ವಿಷಯಕ್ಕೆ ಹೋಗಿ

ಸಿರಿಗನ್ನಡಂ ಗೆಲ್ಗೆ

ಘಟನೆ ಒಂದು
ಮೆಜೆಸ್ಟಿಕ್‌ನಿಂದ ರಾಜಾಜಿನಗರಕ್ಕೆ ಬಸ್‌ನಲ್ಲಿ ಹೊರಟಿದ್ದೆ. ನನ್ನ ಹಿಂದಿನ ಆಸನದಲ್ಲಿ ಕುಳಿತಿದ್ದ ಇಬ್ಬರು ಹುಡುಗರು (ಬಹುಶಃ ಬಿಹಾರಿಗಳು) ಹೋರ್ಡಿಂಗ್‌ನಲ್ಲಿನ ಕನ್ನಡ ಸಿನೆಮಾ ಪೋಸ್ಟರ್‌ಗಳನ್ನು ನೋಡಿ ಅವರವರೇ ಮಾತಾಡುತ್ತಾ ರಾಜ್‌ಕುಮಾರ್ ವಿಷಯಕ್ಕೆ ಬಂದರು. ಆಗ ಒಬ್ಬ ರಾಜ್ ಬಗ್ಗೆ ಕೆಟ್ಟದಾಗಿ ಏನೋ ಹೇಳಿದ. ನನಗೆ ತಡೆದುಕೊಳ್ಳಲಾಗಲಿಲ್ಲ. ಹಿಂದೆ ತಿರುಗಿ ಹಾಗೆ ಹೇಳಿದವನಿಗೆ ಒಂದು ಕೊಟ್ಟೆ. ಪಕ್ಕದವನು ಕೈ ಮುಗಿದ. ನನ್ನ ಪಕ್ಕದಲ್ಲಿದ್ದ ಹಿರಿಯರೊಬ್ಬರು ತಡೆದು ನನಗೆ ಸಮಾಧಾನ ಮಾಡಿದರು.

ಘಟನೆ ಎರಡು
ಮಹದೇವಪುರದಿಂದ ಬರುವಾಗ (ನನ್ನ ಪ್ರಯಾಣ ಬಸ್‌ನಲ್ಲೇ) ತಮಿಳಿನವನೊಬ್ಬ ನಿರ್ವಾಹಕನ ಬಳಿ ಚಿಲ್ಲರೆ ಕೊಡಲಿಲ್ಲವೆಂದು ಜಗಳ ಮಾಡಿದ. ಚಿಲ್ಲರೆ ಕೊಟ್ಟಿರುವುದಾಗಿ ನಿರ್ವಾಹಕ ಹೇಳಿದ. ಅವನು ಆ ಕಡೆ ಹೋದ ನಂತರ ಈ ಕೊಂಗ ನಿರ್ವಾಹಕನಿಗೆ ಕೆಟ್ಟದಾಗಿ ಬೈಯ್ಯುತ್ತಾ "ಈ ರಾಜ್ಯದವರೆಲ್ಲಾ ಹೀಗೇನೇ" ಅಂತ ತಮಿಳಲ್ಲಿ ಅಂದ. "___ ಮಗನೆ ಏನೆಂದೇ?" ಅನ್ನುತ್ತಾ ಅವನಿಗೂ ಹೊಡೆಯಲು ಹೋದೆ. ಅವನ ಜೊತೆಗಿದ್ದವನೊಬ್ಬ ತಡೆದು "ತಪ್ಪಾಯ್ತು" ಅಂದ. ನಾನು ಅಷ್ಟು ಗಲಾಟೆ ಮಾಡಿದರೂ ಅಕ್ಕ ಪಕ್ಕದ ಕನ್ನಡಿಗರು ಸುಮ್ಮನೇ ನೋದುತ್ತಿದ್ದರು! (ಒಬ್ಬ ಮಾತ್ರ ನನ್ನ ಪರವಾಗಿ ಬಂದರು)

