ವಿಷಯಕ್ಕೆ ಹೋಗಿ

ನಾಚಿಕೆ ಆಗಲ್ವ ಯಡಿಯೂರಪ್ಪ ನಿಮಗೆ ?


"ಇಲ್ಲ" ಅಂತೀರಾ ಅಂತ ಗೊತ್ತು. ಆದ್ರೂ ಕೇಳದೇ ವಿಧಿ ಇಲ್ಲ ನೋಡಿ. ಈ ರಾಜಕಾರಣ ಅಂದರೇನೇ ಮೂರೂ ಬಿಟ್ಟವರ ಸ್ವರ್ಗ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ನಿಮ್ಮನ್ನು ಮೆಚ್ಚಲೇ ಬೇಕು. ಯಾಕೆ ಗೊತ್ತಾ ? ನಾಚಿಕೆ, ಮಾನ, ಮರ್ಯಾದೆಗಳು ಇಲ್ಲದಿದ್ದರೂ ಇವೆಯೆಂಬಂತಾದರೂ ನಟಿಸುವ ರಾಜಕಾರಣಿಗಳ ಮಧ್ಯೆ "ಅವ್ಯಾವೂ ನನಗಿಲ್ಲ ಕಣ್ರೀ? ಏನ್ರೀ ಈವಾಗ?" ಅಂತ ರಾಜಾರೋಷವಾಗಿ ಕುರ್ಚಿ ಹಿಡಿದು ಕುಳಿತಿದ್ದೀರಲ್ಲ... ಅದಕ್ಕೆ.

ಆರೋಪಗಳು ರಾಜಕಾರಣಿಗಳ ಮೇಲೊಂದೇ ಅಲ್ಲ. ಹಳ್ಳಿಯ ಮುಗ್ದ ಜನರ ಮೆಲೂ ಆಗಾಗ ಬರುತ್ತಲೇ ಇರುತ್ತವೆ. ಆಗ ಅವರು ಆಣೆ-ಪ್ರಮಾಣ ಮಾಡುವುದು ಸಾಧಾರಣ ವಿಷಯ. ಏಕೆಂದರೆ ಅವರಿಗೆ ಕೋರ್ಟು-ಕಚೇರಿ ಸುತ್ತುವುದು ಸಾಧ್ಯವಿಲ್ಲ. ದೇವರ ಮೇಲೆ ಅಪಾರ ನಂಬಿಕೆ. ಅದೇನಿದ್ದರೂ ದೇವರು ನೋಡಿಕೊಳ್ಳಲಿ ಎಂದು ಆಣೆ ಮಾಡುತ್ತಾರೆ. ಹಾಗಂತೆ ಅದನ್ನು ಕಂಡವರ ದುಡ್ಡಲ್ಲಿ ಜಾಹೀರಾತು ನೀಡಿ ಎಲ್ಲರಿಗೂ ತಿಳಿಸುವುದಿಲ್ಲ. ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ಮಾಡುತ್ತಾರೆ. ಅದು ಅವರ ಪರಿಮಿತಿ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೇನಾಗಿದೇರಿ ದಾಡಿ ? ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದರೆ, ವೃಥಾ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ? ಅವರು ಬಹಿರಂಗ ಮಾಡುತ್ತಿರುವ ದಾಖಲೆಗಳು ನಕಲಿ ಆಗಿದ್ದರೆ ಮಾನನಷ್ಟ ಮೊಖದ್ದಮೆ ಹೂಡಬಹುದಲ್ಲ? ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ ಕೋಟಿ ಕಳೆಯುವ ಬದಲು ಒಬ್ಬ ಮುಖ್ಯಮಂತ್ರಿಯಾಗಿ ಕಾನೂನು ಕ್ರಮ ಕೈಗೊಳ್ಳಲು ಕಷ್ಟವೇನು ? ನ್ಯಾಯಾಲಯಕ್ಕೆ ಹೋದರೆ ಈಗಿನದಕ್ಕಿಂತಾ ಮೂರು ಪಟ್ಟು ಮಾನ ಹರಾಜು ಆಗುತ್ತದೆ ಎಂಬ ಭಯವೇ ? ಥೂ ನಿಮ್ಮ ಮುಖಕ್ಕೆ.

