ವಿಷಯಕ್ಕೆ ಹೋಗಿ

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ


ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ. ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು.

ನಾನು ಈ ಹಿಂದೆಯೇ ಇದನ್ನು ಪಡೆದಿದ್ದರೂ ಮನೆಯನ್ನು ಬದಲಾಯಿಸಿದ್ದರಿಂದ ಹೊಸ ವಿಳಾಸಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಒಂದೇ ಕ್ಷೇತ್ರದ ಬೇರೆ ವಾರ್ಡ್‍ಗೆ ವಿಳಾಸ ಬದಲಾಯಿಸುವುದಷ್ಟೇ ಕೆಲಸ. ಎರಡು ವರ್ಷದಿಂದ ಇದರ ಬಗ್ಗೆ ತನಿಖೆಗೆ ಇಳಿದಿದ್ದೆ... ಹೇಗೆ ಬದಲಾಯಿಸುವುದು ಎಂದು ತಿಳಿಯಲು.  

ಚುನಾವಣಾ ಇಲಾಖೆಯ ಜಾಲತಾಣದಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಎಂದುಕೊಂಡು ಅವರ ಜಾಲತಾಣವಾದ http://ceokarnataka.kar.nic.in/ ನಲ್ಲಿ ಒಂದು ಖಾತೆಯನ್ನು ತೆರೆದು ಅಲ್ಲಿ ಪ್ರಯತ್ನಿಸಿದೆ. ಅಲ್ಲಿ ತಿಳಿದು ಬಂದ ವಿಷಯವೇನೆಂದರೆ ಸಧ್ಯಕ್ಕೆ ಆನ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಡಿಸಿಕೊಳ್ಳಬೇಕು ಎಂಬುದು.ಆ ವಿಷಯವನ್ನು ಕೈ ಬಿಟ್ಟು ಯಾವ ಕಚೇರಿಯಲ್ಲಿ ಸಾಧ್ಯ ಎಂದು ತನಿಖೆ ಕೈಗೊಂಡೆ. ಏಕೆಂದರೆ ಚುನಾವಣಾ ಇಲಾಖೆಯ ಕಚೇರಿ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಸತತ ತನಖೆಯ ನಂತರ ಮಹಾನಗರ ಪಾಲಿಕೆಯ ಸ್ಥಳೀಯ ಕಚೇರಿಯಲ್ಲೇ ಇದನ್ನು ಮಾಡಿಕೊಡುತ್ತಾರೆ ಎಂಬ ಸುಳಿವು ಸಿಕ್ಕಿತು. ಒಂದು ಶುಭ ಮುಹೂರ್ತದಲ್ಲಿ ಪತ್ರಿಕೆಯಲ್ಲಿ ಮತದಾರರ ಹೊಸ ಚೀಟಿ, ವಿಳಾಸ ಬದಲಾವಣೆ ಮುಂತಾದ ಕೆಲಸಗಳು ಶುರುವಾಗಿವೆ ಎಂಬ ಮಾಹಿತಿ ಬಂತು. ಕೂಡಲೆ ನನ್ನ ವಾರ್ಡ್‍ಗೆ ಸಂಬಂಧಿಸಿದ ವಾರ್ಡ್ ಕಚೇರಿಗೆ ಹೋಗಿ ವಿಚಾರಿಸಿದೆ. ಅಲ್ಲಿದ್ದ ಅಧಿಕಾರಿ ಅತ್ಯಂತ ಕಳಪೆ ಮಟ್ಟದ ಮುಖಭಾವದೊಂದಿಗೆ 'ಈಗ ಫಾರಂ ಇಲ್ಲ, ಮುಂದಿನ ಗುರುವಾರ ಬನ್ನಿ' ಎಂದು ಹೇಳಿ ಸಾಗ ಹಾಕಿದ. ಯಾರಪ್ಪನ ಮನೆಯ ಸಂಬಳ ತಿಂದು ಈ ಸೋಮಾರಿಗಳು ಬದುಕುತ್ತಿದ್ದಾರೆ ಎಂಬ ಜ್ಞಾನ ಅವರಿಗೇ ಇಲ್ಲ.

