ವಿಷಯಕ್ಕೆ ಹೋಗಿ

ಮಹಾನ್ ಪತ್ರಕರ್ತ ವಿಶ್ವೇಶ್ವರ ಭಟ್ಟರು ಬಡವರಿಗೆ ಬತ್ತಿ ಇಟ್ಟ ಕತೆ!


ಇವರು ಇವತ್ತೊಂದು ಕತೆ ಹೇಳಿದ್ದಾರೆ... ಅದು ಸೋಮಾರಿ ಮಿಡತೆ ಹಾಗೂ ಶ್ರಮಜೀವಿ ಇರುವೆ ಕತೆ.  ಇರುವೆ ಕಷ್ಟ ಪಟ್ಟು ಮುಂದಾಲೋಚನೆಯಿಂದ ದುಡಿದು ಆಹಾರ ಸಂಗ್ರಹಿಸಿ ಇಡುತ್ತೆ, ಆದರೆ ಮಿಡತೆ ಸೋಮಾರಿಯಾಗಿ ಆಡಿಕೊಂಡಿರುತ್ತೆ. ಆದರೆ ಮುಂದೆ ಮಿಡತೆ ಹಸಿವಿನಿಂದ ಬಳಲುವಾಗ ಇರುವೆ ಸಹಾಯ ಮಾಡಲಿಲ್ಲ ಎಂದು ಹಲವರು ಹೋರಾಟ ನಡೆಸುತ್ತಾರೆ... ಇತ್ಯಾದಿ ಇತ್ಯಾದಿಯಾಗಿದೆ ಇವರು ಹೇಳಿದ ಕತೆ. ಇದನ್ನೂ ಇವರು ಈ ಹಿಂದೆಯೂ ಒಮ್ಮೆ ಬರೆದಿದ್ದರು, ಈಗ ಕತೆಗೆ ಸ್ವಲ್ಪ ಸುಣ್ಣ-ಬಣ್ಣ ಬಂದಿದೆ. 
ಆದರೆ ಇದನ್ನು ಓದುತ್ತಾ ಹೋದಂತೆ ಮಿಡತೆ ಹಾಗೂ ಇರುವೆಯನ್ನು ಯಾರು ಯಾರಿಗೆ ಹೋಲಿಸಿದ್ದಾರೆ ಎಂದು ತಿಳಿದಾಗ ಮೈ ಉರಿಯುತ್ತದೆ. ಕಾರಣ ಇವರ ಪ್ರಕಾರ "ಮುಂದಾಲೋಚನೆಯಿಂದ" ಕೂಡಿಸಿ ಇಟ್ಟುಕೊಂಡಿರುವ ಇರುವೆಗಳೆಂದರೆ ಇಂದಿನ ಶ್ರೀಮಂತರು, ಹಾಗೂ ಬಡತನದಲ್ಲಿ ಹೊಟ್ಟೆಗಿಲ್ಲದೇ ಒದ್ದಾಡುತ್ತಿರುವ ಬಡವರೆಲ್ಲಾ ಸೋಮಾರಿ ಮಿಡತೆಗಳ ತರದವರು... ನಾಚಿಕೆಯಾಗಬೇಕು ಇವರಿಗೆ.

ವಿಶ್ವೇಶ್ವರ ಭಟ್ಟರು ಈ ಕೆಲವು ಉದಾಹರಣೆಗಳಿಗೆ ಯಾವ ರೀತಿ ಹೋಲಿಕೆ ಮಾಡುತ್ತಾರೆ ?
ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರು ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅಂದರೆ ಹೆಗ್ಗಡೆವರು ಪಾಪ ಗೊತ್ತಿಲ್ಲದೇ ಸೋಮಾರಿ ಮಿಡತೆಗಳಿಗೆ ಸಹಾಯ ಮಾಡುತ್ತಿದ್ದಾರಾ ? ಅಜೀಂ ಪ್ರೇಮ್‌ಜೀ ತಾವು ಗಳಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ದೀನ ದಲಿತರ ಉದ್ದಾರಕ್ಕಾಗಿ ಸಮರ್ಪಿಸಿದ್ದಾರೆ... ಹಾಗಿದ್ದರೆ ಸಾವಿರಾರು ಸೋಮಾರಿಗಳಿಗೆ ಇದರಿಂದ ಲಾಭವಾಯ್ತು... ಭಟ್ಟರು ಅಜೀಂರಿಗೆ ಸ್ವಲ್ಪ ಬುದ್ಧಿ ಹೇಳಿ ಅದನ್ನು ಶ್ರೀಮಂತ ಇರುವೆಗಳಿಗೇ ನೀಡಲು ತಿಳಿಸಬಹುದು. ಇದೇ ರೀತಿ ನೋಡುತ್ತಾ ಹೋದರೆ ನೂರಾರು ನಿಸ್ವಾರ್ಥದ ಧನಿಕರು ತಮ್ಮ ಆಸ್ತಿಯನ್ನು ಬಡವರಿಗೆ ಹಂಚಿ ಜನಸೇವೆಯಲ್ಲೇ ಜನಾರ್ದನ ಸೇವೆಯನ್ನು ಕಂಡಿದ್ದಾರೆ. ಬಹುಶಃ ಅವರೆಲ್ಲಾ ಬಡವರು ಸೋಮಾರಿ ಮಿಡತೆಗಳು ಎಂಬ ಜ್ಞಾನವನ್ನು ಗ್ರಹಿಸದವರಿರಬೇಕು!

ಇದೇ ಭಟ್ಟರ ಊರಾದ ಕುಮಟಾ ಸಹ ಸೇರಿದಂತೆ ಕರ್ನಾಟಕದಾಂದ್ಯಂತ ಭಟ್ಟರಂತಹ ಧನಿಕರ ಗದ್ದೆ ತೋಟಗಳಲ್ಲಿ ದುಡಿಯುತ್ತಿರುವ ಕೆಲಸಗಾರರು ಸೋಮಾರಿ ಮಿಡತೆಗಳೇ ? ಅಥವಾ ಅವರಿಂದ ದುಡಿಸಿಕೊಂಡು ಕಡಿಮೆ ಸಂಬಳ ನೀಡಿ ಲಾಭ ಮಾಡಿಕೊಳ್ಳುವ ಮಿಟಕಲಾಡಿಗಳು ಮಿಡತೆಗಳೇ ಅನ್ನುವುದನ್ನು ಇವರು ಅರ್ಥಮಾಡಿಕೊಳ್ಳಬೇಕಿದೆ. 

ಇಂತಹ ನೀಚರಿಗೆ ಪತ್ರಿಕೋದ್ಯಮ ಬೇರೆ ಕೇಡು. ಸರ್ಕಾರ ಬಡವರಿಗೆ ನೀಡುವ ಮೀಸಲಾತಿ ಸವಲತ್ತುಗಳನ್ನು ಟೀಕಿಸುವ ಇವರು ಒಂದು ವೇಳೆ ಸರ್ಕಾರ ಅದನ್ನು ನಿಲ್ಲಿಸಿದರೆ ಪರಿಣಾಮ ಏನಾಗುತ್ತೆ ಅನ್ನೋದನ್ನು ಊಹಿಸಿರಲಿಕ್ಕಿಲ್ಲ. ಶಕ್ತಿವಂತರಾದ ಬಡವರು ಭಟ್ಟರಂತಹ ಧನಿಕರನ್ನು ಬೀದಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ದೋಚತೊಡಗಿದರೆ ಆಗ ಇವರು ಯಾವ ಮಿಡತೆ-ಇರುವೆ ಕತೆ ಹೊಸೆಯುತ್ತಾರೋ?
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…