ವಿಷಯಕ್ಕೆ ಹೋಗಿ

ಲೈಫು ಇಷ್ಟೇನೆ V/S ಲವ್ವು ಇಷ್ಟೇನೆ (ಪಂಚರಂಗಿ ಹಾಡು ಅನುಕರಣೆ )


ಇದು ನನ್ನ ಸ್ವಂತ ಬರಹ (ಪಂಚರಂಗಿ ಹಾಡು ಅನುಕರಣೆ )


ಲೈಫು ಇಷ್ಟೇನೆ
ಲವ್ವು  ಇಷ್ಟೇನೆ
ಲವ್ವು  ಇಷ್ಟೇನೆ

ಕಾಲೇಜ್  ಮೆಟ್ಲು ಹತ್ತಿದ ಕೂಡ್ಲೇ
ಹುಡುಗಿ ಇರಬೇಕು ಅನಿಸೋದು ಸಹಜ
ಹಂಗೂ  ಹಿಂಗೂ ಹುಡುಗಿ ಹುಡುಕೊಂಡು
ಹಾಳಾಗ್ಹೋದೇ ಲವ್ವು  ಇಷ್ಟೇನೆ..

ರಾತ್ರಿ ಹಗಲು ಒಂದೂ ತಿಳಿದೇ
ಸಿಕ್ಕಾಗಲೆಲ್ಲ  ಮಿಸ್ ಕಾಲ್ ಕೊಟ್ಟು
ಮೆಸೇಜ್ ನಲ್ಲಿ ಕಿಸ್ಸು ಮಾಡೋ
ಲವ್ವು  ಇಷ್ಟೇನೆ

ಅವ್ಳು ಕರೆದ್ಲು ಅಂತಾ ನಿಂದು
ಪೆಟ್ರೋಲ್ ಗಾಗಿ ಜೇಬು ಖಾಲಿ
ಮಾಡ್ಕೊಂಡು ಕೊನೆಗೆ
ಅವಳ ಹಿಂದೆ ಅಲೆಯ ಬೇಕು
ಲವ್ವು  ಇಷ್ಟೇನೆ


ಕಾಲೇಜ್ ಹುಡುಗ್ರು ಏನೂ
ತಿಳಿದೇ ತಪ್ಪು ಮಾಡವ್ರೆ
ಅವರೇನು ಮಾಡ್ತಾರೆ ಪಾಪ ಅವರ
ವಯಸ್ಸು ಹಿಂಗೆನೆ

ಅಪ್ಪ ಅಮ್ಮ ಹೇಳಿದ್ ಕೇಳ್ದೆ
ಕಾಲೇಜ್ ಗೆ ಹೋಗ್ದೆ ಫಿಲಂ ಗೆ ಹೋಗಿ
exam time ಲ್ಲಿ tention ಮಾಡ್ಕೊಳೋದು
ಲವ್ವು  ಇಷ್ಟೇನೆ

bath room bed room
ಎಲ್ಲಿ ಅಂದ್ರೆ ಅಲ್ಲಿ ಕುಳಿತು
ಹುಡುಗಿ ಜೊತೆಗೆ chat ಮಾಡೋ
ಲವ್ವು  ಇಷ್ಟೇನೆ

ಮಧ್ಯ ರಾತ್ರಿ ಆದ್ರೂ ಕೂಡ
ಮಿಸ್ ಕಾಲ್ ಬರುತ್ತೆ ನೋಡು
ನಿದ್ದೆ ಮಾಡ್ದೆ ಕಾಲ ತಳ್ಳೋ
ಲವ್ವು  ಇಷ್ಟೇನೆ

ಲವ್ವು ಮಾಡೋದ್ ತಪ್ಪು ಅಂದ್ರೆ
ಬಾಳೋದು ಹೇಗ್ಹೇಳಿ
ಲವ್ವು ಮಾಡು ಹಾಳಾಗ್ ಬೇಡ
ಅಂದ್ರೆ ok ನೇ

ಊಟ ಬೇಡ ನಿದ್ದೆ ಬೇಡ
ಅವಳ ನೆನಪೇ ಬಂದು ನೀನು
week  body ಆಗ್ತಿಯ ನೀನು
ಲವ್ವು  ಇಷ್ಟೇನೆ

ಹುಡುಗಿ ಜೊತೆಗೆ ಜಗಳ ಮಾಡ್ಕೊಂಡ್
Bar ಗೆ ಹೋಗಿ ಬೀಯರ್ ಕುಡುಕೊಂಡು
Pack ಗಟ್ಲೆ ಸಿಗರೇಟ್ ಸೇದ್ಕೊಂಡ್
ಫೀಲ್ ಆಗೋದೇ  ಲವ್ವು  ಇಷ್ಟೇನೆ

ತಿಂಗ್ಳಿಗ್ ಎರೆಡು SIM ಕಾರ್ಡ್ ತಗೊಂಡು
Daily ಎರೆಡ್ time Currency ಹಾಕ್ಸಿ
ಗಂಟೆ ಗಟ್ಲೆ ಫೋನಿನಲ್ಲಿ ಮಾತಾಡೋ
ಲವ್ವು  ಇಷ್ಟೇನೆ

ಅಪ್ಪ ಅಮ್ಮ ಕೊಟ್ಟ ಕಾಸು
ಸಾಕಾಗ್ದೇನೆ ಖರ್ಚಿಗ್ ನಿಮಗೆ
Part ಟೈಮ್ ಕೆಲಸ ಹುಡ್ಕೊಂಡು 
ಮಾಡೋ ಲವ್ವು  ಇಷ್ಟೇನೆ

ಸ್ವಂತ ದುಡಿದು ಬಾಳ್ತಿನ್ ಅಂತಾ
ಚಲವು ನಮಗಿದ್ರೆ
ಸಾವೇ ಬಂದ್ರೂ ಎದುರಿಸ್ತೀವಿ
ಲವ್ವು  ಇಷ್ಟೇನೆ- ಬಸವರಾಜ್ .ಎ. ಏನ್ .
ಬೆಂಗಳೂರುಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…