ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕಾರ್ಡ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ ವಯಸ್ಸಾಗುವಾಗ ಈ ಕಾರ್ಡ್ ಕೊಡಬಹುದು. ಅದು ಆ ವ್ಯಕ್ತಿಯ ವೈಯಕ್ತಿಕ ಖಾತೆಯಾಗಿರುತ್ತದೆ. ಎಲ್ಲಾ ವ್ಯವಹಾರವೂ ಅದರಲ್ಲೇ ನಡೆಯಬೇಕು. ಉದಾ ಆ ಹುಡುಗನಿಗೆ ಅವರಪ್ಪ ಹಣ ಕೊಡಬೇಕೆಂದರೆ ತನ್ನ ಖಾತೆಯಿಂದ ಆನ್‌ಲೈನ್ ಮುಖಾಂತರವೇ ವರ್ಗಾಯಿಸಬೇಕು. ಹಣ ವರ್ಗಾವಣೆ ಅವಕಾಶವನ್ನು ಎಟಿಎಂ, ಮೊಬೈಲ್ ಎಸ್.ಎಂ.ಎಸ್.ಗಳಲ್ಲೂ ಒದಗಿಸಿದರೆ ಸುಲಭವಾಗುತ್ತದೆ.  ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆಯಾಗಬೇಕೆಂದರೆ ಖಾತೆಯಿಂದ ಖಾತೆಗೇ ಹೋಗಬೇಕು. ಇದರಿಂದ ಸರ್ಕಾರಕ್ಕೆ ನಿಖರವಾದ ಲೆಕ್ಕ ಸಿಗುತ್ತದೆ. ತೆರಿಗೆಯನ್ನು ಅವರವರ ಖಾತೆಯಿಂದಲೇ ನೇರವಾಗಿ ಸರ್ಕಾರ ಪಡೆದುಕೊಳ್ಳಬಹುದಾದ್ದರಿಂದ ತೀರಾ ಕಡಿಮೆ ತೆರಿಗೆ ಇಟ್ಟರೂ ಸಾಕು. ತೆರಿಗೆ ಸೋರಿಕೆಯಾಗುವುದಿಲ್ಲ. ಹಣದ ಕಳ್ಳತನವಾಗುವುದಿಲ್ಲ. ಅಕಸ್ಮಾತ್ ಯಾರಾದರೂ ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಸಿಕೊಂಡರೂ ಸಹ ನಂತರ ಸಿಕ್ಕಿ ಹಾಕಿಕೊಳ್ಳುತ್ತಾರೆ. ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳುವಾಗುವ ಭಯವಿರುವುದಿಲ್ಲ. ಕದ್ದವರು ಎಲ್ಲಾದರೂ ಮಾರಲೇಬೇಕು. ಆಗ ಆ ಹಣ ಎಲ್ಲಿಂದ ಬಂತು ಎಂದು ಕೆದಕಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು

ಗೆಳತಿ ನಿನ್ನ ನೆನಪಾಗುತಿದೆ....

ಗೆಳತಿ ನಿನ್ನ ನೆನಪಾಗುತಿದೆ. ಸಂಜೆಯ ಗಾಳಿ ಬೀಸುತಿದೆ ಮಳೆ ಬರುವ ಸೂಚನೆ ನೀಡುತಿದೆ ಗೆಳತಿ ನಿನ್ನ ನೆನಪಾಗುತಿದೆ ಬಾನು ಕವಿಯುವಾಗ ಮಿನುಗೋ ಮೊದಲ ತಾರೆ ನನ್ನ ಕೆಲವು ದಿನಗಳಿಗೆ ಬೆಳದಿಂಗಳಾಗಿ ಬಾರೆ ನಿನ್ನ ಸೊಂಪಾದ ನೋಟ....... ನಿನ್ನ ಸೊಂಪಾದ ನೋಟ ಇನ್ನೂ ನೆನಪಿದೆ ಮರೆಯಲು ಹೋದರೆ ನನ್ನೇ ಮರೆಸುತಿದೆ ಗೆಳತಿ ನಿನ್ನ ನೆನಪಾಗುತಿದೆ.. ನನ್ನ ಬಾಳಲಿ ಹೊಸಬೆಳಕು ತಂದ ದೀಪವೇ ನೀನು ಬಿಟ್ಟೋದ ನೆರಳಲ್ಲೇ ನಿನ್ನ ಇಂದು ಕಾಣುತಿರುವೆ ಇಳೆಗೆ ಮಳೆಯೇ ಬಂಧು ಆದರೆ ...... ಇಳೆಗೆ ಮಳೆಯೇ ಬಂಧು ಆದರೆ ನನ್ನ ಎದೆಗೂಡಲ್ಲು ಇರಬೇಕಾದ ಮುತ್ತು ನೀನೆಯಲ್ಲವೇ ಗೆಳತಿ ನಿನ್ನ ನೆನಪಾಗಿದೆ ಚೇತನ್ .ಎನ್            http://www.orkut.co.in/Main#Profile?uid=1901888616466504924

ನೀನೆ ನೀನೆ ನೀನೆ ನೀನೆ....

