ವಿಷಯಕ್ಕೆ ಹೋಗಿ

ಸಾಲವನು ಕೊಂಬಾಗ ಕೆನೆಮೊಸರುಂಡಂತೆ...ಫೇಸ್‌ಬುಕ್ಕಿನಲ್ಲಿ ಯಾರೋ ಒಬ್ಬಾತ ಕಂಡವರ ಬಳಿಯೆಲ್ಲಾ ಸಾಲ ಪಡೆದು ಅದನ್ನು ಮರಳಿಸಲಾಗದೇ ಒದ್ದಾಡುತ್ತಿರುವ ಬಗ್ಗೆ ವಿಷಯಗಳು ಹರಿದಾಡುತ್ತಿವೆ.
ಸಾಲದ ಬಗ್ಗೆ ನನ್ನ ಅನುಭವಗಳು ಹೀಗಿವೆ.

ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಸಂಸ್ಥೆಯಲ್ಲಿ ಇದ್ದು ಕೆಲಸ ಮಾಡಿ ಒಂದಿಷ್ಟು ಹಣ ಸೇರಿಸಿಕೊಂಡು ಒಂದಿಷ್ಟು ಗೆಳೆಯರಿಂದ ಸಾಲ ಪಡೆದು ಪೋಟೋ ಸ್ಟುಡಿಯೋ ಒಂದನ್ನು ಅಲ್ಲೇ ಹಾಕಿದ್ದೆ. ಆದರೆ ಅದು ನಷ್ಟ ಹೊಂದಿತು. ಆಮೇಲೆ ಸಾಲ ತೀರಿಸಲಾಗದೇ ಎಷ್ಟು ಒದ್ದಾಡಿದೆ. ಯಾವುದೇ ಬೆಂಬಲವೂ ಇಲ್ಲದೇ ಚೆನ್ನೈನ ಬೀದಿಗಳಲ್ಲಿ ಅಲೆದಾಡಿದ್ದು, ಮನೆ ಮಠ ಇಲ್ಲದೇ ಫುಟ್‌ಪಾತ್‌ ಮೇಲೆ ಹಾಗೂ ಮೆರಿನಾ ಬೀಚ್‌ನ ಮರಳಿನ ಮೇಲೆ ಮಲಗುತ್ತಿದ್ದುದು (ಒಬ್ಬ ಗೆಳೆಯ ಜೊತೆಗಿದ್ದ), ಹೊಟ್ಟೆಗಿಲ್ಲದೇ ಕೇವಲ ಬೋಂಡ/ಬಜ್ಜಿ ತಿಂದುಕೊಂಡು ( ಅವನ್ನು ನಾಲ್ಕನೇ ತರಗತಿ ಓದುತ್ತಿದ್ದ ಒಬ್ಬ ಚಿಕ್ಕ ಹುಡುಗ ಕೊಡಿಸುತ್ತಿದ್ದ ! ) ದಿನಗಟ್ಟಲೇ ಬದುಕಿದ್ದು ನೆನೆಸಿಕೊಂಡರೆ ಮೈ ಜುಂ ಅನ್ನುತ್ತದೆ. ಸಾಲ ಅನ್ನುವುದು ಮನುಷ್ಯನನ್ನು ಎಂತಹ ಸ್ಥಿತಿಗೆ ಬೇಕಾದರೂ ತಳ್ಳುತ್ತದೆ ಅನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ. 


