ವಿಷಯಕ್ಕೆ ಹೋಗಿ

ಚಿಕ್ಕ-ಪುಟ್ಟ ಕಳ್ಳರು ಜೈಲಿಗೆ, ದೊಡ್ಡ ದೊಡ್ಡ ಕಳ್ಳರು ವಿಧಾನಸಭೆಗೆ ?!ಭೂಕಬಳಿಕೆಯ ಭೀಕರತೆ !

ನೀವು ಭೀಕರ ಬರಗಾಲದ ಬಗ್ಗೆ, ಭೀಕರ ನೆರೆ ಹಾವಳಿ ಬಗ್ಗೆ, ಭೀಕರ ಭೂಕಂಪದ ಬಗ್ಗೆ ಕೇಳಿರಬಹುದು, ನೋಡಿರಲೂ ಬಹುದು.ಆದರೆ ಭೀಕರ ಭೂಕಬಳಿಕೆಯನ್ನು ಕೇಳಿದ್ದೀರಾ ? ನೋಡಿದ್ದೀರಾ ?

ಇಂತಹುದೊಂದು ಭೀಕರ ಭೂಕಬಳಿಕೆ ನಮ್ಮ ನಿಮ್ಮ ನಡುವೆ ನಮ್ಮ ರಾಜ್ಯದಲ್ಲೇ ಯಾವ ಲಂಗು ಲಗಾಮು ಇಲ್ಲದೆ ಸಾಗಿದೆ. ಅದು ಅಂತಿಂತಹ ಭೂಕಬಳಿಕೆ ಅಲ್ಲ. ಇದರ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಿದರೆ ಇಡೀ ದೇಶದಲ್ಲೇ ಇಷ್ಟೊಂದು ಮಟ್ಟದ ಹಗರಣ ನಡೆದಿಲ್ಲ ಎನ್ನಬಹುದು. ಆದರೂ ನಮ್ಮ ಸರ್ಕಾರ ಏನೂ ಆಗಿಲ್ಲ ಎಂಬಂತೆ ತಣ್ಣಗಿದೆ. ಏಕೆಂದರೆ ಭೂಕಬಳಿಕೆ ಮಾಡಿರುವವರು ಸಾಧಾರಣ ವ್ಯಕ್ತಿಗಳಲ್ಲ. ಸರ್ಕಾರವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಬಲ್ಲಂತ ಬಿಲ್ಡರ್‌ಗಳು, ರಾಜಕಾರಣಿಗಳು, ವಾಣಿಜ್ಯೋಧ್ಯಮಿಗಳು ಮತ್ತು ಹಿರಿಯ ಅಧಿಕಾರಿಗಳೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಭೂಕಬಳಿಕೆಯನ್ನು ತಡೆಯಲು ನೂರೆಂಟು ವಿಘ್ನಗಳು.

ಕಬಳಿಕೆಗೊಂಡ ಭೂಮಿಯನ್ನು ಮರಳಿ ಪಡೆಯಲಿಕ್ಕೇ ಸಾಧ್ಯವಾಗದಂತೆ ಭದ್ರ ಕೋಟೆಯನ್ನು ನಿರ್ಮಿಸಿಕೊಳ್ಳಲಾಗಿದೆ. ಇದೊಂದು ಮಹಾ ಮಾರಿಯಾಗಿ ದೇಶವನ್ನೇ ವ್ಯಾಪಿಸುತ್ತಿದೆ. ದೇಹವನ್ನು ಒಳಗಿಂದೊಳಗೇ ತಿನ್ನುವ ಗ್ಯಾಂಗ್ರಿನ್ ರೋಗದಂತೆ ಇದು ಹರಡುತ್ತಿದೆ. ಇದು ಈಗಾಗಲೇ ರಾಜ್ಯದ, ಮುಖ್ಯವಾಗಿ ಬೆಂಗಳೂರು ನಗರದ ಸುತ್ತ ಮುತ್ತಲಿನ ಭೂಮಿಯನ್ನು ನುಂಗಿದೆ. ಇದನ್ನು ಈಗಲೇ ಸರಿ ಪಡಿಸಿ ಸರ್ಕಾರವು ತನ್ನ ಭೂಮಿಯನ್ನು ಮರಳಿ ಹಿಂಪಡೆಯದೇ ಹೋದರೆ ಮುಂದೊಂದು ದಿನ ಸರ್ಕಾರದ ಭೂಮಿ ಇಂಚು ಕೂಡಾ ಉಳಿಯಲಾರದು.

ಜನರು ಮೈ ಮರೆತರೆ ರಾಜ್ಯವೇ ಹರಾಜಾಗುತ್ತದೆ. ದೊಡ್ಡ ದೊಡ್ಡ ರಣ ಹದ್ದುಗಳು ನಮ್ಮ ರಾಜ್ಯದ ಇಂಚಿಂಚು ನೆಲವನ್ನೂ ಹುರಿದ ಮಾಂಸದಂತೆ ಹರಿದರಿದು ಮುಕ್ಕುತ್ತಿವೆ. ಇದನ್ನು ತಡೆಯಬೇಕಾಗಿದ್ದ ರಾಜ್ಯ ಸರ್ಕಾರ ತಿಂದುಂಡು ಮಲಗಿದ ಮಹಾ ಗೆಡವನಂತೆ ಗೊರಕೆ ಹೊಡೆಯುತ್ತಿದೆ. ಬಡವನಿಗೊಂದು ಸೂರು ಸಿಗುವುದೂ ಕಷ್ಟವಿರುವುದು ಒಂದೆಡೆಯಾದರೆ ದೊಡ್ಡ ದೊಡ್ಡ ಕುಳಗಳು ಎಕರೆಗಟ್ಟಲೇ ರಾಜ್ಯದ ಭೂಮಿಯನ್ನು ಸ್ವಾಹಾ ಮಾಡುತ್ತಿದ್ದಾರೆ.

