ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾಚಿಕೆ ಆಗಲ್ವ ಯಡಿಯೂರಪ್ಪ ನಿಮಗೆ ?

"ಇಲ್ಲ" ಅಂತೀರಾ ಅಂತ ಗೊತ್ತು. ಆದ್ರೂ ಕೇಳದೇ ವಿಧಿ ಇಲ್ಲ ನೋಡಿ. ಈ ರಾಜಕಾರಣ ಅಂದರೇನೇ ಮೂರೂ ಬಿಟ್ಟವರ ಸ್ವರ್ಗ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ನಿಮ್ಮನ್ನು ಮೆಚ್ಚಲೇ ಬೇಕು. ಯಾಕೆ ಗೊತ್ತಾ ? ನಾಚಿಕೆ, ಮಾನ, ಮರ್ಯಾದೆಗಳು ಇಲ್ಲದಿದ್ದರೂ ಇವೆಯೆಂಬಂತಾದರೂ ನಟಿಸುವ ರಾಜಕಾರಣಿಗಳ ಮಧ್ಯೆ "ಅವ್ಯಾವೂ ನನಗಿಲ್ಲ ಕಣ್ರೀ? ಏನ್ರೀ ಈವಾಗ?" ಅಂತ ರಾಜಾರೋಷವಾಗಿ ಕುರ್ಚಿ ಹಿಡಿದು ಕುಳಿತಿದ್ದೀರಲ್ಲ... ಅದಕ್ಕೆ. ಆರೋಪಗಳು ರಾಜಕಾರಣಿಗಳ ಮೇಲೊಂದೇ ಅಲ್ಲ. ಹಳ್ಳಿಯ ಮುಗ್ದ ಜನರ ಮೆಲೂ ಆಗಾಗ ಬರುತ್ತಲೇ ಇರುತ್ತವೆ. ಆಗ ಅವರು ಆಣೆ-ಪ್ರಮಾಣ ಮಾಡುವುದು ಸಾಧಾರಣ ವಿಷಯ. ಏಕೆಂದರೆ ಅವರಿಗೆ ಕೋರ್ಟು-ಕಚೇರಿ ಸುತ್ತುವುದು ಸಾಧ್ಯವಿಲ್ಲ. ದೇವರ ಮೇಲೆ ಅಪಾರ ನಂಬಿಕೆ. ಅದೇನಿದ್ದರೂ ದೇವರು ನೋಡಿಕೊಳ್ಳಲಿ ಎಂದು ಆಣೆ ಮಾಡುತ್ತಾರೆ. ಹಾಗಂತೆ ಅದನ್ನು ಕಂಡವರ ದುಡ್ಡಲ್ಲಿ ಜಾಹೀರಾತು ನೀಡಿ ಎಲ್ಲರಿಗೂ ತಿಳಿಸುವುದಿಲ್ಲ. ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ಮಾಡುತ್ತಾರೆ. ಅದು ಅವರ ಪರಿಮಿತಿ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೇನಾಗಿದೇರಿ ದಾಡಿ ? ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದರೆ, ವೃಥಾ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ? ಅವರು ಬಹಿರಂಗ ಮಾಡುತ್ತಿರುವ ದಾಖಲೆಗಳು ನಕಲಿ ಆಗಿದ್ದರೆ ಮಾನನಷ್ಟ ಮೊಖದ್ದಮೆ ಹೂಡಬಹುದಲ್ಲ? ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ ಕೋಟಿ ಕಳೆಯುವ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ...

