ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಡ್ಡಿ ಪುಸ್ತಕ ಬರೆಯುತಾರಂತೆ

ಯಡಿಯೂರಪ್ಪ "ದೇವೇಗೌಡ ಮತ್ತು ಕುಮಾರಸ್ವಾಮಿ ಆಡಳಿತದ ಅವಧಿಯ ಅಕ್ರಮಗಳನ್ನ ಪುಸ್ತಕ ಬರೆಯುತ್ತೇನೆ" ಅನ್ನುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇಬ್ಬರನ್ನೂ ಜೈಲಿಗೆ ಕಳಿಸುತ್ತೇನೆ ಅಂದರು, ೧೯೯೧ ರಿಂದಲೂ ನಡೆದ ಹಗರಣಗಳನ್ನ ಬಯಲಿಗೆಳೆಯುತ್ತೇನೆ ಅಂದರು. ಇದುವರೆಗೂ ಯಾವುದೂ ಆಗಿಲ್ಲ. ಒಂದು ವೇಳೆ ಗೌಡರೋ ಕುಮಾರಸ್ವಾಮಿಯೋ ಅಕ್ರಮದ ಕಾರಣಕ್ಕೆ ಜೈಲಿಗೆ ಹೋದರೆ ತುಂಬಾ ಸಂತೋಷ. ಅಕ್ರಮ ಮಾಡಿದವರನ್ನು ಜೈಲಿಗಲ್ಲ, ಗಲ್ಲಿಗೆ ಬೇಕಾದರೂ ಹಾಕಬಹುದು. ಆದರೆ, ಒಬ್ಬ ಮುಖ್ಯಮಂತ್ರಿಯಾಗಿ "ಹಗರಣದ ಪುಸ್ತಕ ಬರೆಯುತ್ತೇನೆ" ಅನ್ನುವುದು ಯಾಕೋ ಹಾಸ್ಯಸ್ಪದ. ಯಾರೇ ಅಕ್ರಮ ಮಾಡಿದ್ದರೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇರುವ ಒಬ್ಬ ಮುಖ್ಯಮಂತ್ರಿಯೇ "ಅದನ್ನು ಪುಸ್ತಕ ಬರೆದು ಹಂಚುತ್ತೇನೆ" ಎಂದು ಹೊರಟರೆ ಅದಕ್ಕೆ ಅರ್ಥವಿದೆಯೇ ? ಬಹುಶಃ ಗೌಡರೊಂದಿಗೂ ಡೀಲ್ ಕುದುರಿಸಿಕೊಂಡಿರುವ ಯಡ್ಡಿ "ಏನಿಲ್ಲ ಗೌಡ್ರೇ, ತನಿಖೆಯನ್ನ ಹಳ್ಳ ಹಿಡಿಸ್ತೀನಿ, ಒಂದು ಪುಸ್ತಕ ಬರೆಸಿ ಸ್ವಲ್ಪ ಪ್ರಚಾರ ಮಾಡ್ಕೊಳ್ತೀನಿ ಬಿಡಿ, ಅದರಿಂದ ನಿಮಗೇನೂ ತೊಂದ್ರೆ ಆಗಲ್ಲ" ಅಂತ ರಾಜಿ ಮಾಡಿಕೊಂಡಿರುವ ಸಾಧ್ಯತೆಯೇ ಹೆಚ್ಚಿದೆ.

ನನ್ನ-ನಿನ್ನ ನಡುವೆ..!

ನನ್ನ ನಿನ್ನ ನಡುವಿನಲಿ..! ಪ್ರೀತಿ ಬಳ್ಳಿ ನಲಿದಿಹುದು,! ವರುಷಗಳೆ ಉರುಳಿದರೊ ಹರುಷವದು ದಿನೆ ಬೆಳೆದಿಹುದು..! ನೀ ಮುಡಿದ ಹೊವದು..! ಕೊಗಿ ನನ್ನ ಕರೆದಿಹುದು ಓರೆ ನೋಟದ ಆ ನಯನ ನನ್ನಲ್ಲೇನೊ ಗೊಣಗಿಹುದು..! ನನ್ನ ನಿನ್ನ ನಡುವಿನಲಿ..! ಪ್ರೀತಿ ಉಕ್ಕಿ ಹರಿದಿಯುದು ಯುಗಗಳೆ ಉರುಳಿ ಒರಳಿದರೊ ಹರುಷವು ಚಿಮ್ಮಿ ಬೆಳೆದಿಹುದು..! ನಿನ್ನ ನುಡಿಯೊ ಬಲುಚಂದ..! ಸವಿದಂತೆಲ್ಲ ಸವಿ ಸಿರಿಗಂಧ.! ಮಾತು ಮಾತೆ ಮತ್ತೆ ಮೊಡಿ ಹುದುನಿನ್ನ ಕೊಡಿದ ಆ ಕ್ಷಣದಿಂದ..! ನಿನ್ನ ನಗು ಎಂತ ಮಾಯೆಯೊ ಆ ಮಾಟದಾಟ ನನ್ನ ಕಾಡಿಹುದು ಹಾಗೆ ನಕ್ಕು ನೀ ತಿರುಗಿದೊಡೆ ಲೊಕವನ್ನೆ ಮರೆ ಮಾಚಿಹುದು ನನ್ನ ನಿನ್ನ ನಡುವಿನಲಿ..! ಪ್ರೀತಿ ಬಂಧ ಬಾಡದಂತಹದು ಇತಿಹಾಸವೆ ಅಳಿಸಿ ಹೋದರೊ ಈ ಪ್ರೀತಿಯಂದು ಶಾಶ್ವತವೊ..! ನಿನ್ನ ಆ ನುಲಿವ ನಡೆ..! ನನ್ನ ಸದಾ ಕುಣಿಸಿಹುದು ನಿನ್ನ ಗೆಜ್ಜೆಯ ದನಿಯದೊ ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..! ನನ್ನ ನಿನ್ನ ಮನವದೊ...! ಸರಿಸಲಾಗದಂತೆ ಬೆರೆತಿಹುದು ಬೆರೆತು ನುಡಿವ ಪ್ರೇಮ ಮಾತದೊ ಜೀವ ಭಾವದ ಪ್ರಣಯದಾಟವೊ..!-....... - ಬಸವರಾಜ್ .ಎ. ಏನ್ . ಇ-ಅಂಚೆ:  angadi.com @ gmail.com

ಚಿತ್ರ ವಿಮರ್ಶೆ : ಸೂಪರ‍್

ಅದು ನಿಜಕ್ಕೂ ಸೂಪರ‍್ ಆಗಿದೆ. ಚಿತ್ರದಲ್ಲಿ ತೋರಿಸಿರುವಂತೆ ನಮ್ಮ ದೇಶ ಬದಲಾಗಲ್ಲ ಅನ್ನೋದು ಬೇರೆ ಮಾತು. ಆದರೆ ಉಪೇಂದ್ರರ ಚಿಂತನಾ ವೈಖರಿ ತುಂಬಾ ಚೆನ್ನಾಗಿದೆ. ಎರಡೂಕಾಲು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಕೆಲವೊಂದು ಹೊಡೆದಾಟಗಳು ಬೇಕಿರಲಿಲ್ಲ. ಸಂಗೀತಕ್ಕೆ ಗುರುಕಿರಣ್‌ರನ್ನೇ ಹಾಕಿಕೊಳ್ಳಬಹುದಿತ್ತು. ನಾಯಕಿ ನಾಯಕನಿಗೆ ತಿರುಗಿ ಬೀಳುವುದು ಉಪೇಂದ್ರರ ಹಳೇ ಥಿಯರಿ ಅನ್ನಿಸುತ್ತೆ. ಆದರೆ ಅದರಲ್ಲೂ ಹೊಸತನವಿದೆ. ಸಂಭಾಷಣೆ ಅದ್ಬುತವಾಗಿದೆ. ಹಾಸ್ಯಭರಿತ ವ್ಯಂಗ್ಯ ಈ ದೇಶದ ಅಷ್ಟೂ ದಾರಿದ್ರ್ಯವನ್ನೂ ಬಯಲು ಮಾಡಿದೆ. ಹಾಡುಗಳು ಒಂದೆರಡು ಬಿಟ್ಟರೆ ಉಳಿದವು ಚೆನ್ನಾಗಿಲ್ಲ. ಖರ್ಚು ತುಂಬಾ ಮಾಡಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ದುಡ್ಡು ಸುರಿದಿರೋದು ಕಾಣಿಸುತ್ತೆ. ಚಿತ್ರವನ್ನು ನೋಡಿ ಸುಮ್ಮನಾಗದೇ ಚಿಂತನೆಗೆ ಹಚ್ಚುವಂತಿದೆ. ಉಪೇಂದ್ರರಿಗೆ ಧನ್ಯವಾದಗಳು.