ಎ.ಟಿ. ರಾಮಸ್ವಾಮಿಯವರ ಬೆಚ್ಚಿ ಬೀಳಿಸುವ ವರದಿ

ಶ್ರೀಯುತ ಎ.ಟಿ. ರಾಮಸ್ವಾಮಿ ಅವರ ಸಮಿತಿ ನಡೆಸಿದ ತನಿಖೆಯಲ್ಲಿ ಹೊರ ಬಂದ ಸತ್ಯಗಳು ನೂರಾರು. ಅವುಗಳನ್ನು ಓದುತ್ತಾ ಹೋದಂತೆ ಯಾರೇ ಆದರೂ ಬೆಚ್ಚಿ ಬೀಳುವುದು ಖಚಿತ. ವರದಿ ಪ್ರಕಾರ ರಾಜ್ಯಾಧ್ಯಂತ ೨೦ ಸಾವಿರಕ್ಕೂ ಹೆಚ್ಚಿನ ಎಕರೆಗಳಷ್ಟು ಭೂಮಿಯು ಕಳ್ಳ ಕಾಕರ ಪಾಲಾಗಿದೆ. ಅದನ್ನು ಕಬಳಿಸಿರುವುದು ಕಂಡಿತಾ ಬಡವರಲ್ಲ. ಬದಲಿಗೆ ಕೋಟ್ಯಾಧೀಶರುಗಳೇ ಎಂಬುದನ್ನಿಲ್ಲಿ ಗಮನಿಸಬೇಕು. ಹಾಗೆಯೇ ಅವರೆಲ್ಲಾ ಯಾರ ನೆರವೂ ಕೂಡಾ ಇಲ್ಲದೆ ಕಬಳಿಕೆ ಮಡಿಕೊಳ್ಳಲು ಸಾಧ್ಯವೇ ಇಲ್ಲ. ಕಂದಾಯ ಅಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿಯ ವರೆಗೆ ನಾನಾ ಇಲಾಖೆಯ ನಾನಾ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಭೂಗಳ್ಳರಿಗೆ ಬೇಕಾದ ಎಲ್ಲಾ ನೆರವನ್ನೂ ಮಾಡಿ ಕೊಟ್ಟಿದ್ದಾರೆ. ದಾಖಲಾತಿಗಳನ್ನು ತಿದ್ದಿದ್ದಾರೆ. ಇಲ್ಲದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರಿಗೆಲ್ಲಾ ಶಿಕ್ಷೆ ಏನು ? ಸರ್ಕಾರ ಕಳೆದುಕೊಂಡಿರುವ ಭೂಮಿಯನ್ನು ಹಿಂಪಡೆಯುವುದು ಹೇಗೆ? ಯಾವಾಗ ?

ಒಂದೆಡೆ ಭೂ ಒತ್ತುವರಿ ನಡೆದಿದ್ದರೆ, ಇನ್ನೊಂದೆಡೆ ಭೂ ಕಬಳಿಕೆ ನಡೆದಿದೆ. ಭೂ ಒತ್ತುವರಿ ಸಣ್ಣ-ಮಧ್ಯಮ ಪ್ರಮಾಣದ್ದು. ಇದು ಅಷ್ಟೊಂದು ಗಂಭೀರ ವಿಷಯವಲ್ಲ. ಆದರೆ ಭೂ ಕಬಳಿಕೆಯಂತೂ ಭ್ರಹ್ಮಾಂಡ ಸ್ವರೂಪದ್ದು. ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಲಾಗಿದೆ. ಈಗಲೂ ಅದು ನಿರಾತಂಕವಾಗಿ ಸಾಗಿದೆ. ಕಬಳಿಕೆಯಾಗಿರುವ ಭೂಮಿಗೆ ಸರ್ಕಾರ ನಿಗದಿ ಮಾಡಿರುವ ಬೆಲೆಯಂತೆಯೇ ಲೆಕ್ಕ ಹಾಕಿದರೂ ನಾವು ಕಳೆದುಕೊಂಡಿರುವ ಭೂಮಿಯ ಮೌಲ್ಯ ನಾಲ್ಕೂವರೆ ಲಕ್ಷ ಕೋಟಿಯಷ್ಟಾಗುತ್ತದೆ. ಇದು ಭಾರತದ ಯವುದೇ ಅತಿ ದೊಡ್ಡ (೨ಜಿ, ಕಾಮನ್‌ವೆಲ್ತ್, ಕಲ್ಲಿದ್ದಲು.. ಇತ್ಯಾದಿ) ಹಗರಣಗಳೀಗಿಂತಲೂ ಚಿಕ್ಕದಲ್ಲ. ಇಂತಹ ಭಾರೀ ಹಗರಣವನ್ನು ಬೆನ್ನಲ್ಲಿಟ್ಟುಕೊಂಡು ಸರ್ಕಾರ ನಿದ್ದೆ ಮಾಡುತ್ತಿದೆ ಎಂದರೆ ಕೇಳುವುದು ಯಾರನ್ನು ?

