ಡಿಸೆಂ 29, 2016

ಭೂಮಿಯ ಕಾಂತ ವಲಯ ಬದಲಾಗುವ ಹೊತ್ತಲ್ಲಿ..

0 ಪ್ರತಿಕ್ರಿಯೆಗಳು


ಸೂರ್ಯನಿಂದ ಬರುವ ರೆಡಿಯೇಷನ್ ಕಿರಣಗಳನ್ನು ಭೂಮಿಯ ಕಾಂತ ವಲಯ ತಡೆದು ಇಲ್ಲಿನ ಜೀವಿಗಳನ್ನು ಪೊರೆಯುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತು. ಅಂದರೆ ಒಂದೇ ಒಂದು ನಿಮಿಷ ಭೂಮಿಯ ಈ ಕಾಂತ ವಲಯ ಕೆಲಸ ನಿಲ್ಲಿಸಿದರೂ ಸಾಕು, ಬಹಳಷ್ಟು ಜೀವಿಗಳ ನಾಶ ಮತ್ತು ಉಳಿದರೂ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದ್ದೇ ಇದೆ. 

ಆದರೆ ಹೀಗೆ ಭೂಮಿಯ ಕಾಂತ ವಲಯ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಲು ಸಾದ್ಯವೇ ಎಂದು ನೋಡಲು ಹೋದರೆ "ಹೌದು, ಅದೂ ಆಗುತ್ತದೆ" ಎಂದು ಹೇಳುತ್ತಾರೆ ವಿಜ್ಞಾನಿಗಳು. 

ಭೂಮಿಯ ಕಾಂತ ವಲಯವು ತೆಂಕಣ ಮತ್ತು ಬಡಗಣ ತುದಿಗಳನ್ನು ಹೊಂದಿದೆ ತಾನೇ, ಈ ತುದಿಗಳು ಸುಮಾರು ಐವತ್ತು ಸಾವಿರದಿಂದ ಲಕ್ಷ ವರ್ಷಗಳ ಒಳಗೆ ಒಂದು ಸಲ ತೆಂಕಣ ತುದಿಯು ಬಡಗಣಕ್ಕೂ, ಬಡಗಣ ತುದಿಯು ತೆಂಕಣಕ್ಕೂ ಬದಲಾಗುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂದರೆ ಈಗ ಒಂದು ದಿಕ್ಸೂಚಿಯನ್ನು ಎಲ್ಲಿ ಇಟ್ಟರೂ ಅದು ಈಗ ಬಡಗು ದಿಕ್ಕನ್ನು ತೋರಿಸುತ್ತೆ. ಆದರೆ ಭೂಮಿಯ ಕಾಂತ ವಲಯ ತಲೆ ಕೆಳಗು ಆಯ್ತು ಅಂದರೆ ದಿಕ್ಸೂಚಿಯು ತೆಂಕು ದಿಕ್ಕನ್ನು ತೋರಿಸಲು ತೊಡಗುತ್ತೆ. ಇದು ಸುಮಾರು 50 ಸಾವಿರ ವರ್ಷಗಳಿಗೆ ಒಮ್ಮೆ ಹೀಗೆ ಬದಲಾಗುತ್ತ ಇರುತ್ತೆ ಅನ್ನೋದು ವಿಜ್ಞಾನಿಗಳ ಹೇಳಿಕೆ. ಆದರೆ ಅದು ಯಾಕೆ ಬದಲಾಗುತ್ತೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಈ ರೀತಿ ಈ ಹಿಂದೆ ಬದಲಾಗಿ ಆಗಲೇ 50 ಸಾವಿರ ವರ್ಶ ಕಳೆದಿದ್ದು ಮುಂದಿನ ಬದಲಾವಣೆ ಯಾವ ಹೊತ್ತಲ್ಲಿ ಬೇಕಾದರೂ ಆಗ
ಅಹುದು! 

ಆದರೆ ತೊಂದರೆ ಇರೋದು ಈ ಬಡಗಣದಿಂದ ತೆಂಕಣಕ್ಕೆ ವಲಯವು ಬದಲಾಗಲು ತಗುಲುವ ಹೊತ್ತು ಎಷ್ಟು ಅನ್ನೋದರ ಮೇಲೆ ನಿರ್ದಾರ ಆಗುತ್ತೆ. ಇಷ್ಟು ದೊಡ್ಡ ಭೂಮಿಯ ಕಾಂತ ವಲಯ ಕೆಲವೇ ಸೆಕೆಂಡು ಗಳಲ್ಲಿ ಬದಲಾಗಿ ಹೋಗುತ್ತೆ ಅನ್ನೋದು ಸಾಧ್ಯ ಇಲ್ಲದ ಮಾತು. ಅದು ಹೆಚ್ಚು ಹೊತ್ತು ತಗೊಂಡಷ್ಟೂ ಭೂಮಿಯ ಮೇಲಿರುವ ಜೀವಿಗಳಿಗೆ ತೊಂದರೆ ಹೆಚ್ಚು. ಮುನುಷ್ಯ ಕುಲವೇ ನಾಶ ಆದರೂ ಆಗಬಹುದು. 

ಹೀಗೆ ಕಾಂತ ವಲಯ ಬದಲಾಗುವ ಮೊದಲು ಏನಾದರೂ ಮುನ್ಸೂಚನೆ ಸಿಗುತ್ತಾ ? ಅನ್ನೋದರ ಮೇಲೆ ವಿಜ್ಞಾನಿಗಳು ಸಂಶೋದನೆ ನಡೆಸಿದ್ದಾರೆ.

ಇತ್ತೀಚಿನ ಪ್ರತಿಕ್ರಿಯೆ

Recent Comments Widget

Blogroll