣಿ ನಡೆಸಲು ತೊಡಗುವುದು - ಇವೆಲ್ಲಾ ಹಾಸ್ಯದ ಜೊತೆಜೊತೆಗೇ ನಾವು ಎಂಥವರನ್ನು ಮತ ಹಾಕಿ ಗೆಲ್ಲಿಸಿ ಪೀಕಲಾಟಕ್ಕೆ ಸಿಲುಕಿದ್ದೇವೆ ಅನ್ನುವುದನ್ನೂ ಯೋಚಿಸುವಂತೆ ಮಾಡುತ್ತವೆ.

ಹೀಗೆ ಒಂದು ಗಂಭೀರ ವಿಷಯನ್ನು ತನ್ನದೇ ಧಾಟಿಯಲ್ಲಿ ಹೇಳಿರುವ ಉಪ್ಪಿ ಎಂದಿನಂತೆ ತಮ್ಮದೇ ಶೈಲಿಯ ಮತ್ತೊಂದು ಕಥಾ ಹಂದರವನ್ನೂ ಸಹ ಇದರಲ್ಲಿ ಸೇರಿಸಿದ್ದಾರೆ. ಅದು ನಾಯಕ - ನಾಯಕಿ ನಡುವಿನ ಜಿದ್ದಾ ಜಿದ್ದಿನ ಕಥೆ. ಇದರಲ್ಲಿ ನಾಯಕಿ ನಯನ ತಾರಾ ನಿಜಕ್ಕೂ ನಯನಗಳ ಜೊತೆ ಮನಸ್ಸನ್ನೂ ಸೆಳೆಯುತ್ತಾಳೆ. ಈಕೆಯ ನಟನೆ ಸಹ ಮನೋಜ್ಞವಾಗಿದೆ. ತಮಿಳಿನಲ್ಲಿ ಬಿಡುವಿಲ್ಲದ ಈಕೆಯನ್ನ ಕನ್ನಡಕ್ಕೆ ಕರೆ ತಂದುದು ಒಂದು ಹೆಗ್ಗಳಿಕೆಯೇ. ಉಪ್ಪಿಯ ಕಟ್ಟಾಭಿಮಾನಿಗಳಿಗೆ ಇದೊಂದು ರಸದೌತಣವೆನ್ನಬಹುದು.

ಚಿತ್ರವನ್ನು ನೋಡುತ್ತಾ ಹೋದರೆ, ಕೆಲವು ಕಡೆ ಬೇಕಂತಲೇ ಹಣವನ್ನು ಪೋಲು ಮಾಡಿದ್ದಾರೇನೋ ಅನ್ನಿಸುತ್ತೆ. ಕೆಲವು ದೃಶ್ಯಗಳು ಅನಾವಶ್ಯಕವಾಗಿವೆ. ಅದ್ಧೂರಿಯಾಗಿ ತೋರಿಸಬೇಕು ಅನ್ನುವ ಒಂದೇ ಕಾರಣಕ್ಕೆ ಕೆಲವು ದೃಶ್ಯಗಳನ್ನು ವೃಥಾ ಚಿತ್ರಿಕರಿಸಲಾಗಿದೆ. ಆ ಸಮಯವನ್ನು ಕಥೆಗೆ ಪೂರಕವಾಗಿ ಬಳಸಿಕೊಳ್ಳಬಹುದಿತ್ತು. ಉಪ್ಪಿ ಕೇಳಿದ್ದಕ್ಕೆಲ್ಲಾ ರಾಕ್ಲೈನ್ ಹ್ಞುಂಗುಟ್ಟಿರುವುದು ಇದರಿಂದಲೇ ತಿಳಿದು ಬರುತ್ತದೆ.

ಪ್ರಾರಂಭದಲ್ಲಿ ಬರುವ ಟೈಟಲ್ಕಾಡರ್್ ಸಹ ವಿಶಿಷ್ಟವಾಗಿದೆ. ಇನ್ನು ತಾಂತ್ರಿಕತೆಯಲ್ಲಿ ಇದು ಕನ್ನಡದ ಎಲ್ಲಾ ಚಿತ್ರಗಳನ್ನೂ ಮೀರಿಸಿದೆ. ಬೆಂಗಳೂರು ಮತ್ತು ಮೈಸೂರಿನ ವೈಭೋಗವನ್ನು 2030 ರ ಇಸ್ವಿಗೆ ಕೊಂಡೊಯ್ದು ತೋರಿಸಿರುವುದು ಅಚ್ಚರಿ ಮೂಡಿಸುತ್ತದೆ. ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸರಿಯಾಗಿಯೇ ಬಳಸಿಕೊಳ್ಳಲಾಗಿದೆ. ಹಾಗೆಯೇ ವಿ. ಹರಿಕೃಷ್ಣ ಅವರ ಸಂಗೀತ ಕೂಡಾ ಸೊಗಸಾಗಿದೆ. ಆದರೂ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ.

ಉಪ್ಪಿ ರಾಜಕೀಯಕ್ಕೆ ಬರುತ್ತಾರಾ ?

ಆದರೂ ಉಪೇಂದ್ರ ವರ್ಷದ ಕೊನೆಗೊಂದು ಉತ್ತಮ ಚಿತ್ರವನ್ನು ನೀಡಿದ್ದಾರೆ. ಈ ನಡುವೆ ತಾನೂ ರಾಜಕೀಯಕ್ಕೆ ಧುಮುಕುವ ಸೂಚನೆಯನ್ನು ನೀಡಿದ್ದಾರೆ. ಅದು ನಿಜವಾಗುತ್ತಾ ಅನ್ನೋದನ್ನು ಕಾದು ನೋಡಬೇಕು. ಅವರು ರಾಜಕೀಯಕ್ಕೆ ಬರುವುದಿದ್ದರೆ ನಮ್ಮದಂತೂ ಸ್ವಾಗತವಿದೆ. ಕನ್ನಡಿಗರೂ ಸ್ವಾಗತಿಸಿ ಅವರನ್ನು ಗೆಲ್ಲಿಸುವರೆಂಬ ನಂಬಿಕೆ ಇದೆ. ಆದರೆ ಅವರ ಯೋಜನೆಗಳು, ಯೋಚನೆಗಳು ರಾಜಕೀಯಕ್ಕೆ ಬಂದ ನಂತರವೂ ಹೀಗೇ ಇರುತ್ತವಾ? ಅದು ಸಂದೇಹ. ಅಂಬರೀಶ್, ಅನಂತ್ನಾಗ್, ಬಿ.ಸಿ. ಪಾಟೀಲ್, ಶಶಿಕುಮಾರ್ ಮುಂತಾದವರು ರಾಜಕೀಯಕ್ಕೆ ಬಂದು ಕಿಸಿದಿದ್ದು ಏನೂ ಇಲ್ಲ. ಅವರಂತೇ ಉಪ್ಪಿ ಸಹ ಗುಂಪಲ್ಲಿ ಗೋವಿಂದ ಆಗುವ ಹಾಗಿದ್ದರೆ ಬಹುಶಃ ಕನ್ನಡ ಚಿತ್ರ ರಸಿಕರು ಒಬ್ಬ ಪ್ರತಿಭಾವಂತ ನಿದರ್ೇಶಕ ಮತ್ತು ನಟನನ್ನು ಕಳೆದುಕೊಂಡಂತೆಯೇ!

ಇದು ಸ್ವತಃ ಉಪೇಂದ್ರರಿಗೆ ಅರ್ಥವಾದರೆ ಸರಿ
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…