ಬೆಂಗಳೂರು ಜಿಲ್ಲೆಯಲ್ಲಿ ೧೨೨ ಗ್ರಾಮಗಳಿಗೆ ಸೆರಿದ ಒಟ್ಟು ೨೯೭ ಅಕ್ರಮ ಮಂಜೂರಾತಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಕ್ರಮಗಳಿಂದ ೧೧೭೭ ಜನರು ಲಾಭ ಮಾಡಿಕೊಂಡಿದ್ದರೆ ಲಕ್ಷಾಂತರ ಬಡ ಜನರಿಗೆ ಮನೆ ನಿವೇಶನಗಳೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈ ಅಕ್ರಮಿಗಳು ಸ್ವಾಹಾ ಮಾಡಿರುವ ಭೂಮಿಯ ವಿಸ್ತೀರ್ಣ ೨೩೦೬ ಎಕರೆ ! ಬೆಂಗಳೂರಿನ ಸುತ್ತಮುತ್ತ ಒಂದು ಚದರ ಅಡಿಗೆ ನಾಲ್ಕೈದು ಸಾವಿರ ರೂಪಾಯಿ ಮಾರುಕಟ್ಟೆ ಮೌಲ್ಯವಿದೆ. ಹಾಗಿದ್ದರೆ ೨೩೦೬ ಎಕರೆ ಭೂಮಿಗೆ ಎಷ್ಟು ಮೌಲ್ಯವಿದ್ದೀತು ಎಂದು ನೀವೇ ಲೆಕ್ಕ ಹಾಕಿ!

ಅದಲ್ಲದೇ ಅಕ್ರಮವಾಗಿದ್ದರೂ ಖಾತೆ ಆಗದಿರುವ ೧೫೨ ಪ್ರಕರಣಗಳೂ ಸಹ ಬೆಳಕಿಗೆ ಬಂದಿದ್ದು ಇದರಿಂದ ೩೭೯ ಮಂದಿ ಲಾಭ ಮಡಿಕೊಳ್ಳುವ ಹುನ್ನಾರದಲ್ಲಿದ್ದಾರೆ. ಇದು ಸುಮಾರು ೮೬೮ ಎಕರೆ ಜಮೀನು!

ರಾಜ್ಯ ಪರಭಾಷಿಕರ ಪಾಲಾಯ್ತು !

ಹೌದು, ನಮ್ಮ ರಾಜ್ಯದ ರಾಜಕಾರಣಿಗಳೂ, ಅಧಿಕಾರಿಗಳೂ ಸೇರಿಕೊಂಡು ನಮ್ಮ ರಾಜ್ಯವನ್ನು ಹರಾಜು ಹಾಕಿದ್ದಾರೆ. ಬಂದಷ್ಟು ಗೆಬರಿಕೊಂಡು ಕಂಡ ಕಂಡ ಕಾರಣಗಳನ್ನು ಕೊಟ್ಟು ಮಾರಿಕೊಂಡಿದ್ದಾರೆ. ಭೂಕಬಳಿಕೆ ಮಾಡಿದವರಲ್ಲಿ ಪರ ರಾಜ್ಯದವರೇ ಹೆಚ್ಚು. ಇನ್ನೊಂದು ರಾಜ್ಯದಿಂದ ಬಂದು ಇಲ್ಲಿ ಭೂಮಿಯನ್ನು ಕದಿಯಲು ಅವರಿಗೆ ಎಷ್ಟು ಧೈರ್ಯ ? ಅದು ಅವರಿಂದ ಸಾಧ್ಯವಾದುದಾದರೂ ಹೇಗೆ ? ಕಾರಣ ಸ್ಪಷ್ಟ... ಅದುವೇ ರಾಜಕಾರಣ. ರಾಜಕಾರಣಿಗಳಿಗೆ ಗೊತ್ತಿಲ್ಲದೇ ಇದ್ಯಾವುದೂ ನಡೆದಿರಲು ಸಾಧ್ಯವೇ ಇಲ್ಲ. ಯಾವ್ಯಾವ ರಾಜಕಾರಣಿ, ಹಾಗೂ ಅಧಿಕಾರಿ ಎಷ್ಟೆಷ್ಟು ಪಾಲು ಪಡೆದಿದ್ದಾರೋ ದೇವರೇ ಬಲ್ಲ.

ಒತ್ತುವರಿ ಮತ್ತು ಅಕ್ರಮಗಳನ್ನೆ ಎಸಗಿರುವವರ ಪೂರ್ವಾಪರ ನೋಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಒತ್ತುವರಿ ಮಾಡಿದವರಲ್ಲಿ ಬಹುತೇಕರು ಕನ್ನಡಿಗರಲ್ಲ. ಹೊರ ರಾಜ್ಯದಿಂದ ಬಂದಂತಹ ಬಿಲ್ಡರುಗಳು ಮತ್ತು ಧನಿಕರು. ಹಾಗೆಯೇ ಒತ್ತುವರಿಯಾದ ಜಮೀನಿನ ಅಕ್ಕಪಕ್ಕದಲ್ಲೇ ಇರುವ ಕನ್ನಡದ ರೈತರಿಂದ ಈ ಅಕ್ರಮ ನಡೆದಿಲ್ಲ. ಎಲ್ಲಿಂದಲೋ ಬಂದ ದರ್ವೇಸಿಗಳು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಇವರುಗಳೆಲ್ಲಾ ತುಂಬಾ ಪ್ರಭಾವಿಗಳು ಮತ್ತು ಇಲ್ಲಿನ ಅಧಿಕಾರಿವರ್ಗವನ್ನೂ ರಾಜಕಾರಣಿಗಳನ್ನೂ ನಿಂತ ನಿಲುವಿನಲ್ಲೇ ಕರೀದಿಸಬಲ್ಲವರಾಗಿದ್ದಾರೆ!

