ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

March, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಮರು

ಕಮರುಹೇಗೋ ಹುಟ್ಟಿದ ಸ್ನೇಹವ ನೀನೇ ಚಿವುಟಿದೆ ನಿನ್ನಯ ಉಗುರಿನಲಿಸ್ನೇಹ ಒಂದೇ, ಮೋಹದ ಮುಂದೆಉಳಿವುದು ಎಂದೇ ನಾ ಬೆಂದೆ.ಯಾರದೋ ಶಾಪ, ಯಾರದೊ ಕೊಪನೊಂದಿತು ಗೆಳತಿ ಈ ಮನಸುನಿನ್ನಯ ನಗುವೇ ನನ್ನಯ ಸ್ಫೂರ್ತಿಯುನೀ ನಗುತಿದ್ದರೆ ಅದು ಸೊಗಸುಏತಕೆ ವಾದ, ಬೇಡದ ಬೇಧಮುಸುಕದೆ ಇರಲಿ ಕಾರ್ಮೋಡಒಲುಮೆಯ ದುಡುಕು, ಬೇಡದ ಬಿರುಕು,ಹಸನಾಗಿರಲಿ ನಿನ್ನ ಬದುಕು

ತಳಮಳವ ತಂದಿಟ್ಟವಳೇ,

ಎಲ್ಲಿಂದ ನೀ ಬಂದೆ ಹೇಳೆ ಓ ಜಾಣೆ
ನನ್ನಲ್ಲಿ ಯಾಕಿಂತ ತಳಮಳವೋ ಕಾಣೆ

ಪಟ ಪಟನೆ ಮಾತುಗಳು
ಉದುರಿದರೆ ಮುತ್ತುಗಳು
ನಿನ್ನ ಸಂಗ ಹಿತವಾಯ್ತು ಹೆಣ್ಣೆ
ನಿನ್ನ ಮನಸೊಂದು ಮೃದುವಾದ ಬೆಣ್ಣೆ

ತೋರುವೆ ಆಗಾಗ ನೀ ಕೊಂಚ ಬಿಂಕ
ಆದರೆ ನಿನ್ನ ಮನಸು ಶುಭ್ರ ನಿಷ್ಕಳಂಕ
ತಿದ್ದಿ ತೀಡುವೆ ನೀ ನನ್ನ ಸರಿ ತಪ್ಪು ತಿಳಿಸಿ
ರದ್ದಿ ಬದುಕಲಿ ಒಂದು ಕೋಲ್ಮಿಂಚು ಹರಿಸಿ

ನಸುಕೋಪ, ಹುಸಿ ಜಗಳ
ಪರಸ್ಪರ ಇರಬಹುದು ಸುಮ್ನೇ ಬೈಗುಳ
ಆದರೂ ನಮ್ಮ ಸ್ನೇಹ ಬಲು ಸರಳ
ಎಲ್ಲದಕ್ಕೂ ಮೀರಿದ ನಿನ್ನೊಲುಮೆ ಬಹಳ

ನೀ ಹೇಳದೇ ಮಾಡಿದೆ ಅದೇನೋ ಮೋಡಿ
ನಾ ಕಾದಿರುವೆ ಗೆಳತಿ ನಿನ್ನೊಲವ ಬೇಡಿ
ಸ್ವಲ್ಪ ಕದ್ದೊಯ್ದೆ ನೀನೆನ್ನ ನಿದ್ರೆ
ಒತ್ತಲೇನೇ ಕೆನ್ನೆಗೊಂದು ಚುಂಬಕ ಮುದ್ರೆ


ಭಾರತ ಹಾಕಿ ತಂಡದ ಯಶೋಗಾಥೆ - 1

ಒಲಂಪಿಕ್‌ನಲ್ಲಿ  ಏಷ್ಯಾದಲ್ಲೇ ಚಿನ್ನ ಗಳಿಸಿದ ಮೊದಲ ರಾಷ್ಟ್ರ ಭಾರತವೇ. ಸತತ ಆರು ಬಾರಿ ಚಿನ್ನ ಗೆದ್ದ ತಂಡವೂ ಭಾರತವೇ. ಒಂದು ಬಾರಿ ನಮ್ಮವರು ಅಮೆರಿಕಾ ತಂಡದ ಮೇಲೆ ಒಂದೇ ಆಟದಲ್ಲಿ ಒಟ್ಟು ೨೪ ಗೋಲುಗಳನ್ನು ಹೊಡೆದಿದ್ದರು. ಆ ಪಂದದಲ್ಲಿ ಅಮೆರಿಕಾ ಬಾರಿಸಿದ್ದು ಒಂದೇ ಒಂದು ಗೋಲು. ಅದೂ ಹೇಗಂತೀರಾ? ನಮ್ಮ ಗೋಲ್ ಕೀಪರ್ ರಿಚಡ್ ಜೇಮ್ಸ್ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ಸಮುಯದಲ್ಲಿ! ಹೀಗೆ ಮೈ ನವಿರೇಳಿಸುವ ಭಾರತದ ಹಾಕಿ ಇತಿಯಾಸವನ್ನು ಹಾಗೇ ಒಮ್ಮೆ ಓದುತ್ತಾ ಹೋಗಿ.

