ವಿಷಯಕ್ಕೆ ಹೋಗಿ

ಕನ್ನಡದ WRONG TURN - ದಂಡುಪಾಳ್ಯ

ದಂಡುಪಾಳ್ಯದಲ್ಲಿ ನಟಿಸಿರುವ ಕರಿಸುಬ್ಬು ಅವರು ನನಗೆ ಪರಿಚಯವಿದ್ದುದರಿಂದ ಈ ಚಿತ್ರವನ್ನು ನೋಡಿದೆ. ನಾನು ನೋಡಿದ ಅತ್ಯಂತ ಕ್ರೂರ ದೃಶ್ಯಗಳ ಚಿತ್ರ ಇಂಗ್ಲೀಷ್‌ನ "ರಾಂಗ್ ಟರ್ನ್‌". ಅದರ ನಂತರದ ಸ್ಥಾನ ಮೊನ್ನೆ ಬಿಡುಗಡೆಯಾದ "ದಂಡುಪಾಳ್ಯ"ಕ್ಕೆ ಸಲ್ಲುತ್ತದೆ. ಆದರೆ ಮೊದಲಿನದು (ಬಹುಶಃ) ಕಾಲ್ಪನಿಕ ಕಥೆಯಾದರೆ ಎರಡನೆಯದು ಸತ್ಯಕಥೆ. ಹಾಗಾಗಿಯೇ ಇದು ಹೆಚ್ಚು ಮನವನ್ನು ಕಲಕುತ್ತದೆ, ಕುಲುಕುತ್ತದೆ.

"ಇಂತಹ ಸಮಾಜ ಘಾತುಕರ ಚಿತ್ರಗಳು ಬೇಕಾ?" ಎಂದು ಕೇಳುವವರಿಗೆ ಚಿತ್ರದ ಮೂಲಕವೇ ನಿರ್ದೇಶಕ ಶ್ರೀನಿವಾಸ ರಾಜು ಉತ್ತರ ಹೇಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಬಂದ ನೂರಾರು ರೌಡಿಯಿಸಂ ಚಿತ್ರಗಳಲ್ಲಿ ಓಂ, ಕರಿಯ, ಜೋಗಿ ಮುಂತಾದ ಬೆರಳೆಣಿಕೆಯ ಚಿತ್ರಗಳನ್ನುಳಿದು ಯಾವುದರಲ್ಲಿಯೂ ಒಂದು ಸಂದೇಶವಿಲ್ಲ. ಅಂತಹ ಚಿತ್ರಗಳ ಸಾಲಿಗೆ ಸೇರದಂತೆ ಕರಾರುವಾಕ್ ಆಗಿ ನೋಡಿಕೊಂಡಿದ್ದಾರೆ ಶ್ರೀನಿವಾಸರಾಜು. 

ಚಿತ್ರದಲ್ಲಿ ಕೊಲೆ ಮತ್ತು ಅತ್ಯಾಚಾರದ ಸಾಲು ಸಾಲು ದೃಶ್ಯಗಳಿವೆ. ಆದರೆ ಯಾವುದನ್ನೂ ವಿನಾಕಾರಣ ತುರುಕಿಲ್ಲ. ಅಸಹ್ಯಗೊಲಿಸಿಲ್ಲ. ಬದಲಿಗೆ ಪ್ರತಿ ಕೊಲೆ, ಅತ್ಯಾಚಾರದ ದೃಶ್ಯವನ್ನು ನೋಡುವಾಗಲೂ ಸಹ ಅದು ನಿಜವಾಗಿ ನಡೆದ ಒಂದು ಹೇಯ, ಕ್ರೂರ ಕೃತ್ಯ ಎಂದು ಮನಸ್ಸಿಗೆ ನಾಟುವಂತೆ ನಮ್ಮನ್ನು ತಿವಿಯುವಲ್ಲಿ ನಿರ್ದೇಶಕರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ವೆಂಕಟ್‌ಪ್ರಸಾದ್ ಸಹ ಕೈ ಜೋಡಿಸಿದ್ದಾರೆ. 

ಈ ಚಿತ್ರದಲ್ಲಿ ನಟಿಸಿರುವ ನಟರುಗಳಂತೂ ದಂಡುಪಾಳ್ಯ ಗಾಂಗ್‌ನವರನ್ನೇ ಆವಾಹಿಸಿಕೊಂಡವರಂತೆ ನಟಿಸಿದ್ದಾರೆ. ಇವರು ನಟರೋ ಅಥವಾ ನಿಜವಾದ ಕೊಲೆಗಡುಕರೇ ಇವರಾ ಎಂಬ ಸಂದೇಹ ಮೂಡುವಂತಿದೆ ಇವರ ನಟನೆ. ಪೊಲೀಸ್ ಅಧಿಕಾರಿ ಛಲಪತಿ ಅವರ ಪಾತ್ರದಲ್ಲಿ ರವಿಶಂಕರ‍್ ಅತ್ಯುತ್ತಮವಾಗಿ ನಟಿಸಿದ್ದಾರೆ. ಪೂಜಾಗಾಂಧಿಯ ನಟನೆಯನ್ನಂತೂ ಮೆಚ್ಚಲೇ ಬೇಕು. ಮುಂಗಾರುಮಳೆಯ ನವಿರು ಹುಡುಗಿ ಇವಳೇನಾ ಎಂಬಷ್ಟು ಸಂದೇಹ ಮೂಡುತ್ತದೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆನ್ನಬಹುದು. ಆನಂದ್ ಅವರ ಸಂಭಾಷಣೆಯಂತೂ ಕತ್ತು ಕುಯ್ಯುವಷ್ಟೇ ಹರಿತವಾಗಿದೆ. 