ಭೂಕಬಳಿಕೆ ಮಾಡುವವರು ಅನೇಕಾನೇಕ ರೀತಿಯಲ್ಲಿ ಕೊಳ್ಳೆ ಹೊಡೆದಿದ್ದಾರೆ. ಸಂಘ ಸಂಸ್ಥೆಗಳನ್ನು ತೋರಿಸಿ ಕೊಳ್ಳೆ ಹೊಡೆದಿದ್ದಾರೆ. ಮಾಡಿರುವ ಸೇವೆ ಶೇ ೧% ಆದರೆ ಲಾಭ ಮಡಿಕೊಂಡಿರುವುದು ಶೇ. ೯೯%.

ಉದಾ ೧ : ವಿಜಯನಗರ ಸಮೀಪ ಒಂದು ಉದ್ಯಾನದ ಜಾಗದಲ್ಲಿ ದೇವಾಲಯ ಕಟ್ಟಲಾಗಿದೆ. ಇನ್ನೂರು ಅಡಿ ಉದ್ದದ ಜಾಗದಲ್ಲಿ ಕಟ್ಟಲಾಗಿರುವ ಈ ದೇವಾಲಯದ ನೆಲ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣವಿದ್ದರೆ ದೇವರು ಮೊದಲ ಮಹಡಿಯಲ್ಲಿ ವಾಸವಿದ್ದಾನೆ ! ದೇವರ ಹೆಸರಲ್ಲಿ ಲಾಭ ಯಾರಿಗೋ ಹೋಗುತ್ತಿದ್ದರೆ ಉದ್ಯಾನ ಕಳೆದುಕೊಂಡಿರುವ ಜನ ಮಹಡಿ ಮೇಲಿನ ದೇವರಿಗೆ ಕೈ ಮುಗಿದು ಮನೆಗೆ ಹೋಗುತ್ತಾರೆ!

ಉದಾ : ನಿಮಾಃನ್ಸ್ ಹತ್ತಿರ ಒಂದು ಜಾಗವನ್ನು ಹೊಡೆದುಕೊಳ್ಳಲು ಇಬ್ಬರು ಗಂಡ ಹೆಂಡತಿ ಬೃಹನ್ ನಾಟಕವಾಡಿ ಪರಸ್ಪರ ಡೈವೋರ್ಸ್ ಕೊಟ್ಟುಕೊಂಡಿದ್ದಾರೆ! ಡೈವೋರ್ಸ್ ಆದ ನಂತರವೂ ಅನ್ಯೋನ್ಯವಾಗಿ ಕದ್ದ ಜಾಗದಲ್ಲಿ ಸುಖವಾಗಿದ್ದಾರೆ.

ಹೀಗೆ ನೋಡುತ್ತಾ ಹೋದರೆ ಇದ್ದವರ ಹೆಸರಲ್ಲಿ, ಸತ್ತವರ ಹೆಸರಲ್ಲಿ, ಇದ್ದವರನ್ನೂ ಸಾಯಿಸಿ, ಸತ್ತವರನ್ನೂ ಬದುಕಿಸಿ, ಹುಟ್ಟದಿರುವವರನ್ನೂ ಹುಟ್ಟಿಸಿ ಅಕ್ರಮ ಎಸಗಲಗಿದೆ. ಎಲ್ಲಾ ಸರ್ಕಾರಿ ಕರಾಮತ್ತು !

ಜಿಲ್ಲಾಧಿಕಾರಿಗಳೂ ಭಾಗಿ !

ಈ ಬೃಹತ್ ಹಗರಣದಲ್ಲಿ ಜಿಲ್ಲಾಧಿಕಾರಿಯಂತಹ ಉನ್ನತ ಹುದ್ದೆಯ ಅಧಿಕಾರಿಗಳೂ ಎಗ್ಗಿಲ್ಲದೇ ಭಾಗಿಯಾಗಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಕಂದಾಯ ಇಲಾಖೆಯ ಬೆಂಗಳೂರು ಜಿಲ್ಲೆ, ಸರ್ಕಾರದ ಜಮೀಸು ಖಾಸಗಿಯವರಿಗೆ ಹಕ್ಕು ದಾಖಲೆ - ಪರಿಶೀಲನಾ ವರದಿಯಲ್ಲಿದೆ. ಈ ವರದಿಯ ಸಂಪುಟ ೧ ರಲ್ಲಿ ಒಂದು ಕಡೆ ಹೀಗೆ ಹೇಳಲಾಗಿದೆ.. ... ಎಲ್ಲಾ ೩೮೨ ಪ್ರಕರಣಗಳಲ್ಲಿ ಚರ್ಚಿತವಾದ ೯೫೨ ಎಕರೆ ಜಮೀನು ಸರ್ಕಾರದ ಪರವಾಗಿರುವ ಜಮೀನೆಂದು ತೀರ್ಮಾನಿಸಲಾಗಿದೆ. ಆದಾಗ್ಯೂ ಈ ಜಮೀನಿಗೆ ಖಾಸಗಿಯವರಿಗೆ ಹಕ್ಕು ದಾಖಲೆ ಮಾಡುವಂತೆ ವಿಶೇಷ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ. ಹೀಗಾಗಿ ವಿಶೇಷ ಜಿಲ್ಲಾಧಿಕಾರಿಗಳು ಹೊರಡಿಸಿರುವ ಪರಿಷ್ಕೃತ ಆದೇಶಗಳು ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿದೆ ಹಾಗೂ ದೋಶಪೂರ್ಣವಾಗಿದೆ. ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಜೆರಾಕ್ಸ್ ಚೀಟಿ ಆಧಾರದಲ್ಲೂ ಮಂಜೂರು !

