ವಿಷಯಕ್ಕೆ ಹೋಗಿ

ಅಣ್ಣನ ಸಾವನ್ನು ಬದಿಗಿಟ್ಟು ಸತ್ಯಾಗ್ರಹದಲ್ಲಿ ತೊಡಗಿದವರು....ಒಬ್ಬರು ಒಂದು ಪ್ರಬಲ ಹೋರಾಟವನ್ನು ಕೆಲವೇ ಸಮಾನ ಮನಸ್ಕರ ಜೊತೆಗೂಡಿ ಶುರು ಮಾಡುತ್ತಾರೆ. ಅದು ಸರ್ಕಾರಕ್ಕೂ ಬಿಸಿ ಮುಟ್ಟಿಸುವಂತಾ ಹೋರಾಟ. ಧರಣಿ ಸತ್ಯಾಗ್ರಹ ಶುರುವಾಗುತ್ತದೆ. ನಾಲ್ಕೈದು ದಿನ ಕಳೆದರೂ ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಹಾಗೆಯೇ ಒಂದು ದಿನ ಬೆಳಗ್ಗೆ ಏಳುವಾಗ ಒಂದು ಸುದ್ದಿ ಬರುತ್ತದೆ... ಅದು ಅವರ ಒಡಹುಟ್ಟಿದ ಅಣ್ಣ ನಿದನರಾಗಿರುವ ಸುದ್ದಿ! 

ಸಾವಿನ ಮನೆಗೆ ಹೋಗುವುದಾದರೆ ತಮ್ಮದೇ ನೇತೃತ್ವದ ಧರಣಿ ಸತ್ಯಾಗ್ರಹಕ್ಕೆ ಗೈರಾಗಬೇಕು. ಏನು ಮಾಡುವುದೆಂದು ಯೋಚಿಸಿದ ಅವರು ಬೇಗನೆ ತಯಾರಾಗಿ ಹೊರಡುತ್ತಾರೆ... ಸತ್ಯಾಗ್ರಹದ ಸ್ಥಳಕ್ಕೆ. 

ತಮ್ಮ ಪತ್ನ ಮಗನನ್ನು ತಮ್ಮ ಅಣ್ಣನ ಮನೆಗೆ ಕಳಿಸಿ ಎಂದಿನಂತೆ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಣ್ಣ ಸತ್ತ ವಿಷಯವನ್ನೂ ಸಹ ಉಳಿದವರಿಗ್ಯಾರಿಗೂ ಹೇಳದೇ ದುಃಖ ನುಂಗಿಕೊಂಡು ಸತ್ಯಾಗ್ರಹ ಮುಂದುವರಿಯುತ್ತದೆ... ಸುಮಾರು ನಕವತ್ತು ದಿನಗಳ ವರೆಗೆ!

ಇವರ ನ್ಯಾಯ ನಿಷ್ಠುರ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮಣಿಯುತ್ತದೆ. ಆಗ ತಮ್ಮೊಂದಿಗೆ ಭಾಗವಹಿಸಿದ ಹೋರಾಟಗಾರರಿಗೆ ತಮ್ಮ ಅಣ್ಣ ಸತ್ತು ಹೋಗಿರುವ ದುಃಖಕರ ವಿಷಯವನ್ನು ತಿಳಿಸುತ್ತಾರೆ!

ನೆನಪಿರಲಿ, ಇದು ಯಾವುದೋ ಹಳೆಯ ಕಾಲದ ಘಟನೆ ಅಲ್ಲ. ನಮ್ಮ ನಿಮ್ಮ ನಡುವೆಯೇ ಇರುವ ನ್ಯಾಯ ನಿಷ್ಟುರ ವ್ಯಕ್ತಿಯೊಬ್ಬರ ವಿಷಯ. ಅವರೇ 'ಭೂಕಬಳಿಕೆ ವಿರೋಧಿ ಹೋರಾಟ'ವನ್ನು ಪ್ರಾರಂಭಿಸಿ, ಸರ್ಕಾರದಿಂದ ಹೊಸ ಕಾನೂನು ಮತ್ತು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಯಾಗಲು ಕಾರಣರಾದ ಎ.ಟಿ. ರಾಮಸ್ವಾಮಿ!

ಅವರು ಹೋರಾಟ ಮಾಡಿದ್ದು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಧನಿಕರು ಲೂಟಿ ಮಾಡಿರುವ ಸರ್ಕಾರಿ ಭೂಮಿ ಮತ್ತೆ ಸರ್ಕಾರಕ್ಕೆ ಮರಳಿ ಅದರಿಂದ ಬಡವರಿಗೂ ಅನುಕೂಲವಾಗಲಿ ಎಂದು. ಅವರ ನಿಸ್ವಾರ್ಥ ಹೋರಾಟಕ್ಕೆ ಸ್ವಾತಂತ್ರ‍್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನಿ. ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕರವೇಯ ಶಿವರಾಮೇಗೌಡ ಮುಂತಾದ ಪ್ರಾಮಾಣಿಕರು ಬೆಂಬಲ ನೀಡಿದ್ದರು. ಈ ಹೋರಾಟಕ್ಕೆ ಸಿದ್ದರಾಮಯ್ಯನವರ ಸರ್ಕಾರವೂ ಮಣಿದಿದ್ದು ಭೂಕಬಳಿಕೆಯನ್ನು ಮರಳಿ ಪಡೆಯುವ ಸಲುವಾಗಿ ಇಬ್ಬರು ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ಮತ್ತು ಪ್ರತ್ಯೇಕ ನ್ಯಾಯಾಲಯಕ್ಕೂ ರಾಷ್ಟ್ರಪತಿಗಳಿಂದ ಅನುಮತಿ ದೊರೆತಿದೆ. 

ಈ ಹೋರಾಟದ ವಿಜೋತ್ಸವ ಇಂದು ಬೆಳಗ್ಗೆ ಬೆಂಗಳೂರಿನ ಪುರಭವನದ ಎದರು ಇದೆ. ಇಂತಹ ಪ್ರಾಮಾಣಿಕರಿಗೆ ನಮ್ಮೆಲ್ಲರ ಬೆಂಬಲವೂ ಇರಬೇಕು.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…