ವಿಷಯಕ್ಕೆ ಹೋಗಿ

ಜನ ಮೆಚ್ಚಿದ ಯುವ ನಾಯಕ ಮಲ್ಲಿಕಾರ್ಜುನ ಹಕ್ರೆ

ಮೊನ್ನೆ ಊರಿಗೆ ಹೋದಾಗ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ಯಾರ‍್ಯಾರು ಗೆದ್ದರು, ಎಷ್ಟೆಷ್ಟು ಕೊಟ್ಟರು ಎಂಬುದರ ಬಗ್ಗೆಯೇ ಮಾತು ಕೇಳಿ ಬರುತ್ತಿದ್ದವು. ಬಹುತೇಕ ದುಡ್ಡು ಹಂಚಿದ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ ಎಂಬುದೂ ಗೊತ್ತಾಯಿತು. ಇನ್ನು ಕೆಲವು ಕಡೆ ಪಕ್ಷ ನೀಡಿದ ದುಡ್ಡನ್ನು ಮಧ್ಯವರ್ತಿಗಳು ಹೊಡೆದು ಹಾಕಿಕೊಂಡು ಪಕ್ಷದ ಅಭ್ಯರ್ಥಿಗಳು ಸೋಲುವಂತೆಯೂ ಮಾಡಿದ್ದಾರೆ. ಇದೆಲ್ಲಾ ಬದಿಗಿರಲಿ, ನನ್ನ ಗಮನ ಸೆಳೆದ ಒಬ್ಬ ಅಭ್ಯರ್ಥಿಯ ಬಗ್ಗೆ ಹೇಳಲೇ ಬೇಕು.

ಅವರ ಹೆಸರು "ಮಲ್ಲಿಕಾರ್ಜುನ ಹಕ್ರೆ"

ಜನರೆಲ್ಲಾ ಇವರನ್ನ ಪ್ರೀತಿಯಿಂದ "ಮಲ್ಲಿಕ್‌ ಗೌಡರು" ಎಂದೇ ಕರೆಯುತ್‌ಆರೆ. ಸಾಗರ ತಾಲ್ಲೂಕಿನಲ್ಲಿ ಯಾರನ್ನೇ ಕೇಳಿದರೂ ಗೊತ್ತಿಲ್ಲ ಅನ್ನುವ ಸಂಭವ ಕಡಿಮೆ. ಈಗಾಗಲೇ ಕಾಂಗ್ರೆಸ್‌ ಪಕ್ಷದ ಮೂಲಕ ತಾ.ಪಂ. ಅಧ್ಯಕ್ಷರಾಗಿಯೂ ಹೆಸರು ಮಾಡಿರುವ ಇವರು ನೇರ, ನಿಷ್ಟುರ ಮತ್ತು ಅದಕ್ಕಿಂತಾ ಹೆಚ್ಚಾಗಿ ಪ್ರಮಾಣಿಕ ಅಲ್ಲದೇ ಬಡವರ ಕಾಳಜಿ ಇರುವ ವ್ಯಕ್ತಿ. ಬಡವರಿಂದ ಲಂಚ ಕೇಳುವ ಯಾವ ಅಧಿಕಾರಿಯನ್ನೂ ಇವರು ನೆಮ್ಮದಿಯಿಂದ ಇರಲು ಬಿಟ್ಟವರಲ್ಲ. "ಯಾವ ಅಧಿಕಾರಿಗೂ ಯಾವ ಕೆಲಸಕ್ಕಾಗಿಯೂ ನಯಾಪೈಸೆ ಲಂಚ ಕೊಡಬೇಡಿ. ಅವರು ಕೇಳಿದರೆ ನನಗೆ ತಿಳಿಸಿ" ಎಂದು ಹೇಳುವ ಇವರು, ಯಾರಾದರೂ ಲಂಚ ಕೇಳಿದ ವಿಷಯ ತಿಳಿದರೆ ನಿಂತ ನಿಲುವಿನಲ್ಲೇ ಆ ಅಧಿಕಾರಿಗೆ ಕರೆ ಮಾಡಿ ಬೆವರಿಳಿಸುವ ಚಾತಿಯುಳ್ಳವರು. ಈ ಕಾರಣಕ್ಕಾಗಿಯೇ ಸಾಗರದ ಬಡ ಬಗ್ಗರು ಮಲ್ಲಿಕ ಗೌಡರನ್ನು ಅಕ್ಕರೆಯಿಂದ ಕಾಣುತ್ತಾರೆ.