ಬಡವನೊಬ್ಬ ಜೀವನಾವಶ್ಯಕ ವಸ್ತುಗಳಿಗಾಗಿ ಪಡಿತರ ಚೀಟಿ ಪಡೆಯಬೇಕೆಂದರೂ ಹತ್ತಾರು ದಾಖಲೆ ಕೇಳುತ್ತದೆ ಸರ್ಕಾರ. ಅದರಲ್ಲೂ ಎಲ್ಲವನ್ನೂ ಅಸಲಿ ಮೂಲ ಪ್ರತಿಗಳನ್ನು ತೋರಿಸಬೇಕು. ಆದರೆ ಈ ಭೂ ಅಕ್ರಮಗಳಲ್ಲಿ ನಡೆದಿರುವುದೇ ಬೇರೆ. ವಿಶೇಷ ಜಿಲ್ಲಾಧಿಕಾರಿಯೊಬ್ಬರು ಕೇವಲ ಜೆರಾಕ್ಸ್ ಚೀಟಿಗಳ ಆಧಾರದಲ್ಲಿ ಕೂಡಾ ಜಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ ಎಂದರೆ ಅಕ್ರಮ ಎಷ್ಟರ ಮಟ್ಟಿಗಿನದು ಲೆಕ್ಕ ಹಾಕಿ. ಅದರಲ್ಲೂ ತಹಸೀಲ್ದಾರ್ ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಹಕ್ಕು ದಾಖಲೆ ಕೇಳಿ ಸಲ್ಲಿಸಿರುವ ಅರ್ಜಿಯು ನೈಜವಾದುದಲ್ಲ ಎಂದು ವರದಿ ನೀಡಿದ್ದರೂ ಸಹ ಅಂದಿನ ವಿಶೇಷ ಜಿಲ್ಲಾಧಿಕಾರಿ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ! ೩೮೨ ಪ್ರಕರಣಗಳ ಪೈಕಿ ೧೭೬ ಪ್ರಕರಣಗಳು ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡಿರುವಂತಹವಾಗಿವೆ. ಇಲ್ಲೆಲ್ಲಾ ವಿಶೇಷ ಜಿಲ್ಲಾಧಿಕಾರಿ ಕೈ ಆಡಿಸಿದ್ದಾರೆ. ಇದರ ಹಿಂದೆ ಇದ್ದ ಕಾರಣವಾದರೂ ಏನು ? ಅಣವೇ ? ಅಥವಾ ಯಾರದೋ ಪ್ರಭಾವವೇ ? ಅಂತಹ ಪ್ರಭಾವಿ ವ್ಯಕ್ತಿಗಳಾದರೂ ಯಾರು ?

೬೧ ಪ್ರಕರಣಗಳಲ್ಲಿ ಇನಾಂ ರದ್ದತಿಯಾದವುಗಳಲ್ಲಿ ಕಲಂ ೪,೫ ಮತ್ತು ೬ರ ಅನ್ವಯ ಅರ್ಹತೆ ಉಳ್ಳವರಿಗೆ ಭೂಮಿ ಮತ್ತೆ ಮಂಜೂರಾತಿ ನಡೆದಿದೆ. ಆದರೆ ಇಲ್ಲೂ ಸಹ ಭಯಂಕರ ಗೋಲ್‌ಮಾಲ್ ನಡೆದಿದ್ದು ಅನರ್ಹರಿಗೂ ಸಹ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ.

