ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲೋಕಾಯುಕ್ತ ಸಂತೋಷ್ ಹೆಗಡೆ ರಾಜೀನಾಮೆ

ಪ್ರಾಮಾಣಿಕರಿಗೆ ಕಾಲವಲ್ಲ ಅನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಬಹುಶಃ ಹೆಗ್ಡೆ ಅವರು ಯಡಿಯೂರಪ್ಪನವರ ಅಥವಾ ಗಣಿ ರೆಡ್ಡಿಗಳ ಎಂಜಲು ಕಾಸಿಗೆ ಕೈ ಒಡ್ಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಉಳಿದ ಹದಿನಾಲ್ಕು ತಿಂಗಳನ್ನು ಪೂರ್ಣಗೊಳಿಸುತ್ತಿದ್ದರು, ಮತ್ತು ಆಗ ಹೆಗ್ಡೆಯವರಿಗೆ ಅದ್ಧೂರಿ ಸನ್ಮಾನ ಸಹ ಸರ್ಕಾರದ ಕಡೆಯಿಂದಲೇ ದೊರೆಯುತ್ತಿತ್ತು.  ಹೆಗ್ಡೆಯವರು ಮಾಡಿದ ತಪ್ಪೆಂದರೆ ವೆಂಕಟಾಚಲಯ್ಯನವರಂತೆ ಆಸ್ಪತ್ರೆ, ಆರ್.ಟಿ.ಓ., ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮಾತ್ರ ದಾಳಿ ಮಾಡದೇ ನಿಜವಾದ ಹೆಗ್ಗಣಗಳ ತಲೆಗೇ ಬಿಸಿನೀರು ಕಾಯಿಸ ಹೊರಟಿದ್ದು. ಆದರೆ ನಮ್ಮ ಬ್ರಷ್ಟ ವ್ಯವಸ್ಥೆ ಹೆಗ್ಡೆಯವರಿಗಿಂತಾ ತುಂಬಾ ಬಲಿಷ್ಟವಾಗಿದೆ. ಅದರ ಪರಿಣಾಮ ನಿಷ್ಠಾವಂತ ನ್ಯಾಯಮೂರ್ತಿಯೊಬ್ಬರು ಸೋತು ಹೋಗಿದ್ದಾರೆ. ಇದು ಅವರ ಸೋಲಲ್ಲ, ನಮ್ಮ ನಿಮ್ಮೆಲ್ಲರ ಸೋಲು.