ಈ ಕಚೇರಿಗೆ ತಿರುಗಾಡುತ್ತಿದ್ದರೆ ನನ್ನ ಸಮಯ ವ್ಯರ್ಥವಾಗುತ್ತದೆ ಎಂದು ಮತ್ತೆ ಜಾಲತಾಣದಲ್ಲೆ ಪ್ರಯತ್ನಕ್ಕಿಳಿದೆ. ಈ ಬಾರಿ ಅದೃಷ್ಟ ಕುಲಾಯಿಸಿತೇನೋ ಎಂಬಂತೆ ಆನ್‍ಲೈನ್‍ನಲ್ಲೆ ವಿಳಾಸ ಬದಲಾಯಿಸಲು ಅವಕಾಶ ನೀಡಿದ್ದರು. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಿ ಮುಗಿಸಿ ಬಿಡಬಹುದು ಎಂದುಕೊಂಡು ಕಾರ್ಯಾಚರಣೆಗಿಳಿದೆ... ನಂತರವೇ ತಿಳಿದಿದ್ದು ಅದು ಕಾರ್ಗಿಲ್ ಕಾರ್ಯಾಚರಣೆಗಿಂತ ಬಿಗಿ ಎಂದು. ಒಮ್ಮೆ ಗುಪ್ತಪದವನ್ನು ಬದಲಾಯಿಸಿಕೊಳ್ಳೋಣ ಎಂದು ಪ್ರಯತ್ನಿಸಿದೆ ನೋಡಿ, ಅಷ್ಟೇ... ನಂತರ ಸರಿಯಾದ ಗುಪ್ತಪದ ಹಾಕಿದರೂ ತಾಣದಲ್ಲಿ ಪ್ರವೇಶ ಮಾಡಲು ಆಗಲಿಲ್ಲ. 
ಮತ್ತೆ ಸುಮಾರು ದಿನ ಈ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಸುಮ್ಮನಾದೆ. ಮತ್ತೊಂದು ದಿನ ಪ್ರಯತ್ನಿಸಿದಾಗ ತಾಣದೊಳಗೆ ಪ್ರವೇಶಿಸಲು ಅವಕಾಶ ದೊರೆಯಿತು. ಆಗ ಗುಪ್ತಪದವನ್ನು ಬದಲಾಯಿಸುವ ಯೋಚನೆ ಕೈಬಿಟ್ಟು ನೇರ ಹೋರಾಟಕ್ಕೆ ಇಳಿದೆ. ಆನ್‍ಲೈನ್‍ನಲ್ಲೆ ವಿಳಾಸದ ಅರ್ಜಿ ತುಂಬಲು ತೊಡಗಿದೆ. ಅದಕ್ಕೂ ಅನೇಕ ದಾಖಲೆಗಳನ್ನು ನೀಡಬೇಕಾಯ್ತು. ಎಲ್ಲವನ್ನೂ ನೀಡಿಯಾದ ಮೇಲೆ ಪೂರ್ತಿಯಾಯ್ತು ಅಂದುಕೊಂಡಾಗ ತಾಣವೇ ಹ್ಯಾಂಗ್ ಆಯ್ತು! ಅವತ್ತಿನ ಕಾರ್ಯಚರಣೆಯನ್ನು ಮತ್ತೆ ಸ್ಥಗಿತಗೊಳಿಸಿದೆ.