ಉಳಿದ ೧೪೫ ಪ್ರಕರಣಗಳಲ್ಲಿ ಸರ್ಕಾರಿ ಜಮೀನಾದ ಗೋಮಾಳವನ್ನು ಮಂಜೂರು ಮಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆದರೆ ಇವರು ಹೊಡೆದುಕೊಂಡಿರುವುದು ಗೋಮಾಳ ಅಲ್ಲ, ಬದಲಿಗೆ ಉತ್ತಮವಾದ ಸರ್ಕಾರಿ ಜಮೀನು. ಇವುಗಳಲ್ಲೆಲ್ಲಾ ಕಾಲಾನುಕ್ರಮದಲ್ಲಿ ಇರಬೇಕಾದ ದಾಖಲೆಗಳಾದ ಭೂ ಮಂಜೂರಾತಿ ಅರ್ಜಿಯಾಗಲೀ, ದರಖಾಸ್ತು ವಹಿ, ಗೋಮಾಳದಿಂದ ಕೃಷಿ ಭೂಮಿಯಾಗಿ ಮಂಜೂರು ಮಡಿದ ಆದೇಶ, ಮಂಜೂರಾತಿ ನಡಾವಳಿ, ಮಂಜೂರಾತಿ ಅಧಿಕೃತ ಜ್ಞಾಪನ, ಕಿಮ್ಮತ್ತು ಕಟ್ಟಿರುವ ರಸೀದಿ,ಸಾಗುವಳಿ ಚೀಟಿ ವಿತರಣಾ ವಹಿ, ಕಚೇರಿ ಪ್ರತಿ, ಮ್ಯುಟೇಷನ್ ವಹಿ, ಧೃಡೀಕರಣ, ಪಹಣಿ ವಹಿಯಲ್ಲಿ ದಾಖಲೆ - ಹೀಗೆ ಎಲ್ಲೆಲ್ಲೂ ಏನೊಂದೂ ದಾಖಲೆಗಳಿಲ್ಲ. ಆದರೆ ಎಲ್ಲೋ ಒಂದೆರಡು ಕಡೆ ಲಂಚ ಕೊಟ್ಟು ಹೆಸರನ್ನು ಸೇರಿಸಿ ಅದುವೇ ಅಸಲಿ ದಾಖಲೆ ಎಂಬಂತೆ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ. ಇದನ್ನು ತಡೆಯಬೇಕಾಗಿದ್ದ ಅಧಿಕಾರಿಗಳೆಲ್ಲಾ ಭೂಗಳ್ಳರಿಂದ ಲಂಚ ಪಡೆದು ಸುಮ್ಮನಿದ್ದಾರೆ.

ಇದ್ದುರಲ್ಲೇ ಕೆಲ ನಿಷ್ಠಾವಂತ ಅಧಿಕರಿಗಳು ಸರ್ಕಾರದ ಜಮೀನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಹ ಅದು ಫಲಕಾರಿಯಾಗಲಿಲ್ಲ. ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತ ಕೆ.ಎಸ್. ಪ್ರಭಾಕರ ಅವರು ವಿಶೇಷ ಜಿಲ್ಲಾಧಿಕಾರಿಯ ಕಾನೂನು ಬಾಹಿರ ಕೆಲಸಗಳ ಬಗ್ಗೆ ವರದಿ ನೀಡಿದ್ದಾರೆ. ವಿಶೇಷ ಜಿಲ್ಲಾಧಿಕಾರಿಯ ತಪ್ಪುಗಳಿಂದ ಸರ್ಕಾರಕ್ಕೆ ಭೂಮಿ ಇಲ್ಲದಂತಾಗಿದೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಆದರೆ ಅದನ್ನು ಪರಿಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕಾಗಿದ್ದ ಸಿದ್ದರಾಮಯ್ಯನವರ ಸರ್ಕಾರ ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ತಮ್ಮ ಖಾತೆ ತೆರೆದುಕೊಂಡು ಜನಪ್ರಿಯವಾಗುವತ್ತ ಹೊರಟಿದೆ.

ಘಟಾನುಘಟಿಗಳ ಭೂದಾಹ !

ಕಂಡ ಕಂಡಲ್ಲಿ ಭೂಮಿಯನ್ನು ನುಂಗಿ ನೀರು ಕುಡಿದವರಲ್ಲಿ ದೊಡ್ಡ ದೊಡ್ಡ ಗಡವಗಳೇ ಇವೆ. ರಾಜಕಾರಣಿಗಳ ಕೃಪೆಯೊಂದಿಗೆ ನಡೆಯುವ ಬಿಲ್ಡರ್ಸ್‌ಗಳು ಇದರಲ್ಲಿ ಎತ್ತಿದ ಕೈ. ಬಿನ್ನಮಂಗಲ, ಮನವರ್ತೆ ಕಾವಲ್, ಬೈಯ್ಯಪ್ಪನಹಳ್ಳಿ ಎಂಬೆಡೆಯೆಲ್ಲಾ ಪೂರ್ವಾಂಕರ ಬಿಲ್ಡರ್ಸ್ ಎಂಬ ಸಂಸ್ಥೆ ಸಾರ್ವಜನಿಕ ರಸ್ತೆಯನ್ನೇ ಒತ್ತುವರಿ ಮಡಿಕೊಂಡಿದೆ. ಇದಕ್ಕೆ ಕುಮ್ಮಕ್ಕು ನೀಡಿರುವುದು ಬೇರೆ ಯಾರೂ ಅಲ್ಲ, ಸ್ವತಃ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಈ ಸಂಸ್ಥೆಯ ಹಿಂದೆ ನಿಂತಿದೆ! 

ಕ್ರೋಢೀಕೃತ ಖಾತೆ ಮಾಡಿಸಿಕೊಳ್ಳಬೇಕಿದ್ದಲ್ಲಿ ಎಲ್ಲಾ ನಿವೇಶನಗಳಿಗೆ ಸಂಬಂಧಪಟ್ಟಂತೆ ಜಂಟಿ ಕ್ರಯದಾರರಿರಬೇಕು ಮತ್ತು ಅವರುಗಳು ರಕ್ತ ಸಂಬಂಧಿಗಳಾಗಿರಬೇಕಾಗುತ್ತದೆ. ಆದರೆ ಖಾತೆ ಮಾಡಿಸಿಕೊಂಡಿರುವ ಸುರೇಶ್ ಸಲಾರಿಯಾ, ರೋಹಿತ್ ಸಲಾರಿಯಾ, ಎಸ್.ಎಸ್. ಮಹಮದ್ ಸಮದ್, ರೋಹಿತ್ ಸಲಾರಿಯಾ, ಮಹಮದ್ ಸೈಫುಲ್ಲಾ ಇವರುಗಳ್ಯಾರೂ ರಕ್ತ ಸಂಬಂಧಿಗಳಲ್ಲ. ಮತ್ತು ಜಂಟಿ ಕ್ರಯದಾರರೂ ಅಲ್ಲ!

