ವಿಷಯಕ್ಕೆ ಹೋಗಿ

ವಿಶ್ವ ಪಾರಂಪರಿಕ ಪಟ್ಟಿಗೂ ಬಿಜೆಪಿ ಕೊಕ್ಕೆ !ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. 

ಎಲ್ಲರಿಗೂ ತಿಳಿದಿರುವಂತೆ ವಿಶ್ವ ಪರಂಪರಿಕ ಪಟ್ಟಿಗೆ (ಯುನೆಸ್ಕೋ ನಿರ್ಧಾರ) ಸೇರಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಹಂಪಿಯನ್ನು ಈ ಪಟ್ಟಿಗೆ ಸೇರಿಸಲು ಸಹ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹರ ಸಾಹಸ ಮಾಡಿದ್ದವು. ಆದರೆ ಈ ಬಾರಿ  ಅಪಾರ ವನ್ಯ ಸಂಪತ್ತು ಮತ್ತು ಜೀವರಾಶಿ ಹೊಂದಿರುವ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ್ದಾಗ್ಯೂ ಸಹ ರಾಜ್ಯದ ಮಂತ್ರಿಗಳು (ಮುಖ್ಯಮಂತ್ರಿ ಸದಾನಂದಗೌಡ ಸೇರಿ) ಇದನ್ನು ವಿರೋಧಿಸಿರುವುದು ದುರ್ದೈವದ ವಿಚಾರ. ಇವರು ನೀಡುತ್ತಿರುವ ಕಾರಣ ವಿಚಿತ್ರವಾಗಿದೆ. "ಅಲ್ಲಿ ಅಭಿವೃದ್ಧಿ ಮಾಡಲು ತೊಂದರೆ ಆಗುತ್ತೆ" ಇದಕ್ಕೆ ಏನು ಹೇಳುತ್ತೀರಿ. 

ಇವರ ಸರ್ಕಾರದ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷದಿಂದಲು ನೋಡುತ್ತಲೇ ಇದ್ದೇವೆ. ಬೆಂಗಳೂರಿನಂತಾ ನಗರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಡಾಂಬರು ಹಾಕಿದರೆ ಹಳ್ಳಿಗಳ ಕಡೆ ನಾಲ್ಕು ವರ್ಷಕ್ಕೆ ಒಮ್ಮೆಯೂ ರಸ್ತೆ ಸುಧಾರಣೆ ನಡೆಯುವುದಿಲ್ಲ. ಕೆಲವು ಫುಟ್‌ಪಾತ್‌ಗಳು ಫಳಫಳ ಹೊಳೆದರೆ ಕೆಲವು ಬಾಯಿ ತೆರೆದುಕೊಂಡು ಕುಳಿತಿವೆ. ಇಂತಹ ಅಭಿವೃದ್ಧಿ ಶೂರರು ಪಶ್ಚಿಮ ಘಟ್ಟದ ಕಾಡನ್ನು, ಅಥವಾ ಅಲ್ಲಿನ ಹಳ್ಳಿಗಳನ್ನು ಅದೇನು ಅಭಿವೃದ್ಧಿ ಮಾಡುತ್ತಾರೆ ? ಇಷ್ಟು ದಿನ ಅದೇನು ಕಡಿದು ಕಟ್ಟೆ ಹಾಕಿದ್ದಾರೆ ?

ಎಲ್ಲಾ ಕಡೆ ನಗರೀಕರಣವಾಗುತ್ತಿರುವಾಗ ಉಳಿದಿರುವ ಪಶ್ಚಿಮ ಘಟ್ಟವನ್ನೂ ಕಡಿದು ನಿರ್ನಾಮ ಮಾಡಬೇಕಾ ? ಅಥವಾ ಅದನ್ನು ಉಳಿಸಲು ಮನಸ್ಸು ಮಾಡಬೇಕಾ ಎಂಬ ಕನಿಷ್ಟ ಜ್ಞಾನವೂ ನಮ್ಮ ಮಂತ್ರಿಗಳಿಗೆ ಇಲ್ಲ. ಅಥವಾ ದಾಂಡೇಲಿ, ಮಡಿಕೇರಿ, ಚಿಕ್ಕಮಗಳೂರು ಗಳೆಡೆಯಲ್ಲೆಲ್ಲಾ ಕಾಡಿನೊಳಗೆ ಹಬ್ಬಿರುವ ರೆಸಾರ್ಟ್‌ ಕಬಂಧ ಬಾಹು ವಿಧಾನಸೌಧವನ್ನೂ ಹಿಡಿದಿಟ್ಟಿದಿಯಾ ? ಬಂಡಿಪುರ ಅರಣ್ಯದೊಳಗೆ ರಾತ್ರಿ ಸಂಚಾರವನ್ನು ನಿಷೇಧಿಸಿ ಜನರ ಮೆಚ್ಚುಗೆ ಪಡೆದ ಸರ್ಕಾರ ಈ ವಿಷಯದಲ್ಲಿ ಮಾತ್ರ ಎಡವುತ್ತಿರುವುದೇಕೆ ? ಇವರು ಇರುವ ನಗರ ಹಳ್ಳಿಗಳನ್ನು ಅಭಿವೃದ್ಧಿ ಮಾಡಿಕೊಂಡು ಸರ್ಕಾರವನ್ನು ಸರಿಯಾಗಿ ನಡೆಸಿದರೆ ಅದೇ ದೊಡ್ಡ ಉಪಕಾರವಾದೀತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…