ವಿಷಯಕ್ಕೆ ಹೋಗಿ

ಭಾರತ-ಚೀನಾ ಗಡಿ ಸಮಸ್ಯೆ ನಿವಾರಣೆಗೆ ಇದು ಪ್ರಶಸ್ತ ಸಮಯ !ಬಿಜೆಪಿಗೆ ಭರ್ಜರಿ ಬಹುಮತ ಇರುವುದರಿಂದ ಮೋದಿ ಈ ಬಾರಿ ದೇಶಕ್ಕೆ ಒಂದು ಉಪಕಾರವನ್ನು ಮಾಡಬಹುದು. ಅದೇನೆಂದರೆ ಭಾರತ-ಚೀನಾ ಗಡಿಯನ್ನು ಸ್ಪಷ್ಟವಾಗಿ ತೀರ್ಮಾನಿಸಿ ಸಮಸ್ಯೆಗೆ ಅಂತಿಮ ವಿದಾಯ ಹೇಳುವುದು. ಅರುಣಾಚಲ ಪ್ರದೇಶದ ಬಹುಭಾಗ ಹಿಂದೆ ಚೀನಾಕ್ಕೆ ಸೇರಿದ್ದಾಗಿಯೂ ಅದನ್ನು ತನಗೆ ಬಿಟ್ಟು ಕೊಟ್ಟಲ್ಲಿ ತಾನು ಆಕ್ರಮಿಸಿಕೊಂಡಿರುವ ಅಕ್ಸಾಯ್‌ ಚಿನ್ ಪ್ರಾಂತ್ಯವನ್ನು ಭಾರತಕ್ಕೆ ಬಿಡಲು ತಯಾರಿರುವುದಾಗಿ ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಚೀನಾ ಹೇಳಿದ್ದಾಗಿ, ಅದಕ್ಕೆ ನೆಹರು ಒಪ್ಪದಿರುವುದರಿಂದಲೇ ಗಡಿ ಸಮಸ್ಯೆ ಇಂದಿಗೂ ಮುಂದುವರಿದಿರುವುದಾಗಿಯೂ ಒಂದು ಲೇಖನದಲ್ಲಿ ಓದಿದ್ದೆ. ಮೋದಿ ಸರ್ಕಾರ ಈ ವಿಷಯವನ್ನು ರಚನಾತ್ಮಕವಾಗಿ ಪರಿಶೀಲಿಸಿ ಅರುಣಾಚಲ ಪ್ರದೇಶದ ಒಂದಿಷ್ಟು ಭಾಗವನ್ನು ನಾವು ಕಳೆದುಕೊಂಡರೂ (ಅಕ್ಸಾಯ್‌ ಚಿನ್‌ ನಮ್ಮದಾಗುವುದರಿಂದ) ಸಮಸ್ಯೆಯನ್ನು ಕೊನೆಗೊಳಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.

ಈ ಸಮಸ್ಯೆಯನ್ನು ಬಗೆ ಹರಿಸಲು ಇದು ಅತ್ಯುತ್ತಮವಾದ ಸಮಯ. ಏಕೆಂದರೆ ಚೀನಾಕ್ಕೆ ಸಹ ತನ್ನ ಬಂಡವಾಳವನ್ನು ತೊಡಗಿಸಲು ಭಾರತಕ್ಕಿಂತಾ ಪ್ರಶಸ್ತ ದೇಶ ಇನ್ನೊಂದಿಲ್ಲ ಎಂಬ ಅರಿವು ಇದೆ. ಭಾರತದಕ್ಕೂ ಬಂಡವಾಳ ಬೇಕು ಅನ್ನುವ ಸಂಕಲ್ಪದಲ್ಲಿ ಮೋದಿ ದೇಶ-ವಿದೇಶ ಸುತ್ತುತ್ತಿದ್ದಾರೆ. ಇದೇ ಸಮಯದಲ್ಲಿ ಗಡಿ ವಿಷಯವನ್ನು ಮುಂದಿಟ್ಟುಕೊಂಡು ಕೂತರೆ ಆ ದೇಶವೂ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬಹುದು.
ಮತ್ತು ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಸ್ವಂತ ನಿರ್ಧಾರದೊಂದಿಗೆ ಸಮಸ್ಯೆಗೆ ಕೊನೆ ಹಾಡಬಹುದು. ವಿರೋಧ ಪಕ್ಷಗಳ ಗೊಂದಲವಿರುವುದಿಲ್ಲ.

ಮುಂದೆಂದಾದರೂ ಯಾವ ಪಕ್ಷಕ್ಕಾದರೂ ಇಷ್ಟೊಂದು ಬಹುಮತ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಬೇರೆ ಪಕ್ಷಗಳಿಗೆ ಬಹುಮತ ಬಂದರೂ ಅವು ಗಡಿ ವಿಷಯದಲ್ಲಿ ಮುಂದುವರಿಯುವಂತಿಲ್ಲ, ಕಾರಣ ಮೇಲೆ ತಿಳಿಸಿದ ರೀತಿಯ ಪ್ರಸ್ತಾಪವನ್ನು ಬಿಜೆಪಿಯೇತರ ಸರ್ಕಾರ ಮಾಡಿದ್ದೇ ಹೌದಾದರೆ ಮೋದಿಭಕ್ತರು ಆಕಾಶ ಭೂಮಿ ಒಂದು ಮಾಡುತ್ತಾರೆ. ಆದ್ದರಿಂದ ಈ ಬಾರಿ ಮೋದಿಯವರು ಇದನ್ನು ಮಾಡುವುದೇ ಸೂಕ್ತ. ಅರುಣಾಚಲಪ್ರದೇಶದ ಭಾಗವನ್ನು ಬಿಟ್ಟು ಕೊಡಲು ಹೊರಟರೆ ಅದೇ ಮೋದಿಭಕ್ತರು ಸುಮ್ಮನಿರುತ್ತಾರಾ? ಅನುಮಾನವೇ ಬೇಡ... ಮೋದಿ ದೇಶವನ್ನೇ ಮಾರಿದರೂ ಅವರು ಮರು ಮಾತಾಡುವುದಿಲ್ಲ ! ಕಾರಣ ಇನ್ನೂ ಮೋದಿ ಜ್ವರ ಇಳಿದಿಲ್ಲ!
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…