ವಿಷಯಕ್ಕೆ ಹೋಗಿ

ಸನಾತನಿಗಳೂ ಮತ್ತವರ ಸೀರೆಯೂ...ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ 'ವಸ್ತ್ರ ಸಂಹಿತೆ' ಎಂಬ ನಾಲಾಯಕ್‌ ನೀತಿ. 

ಕೆಲವೇ ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಗಳು (ಇವರು ಅಂದಿನ ಪ್ರಭಲ ಜನಾಂಗ) ಒಂದು ನೀತಿ ರೂಪಿಸಿದ್ದರಂತೆ. ಅದೇನೆಂದರೆ "ವಿದೇಶಿಯರ ಮೂಲಕ ಭಾರತಕ್ಕೆ ಬಂದ ಕುಪ್ಪಸವನ್ನು ನಂಬೂದರಿ ಹೆಂಗಸರುಗಳಲ್ಲದೇ ಬೇರೆ ಜಾತಿಯ ಹೆಂಗಸರು ಧರಿಸಬಾರದು" ಎಂದು! ಇದರರ್ಥ ತಮ್ಮ ಮನೆ ಹೆಣ್ಣು ಮಕ್ಕಳು ಬೀದಿಯಲ್ಲಿ ಎದೆ ಮುಚ್ಚಿಕೊಂಡು ಮರ್ಯಾದೆಯುತವಾಗಿ ಓಡಾಡಲಿ, ಬೇರೆ ಜಾತಿಯ ಹೆಣ್ಣು ಮಕ್ಕಳು ಬೀದಿಯಲ್ಲಿ ಎಲ್ಲರಿಗೂ ಎದೆ ತೋರಿಸಿಕೊಂಡು ಓಡಾಡಲಿ ಎಂದಲ್ಲವೇ ? ಇನ್ನೂ ಹೇಳಬೇಕೆಂದರೆ ಇತರೆ ಹೆಣ್ಣುಮಕ್ಕಳ ಎದೆ ಸೌಂದರ್ಯವನ್ನು ತಾವು ಸವಿಯೋಣ, ನಮ್ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಡೋಣ ಎಂಬ ಮುಲ್ಲಾಗಳ ವಾದಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ. ಬ್ರಿಟೀಷರು ಬರುವ ಮುನ್ನ ಹೆಂಗಸರ ಮೇಲುಡುಗೆಗಳೇ ಇರಲಿಲ್ಲ ಅನ್ನೋದು ಕೂಡಾ ಒಪ್ಪಿಕೊಳ್ಳಲಾಗದ ಧರ್ಮಾಂಧತೆಯಲ್ಲಿ ಈ ಸನಾತನಿಗಳಿದ್ದಾರೆ.

ಇತ್ತೀಚಿನ ಬೆಳವಣಿಗೆ ಎಂದರೆ ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುತ್ತಿರುವ "ವಸ್ತ್ರ ಸಂಹಿತೆ". ನೆನಪಿರಲಿ, ಇದನ್ನು ರೂಪಿಸುವವರು ಗಂಡಸರು ಮತ್ತು ಇದು ಅನ್ವಯವಾಗುವುದು ಹೆಂಗಸರಿಗೆ, ಹುಡುಗಿಯರಿಗೆ!  ಅಂದರೆ ಹೆಣ್ಮಕ್ಕಳು ಯಾವ ಉಡುಗೆ ಹಾಕಬೇಕು ಅನ್ನೋದನ್ನ ಇಂದಿಗೂ ಗಂಡಸರೇ ನಿರ್ಧರಿಸುತ್ತಾರೆ ಎಂದರೆ ಎಂತಹ ವಿಷಮ ಸ್ಥಿತಿಯಲ್ಲಿ ಸ್ತ್ರೀಯರು ಬದುಕುತ್ತಿರಬಹುದು ? "ಹುಡುಗಿಯರು ಹೇಗೆ ಹೇಗೋ ವಸ್ತ್ರ ಧರಿಸುವುದರಿಂದಲೇ ಹುಡುಗರು ಕೆರಳಿ ಅತ್ಯಾಚಾರ ಮಾಡುತ್ತಾರೆ" ಎಂದು ವಾದಿಸುವ ಅವಿವೇಕಿಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಅಂದು ಇಂದ್ರ ಹೋಗಿ ಅಹಲ್ಯೆಯನ್ನು ಅತ್ಯಾಚಾರ ಮಾಡುವಾಗ ಆಕೆ ಯಾವ ಉದ್ರೇಕಕಾರಿ ಉಡುಗೆ ಧರಿಸಿದ್ದಳು ? ಕೀಚಕ ದ್ರೌಪದಿಯನ್ನು ಸರಸಕ್ಕೆ ಕರೆಯುವಾಗ ಆಕೆ ಯಾವ ಬ್ರಾಂಡ್‌ನ ಜೀನ್ಸ್‌ಪ್ಯಾಂಟ್‌ ಧರಿಸಿದ್ದಳು ? ಸ್ವಂತ ತಮ್ಮನ ಹೆಂಡತಿಯನ್ನು ವಾಲಿ ಹೊತ್ತೊಯ್ದು ಅರಮನೆಯಲ್ಲಿಟ್ಟು ಅತ್ಯಾಚಾರ ಮಾಡಬೇಕಾದರೆ ಆಕೆ ಯಾವ ಮಾಡರ್ನ್‌ ವಸ್ತ್ರ ಧರಿಸಿದ್ದಳು ? ಇವುಗಳಿಗೆಲ್ಲಾ ಉತ್ತರ ನೀಡಿಯಾರೇ ಸನಾತನಿಗಳು ? ಇವರದು ಕೂಡಾ ಒಂದು ಬಗೆಯ ಭಯೋತ್ಪಾದನೆಯೇ ಆಗಿದೆ.

