ವಿಷಯಕ್ಕೆ ಹೋಗಿ

ಓ ನಿರ್ಭಾವುಕ ಕಥೆಗಾರ...ಇದು ಪ್ರೇಮ ಪತ್ರವಲ್ಲ. ಪ್ರೇಮದ ಆಲಾಪನೆ, ನಿವೇದನೆಗಳೂ ಅಲ್ಲ. ಇಲ್ಲಿರುವುದು ನನ್ನ ವೇದನೆ ಮತ್ರ. ನೀನೇಕೆ ಹಾಗೆ ಮತು ಕೊಟ್ಟು ಮೋಸ ಮಡಿದೆ? ನಿನ್ನ ಮೋಸಕ್ಕೊಂದು ಸಾಮಜಿಕ ನ್ಯಾಯದ ಪ್ಯಾಲೆ ಸಾಕ್ಷಿಯನ್ನೊದಗಿಸುತ್ತೀಯ. ನನಗೆ ಮೂವತ್ತಾರು, ನಿನಗೆ ಇಪ್ಪತ್ತಾರು. ಈ ಹತ್ತು ವರ್ಷಗಳ ಅಂತರವೇ ನ್ನ ನನ್ನ ನಡುವಿನ ಮಹದಂತರವಾಗಿ ನಿರೂಪಿಸಿ ಪ್ರಶ್ನಿಸಿದವರ ಬಾಯಿ ಮುಚ್ಚಿಸಿಬಿಡುತ್ತೀಯ. ಆದರೆ ವಯಸ್ಸಿನಲ್ಲಿ ಅಂತರವಿತ್ತೇ ಹೊರತೂ ಮನಸ್ಸಿನಲ್ಲಿ ಅಲ್ಲವಲ್ಲ? ನಮ್ಮೆರಡು ಮನಸ್ಸುಗಳೂ ಸಂಭವಗಳ ಪ್ರೀತಿಗೆ ಸಿಲುಕಿ ಆಕರ್ಷಣೆಯ ಸಂಭಾವನೀಯತೆಯಲ್ಲಿ ಒಂದಾಗಿ ಹೋಗಿರಲಿಲ್ಲವೇ?

ದೂರದ ಊರಲ್ಲಿದ್ದರೂ ನಾವು ಪತ್ರಗಳಲ್ಲಿ ಪ್ರೇಮಲೋಕ ಸೃಷ್ಟಿಸಿದೆವು. ಅಕ್ಷರಗಳಲ್ಲಿ ಅರಮನೆ ಕಟ್ಟಿದೆವು. ಭಾವನೆಗಳ ಮಹಲನ್ನು ಆಕಾಶದೆತ್ತರಕ್ಕೆ ಹಬ್ಬಿಸಿದೆವು. ಕೈಗೂಡದ ಪ್ರೇಮಕ್ಕಾಗಿ ಹಪಹಪಿಸಿದೆವು. ನೀನಿಂದು ದೂರಾಗಿ ಹೋಗುವೆಂಂದಾದರೆ ಈ ಮೋಸಕ್ಕೆ ನಾನ್ಯಾರ ಬಳಿ ಮೊರೆಯಿಡಲಿ? ಈ ನನ್ನ ಚೀತ್ಕಾರವನ್ನಾಲಿಸಿ ತೀರ್ಪು ನೀಡುವ ನ್ಯಾಯದಿsಶ ಯರು? ಒಳ್ಳೆಯವನೆಂದು, ಶುದ್ಧ ಮನಸ್ಸಿನವನೆಂದು, ಮನುಷ್ಯನೆಂದು, ಕೊನೆಗೆ ದೇವರೆಂದೇ ನಿನ್ನನ್ನು ಸ್ವೀಕರಿಸಿದೆ. ನಂಬಿದ ದೇವರೇ ಮುಳ್ಳು ದಾರಿಗೆ ದೂಡಿದರೆ ನಾನ್ಯಾವ ನ್ಯಾಯದಿsಶನಲ್ಲಿ ಮೊರೆಯಿಡಲಿ ಪ್ರಭುವೇ? ಹೌದು, ಈ ನನ್ನ ರೋಧನಕ್ಕೆ ಕಿವಿಗೊಟ್ಟು ನನ್ನ ವೇದನೆಯ ದೂರಿಗೆ ತೀರ್ಪು ನೀಡುವ ನ್ಯಾಯದಿsಶ ನಿನ್ನ ಅಂತರಾತ್ಮವೊಂದೇ. ನೀನೊಮ್ಮೆ ಅದರ ಧ್ವನಿ ಕೇಳು. ಅದನ್ನೊಮ್ಮೆ ಗಮನಿಸಿ ನೋಡು. ಅದೇನು ನುಡಿಯುತ್ತದೆಂದು ಆಲಿಸು. ಅದು ನನ್ನ ಪ್ರೇಮ ಪವಿತ್ರವಾದುದೆಂದು ಹೇಳಿದ್ದೇ ಆದರೆ ಬಂದೆನ್ನ ಸಂತೈಸು.

