ವಿಷಯಕ್ಕೆ ಹೋಗಿ

ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ!


ನಾವು, ಅಂದರೆ ಕನ್ನಡಿಗರು ಒಂದು ವಿಷಮ ಪರಿಸ್ಥಿತಿಯಲ್ಲಿ ಇದ್ದೇವೆ. ನಮ್ಮ ಜೊತೆ ನಮ್ಮ ಕನ್ನಡ ನುಡಿಯೂ ಅತಂತ್ರವಾಗುತ್ತಿದೆ. ಇದಕ್ಕೆ ಕಾರಣ ಯಾವುದೋ ಹೊರ ದೇಶದ ಜನರೋ, ಅಥವಾ ಹೊರ ದೇಸದ ಭಾಷೆಯೋ ಅಲ್ಲ, ಬದಲಾಗಿ ನಮ್ಮದೇ ದೇಶದ ಹಿಂದಿ! ಇಂದು ಹಿಂದಿ ಎಂಬ ಪೆಡಂಭೂತ ದಿನ ದಿನವೂ ಕನ್ನಡ ನಾಡನ್ನು, ನಮ್ಮ ನುಡಿಯನ್ನು, ಕೊನೆಗೆ ಕನ್ನಡಿಗರನ್ನೂ ನುಂಗಿ ಹಾಕುತ್ತಲಿದೆ. ಆದರೆ ನಿರ್ಲಜ್ಜರಾದ ಕನ್ನಡಿಗರು ಕೇವಲ ದೇಶಪ್ರೇಮದ ಹೆಸರಲ್ಲಿ ಎಲ್ಲವನ್ನೂ ಸಹಿಸಿಕೊಂಡು ಸಹನಾಶೀಲರಾಗಿ ಕೊರಗುತಿದ್ದೇವೆ.
ಕೆಲವು ವರ್ಷಗಳ ಹಿಂದೆ ಆಂಗ್ಲ ಶಾಲೆಗಳು ಹೆಚ್ಚು, ಹೆಚ್ಚು ತಲೆ ಎತ್ತತೊಡಗಿದಾಗ ಕನ್ನಡಿಗರು ಆತಂಕಗೊಂಡಿದ್ದರು. ಮುಂದೆ ಒಂದು ದಿನ ಈ ಪರಕೀಯ ಆಂಗ್ಲ ನುಡಿ ನಮ್ಮ ಕನ್ನಡ ನುಡಿಯನ್ನೇ ತಿಂದು ಹಾಕಲಿದೆ ಎಂದು ಭಯಗೊಂಡಿದ್ದಿದೆ. ಆದರೆ ಕಾಲ ಕಳೆದಂತೆ ಆಂಗ್ಲದಿಂದ ಕನ್ನಡಕ್ಕೆ ಅಷ್ಟೇನೂ ತೊಂದರೆ ಇಲ್ಲ ಅನ್ನುವುದು ಗೊತ್ತಾಯಿತು. ಹಾಗೆಯೇ ಲೋಕಜ್ಞಾನಕ್ಕಾಗಿ, ಪ್ರಪಂಚದ ಆಗು ಹೋಗುಗಳ ತಿಳುವಳಿಕೆಗಾಗಿ, ದೈನಂದಿನ ವಿಜ್ಞಾನದ ಬೆಳವಣಿಗೆಗಳ ಮಾಹಿತಿಗಾಗಿ ಆಂಗ್ಲ ನುಡಿ ಅತ್ಯವಶ್ಯ ಎಂಬ ಸತ್ಯವೂ ಅರವಿಗೆ ಬಂತು. ಆದರೆ ಅಷ್ಟರಲ್ಲಾಗಲೇ ಇನ್ನೊಂದು ಹಿಂಬಾಗಿಲಿನಿಂದ ಹಿಂದಿ ಎಂಬ ಜಂತುವೊಂದು ಸದ್ದಿಲ್ಲದೇ ಸುಂದರವಾದ ವೇಶವೊಂದನ್ನು ತೊಟ್ಟು ಬಂದು ನಮ್ಮ ನಾಡನ್ನು ಮತ್ತು ನಮ್ಮ ಮನ, ಮನೆಯನ್ನು ಸೇರಿಕೊಂಡಾಗಿತ್ತು. ಹಾಗೆ ಅದು ತೊಟ್ಟು ಬಂದ ನಕಲಿ ವೇಶದ ಹೆಸರೇ "ರಾಷ್ತ್ರಭಾಷೆ".

ಹಿಂದಿ ನಮ್ಮ ರಾಷ್ಟ್ರಭಾಷೆಯೇ ?
