ವಿಷಯಕ್ಕೆ ಹೋಗಿ

ಬಂದರೂ ಲಕ್ಷ... ಬರದಿರಲಿ ನಿರ್ಲಕ್ಷ್ಯ !

ಒಂದು ದಿನ ನಾವು ಮೂವರು ಗೆಳೆಯರು ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿನ ಒಂದು ಹಳ್ಳಿಗೆ ಪರಿಚಯದವನೊಬ್ಬನ ಮದುವೆಗೆಂದು ಅನಿವಾರ್ಯವಾಗಿ ರಾತ್ರಿ ಪ್ರಯಾಣ ಹೊರಟಿದ್ದೆವು. ರಾತ್ರಿ ಸುಮಾರು ಒಂದು ಗಂಟೆ ಹೊತ್ತಿಗೆ ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ಟೀ ಕುಡಿಯಲು ನಿಂತಿದ್ದೆವು. ಅಲ್ಲಿಗೆ ತಮಿಳುನಾಡು ಪೊಲೀಸರೂ ಆಗಮಿಸಿದರು. ಕರ್ನಾಟಕದ ಕಾರು ನೋಡಿ ಏನಾದರೂ ಮಾಮೂಲು ಸಿಗಬಹುದೇನೋ ಎಂದುಕೊಂಡು ನಮ್ಮಲ್ಲಿ ನಾನಾ ರೀತಿಯ ಪ್ರಶ್ನೆ ಕೇಳತೊಡಗಿದರು. ಅದೇ ಸಮಯಕ್ಕೆ ಅಲ್ಲೊಬ್ಬ ಬೈಕ್ನಲ್ಲಿ ರಕ್ತಸಿಕ್ತ ದೇಹದೊಂದಿಗೆ ಆಗಮಿಸಿದನು. ಅವನ ಬೆನ್ನಿನಲ್ಲಿ ಮಚ್ಚಿನಿಂದ ಹೊಡೆದ ಗಾಯಗಳು ತುಂಬಾ ಇದ್ದವು. ಅವನು ಅದು ಹೇಗೆ ಬೈಕ್ ಓಡಿಸಿಕೊಂಡು ಬಂದನೋ ತಿಳಿಯದು. ರಕ್ತ ದಾರಾಕಾರವಾಗಿ ಸೋರುತ್ತಿತ್ತು. ಪೊಲೀಸರನ್ನು ಕಂಡೊಡನೆಯೇ ಬೈಕ್ ನಿಲ್ಲಿಸಿ ಸಹಾಯ ಮಾಡಿ, ನನಗೆ ಗೊತ್ತಿರುವವರೇ ಆ ಬೆಟ್ಟಕ್ಕೆ ಉಪಾಯವಾಗಿ ಕರೆದೊಯ್ದು ಮಚ್ಚಿನಿಂದ ಹೊಡೆದರು. ಹೇಗೋ ತಪ್ಪಿಸಿಕೊಂಡು ಬಂದೆ. ಮೊದಲು ನನ್ನನ್ನು ಆಸ್ಪತ್ರೆಗೆ ಸೇರಿಸಿ. ನಾಳೆ ಎಲ್ಲಾ ನಿಮಗೆ ವಿವರವಾಗಿ ಹೇಳಿ ದೂರು ಬರೆದು ಕೊಡುತ್ತೇನೆ ಎಂದನವ. ಆದರೆ ನಮ್ಮನ್ನು ವಿಚಾರಿಸುತ್ತಿದ್ದ ಎಸ್ಐ ಪಿಸಿಗಳಿಗೆ ಅವನ ಬೈಕ್ ಸ್ಟಾಟರ್್ ಮಾಡಿ ಬಿಡ್ರೋ, ಆಸ್ಪತ್ರೆಗೆ ಸೇರಿಕೊಳ್ಳಲಿ. ಬೆಳಗ್ಗೆ ಬದುಕಿದ್ರೆ ಹೋಗಿ ನೋಡ್ಕೊಳ್ಳೊಣ ಎಂದು ಹೇಳಿ ನಮ್ಮ ವಿಚಾರಣೆ ಮುಂದುವರಿಸಿದ. ಪಿಸಿಗಳು ಹಾಗೆಯೇ ಮಾಡಿದರು.