ನೀನೆ ನೀನೆ ನೀನೆ ನೀನೆ, ನೀನೆ ನೀನೆ ನೀನೆ ನೀನೆ, ಒಂದು ಸಾರಿ ನಿನ್ನ ನೋಡಿ ಪ್ರತಿಸಾರಿ ಬೀಳುವಂತ ಮೋಡಿ, ಕದ್ದೆಯಲ್ಲೇ ಹೃದಯವ ಚೋರಿ ನೆನೆಪಿಗು ನೀನು ಸುಂದರ ದಾರಿ ತಪ್ಪಾಗದು ತಿರುಗಿ ನೋಡೇ ಕೊನೆ ಸಾರಿ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ, ಕನಸಲ್ಲಿ ಕಾಡದೆ ಕೊಲ್ಲಿ ಮನಸಲ್ಲಿ ಕೂರದೆ ಮಳ್ಳಿ ಎದೆಯೊಳಗೆ ಬಂದೆಯಾ ಒಲವ ಚೆಲ್ಲಿ , ನಗುವಾಗ ಚೆಂದ ಹಾಗುವ ಪುಳಕ ಮುನಿಸಾದಾಗ ನೋಡಲು ಏನೋ ತವಕ ಇರಬೇಕು ಈ ಕಾಲ ಕೊನೆತನಕ , ನಿನದೊಂದು ಬಗೆಗೆ ನಾನು ಬದಲಾಗೆ ಕಾರಣವೇನು ಕೆದಕಿದರು ಬಗೆಹರಿತಿಲ್ಲ ಈ ಸಂಶಯ , ನೂರಾರು ಕವಿಗಳ ಕೃತಿಯ ಬಿಡಿಸೋಕೆ ನನಗಿಲ್ಲ ಸಮಯ ನಿನ್ನದೊಂದೇ ಕಥೆಗೆ ನಾನು ತನುಮಯ ಬರೆದಿಡುವೆ ಮುಂದಿನ ಜನುಮಕು ಇದರ ಅನ್ವಯ .... ಚೇತನ್.ಎನ್ 

ದೀಪದ ಬೆಳಕಲ್ಲಿ ನಿನ್ನ ನೋಡುವೆ.........

ದೀಪದ ಬೆಳಕಲ್ಲಿ ನಿನ್ನ ನೋಡುವೆ, ತಂಗಾಳಿಯಾ ಅಲೆಯಾಗಿ ಕೆನ್ನೆ ಸವರಿ ಹೋಗುವೆ, ಕನಸು ಕೂಡ ನಿನ್ನಿಂದ ಏಕೋ ನೂತನವೆನಿಸಿದೆ , ಸೇರೆಯಾದಾಗ ಮನಸು ಇನ್ನು ಚೆಂದ ಅನಿಸಿದೆ , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ , ಕತ್ತಲೆಯಾದಾಗ ಜಗವು , ಸಹನೆ ಕಳೆದುಕೊಳ್ಳುತಿದೆ ಒಲವು, ಇದು ತಾರೆ ಎಣಿಸುವ ಕ್ಷಣವೂ, ನೀನೆ ಹೇಳು !!! ಮನಸಿಗೂ ಬೇಕು ತಲ್ಲಣ , ಬೆಳದಿಂಗಳಿಗಿಂತ ಇನ್ನಾವುದಿದೆ ನೂತನ, ದೂರದ ತೀರದಲ್ಲಿದೆ ಅಲೆಗಳ ನರ್ತನ, ಈಗ ನೀನೆ ನೋಡು , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ ನೀ ಬರುವಾಗ ನಾನು, ಬೇಕೆಂತಲೇ ಹಿಂದೆ ಸರಿವೆ , ಕೋಪದಿಂದ ಬಂದು ನೀನು , ಅಪ್ಪಿಕೊಂಡಾಗ ಈ ಲೋಕವನ್ನೇ ಮರಿವೆ , ನಿನ್ನ ಬೊಂಬೆ ನಾನು , ನನಗೆಂದೆ ತಾನೇ ನೀನು, ಈಗ ನಿನ್ನಲ್ಲಿ ಇರೋದು ನಾನು, ನನ್ನಲ್ಲೂ ತಾನೇ ನೀನು , ಈ ರೀತಿ ಈ ಪ್ರೀತಿ ಭೂಮಿಗೆ ಸಾರಥಿಯಾಗಿದೆ.....    ಚೇತನ್.ಎನ್