ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ ಮನಸನಿಟ್ಟು ಕನಸ ಕಟ್ಟಿದೆ ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ ಮಮತೆಯ ನಲ್ನುಡಿಯೇ ನಿನ್ನಾಭರಣ ಮಾತೆಯ ಮಡಿಲಂತೆ ನಿನ್ನಂತಕರಣ ಮಡಿಲಲ್ಲಿ ಮುದುಡುವ ಮಗುವಿನಾ ಪರಿ ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ ಗೆಳೆತನದ ಮಳೆಗಾಲ ಮುಗಿಯಲೇ ಬೇಕು ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ ಆತ್ಮೀಯ ಆರ್ಧತೆ ಸಲಹುತ್ತಿರೋಣ

ಚುನಾವಣೆಗೆ ನಿಂತ ಸ್ಪರ್ಧಿಗಳು ಯಾರೂ ಅರ್ಹರಲ್ಲದೇ ಹೋದರೆ ಏನು ಮಾಡಬೇಕು ?

ಸ್ಪರ್ಧೆಯಲ್ಲಿರುವ ಯಾವುದೇ ವ್ಯಕ್ತಿ ಉತ್ತಮ ಅಲ್ಲ ಅನ್ನಿಸಿದರೆ "ಋಣಾತ್ಮಕ ಮತ" ನೀಡುವ ಮೂಲಕ ಎಲ್ಲರನ್ನೂ ತಿರಸ್ಕರಿಸಬಹುದು. ಈ ರೀತಿಯ nagative vote ಗಳಿಗೆ ತುಂಬಾ ಪ್ರಾಮುಖ್ಯತೆ ಇದೆ. ಅದೇನೆಂದರೆ ಚುನಾವಣೆಯಲ್ಲಿ ಯಾರು ಗೆದ್ದಿರುತ್ತಾನೋ ಅವನಿಗೂ ಮತ್ತು ಎರಡನೇ ಸ್ಥಾನ ಪಡೆದಾತನಿಗೂ ಇರುವ ಮತಗಳ ವ್ಯತ್ಯಾಸಕ್ಕಿಂತಲೂ ಹೆಚ್ಚು nagative vote ಗಳು ಬಂದಿದ್ದರೆ ಆ ಕ್ಷೇತ್ರದ ಚುನಾವಣೆ ರದ್ದಾಗುತ್ತದೆ, [ ಉದಾ : ಗೆದ್ದ ವ್ಯಕ್ತಿ ಪಡೆದ ಮತಗಳು = 10,000 ಎರಡನೇ ಸ್ಥಾನದ ವ್ಯಕ್ತಿ ಪಡೆದ ಮತಗಳು = 9,500 ಇಬ್ಬರ ಮತಗಳ ನಡುವಿನ ವ್ಯತ್ಯಾಸ = 500 ಒಂದು ವೇಳೆ nagative ಮತಗಳು = 500 ಆಗಿದ್ದರೆ ಈ ಚುನವಣೆ ರದ್ದಾಗುತ್ತದೆ. ] ಮರು ಚುನಾವಣೆ ನಡೆಯುತ್ತದೆ. ಆ ಮರು ಚುನಾವಣೆಯಲ್ಲಿ ರದ್ದಾದ ಚುನಾವಣೆಗೆ ಸ್ಪರ್ಧಿಸಿದ್ದ ಯಾವುದೇ ವ್ಯಕ್ತಿ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಅಷ್ಟೇ ಅಲ್ಲ, ಅವರು ಮುಂದಿನ ಐದು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. nagative vote ಗಳನ್ನು ಹೆಚ್ಚಾಗಿ ಮಾಡುವುದರಿಂದ ರಾಜಕೀಯ ಪಕ್ಷಗಳಿಗೆ / ವ್ಯಕ್ತಿಗಳಿಗೆ ಬುದ್ದಿ ಕಲಿಸಬಹುದು. ಒಂದು ಕ್ಷೇತ್ರದಲ್ಲಿ ಈ ರೀತಿ ನಡೆದರೆ ಅವರು ಆ ಚುನಾವಣೆಗೆ ಸುರಿದ ಹಣ ವ್ಯರ್ಥವಾಗುತ್ತದೆ, ಮತ್ತು ಐದು ವರ್ಷ ಚುನವಣೆಗೆ ಸ್ಪರ್ಧಿಸುವಂತಿಲ್ಲ. ಇದರಿಂದ ಪಕ್ಷಗಳು ಆದಷ್ಟೂ ಪ್ರಾಮಾಣಿಕರನ್ನು ದಕ್ಷರನ್ನು ಸ್ಪರ್ಧಿಸುವಂತೆ ಮಾಡಬೇಕಾಗುತ್ತದೆ.

