ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಡ್ಡಿ ಪುಸ್ತಕ ಬರೆಯುತಾರಂತೆ

ಯಡಿಯೂರಪ್ಪ "ದೇವೇಗೌಡ ಮತ್ತು ಕುಮಾರಸ್ವಾಮಿ ಆಡಳಿತದ ಅವಧಿಯ ಅಕ್ರಮಗಳನ್ನ ಪುಸ್ತಕ ಬರೆಯುತ್ತೇನೆ" ಅನ್ನುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇಬ್ಬರನ್ನೂ ಜೈಲಿಗೆ ಕಳಿಸುತ್ತೇನೆ ಅಂದರು, ೧೯೯೧ ರಿಂದಲೂ ನಡೆದ ಹಗರಣಗಳನ್ನ ಬಯಲಿಗೆಳೆಯುತ್ತೇನೆ ಅಂದರು. ಇದುವರೆಗೂ ಯಾವುದೂ ಆಗಿಲ್ಲ. ಒಂದು ವೇಳೆ ಗೌಡರೋ ಕುಮಾರಸ್ವಾಮಿಯೋ ಅಕ್ರಮದ ಕಾರಣಕ್ಕೆ ಜೈಲಿಗೆ ಹೋದರೆ ತುಂಬಾ ಸಂತೋಷ. ಅಕ್ರಮ ಮಾಡಿದವರನ್ನು ಜೈಲಿಗಲ್ಲ, ಗಲ್ಲಿಗೆ ಬೇಕಾದರೂ ಹಾಕಬಹುದು. ಆದರೆ, ಒಬ್ಬ ಮುಖ್ಯಮಂತ್ರಿಯಾಗಿ "ಹಗರಣದ ಪುಸ್ತಕ ಬರೆಯುತ್ತೇನೆ" ಅನ್ನುವುದು ಯಾಕೋ ಹಾಸ್ಯಸ್ಪದ. ಯಾರೇ ಅಕ್ರಮ ಮಾಡಿದ್ದರೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇರುವ ಒಬ್ಬ ಮುಖ್ಯಮಂತ್ರಿಯೇ "ಅದನ್ನು ಪುಸ್ತಕ ಬರೆದು ಹಂಚುತ್ತೇನೆ" ಎಂದು ಹೊರಟರೆ ಅದಕ್ಕೆ ಅರ್ಥವಿದೆಯೇ ? ಬಹುಶಃ ಗೌಡರೊಂದಿಗೂ ಡೀಲ್ ಕುದುರಿಸಿಕೊಂಡಿರುವ ಯಡ್ಡಿ "ಏನಿಲ್ಲ ಗೌಡ್ರೇ, ತನಿಖೆಯನ್ನ ಹಳ್ಳ ಹಿಡಿಸ್ತೀನಿ, ಒಂದು ಪುಸ್ತಕ ಬರೆಸಿ ಸ್ವಲ್ಪ ಪ್ರಚಾರ ಮಾಡ್ಕೊಳ್ತೀನಿ ಬಿಡಿ, ಅದರಿಂದ ನಿಮಗೇನೂ ತೊಂದ್ರೆ ಆಗಲ್ಲ" ಅಂತ ರಾಜಿ ಮಾಡಿಕೊಂಡಿರುವ ಸಾಧ್ಯತೆಯೇ ಹೆಚ್ಚಿದೆ.

ನನ್ನ-ನಿನ್ನ ನಡುವೆ..!