ಅವರನ್ ಬಿಟ್, ಇವರನ್ ಬಿಟ್.....ಇನ್ಯಾರು ??

ಒಮ್ಮೆ ರೈಲಿನಲ್ಲಿ ಮನಮೋಹನ್ ಸಿಂಗ್, ಒಬಮಾ, ಸೋನಿಯಾ ಮತ್ತು ಐಶ್ವರ್ಯ ರೈ ಪ್ರಯಾಣ ಮಾಡುತ್ತಿದ್ದರು. ಹೋಗುತ್ತಿರುವಾಗ ರೈಲು ಒಂದು ಸುರಂಗ ಮಾರ್ಗವನ್ನು ಪ್ರವೇಶಿಸಿದಾಗ ಕತ್ತಲಾವರಿಸಿತು. ಆ ಕತ್ತಲಿನಲ್ಲಿ ಯಾರೋ ಯಾರಿಗೂ ಮುತ್ತು ಕೊಟ್ಟಂತೆ ಶಬ್ಧ ಕೇಳಿಸಿತು. ಅದರ ಹಿಂದೆಯೇ ಪಳಾರ‍್ ಎಂದು ಕೆನ್ನೆಗೆ ಬಾರಿಸಿದ ಶಬ್ಧವೂ ಬಂತು. ಅಷ್ಟರಲ್ಲೇ ಸುರಂಗ ಮಾರ್ಗ ಮುಗಿದು ಬೆಳಕು ಬಂತು. ನೋಡಿದರೆ ಒಬಮಾ ಕೆನ್ನೆ ಕೆಂಪಾಗಿ ಹೋಗಿದೆ. ಆಗ ಒಬ್ಬೊಬ್ಬರೂ ಒಂದೊಂದು ರೀತಿ ಯೋಚಿಸತೊಡಗಿದರು. ಸೋನಿಯಾ : "ಈ ಅಮೆರಿಕಾದವರದ್ದು ಇದೇ ಕಥೆ. ಚೆನ್ನಾಗಿರೋ ಹೆಂಗಸರು ಕಂಡರೆ ಚುಂಬಿಸೋದು. ಒಬಮಾ ಹೋಗಿ ಐಶ್‌ಳನ್ನು ಚುಂಬಿಸಿದ್ದಾನೆ, ಅವಳು ತಿರುಗಿ ಬಾರಿಸಿದ್ದಾಳೆ" ಐಶ್ವರ್ಯ : "ಓಬಮಾ ನನ್ನನ್ನು ಚುಂಬಿಸಲು ಹೋಗಿ ಸೋನಿಯಾಳನ್ನು ಚುಂಬಿಸಿದ್ದಾನೆ, ಅವಳು ಬಾರಿಸಿದ್ದಾಳೆ" ಒಬಮಾ : "ಈ ಮುದುಕ ಕಡಿಮೆಯವನಲ್ಲ ಅನ್ಸುತ್ತೆ, ಕತ್ತಲಲ್ಲಿ ಸೋನಿಯಾ ಅಂತ ತಿಳಿದು ಐಶ್ವರ್ಯಳಿಗೆ ಚುಂಬಿಸಿದ್ದಾನೆ. ಅವಳು ಅದನ್ನು ನಾನು ಚುಂಬಿಸಿದೆ ಅಂತ ತಪ್ಪಾಗಿ ತಿಳಿದು ನನಗೆ ಹೊಡೆದಿದ್ದಾಳೆ ಛೇ!" ಮನಮೋಹನ್ ಸಿಂಗ್ : "ಇನ್ನೊಂದು ಸುರಂಗ ಮಾರ್ಗ ಬರಲಿ.... ನನ್ನ ಕೈಗೆ ನಾನೇ ಚುಂಬಿಸಿಕೊಂಡು ಈ ಒಬಮಾನಿಗೆ ಮತ್ತೊಂದು ಬಾರಿಸುತ್ತೇನೆ!!"

ರೇಖಾಚಿತ್ರಗಳು

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ !

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ ! ಹಾಗಂತ ಸಾಹಿತಿ ಎಸ್.ಎಲ್. ಬೈರಪ್ಪನವರು ನಮಗೆಲ್ಲಾ ಒಂದು ಒಳ್ಳೆ ಪ್ರಶಸ್ತಿ ನೀಡಿದ್ದಾರೆ. ಯಾವುದೋ ಸಂದರ್ಭದಲ್ಲಿ, ಮಾತಿನ ಭರಾಟೆಯಲ್ಲಿ, ಯಾವುದೋ ಕೋಪದಲ್ಲಿ ಇಂತಹ ಮಾತಾಡಿದ್ದರೆ ... "ಹಿರಿಯರು, ತಿಳಿ ಹೇಳಿದ್ದಾರೆ ಸಹಿಸೋಣ" ಅಂದುಕೊಂಡು ಸುಮ್ಮನಾಗಬಹುದಿತ್ತು. ಆದರೆ ಬೈರಪ್ಪನವರು ಅಷ್ಟು ಹೇಳಿ ಸುಮ್ಮನಾಗಲಿಲ್ಲ, ಬದಲಿಗೆ ಪರಮ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಕನ್ನಡಿಗರು ಅಭಿವೃದ್ಧಿಗೆ ಸಹಕರಿಸುವುದಿಲ್ಲ" ಅಂದಿದ್ದಾರೆ. ಇಷ್ಟಕ್ಕೂ ಯಡ್ಡಿ ಅದೇನು ಅಭಿವೃದ್ಧಿ ಮಾಡುತ್ತಿದ್ದಾರೆ ಅಂತ ರಾಜ್ಯದ ಜನತೆಗೆಲ್ಲಾ ತಿಳಿದಿರುವುದೇ ಆಗಿದೆ. ಅದು ಬೈರಪ್ಪನವರಿಗೆ ತಿಳಿದಿಲ್ಲವೇ ? ಎಲ್ಲಾ ಕನ್ನಡಿಗರನ್ನೂ ಸಾರಾ ಸಗಟಾಗಿ ತರ್ಲೆಗಳು ಅನ್ನಲು ಇವರ್ಯಾರು ? ಇವರೇನು ಕನ್ನಡಿಗರಲ್ಲವೇ ? ಅಲ್ಲಿಗೇ ಬೈರಪ್ಪ ಅವರೂ ತರ್ಲೆ ಎಂದೇ ಆಯ್ತು. ವಯಸ್ಸೂ ಆಗಿರುವುದರಿಂದ ದೊಡ್ಡ ತರ್ಲೆ ಅನ್ನಬಹುದು. ಆದರೆ ಬೈರಪ್ಪ ಅವರ ಮಾತಿನ ದಾಟಿ ಬೇರೆ ಇತ್ತು. ಅವರ ಪ್ರಕಾರ ಯಡ್ಡಿ ಏನೋ ಅಭಿವೃದ್ಧಿ ಮಾಡಿ ಬಿಡುತ್ತಿದ್ದರು. ಕರ್ನಾಟಕದ ತರ್ಲೇ ಜನ ಅದಕ್ಕೆ ಬಿಡುತ್ತಿಲ್ಲ ಅನ್ನುವಂತಿತ್ತು. ಅಂದರೆ ಯಡ್ಡಿ ಭೂ ಹಗರಣಕ್ಕೆ ಇವರ ಸಮರ್ಥನೆ ಅದು. "ಹಿಂದಿನವರೂ ಮಾಡಿದ್ದಾರೆ, ಇವರೂ ಮಾಡುತ್ತಿದ್ದಾರೆ" ಎಂದು ಸಮರ್ಥಿಸಿದ್ದಾರೆ. ಹಿಂದ