ಘಟನೆ ಮೂರು
ಮಲ್ಲೇಶ್ವರದಿಂದ ಬರುತ್ತಿರುವಾಗ ನವರಂಗ್ ಬಳಿ ಇಬ್ಬರು ಹುಡುಗರು ಬಸ್ ಏರಿದರು. ಅವರು ಕನ್ನಡದಲ್ಲೇ ಮಾತಾಡುತ್ತಿದ್ದರೂ ಐಪಾಡ್‌ನಲ್ಲಿ "ಓ ಪೋಡು" ತಮಿಳ್ ಹಾಡನ್ನು ಜೋರಾಗಿ ಹಾಕಿಕೊಂಡಿದ್ದರು. "ಅದನ್ನು ಬಂದ್ ಮಾಡು, ಇಲ್ಲಾಂದರೆ ಕನ್ನಡ ಹಾಕು, ಎಲ್ಲರೂ ಕೇಳುತ್ತೇವೆ" ಎಂದು ಜೋರು ಮಾಡಿದೆ. ಅವನು ಏನೂ ಹೇಳದೇ ಬಂದ್ ಮಾಡಿದ.

ಈ ರೀತಿ ಸಣ್ಣಪುಟ್ಟ ಘಟನೆಗಳು ಬಹಳಾ ಆಗಿವೆ. ಆದ್ರೆ ಆ ಸಮಯದಲ್ಲಿ ಕನ್ನಡಿಗರ್ಯಾರೂ ನಮ್ಮ ಸಹಾಯಕ್ಕೆ ಬರೋದಿಲ್ಲ. ಎದುರಾಳಿಗಳು ಜಾಸ್ತಿ ಜನ ಇದ್ದು ತಿರುಗಿ ಬಿದ್ದರೆ ಒದೆ ತಿಂದುಕೊಂಡು ಬರಬೇಕು. (ಇದನ್ನು ನನ್ನ ಗೆಳೆಯರು ಆಗಾಗ ನನಗೆ ಹೇಳುತ್ತಲೇ ಇರುತ್ತಾರೆ) ಆದರೆ ಕನ್ನಡಮ್ಮನ ಕೃಪೆಯಿಂದ ಇದುವರೆಗೂ ಒದೆ ತಿಂದಿಲ್ಲ ಅನ್ನೋದೇ ನೆಮ್ಮದಿ.