ನಾವು ಶಾಲೆಗೆ ಹೋಗುವ ಸಮಯದಲ್ಲಿ ಶಿಕ್ಷಕರು "ನಮ್ಮ ದೇಶದ ರಾಷ್ಟ್ರೀಯ ಆಟ ಹಾಕಿ" ಎಂದು ಮಾತನಾಡುವಾಗ ಅದನ್ನು ಹೇಗೆ ಆಡುತ್ತಾರೆಂಬುದೇ ತಿಳಿದಿರಲಿಲ್ಲ. ಆಗ ನಮ್ಮೂರಲ್ಲೆಲ್ಲೂ ಕರೆಂಟಾಗಲೀ, ಟಿ.ವಿ.ಯಾಗಲೀ ಇರಲಿಲ್ಲವಾದ್ದರಿಂದ ಹಾಕಿಯ ಗಂಧ ಗಾಳಿಯೂ ಸೋಕಲಿಲ್ಲ.

ಹೌದು, ಸರಿಯಾಗಿ ಮೂವತ್ತು ವರ್ಷಗಳೇ ಕಳೆದು ಹೋದವು... ಭಾರತ ಹಾಕಿಯಲ್ಲಿ ಬಂಗಾರ ಗೆದ್ದು! ೧೯೮೦ರ ಮಾಸ್ಕೋ  ಒಲಂಪಿಕ್‌ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುದೇ ಕೊನೆ. ಅದರ ನಂತರ ಚಿನ್ನವಂತಿರಲಿ ಬೆಳ್ಳಿಯೂ ಹೋಗಲಿ, ಒಂದೇ ಒಂದು ಕಂಚಿನ ಪದಕ ಕೂಡಾ ಒಲಂಪಿಕ್‌ನಿಂದ ಭಾರತಕ್ಕೆ ಬಂದಿಲ್ಲ. ಇದನ್ನು ಓದುವಾಗ ನಮಗೇ ಇಷ್ಟು ಬೇಸರವಾಗುವಾಗ ಹಾಕಿಯ ಅತ್ಯಂತ ಅಭಿಮಾನಿಗಳಿಗೆ  ಹಾಗೂ ಅದನ್ನೇ ನೆಚ್ಚಿಕೊಂಡಿರುವ ಆಟಗಾರರಿಗೆ ಹೇಗಿರಬೇಡ?

ರಾಷ್ಟ್ರೀಯ ಆಟವಾಗಿದ್ದರೂ ಅದನ್ನು ಹೇಗೆ ಆಡುತ್ತಾರೆ? …

ಕಾಯಲೇನೇ ಗೆಳತಿ

ಕಾಯಲೇನೇ ಗೆಳತಿ ಕಡಲುಕ್ಕುವ ಸಮಯಕ್ಕೆ
ಕಾಲಿಡುವೆಯೇನೇ ನೀ ನನ್ನ ಹೃದಯಕ್ಕೆ?
ಮಂಜು ಮುಸುಕುವ ಹೊತ್ತಿಗೆ
ಮಂದಾರ ಹೂ ನಿನ್ನ ನತ್ತಿಗೆ
ಬಾಡದಂತೆ ಹಿಡಿದು ನಾ ಸುತ್ತಿದೆ
ಕಾಣದೇ ನೀ ಹೋದೆ ಎತ್ತಗೆ?
ಬಳುಕು ಬಿನ್ನಾಣ, ಆ ತುಂಟ ಕಣ್ಣ
ಸಂಗ್ರಹಿಸಿಡಲೇ ನೀ ತುಳಿದ ಮಣ್ಣ
ಕುಡಿ ನೋಡ ನೀಡಿ ಕಾಡದಿರು ನನ್ನ
ಕಡಿದು ಸಂಬಂಧ ದೂರಾದರೇ ಚೆನ್ನ.