ಕಂಡಿತಾ ಅಲ್ಲ, ಇದನ್ನು ಹೇಳುತ್ತಿರುವುದು ನಾನಲ್ಲ, ಗುಜರಾತ್‌ ಹೈಕೋರ್ಟ್‌ ಇದನ್ನು ೨೦೧೦ರ ತನ್ನ ಒಂದು ತೀರ್ಪಿನಲ್ಲಿ ಸ್ಪಷ್ಟ ಪಡಿಸಿದೆ. ೨೦೦೯ರಲ್ಲಿ ವ್ಯಕ್ತಿಯೊಬ್ಬರು "ಎಲ್ಲಾ ವಸ್ತುಗಳ ಮೇಲೆ ಮಾಹಿತಿಯನ್ನು ಕಡ್ಡಾಯವಾಗಿ ರಾಷ್ಟ್ರಭಾಷೆಯಾದ ಹಿಂದಿಯಲ್ಲಿ ಮುದ್ರಿಸಲು ಕಾನೂನು ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ಕೊಡಬೇಕು" ಎಂದು ಹೇಳಿಕೊಂಡು ಗುಜರಾತ್‌ ಹೈಕೋರ್ಟ್‌‌ಗೆ ಸಾರ್ವಜನಿಕ ಹಿತಾಸಕ್ತಿ ದೂರೊಂದನ್ನು ದಾಖಲಿಸಿದ್ದರು. ಅದನ್ನು ೨೦೧೦ರಲ್ಲಿ ತಿರಸ್ಕರಿಸಿದ ನ್ಯಾಯಾಲಯವು "ಭಾರತ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ, ಹಾಗಾಗಿ ಈ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ." ಎಂದು ಸ್ಪಷ್ಟವಾಗಿ ಹೇಳಿತು. ಅದೇ ರೀತಿ RTI ಮೂಲಕ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ಕೂಡಾ "ಸಂವಿದಾನದ ಪ್ರಕಾರ ಯಾವುದೇ ರಾಷ್ಟ್ರಭಾಷೆ ನಮ್ಮ ದೇಶಕ್ಕೆ ಇಲ್ಲ." ಎಂದು ಸ್ಪಷ್ಟ ಪಡಿಸಿದೆ. ಹಾಗಿದ್ದರೆ ಹಿಂದಿಯ ಪಾತ್ರ ಏನು ?
ನಮ್ಮ ದೇಶದ ಸಂವಿಧಾನದ ಪ್ರಕಾರ ದೇಶದ ೨೨ ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡಾ ಒಂದು. ಅವುಗಳಲ್ಲಿ ನಮ್ಮ ಕನ್ನಡವೂ ಸೇರಿದೆ. ಆದರೆ ಸಂವಿಧಾನದ ಕೆಲವೊಂದು ಕಲಂಗಳು ಹಿಂದಿಗೆ ಕೊಂಚ ಅಧಿಕ ಸ್ಥಾನಮಾನ ಕೊಟ್ಟಿವೆ. ಅವುಗಳಲ್ಲಿ ಪ್ರಮುಖವಾದುದು "ಆಡಳಿತ ಭಾಷೆ" ಅನ್ನುವುದೂ ಒಂದು. ಆದರೆ ಒಂದು ವಿಷಯವನ್ನು ಇಲ್ಲಿ ನಾವು ಗಮನಿಸಬೇಕು. ಆಡಳಿತ ಭಾಷೆಗೂ ರಾಷ್ಟ್ರಭಾಷೆಗೂ ಅಗಾಧ ವ್ಯತ್ಯಾಸವಿದೆ. ಆಡಳಿತ ಭಾಷೆಯ ಉದ್ದೇಶ (Communication) ಸಂವಹನವಷ್ಟೇ. ಹಿಂದಿಯಂತೆಯೇ ಇಂಗ್ಲೀಷ್‌ ಕೂಡಾ ನಮ್ಮ ದೇಶದ ಇನ್ನೊಂದು ಆಡಳಿತ ಭಾಷೆಯೇ ಆಗಿದೆ. 
ಆದರೆ ರಾಷ್ಟ್ರಭಾಷೆ ಅನ್ನುವುದರ ಸ್ಥಾನ ಬೇರೆಯದೇ ಅಗುತ್ತದೆ. ವಿಶ್ವದಲ್ಲಿ ಕೆಲವೇ ಕೆಲವು ದೇಶಗಳು ಮಾತ್ರ ರಾಷ್ಟ್ರಭಾಷೆಯನ್ನು ಹೊಂದಿವೆ. ಅಲ್ಬೇನಿಯಾ, ಅಲ್ಜೀರಿಯಾ, ಅಂಡೋರಾ, ಬಲ್ಗೇರಿಯಾ ಮುಂತಾದ ದೇಶಗಳು ತಮ್ಮ ದೇಶದ ಭಾಷೆಗಳನ್ನು ರಾಷ್ಟ್ರಭಾಷೆ ಎಂದು ಘೋಷಿಸಿಕೊಂಡಿವೆ. ಆದರೆ ಇವೆಲ್ಲಾ ಚಿಕ್ಕ ಚಿಕ್ಕ ದೇಶಗಳು ಮತ್ತು ಈ ದೇಶಗಳ ಮೂಲ ಭಾಷೆ ಒಂದೇ ಆಗಿದೆ. ಅಂತಹ ಸಮಯದಲ್ಲಿ ರಾಷ್ಟ್ರಭಾಷೆಯನ್ನು ಘೋಷಿಸಲು ಮತ್ತು ಪೋಷಿಸಲು ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಯಾವುದೇ ದೊಡ್ಡ ರಾಷ್ಟ್ರವನ್ನು ತೆಗೆದುಕೊಂಡರೂ ಅಲ್ಲಿ ಹತ್ತಾರು ನುಡಿಗಳು ಪ್ರಚಲಿತವಿರುವುದನ್ನು ಕಾಣಬಹುದು. ಹಾಗಾಗಿ ಯಾವುದೇ ದೊಡ್ಡ ದೇಶ ರಾಷ್ಟ್ರಭಾಷೆಯನ್ನು ಹೊಂದಿಲ್ಲ. ಬದಲಾಗಿ ಆಡಳಿತಭಾಷೆಯನ್ನು ಮಾತ್ರ ಹೊಂದಿವೆ. ಅದರಂತೆಯೇ ನಮ್ಮ ಭಾರತವೂ ಸಹ.
