ವಿಷಯಕ್ಕೆ ಹೋಗಿ

ಪೀಠ ಇಷ್ಟೊಂದು ಘಾಟಾ ?


ಜ್ಞಾನಪೀಠ ಬಂದಿದ್ದು ಕಂಬಾರರಿಗಾದರೆ ಅದರಿಂದ ತಲೆ ಬಿಸ ಮಾಡಿಕೊಂಡಿರುವ ವ್ಯಕ್ತಿಗಳೇ ಬೇರೆಯವರು. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಬಂತು ಎಂದು ನಾವು ಖುಷಿ ಪಡುವ ಹೊತ್ತಿಗೇ ಅದರಲ್ಲೊಂದು ಕಿಡಿ ಮತ್ತು ಹೊಗೆ ಶುರುವಾಗಿ ಕನ್ನಡ ಸಾಹಿತ್ಯ ಲೋಕವನ್ನು ಮಸುಕಾಗಿಸುತ್ತಿರುವುದು ವಿಪರ್ಯಾಸ. ಪೀಠ ಬಂದ ಖುಷಿಯಲ್ಲಿ ಕಂಬಾರರಿದ್ದರೆ ಭೈರಪ್ಪರಿಗೆ ಎಲ್ಲಿ ಬಂದು ಬಿಡುತ್ತೋ ಅನ್ನುವ ಆತಂಕದಲ್ಲಿ ಅನೇಕರಿರುವಂತೆ ತೋರುತ್ತಿದೆ.

ಕಂಬಾರರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೇ ಪಾಟೀಲ ಪುಟ್ಟಪ್ಪ ಗರಮ್ ಆಗಿ ಮೊದಲಿಗೆ ತಲ್ಲಣ ಉಂಟು ಮಾಡಿದರು. "ಹೋಗಿ ಹೋಗಿ ಇವರಿಗೆ ಕೊಡೋದಾ ?" ಎಂಬ ಪಾಪುರವರ ಪಾಪದ ಮಾತಲ್ಲಿ ತನಗೆ ಬರಲಿಲ್ಲ ಅನ್ನುವ ನೋವಿತ್ತೋ, ಅಥವಾ ಕಂಬಾರರಿಗೆ ಬಂದೋಯ್ತಲ್ಲ ಅನ್ನುವ ಹೊಟ್ಟೆಕಿಚ್ಚು ಇತ್ತೋ ಗೊತ್ತಾಗಲಿಲ್ಲ. ಆದರೆ ಅಗ್ನಿ ಶ್ರೀಧರ‍್ ಮತ್ತು ನಿಡುಮಾಮಿಡಿ ಸ್ವಾಮೀಜಿಗಳಂತವರು ಜ್ಞಾನಪೀಠ ಹೊತ್ತು ತಂದ ಕಂಬಾರರ ತಲೆಯನ್ನು ನೇವರಿಸುವುದು ಬಿಟ್ಟು ಬೈರಪ್ಪರ ಜುಟ್ಟು ಹಿಡಿದು ಅಲ್ಲಾಡಿಸ ಹೊರಟಿದ್ದು ಅತಿರೇಕವೆನ್ನಿಸದಿರದು. ಹೇಳಿ ಕೇಳಿ ಅದು ಖಾಸಗಿ ಸಂಸ್ಥೆ ನೀಡುವ ಒಂದು ಪ್ರಶಸ್ತಿ. ಅದನ್ನು ಅವರಿಗೆ ಕೊಡಬಾರದು, ಇವರು ಸತ್ತ ನಂತರ ಬೇಕಾದರೆ ಕೊಡಲಿ ಎಂದೆಲ್ಲಾ ಹೇಳಿದ್ದು ಸರಿಯಲ್ಲ. ಪ್ರಶಸ್ತಿಯ ಬಗ್ಗೆ ಈಗಾಗಲೇ ಲಾಬಿಯ ಕಳಂಕ ತಟ್ಟಿರುವುದೇನೋ ಹೌದು. ಹಾಗಂತ ಅವರೇನೂ ಕಣ್ಣು ಮುಚ್ಚಿಕೊಂಡು ಪ್ರಶಸ್ತಿ ನೀಡುತ್ತಾರೆಯೇ ? ನೂರಕ್ಕೆ ನೂರಲ್ಲದಿದ್ದರೂ 80 - 90 % ರಷ್ಟಾದರೂ ಅರ್ಹರಿಗೇ ನೀಡಬೇಕಲ್ಲವೇ ? ಅದನ್ನೇ ಸಂಸ್ಥೆಯವರು ಮಾಡುತ್ತಿದ್ದಾರೆ. ಸರ್ಕಾರದಿಂದಲೂ ಸಾಧ್ಯವಿಲ್ಲದ ಒಂದು ಅತ್ಯುನ್ನತ ಪ್ರಶಸ್ತಿಯನ್ನು ಖಾಸಗಿ ಸಂಸ್ಥೆಯವರು ನೀಡುತ್ತಿರುವುದೇ ಒಂದು ಘನಕಾರ್ಯ. ಅದರಲ್ಲೂ ಕನ್ನಡಕ್ಕೆ ಹೆಚ್ಚು ಪ್ರಶಸ್ತಿಗಳು ಬಂದಿರುವುದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಹಾಗಿರುವಾಗ ಅದರ ಬಗ್ಗೆ ಕೊಂಕು ನುಡಿಯುವುದು ಸರಿಯಲ್ಲ. ಅಕಸ್ಮಾತ್ ಬೈರಪ್ಪರಿಗೂ ಒಂದು ಜ್ಞಾನಪೀಠ ಬಂದರೆ ಬಂದೇ ಬಿಡಲಿ, ಏನಂತೆ? ಅದು ಅವರಿಗಷ್ಟೇ ಅಲ್ಲದೇ ಕನ್ನಡಕ್ಕೂ ಗರಿಮೆಯೇ ಅಲ್ಲವೇ? ಅವರಿಗೆ ಏಕೆ ಕೊಟ್ಟೆವು ಎಂಬುದನ್ನು ಪ್ರಶಸ್ತಿ ಪ್ರದಾನ ಸಮಿತಿಯವರು ವಿವರಿಸುತ್ತಾರೆ.