ನನ್ನ ನಿನ್ನ ನಡುವಿನಲಿ..! ಪ್ರೀತಿ ಬಳ್ಳಿ ನಲಿದಿಹುದು,! ವರುಷಗಳೆ ಉರುಳಿದರೊ ಹರುಷವದು ದಿನೆ ಬೆಳೆದಿಹುದು..! ನೀ ಮುಡಿದ ಹೊವದು..! ಕೊಗಿ ನನ್ನ ಕರೆದಿಹುದು ಓರೆ ನೋಟದ ಆ ನಯನ ನನ್ನಲ್ಲೇನೊ ಗೊಣಗಿಹುದು..! ನನ್ನ ನಿನ್ನ ನಡುವಿನಲಿ..! ಪ್ರೀತಿ ಉಕ್ಕಿ ಹರಿದಿಯುದು ಯುಗಗಳೆ ಉರುಳಿ ಒರಳಿದರೊ ಹರುಷವು ಚಿಮ್ಮಿ ಬೆಳೆದಿಹುದು..! ನಿನ್ನ ನುಡಿಯೊ ಬಲುಚಂದ..! ಸವಿದಂತೆಲ್ಲ ಸವಿ ಸಿರಿಗಂಧ.! ಮಾತು ಮಾತೆ ಮತ್ತೆ ಮೊಡಿ ಹುದುನಿನ್ನ ಕೊಡಿದ ಆ ಕ್ಷಣದಿಂದ..! ನಿನ್ನ ನಗು ಎಂತ ಮಾಯೆಯೊ ಆ ಮಾಟದಾಟ ನನ್ನ ಕಾಡಿಹುದು ಹಾಗೆ ನಕ್ಕು ನೀ ತಿರುಗಿದೊಡೆ ಲೊಕವನ್ನೆ ಮರೆ ಮಾಚಿಹುದು ನನ್ನ ನಿನ್ನ ನಡುವಿನಲಿ..! ಪ್ರೀತಿ ಬಂಧ ಬಾಡದಂತಹದು ಇತಿಹಾಸವೆ ಅಳಿಸಿ ಹೋದರೊ ಈ ಪ್ರೀತಿಯಂದು ಶಾಶ್ವತವೊ..! ನಿನ್ನ ಆ ನುಲಿವ ನಡೆ..! ನನ್ನ ಸದಾ ಕುಣಿಸಿಹುದು ನಿನ್ನ ಗೆಜ್ಜೆಯ ದನಿಯದೊ ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..! ನನ್ನ ನಿನ್ನ ಮನವದೊ...! ಸರಿಸಲಾಗದಂತೆ ಬೆರೆತಿಹುದು ಬೆರೆತು ನುಡಿವ ಪ್ರೇಮ ಮಾತದೊ ಜೀವ ಭಾವದ ಪ್ರಣಯದಾಟವೊ..!-....... - ಬಸವರಾಜ್ .ಎ. ಏನ್ . ಇ-ಅಂಚೆ:  angadi.com @ gmail.com

ಚಿತ್ರ ವಿಮರ್ಶೆ : ಸೂಪರ‍್

ಅದು ನಿಜಕ್ಕೂ ಸೂಪರ‍್ ಆಗಿದೆ. ಚಿತ್ರದಲ್ಲಿ ತೋರಿಸಿರುವಂತೆ ನಮ್ಮ ದೇಶ ಬದಲಾಗಲ್ಲ ಅನ್ನೋದು ಬೇರೆ ಮಾತು. ಆದರೆ ಉಪೇಂದ್ರರ ಚಿಂತನಾ ವೈಖರಿ ತುಂಬಾ ಚೆನ್ನಾಗಿದೆ. ಎರಡೂಕಾಲು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಕೆಲವೊಂದು ಹೊಡೆದಾಟಗಳು ಬೇಕಿರಲಿಲ್ಲ. ಸಂಗೀತಕ್ಕೆ ಗುರುಕಿರಣ್‌ರನ್ನೇ ಹಾಕಿಕೊಳ್ಳಬಹುದಿತ್ತು. ನಾಯಕಿ ನಾಯಕನಿಗೆ ತಿರುಗಿ ಬೀಳುವುದು ಉಪೇಂದ್ರರ ಹಳೇ ಥಿಯರಿ ಅನ್ನಿಸುತ್ತೆ. ಆದರೆ ಅದರಲ್ಲೂ ಹೊಸತನವಿದೆ. ಸಂಭಾಷಣೆ ಅದ್ಬುತವಾಗಿದೆ. ಹಾಸ್ಯಭರಿತ ವ್ಯಂಗ್ಯ ಈ ದೇಶದ ಅಷ್ಟೂ ದಾರಿದ್ರ್ಯವನ್ನೂ ಬಯಲು ಮಾಡಿದೆ. ಹಾಡುಗಳು ಒಂದೆರಡು ಬಿಟ್ಟರೆ ಉಳಿದವು ಚೆನ್ನಾಗಿಲ್ಲ. ಖರ್ಚು ತುಂಬಾ ಮಾಡಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ದುಡ್ಡು ಸುರಿದಿರೋದು ಕಾಣಿಸುತ್ತೆ. ಚಿತ್ರವನ್ನು ನೋಡಿ ಸುಮ್ಮನಾಗದೇ ಚಿಂತನೆಗೆ ಹಚ್ಚುವಂತಿದೆ. ಉಪೇಂದ್ರರಿಗೆ ಧನ್ಯವಾದಗಳು.