ಪೊಲೀಸರ ನಿಷ್ಕಾರುಣೆ ಒಂದೆಡೆಯಾಗಿದ್ದರೆ, ದಿವ್ಯ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿತ್ತು. ನಮಗೆ ರಕ್ತ ಕುದಿದ ಹಾಗೆ ಆಯ್ತು. ಅದು ಕರ್ನಾಟಕವೇನಾದರೂ ಆಗಿದ್ದರೆ ಕಂಡಿತಾ ಜಗಳಾಡಿರುತ್ತಿದ್ದೆ. ಆದರೆ ಆ ಹೊತ್ತಿನಲ್ಲಿ ನಮ್ಮನ್ನೇ ಅವರು ವಿಚಾರಣೆಗೊಳಪಡಿಸಿದ್ದರಿಂದ ಏನೂ ಮಾಡಲಾಗದೇ ಸಮಂಜಸ ಉತ್ತರ ಕೊಟ್ಟು ಅಲ್ಲಿಂದ ಹೊರಟು ಬಿಟ್ಟೆವು.

ಅದೊಂದು ಜನ್ಮತಃ ಸ್ವಭಾವ

ಕೆಲವರ ಸ್ವಭಾವವೇ ಹಾಗಿರುತ್ತೆ. ಏನೇ ನಡೆದರೂ, ಏನೇ ಹೇಳಿದರೂ, ಏನೇ ಮಾಡಿದರೂ ನಿರ್ಲಕ್ಷ್ಯ! ಅದು ಅವರ ಜನ್ಮಸಿದ್ಧ ಹಕ್ಕು ಎಂಬಂತೆ ನಿರ್ಲಕ್ಷ್ಯದಿಂದ ಇರುತ್ತಾರೆ. ಅವರ ನಿರ್ಲಕ್ಷ್ಯವನ್ನು ಕಂಡು ಎದುರಿನವರು ಸಹಿಸಲಾಗದೇ ಉರಿದು ಬೂದಿ ಆದರೂ ಚಿಂತಿಲ್ಲ, ಇವರು ಮಾತ್ರ ತಮ್ಮ ಸ್ವಭಾವವನ್ನು ಸರಿಪಡಿಸಿಕೊಳ್ಳುವುದಿಲ್ಲ. ಆ ದಿಕ್ಕಿನತ್ತ ಗಮನವನ್ನೂ ಹರಿಸುವುದಿಲ್ಲ! ಇಂತವರು ನಮ್ಮ ನಡುವೆಯೇ ಇರಬಹುದು. ಬೇಕಾದರೆ ಅವರಲ್ಲಿ ಪಕ್ಕದ ಬೀದಿಯಲ್ಲಿ ಬಾಂಬು ಸಿಡಿದಿದೆ ಅಂದು ನೋಡಿ. ಊಹ್ಞುಂ, ಅವರು ಗಾಬರಿಯಾಗುವುದಿಲ್ಲ. ಪರೀಕ್ಷಿಸುವ ಗೋಜಿಗೂ ಹೋಗುವುದಿಲ್ಲ. ಬಿದ್ರೆ ಬೀಳಲಿ ಬಿಡು. ಸಾಯೋರಿಗೆ ನಾವೇನ್ ಮಾಡೋಕೆ ಆಗುತ್ತೆ ಅಂದು ಬಿಡುತ್ತಾರೆ. ನಿಜವಾಗಿಯೂ ಬಂಬು ಬಿದ್ದರೂ ಸಹ ಇವರ ವರ್ತನೆ ಹೀಗೇ ಇರುತ್ತದೆ.

