ವಿಷಯಕ್ಕೆ ಹೋಗಿ

ಅಯ್ಯಮ್ಮಳಿಗೆ "ಪಿಸುಮಾತು ಸಮುದಾಯ"ದ ಕಡೆಯಿಂದ ಸಹಾಯ

ನಾನು ಮತ್ತು ಡೆಮ್ ಸೋಮವಾರ ಸಂಜೆ 31 ಜನವರಿ 2011ರಂದು ಸಂಜೆ ೬:೩೦ ಕ್ಕೆ ಮೆಜೆಸ್ಟಿಕ್‌ನಿಂದ ಗುಲ್ಬರ್ಗಾ ಬಸ್ [ ಕರ್ನಾಟಕ ಸಾರಿಗೆ ] ಹತ್ತಿದೆವು. ಅದು ಬೆಳಗ್ಗೆ ೭:೦೦ ಗಂಟೆಗೆ ಸುರಪುರ ತಲುಪಿತು.

ಅಲ್ಲಿ ಒಂದು ಹೋಟೆಲ್‌ನಲ್ಲಿ ಕಾಫಿ ಕುಡಿದು ಪಕ್ಕದಲ್ಲಿದ್ದ ಲಾಡ್ಜ್ ಒಂದಕ್ಕೆ ಹೊಗಿ ರೂಮ್ ವಿಚಾರಿಸಿದೆವು. ಅವನು "೩೫೦ ರೂ. ಆಗುತ್ತೆ. ಅದಕ್ಕಿಂತಾ ಕಡಿಮೆ ಆಗಲ್ಲ" ಎಂದು ಹೇಳುತ್ತಿದ್ದ. ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಬ್ಬ ಗ್ರಾಹಕರು ನಮಗೆ ಕಣ್ಸನ್ನೆಯಲ್ಲೇ ಇನ್ನೊಂದು ಲಾಡ್ಜ್‌ಗೆ ಹೋಗುವಂತೆ ತಿಳಿಸಿದರು. ಇಬ್ಬರೂ ಅಲ್ಲಿಂದ ಹೊರಟು ಬಸ್‌ನಿಲ್ದಾಣದ ಪಕ್ಕದಲ್ಲೇ ಇದ್ದ ಮತ್ತೊಂದು ಲಾಡ್ಜ್‌ಗೆ ತೆರಳಿದೆವು. ಅಲ್ಲಿ ೧೫೦ ರೂಪಾಯಿಗೆ ರೂಮ್ ದೊರೆಯಿತು.
ಅಲ್ಲಿ ಸ್ನಾನ ಮಾಡಿದೆ. ಡೆಮ್ "ನಾನು ಸ್ನಾನ ಮಾಡಿ ಇನ್ನೂ ಎಂಟೇ ದಿನ ಆಗಿರೋದು" ಅಂದ್ರು.
ಆಮೇಲೆ ಮತ್ತೆ ಅದೇ ಉಡುಪಿ ಹೋಟೆಲ್‌ಗೆ ಹೋಗಿ ತಿಂಡಿ ತಿಂದೆವು.

ಅಲ್ಲಿಂದ "ಮಹಮ್ಮದ್ ರಫೀ" ಅನ್ನುವವರ ಆಟೋ ಹಿಡಿದು ದೇವೀಕೇರ ಗ್ರಾಮಕ್ಕೆ ಹೊರಟೆವು.
ದಾರಿಯಲ್ಲಿ ಕಂಡ ಹಂದಿಗಳ ಗುಂಪು. 

ಅಸಲಿ ವಿಷಯಕ್ಕೆ ಈಗ ಬರೋಣ...

ಇವಳೇ ಅಯ್ಯಮ್ಮ

ಅಯ್ಯಮ್ಮ ಮತ್ತು ಅವಳ ನಾಲ್ಕು ವಿಕಲ ಚೇತನ ಹಾಗೂ ಬುದ್ಧಿ ಮಾಂದ್ಯ ಮಕ್ಕಳು.