ನನ್ನನ್ನು ತಿರಸ್ಕರಿಸಿ ಹೋಗಿಬಿಡುವಷ್ಟು ಕ್ರೂರತನ ನಿನಗೆಲ್ಲಿಂದ ಬಂತು? ಬೇರೆ ಯರಾದರೂ ನನಗಿಂತಲೂ ಸುಂದರಳಾದ, ನಿನಗಿಂತಲೂ ಚಿಕ್ಕವಳಾದ, ನನಗಿಂತಲೂ ಶ್ರೀಮಂತಳಾದ, ನಿನಗಿಂತಲೂ ಮುಗ್ಧಳಾದ ಚೆಲುವೆ ಸಿಕ್ಕಿ ಹೋದಳೆ? ಅದೆಷ್ಟು ಬೇಗ ನಿನ್ನ ಪರಿಶುದ್ಧ ಪ್ರೇಮದ ಮನಸ್ಸಿಗೆ ಇನ್ನೊಂದು ಹೊಳೆವ ಬಣ್ಣ ಬಳಿದುಕೊಂಡುಬಿಟ್ಟೆ? ನಿನ್ನ ಹತ್ತಾರು ಕಥೆಗಳೊಳಗೆ ನನಗೊಂದು ದುರಂತ ನಾಯಕಿಯ ಪಾತ್ರ ಒದಗಿಸಲು ನಿನಗಾರು ನೀಡಿದ್ದು ಹಕ್ಕು? ನಿನ್ನದೇ ಕಥೆಗಳ ಕ್ರೂರ ಖಳನಾಯಕನ ಪರಕಾಯ ಪ್ರವೇಶ ನಿನ್ನೊಳಗೇ ಆದುದು ನನ್ನ ದುರ್ವಿದಿs ಇರಬಹುದೇ?