ಆದರೆ ಆಗಿರುವುದೇನು ? ನಮ್ಮ ದೇಶದಲ್ಲಿ ಈಗಲೂ ೧೮೦೦ಕ್ಕೂ ಹೆಚ್ಚು ಸಕ್ರಿಯ ನುಡಿಗಳು ಇವೆ. ಅವುಗಳಲ್ಲಿ ೨೨ ನುಡಿಗಳನ್ನು ಒಂದು ಕೋಟಿಗೂ ಹೆಚ್ಚಿನ ಜನರು ಆಡುತ್ತಾರೆ. ನಮ್ಮ ಕನ್ನಡವನ್ನೇ ತೆಗೆದುಕೊಂಡರೂ ಸುಮಾರು ಆರು ಕೋಟಿ ಜನರು ಕನ್ನಡ ಮಾತನಾಡುತ್ತಾರೆ. ಹಾಗೆಯೇ ನಾಲಕ್‌ಉ ಕೋಟಿಗಿಂತಲೂ ಹೆಚ್ಚಿನ ಜನರಿಗೆ ಕನ್ನಡ ಮಾತೃಬಾಷೆಯಾಗಿದೆ. ನೈಜ ವಿಷಯ ಹೀಗಿರುವಾಗ ಯಾಕೆ ಹಿಂದಿಯನ್ನು ರಾಷ್ಟ್ರಭಾಷೆಯ ಹೆಸರಲ್ಲಿ ಎಲ್ಲೆಡೆ ತುರುಕಲಾಗುತ್ತಿದೆ ? ಈ ಸುಳ್ಳನ್ನು ಎಷ್ಟು ಸುವ್ಯವಸ್ಥಿತವಾಗಿ ಜನರ ತಲೆಯಲ್ಲಿ ತುಂಬಲಾಗಿದೆಯೆಂದರೆ ಇಂದು ನೀವು ಯಾರನ್ನೇ ಕೇಳಿದರೂ ಸುಮಾರು ೯೫% ಜನ "ನಮ್ಮ ರಾಷ್ಟ್ರಭಾಷೆ ಹಿಂದಿ" ಎಂದೇ ಹೇಳುತ್ತಾರೆ. (ಹಾಗೆಯೇ ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ ಎಂಬುದಾಗಿಯೂ ಹೇಳಲಾಗುತ್ತಿದೆ, ಆದರೆ ಅದಕ್ಕೂ ಸಹ ಯಾವುದೇ ಮಾನ್ಯತೆ ಇಲ್ಲ ಎಂಬುದು ಇತ್ತೀಚಿನ RTI ಮಾಹಿತಿಯಿಂದ ಬಹಿರಂಗವಾಗಿದೆ.)

ಹಿಂದಿ ಭಾಷೆ ಮತ್ತು ಹಿಂದಿ ದೇಶ!

ನಾವೆಲ್ಲಾ ಅತ್ಯಂತ ಶ್ರದ್ದೆ ಮತ್ತು ಗೌರವದಿಂದ ಈ ನಮ್ಮ ಭಾರತವನ್ನು ಕಾಣುತ್ತೇವೆ. ಆದರೆ ಹಾಗೆ ಅತಿ ಹೆಚ್ಚಿನ ದೇಶಭಕ್ತಿ ಬೆಳೆಸಿಕೊಳ್ಳುತ್ತಲೇ ತಮ್ಮ ತಾಯಿನುಡಿಯು ಅವಗಣನೆಗೆ ಒಳಗಾಗುತ್ತಿರುವುದನ್ನು ಮರೆಯುತ್ತೇವೆ. ಈ ದೇಶದ ಆಡಳಿತ ಹೇಗೆ ನಮ್ಮ ನಾಡು, ನುಡಿಯನ್ನು ಇಂಚು ಇಂಚಾಗಿ ತುಳಿದು ಹಾಕುತ್ತಿದೆ ಎಂಬುದನ್ನು ಕಂಡೂ ಕಾಣದಂತೆ ಹಗಲುಗುರುಡರಾಗಿ ಮುಂದೆ ಸಾಗುತ್ತಿದ್ದೇವೆ. ನಮ್ಮ ನಾಡು ನುಡಿಯನ್ನು "ದೇಶಪ್ರೇಮ"ದ ಹೆಸರಲ್ಲಿ ಹಿಂದಿಯವರಿಗೆ ದಾರೆಯೆರೆಯುತ್ತಿದ್ದೇವೆ.
