ವಿಷಯಕ್ಕೆ ಹೋಗಿ

ಅನ್ಯಾಯದ ಪರ ನ್ಯಾಯವಾದಿಗಳು ?


ಒಬ್ಬ ವ್ಯಕ್ತಿ ಅಪರಾಧಿ ಎಂದು ತಿಳಿದ ನಂತರವೂ ಅವನ ಪರವಾಗಿ ನಿಂತು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಾಡುವುದು ತಪ್ಪಲ್ಲವೇ? ಇದೊಂದು ಸಂದೇಹ ಹಲವರನ್ನು ಕಾಡದಿರದು. ಒಬ್ಬ ವ್ಯಕ್ತಿ ವಕೀಲರೊಬ್ಬರ ಬಳಿ ಬಂದು `ತಾನೊಂದು ಕೊಲೆ ಮಾಡಿರುವುದಾಗಿ ತಿಳಸಿ ತನ್ನ ಪರವಾಗಿ ನ್ಯಾಯಾಲಯದಲ್ಲಿ ವಾದಾಡಬೇಕೆಂದು ಕೇಳಿದರೆ ಅವನು ಕೊಲೆ ಮಾಡಿರುವುದು ತಿಳಿದೂ ನ್ಯಾಯವಾದಿ ಅವನ ಪರ ವಹಿಸಬಹುದೇ? ಅದು ಎಷ್ಟರ ಮಟ್ಟಿಗೆ ಸರಿ? ಅದು `ನ್ಯಾಯ' ಹೇಗಾಗುತ್ತದೆ? ಅವರು ನ್ಯಾಯವಾದಿ ಹೇಗಾಗುತ್ತಾರೆ? ಎಂಬ ಪ್ರಶ್ನೆ ಪಾಮರರಾದ ನಮ್ಮನ್ನು ಕಾಡದಿರದು. ಇಂತಹ ಪ್ರಶ್ನೆಗೆ ಕೊಂಚ ಸಮಾಧಾನಕರ ಪರಿಹಾರ ನೀಡುವ ಪ್ರಯತ್ನ ಈ ಲೇಖನ.

ಇಲ್ಲಿ ನ್ಯಾಯವಾದಿಗಳ `ಕರ್ತವ್ಯ' ಮಾತ್ರ ಪ್ರಧಾನವಾಗುತ್ತದೆ. ಹಾಗೆಯೇ ಅವರು ನ್ಯಾಯವಾದಿಗಳಾಗಿದ್ದರೂ ಸಹ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಬಂದು `ನಾನೊಂದು ಕೊಲೆ ಮಾಡಿದ್ದೇನೆ. ನನ್ನ ಪರವಾಗಿ ವಾದ ಮಾಡಬೇಕು'. ಎಂದು ಕೇಳಿಕೊಂಡರೆ ನ್ಯಾಯವಾದಿ ಯಾವ ಕಾರಣಕ್ಕೂ ಅವನನ್ನು `ಅಪರಾಧಿ' ಎಂದು ಪರಿಗಣಿಸುವಂತಿಲ್ಲ. ಉದಾ: ಮುಂಬೈ ದಾಳಿಕೋರ ಕಸಬ್ ಪರವಾಗಿ ಸಹ ಒಬ್ಬರು ನ್ಯಾಯವಾದಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಅವನು ಅಪರಾಧಿ ಎಂದು ದೇಶಕ್ಕೆಲ್ಲಾ ತಿಳಿದಿದ್ದರೂ ಸಹ ಅವನ ಪರವಾಗಿ ಒಬ್ಬ ನ್ಯಾಯವಾದಿ ವಾದಿಸಲೇ ಬೇಕಾಗಿತ್ತು. ನಮ್ಮ ದೇಶದ ಕಾನೂನು ಇರುವುದೇ ಹಾಗೆ. ಏಕೆಂದರೆ ಅದನ್ನು ತೀರ್ಮಾನಿಸಬೇಕಾದುದು ನ್ಯಾಯಾಲಯವೇ ಹೊರತೂ ನ್ಯಾಯವಾದಿಯಲ್ಲ. ಭಾರತೀಯ ದಂಡ ಸಂಹಿತೆ ಪ್ರಕಾರ ಯಾರನ್ನೇ ಆಗಲಿ ಅಪರಾಧಿ ಎಂದು ಘೋಷಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೇ ಹೊರತೂ ಇನ್ಯಾರಿಗೂ ಇಲ್ಲ.

