ವಿಷಯಕ್ಕೆ ಹೋಗಿ

ದೇವರ ಹೆಸರಲ್ಲಿ ಮೆರೆಯುತ್ತಿರುವವರಿಗೆ ದುಗುಡ ತಂದಿಟ್ಟ ’ದೇವಕಣ’!


ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ 'ದೇವಕಣ' ಪದ ಕಾಲಾನುಕಾಲದಿಂದ 'ದೇವರ' ಹೆಸರಲ್ಲೇ ಮೋಸ, ವಂಚನೆ, ಭಯೋತ್ಪಾಧನೆಗಳೆಲ್ಲವನ್ನೂ ಮಾಡುತ್ತಾ ಬಂದವರಿಗೆಲ್ಲಾ ದುಗುಡ ತಂದಿಟ್ಟಿದೆ. ದೇವರು ಎಂಬ ನಂಬಿಕೆ ಎಷ್ಟೆಲ್ಲಾ ಒಳ್ಳೆಯದನ್ನು ಮಾಡಿದೆಯೋ ಅಷ್ಟೇ ಅನಾಹುತಗಳನ್ನು ಮಾಡಿರುವುದೂ ಸತ್ಯ. ವೈಕ್ತಿಕವಾಗಿ ವ್ಯಕ್ತಿಯೊಬ್ಬ ದೇವರ ಅಸ್ಥಿತ್ವವನ್ನು ನಂಬುವುದರಿಂದ ಸಮಾಜಕ್ಕೆ ಯಾವ ಅಪಾಯವೂ ಇಲ್ಲ. ಅಪಾಯವಿರುವುದು ಆ ನಂಬಿಕೆ ಸಾಮೂಹಿಕವಾಗಿ ಪ್ರಕಟಗೊಳ್ಳುವಾಗ. ಇದರಿಂದಾಗಿಯೇ ದೇವರ ಹೆಸರಲ್ಲೇ ಧರ್ಮಗಳೂ ಹುಟ್ಟಿಕೊಂಡಿರುವುದು. ಇದರ ಅಪಾಯವನ್ನು ಕಂಡೇ ಕುವೆಂಪುರವರು "ಜಗತ್ತಿನ ಎಲ್ಲರಿಗೂ ಧರ್ಮ ಬೇಕು, ಆದರೆ ಅದು ವೈಯಕ್ತಿಕವಾಗಿರಬೇಕು. ಅಂದರೆ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಧರ್ಮಗಳಿರಬೇಕು. ಯಾವಾಗ ಜನ ಧರ್ಮದ ಹೆಸರಲ್ಲಿ ಗುಂಪು ಕಟ್ಟುತ್ತಾರೋ ಆಗ ಅನಾಹುತವಾಗುತ್ತದೆ" ಎಂದಿದ್ದರು. ಅದೇ ರೀತಿ ಸ್ವಾಮಿ ವಿವೇಕಾನಂದರು "ಧರ್ಮ ಪುಸ್ತಕಗಳಲ್ಲಾಗಲೀ, ದೇವಸ್ಥಾನಗಳಲ್ಲಾಗಲೀ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಈ ಕೋಮು ಗಲಭೆ, ಧಾರ್ಮಿಕ ಭೇದ ಭಾವನೆಗಳೆಲ್ಲ ಹೊರಟು ಹೋಗುವವು. ಧರ್ಮವೆಂದರೆ ಪ್ರತ್ಯಕ್ಷಾನುಭವ. ದೇವರ ಮತ್ತು ಆತ್ಮನ ಪ್ರತ್ಯಕ್ಷ ದರ್ಶನವನ್ನು ಪಡೆದವನು ಮಾತ್ರ ಧರ್ಮವನ್ನು ಹೊಂದಿರುವನು." ಎಂದು ಎಚ್ಚರಿಸಿದ್ದರು.