ಈಗ ನೀವು ಯಾವುದೇ ಕೆಂದ್ರ ಸರ್ಕಾರಿ ಕಚೇರಿಗೆ ಹೋಗಿ ನೋಡಿ, ಅಲ್ಲಿ ಹಿಂದಿ ರಾರಾಜಿಸುತ್ತದೆ. ರೈಲು, ಬ್ಯಾಂಕು, ಪೋಸ್ಟ್ ಆಫೀಸು - ಹೀಗೆ ಎಲ್ಲಿ ನೋಡಿದರೂ ಹಿಂದಿ ಮತ್ತು ಹಿಂದಿ ಜನ! ಇದ್ದುದರಲ್ಲಿ ದೂರವಾಣಿ ಇಲಾಖೆ ಪರವಾಗಿಲ್ಲ, ಇದಕೆ ಕಾರಣ ಇದರಲ್ಲಿನ ಬಲಿಷ್ಠ ಕನ್ನಡ ಸಂಘ ಅನ್ನುವುದೂ ನಿಜ. ಬ್ಯಾಂಕ್ ಗಳಂತೂ ಹಿಂದಿ ಹೇರಿಕೆಯ ಕೇಂದ್ರ ಬಿಂದುಗಳಾಗಿ ಹೋಗಿವೆ. ನಗರ ಪಟ್ಟಣಗಳಿಂದ ಹಿಡಿದು ಹಳ್ಳಿಯ ಶಾಖೆಗಳಲ್ಲಿ ಕೂಡಾ ಹಿಂದಿ ನಾಡಿನ ಜನರು ಬಂದು ಕೂತಿದ್ದಾರೆ. ಹೀಗೆ ನಮ್ಮ ನಾಡಿನೊಳಗೆ ಬಂದು ಹೊಟ್ಟೆಪಾಡು ನೋಡಿಕೊಳ್ಳುತ್ತಿರುವ ಈ ಹಿಂದಿ ಜನರು ಕನ್ನಡವನ್ನು ಕಲಿತು, ಕನ್ನಡಿಗರೊಂದಿಗೆ ಬೆರೆಯುವುದಾಗಿದ್ದರೆ ತೊಂದರೆ ಏನೂ ಇರಲಿಲ್ಲ. ಆದರೆ ನಡೆಯುತ್ತಿರುವುದಾದರೂ ಏನು?
ಹೊರ ರಾಜ್ಯದಿಂದ ಬಂದು ಇಲ್ಲಿ ಉದ್ಯೋಗ ಕಂಡುಕೊಂಡಿರುವ ಹಿಂದಿಗರು ಸುತಾರಾಂ ಕನ್ನಡ ಕಲಿಯುತ್ತಿಲ್ಲ! ವರ್ಷಗಟ್ಟಲೇ ಇಲ್ಲಿ ನೆಲೆಸಿದರೂ ಇವರಿಗೆ ಕನ್ನಡ ಕಲಿಯಬೇಕು ಎಂಬ ಕನಿಷ್ಠ ಜ್ಞಾನ ಇಲ್ಲ. ಹಾಗಿದ್ದಾರೆ ಹಿಂದಿ ಬಾರದ ಕನ್ನಡಿಗರು ಇವರಿಂದ ಹೇಗೆ ಸೇವೆಯನ್ನು ಪಡೆಯಬೇಕು?

ಕೇಂದ್ರ ಸರ್ಕಾರವು ಹಟಕ್ಕೆ ಬಿದ್ದಂತೆ ಹಿಂದಿಯನ್ನು ಎಲ್ಲೆಡೆ ತುಂಬುತ್ತಿದೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ದಿನಕ್ಕೆ ಮೂರು ಮೂರು ಹಿಂದಿ ಪದಗಳನ್ನು ಇತರ ಭಾಷಿಕರಿಗೆ ಕಲಿಸಲಾಗುತ್ತಿದೆ. ಹಾಗೆಯೇ ಆಗಾಗ "ಹಿಂದಿ ದಿವಸ", "ಹಿಂದಿ ಸಪ್ತಾಹ", "ಹಿಂದಿ ಮಾಸಾಚರಣೆ" ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿದು ಹಿಂದಿಯನ್ನು ಪ್ರಚಾರ ಮಾಡಲಾಗುತ್ತಿದೆ. ಆ ಹಣವೆಲ್ಲಾ ಹಿಂದಿ ರಾಜ್ಯಗಳಿಂದ ತಂದುದಲ್ಲ. ಒಂದು ನೆನಪಿರಲಿ, ಈ ದೇಶಕ್ಕೆ ಹೆಚ್ಚಿನ ಆದಾಯ ನೀಡುತ್ತಿರುವುದು ದಕ್ಷಿಣದ ರಾಜ್ಯಗಳೇ ಆಗಿವೆ. ಮಹಾರಾಷ್ಟ್ರವನ್ನೂ ಸೇರಿಸಿಕೊಂಡರೆ ದೇಶದ ೭೦% ಆದಾಯವು ದಕ್ಷಿಣದ ಆರು ರಜ್ಯಗಳಿಂದಲೇ ಬರುತ್ತಿದೆ. ಆದರೆ ಆ ಹಣವನ್ನು ಕೇಂದ್ರವು ಈ ಆರು ರಾಜ್ಯಗಳ ನುಡಿಗಳ ಬೆಳವಣಿಗೆಗೆ ಬಳಸದೇ ಕುತಂತ್ರದಿಂದ ಹಿಂದಿಗೆ ಬಳಸುತ್ತಾ ನಮ್ಮ ನುಡಿಯನ್ನು ತುಳಿದು ನಾಶ ಮಾಡಲು ಹೊರಟಿದೆ. 