`ಆರೋಪಿಯೊಬ್ಬ ಬಂದು `ತಾನೇ ಅಪರಾಧಿ' ಎಂದಾಗ್ಯೂ ಸಹ ನ್ಯಾಯವಾದಿ ಆತನನ್ನು `ಆರೋಪಿ' ಎಂದಷ್ಟೇ ಪರಿಗಣಿಸಬೇಕಾಗುತ್ತದೆ. ಹಾಗೆಯೇ ತನ್ನ ಬಳಿ ಬರುವ ವ್ಯಕ್ತಿ ನ್ಯಾಯವಾದಿಯ `ಕಕ್ಷೀದಾರ'ನೆನ್ನಿಸಿಕೊಳ್ಳುತ್ತಾನೆ. ಅಂದರೆ ಅವನ ಪರವಾಗಿ ನಿಂತು ವಾದ ಮಂಡಿಸಬೇಕಾದುದು ಆ ನ್ಯಾಯಾದಿಯ ಕರ್ತವ್ಯವಾಗುತ್ತದೆ. ಹಾಗೆಯೇ ಕಕ್ಷಿದಾರ ಹಾಗೂ ನ್ಯಾಯವಾದಿಯ ನಡುವೆ ನಡೆಯುವ ಸಂಭಾಷಣೆ privileged communication
(ರಹಸ್ಯ ಮಾತುಕತೆ) ಎನ್ನಲಾಗುತ್ತದೆ. ನ್ಯಾಯವಾದಿಯಲ್ಲಿ ಕಕ್ಷಿದಾರನು `ತಾನೇ ಕೊಲೆಗಾರ' ಎಂದು ಹೇಳಿದರೂ ಸಹ ನ್ಯಾಯವಾದಿ ಅದನ್ನು ಬಹಿರಂಗಪಡಿಸುವಂತಿಲ್ಲ. ಅಥವಾ ಕಕ್ಷಿದಾರ ಹೇಳಿದ ಯಾವುದೇ ವಿಷಯವನ್ನೂ ಸಹ ಅವನ ಅನುಮತಿಯಿಲ್ಲದೇ ಬೇರೆ ಯಾರಿಗೂ ತಿಳಿಸುವಂತಿಲ್ಲ. ಕಕ್ಷಿದಾರನ ವಿಷಯಗಳನ್ನು ರಹಸ್ಯವಾಗಿಡಬೇಕಾದುದು ನ್ಯಾಯವಾದಿಯ ಕರ್ತವ್ಯ.

ಆದರಿಲ್ಲೊಂದು ಸಂದೇಹವೇರ್ಪಡುತ್ತದೆ. ಒಬ್ಬ ಕೊಲೆಗಾರ ಘಟನೆ ನಡೆದ ನಂತರ ಅದನ್ನು ತನ್ನ ಮನೆಯವರಿಗೋ,  ಗೆಳೆಯರಿಗೋ ಹೇಳಿಕೊಂಡಿದ್ದಲ್ಲಿ, ಆ ಘಟನೆಯ ತನಿಖೆ ನಡೆಸುವ ಪೋಲೀಸ್ ಅಧಿಕಾರಿ ಆ ವ್ಯಕ್ತಿಗಳನ್ನೇ ವಿಚಾರಣೆಗೆ  ಒಳಪಡಿಸಬಹುದು. (ಕೆಲವು VIPಗಳನ್ನು ವಿಚಾರಣೆ ನಡೆಸಲು ಮೇಲ್ದರ್ಜೆಯ ಅಧಿಕಾರಿಗಳ, ಮುಖ್ಯಮಂತ್ರಿ / ಪ್ರಧಾನ ಮಂತ್ರಿಗಳ ಅನುಮತಿ ಅಗತ್ಯ) ಕೊಲೆಗಾರ ಹೇಳಿದನೆನ್ನಲಾದ ವಿಷಯವನ್ನು ತಿಳಿಸುವವರ ವಿಚಾರಣೆಯನ್ನು Extra judicial congession ಎನ್ನಲಾಗುತ್ತದೆ.

ಆದರೆ ಅದೇ ಕೊಲೆಗಾರ ಒಬ್ಬ ನ್ಯಾಯವಾದಿಯ ಬಳಿ ಬಂದು `ತಾನೊಒದು ಕೊಲೆ ಮಾಡಿ ಬಿಟ್ಟಿದ್ದೇನೆ' ಎಂದು ಬಹಿರಂಗ ಪಡಿಸಿದರೆ, ಆ ವ್ಯಕ್ತಿಯನ್ನು ನ್ಯಾಯವಾದಿ ನ್ಯಾಯಾಲಯದಲ್ಲಿ ಶರಣಾಗುವಂತೆ ಮಾಡಬಹುದು. ಅಥವಾ ಪೋಲೀಸರು ಬಂಧಿಸದಂತೆ ಜಾಮೀನು ಪಡೆಯಬಹುದು. ಅದೇನೇ ಮಾಡಿದರೂ ಆ ಕೊಲೆಯ ತನಿಖಾಧಿಕಾರಿ ನ್ಯಾಯವಾದಿಯ ಬಳಿ ಆರೋಪಿಯು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನಾ? ಎಂದು ಕೇಳುವಂತಿಲ್ಲ. ಅಥವಾ ಅದೇ ನ್ಯಾಯವಾದಿಯನ್ನು ಸಾಕ್ಷಿಯಾಗಿ ಪರಿಗಣಿಸುವಂತಿಲ್ಲ. ಅದಕ್ಕೆ ನ್ಯಾಯವಾದಿ ಉತ್ತರಿಸುವಂತೆಯೂ ಇಲ್ಲ. (ಭಾರತ ಸಾಕ್ಷಿ ಪ್ರಕಾರ ಸಂಹಿತೆ - 126 ) ಯಾವುದೇ ವಾದಗಳನ್ನಾಗಲಿ ಕೈಗೆತ್ತಿಕೊಂಡಾದ ನಂತರ ನ್ಯಾಯವಾದಿಗಳು ಯಾವುದೇ ಕಾರಣಕ್ಕೂ ತಮ್ಮನ್ನು ಹುಡುಕಿ ಬಂದಿರುವ ಕಕ್ಷಿದಾರನ ರಹಸ್ಯವನ್ನು ಕಾಪಾಡಬೇಕು. ಹಾಗೆಯೇ ಅವನು ನೀಡುವ ವಸ್ತುಗಳನ್ನು ಬಹಿರಂಗಪಡಿಸಬಾರದು ಎಂದು ಹೇಳಲಾಗಿದೆ.

ಹಾಗಾಗಿ ಕೊಲೆಗಾರನೊಬ್ಬ ಬಂದು ತಾನು ಕೊಲೆ  ಮಾಡಲು ಬಳಸಿದ ವಸ್ತುವನ್ನು ನೀಡಿದರೂ ಸಹ ನ್ಯಾಯವಾದಿ ಅವನ ಪರವಾಗಿಯೇ ವಾದ ಮಾಡಬಹುದಾಗಿದೆ. ಇದು ಕೊಲೆ ನಡೆದ ನಂತರ ನ್ಯಾಯವಾದಿ ಕಾರ್ಯ ನಿರ್ವಹಿಸಬೇಕಾದ ಕರ್ತವ್ಯ ಮಾತ್ರ. ಬದಲಿಗೆ ಯಾರಾದರೊಬ್ಬ ಬಂದು `ನಾನೊಂದು ಕೊಲೆ ಮಾಡಬೇಕೆಂದಿದ್ದೇನೆ. ನಂತರ  ನ್ಯಾಯಾಲಯದಲ್ಲಿ ಶಿಕ್ಷಗೊಳಗಾದಂತೆ ತಪ್ಪಿಸಿಕೊಳ್ಳಲು ನೀವೇ ನನ್ನ ಪರವಾಗಿ ವಾದ ಮಾಡಬೇಕು.' ಎಂದು  ಕೇಳಿದರೆ, ಅದಕ್ಕೆ ನ್ಯಾಯವಾದಿ ಒಪ್ಪುವಂತಿಲ್ಲ. ಅದು ಅಪರಾಧಕ್ಕೆ ಕುಮ್ಮಕ್ಕು ನೀಡಿದ ಅಪರಾಧವಾಗುವುದರಿಂದ ನ್ಯಾಯವಾದಿಯನ್ನೇ ಶಿಕ್ಷೆಗೆ ಬಳಪಡಿಸ ಬಹುದಾಗಿದೆ.

