ವಿಷಯಕ್ಕೆ ಹೋಗಿ

ಸಲಿಂಗ ಕಾಮ ಶಿಕ್ಷೆ ಕೊಡುವಂತಾ ತಪ್ಪಾ ?'ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ!' ಅಂತ ಸುಪ್ರೀಂ ಕೋರ್ಟು ತೀರ್ಪು ಬರೆಯುವುದರೊಂದಿಗೆ  ಅಷ್ಟೊಂದು ಬಹಿರಂಗವಾಗಿರದಿದ್ದ ಸಲಿಂಗ ಕಾಮದ ವಿಷಯ ಬಯಲಿಗೆ ಬಿದ್ದಿದೆ. ಸಲಿಂಗ ಕಾಮವೆಂದರೆ ಹೆಸರೇ ಹೇಳುವಂತೆ ಗಂಡು ಗಂಡಿನೊಂದಿಗೆ ಹಾಗೂ ಹೆಣ್ಣು ಹೆಣ್ಣಿನೊಂದಿಗೆ ಸಲ್ಲಾಪ ನಡೆಸುವ ಮೂಲಕ ಕಾಮವನ್ನು ಹಂಚಿಕೊಳ್ಳೂವುದು, ಹಾಗೂ ತೀರಿಸಿಕೊಳ್ಳುವುದು. ಇದು ಕೆಲವರಿಗೆ ಅಸಹ್ಯ ಅನ್ನಿಸಿದರೂ, ತಪ್ಪು ಅನ್ನಿಸಿದರೂ, ಸುಪ್ರೀಂ ಕೋರ್ಟು 'ಒದ್ದು ಜೈಲಿಗೆ ಹಾಕಿ' ಅಂದರೂ ಇದನ್ನು ಮಾಡಿಕೊಳ್ಳುವವರನ್ನು ತಡೆಯಲಾದೀತೆ ? ಏಕೆಂದರೆ ದ್ವಿಲಿಂಗಿಗಳ ಸಲ್ಲಾಪದಂತೆಯೇ ಸಲಿಂಗಿಗಳ ಸಲ್ಲಾಪ ಸಹ ಬಹುತೇಕ ನಾಲ್ಕು ಗೋಡೆಗಳ ನಡುವೆಯೇ ನಡೆಯುವ ಕ್ರಿಯೆಯಲ್ಲವೆ ?

ಕಾರಣವೇನು ?
ಈ ಲೋಕದ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಮವನ್ನು ವ್ಯಕ್ತ ಪಡಿಸುವುದನ್ನು ಕಾಣುತ್ತೇವೆ. ಕಾಮದ ಪರಿಮಾಣ ಹೆಚ್ಚು ಕಡಿಮೆ ಇರಬಹುದೇ ಹೊರತೂ ಅದು ಇಲ್ಲವೇ ಇಲ್ಲ ಎಂದು ಹೇಳಲಾಗದು. ಜೀವಿಗಳ ವಂಶೋದ್ದಾರಕ್ಕೆ ಕಾಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾರಂಭದಲ್ಲಿ ಕಾಮವು ಪ್ರಕೃತಿದತ್ತವಾಗಿ ಶುರುವಾಗಿದ್ದೇ ವಂಶೋದ್ದಾರಕ್ಕಾಗಿ. ಮಾನವ ನಾಗರಿಕತೆಗೆ ಕಾಲಿಟ್ಟ ನಂತರ ಹೆಚ್ಚು ಹೆಚ್ಚು ಸುಖಗಳನ್ನು ಅರಸತೊಡಗಿದ. ಅವುಗಳಲ್ಲಿ ಸುಲಭಕ್ಕೆ ಸಿಕ್ಕಿದ್ದೇ ಕಾಮ. ಏಕೆಂದರೆ ಇದನ್ನು ಹುಡುಕಿಕೊಂಡು ಬೇರೆಲ್ಲೋ ಕಾಡು ಮೇಡು ಅಲೆಯುವ ಅಗತ್ಯ ಇರಲೇ ಇಲ್ಲವಲ್ಲ ?! ತನ್ನೊಳಗೇ ಹುಟ್ಟಿಕೊಳ್ಳುತ್ತಿದ್ದ ಈ ಕಾಮಕ್ಕೆ ಸೊಪ್ಪು ನೀರು ಹಾಕಿ ಬೆಳೆಸತೊಡಗಿದ. ಹೀಗೆ ಕಾಮವನ್ನು ಮನುಷ್ಯ ಹೆಚ್ಚು ಹೆಚ್ಚಾಗಿ ಬಳಸುತ್ತಾ ಬಂದ ಕಾರಣಕ್ಕೋ, ಅಥವಾ ನಾಗರಿಕತೆ ಬೆಳೆದಂತೆ ಕಾಮವನ್ನು ತಣಿಸಿಕೊಳ್ಳಲಿಕ್ಕೆ ಮೇಲಿಂದ ಮೇಲೆ ಕಟ್ಟುಪಾಡುಗಳನ್ನು ಹೇರುತ್ತಾ ಬಂದುದಕ್ಕೋ ಏನೋ, ಒಟ್ಟಿನಲ್ಲಿ ಮನುಷ್ಯನ ಕಾಮದ ಪ್ರಮಾಣ ಹೆಚ್ಚು ಹೆಚ್ಚಾಗುತ್ತಾ ಸಾಗಿತು. ಹೀಗೆ ಹೆಚ್ಚಾಗುತ್ತಾ ಸಾಗಿದ್ದು ಕೂಡಾ ಪ್ರಕೃತಿದತ್ತವೇ ಅಲ್ಲವೇ ? 

ಹೀಗೆ ಹೆಚ್ಚಾದ ಕಾಮವನ್ನು ತಣಿಸಿಕೊಳ್ಳಲು ಮನುಷ್ಯ ಬೇರೆ ಬೇರೆ ದಾರಿ ಹುಡುಕತೊಡಗಿದ. ಅವುಗಳಲ್ಲಿ ಮೊದಲನೆಯದು ವಿರುದ್ದ ಲಿಂಗಿಯ ಜೊತೆಗಿನ ಕಾಮ. ಆದರೆ ಅನೇಕ ಸಂದರ್ಭಗಳಲ್ಲಿ ವಿರುದ್ದ ಲಿಂಗಿ ಸಿಗದೇ ಹೋಗಬಹುದು. ಅದೂ ಸಹ ನಾಗರಿಕತೆ ಬೆಳೆದಂತೆ ಮದುವೆ ಮುಂತಾದ ಕಟ್ಟುಪಾಡುಗಳು ಬಂದ ನಂತರ ವಿರುದ್ದ ಲಿಂಗಿಗಳು ಸಿಗುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಅನ್ಯ ಮಾರ್ಗಗಳನ್ನು ಹುಡುಕತೊಡಗಿದ. ಈ ಹುಡುಕಾಟದ ಕಾರಣಕ್ಕೇ ಹುಟ್ಟಿಕೊಂಡಂತವುಗಳು.. ವೇಶ್ಯಾವಾಟಿಕೆ, ಅನೈತಿಕ ಸಂಬಂಧ ಹಾಗೂ ಹಸ್ತ ಮೈಥುನದಂತಹ 'ಸ್ವ-ಸಹಾಯ ಪದ್ದತಿ'ಗಳು! ಇವುಗಳಲ್ಲಿ ವೇಶ್ಯಾವಾಟಿಕೆ, ಅನೈತಿಕ ಸಂಬಂಧಗಳಿಂದ ಅಪಾಯವೇ ಹೆಚ್ಚು.  ಹಸ್ತ ಮೈಥುನದಿಂದ ಏನೇನೂ ಅಪಾಯವಿಲ್ಲವಾದರೂ ದ್ವಿಲಿಂಗಿಯೊಡನೆ ನಡೆಸುವ ಕಾಮಕ್ರೀಡೆಯಷ್ಟು ಸುಖ ನೀಡಲಾರದು. ಹಾಗಾಗಿ ಇವೆರಡನ್ನೂ ಹೊರತಾದ ಇನ್ನೊಂದು ದಾರಿಯನ್ನೂ ಮನುಷ್ಯ ಕಂಡು ಕೊಂಡ, ಅದುವೇ 'ಸಲಿಂಗ ಕಾಮ!' ಅಂದರೆ ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯೊಡನೆ ಬೆಳೆಸುವ ಸಲುಗೆ, ಸಲ್ಲಾಪ!