ಅವರನ್ ಬಿಟ್, ಇವರನ್ ಬಿಟ್.....ಇನ್ಯಾರು ??

ಒಮ್ಮೆ ರೈಲಿನಲ್ಲಿ ಮನಮೋಹನ್ ಸಿಂಗ್, ಒಬಮಾ, ಸೋನಿಯಾ ಮತ್ತು ಐಶ್ವರ್ಯ ರೈ ಪ್ರಯಾಣ ಮಾಡುತ್ತಿದ್ದರು. ಹೋಗುತ್ತಿರುವಾಗ ರೈಲು ಒಂದು ಸುರಂಗ ಮಾರ್ಗವನ್ನು ಪ್ರವೇಶಿಸಿದಾಗ ಕತ್ತಲಾವರಿಸಿತು. ಆ ಕತ್ತಲಿನಲ್ಲಿ ಯಾರೋ ಯಾರಿಗೂ ಮುತ್ತು ಕೊಟ್ಟಂತೆ ಶಬ್ಧ ಕೇಳಿಸಿತು. ಅದರ ಹಿಂದೆಯೇ ಪಳಾರ‍್ ಎಂದು ಕೆನ್ನೆಗೆ ಬಾರಿಸಿದ ಶಬ್ಧವೂ ಬಂತು. ಅಷ್ಟರಲ್ಲೇ ಸುರಂಗ ಮಾರ್ಗ ಮುಗಿದು ಬೆಳಕು ಬಂತು. ನೋಡಿದರೆ ಒಬಮಾ ಕೆನ್ನೆ ಕೆಂಪಾಗಿ ಹೋಗಿದೆ. ಆಗ ಒಬ್ಬೊಬ್ಬರೂ ಒಂದೊಂದು ರೀತಿ ಯೋಚಿಸತೊಡಗಿದರು. ಸೋನಿಯಾ : "ಈ ಅಮೆರಿಕಾದವರದ್ದು ಇದೇ ಕಥೆ. ಚೆನ್ನಾಗಿರೋ ಹೆಂಗಸರು ಕಂಡರೆ ಚುಂಬಿಸೋದು. ಒಬಮಾ ಹೋಗಿ ಐಶ್‌ಳನ್ನು ಚುಂಬಿಸಿದ್ದಾನೆ, ಅವಳು ತಿರುಗಿ ಬಾರಿಸಿದ್ದಾಳೆ" ಐಶ್ವರ್ಯ : "ಓಬಮಾ ನನ್ನನ್ನು ಚುಂಬಿಸಲು ಹೋಗಿ ಸೋನಿಯಾಳನ್ನು ಚುಂಬಿಸಿದ್ದಾನೆ, ಅವಳು ಬಾರಿಸಿದ್ದಾಳೆ" ಒಬಮಾ : "ಈ ಮುದುಕ ಕಡಿಮೆಯವನಲ್ಲ ಅನ್ಸುತ್ತೆ, ಕತ್ತಲಲ್ಲಿ ಸೋನಿಯಾ ಅಂತ ತಿಳಿದು ಐಶ್ವರ್ಯಳಿಗೆ ಚುಂಬಿಸಿದ್ದಾನೆ. ಅವಳು ಅದನ್ನು ನಾನು ಚುಂಬಿಸಿದೆ ಅಂತ ತಪ್ಪಾಗಿ ತಿಳಿದು ನನಗೆ ಹೊಡೆದಿದ್ದಾಳೆ ಛೇ!" ಮನಮೋಹನ್ ಸಿಂಗ್ : "ಇನ್ನೊಂದು ಸುರಂಗ ಮಾರ್ಗ ಬರಲಿ.... ನನ್ನ ಕೈಗೆ ನಾನೇ ಚುಂಬಿಸಿಕೊಂಡು ಈ ಒಬಮಾನಿಗೆ ಮತ್ತೊಂದು ಬಾರಿಸುತ್ತೇನೆ!!"