ದಂಡುಪಾಳ್ಯ ತಂಡ ಸುಮಾರು ೮೦ಕ್ಕೂ ಹೆಚ್ಚು ಜನರನ್ನು ಕೊಲೆಗೈದಿತ್ತು. ಹೆಣ್ಣು-ಗಂಡೆಂಬ ವ್ಯತ್ಯಾಸವಿಲ್ಲದೇ ಅತ್ಯಾಚಾರವೆಸಗಿ ಕೊಲೆಗೈದು, ಅಥವಾ ಕೊಲೆಮಾಡಿ ಅತ್ಯಾಚಾರವೆಸಗುತ್ತು. ಕೇವಲ ನೂರು, ಇನ್ನೂರು, ಸಾವಿರಕ್ಕಾಗಿಯೂ ಪ್ರಾಣ ತೆಗೆಯುವ ಹೇಯ ಕೃತ್ಯ ನಡೆಸಿದ್ದರು. ಒಂದೊಂದು ಕೊಲೆಯೂ ಕರುಣಾಜನಕ. ಕತ್ತು ಕುಯ್ದು ಮಹಿಳೆ ಒದ್ದಾಡುತ್ತಿರುವಾಗ, ಅಷ್ಟೇ ಅಲ್ಲದೇ ಸತ್ತ ನಂತರವೂ ಸಹ ಸಂಭೋಗ ನಡೆಸುತ್ತಿದ್ದರು ಎಂಬ ವಿಷಯ ತಿಳಿದರೆ ಅವರೇನು ಮನುಷ್ಯರಾ? ರಾಕ್ಷಸರಾ? ಎಂಬ ಅನುಮಾನ ಮೂಡದಿರದು. ಅಮಾನವೀಯ ಅನ್ನುವುದಕ್ಕಿಂತಲೂ ಮಿಗಿಲಾದ ಅಮಾನುಷ ಕೃತ್ಯಗಳವು.

ಇನ್ನು ಮಧ್ಯೆ ಮಧ್ಯೆ ಕೆಲವು ಪದಗಳಿಗೆ ಸೆನ್ಸಾರ‍್ ಮಂಡಳಿ ಕತ್ತರಿ ಪ್ರಯೋಗಿಸಿ ತನ್ನ "ಕತ್ತು ಕುಯ್ಯುವ" ಕೆಲಸವನ್ನು ನಿಭಾಯಿಸಿದೆ. ಅವರು ಕತ್ತರಿಸಿರುವ ಪದಗಳೆಲ್ಲಾ ದಿನನಿತ್ಯ ನಾವು ಬಸ್‌ನಲ್ಲಿ, ಅಲ್ಲಿ ಇಲ್ಲಿ ಕೇಳುವಂತಹ ಪದಗಳೇ. ಹಿಂಸಾತ್ಮಕ ದೃಶ್ಯಗಳಿವೆ ಅನ್ನೋದು ಬಿಟ್ಟರೆ ಸಾಮಾನ್ಯದ್ದೊಂದು ತೆಲುಗು, ತಮಿಳು, ಹಿಂದಿಯ ಚಿತ್ರಗಳಲ್ಲಿರುವುದಕ್ಕಿಂತಾ ಅಶ್ಲೀಲ ದೃಶ್ಯ ಇದರಲ್ಲಿ ಯಾವುದೂ ಇಲ್ಲ. ಆದರೂ ಕರ್ನಾಟಕ ಸೆನ್ಸಾರ‍್ ಮಂಡಳಿ ಯಾಕೆ ಹೀಗಾಡುತ್ತೋ ಗೊತ್ತಿಲ್ಲ. ಕಡೇ ಪಕ್ಷ ಇಂತಹ ಚಿತ್ರಗಳಿಗಾದರೂ "AA" ಗ್ರೇಡ್ ನೀಡಿ ಅನಗತ್ಯ ಕತ್ತರಿ ಪ್ರಯೋಗ ನಿಲ್ಲಿಸಬಹುದು.

ಹೆಂಗಸರು ಮಕ್ಕಳು ಈ ಚಿತ್ರವನ್ನು ನೋಡುವುದು ಕಷ್ಟ. ಆದರೂ ನಾನು ಹೋದಾಗ  ಕೆಲವರು ಹೆಂಗಸರು ಚಿತ್ರಮಂದಿರದಲ್ಲಿ ಇದ್ದರು. ಮುಖ್ಯವಾಗಿ ಕನ್ನಡದಲ್ಲೂ ಸಿನೆಮಾ ಮೇಕಿಂಗ್ ತಿಳಿದಿರುವ ಉತ್ತಮ ತಂತ್ರಜ್ಞರಿದ್ದಾರೆಂದು ತಿಳಿಯಲು, ಮೇಕಿಂಗ್ ಅನ್ನು ಪ್ರೀತಿಸುವವರು ಈ ಚಿತ್ರವನ್ನು ನೋಡಬೇಕು. ಪೋಬಿಯಾ ಇದ್ದವರು, ಹೃದಯ ಗಟ್ಟಿ ಇಲ್ಲದವರು ದೂರ ಉಳಿಯುವುದೊಳಿತು.

ಒಟ್ಟಿನಲ್ಲಿ ಮನೆಯಲ್ಲಿ ಒಂಟಿಯಾಗಿರುವವರು "ಅಮ್ಮಾ ಕುಡಿಯಲು ಸ್ವಲ್ಪ ನೀರು ಕೊಡ್ತೀರಾ?" ಎಂದು ಅಪರಿಚಿತರು ಕೇಳುತ್ತಾ ಬಂದರೆ ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನಂತೂ ಚಿತ್ರ ಸಾರುತ್ತದೆ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…