ಹೇಗೆ ಬೆಳೆದೀತು ?
ಇದು ಒಂದು ಅಚ್ಚರಿಯ ಘಟನೆ ಎನ್ನಬಹುದು. ಗಂಡು ಹೆಣ್ಣಿನ ನಡುವೆ ಪ್ರೀತಿ ಹುಟ್ಟುವಷ್ಟೇ ಸಲೀಸಾಗಿ ಗಂಡು ಗಂಡಿನ ನಡುವೆ, ಅಥವಾ ಹೆಣ್ಣು ಹೆಣ್ಣಿನ ನಡುವೆ ಪ್ರೀತಿ (ಸಲಿಂಗ ಕಾಮದ್ದು) ಹುಟ್ಟಲಾರದು. ಇದು ಕೆಲವರಲ್ಲಿ ಸ್ವಾಭಾವಿಕವಾಗಿಯೇ ಬಂದಿರುತ್ತದೆ ಎಂದು ತಿಳಿದಿದ್ದೇನೆ. ಅಂದರೆ ಕೆಲವು ನಿರ್ದಿಷ್ಟ ವ್ಯಕ್ತಿಗಳು ವಯಸ್ಸಿಗೆ ಬಂದಾಗ ವಿರುದ್ದ ಲಿಂಗಿಗಳೆಡೆಗೆ ಆಕರ್ಷಿತರಾಗುವ ಬದಲಾಗಿ ಸಲಿಂಗಿಗಳೆಡೆಗೇ ಆಕರ್ಷಿತರಾಗುತ್ತಾರೆ. ಆಗ ತಮಗೆ ಆತ್ಮೀಯರಾಗಿರುವ ಸಲಿಂಗಿ ವ್ಯಕ್ತಿಯ ಬಳಿ ಸ್ನೇಹ / ಸಲುಗೆ ಬೆಳೆಸುತ್ತಾರೆ. ಇದು ಕ್ರಮೇಣ ಸಲುಗೆ ಹೆಚ್ಚುತ್ತಾ ಹೋಗಿ ಕೊನೆಗೊಮ್ಮೆ ಸಲಿಂಗ ಸಲ್ಲಾಪದ ವರೆಗೂ ಸಾಗುತ್ತದೆ. ಎದುರಿನ ವ್ಯಕ್ತಿ ಇದರ ವಾಸನೆಯನ್ನು ಹಿಡಿದು ದೂರ ಸರಿದರೆ ಮೊದಲಿನ ವ್ಯಕ್ತಿ ಮತ್ತೊಬ್ಬ ಸಲಿಂಗಿ ಸ್ನೇಹಿತನೊಡನೆ ಹೆಚ್ಚು ಸಲುಗೆ ಬೆಳೆಸಲು ತೊಡಗುತ್ತಾನೆ. 