ಇಂತವರು ಕಾಂಗ್ರೆಸ್‌ನಲ್ಲಿ ಸಿಗುವುದೇ ಅಪರೂಪ. ಆದರೂ ಕಾಂಗ್ರೆಸ್‌ನ ಕೆಟ್ಟ ರಾಜಕಾರಣದಲ್ಲಿ ಇವರು ಕಳೆದು ಹೋಗುತ್ತಿದ್ದಾರೆ ಅನ್ನಿಸುತ್ತಿದೆ. ಮೊನ್ನೆ ನಡೆದ ಚುನಾವಣೆಯಲ್ಲಿ ಮಲ್ಲಿಕ ಗೌಡರು ತಮ್ಮ ಜಿ.ಪಂ.ಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದರು. ಈಗಾಗಲೇ ತಾ.ಪಂ.ನಿಂದ ಗೆದ್ದು ಒಮ್ಮೆ ಅಧ್ಯಕ್ಷರೂ ಆಗಿರುವ ಗೌಡರು ಈ ಬಾರಿ ಜಿ.ಪಂ.ಗೆ ಸ್ಪರ್ಧಿಸುವುದು ಸರಿಯೂ ಆಗಿತ್ತು. ನಿಜವಾಗಿ ನೋಡಿದರೆ ಕಾಗೋಡು ತಿಮ್ಮಪ್ಪ ಒಬ್ಬರಿಲ್ಲದಿದ್ದರೆ ಮಲ್ಲಿಕ ಗೌಡರೇ ಸಾಗರ ಕ್ಷೇತ್ರಕ್ಕೆ ವಿಧಾನಸಭಾ ಅಭ್ಯರ್ಥಿ. ಆದರೆ ಕಾಂಗ್ರೆಸ್‌ನ ಕೊಳಕು ರಾಜಕಾರಣ ಅದಕ್ಕೆ ಅವಕಾಶ ಕೊಡದೇ ಅವರ ಆಸೆಗೇ ತಣ್ಣೀರೆರಚಿದರು. ಜಿ.ಪಂ. ಗೆ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದರು. ಗೌಡರ ತಾ.ಪಂ. ಕ್ಷೇತ್ರವಾದ ಯಡಜಿಗಳೇಮನೆ ಕ್ಷೇತ್ರಕ್ಕೂ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಲಾಯ್ತು. ಇದರಿಂದ ಬೇಸತ್ತ ಗೌಡರು ಚುನಾವಣೆಯಿಂದಲೇ ಹೊರಗುಳಿದುಬಿಟ್ಟರು. ಪಕ್ಷೇತರರಾಗಿ ಸ್ಪರ್ಧಿಸಿದ್ದರೆ ಕಂಡಿತಾ ಗೆದ್ದು ಬರುತ್ತಿದ್ದರು. ಆದರೆ ಕಾಂಗ್ರೆಸ್‌ನೊಂದಿಗೆ ಭಾವನಾತ್ಮಕವಾಗಿ ಬೆರೆತಿರುವುದರಿಂದ ಅದನ್ನು ಬಿಟ್ಟು ಬರಲು ಅವರಿಂದ ಸಾಧ್ಯವಾಗಲಿಲ್ಲ.