ಮರುದಿನ ಪ್ರಯತ್ನಿಸಿದಾಗಲೂ ಹೀಗೇ ಆಯ್ತು. ಮತ್ತೆ ಕಚೇರಿಗೆ ಹೋಗಿ ಅಧಿಕಾರಿಯ ಮುಖ ನೋಡುವ ಆಸಕ್ತಿ ಇರಲಿಲ್ಲ. ಆದರೆ ಭಾರತದ ಪ್ರಜೆಯಾಗಿ ಮತ ಚಲಾಯಿಸುವ ಹಕ್ಕನ್ನು ಇಷ್ಟು ಕೆಟ್ಟದಾಗಿ ಕಳೆದುಕೊಳ್ಳಲೂ ತಯಾರಿಲ್ಲದೆ ಮತ್ತೆ ಮತ್ತೆ ಆನ್‍ಲೈನ್‍ನಲ್ಲೇ ಪ್ರಯತ್ನಿಸಿದೆ. ಒಂದು ಬಾರಿ ಅರ್ಜಿಯು ಸಬ್‍ಮಿಟ್ ಆಗಿ ಬಿಟ್ಟರೆ ಮುಗಿಯಿತು, ನಂತರ ಅವರು ಯಾವಾಗ ಬೇಕಾದರೂ ನನ್ನ ವಿಳಾಸಕ್ಕೆ ಗುರುತಿನ ಚೀಟಿ ಕಳಿಸುತ್ತಾರೆ ಎಂಬ ವಿಶ್ವಾಸ ನನ್ನದು. ಸತತ ಪ್ರಯತ್ನದ ನಂತರ ಒಂದು ದಿನ ಕೊನೆಗೂ ನನ್ನ ಅರ್ಜಿ ಸಬ್‍ಮಿಟ್ ಆಗೇ ಹೋಯ್ತು. ಖುಶಿಯಿಂದ ಇನ್ನೇನು ಕುಣಿಯಬೇಕು ಅನ್ನುವಾಗ ಅಲ್ಲಿ ತೋರಿಸಿದ ವಾಕ್ಯ "ನೀವು ನೀಡಿದ ಎಲ್ಲಾ ದಾಖಲೆಗಳ ಪ್ರತಿಯೊಂದಿಗೆ ಈ ಅರ್ಜಿಯ ಪ್ರತಿಯನ್ನೂ ಸೇರಿಸಿ ಈ ಕೆಳ ಕಂಡ ವಿಳಾಸಕ್ಕೆ ಅಂಚೆ ಮುಖಾಂತರ ಕಳಿಸಬೇಕು!"

ಚುನಾವಣಾ ಆಯೋಗವೂ ಇಷ್ಟು ಎಡವಟ್ಟಾಗಿರುತ್ತದೆ ಎಂದು ತಿಳಿದುದೆ ಆಗ. ಚುನಾವಣೆಯನ್ನೇನೋ ನಿರ್ಭೀತಿಯಿಂದ, ಸುಲಲಿತವಾಗಿ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಮತದಾನದ ಗುರುತಿನ ಚೀಟಿ ವಿತರಣೆಯನ್ನು ಮಾತ್ರ ಮಹಾ ಅದ್ವಾನದಿಂದ ವಿತರಿಸುತ್ತಾರೆ. ಯಾಕೆ ಹೀಗೆ ? ಆನ್‍ಲೈನ್‍ನಲ್ಲಿ ಎಲ್ಲಾ ಭರ್ತಿ ಮಾಡಿದ ನಂತರ ಮತ್ತೆ ಅದನ್ನು ಅಂಚೆ ಮುಖಾಂತರ ಯಾಕೆ ಕಳಿಸಬೇಕು ? ಹಾಗಿದ್ದರೆ ನಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಆನ್‍ಲೈನ್ ಸರ್ಕಸ್ ಮಾಡುವ ಅಗತ್ಯವಾದರೂ ಏನು ? ನನ್ನ ಪ್ರಕಾರ ಆಧಾರ್ ಸಂಖ್ಯೆ, ವಾಹನ ಚಾಲನ ಪತ್ರ ಹೀಗೆ ಸರ್ಕಾರದ ಪ್ರಮುಖ ಯಾವುದಾದರೊಂದು ದಾಖಲೆಯ ಸಂಖ್ಯೆಯನ್ನು ಆನ್‍ಲೈನ್‍ನಲ್ಲಿ ಪಡೆದು ಮತದಾನದ ಗುರುತಿನ ಚೀಟಿಯನ್ನು ನೀಡಬಹುದು. ಅದರಲ್ಲೂ ಆಧಾರ್ ಇದ್ದರೆ ಬೇರೆ ಯಾವುದೇ ದಾಖಲೆ ಕೇಳದೆಯೇ ನೀಡಬೇಕು. ಆದರೂ ಈ ಯಡವಟ್ಟು ಸರ್ಕಾರಿ ಅಧಿಕಾರಿಗಳಿಗೆ ಏನಾಗಿದೆ ? ಇವರು ಹೊಟ್ಟೆಗೆ ಅದೇನು ತಿನ್ನುತ್ತಾರೆ ? 'ಸರಳ' ಅನ್ನುವ ಪದವೇ ಇವರ ಶಬ್ದಕೋಶದಲ್ಲಿ ಇಲ್ಲ ಯಾಕೆ ?