ಈ ಸಲಿಂಗ ಕಾಮ ಕೇವಲ ಹುಡುಗರಿಗಷ್ಟೇ ಅಥವಾ ಹುಡುಗಿಯರಿಗಷ್ಟೇ ಎನ್ನಲಾಗದು. ಇಬ್ಬರಲ್ಲೂ ಕಂಡು ಬರುತ್ತದೆ. ಆದರೆ ಹುಡುಗರಾಗಲಿ, ಹುಡುಗಿಯರಾಗಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳಲ್ಲಿ ಮಾತ್ರ ಇದು ಹೆಚ್ಚಾಗಿ ಕಂಡು ಬಂದು ಅವರು ವಿರುದ್ದ ಲಿಂಗಿಯೆಡೆಗೆ ಆಕರ್ಷಿತರಾಗುವ ಬದಲು ಸಲಿಂಗಿಗಳೆಡೆಗೇ ಆಕಷಿತರಾಗುತ್ತಾರೆ. ಇದು ಒಂದು ಮನೋರೋಗ ಎಂದು ಸಹ ಕೆಲವರು ಹೇಳುತ್ತಾರೆ. ಇದು ಮನೋರೋಗ ಆಗಿದ್ದರೂ ಸಹ ಇದಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕೇ ಹೊರತೂ ಶಿಕ್ಷೆ ಕೊಡುವುದಲ್ಲ. ಹಾಗೆಯೆ ಶಿಖಂಡಿಗಳಲ್ಲಿ ಕೂಡಾ ಇದು ಹೆಚ್ಚಾಗಿರುತ್ತದೆ. ಮುಖ್ಯವಾಗಿ ಈಗ ಬಂದಿರುವ ಸುಪ್ರೀಂ ಕೋರ್ಟಿನ ಆದೇಶ ಹೊಡೆತ ನೀಡುವುದೇ ಈ ಗುಂಪಿನವರಿಗೆ.

ನಿಷೇಧಕ್ಕೆ ಕಾರಣವೇನು ?
ಸುಪ್ರೀಂ ಕೋರ್ಟು ನೀಡಿರುವ ಕಾರಣ 'ಸಲಿಂಗ ಕಾಮವೆಂಬುದು ಅಸ್ವಾಭವಿಕ ಕ್ರಿಯೆ' ಎಂಬುದಾಗಿದೆ. ಇದಕ್ಕೂ ಮೊದಲು ದೆಹಲಿ ಹೈಕೋರ್ಟ್‌ 'ಸಲಿಂಗ ಕಾಮ ಸ್ವಾಭಾವಿಕ ಕ್ರಿಯೆ, ಅದಕ್ಕೆ ನಿಷೇಧ ಬೇಡ' ಎಂದೇ ಹೇಳಿತ್ತು. ಈಗ ಸುಪ್ರೀಂ ಕೋರ್ಟ್‌‌ನ ಆದೇಶವನ್ನು ಕೇಳಿ ದಡಕ್ಕನೆ ಎದ್ದು ಕುಳಿತ ಡೋಂಗಿ ಸಂಪ್ರದಾಯವಾದಿಗಳು 'ಹೌದು ಹೌದು, ಅದು ಹಿಂದೂ ಧರ್ಮದ ವಿರುದ್ದ, ದೇಶಕ್ಕೆ ಅವಮಾನ' ಎಂಬ ಬೊಗಳೆ ಬಿಡಲು ಶುರು ಮಾಡಿದ್ದಾರೆ. 