ಒಂದು ಕಡೆಯಿಂದ ಹಿಂದಿಯ ಹೇರಿಕೆಯಾದರೆ ಮತ್ತೊಂದು ಕಡೆಯಿಂದಿ ಹಿಂದಿಯವರ ಏರಿಕೆಯೂ ಎಗ್ಗಿಲ್ಲದೇ ಸಾಗಿದೆ. ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ನೌಕರರ ಸಂಖ್ಯೆ ಮಿತಿ ಮೀರಿದೆ. ಕೇಂದ್ರದ ಇಲಾಕೆಗಳಿಗೆ ನೌಕರರನ್ನು ಆಯ್ಕೆ ಮಾಡುವಾಗಲೇ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮಾತ್ರ ಆಯ್ಕೆ ಮಾಡುತ್ತಾರೆ. ಇದು ಇತರೆ ನುಡಿಗಳವರು ಹಿಂದೆ ಉಳಿಯಲು ಕಾರಣವಾಗಿದೆ. ಆಯಾ ರಾಜ್ಯದೊಳಗೆ ಯಾವುದೇ ಇಲಾಖೆ ಇರಲಿ (ಕೇಂದ್ರ ಅತವಾ ರಾಜ್ಯ) ಅಲ್ಲಿನ ನೌಕರರು ನೂರಕ್ಕೆ ನೂರು ಆಯಾ ರಾಜ್ಯದವರೇ ಇರಬೇಕು. ಹೊರಗಿನಿಂದ ಕೆಲವರು ಬರುವುದಿದ್ದರೂ ಅವರಿಗೆ ಮೊದಲೇ ರಾಜ್ಯ ನುಡಿಯನ್ನು ಕಲಿಸಿ ತರಬೇತಿ ಕೊಟ್ಟು ಕಳಿಸಬೇಕು. 

ಹಿಂದಿ ರಾಷ್ಟ್ರಭಾಷೆಯಾದರೆ ಕಾಗೆ ರಾಷ್ಟ್ರಪಕ್ಷಿ ಯಾಕಲ್ಲ ?
"ಹಿಂದಿಯನ್ನು ಈ ದೇಶದ ಹೆಚ್ಚಿನ ಜನರು ಆಡುತ್ತಾರೆ" ಅದಕ್ಕಾಗಿಯೇ ಅದನ್ನು ರಾಷ್ಟ್ರಭಾಷೆ ಎಂದು ಕರೆದರೂ ತಪ್ಪಿಲ್ಲ ಎಂಬ ಮಾತೊಂದನ್ನು ಹಿಂದಿ ಪ್ರಿಯರು ಹೇಳುವುದಿದೆ. ಹೆಚ್ಚಿನ ಜನರು ಆಡುತ್ತಾರೆ ಎಂಬ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಅನ್ನುವುದಾದರೆ ನವಿಲಿನ ಬದಲಾಗಿ ವಿಪರೀತ ಸಂಖ್ಯೆಯಲ್ಲಿರುವ ಕಾಗೆಯನ್ನು ರಾಷ್ಟ್ರಪಕ್ಷಿ ಅಂತಲೂ, ಹುಲಿಯ ಬದಲಾಗಿ ಇಲಿಯನ್ನು ರಾಷ್ಟ್ರಪ್ರಾಣಿ ಅಂತಲೂ ಕರೆಯಬೇಕಾಗುತ್ತದಲ್ಲವೇ ? ಈ ಹೆಚ್ಚು ಜನ ಮಾತಾಡುತ್ತಾರೆ ಅನ್ನುವ ವಿಷಯದಲ್ಲೂ ಒಂದು ಸುಳ್ಳಿದೆ. ಉತ್ತರ ಪ್ರದೇಶ, ಜಾರ್ಕಂಡ್‌, ಮಧ್ಯಪ್ರದೇಶ, ಚತ್ತೀಸ್‌ಗಡ ಮತ್ತು ಹರಿಯಾಣ ಬಿಟ್ಟರೆ ಬೇರೆಲ್ಲೂ ಹಿಂದಿ ಮಾತೃಭಾಷಿಕರ ಸಂಖ್ಯೆ ಜಾಸ್ತಿ ಇಲ್ಲ. ಬೇರೆಲ್ಲಾ ರಾಜ್ಯಗಳಲ್ಲಿ ಅವರದೇ ಆದ ಬೇರೆ ಬೇರೆ ನುಡಿಗಳಿವೆ. ಬಿಹಾರಿ, ಒಡಿಶಾ, ಬೆಂಗಾಲಿ, ಪಂಜಾಬಿ, ಸಿಂಧಿ, ಡೋಗ್ರಿ, ರಾಜಸ್ಥಾನಿ, ಗುಜರಾತಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರಿಗೂ ಹಿಂದಿ ತಾಯಿನುಡಿಯಲ್ಲ. ಆದರೆ ಈ ಹಿಂದಿಪ್ರಿಯರು ಅವರನ್ನೆಲ್ಲಾ ಹಿಂದಿಯವರೆಂಬಂತೆ ಬಿಂಬಿಸುತ್ತಾ, ಅವರಿಗೂ ಕುತಂತ್ರದಿಂದ ಶಾಲೆಗಳಲ್ಲಿ ಹಿಂದಿ ಕಲಿಸಿ ಈಗ ದೇಶದ ೪೦% ಜನ ಹಿಂದಿ ಮಾತಾಡುತ್ತಾರೆ ಎಂದು ಬೊಂಗು ಬಿಡುತ್ತಿದ್ದಾರೆ. ಈ ಹಿಂದಿ ಹೇರಿಕೆಯ ವಿರುದ್ದ ಈಗಾಗಲೇ ಉತ್ತರದವೇ ರಾಜ್ಯಗಳಲ್ಲಿ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಕಳೆದ ವರ್ಷವಷ್ಟೇ ಲೋಕಸಭೆಯಲ್ಲಿ ಒಡಿಶಾದ ಸಂಸದರೊಬ್ಬರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆಯ ಬಗ್ಗೆ ಸಭೆಯ ಗಮನ ಸೆಳೆದಿದ್ದರು.