ಹೊಸಕೋಟೆಯ ಶಾಂತನಪುರದಲ್ಲಿ...

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಶಾಂತನಪುರ ಗ್ರಾಮದ ಸರ್ವೆ ನಂಬರ್ ೯ರಲ್ಲಿ ೨೬೧ ಎಕರೆ ಸರ್ಕಾರಿ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ. ಈ ಅಕ್ರಮಕ್ಕಾಗಿ ಒಂದು ಇತಿಹಾಸವನ್ನೇ ಸೃಷ್ಟಿಸಲಾಗಿದೆ. ಅಂದರೆ ೧೯೭೭-೭೮ರಲ್ಲೇ ೧೨ ಜನರಿಗೆ ಈ ಭೂಮಿಯನ್ನು ಮಂಜೂರು ಮಾಡಲಾಗಿತ್ತು ಎಂಬಂತೆ ಸುಳ್ಳು ದಾಖಲೆಯನ್ನು ಸೃಷ್ಟಿಸಿದ್ದಾರೆ.

ಕೆರೆಯನ್ನೇ ಒತ್ತೆಯಿಟ್ಟು ಸಾಲ ಪಡೆದರು !

ಚಿನ್ನಾಭರಣಗಳನ್ನೋ, ಮನೆಯನ್ನೋ, ಸ್ವಂತ ಜಮೀನನ್ನೋ ಒತ್ತೆ ಇರಿಸಿ ಸಾಲ ಪಡೆಯುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕೆರೆಯನ್ನೇ ಒತ್ತೆಯಿಟ್ಟು ಸಾಲ ಪಡೆದಿದ್ದು ಕೇಳಿದ್ದೀರಾ ? ನೋಡಿದ್ದೀರಾ ? ಸರ್ಕಾರಿ ಅಧಿಕರಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯಾರು ಎಂಬುದಕ್ಕೆ ಇಲ್ಲಿದೆ ಸಾಕ್ಷಿ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೈರಸಂದ್ರದ ಕೆರೆಯಂಗಳವನ್ನೇ ಕೆಲವರು ಬ್ಯಾಂಕ್‌ನಲ್ಲಿ ಒತ್ತೆ ಇರಿಸಿ ಸಾಲ ಪಡೆದಿದ್ದಾರೆ ಎಂದರೆ ನಂಬಲೇ ಬೇಕು. ಇಂತಹ ಮಹಾನ್ ಕೆಲಸ ಮಾಡಿದವರು ಶಿಯೂರಾ ಪ್ರಾಪರ್ಟಿ ಡೆವಲಪರ್ಸ್ ಎಂಬ ಮೂರ್ನಾಮದ ಸಂಸ್ಥೆ. ಬೈರಸಂದ್ರದ ಸ.ನ. ೫೬ರ ೧೫-೧೧ ವಿಸ್ತೀರ್ಣದ ಕೆರೆ ಜಾಗವನ್ನು ಇವರು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದಿದ್ದಾರೆ!

ಈ ಹಿಂದೆಯೇ ಈ ಜಾಗವನ್ನು ಅರಣ್ಯ ಇಲಾಖೆಗೆ ನೆಡುತೋಪು ನೆಟ್ಟು ಗಿಡ-ಮರ ಬೆಳೆಸಿರಯ್ಯಾ ಅಂತ ಹಸ್ತಾಂತರಿಸಲಾಗಿತ್ತು! ಹಾಗೆಯೇ ಮಹನಗರ ಪಾಲಿಕೆಯಿಂದ ಈ ಜಾಗದ ಅಭಿವೃದ್ದಿಗೆ ೧ ಕೋಟಿ ೨೦ ಲಕ್ಷ ರೂಪಾಯಿಗಳನ್ನು ಖರ್ಚು ಸಹ ಮಾಡಲಗಿದೆ! ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ! ಇದೀಗ ಸಾಲ ಪಡೆದು ನಾಮ ಹಾಕಿದ ಶಿಯೂರಾ ಪ್ರಾಪರ್ಟಿ ಸಾಲ ತೀರಿಸದೇ ಬ್ಯಾಂಕ್‌ಗೆ ನಾಮ ಹಾಕಿದ್ದು, ಬ್ಯಾಂಕ್‌ನವರು ಸದರಿ ಜಮೀನನ್ನು ೬.೭೦ ಕೋಟಿ ರೂಪಾಯಿಗೆ ಹರಾಜು ಹಾಕಿದ್ದಾರೆ. ಈಗ ಸರ್ಕಾರವೇನಾದರೂ ಈ ಅಕ್ರಮವನ್ನು ಸರಿಪಡಿಸಲೋಸುಗ ಸದರಿ ಜಮೀನನ್ನು ವಶಪಡಿಸಿಕೊಮಡಿದ್ದಾದರೆ ಹರಾಜಿನಲ್ಲಿ ಭೂಮಿ ಪಡೆದವರಿಗೆ ಮತ್ತೊಂದು ನಾಮ ಬೀಳಲಿದೆ! ಅತ್ತ ಬ್ಯಾಂಕೂ ಲಾಭ ಮಾಡಿಕೊಂಡಿತು, ದಗಲ್ಬಾಜಿ ಕೆಲಸ ಮಾಡಿದ ಶಿಯೂರಾ ಸಂಸ್ಥೆಯೂ ಲಾಭ ಮಾಡಿಕೊಂಡು ಕಾಲ್ಕಿತ್ತಿತು.