ಹಾಗಾಗಿ `ಅಪರಾಧಿಯೆಂದು ತಿಳಿದ ನಂತರವೂ ಅವನ ಪರವಾಗಿ ವಾದ ಮಾಡಬಹುದೇ?' ಎಂಬ ಪ್ರಶ್ನೆಗೆ ಭಾರತ ನೀತಿ ಸಂಹಿತೆಯಲ್ಲಿ ಜಾಗವಿಲ್ಲ. ಹಾಗೆಯೇ ನ್ಯಾಯವಾದಿಗೆ `ಆರೋಪಿಯೊಬ್ಬ ಅವನೇ `ಅಪರಾಧಿಯೆಂದು ತಿಳಿದ ನಂತರವೂ ಅವನ ಪರವಾಗಿ ವಾದಾಡಬಾರದು' ಎಂಬುದಕ್ಕೆ ಯಾವುದೇ ತಡೆ ವಿಧಿಸಲಾಗಿಲ್ಲ. ಅಂದರೆ ಅರೋಪಿಯೊಬ್ಬನ ಪರವಾಗಿ ಯಾವುದೇ ನ್ಯಾಯವಾದಿ ನ್ಯಾಯಾಲಯದಲ್ಲಿ ವಾದಾಡಬಹುದು. ಯಾವ ಸಮಯದಲ್ಲೂ ಸಹ ಅವನ ಹಿತಾಸಕ್ತಿಗೆ ಭಂಗ ತರಬಾರದು. ಎಂದು ಸೂಚಿಸಲಾಗಿದೆ.

Bar Council of India ದಲ್ಲಿ ನ್ಯಾಯವಾದಿಗಳಿಗಿರುವ ವಿಧಿಗಳಲ್ಲಿ - ನ್ಯಾಯವಾದಿಗಳು ತಮ್ಮ ಕಕ್ಷಿದಾರರಲ್ಲಿನ ಕರ್ತವ್ಯದ ಬಗ್ಗೆ ಹೇಳುತ್ತಾ...
`ನ್ಯಾಯವಾದಿಯು ತನ್ನ ಕಕ್ಷಿದಾರರು ಅಪರಾಧಿಯೆಂದು ತಿಳಿದರೂ ಸಹ ಅದು ಸಾಕ್ಷ್ಯ ಸಮೇತ ನಿರೂಪಿಸಲ್ಪಡದ ಹೊರತೂ ಒಬ್ಬ ವ್ಯಕ್ತಿಯೂ ಸಹ ದಂಡನೆಗೊಳಗಾಗಬಾರದು.' ಎಂಬ ನೀತಿ ಸಂಹಿತೆಯನ್ವಯ ಆ ವ್ಯಕ್ತಿಯ ಪರವಾಗಿ ವಾದಾಡಬಹುದು ಎಂದಿದೆ.

`ಕಾನೂನು ಒಂದು ಕತ್ತಲ ಕೋಣೆಯಿದ್ದಂತೆ. ಅಲ್ಲಿ ನ್ಯಾಯವಾದಿಗಳ ವಾದವೇ ಬೆಳಕು.' ಎಂದಿದ್ದಾರೆ ಹಿರಿಯ ನ್ಯಾಯವಾದಿ ಒಬ್ಬರು. ಏಕೆಂದರೆ `ಆರೋಪಿ ಹಾಗೂ ಅಪರಾದಿಗಳ ನಡುವೆ ಅಂತರ ಬಹಳಷ್ಟಿದೆ. ಆದ್ದರಿಂದಲೇ `ತನಿಖೆ ಅಥವಾ ವಿಚಾರಣೆಯನ್ನು Hear both sides ಎಂದು ಹೇಳುತ್ತಾರೆ. ವಿಚಾರಣೆ ಇಲ್ಲದೇ ನೀಡಲ್ಪಡುವ ದಂಡನೆಗಳಿಗೆ ಮರ್ಯಾದೆಯಿಲ್ಲ. ಅದು ತಾಲೀಬಾನಿ ಶೈಲಿಯಾಗಿಬಿಡುತ್ತದೆ. `ಹತ್ತು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿ ದಂಡನೆಗೊಳಗಾಗಬಾರದು.' ಎಂಬುದು ನಮ್ಮ ಕಾನೂನಿನ ನೀತಿ.