ಕಾನನ ಸುಮ

ಅರಳಿದೆನೊಂದು ಹೂವಾಗಿ ಪಡೆದೆ ಚೆಲುವ ಬಲು ಹಿತವಾಗಿ ಒಲಿದವರಿಲ್ಲ ಯಾರೂ.. ಏಕೆಂದರೆ ನಾನಿರುವೆ ಕಾನನದ ಸುಮವಾಗಿ ! ನೋಡುಗರ ಬೆರಗುಗಳಿಲ್ಲ ಮಿಟುಕಿಸುವ ಕಣ್ಣುಗಳಿಲ್ಲ ಹೃದಯ ಕದಿವ ಕಳ್ಳರಿಲ್ಲ ಕದಿಯಲೆನಗೆ ಹೃದಯಗಳಿಲ್ಲ.. ಏಕೆಂದರೆ ನಾನಿರುವೆ ಕಾನನದ ಸುಮವಾಗಿ ! ಬಣ್ಣವಿಲ್ಲ ಬೆಳಕಿಗೆ ಸೂರ್ಯನಿಲ್ಲ ಬಿಸಿಲಿಗೆ ಹಾವು ಚೇಳುಗಳ ಸಂತೆಯೊಳಗೆ ಕಾದಿರುವೆ ತುಮುಲದಲ್ಲಿ ಬರಬಹುದೇನೋ ಬದುಕು ಬಯಲಿಗೆಂದು ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ನನ್ನ ಕಲ್ಪನೆಯ ಹುಡುಗಿ,

ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ನನ್ನ ಕಲ್ಪನೆಯ ಹುಡುಗಿ ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು ವೈಯ್ಯಾರಗಳ ಉಟ್ಟವಳು ನನ್ನ ಕಲ್ಪನೆಯ ಹುಡುಗಿ ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ ಮೂಗ ಮುರಿವವಳು ನನ್ನ ಕಣ್ಣ ನೋಟಗಳು ನೇಯ್ದ ಸೀರೆಗೆ ತಾನೆ ನೂಲಾದವಳು ನನ್ನ ಕಲ್ಪನೆಯ ಹುಡುಗಿ ಮಾತಿನಿಂದ ಅಣತಿ ದೂರ ಮೌನ ದೇವತೆಯೇನಲ್ಲ ಮಾತು ಬೆಳ್ಳಿ ಮೌನ ಬಂಗಾರ ಎಂದರಿತವಳು. ನನ್ನ ಕಲ್ಪನೆಯ ಹುಡುಗಿ ಶೃಂಗಾರವೆನಲು ಕೆಂಪಗಾಗುವಳು ಸಿಟ್ಟಿನಿಂದೇನಲ್ಲ ಅವಳ ತಿಳಿನೀರ ಲಜ್ಜೆಯದು ನನ್ನ ಕಲ್ಪನೆಯ ಹುಡುಗಿ ಬರಿ ಕಲ್ಪನೆಯಲ್ಲೆ ಕನಸಾದವಳಲ್ಲ ಕನಸುಗಳ ನನಸಾಗಿಸದಿದ್ದರೂ ನನ್ನ ಭಾವನೆಗಳ ಬುತ್ತಿಯಾದವಳು -- ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com

ಕಾವ್ಯ......

            ಪ್ರತಿಕ್ರಿಯೆ ಇಲ್ಲೆಂದು             ಹೀಗೇಕೆ ಬಸವಳಿದು             ಕುಳಿತಿರುವೆ....!               ನಿನಗಾಗಿ ಶಬ್ಧಗಳ             ಆಭರಣ  ಹುಡುಕಿದರೂ             ಸಿಗುತ್ತಿಲ್ಲ  ನನಗೆ !                ಕಾವ್ಯವೆಂದಿತು.......               ಗೆಳೆಯ ನೀನೆಷ್ಟು             ಅಲಂಕರಿಸಿದರೂ             ಇಷ್ಟವಾಗ ಬೇಕಲ್ಲ ಇತರರಿಗೆ !             ನಿನಗೆ ನಿನ್ನದೇ ಆದ             ಬಣವಿಲ್ಲ   ಬಲವಿಲ್ಲ...               ಮುಗಿಸಿ ಬಿಡು ನನ್ನ  ಅಂತಿಮ ಕ್ರಿಯೆ !            ಮುಗಿಸಿ  ಬಿಟ್ಟೆ.......            ಯಾರೂ ಪ್ರತಿಕ್ರಿಯಿಸಲಿಲ್ಲ..!              ಮತ್ತೆ ಹುಟ್ಟಿತು  ಕಾವ್ಯ  ತನ್ನಷ್ಟಕ್ಕೆ..            ಪ್ರತಿಕ್ರಿಯೆ ಬಯಸದೇ....? - ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com

ಫೋನ್ ಕವಿತೆಗಳು

1. ಬುಕ್ಕಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ : ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು. ಅವಳು ತಕ್ಷಣ ಉತ್ತರಿಸಿದಳು. ನೀವು ಸರದಿಯಲ್ಲಿದ್ದೀರಿ. 2. ಎಸ್ಟಿಡಿ ಬೂತಿನಲ್ಲಿದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ. ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು ಅವಳು ತಕ್ಷಣ ಉತ್ತರಿಸಿದಳು ಈ ಮಾರ್ಗ ಕಾರ್ಯನಿರತವಾಗಿದೆ.. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂದು. 3. ಮೊಬೈಲ್ ಇದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ. ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ. ಅವಳು ತಕ್ಷಣ ಉತ್ತರಿಸಿದಳು ನೀವು ತಲುಪಲು ಇಚ್ಛಿಸುತ್ತಿರುವ ಹುಡುಗಿ ತನ್ನ ಒಳ ಬರುವ ಕರೆಗಳನ್ನು ನಿಷೇಧಿಸಿದ್ದಾಳೆ. - ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com

ಮಿಸ್ಡ್ ಕಾಲ್ ಕೊಡುವ ಮುನ್ನ ಯೋಚಿಸಿ

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ" "ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?" "ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು." ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ? ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ..... ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ

ಕನ್ನಡದವರು ಕನ್ನಡ ಓದಲ್ಲ

ಅದು ಜಗಜ್ಜಾಹೀರು. ನಮ್ಮ ಕನ್ನಡದವರು ಕಲಿಯೋದು ಕೋಟಿ ಭಾಷೆ. ಆಡೋದು ಕನ್ನಡ ಒಂದು ಬಿಟ್ಟು ಬೇರೆಲ್ಲಾ ಭಾಷೆ. ಓದೋದಂತೂ ಕನ್ನಡ ಇಲ್ಲವೇ ಇಲ್ಲ. ಈ ವಿಷಯ ಏನು ಹುಡುಕಿದರೂ ಸಿಗುವ ಗೂಗಲ್‌ನವರಿಗೂ ತಿಳಿದು ಹೋಗಿದೆ. ಅದಕ್ಕಾಗಿಯೇ ಅವರ ಸುದ್ಧಿ ಪೋರ್ಟಲ್‌ನಲ್ಲಿ [ http://news.google.co.in/ ] ಕನ್ನಡಕ್ಕೆ ಸ್ಥಾನವಿಲ್ಲ. ಇಲ್ಲಿ ಆಂಗ್ಲದ ಜೊತೆ ಭಾರತೀಯ ಭಾಷೆಗಳಾದ  हिन्दी | தமிழ் | മലയാളം | తెలుగు - ಗಳಿಗೆ ಅವಕಾಶವಿದೆ. ಅಂದರೆ ಅವರೆಲ್ಲಾ ತಮ್ಮ ಭಾಷೆಯನ್ನು ಹೆಚ್ಚು ಪ್ರಿತಿಸುತ್ತಾರೆ ಮತ್ತು ಬಳಸುತ್ತಾರೆ. ನಮ್ಮವರು ನಮ್ಮ ಭಾಷೆಯನ್ನು ಪ್ರೀತಿಸುತ್ತಾರೆ... ಆದರೆ ಬಳಸುವುದಿಲ್ಲ. ಅದು ಗೂಗಲ್‌ನವರಿಗೆ ತಿಳಿದಿರುವುದರಿಂದಲೇ ಅವರು ಕನ್ನಡದ ಸುದ್ಧಿಗೆ ಬಂದಿಲ್ಲ. ಮೊನ್ನೆ ಮೊನ್ನೆ "ಕುಬುಂಟು - ಲಿನಕ್ಸ್" ಅನ್ನು ನನ್ನ ಗಣಕಕ್ಕೆ ಪ್ರತಿಷ್ಠಾಪಿಸೋಣ ಎಂದು ಹೊರಟೆ. ಅದರಲ್ಲಿ ಕೂಡಾ ಭಾರತೀಯ ಹಲವಾರು ಭಾಷೆಗಳ ಆಯ್ಕೆ ಇದೆ. ಆದರೆ ಕನ್ನಡ ಇರಲಿಲ್ಲ. ಲಕ್ಷಾಂತರ ಮಂದಿ ಕನ್ನಡಿಗರು ಇವನ್ನೆಲ್ಲಾ ಉಪಯೋಗಿಸುತ್ತಾರೆಂಬುದರಲ್ಲಿ ಅನಿಮಾನವಿಲ್ಲ. ಆದರೆ ಯಾಕೆ ಎಲ್ಲೂ ಕನ್ನಡವಿಲ್ಲ ?? ಕಾರಣ ಸ್ಪಷ್ಟ... ನಮ್ಮವರು ಕನ್ನಡವನ್ನು ಬಳಸುವುದೇ ಇಲ್ಲ. ಸೈಬರ‍್ ಫಂಡಾ . ಕಾಮ್‌ನವರು ( www.cyberfunda.com/ ) ಕನ್ನಡದಲ್ಲಿ ಪ್ರಶ್ನೋತ್ತರ ವಿಭಾಗ ಶುರು ಮಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಮತ್ತು ನನಗೆ ತಿಳಿದಿರುವಂತೆ ಅದೇ ಕನ್ನಡಕ್

ಸಾಹಿತಿ ದೊಡ್ಡರಂಗೇಗೌಡ ಅವರೊಂದಿಗೆ

ಸಾಹಿತಿ ದೊಡ್ಡರಂಗೇಗೌಡ ಅವರ ಸಂಪೂರ್ಣ ವಿವರ ಉಳ್ಳ ಒಂದು ಜಾಲತಾಣವನ್ನು ನಿರ್ಮಿಸುತ್ತಿದ್ದೇವೆ. ಸೆಪ್ಟೆಂಬರ್ ೧೬ಕ್ಕೆ ಅದು ಬಿಡುಗಡೆ ಆಗಲಿದೆ.

ಸ್ನೇಹಿತರ ದಿನಾಚರಣೆಗೆ

ಎರಡು ಮನಸುಗಳು ಬೆರೆತು ಕಲೆತು ಮಾಡಿದಲ್ಲಿ ಮಂಥನ ಹೃದಯ ಪುಳಕಗೊಳಿಸಲಲ್ಲಿ ಮೂಡಿತು ಸ್ನೇಹ ಸಿಂಚನ ಪ್ರಾರಂಭವುಂಟು ಅಂತ್ಯವಿಲ್ಲ ಸ್ನೇಹ ನಿತ್ಯ ಚಿರಂತನ ಹೊಸ ಮನಸುಗಳ ಭೇಟಿಯಾಗೋ ಹುಮ್ಮನಸ್ಸಿನ ನಿತ್ಯ ನೂತನ ಬದುಕಿನಲ್ಲಿ ಸ್ನೇಹವೆಂಬ ಬರಿದೆ ಸಿಗುವ ಬಂಧನ ಕಟ್ಟುಪಾಡುಗಳನು ಮೀರಿ ಕಂಪಡರಿಸುವ ಚಂದನ.

ಮಹಾನಗರದ ಮರಗಳು ನಾವು

ಮಹಾನಗರದ ಮರಗಳು ನಾವು ಮೈ ಹರವಿ ನೆರಳಾಗುವೆವು ಮುಗ್ಗರಿಸಿ ಬೀಳುವೆವು ಒಮ್ಮೊಮ್ಮೆ ಗಾಳಿ ಮಳೆಗೆ ಆವ ಜನ್ಮದ ಪಾಪ ತಟ್ಟಿಹುದೋ ಎಮಗೆ ? ಎಲ್ಲರೂ ವೈರಿಗಳು ಈ ಮಹಾನಗರದೊಳಗೆ ವಸಂತಕ್ಕೆ ಮೈದಳೆದರೆ... ಕೊಂಚ ಮೈ ಕೊಡವಿ ಚಿಗಿತರೆ ಕೆ.ಇ.ಬಿ.ಯವರ ಕಟಾವು ಕಿಂಚಿತ್ ಒಣಗಿದರೆ ಕೊಂಬೆ ಪಾಲಿಕೆಯವರ ಕೊಡಲಿ ನಾ ಹೇಗೆ ನೆರಳ ಕೊಡಲಿ ? ರಸ್ತೆ ಅಗಲೀಕರಣ, ಫುಟ್ಪಾತ್ ನವೀಕರಣ ಏನಿಲ್ಲದಿದ್ದರೂ ಯೋಧರ ವನ ಎಲ್ಲದಕ್ಕೂ ಪ್ರತಿನಿತ್ಯ ನಮ್ಮ ಹನನ ಕತ್ತರಿಸಿದರೂ ರೆಂಬೆ ಕೊಂಬೆಗಳ ಮತ್ತೆ ಚಿಗಿತು ಜೀವನದಲಿ ಹೋರಾಡೆಂಬ ಪಾಠ ಸಾರುವೆವು ಬಿಸಿಲಿಗೆ ಬೇಯುವ ಜನಕೆ ಬಿಡದೆ ನೆರಳಾಗುವೆವು.

ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ ಏನು ಏನು ತಪ್ಪು ಮಾಡಿದೆ

ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ ಏನು ಏನು ತಪ್ಪು ಮಾಡಿದೆ ಕನ್ನಡಿಗರು ಇದೆನೆಲ್ಲ ಓದಿದ ಮೇಲೆ ಗೊತ್ತಾಗುತ್ತೆ, ಕರ್ನಾಟಕ ಸರ್ಕಾರ ಕನ್ನಡದ ಗಣಕೀಕರಣದಲ್ಲಿ  ಏನು ಏನು ತಪ್ಪು ಮಾಡಿದೆ ಅಂತ.   ಇದೆಕ್ಕೆಲ್ಲ  ಕಾರಣ ಕನ್ನಡ ಗಣಕ ಪರಿಷತ್ ಮತ್ತು ಶೇಷಾದ್ರಿವಾಸು.     ೧. ಕನ್ನಡದ ಗಣಕೀಕರಣದಲ್ಲಿ ಈಗಾಗಲೇ ಹಲವು ವರ್ಷಗಳ ಹಿಂದೆಯೇ ನಮ್ಮಲ್ಲಿ ಅನೇಕ ತಂತ್ರಜ್ಞರಿದ್ದರು, ತಂತ್ರಾಂಶಗಳಿದ್ದವು, ಹಾಗೂ ಅವುಗಳಿಗೆ ಬೇಡಿಕೆ ಮತ್ತು ಪೂರೈಕೆ ಎರ್ಡೂ ಸಮತೋಲವಾಗಿ ಸಾಗಿತ್ತಿದ್ದವು.       ೨. ತಂತ್ರಜ್ಞಾನ ಬೆಳದಂತೆ ಕನ್ನಡದ ಗಣಕೀಕರಣವೂ ಸಾಕಷ್ಟು ಪ್ರಗತಿ ಸಾಧಿಸ ಬಹುದಿತ್ತು.     ೩. ಕನ್ನಡದ ಗಣಕೀಕರಣದಲ್ಲಿ ೧೯೯೩ ರಿಂದ ೨೦೦೩ ರ ಅವಧಿಯಲ್ಲಿಯೇ ಅನೇಕ ಅನ್ವಯಿಕ ತಂತ್ರಾಂಶಗಳು (Application softwares)    ಲಭ್ಯ ವಾಗಿತ್ತು.       ೪. ಕನ್ನಡದ ಗಣಕೀಕರಣದಲ್ಲಿ , ಮೊದಲಿನ ವೇಗದಲ್ಲಿ ಕಂಡು ಬಂದ ಬೆಳವಣಿಗೆ ಈಗ ಕಂಡು ಬರುತ್ತಿಲ್ಲ. ಯಾಕೆ ಅಂತ ನಾವೆಲ್ಲ ಯೋಚನೆ ಮಾಡಬೇಕು?         ಕನ್ನಡಿಗರು ಇದೆನೆಲ್ಲ ಓದಿದ ಮೇಲೆ ಗೊತ್ತಾಗುತ್ತೆ,       ಭಾರತೀಯ ಭಾಷೆಗಳ ಗಣಕೀಕರಣದ ಏಳಿಗೆ ಹಾಗೂ ಅವನತಿ ಭಾರತೀಯ ಭಾಷೆಗಳನ್ನ ಗಣಕೀಕರಿಸಲು ಕೆಲಸಗಳು ಆರಂಬವಾಗಿ ಸುಮಾರು ೨೭ ವರ್ಷಗಳೇ ತುಂಬಿವೆ.   * ಗಣಕದಲ್ಲಿ ಸಂಶೋದನೆಗಳು ಆರಂಬವಾದ ದಿನಗಳಿಂದಲೇ, * ಗಣಕಗಳೆಂದರೇನು? ಎಂದು, ಜನ ಸಾಮಾನ್ಯರಿಗೆ

ಲೋಕಾಯುಕ್ತ ಸಂತೋಷ್ ಹೆಗಡೆ ರಾಜೀನಾಮೆ

ಪ್ರಾಮಾಣಿಕರಿಗೆ ಕಾಲವಲ್ಲ ಅನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಬಹುಶಃ ಹೆಗ್ಡೆ ಅವರು ಯಡಿಯೂರಪ್ಪನವರ ಅಥವಾ ಗಣಿ ರೆಡ್ಡಿಗಳ ಎಂಜಲು ಕಾಸಿಗೆ ಕೈ ಒಡ್ಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಉಳಿದ ಹದಿನಾಲ್ಕು ತಿಂಗಳನ್ನು ಪೂರ್ಣಗೊಳಿಸುತ್ತಿದ್ದರು, ಮತ್ತು ಆಗ ಹೆಗ್ಡೆಯವರಿಗೆ ಅದ್ಧೂರಿ ಸನ್ಮಾನ ಸಹ ಸರ್ಕಾರದ ಕಡೆಯಿಂದಲೇ ದೊರೆಯುತ್ತಿತ್ತು.  ಹೆಗ್ಡೆಯವರು ಮಾಡಿದ ತಪ್ಪೆಂದರೆ ವೆಂಕಟಾಚಲಯ್ಯನವರಂತೆ ಆಸ್ಪತ್ರೆ, ಆರ್.ಟಿ.ಓ., ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮಾತ್ರ ದಾಳಿ ಮಾಡದೇ ನಿಜವಾದ ಹೆಗ್ಗಣಗಳ ತಲೆಗೇ ಬಿಸಿನೀರು ಕಾಯಿಸ ಹೊರಟಿದ್ದು. ಆದರೆ ನಮ್ಮ ಬ್ರಷ್ಟ ವ್ಯವಸ್ಥೆ ಹೆಗ್ಡೆಯವರಿಗಿಂತಾ ತುಂಬಾ ಬಲಿಷ್ಟವಾಗಿದೆ. ಅದರ ಪರಿಣಾಮ ನಿಷ್ಠಾವಂತ ನ್ಯಾಯಮೂರ್ತಿಯೊಬ್ಬರು ಸೋತು ಹೋಗಿದ್ದಾರೆ. ಇದು ಅವರ ಸೋಲಲ್ಲ, ನಮ್ಮ ನಿಮ್ಮೆಲ್ಲರ ಸೋಲು.

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕಾರ್ಡ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ ವಯಸ್ಸಾಗುವಾಗ ಈ ಕಾರ್ಡ್ ಕೊಡಬಹುದು. ಅದು ಆ ವ್ಯಕ್ತಿಯ ವೈಯಕ್ತಿಕ ಖಾತೆಯಾಗಿರುತ್ತದೆ. ಎಲ್ಲಾ ವ್ಯವಹಾರವೂ ಅದರಲ್ಲೇ ನಡೆಯಬೇಕು. ಉದಾ ಆ ಹುಡುಗನಿಗೆ ಅವರಪ್ಪ ಹಣ ಕೊಡಬೇಕೆಂದರೆ ತನ್ನ ಖಾತೆಯಿಂದ ಆನ್‌ಲೈನ್ ಮುಖಾಂತರವೇ ವರ್ಗಾಯಿಸಬೇಕು. ಹಣ ವರ್ಗಾವಣೆ ಅವಕಾಶವನ್ನು ಎಟಿಎಂ, ಮೊಬೈಲ್ ಎಸ್.ಎಂ.ಎಸ್.ಗಳಲ್ಲೂ ಒದಗಿಸಿದರೆ ಸುಲಭವಾಗುತ್ತದೆ.  ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆಯಾಗಬೇಕೆಂದರೆ ಖಾತೆಯಿಂದ ಖಾತೆಗೇ ಹೋಗಬೇಕು. ಇದರಿಂದ ಸರ್ಕಾರಕ್ಕೆ ನಿಖರವಾದ ಲೆಕ್ಕ ಸಿಗುತ್ತದೆ. ತೆರಿಗೆಯನ್ನು ಅವರವರ ಖಾತೆಯಿಂದಲೇ ನೇರವಾಗಿ ಸರ್ಕಾರ ಪಡೆದುಕೊಳ್ಳಬಹುದಾದ್ದರಿಂದ ತೀರಾ ಕಡಿಮೆ ತೆರಿಗೆ ಇಟ್ಟರೂ ಸಾಕು. ತೆರಿಗೆ ಸೋರಿಕೆಯಾಗುವುದಿಲ್ಲ. ಹಣದ ಕಳ್ಳತನವಾಗುವುದಿಲ್ಲ. ಅಕಸ್ಮಾತ್ ಯಾರಾದರೂ ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಸಿಕೊಂಡರೂ ಸಹ ನಂತರ ಸಿಕ್ಕಿ ಹಾಕಿಕೊಳ್ಳುತ್ತಾರೆ. ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳುವಾಗುವ ಭಯವಿರುವುದಿಲ್ಲ. ಕದ್ದವರು ಎಲ್ಲಾದರೂ ಮಾರಲೇಬೇಕು. ಆಗ ಆ ಹಣ ಎಲ್ಲಿಂದ ಬಂತು ಎಂದು ಕೆದಕಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು

ಗೆಳತಿ ನಿನ್ನ ನೆನಪಾಗುತಿದೆ....