ಒಂದಾದ ಮೇಲೊಂದರಂತೆ ಕೆಸರನ್ನೇ ಮೈಮೇಲೆಳೆದುಕೊಳ್ಳುತ್ತಿರುವ ನಿಮ್ಮಂತಾ ವೃದ್ದರಿಗೆ ಸ್ವಲ್ಪವಾದರೂ ಸಾಮಾಜಿಕ ಕಳಕಳಿ, ಜವಾಬ್ದಾರಿ ಇಲ್ಲವೇ ? ಸುಳ್ಳು ಹೇಳುವುದನ್ನು, ಲೂಟಿ ಮಾಡುವುದನ್ನು ೬೦ ವರ್ಷ ಆಳಿದ ಕಾಂಗ್ರೆಸ್ಸಿಗರು ಸಹ ನಿಮ್ಮಿಂದಲೇ ಕಲಿಯಬೇಕಾಗಿದೆಯಲ್ಲ ? ಇಷ್ಟಾದರೂ ಬುದ್ದಿ ಬಂದಿಲ್ಲವೆಂದರೆ ಅದೆಂಥಹ ಹೀನ ಜನ್ಮಕುಂಡಲಿ ನಿಮ್ಮದು ? ಅದನ್ನಾದರೂ ನಿಮ್ಮನ್ನು ಸಮರ್ಥಿಸುತ್ತಿರುವ ಲಿಂಗಾಯಿತ ನಕಲಿ ಸ್ವಾಮೀಜಿಗಳಾಗಲೀ, RSS ಬೆಂಬಲಿತ ಪೇಜಾವರ ಸ್ವಾಮಿಗಳಾಗಲೀ ಹೇಳಿದರೆ ಒಳಿತು. ರಾಜಕಿಯದಲ್ಲಿ ಜಾತಿ ರಾಜಕಾರಣ ಇದೆಯೆಂಬುದು ಎಲ್ಲರಿಗೂ ಗೊತ್ತು. ಜಾತಿಯನ್ನು ತಮ್ಮ ಗೆಲುವಿಗಾಗಿ ಎಲ್ಲರೂ ಉಪಯೋಗಿಸಿಕೊಳ್ಳುವವರೇ. ಆದರೆ ಅದನ್ನು ತನ್ನ ತೆವಲಿಗಾಗಿ, ತನ್ನ ತಪ್ಪನ್ನು ಮುಚ್ಚಿ ಹಾಕಲು, ಪಕ್ಷದ ವರಿಷ್ಠರನ್ನು ಬ್ಲಾಕ್‌ಮೇಲ್ ಮಾಡಲು ಉಪಯೋಗಿಸಿದ ಏಕೈಕ ರಾಜಕಾರಣಿ ಅಂದರೆ ನೀವೇ. ಹೀಗಾಗಿ ಇತರ ಸಮುದಾಯಗಳ ಮನಸ್ಸಿನಲ್ಲಿ ಲಿಂಗಾಯಿತ ಸಮುದಾಯದ ಮೇಲೆ ಅಪನಂಬಿಕೆ ಮೂಡುವಂತಾಗಿದೆ. ಈ ಲಿಂಗಾಯಿತರು ಜಾತಿಗೋಸ್ಕರ ಯಾವ ಕಡು ಭ್ರಷ್ಟನನ್ನಾದರೂ ಸಮರ್ಥಿಸಿಕೊಳ್ಳುತ್ತಾರೆ ಎಂಬಂತಾಗಿದೆ.

ಇಷ್ಟಾದ ಮೇಲೂ ಯಾಕೆ ಈ ದುರಾಸೆ ? ಮಾಡಿಕೊಂಡಿರುವ ಆಸ್ತಿ ಸಾಲದಾ ? ಇನ್ನೆಷ್ಟು ವರ್ಷ ಬದುಕಬಲ್ಲಿರಿ ? ಈಗಾಗಲೇ ಎಪ್ಪತ್ತರ ಹೊಸ್ತಿಲಲ್ಲಿ ಇರುವ ನೀವು ನೂರು ವರ್ಷ ಬದುಕಿದರೂ ಉಳಿದಿರುವುದು ಮೂವತ್ತು ಮಾತ್ರ. ಒಬ್ಬ ಮನುಷ್ಯ ೩೦ ವರ್ಷ ಬದುಕಲು ಎಷ್ಟು ದುಡ್ಡು ಬೇಕು ? ಈಗಾಗಲೇ ಲೂಟಿ ಮಾಡಿರುವುದು ಸಾಕಾಗಲ್ವಾ ? ಮಕ್ಕಳನ್ನು ಬೆಳೆಸಿದ್ದು, ಅವರನ್ನು ರಾಜಕೀಯವಾಗಿ ಸುಸ್ತಿರಗೊಳಿಸಿದ್ದು ಸಾಕಾಗಲ್ವಾ ? ಹಾಗಂತ ರಾಜಕಾರಣ ಬಿಡಿ ಅಂತ ಯಾರೂ ಹೇಳಲ್ಲ... ಇನ್ನಾದರೂ ಲೋಭ ಮತ್ಸರ ಬಿಟ್ಟು ಉತ್ತಮ ರಾಜಕಾರಣ ಮಾಡಿ. ರಾಜ್ಯಕ್ಕೆ ಏನಾದರೂ ಒಳ್ಳೇದು ಮಾಡಿ... ಇಲ್ಲವೆಂದರೆ ಜನ ಬೀದಿ ಬೀದೀಲಿ ಅಟ್ಟಾಡಿಸಿಕೊಂಡು ಹೊಡೆದಾರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…