ವಿಷಯಕ್ಕೆ ಹೋಗಿ

ಭಾರತ ಕಾಯೋ ಅಣ್ಣಾ... ನೀನೇ ಜನ ಲೋಕಪಾಲ !

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಇದೀಗ ವಿಜಯದ ಹಾದಿಯಲ್ಲಿ ಮುನ್ನಡೆಯುತ್ತಿರುವ ಅಣ್ಣಾ ಹಜಾರೆಯವರಿಂದಾಗಿ ಮುಳುಗುತ್ತಿದ್ದ ದೇಶಕ್ಕೆ ಕೊನೆಗೂ ಒಂದು ಹುಲ್ಲುಕಡ್ಡಿಯ ಆಸರೆ ದೊರೆತಂತಾಗಿದೆ. ಸಾವಿರಾರು ಕೋಟಿಹ ಹಗರಣಗಳನ್ನು ತಡೆದುಕೊಂಡೂ ನಮ್ಮ ದೇಶ ಉಸಿರಾಡುತ್ತಿರುವುದೇ ಒಂದು ಪವಾಡವಾಗಿತ್ತು. ಅತ್ತ ದೇಶವನ್ನು ಅವರು ಕೊಳ್ಳೆ ಹೊಡೆಯುತ್ತಿದ್ದರೆ ಇತ್ತ ರಾಜ್ಯವನ್ನು ಇವರು ದೋಚುತ್ತಿದ್ದಾರೆ. ಆದರೆ ಸಾಮಾನ್ಯ ಜನತೆ ಮಾತ್ರ ಏನೂ ಮಾಡಲಾಗದೇ ರಾಜಕಾರಣಿಗಳ, ಅಧಿಕಾರಿಗಳ ವೈಭೋಗವನ್ನು ನೋಡಿ ವಿಲವಿಲ ಒದ್ದಾಡುವುದಷ್ಟೇ ಕೆಲಸವಾಗಿತ್ತು.

ಇತ್ತೀಚಿಗೆ ಜನರೂ ಸಹ ಭ್ರಷ್ಟಾಚಾರಕ್ಕೆ ಎಷ್ಟು ಒಗ್ಗಿ ಹೋಗಿದ್ದರೆಂದರೆ ಪರಮ ಭ್ರಷ್ಟ ಮುಖ್ಯಮಂತ್ರಿಯನ್ನೂ ಸಹ ಸಮರ್ಥಿಸಿಕೊಳ್ಳುವ ಮಟ್ಟಿಗೆ ಜನರ ಮನಸ್ಸು ಒಗ್ಗಿ ಹೋಗಿತ್ತು. ಇತ್ತೀಚಿನ ದಿನಗಳಲ್ಲಂತೂ ಹಗರಣಗಳದ್ದೇ ಸರಮಾಲೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೂರು ಇನ್ನೂರು ಕೋಟಿಗಳನ್ನು ನುಂಗಿ ನೀರು ಕುಡಿಯುತ್ತಿದ್ದರೆ ಅತ್ತ ಸೋನಿಯಾ ಗ್ಯಾಂಗ್ ಸಾವಿರಾರು ಕೋಟಿಗಳನ್ನು ನುಂಗಿ ನೀರೂ ಕುಡಿಯದೇ ಅರಗಿಸಿಕೊಳ್ಳುವ ತಾಕತ್ತನ್ನು ಹೊಂದಿತ್ತು. ಆದುದರಿಂದಲೇ ರಾಜ್ಯ ಮತ್ತು ಕೆಂದ್ರ ಸರ್ಕಾರಗಳೆರಡೂ ಮೇಲಿಂದ ಮೇಲೆ ಹಗರಣಗಳನ್ನು ಮಾಡುತ್ತಲೇ ಸಾಗಿದ್ದವು. ಆದರ್ಶ ಹಗರಣ, ಕಾಮನ್ವೆಲ್ತ್, 2ಜಿ ಹೀಗೆ ಸಾವಿರಾರು ಕೋಟಿಗಳ ಸರಮಾಲೆ ಸಾಗಿತ್ತು. ಇವೆಲ್ಲಾ ತಮ್ಮ ಮೂಗಿನ ಕೆಳಗೇ ನಡೆಯುತ್ತಿದ್ದರೂ ಸಹ ಸೋನಿಯಾ ಮತ್ತು ಪ್ರಧಾನಿ ಮನಮೋಹನ್ ಸಿಂಗ್, ಗಡ್ಕರಿ, ಪ್ರಧಾನ್ ಮುಂತಾದವರು ಮಾತ್ರ ಭ್ರಷ್ಟಾಚಾರವನ್ನು ಸಹಿಸೋದಿಲ್ಲ ಎಂದು ಪುಂಗಿ ಊದುತ್ತಲೇ ಕಾಲ ಕಳೆಯುತ್ತಿದ್ದರು.