ವರ್ಣಿಸಲಾಗದ ಭಾವೈಕ್ಯತೆ

ಅಣಕ

ಎತ್ತೆತ್ತ ನೋಡಲತ್ತತ್ತ ನಗುತಿದೆ
ಕ್ರೂರ ಮುಖ
ಕಂಗೆಡಿಸಿ ಮೇಲೆ ಬಿದ್ದಿದೆ ಹರಿ ಹಾಯ್ದು
ಚಾಚಿ ವ್ಯಾಘ್ರನಖ
ಬಾಚಿ ಬಿಗಿದಪ್ಪಿ ಉಸಿರುಗಟ್ಟಿಸಲೆತ್ನಿಸಿದೆ
ದೋಚಿ ಎಲ್ಲ ಸುಖ
ಸೋತು ಸೊರಗಿದರೂ ಮತ್ತೆ ಎಚ್ಚೆತ್ತು
ಹೋರಾಡುವ ವ್ಯರ್ಥ ಪ್ರಯತ್ನ
ಮಾಡಿ ಮಡಿವ ನನ್ನ ತುಸು ಯತ್ನ
ಗೆಲ್ಲಲಾರೆನೆಂದಿಗೂ ನಾ ಅರಿತೆ ವಿಧಿ ಬರಹ
ಮೆಟ್ಟಿ ನಿಲ್ಲಲಾರೆ ಮರೆತು ಕೂಡಾ
ಇದು ಜೀವನದ ನಿಜ ಅಣಕ.

ನಾ ಕಂಡ ಅವಳು

ತೀಡಿಟ್ಟ ಹುಬ್ಬು
ಮಿಂಚು ಮಿನುಗುವ ಕಣ್ಣು
ತುಟಿ ಬಿರಿದ ತೊಂಡೆ ಹಣ್ಣು
ಬಣ್ಣಿಸಲಿ ಹೇಗೆ ಕೆನ್ನೆಯನ್ನು?

ತುಳುಕಾಡೋ ಕೇಶ ರಾಶಿ
ಅದಕ್ಕೊಂದೇ ಮೇಘ ಸಾಟಿ
ನೀನಿರಲು ಹೃದಯ ಸ್ಫೂರ್ತಿ
ಜೀವ ಬಂದ ಸುಂದರ ಮೂರ್ತಿ

ಹಾಲ್ದೆನೆ ಹೊಯ್ದ ಮೈಯ ಬಣ್ಣ
ಹಾವಂತೆ ಬಳುಕೋ ಸೊಂಟ ಸಣ್ಣ
ಯೌವ್ವನಭರಿತ ಎದೆಯಂಗಗಳನ್ನ
ಪದಗಳಲ್ಲಿ ಬಚ್ಚಿಡಲೇ ನಾ?

ನಡು ಸಣ್ಣ, ಉದರ ಬಿಳ್ಮುಗಿಲು
ನಡುವೆ ಹೊಕ್ಕಳ ಟಿಸಿಲು
ಮತ್ತೆ ನಯ ವಿನಯ,
ಬಣ್ಣಿಸಲು ತುಂಬಾ ದಿಗಿಲು

ಪಾದರಸ ನಡಿಗೆ
ಶಾರದೆ ನುಡಿಗೆ
ಈ ಅಪೂರ್ವ ಸುಂದರಿಗೆ
ಕೆಂದಾವರೆ ನಗುಮೊಗದೊಡವೆ.

ಯಾರು ?

ಯಾರು ನಿನ್ನ ಒಂದು ಚಿತ್ರದಂತೆ ಗೀಚಿ ಹೋದವರು?
ಆ ರವಿವರ್ಮನಾ? ಇಲ್ಲ ಸಾಕ್ಷಾತ್ ಬ್ರಹ್ಮಾನಾ?
ಯಾರು ನಿನ್ನ ಕೆನ್ನೆ ಮೇಲೆ ಕುಳಿಯನಿಟ್ಟವರು?
ಆ ಮದನನೇನಾ? ಅಥವಾ ಕಳ್ಳ ಕೃಷ್ಣನಾ?

ಹುಬ್ಬು ತೀಡಿ ಕಾಮನ ಬಿಲ್ಲ ಹೊಸೆದವರ್ಯಾರೋ?
ಕಣ್ಣ ಜೋಡಿ ತಂದು ಇಟ್ಟು ಮೋಡಿ ಮಾಡಿದೋರ್ಯಾರೋ?
ಬೆಣ್ಣೆ ಮುದ್ದೆ ಜಾರಿ ಬಂದು ನಿನ್ನ ನಯ ಕೆನ್ನೆಯಾಯ್ತೋ.
ಮೇಘದ ತುಂಡು ತಂದು ಮುಂಗುರಳ ಮಾಡಲಾಯ್ತೋ?

ತುಟಿಯ ರಂಗು ಸೂರ್ಯ ತಾನೇ ಸಂಜೆ ತಂದು ಕೊಟ್ಟನೋ?
ಆ ಮುಗುಳು ನಗು ಚಂದ್ರ ಪೌರ್ಣಿಮೆಗೆ ಕಳೆದುಬಿಟ್ಟನೋ?
ಗುಲಾಬಿ ರಂಗು ನಿನ್ನ ಮೊಗದಿ ತನ್ನ ಅಂದ ಚೆಲ್ಲಿತೋ
ಕೋಗಿಲೆ ತನ್ನ ಧ್ವನಿಯ ನಿನಗೆಂದೇ ಧಾರೆಯೆರೆಯಿತೋ?