 ಅಲ್ಲಿನ ದೃಶ್ಯ ಕಂಡು ಮನಸ್ಸು ಒಮ್ಮೆ ಮಮ್ಮಲ ಮರುಗಿತು. ಅಯ್ಯಮ್ಮಳ ಐದು ಜನ ಮಕ್ಕಳಲ್ಲಿ ದೇವಮ್ಮ (೧೬ ವರ್ಷ) ಎಂಬ ಹುಡುಗಿ ಮಾತ್ರ ಆರೋಗ್ಯವಾಗಿ ಇರುವುದು. ಮತ್ತೆ ತಾಯಮ್ಮ (೨೦ ವರ್ಷ), ಅನುಸೂಯ (೧೮ ವರ್ಷ), ನಿಂಗಪ್ಪ (೧೫ ವರ್ಷ), ಮೋನೇಶ (೧೪ ವರ್ಷ) ಎಲ್ಲರೂ ಅಂಗವಿಕಲತೆಯಿಂದ ಬಳಲುತ್ತಿದ್ದಾರೆ. ಬುದ್ಧಿ ಕೌಶಲ್ಯವೂ ಇಲ್ಲ. ಏನೇನೋ ಮಾತಾಡುತ್ತವೆ ಮಕ್ಕಳು. ಸುಮ್ಮನೆ ನಗುತ್ತಿರುತ್ತವೆ. ಕೈ ಮುಗಿಯುತ್ತವೆ. ಅಲ್ಲಿನ ದೃಶ್ಯವೇ ವಿಚಿತ್ರವಾಗಿ ಗೋಚರಿಸುತ್ತದೆ. ನಾವು ಅವರ ಮನೆಗೆ ಹೋಗಿದ್ದೇವಾ ಅಥವಾ ಬುದ್ಧಿಮಾಂದ್ಯರ ಆಸ್ಪತ್ರೆಗೆ ಹೋಗಿದ್ದೇವಾ ಎಂಬ ಅನುಮಾನ ಕಾಡುತ್ತದೆ.

ನಾಲ್ಕು ಜನ ಮಕ್ಕಳಿಗೂ ಸರಿಯಾಗಿ ನಡೆಯಲು ಬರುವುದಿಲ್ಲ. ತಾಯಮ್ಮ ಮಾತ್ರ ಕಾಲು ಎಳೆದುಕೊಳ್ಳುತ್ತಾ ನಡೆಯುತ್ತಾಳೆ. ಉಳಿದ ಮಕ್ಕಳು ಮಂಡಿಯೂರಿ ನಡೆದು ನಡೆದು ಮಂಡಿಯೆಲ್ಲಾ ಜಿಡ್ಡು ಗಟ್ಟಿದೆ. 

ಈಕೆ ಅಯ್ಯಮ್ಮಳ ಮೂರನೇ ಮಗಳು. ಹೆಸರು ದೇವಮ್ಮ ಅಂತ. ಈ ಮನೆಯಲ್ಲಿ ಇವಳೊಬ್ಬಳೇ ಸರಿ ಇರುವುದು.
ಅಯ್ಯಮ್ಮಳ ಗಂಡ ಆರುವರ್ಷದ ಹಿಂದೆ ವಿಷ ಕುಡಿದು ಸತ್ತು ಹೋಗಿದ್ದಾನೆ. ಮೊದಲು ಸ್ವಲ್ಪ ಹೊಲ ಇತ್ತಂತೆ. ಮಕ್ಕಳ ಚಿಕಿತ್ಸೆಗಾಗಿ ಅದನ್ನೂ ಮಾರಿದ್ದಾರೆ. ಆದರೂ ಮಕ್ಕಳು ಸರಿಯಾಗಿಲ್ಲ.

ಇವನು ಅದೇ ಗ್ರಾಮದ ಇನ್ನೊಬ್ಬ ಹುಡುಗ. ಇವನಿಗೂ ವಿಕಲತೆ ಕಾಡಿದೆ. 

ಈ ತಾಯಿ ಮಗಳೇ ಈಗ ಇಡೀ ಕುಟುಂಬದ ನೊಗ ಹೊತ್ತಿರುವುದು. 

ದಿಕ್ಕಿಲ್ಲದ ನತದೃಷ್ಟ ಕುಟುಂಬ. 