ಆದರೆ ಮನುಷ್ಯ ಎಂದು ಕಾಮವನ್ನು ವಂಶೋದ್ದಾರಕ್ಕೆ ಹೊರತಾದ ಕೇವಲ ಸುಖಕ್ಕಾಗಿಯೂ ಬಳಸತೊಡಗಿದನೋ, ಪತಿ-ಪತ್ನಿಯರಾದರೂ ಸಹ ವಂಶೋದ್ದಾರವಲ್ಲದ ಕಾಮಕ್ರೀಡೆಯಲ್ಲಿ ಎಂದು ತೊಡಗಿದರೋ, ಅಂದೇ ಈಗ ಸುಪ್ರೀಂ ಕೋರ್ಟು ಹಾಗೂ ಡೋಂಗಿ ಸಂಪ್ರದಾಯವಾದಿಗಳು ಹೇಳುತ್ತಿರುವ 'ಅಸ್ವಾಭಾವಿಕ ಕ್ರಿಯೆ' ಶುರುವಾಗಿ ಹೋಗಿತ್ತು. ಆದರೆ ಅದನ್ನೀಗ ಕೇವಲ 'ಸಲಿಂಗಿ'ಗಳ ಮೇಲೆ ಆರೋಪಿಸಲಾಗುತ್ತಿದೆ! ಅಂದರೆ ಸ್ವಾಭಾವಿಕವಾಗಿ ಕಾಮ ಇದ್ದುದು ವಂಶೋದ್ದಾರ ಮಾಡಲಿಕ್ಕಾಗಿಯೇ ಹೊರತೂ ದಿನಾ ಪತ್ನಿಯೊಂದಿಗೆ ಕೂಡಿ ಸುಖ ಪಡಲಿಕ್ಕೆ ಅಲ್ಲವಲ್ಲ ? ಅಂದರೆ ಮನುಷ್ಯ ಯಾವಾಗ ಕಾಮವನ್ನು ಸುಖಕ್ಕಾಗಿ ಬಳಸ ತೊಡಗಿದನೋ ಆಗಲೇ ಇವರು ಹೇಳುವ 'ಸ್ವಾಭಾವಿಕತೆ' ನೆಗೆದು ಬಿದ್ದಿತ್ತು!

ಒಂದು ಕ್ಷಣ ಯೋಚಿಸಿ ನೋಡಿ, ಸಲಿಂಗ ಕಾಮ ಅಸ್ವಾಭಾವಿಕ, ಅದು ಪ್ರಕೃತಿಗೆ ವಿರುದ್ಧ ಅನ್ನೋದಾದರೆ... ಮಿತಿ ಮೀರಿದ ಜನಸಂಖ್ಯೆ, ಮಕ್ಕಳೇ ಆಗದಂತೆ ತಡೆಯುವ ಕಾಂಡೋಮ್ / ಶಸ್ತ್ರಚಿಕಿತ್ಸೆ, ಮಕ್ಕಳು ಬೇಡವೆಂದರೂ ನಡೆಸುವ ಸಂಭೋಗ, ಇವೆಲ್ಲಾ ಅಸ್ವಾಭಾವಿಕ ಅಲ್ಲವೆ ? ಜೊತೆಗೆ ಕಾಂಕ್ರೀಟು ಕಟ್ಟಡ, ಮೆತ್ತನೆಯ ಹಾಸಿಗೆ, ವಿಧವಿಧ ಭಕ್ಷಗಳು, ಭೂಮಿಯ ಬಗೆತ, ಬಾನಿನ ನೆಗೆತ ಇವೆಲ್ಲ ಸ್ವಾಭಾವಿಕ ಕ್ರಿಯೆಗಳೇ ? ಇಷ್ಟಕ್ಕೂ ಸಲಿಂಗ ಕಾಮದಿಂದ ಆಗುವ ತೊಂದರೆ ಆದರೂ ಏನು ? ಅದನ್ನು ನಡೆಸುವವರಿಗಾಗಲಿ, ಇತರರಿಗಾಗಲಿ ಯಾವ ತೊಂದರೆಯೂ ಇಲ್ಲ. ಮೇಲಾಗಿ ಅದು ಹೊರಗಿನವರಿಗೆ ತಿಳಿಯುವುದೇ ಅಪರೂಪ. ಅದನ್ನು ಒಬ್ಬರ ಮೇಲೊಬ್ಬರು ಒತ್ತಾಯಪೂರ್ವಕವಾಗಿ ನಡೆಸಿದರೆ ಅದು ತಪ್ಪು. ಅದನ್ನೂ ಸಹ ಅತ್ಯಾಚಾರ ಎಂದೇ ಈಗಾಗಲೇ ಪರಿಗಣಿಸಲಾಗುತ್ತಿದೆ. ಅಂದ ಮೇಲೆ ಪರಸ್ಪರ ಒಪ್ಪಿಕೊಂಡು ಇಬ್ಬರು ಹುಡುಗರು ಅಥವಾ ಹುಡುಗಿಯರು ಸಂತೋಷವಾಗಿ ಸುಖ ಪಟ್ಟರೆ ಅದಕ್ಯಾಕೆ ಕಲ್ಲು ಹಾಕುತ್ತಾರೆ ?