ಅಣ್ಣಾ ಹಜಾರೆ ಹೋರಾಟ ; ಜನಶಕ್ತಿಗೆ ಸಂದ ಜಯ !

"ಜನಲೋಕಪಾಲ್" ಮಸೂದೆಗಾಗಿ ನವದೆಹಲಿಯ ಜಂತರ‍್ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತು ಕೊನೆಗೂ ವಿಜಯ ಸಾಧಿಸಿದ ಅಣ್ಣಾ ಹಜಾರೆಯವರಿಗೆ ನಾವು ಧನ್ಯವಾದ ಅರ್ಪಿಸಲೇ ಬೇಕು. ದೇಶಾಧ್ಯಂತ ಜನರ ಬೆಂಬಲ ಅವರಿಗೆ ದೊರಕಿತು. ಇದು ಭ್ರಷ್ಟಾಚಾರಕ್ಕೆ ಜನ ಎಷ್ಟೊಂದು ಬೇಸತ್ತಿದ್ದಾರೆ ಎಂಬುದನ್ನು ತೋರಿಸಿತು. ಇನ್ನೊಂದು ಸಂತೋಷದ ಸಂಗತಿ ಎಂದರೆ ಜನಲೋಕಪಾಲ್‌ನ ಜಂಟಿ ಸದನ ಸಮಿತಿಯಲ್ಲಿ ನಮ್ಮ ಹೆಮ್ಮೆಯ ಲೋಕಾಯುಕ್ತ ಸಂತೋಷ್ ಹೆಗಡೆಯವರೂ ಸಹ ಇದ್ದಾರೆ. ಅಲ್ಲದೇ ಹೆಸರು ಕೆಡಿಸಿಕೊಳ್ಳದ ರಾಜಕಾರಣಿ ವೀರಪ್ಪ ಮೊಯಿಲಿ ಸಹ ಇದ್ದಾರೆ. ಜನಲೋಕಪಾಲ್ ಕಾನೂನು ಪ್ರಕಾರ ಪ್ರಧಾನ ಮಂತ್ರಿಯನ್ನೂ ಸಹ ವಿಚಾರಣೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ. ಇದೊಂದು ಉತ್ತಮ ಬೆಳವಣಿಗೆ. ಅದೇ ರೀತಿ ಮುಖ್ಯಮಂತ್ರಿಯನ್ನೂ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಕೊಡಬೇಕು. ಅದಕ್ಕಾಗಿಯೂ ನಾವು ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಯುವ ಜನತೆ ಎಚ್ಚೆತ್ತುಕೊಂಡರೆ ಇದೂ ಸಹ ಸಾಧ್ಯ ಎನ್ನಬಹುದು. ಇಲ್ಲಿ ಗಮನಿಸಬೇಕಾದ ಅಂಶ ಯಡ್ಡಿ - ಅಶೋಕ್‌ರಂತಹ ಗೋಸುಂಬೆಗಳು "ಹಜಾರೆಯವರ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ" ಎಂದು ಹೇಳಿದ್ದಾರೆ. ಆದರೆ ತಮ್ಮ ಕಾಲ ಬುಡದಲ್ಲೇ ಲೋಕಾಯುಕ್ತಕ್ಕೆ ಅಧಿಕಾರ ಕೊಡುತ್ತಿಲ್ಲ. ಇಂತಹ ನಾಚಿಗೆ ಗೆಟ್ಟ ರಾಜಕಾರಣಿಗಳನ್ನು ಮೊದಲು ಒದ್ದು ಓಡಿಸಬೇಕಾಗಿದೆ.