ವಿಷಯಕ್ಕೆ ಹೋಗಿ

ಜಾಲತಾಣಗಳ ಬಗ್ಗೆ ಒಂದಿಷ್ಟು ಮಾಹಿತಿ

ಜಾಲತಾಣ (website) ಅಂದರೆ ಎಲ್ಲರಿಗೂ ಗೊತ್ತು. ಆದರೆ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಎಲ್ಲರಿಗೂ ಪೂರ್ತಿಯಾಗಿ ತಿಳಿದಿರಲಿಕ್ಕಿಲ್ಲ. ನಿಮಗೊಂದು ಜಾಲತಾಣದ ಅಗತ್ಯ ಇದೆ ಎಂದಾದಲ್ಲಿ ಅದರ ಬಗ್ಗೆ ಸ್ವಲ್ಪ ಮಾಹಿತಿ ಪಡೆದುಕೊಳ್ಳುವುದು ಉತ್ತಮ.

ಏನಿದು ಜಾಲತಾಣ ?

ಅಂತರ್ಜಾಲದಲ್ಲಿ ನಿರ್ದಿಷ್ಟ ಹೆಸರಿನೊಂದಿಗೆ ಗುರುತಿಸಿಕೊಂಡು ನಿಮ್ಮ / ಸಂಸ್ಥೆಯ / ಅಥವಾ ಯಾವುದೇ ಮಾಹಿತಿಯನ್ನು ಶೇಖರಿಸಿಟ್ಟುಕೊಂಡು ಆ ವಿಳಾಸದಲ್ಲಿ ಬಂದವರಿಗೆ ಅದನ್ನು ತೋರಿಸುವುದೇ ಜಾಲತಾಣ. ಹೀಗೆ ಹೇಳಿದರೆ ಅಷ್ಟಾಗಿ ಅರ್ಥ ಆಗಲಿಕ್ಕಿಲ್ಲ. ಸ್ವಲ್ಪ ವಿವರಿಸಬೇಕಾಗಬಹುದು. 

ಜಾಲತಾಣವು ಕಾರ್ಯ ನಿರ್ವಹಿಸುವುದು URL ( uniform resource locator or universal resource locator ) ವಿಳಾಸದ ಆಧಾರದಲ್ಲಿ. ಅಂದರೆ ನೀವು ಒಂದು ನಿರ್ಧಿಷ್ಟ ಜಾಲತಾಣಕ್ಕೆ ಹೋಗಬೇಕಾದರೆ ನಿಮ್ಮ ಬ್ರೌಸರ್‌ನ ವಿಳಾಸದ ಪಟ್ಟಿಯಲ್ಲಿ ನಿಮಗೆ ಬೇಕಾದ URL (ವಿಳಾಸ) ಹಾಕಲೇಬೇಕು. [ ಉದಾ : ಈ ಬ್ಲಾಗ್‌ನ URL ಹೀಗಿದೆ : www.pisumathu4u.blogspot.in ]. ಅಂದರೆ ಪ್ರತಿಯೊಂದು ತಾಣಕ್ಕೂ ಒಂದೊಂದು ವಿಳಾಸ ಇರುತ್ತದೆ. ವಿಳಾಸ ತಪ್ಪಾದರೆ ನೀಮಗೆ ಬೇಕಾದ ತಾಣ ಸಿಗದೇ ಬೇರೆ ತಾಣಕ್ಕೆ ಹೋಗಿರುತ್ತೀರಿ. ಅಥವಾ Not Found ಸಂದೇಶ ಬರುತ್ತದೆ. ಅಂದರೆ ಒಂದು ಅಂಚೆ ಪತ್ರವನ್ನು ಸರಿಯಾದ ಸ್ಥಳಕ್ಕೆ ತಲುಪಿಸಲು ಹೇಗೆ ವಿಳಾಸ ಮುಖ್ಯವೋ ಹಾಗೆಯೇ ನಮಗೆ ಬೇಕಾದ ಜಾಲತಾಣವನ್ನು ತಲುಪಲು ಸರಿಯಾದ URL ಮುಖ್ಯ. 

