ವಿಷಯಕ್ಕೆ ಹೋಗಿ

ಪೊಲೀಸರಿಗೂ ಬೇಕಿದೆ ಆಧುನಿಕ ಆಯುಧ ಮತ್ತು ರಕ್ಷಾ ಕವಚ


ಮೋದಿ ಬರುತ್ತಾನೆಂದರೆ ಕನಿಷ್ಟ ಸಾವಿರ ಜನ ಪೊಲೀಸರು ಆತನ ರಕ್ಷಣೆಗೆ ನಿಲ್ಲಬೇಕು. ಯಕಶ್ಚಿತ್ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಷ್ಟೊಂದು ರಕ್ಷಣೆ, ಬೊಕ್ಕಸಕ್ಕೆ ಹೊಡೆತ. ಇನ್ನು ಏನೂ ಅಲ್ಲದ ಕೇವಲ ಸಂಸದೆ ಸೋನಿಯಾ ರಕ್ಷಣೆಗಾಗಿ ಖರ್ಚು ಮಾಡುತ್ತಿರುವುದೆಷ್ಟು ? ಸಂಸದ ರಾಹುಲನ ರಕ್ಷಣೆಗೆ ? ಮಾಜಿ ಮಂತ್ರಿ ಅದ್ವಾನಿಗಾಗಿ ? ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಇವರಿಗೆ ಇಷ್ಟೆಲ್ಲಾ ರಕ್ಷಣೆ ? ಇರಲಿ ವಿಷಯಕ್ಕೆ ಬರೋಣ..

ಮೊನ್ನೆ ಮೊನ್ನೆ ಕಲಬುರ್ಗಿಯಲ್ಲಿ ರೌಡಿಯೊಬ್ಬನನ್ನು ಹಿಡಿಯಲು ಹೋದ ದಕ್ಷ ಪೊಲೀಸ್ ಅಧಿಕಾರಿಗಳು ರೌಡಿಯ ಗುಂಡಿಗೇ ಎದೆಕೊಡಬೇಕಾಯ್ತು. ಪೊಲೀಸರ ಗುಂಡಿಗೆ ರೌಡಿಯೇನೋ ಸತ್ತನಾದರೂ ನಮ್ಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನೂ ಕಳೆದುಕೊಳ್ಳಬೇಕಾಯ್ತು. ಮತ್ತೊಬ್ಬ ಕಿರಿಯ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾದರು. ಆದರೆ ಒಮ್ಮೆ ಯೋಚಿಸಿ ನೋಡಿ, ನಿಜವಾಗಿಯೂ ಪ್ರಾಣದ ಹಂಗು ತೊರೆದು ನಮಗಾಗಿ ಹೋರಾಡುವವರು ಇಂತಹ ಅಧಿಕಾರಿಗಳೂ, ಸೈನಿಕರುಗಳೇ ಅಲ್ಲವೇ ? ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕಿ, ಸಾರ್ವಜನಿಕರ ನೆಮ್ಮದಿ ಕೆಡಿಸಿ, ಅದರಿಂದ ರಾಜಕೀಯ ಲಾಭ ಮಾಡಿಕೊಂಡು ಓಡಾಡುವ ಕದೀಮರಿಗೆಲ್ಲಾ ಸಾವಿರಾರು ಪೊಲೀಸರ, ನೂರಾರು ಸೈನಿಕರ ರಕ್ಷಣೆ, ಆದರೆ ಜೀವದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳಿಗೆ ಅಂತ ಕೊಡುವುದು ಒಂದು ಪಡಪೋಸಿ ಪಿಸ್ತೂಲು ಪೇದೆಗಳಿಗೆ ಓಬಿರಾಯನ ಕಾಲದ ಹಂದಿ ಹೊಡೆಯಲೂ ಯೋಗ್ಯವಲ್ಲದ ಬಂದೂಕು. ಇದಿಷ್ಟು ಸಾಕೆ ?