ನಿರ್ಲಕ್ಷ್ಯ ಅಂದರೆ ಕಾಯಿಲೆಯಲ್ಲ. ಅದೊಂದು ಮನಸ್ಥಿತಿ. ಕೆಲವರು ಎಷ್ಟು ನಿರ್ಲಕ್ಷ್ಯವಾಗಿ ಮಾತನಾಡುತ್ತಾರೆಂದರೆ ನಮ್ಮಲ್ಲಿನ ಇಡೀ ಅಂತಃಸತ್ವವೆಂಬುದು ಒಂದೇ ಕ್ಷಣದಲ್ಲಿ ಜರ್ರನೆ ಕರಗಿ ಹೋಗಿಬಿಡಬೇಕು. ನಾವು ಆ ಮಾತನ್ನು ಆತನಿಗೆ ಯಾಕಾದರೂ ಹೇಳಿದೆವೋ ಅಂತ ದಿನವೆಲ್ಲಾ ಪೇಚಾಡಿ ಬಿಡುತ್ತೇವೆ. ಆ ಮಾತನ್ನು ಹೇಳಬಾರದಿತ್ತೆಂದು ಒದ್ದಾಡುತ್ತೇವೆ. ಒಂದು ರೀತಿಯ ಅಸಮಾಧಾನ ನಮ್ಮನ್ನು ಕಾಡುತ್ತದೆ.

ನಮ್ಮನ್ನು ನಮ್ಮ ಆತ್ಮೀಯರು ಅಥವಾ ಸಂಬಂಧಿಗಳು ಯಾರಾದರೂ ನಿರ್ಲಕ್ಷ್ಯವಾಗಿ ಕಂಡಾಗ ಇಲ್ಲವೇ ಆ ರೀತಿ ವರ್ತಿಸಿದಾಗ ನಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅದರಲ್ಲೂ ನಮಗೆ ತೀರಾ ಆಪ್ತರಾದವರು/ಸಲುಗೆಯುಳ್ಳವರು ನಮ್ಮನ್ನು ಹಗುರವಾಗಿ ಕಂಡಾಗ ಮನಸ್ಸಿಗೆ ತೀರಾ ಬೇಸರವಾಗುತ್ತದೆ.

ಬಡವರನ್ನು ಶ್ರೀಮಂತರು, ಅಯೋಗ್ಯರನ್ನು ಯೋಗ್ಯರು, ದುರ್ಬಲರನ್ನು ಬಲಾಢ್ಯರು, ಕರಿಯರನ್ನು ಬಿಳಿಯರು, ಕುರೂಪಿಗಳನ್ನು ಸುರೂಪಿಗಳು, ರೈತರನ್ನು ಭೂ ಒಡೆಯನು, ದಡ್ಡನನ್ನು ಬುದ್ಧಿವಂತನು, ಕೀಳು ಜಾತಿಯವನನ್ನು ಮೇಲ್ಜಾತಿ(?!)ಯವನು.... ಹೀಗೆ ಒಂದು ವರ್ಗದವರು ಇನ್ನೊಂದು ವರ್ಗದವರನ್ನು ಅಂದರೆ ಕೆಳಮಟ್ಟದವರನ್ನು ಮೇಲ್ಮಟ್ಟದವರು ( ಈ ಮಟ್ಟಗಳನ್ನು ಯಾರು ಅಳೆದು ನಿರ್ಧರಿಸಿದರೋ ಕಾಣೆ ) ನಿರ್ಲಕ್ಷ್ಯವಾಗಿ ಕಾಣುತ್ತಾರೆ.