ಒಂದು ವಿಳಾಸವನ್ನು ವಿಳಾಸದ ಪಟ್ಟಿಯಲ್ಲಿ ನಮೂದಿಸಿ Enter ಮಾಡಿದಾಗ ನಮ್ಮ ಬ್ರೌಸರ್‌ನಲ್ಲಿ ಆ ವಿಳಾಸದಲ್ಲಿರುವ ಪುಟ ತೆರೆದುಕೊಳ್ಳುತ್ತದೆ. ನಿಮ್ಮದೇ ಒಂದು ಜಾಲತಾಣ ಬೇಕು ಎಂದಾದಲ್ಲಿ ನಿಮ್ಮದೇ ಆದ ಒಂದು ವಿಳಾಸ ಬೇಕು. ಅರ್ಥಾತ್ ಆ ವಿಳಾಸದ ಮಾಲೀಕತ್ವವನ್ನು ನೀವು ಪಡೆಯಬೇಕು. ಅದನ್ನು ಡೊಮೈನ್ ಎಂದು ಹೇಳುತ್ತಾರೆ. ಅಂದರೆ ಒಂದು ಡೊಮೈನ್ ಹೆಸರನ್ನು ನೀವು ನೋಂದಾಯಿಸಿದರೆ ಅದು ಪ್ರಪಂಚದಾಧ್ಯಂತೆ ನಿಮ್ಮದೇ ಆಗುತ್ತದೆ. ಅಂದರೆ ಅದೇ ಹೆಸರನ್ನು ಬೇರೆ ಯಾವ ದೇಶದಲ್ಲಿಯೂ ಯಾರೂ ಪಡೆಯಲು ಸಾಧ್ಯವಿಲ್ಲ. 

ಡೊಮೈನ್ ಹೆಸರುಗಳು

ಇದರಲ್ಲಿ ಒಟ್ಟು ಮೂರು ಭಾಗಗಳಿರುತ್ತವೆ. ಉದಾ : http://www.pisumathu.com ಅನ್ನು ತೆಗೆದುಕೊಂಡರೆ ...
http://www = ಆರಂಭಿಕ ಭಾಗ. ಜಾಲತಾಣದ ಪ್ರಮುಖ ಅಂಗ.
.pisumathu = ಜಾಲತಾಣದ ಹೆಸರು
.com = ಎಕ್ಸ್‌ಟೆನ್ಷನ್

http://www = ಇದರಲ್ಲಿ http ಅಂದರೆ Hyper Text Transfer Protocol ಎಂದರ್ಥ. ಹಾಗೆಯೇ www ಎಂದರೆ World Wide Web. ಇವೆರಡೂ ಸೇರಿ ಪ್ರಪಂಚದಾಧ್ಯಂತ ಇರುವ ಜಾಲತಾಣಗಳನ್ನು ಹುಡುಕಿ ಕೊಡುತ್ತವೆ. 
ಎರಡನೇ ಭಾಗ ನಮ್ಮ ತಾಣದ ಹೆಸರು. ಅದು ನಿಮಗೆ ಇಷ್ಟ ಬಂದಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. 
ಮೂರನೇ ಭಾಗ .com. ಇದನ್ನು ಎಕ್ಸ್‌ಟೆನ್ಷನ್‌ ಎಂದು ಹೇಳುತ್ತಾರೆ. ಈ ಎಕ್ಸ್‌ಟೆನ್ಷನ್‌ಗಳು ತುಂಬಾ ಇವೆ. ಯಾವುದನ್ನು ಬೇಕಾದರೂ ನೀವು ಆಯ್ಕೆ ಮಾಡಿಕೊಳ್ಳಬಹುದು.
ಉದಾ :
.com = commercial
.in = india
.co.in = commercial india
.net = internet
ಹೀಗೆ ಹಲವಾರು ಎಕ್ಸ್‌ಟೆನ್ಷನ್‌ಗಳಿವೆ. ಇದರಲ್ಲಿ .com ಹೆಚ್ಚು ಪ್ರಚಲಿತವಾಗಿದೆ. 