ಮಿತಿ ಮೀರಿದ ಹಿಂದಿಗರು !
ಇಂದು ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಮಿತಿ ಮೀರಿ ಹೋಗಿದೆ. ಅವರನ್ನೆಲ್ಲಾ ಕಡಿಮೆ ಜನಸಂಖ್ಯೆ ಇರುವ ದಕ್ಷಿಣದ ರಾಜ್ಯಗಳ ಒಳಗೆ ನಯವಾಗಿ ತೂರಿಸುವ ಕೆಲಸ ನಡೆಯುತ್ತಿದೆ. ಅದು ಸಲಭವಾಗಲಿ ಎಂದು ಅಂದೇ ಯೋಜಿಸಿ ಶುರು ಮಾಡಿದ ಕುಕೃತ್ಯವೇ ಈ ಹಿಂದಿ ಹೇರಿಕೆ ಎಂಬುದು ಈಗ ದಕ್ಷಿಣದವರಿಗೆ ಅರಿವಿಗೆ ಬರುತ್ತಿದೆ. ಇದನ್ನು ಅಂದೇ ಮನಗಂಡ ತಮಿಳರು ಪ್ರಭಲವಾಗಿ ವಿರೋಧಿಸಿ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡರು. ಆದರೆ ಎಚ್ಚೆತ್ತುಕೊಳ್ಳದ ಕನ್ನಡಿಗರು ಇಂದು ಅದರ ಪ್ರತಿಫಲವನ್ನು ಉಣ್ಣುತ್ತಿದ್ದೇವೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪಟ್ಟಣಗಳಲ್ಲೂ ಉತ್ತರ ಭಾರತೀಯರ ಆಸ್ತಿ ಬೆಳೆಯುತ್ತಿದೆ. ಬೆಂಗಳೂರು ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳ ಗ್ರಾಮಾಂತರ ಭಾಗವನ್ನಂತೂ ಬಹುತೇಕ ಉತ್ತರ ಭಾರತೀಯರೇ ಕೊಂಡುಕೊಂಡಿದ್ದಾರೆ. ಇದನ್ನು ತಡೆಯ ಬೇಕಾಗಿದ್ದ ರಾಜ್ಯ ಸರ್ಕಾರವು ತನ್ನದೇ ಶಾಲೆಗಳಲ್ಲಿ ಮಕ್ಕಳಿಗೆ ಹಿಂದಿ ಕಲಿಸುತ್ತಾ, ಹಿಂದಿಗರು ನೀಡುವ ಹಣಕ್ಕಾಗಿ ನಾಲಿಗೆ ಚಾಚುತ್ತಾ ನಿರ್ಲಜ್ಜವಾಗಿ ಕುಳಿತಿದೆ. ನಮ್ಮ ರಾಜ್ಯದ ರಾಜಕಾರಣಿಗಳಿಗಂತೂ ಸ್ವಾಭೀಮಾನ ಅನ್ನುವುದು ಏನೆಂದೇ ಗೊತ್ತಿಲ್ಲ. ಹಣಕ್ಕಾಗಿ ಎಂತಹ ಹೀನ ಮಟ್ಟಕ್ಕೂ ಇಳಿಯುವ ಇವರು ದೆಹಲಿ ಹೈಕಮಾಂಡ್‌ಗಳ ಬೂಟು ನೆಕ್ಕುತ್ತಾ, ಕಾಶ್ಮಿರ, ದನ, ಧರ್ಮ, ಸೆಕ್ಯುಲರ್‌ ಜಪ ಮಾಡುತ್ತಾ ಕನ್ನಡಿಗರನ್ನು ವಂಚಿಸುತ್ತಿದ್ದಾರೆ. ಇದನ್ನು ಚೆನ್ನಾಗಿ ಮನವರಿಕೆ ಮಾಡಿಕೊಂಡಿರುವ ಕೆಂದ್ರದ ಹಿಂದಿ ನಾಯಕರು ನಮ್ಮ ಜನ ಪ್ರತಿನಿದಿಗಳನ್ನು ದನ ಪ್ರತಿನಿದಿಗಳನ್ನಾಗಿ ಮಾಡಿಕೊಂಡು ಬೀದಿ ನಾಯಿಗಳಂತೆ ಅವರ ಮನೆ ಬಾಗಿಲು ಕಾಯಿಸುತ್ತಾ, ತಮ್ಮ ರಾಜ್ಯದ ಜನರನ್ನೂ ಭಾಷೆಯನ್ನೂ ನಮ್ಮ ರಾಜ್ಯದಲ್ಲಿ ತುಂಬುತ್ತಾ ಕುಶಿ ಪಡುತ್ತಿದ್ದಾರೆ. ನಾಚಿಕೆಗೆಟ್ಟ ಕನ್ನಡದ ರಾಜಕಾರಣಿಗಳು ಹೈಕಮಾಂಡ್‌ನ ಒದೆತವನ್ನೇ ಪ್ರಸಾದವೆಂದು ಸ್ವೀಕರಿಸಿ ಇಲ್ಲಿ ಬಂದು "ಭಾರತ್‌ ಮಾತಾ ಕೀ ಜೈ, ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದು ಬೊಂಗು ಬಿಡುತಿದ್ದಾರೆ. 

ಯಾಕೆ ಈ ತಾರತಮ್ಯ ?