ವ್ಯಕ್ತಿಯೊಬ್ಬ ಅಧಿಕಾರದ ಗದ್ದುಗೆಯೇರಿಬಿಟ್ಟರೆ ಮತದಾರರ ಜೊತೆಗೆ ತನ್ನ ಏಳಿಗೆಗಾಗಿ ಶ್ರಮಿಸಿದವರನ್ನು ನಿರ್ಲಕ್ಷ್ಯ ಮಾಡುವುದಿದೆ. ಗದ್ದುಗೆಯೇರಿದ ರಾಜಕಾರಣಿಗೆ ತಾನು ಅನುಭವಿಸುತ್ತಿರುವ ಈ ಅಧಿಕಾರ ಮತದಾರ ನೀಡಿದ ಭಿಕ್ಷೆಯೆಂಬುದು ಮರೆತು ಹೋಗಿರುತ್ತದೆ. ಮಳೆ - ಬಿಸಿಲೆನ್ನದೆ ಹೊಲದಲ್ಲಿ ದುಡಿಯುವ ರೈತನ ಪರಿಶ್ರಮದಿಂದ ತಾನು ಒಡೆಯನಾಗಿರುವುದೆಂಬುದನ್ನು ಜಮೀನ್ದಾರನು ಮರೆತು ದುಡಿಯುವವರನ್ನು ನಿರ್ಲಕ್ಷ್ಯಿಸುತ್ತಾನೆ.

ಪ್ರಸಿದ್ಧಿಯ ತುತ್ತತುದಿಗೇರಿದ ನಂತರ ಚಿತ್ರ ನಟ/ನಟಿ ಅಭಿಮಾನಿಗಳನ್ನು ನಿರ್ಲಕ್ಷಿಸತೊಡಗುತ್ತಾರೆ. ದೂರದ ಊರಿನಿಂದ ತನ್ನನ್ನು ನೋಡಲು ಮನೆ ಬಾಗಿಲಿಗೆ ಬಂದ ಸಾಮಾನ್ಯ ಅಭಿಮಾನಿಯನ್ನು ಮನೇಲಿಲ್ಲ ಎಂದು ಸುಳ್ಳು ಹೇಳಿ ಕಳಿಸಿಬಿಡುವ ನಟ ಭಯಂಕರರೂ ನಟಿ ಭಯಂಕರಿಗಳು ಇಲ್ಲದಿಲ್ಲ. ತಾವು ಇಂದು ಈ ಮಟ್ಟಕ್ಕೇರಲು ಆ ಸಾಮಾನ್ಯ ಮನಷ್ಯ ಕಾರಣವೆಂಬುದು ಅವರಿಗೆ ಮರೆತು ಹೋಗಿರುತ್ತದೆಂದಲ್ಲ. ಆದರೆ ಸಾಧಾರಣ ಜನರೆಡೆಗೆ ಒಂದು ತರಹದ ನಿರ್ಲಕ್ಷ್ಯ ಅಷ್ಟೇ. ಆಗ ಅವರಿಗೆ ಗಣ್ಯರು ಮಾತ್ರ ಕಾಣಿಸುತ್ತಿರುತ್ತಾರೆ. ವೈದ್ಯನು ಗಂಟೆ ಗಟ್ಟಲೆ ಕಾಯುತ್ತಿರುವ ಬಡ ರೋಗಿಯ ಕಡೆಗೆ ನಿರ್ಲಕ್ಷ್ಯ ತಾಳಿದರೆ, ತಡವಾಗಿ ಬಂದ ಶ್ರೀಮಂತ ರೋಗಿಯನ್ನು ಮೊದಲು ಉಪಚರಿಸುತ್ತಾನೆ. ಬಡ ರೋಗಿಯೂ ಒಬ್ಬ ಮನುಷ್ಯನೆಂಬುದು ವೈದ್ಯನಿಗೆ ತಿಳಿಯದಾಗಿರುತ್ತದೆ.

ತಿರುವು ಮುರುವಾದರೆ ?