ರೇಖಾಚಿತ್ರಗಳು

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ !

ನಿವೇಶನಕ್ಕಾಗಿ "ಕರ್ನಾಟಕದ ಜನ ತರ್ಲೆಗಳು" ಅಂದ ಬೈರಪ್ಪ ! ಹಾಗಂತ ಸಾಹಿತಿ ಎಸ್.ಎಲ್. ಬೈರಪ್ಪನವರು ನಮಗೆಲ್ಲಾ ಒಂದು ಒಳ್ಳೆ ಪ್ರಶಸ್ತಿ ನೀಡಿದ್ದಾರೆ. ಯಾವುದೋ ಸಂದರ್ಭದಲ್ಲಿ, ಮಾತಿನ ಭರಾಟೆಯಲ್ಲಿ, ಯಾವುದೋ ಕೋಪದಲ್ಲಿ ಇಂತಹ ಮಾತಾಡಿದ್ದರೆ ... "ಹಿರಿಯರು, ತಿಳಿ ಹೇಳಿದ್ದಾರೆ ಸಹಿಸೋಣ" ಅಂದುಕೊಂಡು ಸುಮ್ಮನಾಗಬಹುದಿತ್ತು. ಆದರೆ ಬೈರಪ್ಪನವರು ಅಷ್ಟು ಹೇಳಿ ಸುಮ್ಮನಾಗಲಿಲ್ಲ, ಬದಲಿಗೆ ಪರಮ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಕನ್ನಡಿಗರು ಅಭಿವೃದ್ಧಿಗೆ ಸಹಕರಿಸುವುದಿಲ್ಲ" ಅಂದಿದ್ದಾರೆ. ಇಷ್ಟಕ್ಕೂ ಯಡ್ಡಿ ಅದೇನು ಅಭಿವೃದ್ಧಿ ಮಾಡುತ್ತಿದ್ದಾರೆ ಅಂತ ರಾಜ್ಯದ ಜನತೆಗೆಲ್ಲಾ ತಿಳಿದಿರುವುದೇ ಆಗಿದೆ. ಅದು ಬೈರಪ್ಪನವರಿಗೆ ತಿಳಿದಿಲ್ಲವೇ ? ಎಲ್ಲಾ ಕನ್ನಡಿಗರನ್ನೂ ಸಾರಾ ಸಗಟಾಗಿ ತರ್ಲೆಗಳು ಅನ್ನಲು ಇವರ್ಯಾರು ? ಇವರೇನು ಕನ್ನಡಿಗರಲ್ಲವೇ ? ಅಲ್ಲಿಗೇ ಬೈರಪ್ಪ ಅವರೂ ತರ್ಲೆ ಎಂದೇ ಆಯ್ತು. ವಯಸ್ಸೂ ಆಗಿರುವುದರಿಂದ ದೊಡ್ಡ ತರ್ಲೆ ಅನ್ನಬಹುದು. ಆದರೆ ಬೈರಪ್ಪ ಅವರ ಮಾತಿನ ದಾಟಿ ಬೇರೆ ಇತ್ತು. ಅವರ ಪ್ರಕಾರ ಯಡ್ಡಿ ಏನೋ ಅಭಿವೃದ್ಧಿ ಮಾಡಿ ಬಿಡುತ್ತಿದ್ದರು. ಕರ್ನಾಟಕದ ತರ್ಲೇ ಜನ ಅದಕ್ಕೆ ಬಿಡುತ್ತಿಲ್ಲ ಅನ್ನುವಂತಿತ್ತು. ಅಂದರೆ ಯಡ್ಡಿ ಭೂ ಹಗರಣಕ್ಕೆ ಇವರ ಸಮರ್ಥನೆ ಅದು. "ಹಿಂದಿನವರೂ ಮಾಡಿದ್ದಾರೆ, ಇವರೂ ಮಾಡುತ್ತಿದ್ದಾರೆ" ಎಂದು ಸಮರ್ಥಿಸಿದ್ದಾರೆ. ಹಿಂದ