ಈ ಹುಡುಗಿಯರೇ ಹೀಗೆ

ಬೆಟ್ಟದ ಬದಿಯಿಂದ
ಮುಂಜಾನೆಯ ರವಿ ಇಣುಕಿದಂತೆ
ಕಿಟಕಿ ಹಿಂದಿನ ಕಂಗಳು,
ಕಂಡೂ ಕಾಣದ ಮುಂಗುರುಳು
ಗಲಗಲ ಬಳೆಯ ತರಂಗ
ಕಿಲಕಿಲ ನಗುವಿನಂತರಂಗ,

ಎದುರು ಬರಲಾರರು ಚೆಲುವೆಯರು
ಬಂದರೂ ಬಹು ಲಾಸ್ಯ ಲಜ್ಜೆ
ಇಡುತಲಿ ಒಂದೊಂದೇ ಹೆಜ್ಜೆ
ಮುಗಿಲಿಂದ ಬರಗಾಲದಿ ಮಳೆ ಹನಿ
ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ !

ಕಿರು ಹನತೆ ಉರಿಯಂತೆ ತುಟಿ ರಂಗು
ಪತಂಗ ಹಾರಿದಂತೆ ತೆಳು ಸೆರಗು
ಕಾವ್ಯದೊಡತಿಯರು,
ಮೌನವೇ ಮಾತು

ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ
ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ
ಒಮ್ಮೆ ಧಾರಾಳ ದಮಯಂತಿ
ಮಗದೊಮ್ಮೆ ಮುನಿದ ಮಗುವಂತೆ
ಅಲ್ಲಿ ಪ್ರೇಮ ಪ್ರೀತಿಯನ್ನರಸುವ
ಹುಡುಗನ ನಿರಂತರ ಬೇಟೆ !
ಅರಿವಾಗುವ ಮುನ್ನವೇ ಮಾನಸಿಕ
ಪತ್ನಿಯಾಗಿರುತ್ತಾಳೆ,
ಛೇಧಿಸಿ ಹೃದಯ ಕೋಟೆ.

ಎಲ್ಲಾದರೂ ಇರು ಎಂಥಾದರೂ ಇರು ಏನನ್ನಾದರೂ ನೀ ಹುಡುಕುತ್ತಲಿರು!

ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು, ಆಮೇಲೆ ಅಣ್ಣಂದಿರನ್ನು, ಅಕ್ಕ ತಂಗಿಯರನ್ನು, ಸ್ನೇಹಿತರನ್ನು, ಆಟದ ಸಾಮಾನುಗಳನ್ನು ಅಮ್ಮ ಮುಚ್ಚಿಟ್ಟುರವ ಉಂಡಿಗಳನ್ನು....  ಹೀಗೆ ಹುಡುಕುವ ಕಾರ್ಯ ಹುಟ್ಟಿನಿಂದಲೇ ಶುರು. ಮಗುವನ್ನು ಕಳೆದುಕೊಂಡು ಹುಡುಕುವ ಅಪ್ಪಾಮ್ಮಂದಿರೂ ಇದಾರೆ. ಕೆಲವು ನತದೃಷ್ಟ ಮಕ್ಕಳ ತಂದೆ ತಾಯಿಯಂದಿರೇ ಕಳೆದು ಹೋಗಿರುತ್ತಾರೆ. ಇಪ್ಪತ್ತೊಂದು ವರ್ಷದ ನಂತರ ಜೋನಾಥನ್ ಎಂಬ ಯುವಕ ತನ್ನ ಹೆತ್ತವರನ್ನು ಹುಡುಕಿದ!ಹಳ್ಳಿಗಳಿಗಿಂತಲೂ ನಗರಗಳಲ್ಲಿ ಹುಡುಕಾಟ ಜೋರು. ಮಗು ಮೂರು ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಒಳ್ಳೆಯ ಕಾನ್ವೆಂಟಿನ ಹುಡುಕಾಟ ಪ್ರಾರಂಭವಾಗುತ್ತದೆ. ನಮಂತರ ಒಳ್ಳೆಯ ಶಾಲೆ, ಒಳ್ಳೆಯ ಕಾಲೇಜು, ಒಳ್ಳೆಯ ಕೋರ್ಸು, ಒಳ್ಳೆಯ ಉದ್ಯೋಗ ಹೀಗೆ ಹುಡುಕಾಟದ ಸರಮಾಲೆಯೇ ಹೆತ್ತವರ ಮುಂದೆ. ಮಕ್ಕಳ ಬೆಳೆಯುತ್ತಿದ್ದಂತೆಯೇ ಜೊತೆಗಾರರನ್ನು ಹುಡುಕುತ್ತದೆ. ತಮಗೆ ಹಿಡಿಸುವ ಜೊತೆಗಾರರು ದೊರೆತಾದ ನಂತರ ತಮಗಿಷ್ಟವಾದ ಆಟದ ಹುಡುಕಾಟ. ಅಷ್ಟಾದ ಮೇಲೂ ಹುಡುಕುವುದು ನಿಲ್ಲುವುದಿಲ್ಲ. ಆಟ ಆಡಲು ಜಾಗ ಹುಡುಕಬೇಕು. ಆಟಕ್ಕೆ ಬೇಕಾದ ಪರಿಕರ ಹುಡುಕಬೇಕು. ಹುಡುಗರು ಕಡಿಮೆ ಬಿದ್ದರೆ ಸಾಕಾಗುವಷ್ಟು ಗೆಳೆಯರನ್ನು ಹುಡುಕಿಕೊಳ್ಳಬೇಕು. ಅಷ್ಟೆಲ್ಲಾ ಆಗಿ ಆಟ ಶುರುವಾದರೆ…