ಇದನ್ನೆಲ್ಲಾ ನೋಡಿದ ಭಾರತೀಯರ ರಕ್ತ ಕುದಿಯಬೇಕಿತ್ತು. ಆದರೆ ಆಗಿದ್ದೇನು. ರಕ್ತ ಕುದಿಯುವುದು ಹಾಗಿರಲಿ, ಯಾರಿಗಾದರೂ ಕಡೇ ಪಕ್ಷ ರಕ್ತವಾದರೂ ಬಿಸಿ ಇದೆಯಾ ಅನ್ನುವುದೇ ಅನುಮಾನವಾಗಿತ್ತು ! ತಮ್ಮ ಮುಂದಿನ ತಲೆಮಾರು ಇಷ್ಟೊಂದು ನಿರ್ಲಜ್ಜರು ಅಂತ ತಿಳಿದಿದ್ದರೆ ಅಂದಿನವರು ಅಷ್ಟೆಲ್ಲಾ ಕಷ್ಟಬಿದ್ದು, ಪ್ರಾಣ ತೆತ್ತು ಸ್ವಾತಂತ್ರ್ಯಕ್ಕಾಗಿ ಹೋರಡುತ್ತಲೇ ಇರಲಿಲ್ಲವೇನೋ. ಕಣ್ಣೆದುರೇ ಹಗರಣಗಳ ಸರಮಾಲೆ ನಡೆಯುತ್ತಿದ್ದರೂ ಯಾರೊಬ್ಬರೂ ಚಕಾರವೆತ್ತಲಿಲ್ಲ. ಇಲ್ಲಿ ಸಂತೋಷ್ ಹೆಗಡೆಯವರು ಯಡ್ಡಿಯೆದುರು ಏಗಲಾರದೇ ಸೋಲುವ ಸ್ಥಿತಿ ತಲುಪಿದ್ದರು. ಭಷ್ಟರನ್ನು ಹೆಡೆಮುರಿ ಕಟ್ಟುವ ಸಾಧನವೇ ಲೋಕಾಯುಕ್ತದ ಬಳಿ ಇಲ್ಲ. ಕಳ್ಳರನ್ನು ಗುರುತಿಸಬಹುದು ಅಷ್ಟೇ ಹೊರತೂ, ಹಿಡಿಯುವ ಹಾಗಿಲ್ಲ ಅನ್ನುವ ಪರಿಸ್ಥಿತಿ. ಹಿಡಿದರೂ ಶಿಕ್ಷೆ ಇಲ್ಲ.