ಇದೇ ಸಂಪ್ರದಾಯವಾದಿಗಳು ಕುಕ್ಕೆಯ ಎಂಜಲೆಲೆ ಉರುಳಾಟವನ್ನು ಮತ್ತದೆ ಸಂಪ್ರದಾಯದ ಹೆಸರಲ್ಲಿ ಪೋಷಿಸುತ್ತಿದ್ದಾರೆ. 'ಮಡೆಸ್ನಾನ ಅವರ ಇಷ್ಟದಿಂದ ಮಾಡೋದು' ಎಂದು ವಾದಿಸುತ್ತಾರೆ. ಬಹಿರಂಗವಾಗಿ ಕಂಡವರ ಎಂಜಲು ಮೇಲೆ ನಮ್ಮವರು ಉರುಳಾಡುವುದು ಇವರ ಹಿಂದೂ ಧರ್ಮಕ್ಕೆ, ಭವ್ಯ ಭಾರತಕ್ಕೆ ಅವಮಾನಕರವಾಗಿ ಕಾಣಿಸುವುದೇ ಇಲ್ಲ! ಆದರೆ ನಾಲ್ಕು ಗೋಡೆಗಳ ಮಧ್ಯೆ ಇಬ್ಬರು ಪರಸ್ಪರ ಪ್ರೀತಿಯಿಂದ ಬೆತ್ತಲಾದರೆ ಇವರ ಧರ್ಮ ಎಕ್ಕುಟ್ಟಿ ಹೋಗುತ್ತದೆ !?

ಗಂಡು ಹೆಣ್ಣಿನ ನಡುವಿನ ಅನುಪಾತ ಹಾದಿ ತಪ್ಪುತ್ತಿದೆ. ಅತ್ಯಾಚಾರಗಳು ಮಿತಿ ಮೀರುತ್ತಿವೆ. ಆದರೆ ಸಂಪ್ರದಾಯವಾದಿಗಳು ಜನರು ಕಾಮವನ್ನು ತಣಿಸಿಕೊಳ್ಳುವ ದಾರಿಗಳನ್ನು ಒಂದೊಂದಾಗಿ ಮುಚ್ಚುತ್ತಾ ಅನೈತಿಕತೆ, ವ್ಯಭಿಚಾರ, ಅತ್ಯಾಚಾರಗಳು ಹೆಚ್ಚಲು ದಾರಿ ಮಾಡಿಕೊಡುತ್ತಿದ್ದಾರೆ. ಅಂದ ಹಾಗೆ ಸಲಿಂಗ ಕಾಮ ಯಾವಾಗ ಶುರುವಾಯ್ತು ಅನ್ನೋದು ತಿಳಿದಿಲ್ಲವಾದರೂ ಅದು ಬಹಳಷ್ಟು ಹಿಂದೆಯೇ ಭಾರತದಲ್ಲಿ ಶುರುವಾಗಿತ್ತು ಅನ್ನುವುದಕ್ಕೆ ಈ ಲೇಖನದೊಂದಿಗೆ ನಿಡಿರುವ ಹಳೆಯ ಶಿಲ್ಪದ ಚಿತ್ರ ಹಾಗೂ ಇತರೆ ಕೆಲವು ಚಿತ್ರಕಲೆಗಳೇ ಸಾಕ್ಷಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…