ಇದೇ ಮಾತುಗಳು ತಿರುವು ಮುರುವಾಗುವ ಸಾಧ್ಯತೆಗಳೂ ಉಂಟು. ಅಧಿಕಾರಕ್ಕೆ ಬಂದ ರಾಜಕಾರಣಿಯು ಜನರಿಗಾಗಿ ಏನನ್ನೂ ಮಾಡದಿದ್ದರೆ ಅವನು ಜನಸಾಮಾನ್ಯನ ನಿರ್ಲಕ್ಷ್ಯಕ್ಕೊಳಗಾಗಿಬಿಡುತ್ತಾನೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಾರ. ಬೆವರು ಸುರಿಸಿ ದುಡಿಯುವ ರೈತನಿಗೆ ಸರಿಯಾದ ಕೂಲಿ ನೀಡದಿದ್ದರೆ ಜಮೀನ್ದಾರನು ಆತನ ಉಪೇಕ್ಷೆಗೊಳಗಾಗಿಬಿಡುತ್ತಾನೆ. ಪ್ರಸಿದ್ಧ ಚಿತ್ರ ನಟನನ್ನು ಪ್ರೇಕ್ಷಕರು ಉಪೇಕ್ಷಿಸಿದರೆ ಅವನ ಸಿನೆಮಾಗಳು ತೋಪು ಹೊಡೆಯತೊಡಗುತ್ತವೆ. ವೈದ್ಯನು ಪಕ್ಷಪಾತ ಮಾಡುತ್ತಾನೆಂದು ಬಡ ರೋಗಿಯ ದೃಷ್ಟಿಯಲ್ಲಿ ಚಿಕ್ಕವನಾಗುತ್ತಾನೆ.

ಅಷ್ಟೇ ಅಲ್ಲ, ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ವೃದ್ಧರು ಬೀದಿ ಪಾಲಾಗಿರುತ್ತಾರೆ. ತಂದೆ ತಾಯಿಯರಿಂದ ನಿರ್ಲಕ್ಷ್ಯಕ್ಕೊಳಗಾಗಿ ಬೆಳೆದ ಮಕ್ಕಳು ಸಮಾಜ ಘಾತುಕರಾಗಿರುತ್ತಾರೆ. ಗುರುವಿನಿಂದ ನಿರ್ಲಕ್ಷ್ಯಕ್ಕೊಳಗಾದ ಶಿಷ್ಯರು ದಡ್ಡರಾಗುತ್ತಾರೆ. ನಿರ್ಲಕ್ಷ್ಯದಿಂದ ಚಾಲನೆ ಮಾಡುವ ಚಾಲಕ ಮುಗ್ಧರ ಪ್ರಾಣಕ್ಕೆರವಾಗುತ್ತಾನೆ. ಕೋಟಿ ರೂಪಾಯಿ ಸುರಿದು ಪ್ರಾರಂಭಿಸಿದ ವ್ಯಾಪಾರ ಅಥವಾ ಸಂಸ್ಥೆಯನ್ನು  ನಿರ್ಲಕ್ಷ್ಯ ಮಾಡಿದರೆ ಅದು ನಷ್ಟ ಹೊಂದುತ್ತದೆ. ತನ್ನ ಕೈಕೆಳಗಿನ ಕೆಲಸಗಾರರನ್ನು ನಿರ್ಲಕ್ಷ್ಯ ಮಾಡಿದರೆ ಅವರು ಸರಿಯಾಗಿ ಕೆಲಸ ಮಾಡುವುದಿಲ್ಲ. ಪತಿಯನ್ನು ಪತ್ನಿಯೂ, ಪತ್ನಿಯನ್ನು ಪತಿಯೂ ನಿರ್ಲಕ್ಷ್ಯ ಮಾಡಿದರೆ ಅವರು ಹಾದಿ ತಪ್ಪುವ ಅಪಾಯವಿರುತ್ತದೆ.

ಈ ನಿಟ್ಟಿನಲ್ಲಿ ಯೋಚಿಸಿದಾಗ ನಿರ್ಲಕ್ಷ್ಯವೆಂಬ ಋಣತ್ಮಕ ಗುಣವು ಸಮಾಜದಲ್ಲಿ ನಮ್ಮ ಘನತೆಯನ್ನು ಕಡಿಮೆ ಮಾಡುತ್ತದೆ, ಮತ್ತು ಅನೇಕ ಸಮಸ್ಯೆಗಳನ್ನೂ ಹುಟ್ಟು ಹಾಕುತ್ತದೆ ಎನ್ನಬಹುದು.  ನಿರ್ಲಕ್ಷ್ಯವು ಪರಸ್ಪರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಬಯಸುತ್ತದೆ.