ಇದು ಇಡೀ ತಾಲ್ಲೂಕಿನ ಜನರಿಗೇ ಆಘಾತದ ವಿಷಯವಾಗಿತ್ತು. ಏಕೆಂದರೆ ಮಲ್ಲಿಕ್‌ಗೌಡರು ಅಧಿಕಾರದಲ್ಲಿ ಇರಬೇಕು. ಆಗ ಮಾತ್ರ ಅಧಿಕಾರಿಗಳು ಅವರಿಗೆ ಬಗ್ಗುತ್ತಾರೆ. ಇಲ್ಲವೆಂದರೆ ಬಡಬಗ್ಗರಿಗೆ ಲಂಚಕೋರ ಅಧಿಕಾರಿಗಳು ಕಂಡಿತಾ ನೀರು ಕುಡಿಸುತ್ತಾರೆ. ಇದರಿಂದ ಹೆದರಿದ ಆವಿನಳ್ಳಿಯ ಜನರು ತಾವೇ ಒಂದು ತೀರ್ಮಾನಕ್ಕೆ ಬಂದು ತಮ್ಮ ಕ್ಷೇತ್ರಕ್ಕೇ ಗೌಡರನ್ನು ಕಾಂಗ್ರೆಸ್‌ನಿಂದ ನಿಲ್ಲಿಸಿಕೊಳ್ಳಲು ಇಚ್ಚಿಸಿದರು. ಗೌಡರ ಹಕ್ರೆಯ ಮನೆಗೆ ನೂರಾರು ಜನ ಬಂದು ಧರಣಿ ಕೂತರು. "ಆವಿನಳ್ಳಿ ತಾ.ಪಂ. ಕ್ಷೇತ್ರದಿಂದ ಸ್ಪರ್ಧಿಸಲೇಬೇಕು, ತಾವೂ ಅಧಿಕಾರದಲ್ಲಿ ಇರಲೇ ಬೇಕು." ಎಂದು ಹಠ ಹಿಡಿದರು. ಸ್ಪರ್ಧಿಸಿದರೆ ಜಿ.ಪಂ. ನಿಂದಲೇ ಸ್ಪರ್ಧಿಸಬೇಕು ಎಂದುಕೊಂಡಿದ್ದ ಮಲ್ಲಿಕ ಗೌಡರು ಕೊನೆಗೂ ಜನರ ಮನವಿಗೆ ಮಣಿದು ಆವಿನಳ್ಳಿ ತಾ.ಪಂ. ಕ್ಷೇತ್ರದಿಂದ ಸ್ಪರ್ಧಿಸಿದರು. ಜನರು ಹೇಳಿದಂತೆಯೇ ಅವರನ್ನು ಗೆಲ್ಲಿಸಿಕೊಂಡಿದ್ದೂ ಆಯ್ತು. ಕಾಂಗ್ರೆಸ್‌ನ ಹಿರಿಯ ರಾಜಕಾರಣಿಗಳ ಜೊತೆ ಪಿತೂರಿ ನಡೆಸಿ ಪ್ರಮಾಣಿಕ ಗೌಡರಿಗೆ ಟಿಕೇಟು ತಪ್ಪಿಸಿದ ಕುಶಿಯಲ್ಲಿ ಕುಣಿದು ಕುಪ್ಪಳಿಸಿದವರೆಲ್ಲಾ ಈಗ ಗೌಡರ ಈ ಆಗಮನದಿಂದ ದಿಗಿಲು ಬಿದ್ದಿದ್ದಾರಂತೆ!

ಏನೇ ಆದರೂ ಶಿವಮೊಗ್ಗೆ ಜಿಲ್ಲೆಯಲ್ಲಿ ನಶಿಸುತ್ತಿರುವ ಕಾಂಗ್ರೆಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಲ್ಲಿಕ ಗೌಡರಂತಹ ಪ್ರಾಮಾಣಿಕರಿಗೆ ಮಣೆ ಹಾಕಲೇ ಬೇಕಾಗಿದೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…