ವಿಷಯಕ್ಕೆ ಹೋಗಿ

ಕತ್ತಲಲ್ಲಿ ಕಾನೂನು... ವಕೀಲರ ಗೂಂಡಾಗಿರಿ !

ಇಂದು ವಕೀಲರು ಪತ್ರಕರ್ತರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಏಕೆಂದರೆ ಇದು ಮೊದಲೇನಲ್ಲ, ಕೊನೆಯೂ ಅಗುವುದಿಲ್ಲ. ಏಕೆಂದರೆ ನಮ್ಮ ವ್ಯವಸ್ಥೆ ಸದ್ದಿಲ್ಲದೇ ಹದಗೆಟ್ಟಿದೆ. ಒಳಗೊಳಗೇ ಕೊಳೆತಿರುವ ಈ ಸಮಾಜದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಇಂದು ವಕೀಲರು ಮಾಡಿದ್ದನ್ನು ನಾಳೆ ಪೊಲೀಸರು ಮಾಡಬಹುದು. ನಾಡಿದ್ದು ಇನ್ಯಾರೋ ಮಾಡಬಹದು. ಇದಕ್ಕೆಲ್ಲಾ ಕಾರಣಗಳು ಅನೇಕ... ಆದರೆ ಮೂಲ ಒಂದೇ... ವ್ಯವಸ್ಥೆ ಹದಗೆಟ್ಟಿದೆ.

ಇಲ್ಲಿ ಉತ್ತಮ ಸಮಜದ ನಿರ್ಮಾಣದ ಕನಸು ಕಾಣುವವರಿಗಿಂತಲೂ ಅಕ್ರಮ ಸಂಪಾದನೆಯ ಕನಸು ಕಾಣುತ್ತಿರುವವರೇ ಅಧಿಕ. ಹೀಗಾಗಿ ಸಮಾಜ ಘಾತುಕರ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದೆ. ಹಣ ಹೆಚ್ಚು ಹೇಗೆ ಬರುತ್ತೋ ಆ ಕಡೆಗೆ ಜನರ ಮನನ್ಸು ಒಲಿಯುತ್ತಿದೆ. ಇದಕ್ಕೆ ನ್ಯಾಯವಾದಿಗಳೇನೂ ಹೊರತಾಗಿಲ್ಲ. ಭ್ರಷ್ಟರೊಂದಿಗೆ ಕೈ ಜೋಡಿಸುತ್ತಿರುವ ಅನೇಕ ನ್ಯಾಯವಾದಿಗಳಿಗೆ ಸಹಜವಾಗಿಯೇ ’ಭ್ರಷ್ಟರಿಗೆ ದುಸ್ವಪ್ನವಾಗಿರುವ’ ಸುದ್ದಿ ವಾಹಿನಿಗಳ ಬಗ್ಗೆ ಆಕ್ರೋಶವಿದೆ. ಇದರ ಜೊತೆ ಜಾತಿ ರಾಜಕೀಯ ವಕೀಲರನ್ನು ಬಿಟ್ಟಿಲ್ಲ. ಯಡಿಯೂರಪ್ಪನನ್ನು ಬೆತ್ತಲು ಮಾಡಿ ಮಾನ ಕಳೆದ ಸುದ್ದಿ ವಾಹಿನಿಗಳ ಮೇಲೆ ಜಾತಿಯ ಕಾರಣಕ್ಕೇ ಸಿಟ್ಟುಗೊಂಡಿರುವವರಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿಯ ವಿಷಯದಲ್ಲೂ ನಡೆದಿದೆ. ಆತನ ಬಿಟ್ಟಿ ದುಡ್ಡು ತಿಂದ ಕೆಲವು ನ್ಯಾಯವಾದಿಗಳು ಇಂದು ಆತನ ಬಗ್ಗೆ ಹೆಚ್ಚೇ ಅನ್ನುವಷ್ಟು ಸುದ್ದಿ ಮಾಡ ಹೊರಟಿದ್ದ ಸುದ್ದಿ ವಾಹಿನಿಗಳ ಮೇಲೆ ಪ್ರಹಾರ ನಡೆಸಿರುವ ಸಾಧ್ಯತೆ ಹೆಚ್ಚಿದೆ. ಅಂದರೆ ವಕೀಲರು ಏನು ಮಾಡಿದರೂ ಜನ ಸಹಿಸಬೇಕು. ದಿನವಿಡೀ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು ರಸ್ತೆ ತಡೆ ನಡೆಸಿದರೂ ಅವರ ಮೇಲೆ ಕ್ರಮವಿಲ್ಲ.