ಒಮ್ಮೆ ಈ ಸಾಲನ್ನೂ ಸತ್ತು ಹೋಗಿರುವ ಸಾಯಿಬಾಬರನ್ನೂ ಯೋಚಿಸಿ ನೋಡಿ. ಅವರಿಗೆ ಈ ಸಾಲು ಎಷ್ಟೊಂದು ಸೂಕ್ತವಾಗಿದೆ ಎಂದು ತಿಳಿಯುತ್ತದೆ. ಅವರು ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಪುಟ್ಟಪರ್ತಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಕುಡಿವ ನೀರು ಸರಬರಾಜಿಗೆ, ಆಸ್ಪತ್ರೆಗೆ ವಿನಿಯೋಗಿಸಿದರು. ಅದನ್ನು ಇನ್ನು ನೂರು ವರ್ಷ ಕಳೆದರೂ ಜನ ನೆನಪಿಸಿಕೊಂಡು ಅವರನ್ನು ಸ್ಮರಿಸುತ್ತಾರೆ. ಅಂದರೆ ಅದು ಅವರು "ಕೊಟ್ಟದ್ದು." ಇನ್ನೊಂದು ಕಡೆ ಸಾವಿರಾರು ಕೋಟಿ ಮೌಲ್ಯದ ಹಣ, ಒಡವೆಗಳನ್ನು ಬಚ್ಚಿಟ್ಟಿದ್ದರು. ಅದು ಈಗ ಕಂಡವರ ಪಾಲಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಹೀಗಾಗಿ "ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ" ಸಾಲುಗಳು ಎಷ್ಟೊಂದು ಅರ್ಥಗರ್ಭಿತ ಎನ್ನಿಸದಿರದು.

ಮಾನ ಹೋದರೂ ಪ್ರಮಾಣ ಬಿಡೆವು - ಕುಮ್ಮಿ | ಯಡ್ಡಿ

ನಿನ್ನೆ ಯಡಿಯೂರಪ್ಪನವರು ಕುಮಾರಸ್ವಾಮಿಗೆ ಬರೆದ ಬಹಿರಂಗ ಪತ್ರಕ್ಕೆ ಆದ ಖರ್ಚು ( ಪತ್ರಿಕೆಗಳ ಜಾಹೀರಾತು ಶುಲ್ಕ ) ಸುಮಾರು ಒಂದು ಕೋಟಿ. ಇದು ರಾಜ್ಯದ ಬೊಕ್ಕಸದಿಂದ ನೀಡಲಾಗಿದೆ. ಅಲ್ಲಾ ಇವರ ವೈಯಕ್ತಿಕ ತೀಟೆಗೆ ಸಿಗೋದು ಸಾರ್ವಜನಿಕರ ಹಣವೇನಾ ? ಕುಮಾರಸ್ವಾಮಿಗೆ ಒಂದು ರಿಜಿಸ್ಟರ‍್ ಪೋಸ್ಟ್ ಮಾಡಿದ್ದರಾಗುತ್ತಿರಲಿಲ್ಲವೇ ? ಅಥವಾ ಸಾವಿರ ರೂಪಾಯಿಯಲ್ಲಿ ಒಂದು ಪತ್ರಿಕಾ ಘೋಷ್ಠಿ ನಡೆಸಬಹುದಿತ್ತು. ಯಡ್ಡಿ ಆಹ್ವಾನವನ್ನು ಕುಮ್ಮಿಯೂ ಒಪ್ಪಿಕೊಂಡಿದ್ದಾರೆ. ಇದೇ ತಿಂಗಳ ೨೭ಕ್ಕೆ ಇಬ್ಬರೂ ಧರ್ಮಸ್ಥಳ ತೆರಳಿ ಅಲ್ಲಿ ಪರಸ್ಪರ ಪ್ರಮಾಣ ಮಾಡುತ್ತಾರಂತೆ. "ಯಡ್ಡಿ ಪರವಾಗಿ ತಮಗೆ ಕರೆ ಮಾಡಿದ ಲೇಹರ್‌ಸಿಂಗ್ ಸಹ ಬಂದು ಪ್ರಮಾಣ ಮಾಡಬೇಕು." ಎಂದು ಕುಮ್ಮಿ ಹೇಳಿದ್ದಾರೆ. ಅಂದು ಏನಾಗುತ್ತೋ ಗೊತ್ತಿಲ್ಲ. ಒಂದು ವೇಳೆ ಇಬ್ಬರೂ ಪ್ರಮಾಣ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಆಗ ಸುಳ್ಳು ಹೇಳಿದ್ದು ಯಾರು ಎಂದು ದೇವರಿಗೆ ತಿಳಿಯಬಹುದೇನೋ... ಜನರಿಗೆ ಹೇಗೆ ತಿಳಿಯುತ್ತೆ. ಮತ್ತೆ ಇವರಿಬ್ಬರೂ ಪರಸ್ಪರ ದೋಶಾರೋಪ ಮಾಡಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ ಅಷ್ಟೇ. ಇದಕ್ಕೆ ಕೊನೆ ಇಲ್ಲವೇ ?

ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು

ಇಂದು ಎಲ್ಲಾ ಪತ್ರಿಕೆಗಳಲ್ಲು ಒಂದು ಕಾಲು ಪುಟದ ಜಾಯೀರಾತು. ಅದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಾಕಿದ ನೇರ ಸವಾಲು. ಅದೇನು ಅಂದ್ರೆ ಕುಮಾರಸ್ವಾಮಿಯವರು ಕಳೆದ ಕೆಲವು ದಿನಗಳಿಂದ ಯಡ್ಡಿ ಮೇಲೆ ಹಲವಾರು ಆಪಾದನೆ ಮಾಡುತ್ತಾ ಬಂದಿದ್ದಾರೆ. ಈ ಜಾಹೀರಾತಿನಲ್ಲಿ ಯಡ್ಡಿ "ಅವುಗಳೆಲ್ಲಾ ಶುದ್ಧ ಸುಳ್ಳು, ಬೇಕಾದರೆ ಧರ್ಮಸ್ಥಳದಲ್ಲಿ ಬಂದು ಇಬ್ಬರೂ ಪ್ರಮಾಣ ಮಾಡೋಣ. ಬರುತ್ತೀರಾ ? " ಎಂದು ಸವಾಲು ಹಾಕಿದ್ದಾರೆ. ಅದಕ್ಕೆ ಕುಮ್ಮಿ ಹೋಗ್ತಾರೋ ಬಿಡ್ತಾರೋ ಗೊತ್ತಿಲ್ಲ. ( ಯಡ್ಡಿ ಹಗರಣಗಳ ನೇರ ಮಾತುಕತೆಗೆ ಆರ್‌ಎಸ್‌ಎಸ್‌ ನೇತಾರರೊಂದಿಗೆ ಬರುವಂತೆ ಕುಮ್ಮಿ ಹಾಕಿದ ಸವಾಲನ್ನು ಯಡ್ಡಿ ಸ್ವೀಕರಿಸಿಲ್ಲ. ಅದಕ್ಕೆ ಉತ್ತರವನ್ನೂ ಕೊಟ್ಟಿಲ್ಲ. ) ಆದರೆ ಯಡ್ಡಿಯ ಈ ವೈಯಕ್ತಿಕ ತೀಟೆಗೆ ಸರ್ಕಾರಿ ಹಣ ಪೋಲು ಮಾಡುವ ಅಗತ್ಯ ಏನಿತ್ತು ? ಏಕೆಂದರೆ ಇವರು ಸವಾಲು ಹಾಕಿದ ಜಾಹೀರಾತು ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಬಂದಿದೆ. ನೇರವಾಗಿ ಕುಮ್ಮಿಗೇ ಒಂದು ಕರೆ ಮಾಡಿ ಹೇಳಬಹುದಿತ್ತು. ಅಥವಾ ರಿಜಿಸ್ಟರ‍್ ಪೋಸ್ಟ್‌ನಲ್ಲಿ (೪೦ ರೂ ಖರ್ಚು) ಕಳಿಸಿದ್ದರೆ ಆಗಿತ್ತು. ಇನ್ನೂ ಬೇಕಾದರೆ ೫೦೦ ರೂ ಖರ್ಚು ಮಾಡಿ ಒಂದು ಪತ್ರಿಕಾ ಘೋಷ್ಠಿ ನಡೆಸಿದ್ದರೂ ಸಾಕಿತ್ತು. ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಬರುತ್ತಿತ್ತು. ಹೀಗೆ ಲಕ್ಷಾಂತರ ರೂಪಾಯಿ ದುಂದು ವೆಚ್ಚ ಮಾಡಬೇಕಿತ್ತಾ ? ಗಮನಿಸಿದ್ದೀರಾ ? ಇತ್ತೀಚಿಗೆ ಎಲ್ಲಾ ಪತ್ರಿಕೆ

ಬಂದರೂ ಲಕ್ಷ... ಬರದಿರಲಿ ನಿರ್ಲಕ್ಷ್ಯ !