ಕಾನನ ಸುಮ

ಅರಳಿದೆನೊಂದು ಹೂವಾಗಿ ಪಡೆದೆ ಚೆಲುವ ಬಲು ಹಿತವಾಗಿ ಒಲಿದವರಿಲ್ಲ ಯಾರೂ.. ಏಕೆಂದರೆ ನಾನಿರುವೆ ಕಾನನದ ಸುಮವಾಗಿ ! ನೋಡುಗರ ಬೆರಗುಗಳಿಲ್ಲ ಮಿಟುಕಿಸುವ ಕಣ್ಣುಗಳಿಲ್ಲ ಹೃದಯ ಕದಿವ ಕಳ್ಳರಿಲ್ಲ ಕದಿಯಲೆನಗೆ ಹೃದಯಗಳಿಲ್ಲ.. ಏಕೆಂದರೆ ನಾನಿರುವೆ ಕಾನನದ ಸುಮವಾಗಿ ! ಬಣ್ಣವಿಲ್ಲ ಬೆಳಕಿಗೆ ಸೂರ್ಯನಿಲ್ಲ ಬಿಸಿಲಿಗೆ ಹಾವು ಚೇಳುಗಳ ಸಂತೆಯೊಳಗೆ ಕಾದಿರುವೆ ತುಮುಲದಲ್ಲಿ ಬರಬಹುದೇನೋ ಬದುಕು ಬಯಲಿಗೆಂದು ಏಕೆಂದರೆ ನಾನಿರುವೆ ಕಾನನದ ಸುಮವಾಗಿ !

ನನ್ನ ಕಲ್ಪನೆಯ ಹುಡುಗಿ,

ಕಲ್ಪನೆಯ ಹುಡುಗಿ ನನ್ನ ಕಲ್ಪನೆಯ ಹುಡುಗಿ, ಆಭರಣಗಳ ಹಂಗಿಲ್ಲದವಳು ನಿರಾಭರಣೆಯೇನಲ್ಲ! ತುಂಟನಗೆ, ಮಿಂಚನೋಟ ತೊಟ್ಟವಳು ನನ್ನ ಕಲ್ಪನೆಯ ಹುಡುಗಿ, ನನ್ನ ಕಲ್ಪನೆಯ ಹುಡುಗಿ ಹಮ್ಮುಬಿಮ್ಮುಗಳ ಸೋಂಕಿಲ್ಲದವಳು ಮುಗ್ಧ ಬೆಡಗಿಯೇನಲ್ಲ! ಒನಪು ವೈಯ್ಯಾರಗಳ ಉಟ್ಟವಳು ನನ್ನ ಕಲ್ಪನೆಯ ಹುಡುಗಿ ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ ಮೂಗ ಮುರಿವವಳು ನನ್ನ ಕಣ್ಣ ನೋಟಗಳು ನೇಯ್ದ ಸೀರೆಗೆ ತಾನೆ ನೂಲಾದವಳು ನನ್ನ ಕಲ್ಪನೆಯ ಹುಡುಗಿ ಮಾತಿನಿಂದ ಅಣತಿ ದೂರ ಮೌನ ದೇವತೆಯೇನಲ್ಲ ಮಾತು ಬೆಳ್ಳಿ ಮೌನ ಬಂಗಾರ ಎಂದರಿತವಳು. ನನ್ನ ಕಲ್ಪನೆಯ ಹುಡುಗಿ ಶೃಂಗಾರವೆನಲು ಕೆಂಪಗಾಗುವಳು ಸಿಟ್ಟಿನಿಂದೇನಲ್ಲ ಅವಳ ತಿಳಿನೀರ ಲಜ್ಜೆಯದು ನನ್ನ ಕಲ್ಪನೆಯ ಹುಡುಗಿ ಬರಿ ಕಲ್ಪನೆಯಲ್ಲೆ ಕನಸಾದವಳಲ್ಲ ಕನಸುಗಳ ನನಸಾಗಿಸದಿದ್ದರೂ ನನ್ನ ಭಾವನೆಗಳ ಬುತ್ತಿಯಾದವಳು -- ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com