ದೂರವಾಣಿಯಲ್ಲಿ ನಾವು ಮತನಾಡಿದೆವು, ಪತ್ರ ಬರೆದುಕೊಂಡೆವು. ನೋವು ಹಂಚಿಕೊಂಡೆವು. ಹೃದಯ ಬೆಸೆದುಕೊಂಡೆವು. ಆದರೆ ಎಂದೂ ಮದುವೆಯ ಪ್ರಸ್ತಾಪವಾಗಲೇ ಇಲ್ಲ. ನೀನೆನಗೆ ಅಂತಹುದ್ಯಾವ ವಾಗ್ದಾನವನ್ನೂ ನೀಡಲೇ ಇಲ್ಲ. ನಾನು ಕೇಳಲೂ ಇಲ್ಲ. ವಾಗ್ದಾನ ನೀನು ನೀಡಿದ್ದು ಮತಿನ ಮೂಲಕವಲ್ಲ. ನನಗೆ ಬರೆದು ಅಂಚೆಗೆ ಹಾಕಿದ ನೂರು ಪತ್ರಗಳ ಮೇಲಿನ ಲಕ್ಷಾಂತರ ಅಕ್ಷರಗಳ ನಡುವೆಯಲ್ಲೋ ನಿನ್ನ ವಾಗ್ದಾನ ಹೂತು ಹೋಗಲೂ ಇಲ್ಲ. ನೀನು ನನಗೊಂದು ವಾಗ್ದಾನ ನೀಡಿದ್ದೆಂಂದಾದರೆ ಅದು ನಿನ್ನ ಮನಸ್ಸಿನ ಮೂಲಕ. ಆ ನಿನ್ನ ಅಂತರ್ಮನಸ್ಸಿನ ಮೂಲೆಯನ್ನೊಮ್ಮೆ ಕೆದಕಿ ನೋಡು. ಅಲ್ಲಿ ವಿವೇಚನೆಯ ಬೆಳಕು ಹರಿಸಿ ನೋಡು. ಆಗ ಗೋಚರಿಸುತ್ತದೆ, ಮನದ ಏಳು ಸುತ್ತಿನ ಕೋಟೆಂಳಗೆ ನೀನು ನೀಡಿದ ವಾಗ್ದಾನ ಯವ ಸುತ್ತಿನಲ್ಲಿ ಉಳಿದು ಹೋಯಿತೆಂದು!

ಒಂದು ಸಮಯದಲ್ಲಿ ನೀನು ಸಂಕಷ್ಟದಲ್ಲಿದ್ದಾಗ, ನನ್ನ ಅನುಕಂಪ, ನೆರವು, ಸಹಕಾರ, ಸಹಾನುಭೂತಿಗಳೆಲ್ಲಾ ನಿನಗೆ ಕೊಂಚ ಕೊಂಚವಾದರೂ ಬೇಕಾದಾಗ ನಿನ್ನದೊಂದು ಕಿರು ಬೇಡಿಕೆಗೇ ಮಣಿದು ನಾನೋಡಿ ಬಂದೆ. ಜೊತೆಗೆ ಸಹಾಯದ ಮೂಟೆ ತಂದೆ. ಆದರೆ ಬದಲಿಗೆ ನೀ ತಂದ ಅಪರೂಪದ ಕಾಣಿಕೆ, ಅತಿ ಅಪರೂಪದ ಕೃತಜ್ಞತೆ ಎಂತಹುದೆಂದರೆ ನನ್ನ ಹೃದಯಕ್ಕೆ ಹೊಡೆದ ವಿದಾಯದ, ವಿರಹದ ಮೊಳೆ. ಆ ಮೊಳೆಯನ್ನೆಂದೂ ಕೀಳಲು ಸಾಧ್ಯವಿಲ್ಲ. ಅದು ಅಲ್ಲಿ ಹಾಗೆಂ ಉಳಿಯುವುದೂ ಇಲ್ಲ. ಏಕೆಂದರೆ ನೀನು ಬಡಿದಿರುವುದು ಗಂಡಿನ ಅಹಂಮಿಕೆಂಂಬ ನಂಜು ಸವರಿದ ಕಬ್ಬಿಣದ ಮೊಳೆ. ಅದಲ್ಲಿ ತುಕ್ಕು ಹಿಡಿಯುತ್ತದೆ. ನನ್ನ ನಿತ್ಯದ ಕೊರಗಿನ ರಕ್ತಕ್ಕೆ ನಂಜಾಗಿ ಕರಗುತ್ತದೆ. ನೂರು ವೇದನೆಗಳ ವಿಹ್ವಲ ನೋವಿಗೆ ರುದ್ರವೀಣೆ ಧ್ವನಿಯಗಿ ಚುಚ್ಚುತ್ತದೆ.