ಸಿರಿಗನ್ನಡಂ ಗೆಲ್ಗೆ

ಘಟನೆ ಒಂದು ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ ಬಸ್‌ನಲ್ಲಿ ಹೊರಟಿದ್ದೆ. ನನ್ನ ಹಿಂದಿನ ಆಸನದಲ್ಲಿ ಕುಳಿತಿದ್ದ ಇಬ್ಬರು ಹುಡುಗರು (ಬಹುಶಃ ಬಿಹಾರಿಗಳು) ಹೋರ್ಡಿಂಗ್‌ನಲ್ಲಿನ ಕನ್ನಡ ಸಿನೆಮಾ ಪೋಸ್ಟರ್‌ಗಳನ್ನು ನೋಡಿ ಅವರವರೇ ಮಾತಾಡುತ್ತಾ ರಾಜ್‌ಕುಮಾರ್ ವಿಷಯಕ್ಕೆ ಬಂದರು. ಆಗ ಒಬ್ಬ ರಾಜ್ ಬಗ್ಗೆ ಕೆಟ್ಟದಾಗಿ ಏನೋ ಹೇಳಿದ. ನನಗೆ ತಡೆದುಕೊಳ್ಳಲಾಗಲಿಲ್ಲ. ಹಿಂದೆ ತಿರುಗಿ ಹಾಗೆ ಹೇಳಿದವನಿಗೆ ಒಂದು ಕೊಟ್ಟೆ. ಪಕ್ಕದವನು ಕೈ ಮುಗಿದ. ನನ್ನ ಪಕ್ಕದಲ್ಲಿದ್ದ ಹಿರಿಯರೊಬ್ಬರು ತಡೆದು ನನಗೆ ಸಮಾಧಾನ ಮಾಡಿದರು.
ಘಟನೆ ಎರಡು ಮಹದೇವಪುರದಿಂದ ಬರುವಾಗ (ನನ್ನ ಪ್ರಯಾಣ ಬಸ್‌ನಲ್ಲೇ) ತಮಿಳಿನವನೊಬ್ಬ ನಿರ್ವಾಹಕನ ಬಳಿ ಚಿಲ್ಲರೆ ಕೊಡಲಿಲ್ಲವೆಂದು ಜಗಳ ಮಾಡಿದ. ಚಿಲ್ಲರೆ ಕೊಟ್ಟಿರುವುದಾಗಿ ನಿರ್ವಾಹಕ ಹೇಳಿದ. ಅವನು ಆ ಕಡೆ ಹೋದ ನಂತರ ಈ ಕೊಂಗ ನಿರ್ವಾಹಕನಿಗೆ ಕೆಟ್ಟದಾಗಿ ಬೈಯ್ಯುತ್ತಾ "ಈ ರಾಜ್ಯದವರೆಲ್ಲಾ ಹೀಗೇನೇ" ಅಂತ ತಮಿಳಲ್ಲಿ ಅಂದ. "___ ಮಗನೆ ಏನೆಂದೇ?" ಅನ್ನುತ್ತಾ ಅವನಿಗೂ ಹೊಡೆಯಲು ಹೋದೆ. ಅವನ ಜೊತೆಗಿದ್ದವನೊಬ್ಬ ತಡೆದು "ತಪ್ಪಾಯ್ತು" ಅಂದ. ನಾನು ಅಷ್ಟು ಗಲಾಟೆ ಮಾಡಿದರೂ ಅಕ್ಕ ಪಕ್ಕದ ಕನ್ನಡಿಗರು ಸುಮ್ಮನೇ ನೋದುತ್ತಿದ್ದರು! (ಒಬ್ಬ ಮಾತ್ರ ನನ್ನ ಪರವಾಗಿ ಬಂದರು)
ಘಟನೆ ಮೂರು ಮಲ್ಲೇಶ್ವರದಿಂದ ಬರುತ್ತಿರುವಾಗ ನವರಂಗ್ ಬಳಿ ಇಬ್ಬರು ಹುಡುಗರು ಬಸ್ ಏರಿದರು. ಅವರು ಕನ್ನಡದಲ್ಲೇ ಮಾತಾಡುತ್ತಿದ್ದರೂ ಐಪಾಡ್‌ನಲ್ಲಿ …

ದೇವರ ಹೆಸರಲ್ಲಿ ಮೋಸ ನಿಲ್ಲೋದು ಯಾವಾಗ?