ನೋಂದಾಯಿಸುವುದು ಹೇಗೆ ? 

ನಿಮಗೆ ಒಂದು ಜಾಲತಾಣ ಅಗತ್ಯವಿದ್ದರೆ ಮೊದಲಿಗೆ ಯಾವ ಹೆಸರಿನಲ್ಲಿ ನೋಂದಾಯಿಸುವುದು ಎನ್ನುವುದನ್ನು ತೀರ್ಮಾನ ಮಾಡಿಕೊಳ್ಳಿ. ಆದರೆ ನಿಮಗೆ ಬೇಕಾದ ಹೆಸರೇ ಸಿಕ್ಕಿ ಹೋಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದೇ ಹೆಸರಿನಲ್ಲಿ ಪ್ರಪಂಚದಾಧ್ಯಂತ ಬೇರೆ ಯಾರಾದರೂ ಹೆಸರು ನೋಂದಾಯಿಸಿದ್ದರೆ ಯಾವ ಕಾರಣಕ್ಕೂ ನಿಮಗದು ದೊರೆಯುವುದಿಲ್ಲ. ಉದಾ : ನಿಮಗೆ manju.com ಹೆಸರಿನ ಡೊಮೈನ್ ಬೇಕಾಗಿದ್ದು ಅದನ್ನು ನೋಂದಾಯಿಸಲು ಯತ್ನಿಸಿದರೆ ಕಂಡಿತಾ ಅದು ದೊರೆಯುವುದಿಲ್ಲ. ( http://www.pisumathu.com/ ಇಲ್ಲಿ ಹೋಗಿ ಪರಿಶೀಲಿಸಿ ನೋಡಿ ) ಏಕೆಂದರೆ ಅದನ್ನು ಈಗಾಗಲೇ ಯಾರೋ ನೋಂದಾಯಿಸಿಕೊಂಡಿದ್ದಾರೆ. ಆಗ ನೀವು ನಿಮಗೆ ಬೇಕಾದ ಹೆಸರಿನಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳಲೇ ಬೇಕು. ಉದಾ : manjuwriter.com. ಅಥವಾ ಎಕ್ಸ್‌ಟೆನ್ಷನ್‌ಗಳನ್ನಾದರೂ ಬದಲಾಯಿಸಿ ಸಿಗುತ್ತದಾ ನೋಡಬೇಕು. .com ಸಿಗದಿದ್ದಲ್ಲಿ .co.in / .in / .net ಹೀಗೆ ಯಾವುದಾದರೊಂದು ದೊರೆಯಬಹುದು. ಈ ನೋಂದಾಯಿಸುವಿಕೆಯನ್ನು ನೋಡಿಕೊಳ್ಳುವುದು ICANN ( Internet Corporation for Assigned Names and Numbers ) ಎಂಬ ಅಂತರಾಷ್ಟ್ರೀಯ ಸಂಸ್ಥೆ. ಆದರೆ ಇದು ನೇರವಾಗಿ ನಿಮಗೆ ಡೊಮೈನ್ ನೋಂದಾಯಿಸಿ ಕೊಡುವುದಿಲ್ಲ. ಅದಕ್ಕೆ ನೀವು ಅನುಮತಿ ಪಡೆದಿರುವ ಇತರೆ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಈ ವ್ಯವಹಾರದಲ್ಲಿ godaddy.com ಪ್ರಪಂಚದಲ್ಲೆ ನಂ 1 ಆಗಿದೆ. ಅದರಂತೆಯೇ ಹಲವಾರು ಸಂಸ್ಥೆಗಳಿದ್ದು ನನ್ನದೇ ಆದ http://www.pisumathu.com ಸಹ ಇವುಗಳಲ್ಲಿ ಒಂದಾಗಿದೆ. ಇಲ್ಲಿ ನೀವು ನಿಮಗೆ ಬೇಕಾದ ಹೆಸರನ್ನು ಹುಡುಕಿ ನಿಮ್ಮ ಹೆಸರಲ್ಲಿ ನೋಂದಾಯಿಸಿಕೊಳ್ಳಬಹುದು. ನೀವು ಆ ಸಮಯದಲ್ಲಿ ನೀಡುವ ಮಿನ್ನಂಚೆ (E-mail) ವಿಳಾಸವನ್ನೇ ಮಾಲೀಕತ್ವ ನಿರೂಪಣೆಗೆ ಪರಿಗಣಿಸಲಾಗುತ್ತದೆ.