೧೯೪೭ರಲ್ಲಿ ಭಾರತಕ್ಕೇನೋ ಸ್ವಾತಂತ್ರ‍್ಯ ದೊರೆಯಿತು, ಆದರೆ ಕರ್ನಾಟಕದ ಪಾಲಿಗೆ ಆಡಳಿತ ಆಂಗ್ಲರ ಕೈಹಿಂದ ಹಿಂದಿಯವರ ಕೈಗೆ ಬದಲಾಯ್ತು ಅಷ್ಟೇ. ಸಂಸ್ಕೃತ, ಅರೇಬಿಕ್‌ ಮುಂತಾದ ಕೆಲವಾರು ನುಡಿಗಳ ಬೆರಕೆಯಿಂದ ಹುಟ್ಟಿದ ಹಿಂದಿಗೆ ಸರಿಯಾದ ಇತಿಹಾಸವೂ ಇಲ್ಲ, ತನ್ನದೇ ಆದ ಲಿಪಿಯೂ ಇಲ್ಲ. ಮೂವತ್ತು ಸಾವಿರಕ್ಕೂ ಹೆಚ್ಚು ಶಾಸನಗಳನ್ನು ಹೊಂದಿರುವ ಕನ್ನಡಕ್ಕೆ ಹೋಲಿಸಿದರೆ ಹಿಂದಿ ಒಂದು ಗಾಳಿ ತುಂಬಿಕೊಂಡಿರುವ ಬಣ್ಣದ ದೊಡ್ಡ ಬಲೂನು ಮಾತ್ರ. ಆದರೆ ಅದೇ ಬಣ್ಣದ ಬಲೂನನ್ನು ಕನ್ನಡದ ಮಕ್ಕಳಿಗೆ ತೋರಿಸಿ ಅದರತ್ತ ಸೆಳೆವ ಕುತಂತ್ರವನ್ನು ನಮ್ಮನ್ನಾಳುವವರು ಅತ್ಯಂತ ಚಾಣಾಕ್ಷತೆಯಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಪ್ರಜಾಪ್ರಭುತ್ವದಲ್ಲಿ ಜನರೆಲ್ಲಾ ಸಮಾನರು ಅಂತಾದ ಮೇಲೆ ನುಡಿಗಳೆಲ್ಲಾ ಯಾಕೆ ಸಮಾನವಾಗಿಲ್ಲ ? ಹಿಂದಿ-ಇಂಗ್ಲೀಷಿಗೆ ಯಾಕೆ ಹೆಚ್ಚಿನ ಸ್ಥಾನಮಾನ ? ನಮ್ಮ ದುಡ್ಡಲ್ಲಿ ಅವುಗಳ ಜಾತ್ರೆ ಯಾಕೆ ?
ಈ ನಡುವೆ ನ್ಯಾಯಾಲಯದಿಂದಲೂ ನಮಗೆ ಯಾವುದರಲ್ಲೂ ನ್ಯಾಯ ದೊರಕುತ್ತಿಲ್ಲ ಎಂಬುದು ಮೇಲಿಂದ ಮೇಲೆ ನಿರೂಪಿತವಾಗುತ್ತಲೇ ಇದೆ. ರಾಜ್ಯದ ನುಡಿಯ ರಕ್ಷಣೆ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಆದರೆ ಮಾತೃಭಾಷೆ ಕಡ್ಡಾಯ ಮಡಲು ಹೊರಟರೆ ಅದಕ್ಕೆ ಕೋರ್ಟ್‌ ಅಡ್ಡಗಾಲು ಹಾಕುತ್ತದೆ. ಯಾವುದನ್ನು ಕಲಿಸಬೇಕು ಅನ್ನುವುದನ್ನು ಪೋಷಕರಿಗೇ ಬಿಡಿ ಅನ್ನುತ್ತದೆ. ಆದರೆ ಅದೇ ರೀತಿ ಇಂಗ್ಲೀಷ್‌ ಮತ್ತು ಹಿಂದಿಯನ್ನು ಕಲಿಸುವ ಆಯ್ಕೆಯನ್ನು ಪೋಷಕರಿಗೇ ಬಿಡಿ ಅಂತ ಮಾತ್ರ ಹೇಳುವುದಿಲ್ಲ!

ಇದಕ್ಕೆಲ್ಲಾ ಪರಿಹಾರವೇನು ?
ಕೇಂದ್ರ ಮಾಡಬೇಕಾದುದು :
೧. ರಾಜ್ಯವು ಸ್ವಾಯತ್ತೆ ಕೋರಿ ಹಕ್ಕು ಮಂಡನೆ ಮಾಡಬೇಕು. 
೨. ಮಿಲಿಟರಿ, ವಿದೇಶಾಂಗ, ಅಂತರಾಜ್ಯ ವಿವಾದ ಮುಂತಾದ ಹೊರ ದೇಶಗಳೊಂದಿಗೆ ವ್ಯವಹರಿಸುವ ವಿಷಯಗಳನ್ನು ಮಾತ್ರ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. 
೩. ಕೇಂದ್ರವು ರಾಜ್ಯಗಳ ಒಳಗೆ ಯಾವುದೇ ವಿಷಯಕ್ಕೂ ಮೂಗು ತೂರಿಸಬಾರದು. 
೪. ಆಯಾ ರಾಜ್ಯಗಳೊಂದಿಗೆ ಆಯಾ ರಾಜ್ಯದ ನುಡಿಯಲ್ಲೇ ವ್ಯವಹರಿಸುವಂತಾಗಬೇಕು.