ಕೆಲವು ದಿನಗಳ ಹಿಂದೆ ನನ್ನ ಬಳ್ಳಾರಿಯ ಸ್ನೇಹಿತರೊಡಗೂಡಿ ತೀರ್ಥಹಳ್ಳಿ ಸಮೀಪದ ಬಿಜ್ಜುವಳ್ಳಿ ಎಂಬಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದೆವು. ಮೊದಲ ಸಲ ಹೋದಾಗಲೇ ಅಲ್ಲಿನ ರೀತಿ ನೀತಿ ನನಗೆ ಸರಿ ಬರಲಿಲ್ಲ. ಭಕ್ತಿಯ ಬದಲಿಗೆ ತಮ್ಮ ಜೀವನೋಪಾಯಕ್ಕಾಗಿ ಆ ದೇವಾಲಯವನ್ನು ನಡೆಸುತ್ತಿರುವುದು ಎದ್ದು ಕಾಣಿಸುತ್ತಿತ್ತು.
ಹೋದ ಭಕ್ತರೆಲ್ಲಾ ಕಡ್ಡಾಯವಾಗಿ ೧೦ ರೂಪಾಯಿ ತೆತ್ತು ಚೀಟಿ ಪಡೆಯಬೇಕಾಗಿತ್ತು. ತೆಂಗಿನ ಕಾಯಿ ಒಡೆಸಬೇಕೆಂದರೆ ಅಲ್ಲಿಯೇ ಪೂಜಾರಿಗಳು ತಲಾ ನಲವತ್ತು ರೂಪಾಯಿಗೆ ಎರಡು ತೆಂಗಿನ ಕಾಯಿ ಮಾರುತ್ತಿದ್ದರು. ಬಹುಶಃ ಇಷ್ಟು ದುಬಾರಿಯ ತೆಂಗಿನ ಕಾಯಿಗಳು ನಮಗೆ ಬೇರೆಲ್ಲೂ ಸಿಗುವುದಿಲ್ಲ. ದೇವಸ್ಥಾನದ ಅಧ್ಯಕ್ಷರು ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಅರ್ಧ ಗಂಟೆ ಪ್ರವಚನ ನೀಡಿದರು!
ಇದರ ಮಧ್ಯೆಯೂ ನನ್ನೊಂದಿಗೆ ಬಂದಿದ್ದ ಬಳ್ಳಾರಿಯ ನನ್ನ ಗೆಳೆಯರು ನನಗೆ ಗೊತ್ತಿಲ್ಲದೇ ಏನೋ ಒಂದು ಹರಕೆಯನ್ನೂ ಹೊತ್ತುಕೊಂಡು ಬಿಟ್ಟಿದ್ದರು. (ಯಾರ್ಯಾರಿಗೆ ಎಲ್ಲೆಲ್ಲಾ ಭಕ್ತಿ ಉಕ್ಕಿ ಬಿಡುತ್ತದೆ ಎಂದು ಆಶ್ಚರ್ಯವಾಯ್ತು). ಹರಕೆ ಏನೆಂದರೆ ತಮ್ಮ ಬೇಡಿಕೆ ಈಡೇರಿದರೆ ಒಂದು ಸಾವಿರ ಜನರಿಗೆ ಈ ದೇವಸ್ಥಾನದಲ್ಲಿ ಊಟ ಹಾಕಿಸುವುದು. ಅದರ ದರ ಪಟ್ಟಿ ಕೂಡಾ ದೇವಸ್ಥಾನದ ಗೋಡೆಯಲ್ಲಿ ನೇತಾಡುತ್ತಿತ್ತು. ಒಂದು ಸಾವಿರ ಜನರಿಗೆ ಅನ್ನದಾನ ಮಾಡಲು ಹದಿನೈದು ಸಾವಿರ ರೂಪಾಯಿ ಎಂದು ಬರೆದಿತ್ತು. ಇದು ಪರ್ವಾಗಿಲ್ಲ ಅಂತ ಅನ್ನಿಸಿತು ನನಗೆ. ಸಾವಿರ ಜನರಿಗೆ ಅನ್ನ, ಸಾರು, ಉಪ…

ಮೈ ಲಾರ್ಡ್ ನನ್ನ ವಾದ....