ಹೆಸರು ನೋಂದಾಯಿಸಿದ ನಂತರ ?

ಹೆಸರು ನೋಂದಾಯಿಸಿದ ನಂತರ ಅಷ್ಟಕ್ಕೇ ಕೆಲಸ ಮುಗಿದು ಹೋಗಲಿಲ್ಲ. ನಿಮ್ಮ ಜಾಲತಾಣದ ಪುಟಗಳನ್ನು ವಿನ್ಯಾಸ ಮಾಡಬೇಕಾಗುತ್ತದೆ. ಅದರಲ್ಲಿ ನಿಮ್ಮ/ಸಂಸ್ಥೆಯ ಎಲ್ಲಾ ಮಾಹಿತಿ, ಚಿತ್ರಗಳು, ವಿಡಿಯೋ ಮುಂತಾದುವನ್ನು ಹಾಕಬಹುದು. ಇದನ್ನು ನುರಿತ ವೆಬ್‌ ಡಿಸೈನರ‍್ ಗಳಿಂದ ಮಾಡಿಸಬೇಕು. ಹೀಗೆ ವಿನ್ಯಾಸಗೊಳಿಸಿದ ಪುಟಗಳನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಿದರೆ ಮಾತ್ರ ಪ್ರಪಂಚದಾಧ್ಯಂತ ನಿಮ್ಮ ವಿಳಾಸ ಹುಡುಕುವ ಜನರಿಗೆ ಅವು ತೆರೆದುಕೊಳ್ಳಲು ಸಾಧ್ಯ. ಆ ಸ್ಥಳವನ್ನೇ Hosting ಎನ್ನುತ್ತಾರೆ. ಇದನ್ನೂ ಒದಗಿಸುವ ಹಲವಾರು ಸಂಸ್ಥೆಗಳಿದ್ದು http://www.pisumathu.com ಸಹ ಇದೀಗ ಈ ಕಾರ್ಯ ಮಾಡುತ್ತಿದೆ. ಇಲ್ಲಿ ನೀವು ನಿಗದಿ ಪಡಿಸಿದ ದರವನ್ನು ನೀಡಿ ಸ್ಥಳವನ್ನು ಪಡೆದು ನಿಮ್ಮ ಪುಟಗಳನ್ನು host  ಮಾಡಿದರೆ ಅಲ್ಲಿಗೆ ನಿಮ್ಮ ಜಾಲತಾಣ ಸಂಪೂರ್ಣವಾದಂತೆ. ಪ್ರಪಂಚದ ಯಾವುದೇ ಭಾಗದಲ್ಲೂ ಅದು ತೆರೆದುಕೊಳ್ಳುತ್ತದೆ.