ಗೆಳತಿ ನಿನ್ನ ನೆನಪಾಗುತಿದೆ. ಸಂಜೆಯ ಗಾಳಿ ಬೀಸುತಿದೆ ಮಳೆ ಬರುವ ಸೂಚನೆ ನೀಡುತಿದೆ ಗೆಳತಿ ನಿನ್ನ ನೆನಪಾಗುತಿದೆ ಬಾನು ಕವಿಯುವಾಗ ಮಿನುಗೋ ಮೊದಲ ತಾರೆ ನನ್ನ ಕೆಲವು ದಿನಗಳಿಗೆ ಬೆಳದಿಂಗಳಾಗಿ ಬಾರೆ ನಿನ್ನ ಸೊಂಪಾದ ನೋಟ....... ನಿನ್ನ ಸೊಂಪಾದ ನೋಟ ಇನ್ನೂ ನೆನಪಿದೆ ಮರೆಯಲು ಹೋದರೆ ನನ್ನೇ ಮರೆಸುತಿದೆ ಗೆಳತಿ ನಿನ್ನ ನೆನಪಾಗುತಿದೆ.. ನನ್ನ ಬಾಳಲಿ ಹೊಸಬೆಳಕು ತಂದ ದೀಪವೇ ನೀನು ಬಿಟ್ಟೋದ ನೆರಳಲ್ಲೇ ನಿನ್ನ ಇಂದು ಕಾಣುತಿರುವೆ ಇಳೆಗೆ ಮಳೆಯೇ ಬಂಧು ಆದರೆ ...... ಇಳೆಗೆ ಮಳೆಯೇ ಬಂಧು ಆದರೆ ನನ್ನ ಎದೆಗೂಡಲ್ಲು ಇರಬೇಕಾದ ಮುತ್ತು ನೀನೆಯಲ್ಲವೇ ಗೆಳತಿ ನಿನ್ನ ನೆನಪಾಗಿದೆ ಚೇತನ್ .ಎನ್            http://www.orkut.co.in/Main#Profile?uid=1901888616466504924

ನೀನೆ ನೀನೆ ನೀನೆ ನೀನೆ....

ನೀನೆ ನೀನೆ ನೀನೆ ನೀನೆ, ನೀನೆ ನೀನೆ ನೀನೆ ನೀನೆ, ಒಂದು ಸಾರಿ ನಿನ್ನ ನೋಡಿ ಪ್ರತಿಸಾರಿ ಬೀಳುವಂತ ಮೋಡಿ, ಕದ್ದೆಯಲ್ಲೇ ಹೃದಯವ ಚೋರಿ ನೆನೆಪಿಗು ನೀನು ಸುಂದರ ದಾರಿ ತಪ್ಪಾಗದು ತಿರುಗಿ ನೋಡೇ ಕೊನೆ ಸಾರಿ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ, ಕನಸಲ್ಲಿ ಕಾಡದೆ ಕೊಲ್ಲಿ ಮನಸಲ್ಲಿ ಕೂರದೆ ಮಳ್ಳಿ ಎದೆಯೊಳಗೆ ಬಂದೆಯಾ ಒಲವ ಚೆಲ್ಲಿ , ನಗುವಾಗ ಚೆಂದ ಹಾಗುವ ಪುಳಕ ಮುನಿಸಾದಾಗ ನೋಡಲು ಏನೋ ತವಕ ಇರಬೇಕು ಈ ಕಾಲ ಕೊನೆತನಕ , ನಿನದೊಂದು ಬಗೆಗೆ ನಾನು ಬದಲಾಗೆ ಕಾರಣವೇನು ಕೆದಕಿದರು ಬಗೆಹರಿತಿಲ್ಲ ಈ ಸಂಶಯ , ನೂರಾರು ಕವಿಗಳ ಕೃತಿಯ ಬಿಡಿಸೋಕೆ ನನಗಿಲ್ಲ ಸಮಯ ನಿನ್ನದೊಂದೇ ಕಥೆಗೆ ನಾನು ತನುಮಯ ಬರೆದಿಡುವೆ ಮುಂದಿನ ಜನುಮಕು ಇದರ ಅನ್ವಯ .... ಚೇತನ್.ಎನ್ 

ದೀಪದ ಬೆಳಕಲ್ಲಿ ನಿನ್ನ ನೋಡುವೆ.........

ದೀಪದ ಬೆಳಕಲ್ಲಿ ನಿನ್ನ ನೋಡುವೆ, ತಂಗಾಳಿಯಾ ಅಲೆಯಾಗಿ ಕೆನ್ನೆ ಸವರಿ ಹೋಗುವೆ, ಕನಸು ಕೂಡ ನಿನ್ನಿಂದ ಏಕೋ ನೂತನವೆನಿಸಿದೆ , ಸೇರೆಯಾದಾಗ ಮನಸು ಇನ್ನು ಚೆಂದ ಅನಿಸಿದೆ , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ , ಕತ್ತಲೆಯಾದಾಗ ಜಗವು , ಸಹನೆ ಕಳೆದುಕೊಳ್ಳುತಿದೆ ಒಲವು, ಇದು ತಾರೆ ಎಣಿಸುವ ಕ್ಷಣವೂ, ನೀನೆ ಹೇಳು !!! ಮನಸಿಗೂ ಬೇಕು ತಲ್ಲಣ , ಬೆಳದಿಂಗಳಿಗಿಂತ ಇನ್ನಾವುದಿದೆ ನೂತನ, ದೂರದ ತೀರದಲ್ಲಿದೆ ಅಲೆಗಳ ನರ್ತನ, ಈಗ ನೀನೆ ನೋಡು , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ ನೀ ಬರುವಾಗ ನಾನು, ಬೇಕೆಂತಲೇ ಹಿಂದೆ ಸರಿವೆ , ಕೋಪದಿಂದ ಬಂದು ನೀನು , ಅಪ್ಪಿಕೊಂಡಾಗ ಈ ಲೋಕವನ್ನೇ ಮರಿವೆ , ನಿನ್ನ ಬೊಂಬೆ ನಾನು , ನನಗೆಂದೆ ತಾನೇ ನೀನು, ಈಗ ನಿನ್ನಲ್ಲಿ ಇರೋದು ನಾನು, ನನ್ನಲ್ಲೂ ತಾನೇ ನೀನು , ಈ ರೀತಿ ಈ ಪ್ರೀತಿ ಭೂಮಿಗೆ ಸಾರಥಿಯಾಗಿದೆ.....    ಚೇತನ್.ಎನ್ 

ಕಾವಲು

ನಾವು ಭೇಟಿಯಾದಾಗೆಲ್ಲ  ಅವಳ ಕಣ್ಣು  ನನ್ನ ಕಣ್ಣುಗಳನ್ನೇ  ಕಾಯುತ್ತಿರುತ್ತವೆ...  ನನ್ನ ಕಣ್ಣು  ಅವಳ ದೇಹದ ಮೇಲೆಲ್ಲಾ  ಹರಿಯದಿರಲೆಂದು.

ಈ ರೀತಿಯ ಮೈಲ್ ಬಂದರೆ ಎಚ್ಚರಿಕೆಯಾಗಿರಿ

Gmail Account Alert < mail.gooogle.accounts@gmail.com > Subject: Your Account Will Expire To: yourid@gmail.com Your Account will expire soon if not updated. This is an automatically system generated Auto Account Expiry Notification.   For Enhanced Security Its now mandatory to update your security information which is required if you forget your password or account details.   Your Account will get Expired soon if your Security Information is not updated   Please click on the below link to update your security information    ww%w.g%m% ail.com/login.html/username=%maltisirsi%     Team Google ---------------- ಈ ರೀತಿಯ ಮೈಲ್ ಬಂದಾಗ ಬಂದ ಮೈಲ್ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ. ಇದು ಜಿಮೈಲ್ ನಿಂದ ಬಂದ ಮೈಲ್ ಅಲ್ಲ. < mail.gooogle.accounts@gmail.com > ಇಲ್ಲಿ gooogle ನೋಡಿ. 3  ಓ ಗಳು ಇವೆ.  ಅವರು ಕ್ಲಿಕ್ ಮಾಡಲು ಹೇಳಿರುವ ww%w.g%m% ail.com/login.html/username=%maltisirsi%  ಲಿಂಕ್ ಕ್ಲಿಕ್ ಮಾಡಿದರೆ ಯಾವ ಜಾಲತಾಣಕ್ಕೆ ಹೋಗುತ್ತದೆ ಎಂದು ತಿಳಿಯಲು ಒಮ್ಮೆ ಸುಮ್ಮನೆ ಆ ಲಿಂಕ್ ಮೇಲೆ ಕರ್ಸರ್ ತೆಗೆದುಕೊಂಡು ಹೋಗಿ. ಆಗ ಬ್ರೌಸರ್‌ನ ಕೆಳ ಎಡ