ಬೆಂಗಳೂರಿನ ಕೆಲವೇ ಪ್ರಮುಖ ಪೊಲೀಸ್ ಅಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ಪಡೆಯ ಪೊಳಿಸರನ್ನು ಹೊರತು ಪಡಿಸಿ ಉಳಿದವರಿಗ್ಯಾರಿಗೂ ಬುಲೆಟ್‌ಪ್ರೋಫ್ ನೀಡಿಲ್ಲ. ಎಕೆ-೪೭ ನಂತಹ ಆಧುನಿಕ ಬಂದೂಕುಗಳನ್ನ ನಮ್ಮ ಯಾವ ಅಧಿಕಾರಿಗಳಿಗೂ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಒಂದಿಷ್ಟು ಉತ್ತಮ ಅನ್ನುವಂತಹ ರಿವಾಲ್ವಾರ‍್ ಬಿಟ್ಟರೆ ರೌಡಿಗಳನ್ನು ಎದುರುಗೊಳ್ಳುವ ಎಸ್‌.ಐ. ದರ್ಜೆಯೆ ಅಧಿಕಾರಿಗಳಿಗೆ ಬೇರೆ ರಕ್ಷಣೆಯೇ ಇಲ್ಲ. ಆದರೂ ಅವರು ರೌಡಿಗಳ ವಿರುದ್ಧ, ಸಮಾಜ ಕಂಟಕರ ವಿರುದ್ಧ ಹೋರಾಡಲೇ ಬೇಕು. ಇಷ್ಟಾದರೂ ಪೊಲೀಸರು ದಂಗೆಯೇಳುವುದಿಲ್ಲ. ಸರ್ಕಾರ ದಯಪಾಲಿಸಿದಾಗ ಕೊಟ್ಟದ್ದನ್ನು ಪಡೆದು ಕೆಲಸ ನಿರ್ವಹಿಸಬೇಕು. ಅದೇ ರಾಜಕಾರಣಿಗಳಿಗೆ ಏನಾದರೂ ಬೇಕಾಗಲಿ ? ಒಂದೇ ದಿನದಲ್ಲಿ ಮಸೂದೆಯನ್ನು ಮಂಡಿಸಿ ಜಾರಿಗೆ ತಂದು ಬೀಗುತ್ತಾರೆ. ಆದರೆ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಇದುವರೆಗೂ ಯಾವ ಮುಖ್ಯಮಂತ್ರಿಯೂ ಗಂಭೀರವಾಗಿ ಚಿಂತನೆ ನಡೆಸಿಯೇ ಇಲ್ಲ. 

ಪ್ರಾರಂಭದಲ್ಲಿ ಏನೋ ಆಶಾಭಾವನೆ ಮೂಡಿಸಿದ ಸಿದ್ದರಾಮಯ್ಯ ಈಗಾಗಲೇ ಹತ್ತರೊಳಗೆ ಹನ್ನೊಂದನೆಯವರಾಗಿ ಇತಿಹಾಸದ ಬುಟ್ಟಿಯನ್ನು ಸೇರಿಯಾಯ್ತು. ಇನ್ನು ಇವರಿಂದ ರಾಜ್ಯಕ್ಕೆ ಏನೋ ಉತ್ತಮ ಕೆಲಸ ಆಗಿ ಹೋಗುತ್ತದೆ ಎಂದು ನಿರೀಕ್ಷಿಸುವುದರಲ್ಲಿ ಪ್ರಯೋಜನವಿಲ್ಲ. ಆದರೆ ಬಂಡಿ ಅವರ ನಿಧನದಿಂದಲಾದರೂ ಮುಖ್ಯಮಂತ್ರಿಯ ಗಮನ ಇತ್ತ ಹರಿಯಲಿ. ಪ್ರತಿ ಠಾಣೆಗೂ ಕನಿಷ್ಟ ಒಂದಾದರೂ ಅತ್ಯಾಧುನಿಕ ಬಂದೂಕು ಹಾಗೂ ನಾಲ್ಕಾದರೂ ಬುಲೆಟ್‌ಪ್ರೂಫ್ ಜಾಕೆಟ್ ಒದಗಿಸಲಿ. ನಮ್ಮನ್ನು ನೆಮ್ಮದಿಯಾಗಿ ನಿದ್ರಿಸಲು ಪಣ ತೊಟ್ಟಿರುವ ಪೊಲೀಸರ ಪ್ರಾಣಕ್ಕಾದರೂ ನಾವು ಬೆಲೆ ಕೊಡೋಣ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…