ಈ ಭೂ ಅಕ್ರಮಗಳನ್ನು ಪರಿಶೀಲಿಸುತ್ತಾ ಹೋದರೆ ೨ಜಿ, ಕಾಮನ್‌ವೆಲ್ತ್ ಹಗರಣಗಳಿಗಿಂತಲೂ ಬೃಹತ್ತಾಗಿ ಬಿಚ್ಚಿಕೊಳ್ಳುತ್ತವೆ. ಒಂದೆಡೆ ಬಡವರಿಗೆ, ಮಧ್ಯಮ ವರ್ಗದವರಿಗೆ ಬೆಂಗಳೂರು ನಿಲುಕದ ನಗರವಾಗುತ್ತಿದ್ದರೆ ಮತ್ತೊಂದೆಡೆ ಅಳಿದುಳಿದ ಭೂಮಿಯನ್ನೂ ದೊಡ್ಡ ದೊಡ್ಡ ರಣ ಹದ್ದುಗಳು ತಿಂದು ಹಾಕುತ್ತಿವೆ. ಅಧಿಕಾರಿಗಳೂ, ರಾಜಕಾರಣಿಗಳೂ ಅಂತಹ ಹದ್ದುಗಳು ಎಸೆಯುವ ಮಾಂಸದ ಚೂರಿಗೆ ಆಸೆ ಪಟ್ಟು ತಾಯಿಯ ಸೆರಗನ್ನೇ ಹಿರಿದಿರಿದು ಪರರಿಗೆ ನೀಡುತ್ತಿದ್ದಾರೆ. 

ಎಲೈ ಅಧಿಕರಿಗಳೇ, ರಾಜಕಾರಣಿಗಳೇ... ಸಾಮಾನ್ಯ ಜನತೆಯನ್ನು ನೀವು ತುಂಬಾ ಸಮಯ ಮೋಸಗೊಳಿಸಲಾರಿರಿ. ಪ್ರತಿ ಪ್ರಜೆಯ ಹೃದಯದಲ್ಲೂ ನಿಮ್ಮಗಳ ಭ್ರಷ್ಟತನದ ಜ್ವಾಲೆ ಹೊಗೆಯಾಡುತ್ತಿದೆ. ಒಂದಲ್ಲಾ ಒಂದು ದಿನ ಅದು ಧಗ್ಗೆನೆ ಹೊತ್ತಿಕೊಳ್ಳುವುದು ನಿಶ್ಚಿತ. ಆಗ ನೀವು ಇದ್ದಲ್ಲೇ ಜನರ ಕ್ರೋಧದ ಬೆಂಕಿಗೆ ಸುಟ್ಟು ಬೂದಿಯಾಗುತ್ತೀರಿ. ನಿಮ್ಮನ್ನು ಉರಿಸಿ ಭಸ್ಮ ಮಡಲು ನಿಮ್ಮ ಅತಿ ಆಸೆಯೆಂಬ ಇಂದವೇ ಬಳಕೆಯಾಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಯಾವನೋ ಬಿಸಾಕುವ ಬಿಡಿಗಾಸಿಗಾಗಿ ಹೆತ್ತವ್ವನ ಮಗ್ಗುಲ ತನಕ ಅವನನ್ನು ಬಿಟ್ಟುಕೊಳ್ಳಬೇಡಿ. ಹಾಗೆ ಮಾಡಿದರೆ ನಿಮ್ಮ ಹುಟ್ಟಿನ ಬಗ್ಗೆಯೇ ಜನ ಸಂಶಯ ಪಡುವಂತಾದೀತು!

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ !

ಕಾಡು ಮೇಡುಗಳಲ್ಲಿ ಮನೆ ಕಟ್ಟಿಕೊಂಡು ಹೇಗೋ ಜೀವನ ಸಾಗಿಸುವ ಬಡವರ ಮೇಲೆ ರಾಜ್ಯ ಸರ್ಕಾರವೂ, ಅರಣ್ಯ ಇಲಾಖೆಯೂ ಮುಗಿ ಬೀಳುವುದನ್ನು ಕಾಣುತ್ತೇವೆ. ಆದರೆ ಸಾವಿರಾರು ಎಕರೆಯಷ್ಟು ಭೂಮಿ ಪ್ರಭಾವಿಗಳ ಪಾಲಾಗಿರುವುದನ್ನು ಮಾತ್ರ ಇವರು ಕೈ ಕಟ್ಟಿ ನೋಡುತ್ತಾರೆ. ಇದರರ್ಥ ಏನು ? ಸರ್ಕಾರವೂ, ಅಧಿಕಾರಿ ವರ್ಗವೂ ಇದರಲ್ಲಿ ನೇರವಾಗಿ ಪಾಲು ಪಡೆದಿದೆ ಎಂದೇ ? ಸಿದ್ದರಾಮಯ್ಯನವರೇ ಉತ್ತರಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…