ಸರಿಯಾಗಿ ವಿವೇಚಿಸಿದರೆ ದೇವರಿಗೂ ಧರ್ಮಕ್ಕೂ ಸಂಬಂಧವಿಲ್ಲ. ಧರ್ಮ ಎನ್ನುವುದು ಮನಷ್ಯನ ಬಾಳ್ವೆಗೆ ಬೇಕಾದ ಒಂದು ಸಂವಿಧಾನ. ಆತನ ನಡವಳಿಕೆಯನ್ನು ನಿರ್ಧರಿಸುವ ಪುಸ್ತಕವಾಗಬೇಕಿತ್ತು. ಆದರೆ ಅದು ಹಾಗೆ ಆಗದೇ ಧರ್ಮ ಹಾಗೂ ದೇವರನ್ನು ಒಂದುಗೂಡಿಸಿ ಅದ್ವಾನವಾಗುವ ಹಾಗೆ ಮಾಡಲಾಗಿದೆ. ರಾಮ, ಕೃಷ್ಣ, ಪೈಗಂಬರ, ಏಸು - ಇವರೆಲ್ಲಾ ಮಾನವರೇ ಆಗಿದ್ದರು. ಆದರೆ ವಿಶೇಷ ಬುದ್ಧಿಮತ್ತೆ ಮತ್ತು ಗುಣಸಂಪನ್ನರಾಗಿದ್ದುದರಿಂದ ಅವರನ್ನು ದೇವರ ಸ್ಥಾನಕ್ಕೆ ಏರಿಸಲಾಯ್ತು. ಕಾಲಾಂತರದಲ್ಲಿ ಅವರನ್ನು ದೇವರೆಂದೇ ನಂಬಲಾಯ್ತು. ಅವತಾರಗಳ ಕತೆಯೆಲ್ಲಾ ಕೆಲಸವಿಲ್ಲದ ಮೇಧಾವಿಗಳು ಬರೆದ ಸಾಹಿತ್ಯವಷ್ಟೇ. 
ದೇವರಿದ್ದಾನೆ ಎಂದು ನಂಬಿರುವ, ಹಾಗೂ ಹಾಗೆ ವಾದಿಸುವವರ ದೊಡ್ಡ ಅಸ್ತ್ರವಾಗಿದ್ದುದೇ ಈ ಲೋಕದ ಸೃಷ್ಟಿ. ಏಕೆಂದರೆ ಶೂನ್ಯದಿಂದ ಈ ಲೋಕ ಸೃಷ್ಟಿಯಾಯ್ತು ಎಂಬುದನ್ನು ಎಂಥವರೂ ಅರಗಿಸಿಕೊಳ್ಳುವುದು ಕಷ್ಟ. ಇದೊಂದು ಕಾರಣದಿಂದಲೇ ದೇವರಿಲ್ಲ ಅನ್ನಿಸಿದರೂ ಸಹ 'ಈ ಬ್ರಹ್ಮಾಂಡ ಸೃಷ್ಟಿ ಆಗಿದೆಯೆಂದರೆ ಒಂದು ವೇಳೆ ದೇವರಿದ್ದರೂ ಇರಬಹುದು' ಎಂಬ ಅನುಮಾನವನ್ನು ಹುಟ್ಟು ಹಾಕದಿರದು. ವಿಜ್ಞಾನಿಗಳಿಗೂ ಈ ನಿಗೂಢವನ್ನು ಬೇಧಿಸುವುದು ಸಾಧ್ಯವಾಗದೇ ಇದ್ದಾಗ ಆಸ್ಥಿಕರ ಕೈ ಮೇಲಾಗಿತ್ತೆನ್ನಬಹುದು. ಈ ಕಾರಣವೇ ದೇವರ ಅಸ್ಥಿತ್ವವನ್ನು ಸಾಧಿಸಲು ಹೊರಡುವವರ ದೊಡ್ಡ ಅಸ್ತ್ರವಾಗಿ ಇಷ್ಟು ದಿನವೂ ಇತ್ತು. 

ಆದರೆ ಕಡೆಗೂ ವಿಜ್ಞಾನಿಗಳು ಗೆಲುವಿನ ಹೊಸ್ತಿಲಿಗೆ ಬಂದಿದ್ದಾರೆ. ಈ ಬ್ರಹ್ಮಾಂಡದ ಸೃಷ್ಟಿಗೆ ದೇವರು ಕಾರಣವಲ್ಲ... ದೇವಕಣ ಕಾರಣ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ. ಎರಡು ಅಣುಗಳು ಬೆಳಕಿಗಿಂತಲು ಹೆಚ್ಚಿನ ವೇಗದಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆದಾಗ ಅಪಾರ ದ್ರವ್ಯರಾಶಿ ಬಿಡುಗಡೆಯಾಗುತ್ತದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಇದನ್ನು ವಿಜ್ಞಾನಿಗಳು ಸಾದರಪಡಿಸಲು ಇನ್ನಷ್ಟು ಕಾಲ ಹಿಡಿಯಬಹುದು. ಆದರೆ ದೇವರ ಹೆಸರಲ್ಲೇ ಬದುಕುತ್ತಾ, ದೇವರ ಹೆಸರಲ್ಲೇ ಧರ್ಮ ಕಟ್ಟಿ, ದೇವರ ಹೆಸರಲ್ಲೇ ಯುದ್ಧ ಬಯೋತ್ಪಾಧನೆ ಮಾಡುವವರಿಗೆಲ್ಲಾ ಈ 'ದೇವಕಣ' ಸಣ್ಣಗೆ ನಡುಕ ತಂದಿರಬಹುದು... ತಮ್ಮ ಬಂಡವಾಳ ಬಯಲಾದೀತೆಂದು !
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…