ಮಾಡಿದ್ದುಣ್ಣೋ ಮಹರಾಯ ಎಂಬಂತೆ ಎಲ್ಲಾ ದಾಖಲೆಗಳನ್ನೂ ಮುದ್ರಿಸಿ ನನ್ನ ಬಳಿಯಿದ್ದ ಸ್ಟಾಂಪ್ ಅಂಟಿಸಿ ಅಂಚೆ ಡಬ್ಬಿಯನ್ನು ಹುಡುಕಿ ಹೊರಟೆ. ಆಗೀಗ ನೋಡಿದ ಡಬ್ಬಿಗಳೆಲ್ಲಾ ಮಾಯವಾಗಿದ್ದವು. ಕೊನೆಗೂ ಒಂದು ಡಬ್ಬಿ ಕಾಣಿಸಿತು ಎಂದು ಓಡೋಡಿ ಹೋಗಿ ಅದರೊಳಗೆ ಹಾಕಲು ನೋಡಿದರೆ ಅದು ಒಳಗೇ ಹೋಗಲಿಲ್ಲ. ಪರಿಶೀಲಿಸದಾಗ ಅದರೊಳಗಿನ ಪತ್ರಗಳನ್ನು ಖಾಲಿ ಮಾಡದೆ ಅದೆಷ್ಟೋ ಸಮಯವಾದಂತಿತ್ತು. ಇದರಲ್ಲಿ ಹಾಕಿದರೆ ಚುನಾವಣೆ ಮುಗಿದರೂ ನನಗೆ ಗುರುತಿನ ಚೀಟಿ ಸಿಗದು ಎಂದು ಕೊರಿಯರ್ ಮಾಡಲು ಹೋದೆ. ಅಲ್ಲಿನ ವ್ಯಕ್ತಿ 'ಏನ್ ಸರ್, ಕೊರಿಯರ್‍ಗೆ ಸ್ಟಾಂಪ್ ಹಚ್ಚಿ ತಂದಿದೀರಾ.. ಅದೇನೂ ಬೇಡವಾಗಿತ್ತು.' ಎಂದು ಪೆದ್ದನನ್ನು ನೋಡುವಂತೆ ನನ್ನನ್ನು ನೋಡಿದ. 'ಅದು ನನಗೂ ಗೊತ್ತು ರೀ.., ಆದ್ರೆ ವಿಷಯ ಹೀಗಾಯ್ತು..' ಎಂದು ನಡೆದುದನ್ನು ತಿಳಿಸಿ, ನಾನು ಪೆದ್ದನಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದೆ. ಅಂತೂ ಕೊರಿಯರ್ ಮಾಡಿ ಮನೆಗೆ ಬಂದು ಉಸ್ಸಪ್ಪಾ ಎಂದು ಕುಳಿತೆ. 

ಅದನ್ನು ಕಳಿಸಿ ಅದಾಗಲೆ ಎರಡು ತಿಂಗಳು ಕಳೆಯಿತು. ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದೇನೆ... ಆದರೆ ಇನ್ನೂ ನನ್ನ ಗುರುತಿನ ಚೀಟಿ ಇದುವರೆಗೂ ಬಂದಿಲ್ಲ. ಚುನಾವಣೆ ಬೇರೆ ಹತ್ತಿರ ಬಂತು... ಅಷ್ಟರೊಳಗೆ ಬರುತ್ತೋ ಅಥವಾ ನನ್ನ ಮತ ಈ ಸಾರಿ ಹೊಗೆಯೋ ಏನೋ ಗೊತ್ತಿಲ್ಲ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