ಓ ಗೆಳತಿ

ಬೀಸುವ ಈ ತಂಗಾಳಿ ನೀಡಲಿಲ್ಲವೇ ನಿನಗೆ ನಾ ಕಳಿಸಿದ ಸಿಹಿ ಚುಂಬನವ ? ಮರೆಯಾಗುತ್ತಿರುವ ಆ ಸೂರ್ಯ ಕೊಡಲಿಲ್ಲವೇ ಗೆಳತಿ ನಿನಗೆಂದು ನಾ ಬರೆದ ಅಮರ ಪ್ರೇಮದೋಲೆಯ ? ತಾಳು ತಾಳೆಲೆ ಹುಡುಗಿ ಬರುವನು ಸುಂದರ ಚಂದ್ರಮ ನಿನ್ನ ಸೌಂದರ್ಯವ ಕಂಡು ಬೆರಗಾಗಿ ನಾಚಿಕೊಂಡು ನಿನಗಿವನೇ ಜೋಡಿಯೆಂದು ಓಡುವನು ನೋಡು ಇಂದು ! ನಿನಗಾಗಿ ಕಾಣಿಕೆಯ ನಾನೇನು ತರಲಿ ಚೆಲುವೆ ? ಈ ನನ್ನ ಜೀವನವ ನಿನಗೆಂದೇ ಮೀಸಲಿಟ್ಟಿರುವೆ.

ಕಮರು

ಕಮರು ಹೇಗೋ ಹುಟ್ಟಿದ ಸ್ನೇಹವ ನೀನೇ ಚಿವುಟಿದೆ ನಿನ್ನಯ ಉಗುರಿನಲಿ ಸ್ನೇಹ ಒಂದೇ, ಮೋಹದ ಮುಂದೆ ಉಳಿವುದು ಎಂದೇ ನಾ ಬೆಂದೆ. ಯಾರದೋ ಶಾಪ, ಯಾರದೊ ಕೊಪ ನೊಂದಿತು ಗೆಳತಿ ಈ ಮನಸು ನಿನ್ನಯ ನಗುವೇ ನನ್ನಯ ಸ್ಫೂರ್ತಿಯು ನೀ ನಗುತಿದ್ದರೆ ಅದು ಸೊಗಸು ಏತಕೆ ವಾದ, ಬೇಡದ ಬೇಧ ಮುಸುಕದೆ ಇರಲಿ ಕಾರ್ಮೋಡ ಒಲುಮೆಯ ದುಡುಕು, ಬೇಡದ ಬಿರುಕು, ಹಸನಾಗಿರಲಿ ನಿನ್ನ ಬದುಕು

ತಳಮಳವ ತಂದಿಟ್ಟವಳೇ,

ಎಲ್ಲಿಂದ ನೀ ಬಂದೆ ಹೇಳೆ ಓ ಜಾಣೆ ನನ್ನಲ್ಲಿ ಯಾಕಿಂತ ತಳಮಳವೋ ಕಾಣೆ ಪಟ ಪಟನೆ ಮಾತುಗಳು ಉದುರಿದರೆ ಮುತ್ತುಗಳು ನಿನ್ನ ಸಂಗ ಹಿತವಾಯ್ತು ಹೆಣ್ಣೆ ನಿನ್ನ ಮನಸೊಂದು ಮೃದುವಾದ ಬೆಣ್ಣೆ ತೋರುವೆ ಆಗಾಗ ನೀ ಕೊಂಚ ಬಿಂಕ ಆದರೆ ನಿನ್ನ ಮನಸು ಶುಭ್ರ ನಿಷ್ಕಳಂಕ ತಿದ್ದಿ ತೀಡುವೆ ನೀ ನನ್ನ ಸರಿ ತಪ್ಪು ತಿಳಿಸಿ ರದ್ದಿ ಬದುಕಲಿ ಒಂದು ಕೋಲ್ಮಿಂಚು ಹರಿಸಿ ನಸುಕೋಪ, ಹುಸಿ ಜಗಳ ಪರಸ್ಪರ ಇರಬಹುದು ಸುಮ್ನೇ ಬೈಗುಳ ಆದರೂ ನಮ್ಮ ಸ್ನೇಹ ಬಲು ಸರಳ ಎಲ್ಲದಕ್ಕೂ ಮೀರಿದ ನಿನ್ನೊಲುಮೆ ಬಹಳ ನೀ ಹೇಳದೇ ಮಾಡಿದೆ ಅದೇನೋ ಮೋಡಿ ನಾ ಕಾದಿರುವೆ ಗೆಳತಿ ನಿನ್ನೊಲವ ಬೇಡಿ ಸ್ವಲ್ಪ ಕದ್ದೊಯ್ದೆ ನೀನೆನ್ನ ನಿದ್ರೆ ಒತ್ತಲೇನೇ ಕೆನ್ನೆಗೊಂದು ಚುಂಬಕ ಮುದ್ರೆ

ಭಾರತ ಹಾಕಿ ತಂಡದ ಯಶೋಗಾಥೆ - 1

ಒಲಂಪಿಕ್‌ನಲ್ಲಿ  ಏಷ್ಯಾದಲ್ಲೇ ಚಿನ್ನ ಗಳಿಸಿದ ಮೊದಲ ರಾಷ್ಟ್ರ ಭಾರತವೇ. ಸತತ ಆರು ಬಾರಿ ಚಿನ್ನ ಗೆದ್ದ ತಂಡವೂ ಭಾರತವೇ. ಒಂದು ಬಾರಿ ನಮ್ಮವರು ಅಮೆರಿಕಾ ತಂಡದ ಮೇಲೆ ಒಂದೇ ಆಟದಲ್ಲಿ ಒಟ್ಟು ೨೪ ಗೋಲುಗಳನ್ನು ಹೊಡೆದಿದ್ದರು. ಆ ಪಂದದಲ್ಲಿ ಅಮೆರಿಕಾ ಬಾರಿಸಿದ್ದು ಒಂದೇ ಒಂದು ಗೋಲು. ಅದೂ ಹೇಗಂತೀರಾ? ನಮ್ಮ ಗೋಲ್ ಕೀಪರ್ ರಿಚಡ್ ಜೇಮ್ಸ್ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ಸಮುಯದಲ್ಲಿ! ಹೀಗೆ ಮೈ ನವಿರೇಳಿಸುವ ಭಾರತದ ಹಾಕಿ ಇತಿಯಾಸವನ್ನು ಹಾಗೇ ಒಮ್ಮೆ ಓದುತ್ತಾ ಹೋಗಿ. ನಾವು ಶಾಲೆಗೆ ಹೋಗುವ ಸಮಯದಲ್ಲಿ ಶಿಕ್ಷಕರು "ನಮ್ಮ ದೇಶದ ರಾಷ್ಟ್ರೀಯ ಆಟ ಹಾಕಿ" ಎಂದು ಮಾತನಾಡುವಾಗ ಅದನ್ನು ಹೇಗೆ ಆಡುತ್ತಾರೆಂಬುದೇ ತಿಳಿದಿರಲಿಲ್ಲ. ಆಗ ನಮ್ಮೂರಲ್ಲೆಲ್ಲೂ ಕರೆಂಟಾಗಲೀ, ಟಿ.ವಿ.ಯಾಗಲೀ ಇರಲಿಲ್ಲವಾದ್ದರಿಂದ ಹಾಕಿಯ ಗಂಧ ಗಾಳಿಯೂ ಸೋಕಲಿಲ್ಲ. ಹೌದು, ಸರಿಯಾಗಿ ಮೂವತ್ತು ವರ್ಷಗಳೇ ಕಳೆದು ಹೋದವು... ಭಾರತ ಹಾಕಿಯಲ್ಲಿ ಬಂಗಾರ ಗೆದ್ದು! ೧೯೮೦ರ ಮಾಸ್ಕೋ  ಒಲಂಪಿಕ್‌ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುದೇ ಕೊನೆ. ಅದರ ನಂತರ ಚಿನ್ನವಂತಿರಲಿ ಬೆಳ್ಳಿಯೂ ಹೋಗಲಿ, ಒಂದೇ ಒಂದು ಕಂಚಿನ ಪದಕ ಕೂಡಾ ಒಲಂಪಿಕ್‌ನಿಂದ ಭಾರತಕ್ಕೆ ಬಂದಿಲ್ಲ. ಇದನ್ನು ಓದುವಾಗ ನಮಗೇ ಇಷ್ಟು ಬೇಸರವಾಗುವಾಗ ಹಾಕಿಯ ಅತ್ಯಂತ ಅಭಿಮಾನಿಗಳಿಗೆ  ಹಾಗೂ ಅದನ್ನೇ ನೆಚ್ಚಿಕೊಂಡಿರುವ ಆಟಗಾರರಿಗೆ ಹೇಗಿರಬೇಡ? ರಾಷ್ಟ್ರೀಯ ಆಟವಾಗಿದ್ದರೂ ಅದನ್ನು ಹೇಗೆ ಆಡುತ