"ದೇಶವನ್ನು ಒಡೆಯಲು ಯತ್ನಿಸಬೇಡಿ" - ಇದು ಮೊನ್ನೆ ನೀವು ಹೇಳಿದ ಮಾತು. ಒಂದು ಪ್ರತಿಮೆಯ ಅನಾವರಣವನ್ನು ತಡೆಯುವುದರಿಂದ ದೇಶ ಒಡೆಯುತ್ತದೆಯೇ? ಇಷ್ಟಕ್ಕೂ ದೇಶ ಒಡೆಯದಿರಲೆಂದು ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆಯೇ? ಇವೆರಡೂ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯ. ಮೊದಲಿಗೆ ಎರಡು ರಾಜ್ಯಗಳ ಸೌಹಾರ್ಧತೆಗಾಗಿ ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬರಲಿಲ್ಲ ಅನ್ನುವುದನ್ನು ತಿಳಿಯಪಡಿಸುತ್ತೇನೆ ಯುವರ್ ಆನರ್. ಅದನ್ನು ತಮಿಳರು ಮೊದಲು ಇಲ್ಲಿ ಸ್ಥಾಪಿಸಲು ಹೊಂಚು ಹಾಕಿದರು. ಅದಾದ ಎಷ್ಟೋ ವರ್ಷಗಳ ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರತಿಯಾಗಿ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕು ಅನ್ನುವ ಹೊಸ ವಾದ ಹುಟ್ಟಿಕೊಂಡಿತು ಅಷ್ಟೇ. ನಾವು ಯಾರನ್ನು ಬೇಕಾದರೂ ನಿಯಂತ್ರಿಸಬಹುದು ಅನ್ನುವುದು ಮೊದಲಿಗೆ ರಾಜಕಾರಣಿಗಳಿಗೆ, ನಂತರ ಪೊಲೀಸರಿಗೆ, ತದ ನಂತರ ಪತ್ರಕರ್ತರಿಗೆ ಹಾಗೂ ಇದೀಗ ನಿಮಗೆ ಅಂಟಿದ ಜಾಡ್ಯ. "ಯಾರೂ ಪ್ರತಿಮೆ ಅನಾವರಣವನ್ನು ತಡೆಯಬಾರದು, ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಬಾರದು" ಅನ್ನುವ ಮೂಲಕ ಪ್ರಜಾಪ್ರಭುತ್ವದಲ್ಲಿ ನಾವು ಬದುಕುತ್ತಿದ್ದೇವೆ ಅನ್ನುವ ಅಂಶವನ್ನೇ ನೀವು ಅಳಿಸಿ ಹಾಕಿದಿರಿ. ನಿಜವಾಗಿಯೂ ನ್ಯಾಯದಾನ ನೀಡುವುದಾಗಿದ್ದರೆ "ಚೆನ್ನೈನಲ್ಲಿಯೂ ಸರ್ವಜ್ಞನ ಪ್ರತಿಮೆಯನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವಂತೆ ಸೂಚಿಸಬುದಾಗಿತ್ತು. ಒಂದೇ ದಿನ ಎರಡೂ ಕಡೆ ಅನಾವರಣ ಮಾಡುವಂತೆ ಸರ್ಕಾರ…