ಕಾವ್ಯ......

            ಪ್ರತಿಕ್ರಿಯೆ ಇಲ್ಲೆಂದು             ಹೀಗೇಕೆ ಬಸವಳಿದು             ಕುಳಿತಿರುವೆ....!               ನಿನಗಾಗಿ ಶಬ್ಧಗಳ             ಆಭರಣ  ಹುಡುಕಿದರೂ             ಸಿಗುತ್ತಿಲ್ಲ  ನನಗೆ !                ಕಾವ್ಯವೆಂದಿತು.......               ಗೆಳೆಯ ನೀನೆಷ್ಟು             ಅಲಂಕರಿಸಿದರೂ             ಇಷ್ಟವಾಗ ಬೇಕಲ್ಲ ಇತರರಿಗೆ !             ನಿನಗೆ ನಿನ್ನದೇ ಆದ             ಬಣವಿಲ್ಲ   ಬಲವಿಲ್ಲ...               ಮುಗಿಸಿ ಬಿಡು ನನ್ನ  ಅಂತಿಮ ಕ್ರಿಯೆ !            ಮುಗಿಸಿ  ಬಿಟ್ಟೆ.......            ಯಾರೂ ಪ್ರತಿಕ್ರಿಯಿಸಲಿಲ್ಲ..!              ಮತ್ತೆ ಹುಟ್ಟಿತು  ಕಾವ್ಯ  ತನ್ನಷ್ಟಕ್ಕೆ..            ಪ್ರತಿಕ್ರಿಯೆ ಬಯಸದೇ....? - ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com

ಫೋನ್ ಕವಿತೆಗಳು

1. ಬುಕ್ಕಿಂಗ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ : ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು. ಅವಳು ತಕ್ಷಣ ಉತ್ತರಿಸಿದಳು. ನೀವು ಸರದಿಯಲ್ಲಿದ್ದೀರಿ. 2. ಎಸ್ಟಿಡಿ ಬೂತಿನಲ್ಲಿದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ. ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ ಎಂದು ಅವಳು ತಕ್ಷಣ ಉತ್ತರಿಸಿದಳು ಈ ಮಾರ್ಗ ಕಾರ್ಯನಿರತವಾಗಿದೆ.. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂದು. 3. ಮೊಬೈಲ್ ಇದ್ದ ಹುಡುಗಿಯೊಬ್ಬಳಿಗೆ ಫೋನಿನಲ್ಲಿ ಹೇಳಿದೆ. ಹುಡುಗಿ ನಾ ನಿನ್ನ ಪ್ರೀತಿಸುತ್ತೇನೆ. ಅವಳು ತಕ್ಷಣ ಉತ್ತರಿಸಿದಳು ನೀವು ತಲುಪಲು ಇಚ್ಛಿಸುತ್ತಿರುವ ಹುಡುಗಿ ತನ್ನ ಒಳ ಬರುವ ಕರೆಗಳನ್ನು ನಿಷೇಧಿಸಿದ್ದಾಳೆ. - ಬಸವರಾಜ್ .ಎ. ಏನ್ . ಬೆಂಗಳೂರು ಇ-ಅಂಚೆ:  angadi.com @ gmail.com