ಯಾವುದೇ ಒಂದು ಗುಂಪುಗಾರಿಕೆ ಸಾಮಾಜಿಕವಾಗಿ ಒಳ್ಳೆಯದಲ್ಲ. ಜಾತಿ, ವೃತ್ತಿ ಗುಂಪುಗಾರಿಕೆಗಳು ಸದಾ ದೇಶಕ್ಕೆ ಮುಳುವಾಗಿಯೇ ಇವೆ. ನಾಯಕತ್ವ ವಹಿಸಿಕೊಂಡ ಅಲ್ಪಜ್ಞರು ಈ ಆಮಿಷಕ್ಕೆ ಒಳಗಾದರಂತೂ ಮುಗಿದೇ ಹೋಯ್ತು. ಇಡಿಯ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಲಿಂಗಾಯತ ಸಮಾಜವನ್ನು ಬೆನ್ನಿಗಿಟ್ಟುಕೊಂಡವರಂತೆ ಯಡಿಯೂರಪ್ಪ ಆಡಿದ್ದಕ್ಕೂ, ಇಡಿಯ ವಕೀಲ ವೃಂದವೇ ತಮ್ಮ ಹಿಂದಿದೆ ಎಂದು ಅಟ್ಟಹಾಸ ಮೇರೆದ ಇಂದಿನ ಕೆಲವು ದುಷ್ಟ ವಕೀಲರಿಗೂ ಯಾವುದೇ ವ್ಯತ್ಯಾಸ ಇಲ್ಲ. ಇವರ ಉದ್ದೇಶ ಒಂದೇ, ತಮ್ಮನ್ನು ಯಾರು ಪ್ರಶ್ನಿಸಬಾರದು. ತಮ್ಮ ಬಲ ಇಷ್ಟಿದೆ ಎಂದು ತೋರಿಸಿಕೊಳ್ಳುವುದು.

ಇದೆಲ್ಲ ಒಂದು ಕಡೆಗಾದರೆ ಕಾನೂನನ್ನು ಪಾಲಿಸಬೇಕಾಗಿದ್ದ ಪೊಲೀಸರನ್ನು ಕಟ್ಟಿ ಹಾಕಿದ್ದಾದರೂ ಯಾರು ? ಪೊಲೀಸ್ ಆಯುಕ್ತರೇ ? ಸರ್ಕಾರವೇ ? ಜನಾರ್ದನ ರೆಡ್ಡಿಯೇ ? ಬಿಜೆಪಿ ಸರ್ಕಾರ ಯಾಕೆ ಇಷ್ಟೊಂದು ನಿರ್ಲಜ್ಜ, ಬೇಜವಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ ? ಇನ್ನೂ ಯಾಕೆ ಇವರಿಗೆ ಬುದ್ದಿ ಬಂದಿಲ್ಲ ? ಅಷ್ಟು ದೊಡ್ಡ ಗಲಾಟೆ ನಡೆದಿದ್ದರೂ ಸದಾನಂದ ಗೌಡರು "ನನಗೆ ವಿಷಯ ತಿಳಿದಿಲ್ಲ" ಅನ್ನುತ್ತಾರೆ ಎಂದರೆ ಇಂತಹ ಜಾಣ ಕುರುಡರಿಗೆ ಏನೆನ್ನಬೇಕು ?
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…