ಸೇವೆಯ ಬಗ್ಗೆ

ನಿಮಗೆ ಈ ಕ್ಷೇತ್ರದ ಬಗ್ಗೆ ಅಷ್ಟಾಗಿ ತಿಳಿದಿಲ್ಲದಿದ್ದರೆ ಏಕಾಏಕೀ ಯಾವುದೋ offer ಮಳೆಗೆ ತುತ್ತಾಗಬೇಡಿ. ಗೂಗಲ್‌ನಲ್ಲಿ ಹುಡುಕಿದಾಗ ಅತಿ ಕಡಿಮೆ ದರದಲ್ಲಿ ಜಾಲತಾಣಗಳನ್ನು ನಿರ್ಮಿಸುತ್ತೇವೆ ಎಂದು ಹಲವಾರು ಸಂಸ್ಥೆಗಳು ಹೇಳಿಕೊಂಡಿರುವುದನ್ನು ಕಾಣಬಹುದು. ಅವುಗಳಿಗೆ ಮರುಳಾದರೆ ಮುಂದೆ ತೊಂದರೆ ಎದುರಾಗಬಹುದು. ಹಾಗೂ ದರಗಳ ಬಗ್ಗೆ ಮೊದಲು ಒಂದು ಮೊತ್ತವನ್ನು ತಿಳಿಸಿ ಅವರಿಗೆ ಅದನ್ನು ಪಾವತಿಸಿದ ನಂತರ ಇನ್ನೊಂದಕ್ಕೆ ಹೆಚ್ಚಿನ ದರವನ್ನು ತಿಳಿಸುವುದೂ ಇದೆ. ಒಂದು ಜಾಲತಾಣಕ್ಕೆ ನೀವು ಮೂರು ವಿಭಾಗಕ್ಕೆ ಹಣವನ್ನು ನೀಡಬೇಕಾಗುತ್ತದೆ.
೧. ಡೊಮೈನ್ ನೋಂದಾಯಿಸುವಿಕೆ
೨. ಪುಟ ವಿನ್ಯಾಸ
೩. ಹಾಸ್ಟಿಂಗ್

ಕೆಲವು ಸಂಸ್ಥೆಗಳು ಮೊದಲಿನ ಡೊಮೈನ್ ನೋಂದಾಯಿಸುವಿಕೆಗೆ ಅತಿ ಕಡಿಮೆ ದರ ತೋರಿಸಿ ಉಳಿದ ಎರಡರಲ್ಲಿ ಹೆಚ್ಚು ಪೀಕುತ್ತವೆ. ಇಂತಹ ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವು ಸಂಸ್ಥೆಗಳ ಹಾಸ್ಟಿಂಗ್ ಸರ್ವರ‍್ ಕಳಪೆ / ಹಳೆಯದಾಗಿದ್ದರೆ ತೊಂದರೆ ತಪ್ಪಿದ್ದಲ್ಲ. ಅಂತಹ ಸಮಯದಲ್ಲಿ ನಿಮ್ಮ ಜಾಲತಾಣ ಸರಿಯಾಗಿ ತೆರೆದುಕೊಳ್ಳದಿರಬಹುದು, ತುಂಬಾ ನಿಧಾನವಾಗಿ ತೆರೆದುಕೊಳ್ಳಬಹುದು. ಒಮ್ಮಗೇ ಹಲವಾರು ವೀಕ್ಷಕರು ಬೇರೆ ಬೇರೆ ಕಡೆ ತೆರೆದರೆ ಜಾಮ್ ಆಗಬಹುದು. ಹಾಗಾಗಿ ಈ ವಿಷಯದಲ್ಲಿ ದರ ಸಮರಕ್ಕೆ ಮರುಳಾಗಬೇಡಿ. ಇನ್ನೊಂದು ಪ್ರಮುಖ ವಿಷಯವೆಂದರೆ ಡೊಮೈನ್ ನೋಂದಾಯಿಸುವಿಕೆ ಮತ್ತು ಹಾಸ್ಟಿಂಗ್ ದರಗಳು ಒಂದು ವರ್ಷಕ್ಕೆ ಸೀಮಿತವಾಗಿರುತ್ತವೆ. ಇವುಗಳನ್ನು ಪ್ರತಿ ವರ್ಷ ನವೀಕರಣ ಮಾಡಿಸಬೇಕು. ಆದರೆ ಪುಟ ವಿನ್ಯಾಸ ಒಮ್ಮೆ ಮಾಡಿಸಿದರೆ ಸಾಕು. ಅಥವಾ ಇದರಲ್ಲಿ ನಿಮಗೆ ಏನಾದರೂ ಬದಲಾವಣೆ ಬೇಕಾದಲ್ಲಿ ಮಾರ್ಪಡಿಸಬಹುದು.
1 ಕಾಮೆಂಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