ಆದರೂ ಸಹಿಸುತ್ತೇನೆ ಗೆಳೆಯ. ಏಕೆಂದರೆ ನಾನೊಂದು ಹೆಣ್ಣು. ನೀನೊಬ್ಬ ಕಥೆಗಾರ. ನೀನು ಮನಸ್ಸು ಮಡಿದರೆ ನನ್ನದೇ ಕಾದಂಬರಿ ಬರೆದು, ಅಲ್ಲಿ ನನ್ನನ್ನೊಂದು ಹುಚ್ಚಿಯನ್ನಾಗಿಸಿ ಕಟ್ಟ ಕಡೆಯ ಅಧ್ಯಾಯದಲ್ಲಿ ವಧಾಸ್ಥಾನದಲ್ಲಿ ನಿಲ್ಲಿಸಿ, ಕ್ರೂರವಾಗಿ ಕಲ್ಲು ಹೊಡೆದು ಸಾಯಿಸಿ ಬಿಡುವ ಬರವಣಿಗೆಯ ಯಮರಾಜ ನೀನು. ಲೋಕ ನಿನ್ನನ್ನು ಗೌರವಿಸುತ್ತದೆ. ನಿನ್ನ ನೂರು ಸುಳ್ಳುಗಳಿಗೆ ಕಂತೆ ಪೇರಿಸಿ ನಂಬಿ ನಿಡುಸೊಯ್ದು ನಗುತ್ತದೆ. ಆದರೆ ನನ್ನ ಪಾಡು ಹಾಗಲ್ಲ. ಇಲ್ಲಿ ನನ್ನ ಪ್ರತಿ ಹೆಜ್ಜೆಗೂ ಸಮಜಕ್ಕೊಂದು ನಂಬುಗೆಯ ಸಾಕ್ಷ  ನೀಡಬೇಕು. ಪ್ರತಿ ಕ್ಷಣಕ್ಕೂ ಸಂಶಯದ ಜುಲ್ಮಾನೆ ಕಟ್ಟಬೇಕು. ಭವಿಶ್ಯತ್ತಿನ ಭಯದಲ್ಲಿ ಭೂತಕಾಲದ ಸಂಭವಗಳಿಗೆ ತೆರೆ ಎಳೆದು ವರ್ತಮನದಲ್ಲಿ ವೇದನೆ ಪಡಬೇಕು. ಕಣ್ಣಿಂದ ಹರಿವ ಬಿಸಿ ಕಂಬನಿಗಳನ್ನು ಕೆನ್ನೆಗಿಳಿಯಗೊಡದೇ ಚೂರಾದ ಹೃದಯ ಬಿರುಕಿನಲ್ಲಿ ಇಂಗಿಸಲು ಬಿಡಬೇಕು. ಏಕೆಂದರೆ ನಾನೊಂದು ಹೆಣ್ಣು. ನೀನೊಬ್ಬ ಕಥೆಗಾರ.

ನನ್ನ ಪ್ರೇಮದ ಪಾವಿತ್ರ್ಯಕ್ಕೆ ಧಕ್ಕೆ ತಂದು ಬೆನ್ನು ತಿರುಗಿಸಿ ಹೊರಟುಹೋದ ನಿನ್ನ ಅಹಂಕಾರಕ್ಕೆ ದಿsಕ್ಕಾರವಿರಲಿ.

ಆದರೂ ನೀನು ನನ್ನ ಹುಡುಗ. ಚೆಂದದೊಂದು ಹುಡುಗಿಯನ್ನು ಶೀಘ್ರವೇ ಮದುವೆಯಗಿ ನೂರು ಕಾಲ ಬದುಕಿ ನನ್ನ ಮೇಲೆ ಇನ್ನಷ್ಟು ಸೇಡು ತೀರಿಸಿಕೋ ಎಂದು ಹಾರೈಸುವ

ನಿನ್ನವಳಲ್ಲದ
- ...
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…