ಸ್ನೇಹದಲ್ಲಿ ನಿರ್ಲಕ್ಷ್ಯ ಸಲ್ಲದು.

ಓರ್ವ ಸ್ನೇಹಿತನು ತನ್ನ ಮಿತ್ರನಿಗೆ ಯಾವುದಾದರೂ ವಿಷಯದಲ್ಲಿ ಸಲಹೆ ನೀಡಿರುತ್ತಾನೆ. ಆದರೆ ಮಿತ್ರನು ಅದನ್ನು ಒಪ್ಪುವುದಿಲ್ಲ. ಆಗ ಸ್ನೇಹಿತನಿಗೆ ಬೇಸರವಾಗುತ್ತದೆ. ಅದೇ ಮಿತ್ರನು ತನ್ನ ಸ್ನೇಹಿತನಿಗೆ ಸಲಹೆ ನೀಡುತ್ತಾನೆ. ಆತನ ಸಲಹೆ ಸರಿಯಾಗಿದ್ದರೂ ಕೂಡ ಸ್ನೇಹಿತ ಅದನ್ನು ನಿರ್ಲಕ್ಷಿಸುತ್ತಾನೆ. ಇಲ್ಲಿ ಮಿತ್ರನ ಮೇಲಿನ ಅಸಮಾಧಾನ, ಸಿಟ್ಟು, ಬೇಸರಗಳೇ ಆತನನ್ನು ನಿರ್ಲಕ್ಷ್ಯಿಸಲು ಕಾರಣವಾಗಿರುತ್ತದೆ. ಒಂದು ವೇಳೆ ಸ್ನೇಹಿತನ ಸಲಹೆಯು ಸಮಂಜಸವಾಗಿರದಿದ್ದರೂ ಅದನ್ನು ಮಾನ್ಯ ಮಾಡಿದ್ದರೆ ಮಿತ್ರನು ಆತನ ಉಪೇಕ್ಷೆಗೆ ಒಳಗಾಗುತ್ತಿರಲಿಲ್ಲವೇನೋ!

ಜೊತೆಗಿರುವ ಸ್ನೇಹಿತನನ್ನು ನಿರ್ಲಕ್ಷಿಸಿದರೆ ಅವನ ಮನಸ್ಸಿಗೆ ನೋವು ಮಾಡಿದಂತಾಗುತ್ತದೆ. ಆದರೆ ಕೆಲವರು ಹೀಗೆ ಎಗ್ಗಿಲ್ಲದೇ ಮಾಡುತ್ತಿರುತ್ತಾರೆ. ಅವರು ಒಂದು ಹಂತವನ್ನು ತಲುಪಿದ ನಂತರ ಅವರಿಗೆ ಹಳೆಯ ಸ್ನೇಹಿತರು ಬೇಡವಾಗುತ್ತಾರೆ. ಅವರು ಎಷ್ಟೇ ಸಹಾಯ ಮಾಡಿದ್ದರೂ ಸಹ ನಿರ್ಲಕ್ಷ್ಯಿಸುತ್ತಾರೆ.

 ನಿರ್ಲಕ್ಷ್ಯವು ಅಹಂಕಾರ, ಅಸೂಯೆ, ಸಿಟ್ಟು, ದರ್ಪದ ಧೋರಣೆಳ ಛಾಯೆಯಾಗಿದೆ. ಬೇರೆ ಬೇರೆ ಕಾರಣಗಳಿಂದಾಗಿ ಅದು ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ. ಬುದ್ಧಿವಂತ ವಿಧ್ಯಾರ್ಥಿ (ನಿ)ಯು ಓದಿನಲ್ಲಿ ಅಷ್ಟೊಂದು ಮುಂದಿಲ್ಲದ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವರು ಸಿರಿವಂತಿಕೆಯ ಅಹಂಕಾರದಿಂದ ಬಡವರನ್ನು ನಿರ್ಲಕ್ಷಿಸುತ್ತಾರೆ. ಒಬ್ಬರು ಇನ್ನೊಬ್ಬರ ಮೇಲಿನ ಸಿಟ್ಟಿನಿಂದಾಗಿ ಅವರನ್ನು ಕಡೆಗಣಿಸುತ್ತಾರೆ. ಹೀಗೆ ನಿರ್ಲಕ್ಷ್ಯದಲ್ಲಿ ನಾವು ಕೆಲವು ಧೋರಣೆಗಳ ಛಾಯೆಯನ್ನು ಕಾಣಬಹುದಾಗಿದೆ.