ಸೆಕ್ಸಿ ಸೀರೆ !
ಇಂದಿನ ಪ್ರಜಾವಾಣಿಯಲ್ಲಿ (೨೦ ಜುಲೈ ೨೦೧೫) ಇಬ್ಬರು ಶಿಕ್ಷಕಿಯರು ಸೀರೆಯಿಂದ ಆಗುತ್ತಿರುವ ಕಿರಿಕಿರಿಯ ಬಗ್ಗೆ ಮನೋಜ್ಞವಾಗಿ ಬರೆದುಕೊಂಡಿದ್ದಾರೆ. ಅವೆರಡು ಪತ್ರಗಳನ್ನು ಓದಿದರೆ ಸಾಕು, ಸನಾತನಿಗಳ ಕುತಂತ್ರ ಸೀರೆಯ ಹೆಸರಲ್ಲಿ ಹೆಂಗಸರನ್ನು ಹೇಗೆ ನರಕದಲ್ಲಿ ಇಟ್ಟಿದೆ ಎಂಬುದನ್ನು ಅರಿಯಬಹುದು. 

ಸೀರೆ ಉಟ್ಟೊಡನೆಯೇ ಹೆಂಗಸರು ಮಹಾ ಮರ್ಯಾದೆಯುತವಾಗಿ ಕಂಡು ಬಿಡುತ್ತಾರೆ ಎಂಬ ಬೊಗಳೆ ವಾದವನ್ನು ಒಪ್ಪಲು ಸಧ್ಯವೇ ಇಲ್ಲ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮೇಡಂಗಳು ಸೀರೆಯುಟ್ಟು ಬಂದು ಅವಸ್ಥೆ ಪಡುವುದನ್ನು ಗಮನಿಸಿದ್ದೆ. ಎಷ್ಟೇ ನಾಜೂಕಾಗಿ ಸೀರೆಯುಟ್ಟು ಬಂದರೂ ಒಂದೆರಡು ತರಗತಿಗಳಲ್ಲಿ ಪಾಠ ಮಾಡುವ ಹೊತ್ತಿಗೆ ಅದು ಸಾಕಷ್ಟು ವ್ಯತ್ಯಾಸಗೊಂಡಿರುತ್ತದೆ. ಓಡಾಡಿಕೊಂಡು ಪಾಠ ಮಾಡುವಾಗ ಆ ಕಡೆ ಈ ಕಡೆ ತಿರುಗುವಾಗ ಎಡ ಭಾಗದಿಂದ ಕಾಣಿಸುವ ಹೊಟ್ಟೆ - ಸ್ತನಗಳ ಗಾತ್ರವನ್ನು ಮರೆ ಮಾಚಲಾಗದೇ, ಪಡ್ಡೆ ಹುಡುಗರ ಕಳ್ಳ ನೋಟವನ್ನು ಎದುರಿಸಲಾಗದೇ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಸ್ವಲ್ಪ ದೊಡ್ಡ ಸ್ತನಗಳಿರುವವರಾದರೆ ಅವರ ಅವಸ್ಥೆಯನ್ನು ನಾವು ವರ್ಣಿಸಲಾಗದು. ಸ್ವಲ್ಪ ಹಳಬರು ಹೇಗೋ ಸುಧಾರಿಸಿಕೊಳ್ಳುತ್ತಿದ್ದರಾದರೂ ಹೊಸ ಶಿಕ್ಷಕಿಯರು ಬಹಳ ತೊಂದರೆ ಅನುಭವಿಸುವುದು ಕಂಡು ಬರುತ್ತಿತ್ತು. ಒಂದೆಡೆ ಅನುಭವ ಇಲ್ಲದೇ ಉಟ್ಟು ಬರುವ ಸೀರೆಯ ಕಿರಿಕಿರಿಯಾದರೆ ಮತ್ತೊಂದೆಡೆ ಯಾವ ಭಾಗದಿಂದ ಏನು ಕಾಣಿಸುತ್ತದೋ, ಸೊಂಟದಲ್ಲಿ ಯಾವಾಗ ಜಾರುತ್ತದೋ ಎಂಬ ತಳಮಳದಲ್ಲೇ ಅವರು ಇರಬೇಕು. ಎಡಗೈ ಎತ್ತುವುವಾಗಲೂ ಯೋಚಿಸಿ, ಬಲಗೈ ಇಂದ  ಸೆರಗನ್ನು ಸರಿಯಾಗಿ ಎಳೆದು ಹಿಡಿದುಕೊಂಡು ಎತ್ತಬೇಕು. ಎಷ್ಟೋ ಸಮಯ ಇದನ್ನೆಲ್ಲಾ ಮರೆತು ತನ್ಮಯರಾಗಿ ಪಾಠ ಮಾಡುತ್ತಾ ಓಡಾಡುವಾಗ, ಹಲಗೆಯ ಮೇಲೆ ಬರೆಯುವಾಗ ಕಾಣಿಸುವ ಒಂದು ಬದಿಯ ನೋಟವನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ. ಒಬ್ಬರು ಮೇಡಂ ಅಂತೂ ಅದೆಷ್ಟೋ ಉದ್ದದ ಸೀರೆಯಿಂದ ಹೊಟ್ಟೆ ಮತ್ತು ಸ್ತನದ ಭಾಗಕ್ಕೆ ಮತ್ತೊಂದು ಸುತ್ತು ಬರುವಂತೆ ಸುತ್ತಿಕೊಂಡು ಬಿಗುಮ್ಮಾಗಿ ಪಿನ್‌ ಹಾಕಿಕೊಂಡು ಬರುತ್ತಿದ್ದರು! 

ಹಾಗೆಯೇ ನಾನು ಫೋಟೋ ಸ್ಟುಡಿಯೋ ಮಾಡಿದ್ದ ಸಮಯದಲ್ಲಿ ಅನೇಕ ಮದುವೆ ಸಮಾರಂಭಗಳಿಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಅಲ್ಲಿಯೂ ಇದೇ ಸಮಸ್ಯೆ ಎದುರಾಗುತ್ತಿತ್ತು. ಆರತಕ್ಷತೆ ಸಮಯದಲ್ಲಿ ಮದುಮಕ್ಕಳ ಕೈ ಮೇಲೆ ತೆಂಗಿನ ಕಾಯಿ ಇರಿಸಿ ಹಾಲು ಸುರಿಯುವಾಗ, ಬಾಗಿ ಆರತಿ ಎತ್ತುವಾಗ ಅನೇಕ ಹೆಂಗಸರು ಉಟ್ಟು ಬರುವ ಸೀರೆಯ ಬದಿಯಿಂದ ಕಾಣಿಸುವ ನೋಟ ಚಿತ್ರೀಕರಿಸುವುದು ಮುಜುಗರ ಉಂಟು ಮಾಡುತ್ತಿತ್ತು. ಅಲ್ಲಿ ಸುತ್ತಲೂ ಜನರು ಮುತ್ತಿಕೊಂಡು ಸಾಕಷ್ಟು ಸ್ಥಳವೂ ಇರುವುದಿಲ್ಲ. ಅವರು ಮದುಮಕ್ಕಳಿಗೆ ಹತ್ತಿರದ ಸಂಬಂಧಿಗಳಾಗಿರುವುದರಿಂದ ಚಿತ್ರಿಸದೇ ಬಿಡುವಂತೆಯೂ ಇಲ್ಲ. ಅದನ್ನು ಅಲ್ಲಿ ಹೇಳುವಂತೆಯೂ ಇಲ್ಲ. 

ಸೀರೆಗೂ ಮೊದಲು ಏನಿತ್ತು ?