ಜಂತರ‍್ ಮಂತರ್‌ನಲ್ಲಿ ಹೊತ್ತಿದ ಕಿಡಿ

ಇಂತಹ ವಿಷಮ ಗಳಿಗೆಯಲ್ಲಿ ಒಬ್ಬರ ರಕ್ತ ಕುದಿದೇಳುತ್ತದೆ. ಆತ ಯುವಕನಲ್ಲ, ಸುಮಾರು ಅರವತ್ತು ವರ್ಷ ದಾಟಿದ ಮುದುಕ... ಅವರೇ ಅಣ್ಣಾ ಹಜಾರೆ. ಇಂದಿನ ಭಾರತದ ದುರುಳರನ್ನು ನೋಡಿ ಸುಮ್ಮನೆ ಕೂರಲಾಗದ ಇವರು ಬೀದಿಗಿಳಿದೇ ಬಿಟ್ಟರು. ಭ್ರಷ್ಟಾಚಾರದ ವಿರುದ್ಧ ಯುದ್ಧ ಘೋಷಿಸಿದರು. ಅದು ಶಾಂತಿಯ ಯುದ್ಧವಗಿತ್ತು. ಕೊನೆಗೂ ಭಾರತೀಯರಿಗೆ ಜ್ಞಾನೋದಯವಾಗಿತ್ತು. ಹಜಾರೆಯವರ ಹೋರಾಟಕ್ಕೆ ಬೆಂಬಲ ನೀಡಲು ಮುಂದಾದರು. ದೆಹಲಿಯ ಜಂತರ್ ಮಂತರ್ನಲ್ಲಿ ಸಣ್ಣದಾಗಿ ಹೊತ್ತಿದ ಕಿಡಿ, ನಿಧಾನಕ್ಕೆ ಇಡಿಯ ದೇಶಕ್ಕೂ ಆವರಿಸತೊಡಗಿತು. ಅದು ಸಾಧಾರಣ ಕಿಡಿಯಾಗಿರಲಿಲ್ಲ. ಎಷ್ಟೊ ದಿನದಿಂದ ಜನತೆಯ ಮನದಲ್ಲಿ ಲಾವಾಗ್ನಿಯಂತೆ ಹುದುಗಿದ್ದ ಕಿಡಿ.

ಈ ಭಯಂಕರ ಕಿಡಿಯನ್ನು ಗಮನಿಸಿದ್ದೇ ಸೋನಿಯಾ. ಆಕೆ ಮಹಾ ಚತುರೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ತನ್ನ ಪಕ್ಷದ ಮಂತ್ರಿಗಳೇ ಲಕ್ಷಾಂತರ ಕೋಟಿ ರೂಪಾಯಿಯನ್ನು ಗುಳುಂ ಮಾಡುತ್ತಿರುವಾಗ ಈಕೆ ಮುಗುಳ್ನಗುತ್ತಾ ನಿಂತಿರುತ್ತಾಳೆ. ಯಾವಾಗ ಹಗರಣ ಬೀದಿಗೆ ಬೀಳುತ್ತೋ ಆಗ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂಬ ಬಾಯಿಪಾಠ ಮಾಡಿಕೊಂಡ ಒನ್‌ಲೈನ್ ಸ್ಟೋರಿಯೊಂದಿಗೆ ಮುಖ ತೋರಿಸುತ್ತಾಳೆ. ನಂತರ ಸಂಬಂಧಪಟ್ಟ ರಾಜಕಾರಣಿಯ ರಾಜೀನಾಮೆಯೊಂದಿಗೆ ಪ್ರಹಸನ ಮುಕ್ತಾಯವಾಗುತ್ತದೆ. ಅದು ಹೇಗೋ ಪಾಪ ಎ. ರಾಜ ವಿಧಿ ಇಲ್ಲದೇ ಜೈಲು ಪಾಲಾಗಿ ಬಿಟ್ಟ. ಅಷ್ಟು ಬಿಟ್ಟರೆ ಮತ್ಯಾರಿಗೂ ಶಿಕ್ಷೆಯಾದ ಉದಾಹರಣೆ ದುಬರ್ೀನು ಹಾಕಿ ಹುಡುಕಿದರೂ ಸಿಗಲಾರದು.

