ವಿಷಯಕ್ಕೆ ಹೋಗಿ

ಜನರ ಹೃದಯ ಸಿಂಹಾಸನವೇರದ ರಾಜ !


ನಿನ್ನೆ ತೀರಿಕೊಂಡ ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ‍್ ಅವರಿಗೆ ನನ್ನ ಶ್ರದ್ದಾಂಜಲಿಗಳಿವೆ. ಒಬ್ಬ ವ್ಯಕ್ತಿ ತೀರಿಕೊಂಡಾಗಲೂ ಅವರ ಬಗ್ಗೆ ಋಣಾತ್ಮಕವಾಗಿ ಯೋಚಿಸಬಹುದಾ ? ಬರೆಯಬಹುದಾ ? ಅಂತ ಕೇಳಬಹುದು. ಧನಾತ್ಮಕವಾಗಿ ಯೋಚಿಸಲು ಯಾವುದೇ ವಿಷಯವನ್ನು ಬಿಟ್ಟು ಹೋಗದ ವ್ಯಕ್ತಿಯ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುವುದು. ನಿಜ, ಎಲ್ಲಾ ವ್ಯಕ್ತಿಗಳಲ್ಲೂ ಅದರಲ್ಲೂ ಮೇಲ್ಮಟ್ಟದ ವ್ಯಕ್ತಿಗಳ ಜೀವನವನ್ನು ಅವಲೋಕಿಸಿದಾಗ ಅವರೆಷ್ಟೇ ಉತ್ತಮ ಜೀವನ ನಡೆಸಿದ್ದರೂ ಕೆಲವೊಂದು ತಪ್ಪುಗಳು ಇರಲೂ ಬಹುದು. ಆದರೆ ಅವುಗಳನ್ನು ಮರೆಸಿ ಹಾಕುವಷ್ಟು ಉತ್ತಮ ಸಾಧನೆ/ಕೆಲಸಗಳನ್ನು ಅವರು ಮಾಡಿದ್ದಾಗ ಮಾತ್ರ ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಲು ಸಾಧ್ಯ. 

ಆದರೆ ಶ್ರೀಕಂಠದತ್ತರು ಅಂತಹ ಯಾವ ಘನಾಂಧಾರಿ ಕೆಲಸ ಮಾಡಿದ್ದಾರೆ ? ಇಂದಿನ ಪತ್ರಿಕೆಗಳನ್ನ ಹೊರಳಿಸಿದಾಗ ಒಬ್ಬ ಹಳ್ಳಿಯ ಕ್ರಿಕೆಟಿಗ 'ಒಂದು ಬಾರಿ ಚೆನ್ನೈಗೆ ನಮ್ಮೊಟ್ಟಿಗೇ ಬಂದರು, ಚೆನ್ನಾಗಿ ಬೆರೆತು ಮಾತನಾಡಿದರು' ಅನ್ನುವ ಒಂದಂಶವನ್ನು ಬಿಟ್ಟರೆ ಬೇರ‍್ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಮಾಹಿತಿಯೂ ಸಿಗಲಿಲ್ಲ. ಅದರ ಬಗ್ಗೆ ಈ ಹಿಂದೆ ಸುದ್ದಿ ಬಂದುದರ ಬಗ್ಗೆಯೂ ನನಗೆ ತಿಳಿದಿಲ್ಲ. ಇರುವಷ್ಟು ದಿನವೂ ರಾಜವೈಭೋಗ ಅನುಭವಿಸುತ್ತಾ, ಅರಮನೆಯನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಕಿತ್ತಾಡುತ್ತಾ, ತಮಗೆ ಸಂಬಂಧವೇ ಇಲ್ಲದ ಕರ್ನಾಟಕ ಕ್ರಿಕೆಟ್‌ ಮಂಡಳಿಯ ಅಧಿಕಾರವನ್ನು ಅನುಭವಿಸುತ್ತಾ, ಅಲ್ಲಿ ಇಲ್ಲ ಸಲ್ಲದ ರಾಜಕೀಯ ತಂದು ಪ್ರತಿಭಾವಂತರನ್ನೂ ಕಡೆಗಣಿಸುತ್ತಾ, ತಂದೆ, ತಾತಂದಿರಿಂದ ಬಂದ ಪುಕ್ಕಟೆ ಆಸ್ತಿ ಹಾಗೂ ಗೌರವವನ್ನು ಅನುಭವಿಸುತ್ತಾ ಕಾಲ ಕಳೆದ 'ರಾಜ' ಈಗ ಇಲ್ಲವಾಗಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ನಷ್ಟವೂ ಆದಂತೆ ಕಾಣಿಸುವುದಿಲ್ಲ. 

ಅವರು ಮನಸ್ಸು ಮಾಡಿದ್ದರೆ ಬಿದ್ದು ಕೊಳೆಯುತ್ತಿರುವ ಕೋಟ್ಯಾಂತರ ಮೌಲ್ಯದ ಆಸ್ತಿಯಿಂದ ಮೈಸೂರು ಸುತ್ತಮುತ್ತಲಿನ ಹಳ್ಳಿಗರಿಗೆ, ಬಡ ಬಗ್ಗರಿಗೆ ಸಹಾಯ ಮಾಡಿ ಅವರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವ ಮೂಲಕ ನಿಜವಾದ 'ರಾಜ'ನಾಗಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡಲಿಲ್ಲ. ಅಂದು ವಿಶ್ವೇಶ್ವರಯ್ಯ ತೀರಿಕೊಂಡಾಗ ಅಥವಾ ಜಯಚಾಮರಾಜೇಂದ್ರ ಒಡೆಯರ‍್ ತೀರಿಕೊಂಡಾಗ ಮೈಸೂರು, ಮಂಡ್ಯದ ಜನತೆ ಕಣ್ಣೀರು ಹಾಕಿದ್ದರು. ಆದರೆ ಇಂದು ಅಂತಹ ಸಂದರ್ಭವೇ ಜನರಿಗೆ ಎದುರಾಗಲಿಲ್ಲ! ಇವರು ಬಹುವಾಗಿ ಪ್ರೀತಿಸಿದ (?!) ಹಾಗೂ ಕಾಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನಾದರೂ ಮಾದರಿಯನ್ನಾಗಿಸಿ ಉದ್ದಾರ ಮಾಡಬಹುದಿತ್ತು. ಅದನ್ನೂ ಮಾಡಲಿಲ್ಲ. ಹೀಗೆ ನಾಮ್‌ಕಾವಾಸ್ತೆಯಾಗಿ ರಾಜನ ಹೆಸರಲ್ಲಿ ಮೆರೆದ ವ್ಯಕ್ತಿ ನಿಧನರಾಗಿದ್ದಾರೆಯೇ ಹೊರತೂ ಅವರಲ್ಲಿ ಇನ್ಯಾವ ವಿಶೇಷವೂ ಕಂಡು ಬರುತ್ತಿಲ್ಲ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…