ಪಕ್ಷವೊಂದರ ಲಾಲಸೆಗೆ ಗಡಿ-ಗಣಿ ಬಲಿ

ರಾಜಕೀಯ ಪಕ್ಷವೊಂದು ಮಾಡಿದ ಒಂದೇ ಒಂದು ಯಡವಟ್ಟು ಈ ರೀತಿ ರಾಜ್ಯದ ಬುಡಕ್ಕೇ ಕೊಡಲಿ ಏಟು ಬೀಳುವಂತೆ ಮಾಡುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ಬಳ್ಳಾರಿಯ ಗಣಿ ಧಣಿಗಳ ಹಣದ ಥೈಲಿಯನ್ನು ಪಕ್ಷದ ಬೆಳವಣೀಗೆಗೆ ಉಪಯೋಗಿಸಿಕೊಳ್ಳಲು ಹೊಂಚು ಹಾಕಿದ ಬಿಎಸ್ವೈ ಧಣಿಗಳನ್ನ್ನು ಇನ್ನಿಲ್ಲದಂತೆ ಎತ್ತಿ ಕೊಂಡಾಡಿದರು. ಈ ಪಕ್ಷದಲ್ಲಿದ್ದೂ ಪಕ್ಕದ ರಾಜ್ಯದ ಆ ಪಕ್ಷಕ್ಕೆ ನಿಷ್ಟರಾಗಿದ್ದ ಧಣಿಗಳು ಇಲ್ಲಿನ ಗಣಿ ಸಂಪತ್ತನ್ನು ಲೂಟಿ ಮಾಡಲು ಬಿಎಸ್ವೈ ಮಾತಿಗೆ ಹೂಂಗುಟ್ಟಿದ್ದೂ ಹೌದು. ಆಡು ಕೊಬ್ಬಿತ್ತು, ತೋಳ ಹಸಿದಿತ್ತು ಎಂಬಂತೆ ಧಣಿ ಬಳಗ ಈ ಪಕ್ಷವನ್ನು ಎರಡು ಚುನಾವಣೆಗಳಲ್ಲಿ ಗೆಲ್ಲಿಸಲೂ ಕೂಡಾ ಸಫಲವಾದವು. ಕೇವಲ ಐದಾರು ವರ್ಷಗಳ ಹಿಂದೆ ಅಬ್ಬೇಪಾರಿಗಳಂತೆ ಇದ್ದ ಧಣಿಗಳು ಇಂದು ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾಗಿದಾರೆಂದರೆ ಅಲ್ಲಿ ಈ ನೆಲದ ಋಣವಿದೆ. ಆದರೆ ಆ ಋಣವನ್ನು ತೀರಿಸುವುದಂತಿರಲಿ, ಇಲ್ಲಿನ ರೈತರನ್ನೇ ನೆಲಕ್ಕೆ ಹಾಕಿ ತುಳಿಯಲು ಹೊರಟ ಇವರು ಮೊನ್ನೆ ಮೊನ್ನೆ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ ನಲವತ್ತೈದು ಕೋಟಿ ರೂಪಾಯಿಗಳ ವಜ್ರದ ಕಿರೀಟವನ್ನೇ ತೊಡಿಸಿ ಆಂಧ್ರ ಜನರಿಂದ ಜೈ ಅನ್ನಿಸಿಕೊಂಡಿರುವುದು ನಮ್ಮ ದುರಂತ! ಇನ್ನೊಬ್ಬ ಧಣಿ ಹೋಗಿ ಅದೇ ಆಂಧ್ರದ ಇನ್ನೊಂದು ದೇವಾಲಯ ಶ್ರೀ ಕಾಳಹಸ್ತಿಗೂ ಇರಲಿ ಅಂತ ಏಳು ಕೋಟಿ ರೂಪಾಯಿಗಳದ್ದೊಂದು ಕಿರೀಟ ಹಾಕಿ ಬಂದಿದ್ದಾರೆ. ಆ ಮೂಲಕ ಓಟು ನೀಡಿದ ಕನ್ನಡಿಗರಿಗೆ ಭ್ಹರ್ಜರಿ ಬಿಳಿ ಟೋಪಿ ಹಾಕಿದ್ದಾರೆ. ವಜ್ರದ ಕಿರೀಟವೇ…

ರಾಜಕೀಯದಲ್ಲಿ ಪ್ರಾಮಾಣಿಕತನ ಸಾಧ್ಯವೇ?

ಇಂದು ರಾಜಕೀಯ ಅತ್ಯಂತ ಕಲಸು ಮೇಲೋಗರವಾಗಿದೆ. ಬ್ರಷ್ಟಾಚಾರ ಮಿತಿ ಮೀರಿದೆ. ಇದನ್ನು ತಡೆಯುವುದು ಹೇಗೆ? ಪ್ರಾಮಾಣಿಕರಿಗೆ ಮತ ಹಾಕಿ ಎಂದು ಎಲ್ಲರು ಹೇಳುತ್ತಾರೆ. ಆದರೆ ನಾವು ಪ್ರಾಮಾಣಿಕರಿಗೆ ಮತ ಹಾಕಿದರೂ ಅವರು ಗೆದ್ದ ನಂತರ ಪ್ರಮನಿಕರಗಿಯೇ ಇರುತ್ತಾರೆಂದು ಹೇಗೆ ಹೇಳುವುದು? ಮೊದಲು ಉತ್ತಮನಗಿದ್ದ ರಾಜಕಾರಣಿ ನಂತರ ಬ್ರಷ್ಟನದ ಉದಾಹರಣೆಗಳು ಇವೆಯಲ್ಲ? ಇದಕ್ಕೆ ಒಂದೇ ದಾರಿಯೆಂದರೆ ಮೊದಲನೆಯದಾಗಿ ಪಕ್ಷ, ಜಾತಿ ಯಾವುದನ್ನು ನೋಡದೆ ಪ್ರಾಮಾಣಿಕರಿಗೆ ಮತ ಹಾಕಬೇಕೆಂಬುದೇನೋ ನಿಜ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಇನ್ನೊಂದು ಕೆಲಸ ಆಗಬೇಕಾಗಿದೆ. ಅದೇನೆಂದರೆ, ಭ್ರಷ್ಟರಾದವರನ್ನು ಮೊದಲು ಮತ್ತ ಹಾಕುವ ಕಾರ್ಯ ನಡೆಯಬೇಕು. ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡವರಿಗೆ ಕಠಿಣ ಶಿಕ್ಷೆ ಆಗಬೇಕು. ಅವರನ್ನು ಒದ್ದು ಜ್ಯ್ಲಿಗೆ ತಳ್ಳಬೇಕು. ಅಂತವರಿಗೆ ಕಂಡಲ್ಲಿ ಬೂಟು ಎಸೆಯಬೇಕು. ಆಗ ಮಾತ್ರ ರಾಜಕಾರಣ ಶುದ್ದಿ ಆದೀತು.