ನಮ್ಮ ಸಾಮಥ್ರ್ಯ ಸರಿಯಾಗಿ ಇದ್ದಾಗ್ಯೂ ಕೆಲವರು ನಮ್ಮ ಏಳಿಗೆ ಸಹಿಸದೇ ನಮ್ಮನ್ನು ನಿರ್ಲಕ್ಷ್ಯಿಸಬಹುದು. ಉದಾ: ಒಬ್ಬ ಸಹ ನಿರ್ದೇಶಕ ಪೂರ್ತಿಯಾಗಿ ನಿರ್ದೇನದ ಪಟ್ಟುಗಳನ್ನು ಕಲಿಯಲು ನಿರ್ದೇಶಕನ ಸಲಹೆ ಬೇಕೇ ಬೇಕು. ಆದರೆ ಇವನ ಸಾಮರ್ಥ್ಯವನ್ನು ಮನಗಂಡ ನಿರ್ದೇಶಕನಲ್ಲಿ ಹೊಟ್ಟೆಕಿಚ್ಚು ಮೂಡಿತೆಂದರೆ ಸಹನಿರ್ದೇಶಕನನ್ನು ಉಪೇಕ್ಷೆ ಮಾಡತೊಡಗುತ್ತಾನೆ. ಹೀಗೆ ನಿರ್ಲಕ್ಷ್ಯಕ್ಕೊಳಗಾಗುವ ವ್ಯಕ್ತಿ ತನಗೆ ಬೇಕಾದ ಕೆಲಸವನ್ನು ಕಲಿಯುವುದು ತುಂಬಾ ಕಷ್ಟವಾಗುತ್ತದೆ.

ಅನಾಹುತಗಳೂ ಆಗಬಹುದು

2004ರಲ್ಲಿ ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸಿದ ತ್ಸುನಾಮಿಯಿಂದ ಸುಮಾರು ನಾಲ್ಕು ಲಕ್ಷ ಜನ ಭಾರತವೊಂದರಲ್ಲೇ ಮೃತ ಪಟ್ಟರು. ಈ ತ್ಸುನಾಮಿ ಮೊದಲು ಬಡಿದುದು ಇಂಡೋನೇಷ್ಯಾಕ್ಕೆ. ತಕ್ಷಣವೇ ಅಂತರಾಷ್ಟ್ರೀಯ ಸಂಸ್ಥೆಯೊಂದು ( ಪ್ರಕೃತಿ ವೈಪರೀತ್ಯಗಲ ಸಂಶೋಧನಾ ಸಂಸ್ಥೆ ) ಈ ತ್ಸುನಾಮಿಯ ವಿಕೋಪ ಭಾರತ ಮತ್ತು ಶ್ರೀಲಂಕಾಕ್ಕೂ ಬಡಿಯುವ ಸಾಧ್ಯತೆ ಇದೆ ಎಂಬ ಸಂದೇಶವನ್ನು ಎರಡು ದೇಶಗಳಿಗೂ ರವಾನಿಸಿತ್ತು. ಆದರೆ ತ್ಸುನಾಮಿಯ ಅರಿವೇ ಇರದ ನಮ್ಮ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದರು. ಪರಿಣಾಮ ನಾಲ್ಕಾರು ಲಕ್ಷ ಜನರ ಮಾರಣ ಹೋಮ. ಇಂಡೋನೇಷ್ಯಾದಲ್ಲಿ ಬಡಿದ ಸುಮಾರು ಎರಡು ತಾಸಿನ ನಂತರ ಅದು ಭಾರತಕ್ಕೆ ಬಂದಿದ್ದು.  ಈ ಸಮಯದಲ್ಲಿ ರೇಡಿಯೋ, ಟಿವಿ ಮುಂತಾದ ಮಾಧ್ಯಮಗಳ ಮೂಲಕ ಸಂದೇಶ ರವಾನಿಸಿ ಎಚ್ಚರಿಸಿದ್ದರೆ ಕಂಡಿತಾ ಈ ಮಟ್ಟದ ಸಾವು ಸಂಭವಿಸುತ್ತಿರಲಿಲ್ಲ.