ಹೆಂಗಸರಿಗೆ ಸೀರೆಯನ್ನೇ ಉಡಿ ಎಂದು ಹೇಳುವ ಯಾವನಾದರೂ ತಾನು ಪಂಚೆ ಉಟ್ಟು ಬರುವುದನ್ನು ನೋಡಿದ್ದೀರಾ ? ಪ್ಯಾಂಟ್‌ ಏನು ಭಾರತೀಯ ಸಂಸ್ಕೃತಿಯೇ ? ಕೂತರೆ ತೊಡೆ ಕಾಣಿಸುವ ದೊಗಲೆ ಚೆಡ್ಡಿ ಭಾರತದ್ದೇ ? ಹೆಂಗಸರ ಮೇಲೆ ಮಾತ್ರ "ವಸ್ತ್ರ ಸಂಹಿತೆ" ಹೇರುವ ಇವರುಗಳ ಮಕ್ಕಳು ಇನ್ಯಾವುದೋ ಕಾಲೇಜಿಗೆ ಜೀನ್ಸ್‌ ತೊಟ್ಟು ಹೋಗುವುದೂ ಇದೆ. ಸೀರೆ ಉಡುವುದನ್ನು ಇವರುಗಳು "ಭಾರತೀಯ ಸಂಸ್ಕೃತಿ" ಎಂದು ಬೊಗಳೆ ಹೊಡೆದು ಪ್ರಚಾರ ಮಾಡುತ್ತಾರೆ. ಸೀರೆ ಇದ್ದಕ್ಕಿದ್ದಂಗೆ ಭಾರತದಲ್ಲಿ ಶುರುವಾದದ್ದಲ್ಲ. ಅದಕ್ಕೂ ಮೊದಲು ಮಾನವರು ತಮ್ಮ ಮರ್ಮಾಂಗ ಮುಚ್ಚಿಕೊಳ್ಳಲು ಪ್ರಾಣಿಗಳ ಚರ್ಮ, ಎಲೆ, ಮರದ ತೊಗಟೆಗಳನ್ನು ಉಪಯೋಗಿಸುತ್ತಿದ್ದರು. ಅದು ಮಾನ ಮುಚ್ಚಿಕೊಳ್ಳುವುದಕ್ಕಲ್ಲ, ಹುಳ ಹುಪ್ಪಟೆಗಳಿಂದ ತೊಂದರೆ ನಿವಾರಿಸಲು ಮಾತ್ರ. ಕಾಲ ಕಳೆದಂತೆ ಅವುಗಳು ಅಭ್ಯಾಸವಾಗುತ್ತಾ ಹೋಗಿ ಮರ್ಮಾಂಗಕ್ಕೆ ಏನಾದರೂ ಮರೆ ಇಲ್ಲದಿದ್ದರೆ ಸಂಕೋಚ ಪಡುವಂತಹ ಭಾವನೆ ಬೆಳೆಯಿತು. ಇದು ಮುಂದೆ 'ಮಾನ ಮುಚ್ಚುವ' ವಸ್ತ್ರ ಧರಿಸಲು ಕಾರಣವಾಯ್ತು. ತೀರಾ ಇತ್ತೀಚಿನ ದಶಕಗಳ ವರೆಗೂ ಹಳ್ಳಿಯ ಹೆಂಗಸರು ಕುಪ್ಪಸವನ್ನು ದಿನನಿತ್ಯ ಧರಿಸುತ್ತಿರಲಿಲ್ಲ. ತಮಿಳುನಾಡಿನ ಹಲವಾರು ಹಳ್ಳಿಗಳಲ್ಲಿ ಮುದುಕಿಯರು ಮೇಲುಡುಗೆ ಧರಿಸದೇ ಬರೇ ಸೀರೆ ಸುತ್ತಿಕೊಂಡು ಓಡಾಡುವುದನ್ನು ನೋಡಬಹುದು. ಹಾಗೆಯೇ ಅಮೆಜಾನ್‌ ಕಾಡುಗಳಲ್ಲಿರುವ ಟ್ರೈಬ್‌ ಮಾನವರು ಇಂದಿಗೂ ಯಾವುದೇ ಉಡುಪು ಧರಿಸುವುದಿಲ್ಲ, ಮತ್ತು ಅವರಿಗೆ ಸಂಕೋಚವೂ ಇಲ್ಲ. ಅಂದರೆ ಇದರರ್ಥ ವಸ್ತ್ರ ಅನ್ನುವುದು ಆಧುನಿಕ ಮಾನವನ ಬಳಕೆಯ ಒಂದು ವಸ್ತು ಮಾತ್ರ. ಅದನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಅನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…