ಅಷ್ಟಾದ ನಂತರವೂ ಕಷ್ಟಪಟ್ಟು (ಈ ಸಮಯದಲ್ಲಿ ಒಂದೆರಡು ಅಡ್ಡದಾರಿಗಳು ಕಾಣಿಸಿದರೂ ಅತ್ತ ಹೋಗದೇ) ಎಲ್ಲಾ ಸಾಲ ತೀರಿಸಿ ಬೆಂಗಳೂರಿಗೆ ಬಂದೆ. ಆ ನಂತರ ಇಲ್ಲೂ ಕಷ್ಟ ಪಟ್ಟು ದುಡಿಯುತ್ತಿದ್ದೇನೆ. ತೀರಾ ಅನಿವಾರ್ಯದ ವಿಷಯ ಹೊರತಾಗಿ ಸಾಲ ಪಡೆಯುವುದನ್ನು ಬಿಟ್ಟಿದ್ದೇನೆ. ಅದೂ ಕೂಡಾ ಆತ್ಮೀಯರಾದ ಒಂದಿಬ್ಬರು ಗೆಳೆಯರ ಬಳಿ ಮಾತ್ರ ವ್ಯವಹಾರ. ಒಬ್ಬ ಗೆಳೆಯನಂತೂ ಆತನ ಕ್ರೆಡಿಟ್‌ ಕಾರ್ಡ್‌ ನಂಬರ್‌, ಪಾಸ್‌ವರ್ಡ್‌‌ಗಳನ್ನೇ ನನಗೆ ನೀಡಿದ್ದಾನೆ. ಅಗತ್ಯ ಬಿದ್ದಾಗ ಆನ್‌ಲೈನ್‌ ಖರೀದಿಗೆ ಅದನ್ನು ಉಪಯೋಗಿಸಿಕೊಂಡು ಹಣವಿರುವಾಗ ಅವನ ಖಾತೆಗೆ ಜಮಾ ಮಾಡುತ್ತೇನೆ. ಅವನೆಂದೂ ಲೆಕ್ಕ ಕೇಳಿಲ್ಲ, ನಾನೇ ಬರೆದಿಟ್ಟುಕೊಂಡು ಜಮಾ ಮಾಡುತ್ತೇನೆ. ಹಾಗಂತ ಅವನೇನೂ ಕೋಟ್ಯಾಧೀಶನಲ್ಲ. ನಂಬಿಕೆ ಅಷ್ಟೇ ಇಲ್ಲಿ ಕೆಲಸ ಮಾಡುತ್ತದೆ.

ಆದರೆ ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುವ ಮೂಲಕ ಅಥವಾ ಒಂದೆರಡು ಬಾರಿ ಭೇಟಿ ಮಾಡುವ ಮೂಲಕ ಲಕ್ಷಗಟ್ಟಲೆ ಸಾಲ ಎತ್ತಬಹುದು ಅಂದರೆ ನನಗಂತೂ ನಂಬಲು ಸಾಧ್ಯವಾಗುತ್ತಿಲ್ಲ. ಕೊಟ್ಟವನು ಕೋಡಂಗಿ, ಈಸಿಕೊಂಡವನು ಈರಭದ್ರ ಎಂಬ ಗಾದೆ ನೆನಪಗುತ್ತದೆ ಅಷ್ಟೇ. ನನಗಿಂತಾ ಕಿರಿಯರಿಗೆ ನನ್ನ ಸಲಹೆ ಏನೆಂದರೆ ಯಾವುದೇ ಕಾರಣಕ್ಕೂ ಸಾಲ ಪಡೆಯಬೇಡಿ. ವಿನಾಕಾರಣ ಕೊಡುವುದನ್ನೂ ಆದಷ್ಟು ಕಡಿಮೆ ಮಾಡಿ. ಹಾಸಿಗೆ ಇದ್ದಷ್ಟು ಕಾಲು ಚಾಚಿರಿ ಮತ್ತು ಸಾಲ ಕೇಳುವವರಿಗೂ ಅದನ್ನೇ ಹೇಳಿರಿ. ಇಂದು ಲಕ್ಷ ಕೊಡು, ನಾಳೆ ನಾನು ಕೋಟ್ಯಾಧೀಶನಾಗಿ ನಿನಗೆ ಹತ್ತು ಲಕ್ಷ ಹಿಂತಿರುಗಿಸುತ್ತೇನೆ ಅನ್ನುವಂತಹ ಮಾತನ್ನು ನಂಬಬೇಡಿ. ಹಾಗೆ ಹೇಳುವ ವ್ಯಕ್ತಿಗೆ ಈ ಮೊದಲೇ ಸಾಲ ಕೊಟ್ಟಿರುವಾತ ಕುತ್ತಿಗೆ ಹಿಸುಕುತ್ತಿರುತ್ತಾನೆ. ಅದರಿಂದ ಪಾರಾಗಲು ನಿಮಗೆ ಬಲೆ ಬೀಸುತ್ತಿದ್ದಾನೆಂದೇ ಅರ್ಥ. ಹಾಗೊಂದು ವೇಳೆ ಆತನಿಗೆ ತೀರಾ ಕಷ್ಟ ಇದೆ ಅಂತಾದರೆ ಕೈಲಾದ ಸಹಾಯ ಮಾಡಿ. ಸಾಲ ಕೊಟ್ಟು ನೀವೇ ಮುಳುಗಿ ಹೋಗುವಂತಹ ಕೆಲಸ ಮಾಡಿಕೊಳ್ಳಬೇಡಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…