ವಿಷಯಕ್ಕೆ ಹೋಗಿ

ಕರ್ನಾಟಕವೇನು ರಾಮರಾಜ್ಯವಾಗಿದೆಯೇ ಪ್ರತಾಪ್‌ಸಿಂಹ ?

ಪತ್ರಿಕೋದ್ಯಮ ಒಂದು ನ್ಯಾಯಾಲಯದಂತೆ ವರ್ತಿಸಬೇಕು. ಪತ್ರಕರ್ತರಾದವರು ನ್ಯಾಯಾಧೀಶರಾಗಿ ವರ್ತಿಸಬೇಕು. ಆದರೆ ಕನ್ನಡದ ಖ್ಯಾತ ಪತ್ರಕರ್ತರೆನ್ನಿಸಿಕೊಂಡ ಕೆಲವರು ಮಾಡುತ್ತಿರುವುದೇ ಬೇರೆ. ಹೀಗಾಗಿ ಯಾರನ್ನೂ ನಂಬುವಂತಿಲ್ಲ.

ಕನ್ನಡಪ್ರಭದ ಅಂಕಣಕಾರ ಪ್ರತಾಪ್‌ಸಿಂಹ ಕೂಡಾ ಇದೇ ಸಾಲಿಗೆ ಸೇರ್ಪಡೆಯಾಗಿರುವುದು ದುರಂತ. ಇವರು ಬಾಯಿ ಬಿಟ್ಟರೆ ಹಿಂದು-ಹಿಂದುತ್ವ ಎಂದು ಬಡಬಡಿಸುತ್ತಾರೆ. ಆದರೆ ಹಿಂದು ಮೇಲ್ವರ್ಗದವರ ಉಡಾಳತನದ ಬಗ್ಗೆ ಎಂದೂ ಅಂಕಣ ಬರೆಯುವುದಿಲ್ಲ. ಇಂದಿನ ತಮ್ಮ "ಬೆತ್ತಲೆ ಪ್ರಪಂಚ"ದಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರದ ವಿಷಯ ಎತ್ತಿಕೊಂಡು ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರವನ್ನು ಟೀಕಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ, ಆದರೆ ಅದರ ಹಿಂದಿರುವ ಉದ್ದೇಶ, ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣ ಎನ್ನುವಂತಹ ಇವರ ಮನೋಭಾವ ಖಂಡನೀಯ. ಇವರ ಲೇಖನದಲ್ಲಿ ಎಲ್ಲೂ ಆ ಅತ್ಯಾಚಾರವನ್ನು ಖಂಡಿಸುವ ಒಂದೇ ಒಂದು ಪದವಿಲ್ಲ! ಬದಲಿಗೆ ಇವರು ಖಂಡಿಸುವುದು ಕೇವಲ ಎಬಿವಿಪಿ ಹೋರಾಟಗರರನ್ನು ಕೇಂದ್ರವು ಸರಿಯಾಗಿ ನಡೆಸಿಕೊಳ್ಳದಿರುವುದನ್ನು ಮಾತ್ರ ! ಆದರೆ ಅದೇ ಹೋರಾಟಗಾರರ ಹೊಡೆತಕ್ಕೆ ಸಿಕ್ಕು ಸತ್ತ ಪೊಲೀಸ್ ಪೇದೆ ಇವರಿಗೆ ಲೆಕ್ಕಕ್ಕಿಲ್ಲ! 

"ಡೆಲ್ಲಿಯಲ್ಲಿ ಇಬ್ಬರೇ ಸೇಫ್! ಸೋನಿಯ ಮತ್ತು ಶೀಲಾ" ಎನ್ನುವ ಇವರಿಗೆ ಕರ್ನಾಟಕದಲ್ಲಿ ಎಲ್ಲಾ ಹುಡುಗಿಯರೂ ಸೇಫ್ ಅನ್ನಿಸಿರಬೇಕು. ಕರ್ನಾಟಕದಲ್ಲಿ ಅತ್ಯಾಚಾರಗಳೇ ನಡೆದಿಲ್ಲವೇ ಪ್ರತಾಪ್ ಅವರೇ ? ಕರ್ನಾಟಕವೇನು ನಿಮ್ಮ RSS ಕೃಪಾಪೋಷಿತ ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಮರಾಜ್ಯವಾಗಿ ಹೋಗಿದೆ ಅಂದುಕೊಂಡಿದ್ದೀರಾ ? ಡೆಲ್ಲಿಯಲ್ಲಿ ಆ ಹುಡುಗಿಯ ಅಮಾನುಷ ಅತ್ಯಾಚಾರ ನಡೆದುದು ಡಿಸೆಂಬರ‍್ ೧೬ ರಂದು. ಅಲ್ಲಿಂದ ಇಂದಿನವರೆಗಿನ ೧೨ ದಿನಗಳ ಅವಧಿಯಲ್ಲೇ ಕರ್ನಾಟಕದಲ್ಲಿ ಆರೇಳು ಅತ್ಯಾಚಾರ ಪ್ರಕರಣಗಳು ಇವರದೇ ಕನ್ನಡಪ್ರಭದಲ್ಲಿ ವರದಿಯಾಗಿದೆ. ಅದರಲ್ಲು ಮಂಗಳೂರಿನಲ್ಲಿ ಡಿ. ೧೮ಕ್ಕೆ ನಡೆದ ಒಂದಂತೂ ದೆಹಲಿಯಲ್ಲಿ ನಡೆದಂತಹುದೇ ಘಟನೆ. ಒಬ್ಬ ಯುವತಿಯನ್ನು ತಲಾ ನಾಲ್ಕು ಜನರ ತಂಡ ಎರಡು ಬಾರಿ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ. ಅದೇನೂ ಅಮಾನವೀಯವಲ್ಲವೇ ? ಕೆಲವೆ ದಿನಗಳ ಕೆಳಗೆ ಧರ್ಮಸ್ಥಳದ ಸ್ನಾನಘಟ್ಟದ ಬಲಿ ಸೌಜನ್ಯ ಎಂಬ ಯುವತಿಯನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸೆಯಲಾಗಿತ್ತು. ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ತಿಂಗಳಿಗೆ ಒಂದೆರಡಾದರೂ ಅತ್ಯಾಚಾರಗಳು ನಡೆಯುತ್ತವೆ. ಇಂತಹ ಅನೇಕ ಘಟನೆಗಳು ಯಾಕೆ ಪ್ರತಾಪ್‌ಸಿಂಹರಿಗಾಗಲೀ, ಎಬಿವಿಪಿಗಳಿಗಾಗಲಿ ಕಾಣಿಸಲಿಲ್ಲ ? ಇವರೇಕೆ ಅಂಕಣ ಬರೆಯಲಿಲ್ಲ ? ಅವರೇಕೆ ಚಕಾರ ವೆತ್ತಲಿಲ್ಲ ? ಕಾಂಗ್ರೆಸ್ ಇದ್ದರೆ ಅಂಕಣ ಹೋರಾಟ, ಬಿಜೆಪಿ ಇದ್ದರೆ ಎಲ್ಲಾ ಮುಗುಂ !!? 