ಯಾರಿಗಾದರೂ ತನ್ನ ಪರವಾಗಿ ವಾದಾಡಲು ನ್ಯಾಯವಾದಿಯನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ ಅವನ ಪರವಾಗಿ ವಾದಾಡಲು ಸರ್ಕಾರವೇ ಒಬ್ಬ ನ್ಯಾಯವಾದಿಯನ್ನು ನೇಮಿಸಬೇಕಾಗುತ್ತದೆ. ಆದ್ದರಿಂದ ಎರಡು ವ್ಯಕ್ತಿಗಳ ನಡುವಿನ ವಾದಕ್ಕೆ (ಇದರಲ್ಲಿ ಒಂದು ವ್ಯಕ್ತಿ ಸರ್ಕಾರವೇ ಇರಬಹುದು) ಇಬ್ಬರು ನ್ಯಾಯವಾದಿಗಳು ಇರಲೇಬೇಕು. ತನ್ನ ಪರವಾಗಿ ವಾದ ಮಂಡಿಸಲು ತಾನೇ ಶಕ್ತ ಅನ್ನಿಸಿದ ಸಂದರ್ಭದಲ್ಲಿ ಆರೋಪಿ ಅಥವಾ ದೂರುದಾರನು ತಾನೇ ತನ್ನ ವಾದವನ್ನು ಮಂಡಿಸಬಹುದಾಗಿದೆ. ಆದರೆ ಇದಕ್ಕೆ ನ್ಯಾಯಾಧೀಶರ ಅನುಮತಿ ಬೇಕಾಗುತ್ತದೆ.

ಅಪರಾಧಿಗಳ ಪರವಾಗಿ ವಾದಾಡುವ ನ್ಯಾಯವಾದಿಗಳು ಅವರ ಅಪರಾಧವನ್ನು ಮುಚ್ಚಿ ಹಾಕಲು ಯತ್ನಿಸುತ್ತಾರೆ ಎನ್ನುವವರಿದ್ದಾರೆ. ಈ ವಾದದಲ್ಲಿ ಹುರುಳಿಲ್ಲದಿಲ್ಲ. ಇಂದು ಎಲ್ಲಾ ರಂಗಗಳಲ್ಲೂ ಇರುವಂತೆಯೇ ಈ ನ್ಯಾಯಾಂಗದಲ್ಲೂ ಅನೇಕ ಕೊರತೆಗಳು, ಅನ್ಯಾಯಗಳು, ಆಮಿಷಗಳು ತುಂಬಿ ಹೋಗಿವೆ. ಧನಿಕ ಅಪರಾಧಿಯ ಆಮಿಷಕ್ಕೆ ಒಳಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನಿಸಿಕೊಂಡ ಸರ್ಕಾರಿ ನ್ಯಾಯವಾದಿಗಳು ಪ್ರಕರನವನ್ನು ದುರ್ಭಲಗೊಳಿಸಿ ಅಪರಾಧಿಯನ್ನು ಕೇವಲ ಆರೋಪಿಯನ್ನಾಗಿ ಬದಲಾಯಿಸಿ ಶಿಕ್ಷೆಯಾಗದಂತೆ ತಡೆಯುವುದೂ ಇದೆ. ಹಾಗಂತ ಎಲ್ಲಾ ನ್ಯಾಯವಾದಿಗಳು ಹೀಗೆಯೇ ಮಾಡುತ್ತಾರೆ ಎಂದೇನಲ್ಲ. ಇಲ್ಲೂ ನಿಜವಾದ ವೃತ್ತಿ ಪ್ರಾಮಾಣಿಕರಿದ್ದಾರೆ. ಪ್ರಾಮಾಣಿಕ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬ ಮುಂದೆ ತಾನೇ ನ್ಯಾಯಾಧೀಶನಾಗುವ ಅವಕಾಶ ಇರುತ್ತದೆ. ಆದರೆ ನ್ಯಾಯವಾದಿಯಾಗಿರುವಾಗಲೇ ತನ್ನ ಕೈಗೆ ಕಪ್ಪು ಮಸಿ ಬಳಿದುಕೊಂಡರೆ ಮುಂದೆ ತೊಂದರೆಯಾಗುತ್ತದೆ. ಆದ್ದರಿಂದ ಅವರವರ ವೃತ್ತಿಗನುಗುಣವಾಗಿ ನಡೆದುಕೊಳ್ಳುವುದೇ ಸರಿ. ಅದು ಅವರ ವೃತ್ತಿ ಧರ್ಮ.
 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…