ಕಾಯಲೇನೇ ಗೆಳತಿ

ಕಾಯಲೇನೇ ಗೆಳತಿ ಕಡಲುಕ್ಕುವ ಸಮಯಕ್ಕೆ ಕಾಲಿಡುವೆಯೇನೇ ನೀ ನನ್ನ ಹೃದಯಕ್ಕೆ? ಮಂಜು ಮುಸುಕುವ ಹೊತ್ತಿಗೆ ಮಂದಾರ ಹೂ ನಿನ್ನ ನತ್ತಿಗೆ ಬಾಡದಂತೆ ಹಿಡಿದು ನಾ ಸುತ್ತಿದೆ ಕಾಣದೇ ನೀ ಹೋದೆ ಎತ್ತಗೆ? ಬಳುಕು ಬಿನ್ನಾಣ, ಆ ತುಂಟ ಕಣ್ಣ ಸಂಗ್ರಹಿಸಿಡಲೇ ನೀ ತುಳಿದ ಮಣ್ಣ ಕುಡಿ ನೋಡ ನೀಡಿ ಕಾಡದಿರು ನನ್ನ ಕಡಿದು ಸಂಬಂಧ ದೂರಾದರೇ ಚೆನ್ನ.

ವರ್ಣಿಸಲಾಗದ ಭಾವೈಕ್ಯತೆ

ಅಣಕ

ಎತ್ತೆತ್ತ ನೋಡಲತ್ತತ್ತ ನಗುತಿದೆ ಕ್ರೂರ ಮುಖ ಕಂಗೆಡಿಸಿ ಮೇಲೆ ಬಿದ್ದಿದೆ ಹರಿ ಹಾಯ್ದು ಚಾಚಿ ವ್ಯಾಘ್ರನಖ ಬಾಚಿ ಬಿಗಿದಪ್ಪಿ ಉಸಿರುಗಟ್ಟಿಸಲೆತ್ನಿಸಿದೆ ದೋಚಿ ಎಲ್ಲ ಸುಖ ಸೋತು ಸೊರಗಿದರೂ ಮತ್ತೆ ಎಚ್ಚೆತ್ತು ಹೋರಾಡುವ ವ್ಯರ್ಥ ಪ್ರಯತ್ನ ಮಾಡಿ ಮಡಿವ ನನ್ನ ತುಸು ಯತ್ನ ಗೆಲ್ಲಲಾರೆನೆಂದಿಗೂ ನಾ ಅರಿತೆ ವಿಧಿ ಬರಹ ಮೆಟ್ಟಿ ನಿಲ್ಲಲಾರೆ ಮರೆತು ಕೂಡಾ ಇದು ಜೀವನದ ನಿಜ ಅಣಕ.

ನಾ ಕಂಡ ಅವಳು

ತೀಡಿಟ್ಟ ಹುಬ್ಬು ಮಿಂಚು ಮಿನುಗುವ ಕಣ್ಣು ತುಟಿ ಬಿರಿದ ತೊಂಡೆ ಹಣ್ಣು ಬಣ್ಣಿಸಲಿ ಹೇಗೆ ಕೆನ್ನೆಯನ್ನು? ತುಳುಕಾಡೋ ಕೇಶ ರಾಶಿ ಅದಕ್ಕೊಂದೇ ಮೇಘ ಸಾಟಿ ನೀನಿರಲು ಹೃದಯ ಸ್ಫೂರ್ತಿ ಜೀವ ಬಂದ ಸುಂದರ ಮೂರ್ತಿ ಹಾಲ್ದೆನೆ ಹೊಯ್ದ ಮೈಯ ಬಣ್ಣ ಹಾವಂತೆ ಬಳುಕೋ ಸೊಂಟ ಸಣ್ಣ ಯೌವ್ವನಭರಿತ ಎದೆಯಂಗಗಳನ್ನ ಪದಗಳಲ್ಲಿ ಬಚ್ಚಿಡಲೇ ನಾ? ನಡು ಸಣ್ಣ, ಉದರ ಬಿಳ್ಮುಗಿಲು ನಡುವೆ ಹೊಕ್ಕಳ ಟಿಸಿಲು ಮತ್ತೆ ನಯ ವಿನಯ, ಬಣ್ಣಿಸಲು ತುಂಬಾ ದಿಗಿಲು ಪಾದರಸ ನಡಿಗೆ ಶಾರದೆ ನುಡಿಗೆ ಈ ಅಪೂರ್ವ ಸುಂದರಿಗೆ ಕೆಂದಾವರೆ ನಗುಮೊಗದೊಡವೆ.

ಯಾರು ?

ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು? ಆ ರವಿವರ್ಮನಾ? ಇಲ್ಲ ಸಾಕ್ಷಾತ್ ಬ್ರಹ್ಮಾನಾ? ಯಾರು ನಿನ್ನ ಕೆನ್ನೆ ಮೇಲೆ ಕುಳಿಯನಿಟ್ಟವರು? ಆ ಮದನನೇನಾ? ಅಥವಾ ಕಳ್ಳ ಕೃಷ್ಣನಾ? ಹುಬ್ಬು ತೀಡಿ ಕಾಮನ ಬಿಲ್ಲ ಹೊಸೆದವರ್ಯಾರೋ? ಕಣ್ಣ ಜೋಡಿ ತಂದು ಇಟ್ಟು ಮೋಡಿ ಮಾಡಿದೋರ್ಯಾರೋ? ಬೆಣ್ಣೆ ಮುದ್ದೆ ಜಾರಿ ಬಂದು ನಿನ್ನ ನಯ ಕೆನ್ನೆಯಾಯ್ತೋ. ಮೇಘದ ತುಂಡು ತಂದು ಮುಂಗುರಳ ಮಾಡಲಾಯ್ತೋ? ತುಟಿಯ ರಂಗು ಸೂರ್ಯ ತಾನೇ ಸಂಜೆ ತಂದು ಕೊಟ್ಟನೋ? ಆ ಮುಗುಳು ನಗು ಚಂದ್ರ ಪೌರ್ಣಿಮೆಗೆ ಕಳೆದುಬಿಟ್ಟನೋ? ಗುಲಾಬಿ ರಂಗು ನಿನ್ನ ಮೊಗದಿ ತನ್ನ ಅಂದ ಚೆಲ್ಲಿತೋ ಕೋಗಿಲೆ ತನ್ನ ಧ್ವನಿಯ ನಿನಗೆಂದೇ ಧಾರೆಯೆರೆಯಿತೋ?