ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಿಸ್ಡ್ ಕಾಲ್ ಕೊಡುವ ಮುನ್ನ ಯೋಚಿಸಿ

"ಮನೆ ಹತ್ರ ಬಂದಾಗ ಒಂದು ಮಿಸ್ಡ್ ಕಾಲ್ ಕೊಡು. ನಾ ಬಂದು ನಿನ್ನ ಭೇಟಿಯಾಗ್ತೀನಿ" "ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?" "ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು." ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ? ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರ‍ಸಂಪರ್ಕ ಸೇವೆ ಲಭಿಸುವುದು ಹೀಗೆ..... ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ

ಕನ್ನಡದವರು ಕನ್ನಡ ಓದಲ್ಲ

ಅದು ಜಗಜ್ಜಾಹೀರು. ನಮ್ಮ ಕನ್ನಡದವರು ಕಲಿಯೋದು ಕೋಟಿ ಭಾಷೆ. ಆಡೋದು ಕನ್ನಡ ಒಂದು ಬಿಟ್ಟು ಬೇರೆಲ್ಲಾ ಭಾಷೆ. ಓದೋದಂತೂ ಕನ್ನಡ ಇಲ್ಲವೇ ಇಲ್ಲ. ಈ ವಿಷಯ ಏನು ಹುಡುಕಿದರೂ ಸಿಗುವ ಗೂಗಲ್‌ನವರಿಗೂ ತಿಳಿದು ಹೋಗಿದೆ. ಅದಕ್ಕಾಗಿಯೇ ಅವರ ಸುದ್ಧಿ ಪೋರ್ಟಲ್‌ನಲ್ಲಿ [ http://news.google.co.in/ ] ಕನ್ನಡಕ್ಕೆ ಸ್ಥಾನವಿಲ್ಲ. ಇಲ್ಲಿ ಆಂಗ್ಲದ ಜೊತೆ ಭಾರತೀಯ ಭಾಷೆಗಳಾದ  हिन्दी | தமிழ் | മലയാളം | తెలుగు - ಗಳಿಗೆ ಅವಕಾಶವಿದೆ. ಅಂದರೆ ಅವರೆಲ್ಲಾ ತಮ್ಮ ಭಾಷೆಯನ್ನು ಹೆಚ್ಚು ಪ್ರಿತಿಸುತ್ತಾರೆ ಮತ್ತು ಬಳಸುತ್ತಾರೆ. ನಮ್ಮವರು ನಮ್ಮ ಭಾಷೆಯನ್ನು ಪ್ರೀತಿಸುತ್ತಾರೆ... ಆದರೆ ಬಳಸುವುದಿಲ್ಲ. ಅದು ಗೂಗಲ್‌ನವರಿಗೆ ತಿಳಿದಿರುವುದರಿಂದಲೇ ಅವರು ಕನ್ನಡದ ಸುದ್ಧಿಗೆ ಬಂದಿಲ್ಲ. ಮೊನ್ನೆ ಮೊನ್ನೆ "ಕುಬುಂಟು - ಲಿನಕ್ಸ್" ಅನ್ನು ನನ್ನ ಗಣಕಕ್ಕೆ ಪ್ರತಿಷ್ಠಾಪಿಸೋಣ ಎಂದು ಹೊರಟೆ. ಅದರಲ್ಲಿ ಕೂಡಾ ಭಾರತೀಯ ಹಲವಾರು ಭಾಷೆಗಳ ಆಯ್ಕೆ ಇದೆ. ಆದರೆ ಕನ್ನಡ ಇರಲಿಲ್ಲ. ಲಕ್ಷಾಂತರ ಮಂದಿ ಕನ್ನಡಿಗರು ಇವನ್ನೆಲ್ಲಾ ಉಪಯೋಗಿಸುತ್ತಾರೆಂಬುದರಲ್ಲಿ ಅನಿಮಾನವಿಲ್ಲ. ಆದರೆ ಯಾಕೆ ಎಲ್ಲೂ ಕನ್ನಡವಿಲ್ಲ ?? ಕಾರಣ ಸ್ಪಷ್ಟ... ನಮ್ಮವರು ಕನ್ನಡವನ್ನು ಬಳಸುವುದೇ ಇಲ್ಲ. ಸೈಬರ‍್ ಫಂಡಾ . ಕಾಮ್‌ನವರು ( www.cyberfunda.com/ ) ಕನ್ನಡದಲ್ಲಿ ಪ್ರಶ್ನೋತ್ತರ ವಿಭಾಗ ಶುರು ಮಾಡಿದ್ದಾರೆ. ಅವರೇ ಹೇಳಿಕೊಂಡಿರುವಂತೆ ಮತ್ತು ನನಗೆ ತಿಳಿದಿರುವಂತೆ ಅದೇ ಕನ್ನಡಕ್