ಕನ್ನಡಕ್ಕೆ ಎಂಟು ಜ್ಞಾನಪೀಠಗಳನ್ನು ತಂದುಕೊಟ್ಟ ಸಾಹಿತಿಗಳಿಗೆ ವಂದಿಸಲೇ ಬೇಕು. ಏಕೆಂದರೆ ಇದರಿಂದ ನಮ್ಮ ಭಾಷೆಯ ಹಿರಿಮೆ ಹೆಚ್ಚುತ್ತಿದೆ. ಉಳಿದ ಭಾಷಿಕರೂ ಕನ್ನಡದತ್ತ ತಿರುಗಿ ನೋಡುತ್ತಾರೆ. ಎಂಟು ಜ್ಞಾನಪೀಠ ಪಡೆಯುವಂತಾ ಸಮೃದ್ದಿ ಕನ್ನಡದಲ್ಲಿ ಏನಿದೆಯಪ್ಪಾ ? ಎಂದು ಅವಲೋಕಿಸುತ್ತಾರೆ. ಇದು ಕನ್ನಡಕ್ಕೆ ಬಹುದೊಡ್ಡ ಕೊಡುಗೆಯೇ ಸರಿ. ಇಷ್ಟಕ್ಕೂ ಇದನ್ನು ನೀಡುತ್ತಿರುವವರು ಕನ್ನಡೇತರ ಸಂಸ್ಥೆ. ಆದುದರಿಂದ ಅವರು ಯಾರಿಗೆ ನೀಡಿದರೂ ಸಂತೋಷದಿಂದಲೇ ಸ್ವೀಕರಿಸೋಣ. ಅರ್ಹರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರಿಗೇ ಬಿಡೋಣ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