ಒಂದು ದಿನ ನಾವು ಮೂವರು ಗೆಳೆಯರು ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿನ ಒಂದು ಹಳ್ಳಿಗೆ ಪರಿಚಯದವನೊಬ್ಬನ ಮದುವೆಗೆಂದು ಅನಿವಾರ್ಯವಾಗಿ ರಾತ್ರಿ ಪ್ರಯಾಣ ಹೊರಟಿದ್ದೆವು. ರಾತ್ರಿ ಸುಮಾರು ಒಂದು ಗಂಟೆ ಹೊತ್ತಿಗೆ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಟೀ ಕುಡಿಯಲು ನಿಂತಿದ್ದೆವು. ಅಲ್ಲಿಗೆ ತಮಿಳುನಾಡು ಪೊಲೀಸರೂ ಆಗಮಿಸಿದರು. ಕರ್ನಾಟಕದ ಕಾರು ನೋಡಿ ಏನಾದರೂ ಮಾಮೂಲು ಸಿಗಬಹುದೇನೋ ಎಂದುಕೊಂಡು ನಮ್ಮಲ್ಲಿ ನಾನಾ ರೀತಿಯ ಪ್ರಶ್ನೆ ಕೇಳತೊಡಗಿದರು. ಅದೇ ಸಮಯಕ್ಕೆ ಅಲ್ಲೊಬ್ಬ ಬೈಕ್ನಲ್ಲಿ ರಕ್ತಸಿಕ್ತ ದೇಹದೊಂದಿಗೆ ಆಗಮಿಸಿದನು. ಅವನ ಬೆನ್ನಿನಲ್ಲಿ ಮಚ್ಚಿನಿಂದ ಹೊಡೆದ ಗಾಯಗಳು ತುಂಬಾ ಇದ್ದವು. ಅವನು ಅದು ಹೇಗೆ ಬೈಕ್ ಓಡಿಸಿಕೊಂಡು ಬಂದನೋ ತಿಳಿಯದು. ರಕ್ತ ದಾರಾಕಾರವಾಗಿ ಸೋರುತ್ತಿತ್ತು. ಪೊಲೀಸರನ್ನು ಕಂಡೊಡನೆಯೇ ಬೈಕ್ ನಿಲ್ಲಿಸಿ ಸಹಾಯ ಮಾಡಿ, ನನಗೆ ಗೊತ್ತಿರುವವರೇ ಆ ಬೆಟ್ಟಕ್ಕೆ ಉಪಾಯವಾಗಿ ಕರೆದೊಯ್ದು ಮಚ್ಚಿನಿಂದ ಹೊಡೆದರು. ಹೇಗೋ ತಪ್ಪಿಸಿಕೊಂಡು ಬಂದೆ. ಮೊದಲು ನನ್ನನ್ನು ಆಸ್ಪತ್ರೆಗೆ ಸೇರಿಸಿ. ನಾಳೆ ಎಲ್ಲಾ ನಿಮಗೆ ವಿವರವಾಗಿ ಹೇಳಿ ದೂರು ಬರೆದು ಕೊಡುತ್ತೇನೆ ಎಂದನವ. ಆದರೆ ನಮ್ಮನ್ನು ವಿಚಾರಿಸುತ್ತಿದ್ದ ಎಸ್ಐ ಪಿಸಿಗಳಿಗೆ ಅವನ ಬೈಕ್ ಸ್ಟಾಟರ್್ ಮಾಡಿ ಬಿಡ್ರೋ, ಆಸ್ಪತ್ರೆಗೆ ಸೇರಿಕೊಳ್ಳಲಿ. ಬೆಳಗ್ಗೆ ಬದುಕಿದ್ರೆ ಹೋಗಿ ನೋಡ್ಕೊಳ್ಳೊಣ ಎಂದು ಹೇಳಿ ನಮ್ಮ ವಿಚಾರಣೆ ಮುಂದುವರಿಸಿದ. ಪಿಸಿಗಳು ಹಾಗೆಯೇ ಮಾಡಿದರು. ಪೊಲೀಸರ ನಿಷ್ಕಾರುಣೆ ಒಂದೆಡೆಯಾಗಿ