ನಾನು ಮೊದಲಿಗೆ ಎಷ್ಟು ಹಣ ನೀಡುತಿದ್ದೇವೆ ಎಂದು ಅವರಿಗೆ ಹೇಳಲಿಲ್ಲ. "ನಿಮ್ಮ ಕಷ್ಟಕ್ಕೆ ಅಂತ ಸ್ವಲ್ಪ ಸಹಾಯ ಮಾಡುತ್ತೇವೆ" ಅಂದೆ. ಆಗ ಅಯ್ಯಮ್ಮ ಬಂದು ನನ್ನ ಕಾಲ ಕೆಳಗೆ ಅಳುತ್ತಾ ಕೂತುಬಿಟ್ಟಳು. ನನಗೆ ಹೊಟ್ಟೆ ಚುರ‍್ ಎಂದಿತು. ಎದ್ದು ನನ್ನ ಪಕ್ಕದಲ್ಲಿಯೇ ಕೂರುವಂತೆ ಹೇಳಿದೆ. ಡೆಮ್ ಸಹ ಹೇಳಿದರು. ಅವಳು ಮೊದಲು ಒಪ್ಪದೇ ಹೋದರೂ ಒತ್ತಾಯ ಮಾಡಿ ಮೇಲೆ ಕೂರಿಸಿದೆವು. ನಂತರ ಸಂಗ್ರಹಗೊಂಡಿದ್ದ ರೂ. 18,000/- [ ಹದಿನೆಂಟು ಸಾವಿರ ರೂಪಾಯಿ ] ಯನ್ನು ಅಯ್ಯಮ್ಮಳಿಗೆ ಹಸ್ತಾಂತರಿಸಿದೆ. ಅವಳ ಕಂಗಳಿಂದ ಧಾರಾಕಾರ ನೀರು ಸುರಿಯುತ್ತಿತ್ತು. 

ಅವರು ಕಂಡಿತಾ ಅಷ್ಟು ಮೊತ್ತವನ್ನು ನಿರೀಕ್ಷಿಸಿರಲಿಲ್ಲ. ಅದನ್ನು ಪಡೆದಾದ ನಂತರ ಅಯ್ಯಮ್ಮಳ ಮೊಗದಲ್ಲಿ ಒಂದು ಧನ್ಯತಾ ಭಾವವಿತ್ತು. ಅದು ಸಹಾಯ ಹಸ್ತ ಚಾಚಿದ ಎಲ್ಲರಿಗೂ ಸಂದಾಯವಾಗುವಂತಹುದು. ಆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡದೇ ಏನಾದರೂ ಉತ್ತಮ ಕೆಲಸಕ್ಕೆ ಬಳಸಿಕೊಳ್ಳುವಂತೆ ತಾಕೀತು ಮಾಡಿದ್ದೇನೆ.


---------------------------------------------------------------------ಸಂಗ್ರಹಗೊಂಡ ಮೊತ್ತದ ವಿವರ ...

೧. ಶ್ರೀಪತಿ - ರೂ. 1,385/-
೨. ಮಧು ಡಿ.ಎಸ್. - ರೂ. 300/-
೩. ಜಾಕ್ - ರೂ. 1111/-
೪. ಸುಮ - ರೂ. 1೦೦/-
೫. ತ್ರಿವೇಣಿ - ರೂ. 500/-
೬. ಶ್ವೇತಾಶೆಟ್ಟಿ - ರೂ. 300/-
೭. ಆರ‍್ - ರೂ. 300/-
೮. ಸತೀಶ್ ನಾಯಕ್ - ರೂ. 1,000/-
೯. ಜಗನ್ ರಮೇಶ್ - ರೂ. 500/-
೧೦. ಪ್ರಶಾಂತ್ ರೈ ಕೂರ್ಗ್‌ - ರೂ. 404/-
೧೧. ಶ್ರೀಕಾಂತ್ - ರೂ. 500/-
೧೨. ವಿಜಯ್ ಆದಿತ್ಯ - ರೂ. 500/-
೧೩. ಕವಿರಾಜ್ - ರೂ. 50/-
೧೪. ಸಹನಾ - ರೂ. 50/-
೧೫. ತುಳುನಾಡ ಜಾನಪದ ಕಲೆ - ರೂ. 3,000/-
೧೬. ಡೆಮ್ ಮತ್ತು ಅವರ ಸ್ನೇಹಿತರು - ರೂ. 8,000/-

ಒಟ್ಟು ಮೊತ್ತ ರೂ. 18,000/-
[ ಈ ಎಲ್ಲಾ ಹಣವನ್ನೂ ಅಯ್ಯಮ್ಮಳಿಗೆ ತಲುಪಿಸಲಾಗಿದೆ ]

2 ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…