ಸಮಾಧಾನದಿಂದ ಹೇಳಿದರೆ ಕೇಳುವಂತಹ ವ್ಯಕ್ತಿಗಳು ಅವರಲ್ಲ. ಹಾಗಿದ್ದಿದ್ದರೆ ಗಾಂಚಾಲಿ ಮಾಡದೇ ಕನ್ನಡ ಕಲಿತು ಮಾತಾಡುತ್ತಿದ್ದರು. ಇಂದು ಬೆಂಗಳೂರಿನಲ್ಲಿ ಲಕ್ಷಾಂತರ ಪರ ಭಾಷಿಕರಿದ್ದಾರೆ. ಅವರಲ್ಲಿ ಸುಮಾರು ಶೇ ೯೦ ರಷ್ಟು ಮಂದಿ ಕನ್ನಡದಲ್ಲೇ ಮತಾಡುತ್ತಾರೆ. ಆದ್ರೆ ಗಾಂಚಾಲಿ ಇರುವ ಶೇ ೧೦ ರಷ್ಟು ಜನ ಮಾತ್ರ ಅವರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ನಾವು ಕೊಂಗರು ಅಂತ ತಮಿಳರನ್ನು ಬೈಯ್ಯುತ್ತೇವೆ. ಆದ್ರೆ ನಮ್ಮ ಮನೆ ಪಕ್ಕದಲ್ಲಿ ಇರುವ ಒಂದು ತಮಿಳು ಕುಟುಂಬದಲ್ಲಿ ಅವರು ಗಂಡ ಹೆಂಡತಿ ತಮಿಳಲ್ಲಿ ಮಾತಾಡಿಕೊಂಡರೂ ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತಾಡುತ್ತಾರೆ. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯೊಂದಿಗೆ ಹೊಂದಿಕೊಂಡು ಹೋಗುವ ಪ್ರಯತ್ನ ಅದು. ಇಂತಹ ತಮಿಳರನ್ನು, ತೆಲುಗರನ್ನು ನೋಡಿದ್ದೇನೆ. ಆದರೆ ಒಂದೇ ಒಂದು ಹಿಂದಿ ಕುಟುಂಬ ನಮಗೆ ಈ ರೀತಿ ಸಿಗುವುದಿಲ್ಲ. ತಮ್ಮದು ದೈವ ಭಾಷೆ ಅನ್ನುವ ಅಹಂಕಾರ ಹಿಂದಿಯವರದ್ದು.
ಶೇ.೧೦ ರಷ್ಟು ಪರ ಭಾಷಿಕರಿಗೆ ಗಾಂಚಾಲಿ ಆದ್ರೆ ಶೇ. ೯೦ ರಷ್ಟು ಕನ್ನಡಿಗರು ಅಭಿಮಾನ ಶೂನ್ಯರು. ಮಕ್ಕಳ ಉಜ್ವಲ ಭವಿಶ್ಯಕ್ಕೆಂದು ಆಂಗ್ಲ ಮಾಧ್ಯಮಕ್ಕೆ ಹಾಕುತ್ತಾರೆ. ಹಾಕಲಿ, ಆದರೆ ಅಷ್ಟೇ ಪ್ರೀತಿಯನ್ನು ಕನ್ನಡದ ಮೇಲೆಯೂ ಇರಿಸಿ ಕನ್ನಡವನ್ನೂ ತಮ್ಮ ಮಕ್ಕಳಿಗೆ ಸರಿಯಾಗಿ ಕಲಿಸುವ ವ್ಯವಸ್ಥೆ ಮಾಡುವುದಿಲ್ಲ. ಕನ್ನಡದ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು ಬಾರದು. ಹಾಗಾದರೆ ನಿಜವಾದ ಗಾಂಚಾಲಿ ಇರುವುದು ಯಾರಿಗೆ?

ಮೈಸೂರಿನ್ ಖ್ಯಾತ ವಿದ್ಯಾ ಸಂಸ್ಥೆ "ಜೆ.ಎಸ್.ಎಸ್."ನಿಂದ ಬಂದ ಸುದ್ದಿ... ಆ ಸಂಸ್ಥೆಯ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ಬರೇ (ಶೇ ೯೫%) ಮಲಯಾಳಿ ಹುಡುಗಿಯರೇ ಇರುವುದು. ಇವರಲ್ಲಿ ಶೇ ೯೦% ಕ್ರಿಶ್ಚಿಯನ್ ಸಮುದಾಯದವರಂತೆ. ಹಾಗಾಗಿ ನರ್ಸಿಂಗ್ ಹಾಸ್ಟೆಲ್‌ನಲ್ಲಿ ಪ್ರತಿ ದಿನ ಏಸುವಿನ ಭಜನೆ (ಪ್ರಾರ್ಥನೆ) ಇದ್ದೇ ಇರುತ್ತದಂತೆ. ಈ ನಡುವೆ (ಒಂದು ತಿಂಗಳ ಕೆಳಗೆ) ರಶ್ಮಿ ಎನ್ನುವ ಕನ್ನಡ ವಿದ್ಯಾರ್ಥಿನಿಯೊಬ್ಬಳು ಪ್ರಿನ್ಸಿಪಾಲ್‌ರೊಂದಿಗೆ "ನಾನು ಏಸು ಪ್ರಾರ್ಥನೆ ಮಾದುವುದಿಲ್ಲ. ಹಾಗೆ ಮಾಡುವುದಿದ್ದರೆ ಅವರೂ ನಮ್ಮ ವಿನಾಯಕನ ಪ್ರಾರ್ಥನೆ ಮಾಡಲಿ" ಎಂದು ಗಲಾಟೆ ಮಾಡಿ ಗೆದ್ದಿದ್ದಾಳೆ. ಈಗ ಎರಡೂ ರೀತಿಯ ಪ್ರರ್ಥನೆಗಳು ನಡೆಯುತ್ತಿವೆ ಅಲ್ಲಿ.
3 ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…