ಇಷ್ಟಕ್ಕು ಬೆಂಗಳೂರು ಎಷ್ಟರ ಮಟ್ಟಿಗೆ ಸೇಫ್ ? ದೇಶದಲ್ಲಿ ಅತ್ಯಾಚಾರದಲ್ಲಿ ಬೆಂಗಳೂರು ನಾಲ್ಕನೇ ಸ್ಥಾನ ಪಡೆದಿದೆ. ಇದೇನು ಕಡಿಮೆ ಸಾಧನೆ(?!)ಯೇ ? ದೆಹಲಿ ಸೇರಿದಂತೆ ಮೆಟ್ರೋ ನಗರಗಳಲ್ಲೆಲ್ಲಾ ಅತ್ಯಾಚಾರ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಆದರೂ ಇವರ ಹೋರಾಟ, ಅಂಕಣಗಳು ಮಾತ್ರ ಯಾಕೆ ದೆಹಲಿಗೇ ಸೀಮಿತವಾಗಿವೆ ? ದೆಹಲಿ ಹುಡುಗಿಯರು ಮಾತ್ರ ಶೀಲವಂತರು, ಉಳಿದ ಹುಡುಗಿಯರು ಶೀಲವಂತರಲ್ಲವೇ ? ಅದಿರಲಿ ಕಳೆದ ಹತ್ತು ವರ್ಷದಿಂದ ಮೋದಿಯವರ ಆಡಳಿತವಿರುವ ಗುಜರಾಥ್‌ನಲ್ಲಿ ಅತ್ಯಾಚಾರಗಳೇ ನಡೆಯತ್ತಿಲ್ಲವೇ ? ನನಗೆ ದೊರೆತ ಮಾಹಿತಿ ಪ್ರಕಾರ ೨೦೧೧ ರಲ್ಲಿ ಗುಜರಾಥ್‌ನಲ್ಲಿ ಒಟ್ಟು ೪೦೮ ಅತ್ಯಾಚಾರ ಪ್ರಕರಣಗಳು ನಡೆದಿವೆ ಹಾಗೂ ಇವುಗಳಲ್ಲಿ ಅಹ್ಮದಾಬಾದ್‌ನಿಂದಲೇ ೬೦ ವರದಿಯಾಗಿವೆ.  ಇದೇನೂ ಆತಂಕಕರಿ ವಿಷಯವಲ್ಲವೇ ?

ನಿಜ, ಅತ್ಯಾಚಾರದ ವಿರುದ್ಧ ಕಠಿಣ ಕ್ರಮ-ಕಾನೂನು ರೂಪಿಸಬೇಕಾದುದು ಕೆಂದ್ರ ಸರ್ಕಾರವೆ. ಆದಕ್ಕಾಗಿ ಹೋರಾಟ ನಡೆಸ ಬೇಕಾದುದೂ ಸಹ ಅನಿವಾರ್ಯವೇ. ಆದರೆ ಆ ಹೋರಾಟ ಉತ್ತಮ ಮನೋಭಾವದಿಂದ, ದೇಶಾಧ್ಯಂತ ನಡೆಯಬೇಕಾಗಿತ್ತಲ್ಲವೇ ? ಏಕೆಂದರೆ ಅತ್ಯಾಚಾರ- ಅನಾಚಾರಗಳು ದೆಹಲಿಗೆ ಮಾತ್ರ ಅಥವಾ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅತ್ಯಾಚಾರಿಗಳಿಗೆ ರಾಜ್ಯ-ದೇಶಗಳ ಚಿಂತೆಯೂ ಇಲ್ಲ. ಅವು ಎಲ್ಲಾ ಕಡಗೂ ನಡೆಯುತ್ತಿವೆ. ಕೇವಲ ಕಾಂಗ್ರೆಸ್ ಸರ್ಕಾರವನ್ನು ಟಾರ್ಗೆಟ್‌ ಮಾಡುವುದರಿಂದ ಇದೊಂದು ರಾಜಕೀಯ ಪ್ರೇರಿತ ಹೋರಾಟವಾಗುತ್ತದೆಯೇ ವಿನಃ ಬೇರೇನಿಲ್ಲ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…