ಮುಸ್ಲಿಂ ಭಯೋತ್ಪಾದಕರನ್ನು ಪ್ರಾರಂಭದಲ್ಲಿ ನಿರ್ಲಕ್ಷ್ಯಿಸಿ ಅವರಿಗೇ ಸಹಾಯ ಮಾಡಿದ್ದರಿಮದ ಅಮೆರಿಕಕ್ಕೆ ಎಂತಹ ಅಪಾಯ ಎದುರಾಯ್ತು ಎಂದು ವಿಶ್ವಕ್ಕೇ ತಿಳಿದಿದೆ. ಮುಂಬೈ ಕಡೆಗೆ ಬಂದ ಒಂದು ಅನುಮಾನಾಸ್ಪದ ಬೋಟ್ ಅನ್ನು ನಿರ್ಲಕ್ಷ್ಯಿಸಿದ್ದರಿಂದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿ ದೊಡ್ಡ ಅನಾಹುತ ನಡೆಯಿತು. ಕಳೆದ ವರ್ಷ ಮಂಗಳೂರಿನಲ್ಲಿ ವಿಮಾನವೊಂದು ಬಿದ್ದು ನೂರಾ ಐವತ್ತು ಮಂದಿ ಸಾವಿಗೆ ಕಾರಣವಾಯ್ತು. ಇದು ಕೂಡಾ ಚಾಲಕನ ನಿರ್ಲಕ್ಷ್ಯದಿಂದಲೇ ನಡೆದುದು. ಹೆಚ್ಚಿನ ರೈಲು ಅಪಘಾತಗಳಿಗೆ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ. ಹಾಗೆಯೇ ವೈದ್ಯನ ನಿರ್ಲಕ್ಷ್ಯದಿಂದ ಪ್ರಾಣಾಪಾಯಗಳಾಗುತ್ತಿರುವುದನ್ನು ಆಗಾಗ ಪತ್ರಿಕೆಗಳಲ್ಲಿ ಸುದ್ದಿ ಓದುತ್ತಲೇ ಇರುತ್ತೇವೆ.

ಆದುದರಿಂದ ಯಾವುದನ್ನೂ ನಾವು ನಿರ್ಲಕ್ಷ್ಯಿಸಬಾರದು. ಯಾರನ್ನೂ ನಿರ್ಲಕ್ಷ್ಯಿಸಬಾರದು. ಮಿತ್ರರನ್ನಷ್ಟೇ ಅಲ್ಲದೇ ಶತ್ರುಗಳನ್ನು ಕೂಡಾ ನಿರ್ಲಕ್ಷ್ಯಿಸಬಾರದು. ಹಾಗೆ ಶತ್ರುವನ್ನು ನಿರ್ಲಕ್ಷ್ಯಿಸಿದರೆ ಮುಂದೆ ದೊಡ್ಡ ಗಂಡಾಂತರ ತಂದೊಡ್ಡುವ ಸಾಧ್ಯತೆ ಸಹ ಇರುತ್ತದೆ. ಆದುದರಿಂದ ಶತ್ರು ಏನು ಮಾಡುತ್ತಿದ್ದಾನೆ ಎಂದು ಸದಾ ಅವನ ಮೇಲೊಂದು ಕಣ್ಣು ಇರಿಸಿರಲೇ ಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…