ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು: ತಡೆ 1: ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು. ಕಾರ್ಪೊರೇಟ್ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಮೋದಿ ಕೊಟ್ಟ ಪರಿಹಾರ: ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ. ಕಾರ್ಪೊರೇಟ್ಗಳು ಈಗ ಸಂತೋಷವಾಗಿದ್ದಾರೆ. ತಡೆ 2: ಕಾರ್ಪೊರೇಟ್ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು. ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು. ಮೋದಿ ಕೊಟ್ಟ ಪರಿಹಾರ: ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು. ಕಾರ್ಪೊರೇಟ್ಗಳು ಮತ್ತೆ ಸಂತೋಷಗೊಂಡಿದ್ದಾರೆ. ತಡೆ 3: ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾರೆ ಎಂದು ನಿರ್ಣಯಿಸುವ
ನಮಗೆ 6ನೆ ತರಗತಿಗೆ ಹಿಂದಿ ಇತ್ತು. ಅದೇ ಹೊತ್ತಿಗೆ ನಮಗೆ ಒಳ್ಳೆಯ ಒಬ್ರು ಸಾಬರು ಮೇಷ್ಟ್ರು ಕೂಡ ಬಂದಿದ್ದರಿಂದ ಹಿಂದಿಯನ್ನು ಅವರು ಒಂದಿಷ್ಟು ಕಲಿಸಿದರು. ಆಮೇಲೆ ಸಾಗರದ ಜೂನಿಯರ್ ಕಾಲೇಜು (ಹೈಸ್ಕೂಲು) ಸೇರಿದಾಗ ಹಿಂದಿ ಪುಸ್ತಕ ದಪ್ಪ ಇದ್ದಿದ್ದು ನೋಡಿ ಹೆದರಿಕೆ ಆಯ್ತು. ಅಷ್ಟರಲ್ಲೇ ಸಾಬ್ರು ಮೇಷ್ಟ್ರು ಕಡೆಯಿಂದ ಓದಲು ಬರುತ್ತಿತ್ತು, ಆದ್ರೆ ಅರ್ಥ ಆಗುತ್ತಿರಲಿಲ್ಲ. ಈ ಹೈಸ್ಕೂಲ್ ಅಲ್ಲಿ ನನ್ನ ಪಕ್ಕ ಒಬ್ಬ ಸಾಬ್ರು ಹುಡುಗ ಕೂರುತ್ತಾ ಗೆಳೆಯ ಆದ. ಅವನನ್ನು ನಾವು 'ಹಂಡ್ರೆಡ್ ಉಲ್ಲಾ' ಅಂತ ಕೀಟಲೆ ಮಾಡ್ತಾ ಇದ್ವಿ. ಯಾಕೆ ಅಂದ್ರೆ ಅವನ ಹೆಸರು 'ನೂರು'ಲ್ಲಾ ಅಂತ! ಅವನಿಗೆ ಹಿಂದಿ ಓದಲು ಬರ್ತೀರಲಿಲ್ಲ, ಆದ್ರೆ ಉರ್ದು ಕಾರಣಕ್ಕೆ ಅರ್ಥ ಆಗುತ್ತಿತ್ತು. ಪರೀಕ್ಷೆಯಲ್ಲಿ ಹೆಚ್ಚಾಗಿ ನಾವು ಅಕ್ಕ ಪಕ್ಕವೋ, ಹಿಂದೆ ಮುಂದೆಯೂ ಕೂರುವಂತೆ ಇರುತ್ತಿತ್ತು. ಪ್ರಶ್ನೆಪತ್ರಿಕೆಯನ್ನು ನಾನು ನಿಧಾನಕ್ಕೆ ಓದಿ ಹೇಳುತ್ತಿದ್ದೆ. ಅವನು ಅದನ್ನು ಅರ್ಥ ಮಾಡಿಕೊಂಡು ಉತ್ತರ ಹೇಳುತ್ತಿದ್ದ, ನಾನು ಬರೆಯುತ್ತಿದ್ದೆ, ಅದನ್ನು ನೋಡಿಕೊಂಡು ಅವನೂ ಬರೆಯುತ್ತಿದ್ದ! ಒಟ್ಟಿನಲ್ಲಿ ಪ್ರಶ್ನೆಗಳನ್ನು ನಾನು ಏನು ಓದಿದೆನೋ, ಅವನು ಏನು ಅರ್ಥ ಮಾಡಿಕೊಂಡನೋ, ಏನು ಉತ್ತರ ಹೇಳಿದನೋ, ನಾನು ಏನು ಬರೆದೇನೋ, ಅದನ್ನು ನೋಡುತ್ತಾ ಅವನು ಇನ್ನೇನು ಬರೆದನೋ... ಇಬ್ಬರಿಗೂ ಗೊತ್ತಿಲ್ಲ! ಕೊನೆಗಂತು ಹಿಂದಿಲಿ ಇಬ್ರು ಪಾಸ್ ಅಂತೂ ಆಗಿದ್ವಿ. ಹಿಂದಿಯ ಹಿಂದೆ ಈ ದೇಶದ ಅ