೫. ಕನ್ನಡವೂ ಸೇರಿದಂತೆ ಎಲ್ಲಾ ೨೨ ನುಡಿಗಳನ್ನೂ ಆಡಳಿತ ಭಾಷೆಗಳೆಂದು ಘೋಸಿಸಬೇಕು.
೬. ರೈಲು, ಬ್ಯಾಂಕ್‌, ದೂರವಾಣಿ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೂ ಆಯಾ ರಾಜ್ಯದೊಳಗಿನ ಹುದ್ದೆಗಳನ್ನು ತುಂಬುವ ಅವಕಾಶವನ್ನು ಆಯಾ ರಾಜ್ಯಗಳಿಗೇ ನೀಡಬೇಕು.
೭. ತ್ರಿಭಾಷಾ ಸೂತ್ರವನ್ನು ತೆಗೆದು ಹಾಕಿ ಆಯಾ ರಾಜ್ಯದ ನುಡಿಗಳ ಹೊಣೆಯನ್ನು ಆಯಾ ರಾಜ್ಯಗಳಿಗೇ ಬಿಡಬೇಕು. ಇದರ ಬಗ್ಗೆ ಸುಪ್ರೀಂ ಕೋರ್ಟ್‌ ಮೂಗು ತೂರಿಸುವುದನ್ನು ಕಾಯ್ದೆ ಮುಖಾಂತರ ತಡೆಯಬೇಕು.

ರಾಜ್ಯ ಮಾಡಬೇಕಾದುದು :
೧. ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು.
೨. ತ್ರಿಭಾಷಾ ಸೂತ್ರವನ್ನು ತೆಗೆದು ಹಾಕಬೇಕು.
೩. ರಾಜ್ಯದ ಎಲ್ಲಾ ಶಾಲೆಗಳಲ್ಲಿ (ಖಾಸಗಿಯೂ ಸೇರಿ) ೧೦ನೇ ತರಗತಿ ವರೆಗೂ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಬೇಕು. ಮತ್ತು ಮತ್ತೊಂದು ನುಡಿಯನ್ನು (ಪೋಷಕರು ಆಯ್ಕೆ ಮಾಡಿಕೊಂಡಿದ್ದು) ಒಂದನೇ ತರಗತಿಯಿಂದಲೇ ಕಲಿಸಬೇಕು.
೪. ವಲಸೆ ನೀತಿಯನ್ನು ಜಾರಿಗೊಳಿಸಿ ವಲಸಿಗರನ್ನು ಹತೋಟಿಯಲ್ಲಿ ಇಡಬೇಕು.

ಇವೆಲ್ಲಾ ಆಗುವ ಹೋಗುವ ಕೆಲಸವೇ ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಲೂ ಬಹುದು. ಆದರೆ ಕನ್ನಡಿಗರೆಲ್ಲಾ ಒಂದಾಗಿ ದನಿ ಎತ್ತಿದರೆ ಆಗದ ಕೆಲಸ ಯಾವುದೂ ಇಲ್ಲ. ಪರಕೀಯರ ದಾಳಿಯನ್ನು ಎದುರಿಸಿ ಸಾವಿರದೈನೂರು ವರ್ಷ ಮೆರೆದ ಧೀರ ಕನ್ನಡ ನಾಡು ನಮ್ಮದು. ಈಗ ಈ ಹಿಂದಿಗರಿಗೆ ಹೆದರಿ ದೇಶಪ್ರೇಮದ ತೊಗಲಿನಡಿ ಅವಿತುಕೊಳ್ಳುವ ಹೇಡಿ ಕಾರ್ಯವನ್ನು ಮಾಡದಿರೋಣ. ನಮಗೂ ದೇಶಪ್ರೇಮವಿದೆ. ಆದರೆ ಅದು ದಾಸ್ಯದ ಸಂಕೋಲೆಯಾಗದಿರಲಿ. ಕನ್ನಡವನ್ನು ತುಳಿದು ಕಟ್ಟುವ ಯಾವ ದೇಶವೂ ನಮಗೆ ಬೇಡ. ಕನ್ನಡದ ಧೀಮಂತಿಕೆಯ ಇಟ್ಟಿಗೆ ಸೇರಿಸಿ ಕಟ್ಟುವ ಗಟ್ಟಿ ಮುಟ್ಟಿನ ಭಾರತ ನಮ್ಮದಾಗಲಿ. ಇರಿಯುವ ಈಟಿ ಮೊಘಲರದ್ದಾದರೇನು, ಆಂಗ್ಲರದ್ದಾದರೇನು, ಹಿಂದಿಯವರದ್ದಾದರೇನು ? ಆ ನೋವು ಮಾತ್ರ ಒಂದೇ ಅಲ್ಲವೇ ? "ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು, ದಕ್ಷಿಣದ ದೇಶಕದು ಕುದುರೆಯಹುದೆ?" ಎಂದೂ ಮತ್ತು "ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ, ಗೆಲವಿದ್ದರದಕೆ ನಿಮಗಿಹುದು ಶಕ್ತಿ." ಎನ್ನುವ ಮೂಲಕ ಕುವೆಂಪುರವರು ಅಂದೇ ನಮ್ಮನ್ನು ಎಚ್ಚರಿಸಿದ್ದರು ಎಂಬುದನ್ನು ಮರೆಯದಿರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…