ಅಣ್ಣಾರವರು ಉಪವಾಸ ಸತ್ಯಾಗ್ರಹ ಕೂರುತ್ತಿರುವಂತೆಯೇ ಇಡಿಯ ದೇಶವೇ ಅವರ ಬೆಂಬಲಕ್ಕೆ ನಿಂತಿತು. ಮುಖ್ಯವಾಗಿ ಕರ್ನಾಟಕದಲ್ಲಿ ಎಲ್ಲಾ ಊರುಗಳಲ್ಲೂ ಅವರಿಗೆ ಬೆಂಬಲ ಸೂಚಿಸಿ, ಮತ್ತು ಭ್ರಷ್ಟಾಚಾರವನ್ನು ತೊಲಗಿಸುವ ನಿಟ್ಟಿನಲ್ಲಿ ಧರಣಿಳು, ಸತ್ಯಾಗ್ರಹಗಳು ನಡೆಯತೊಡಗಿದವು. ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನದಲ್ಲಿ ಕೆಲವರು ತಾವೂ ಉಪವಾಸಕ್ಕೆ ಕುಳಿತರು. ಅವರಿಗೆ ಬೆಂಬಲ ಸೂಚಿಸಿ ನೂರಾರು ಜನರು ಧರಣಿ ಕುಳಿತರು. ಹೀಗಾಗಿ ಕೇಂದ್ರ ಸರ್ಕಾರದ ಬುಡಕ್ಕೇ ಎಳ್ಳು ನೀರು ದಿಟವಾಗತೊಡಗಿತ್ತು. ಇದನ್ನು ಸೋನಿಯಾ ಮೊದಲ ಬಾರಿಗೆ ಮನಗಂಡುಬಿಟ್ಟರು.

ಅದು ಜನಲೋಕಪಾಲ ಮಸೂದೆ

ಇಷ್ಟಕ್ಕೂ ಅಣ್ಣಾ ಹಜಾರೆಯವರು ಉಪವಾಸ ಕೂತು ಬೇಡಿಕೆ ಇಟ್ಟಿದ್ದಾದರೂ ಏನನ್ನು? ಜನಲೋಕಪಾಲ ಮಸೂದೆಯ ಮಂಡನೆಯಾಗಬೇಕು ಅನ್ನುವುದು. ಲೋಕಪಾಲ ಮಸೂದೆ ನೆನೆಗುದಿಗೆ ಬಿದ್ದೇ ಆಗಲೇ ನಲವತ್ತು ವರ್ಷಗಳೇ ಉರುಳಿದ್ದವು. ಜನಲೋಕಪಾಲ ಅಂದರೆ ಅದಕ್ಕಿಂತಲೂ ಕಟ್ಟು ನಿಟ್ಟಿನದು. ಮುಖ್ಯವಾಗಿ ಇದರಲ್ಲಿ ಜನತೆಯ ಪರವಾಗಿ ಪ್ರತಿನಿಧಿಗಳಿರುತ್ತಾರೆ. ಇದನ್ನು ರೂಪಿಸಿದವರು ನ್ಯಾಯವಾದಿ ಶಾಂತಿಭೂಷಣ್ ಅವರು. ಅಂದರೆ ಒಟ್ಟು ಹತ್ತು ಜನರ ಜನಲೋಕಪಾಲ ಸಮಿತಿಯಲ್ಲಿ ಐದು ಜನ ಸರ್ಕಾರದ ಕಡೆಯವರಾದರೆ ಉಳಿದ ಐದು ಜನ ಜನತೆಯ ಕಡೆಯಿಂದ ನಾಮಾಂಕಿತರಾಗಬೇಕು ಅನ್ನುವುದು ಜನಲೋಕಪಾಲ ಮಸೂದೆಯ ಪ್ರಮುಖ ಅಂಶ. ಹಗರಣಗಳು ನಡೆದಾಗ ಮತ್ತು ಪ್ರಧಾನಿಯನ್ನೂ ಪ್ರಶ್ನಿಸುವ / ತನಿಖೆ ಮಾಡುವ ಅಧಿಕಾರ ಇದಕ್ಕೆ ಇರಬೇಕು, ಸಂಸದರನ್ನು ಮೇಲ್ಮಟ್ಟದ ಅಧಿಕಾರಿಗಳನ್ನು ಸೂಕ್ತ ಕಾರಣವಿದ್ದರೆ ಕೆಲಸದಿಂದ ತೆಗೆದು ಹಾಕುವ ಅಧಿಕಾರ ಸಹ ಇರಬೇಕು ಅನ್ನುವುದು ಜನ ಲೋಕಪಾಲದ ಬೇಡಿಕೆ. ಸರ್ಕಾರಕ್ಕೆ ಉರಿ ಹತ್ತಿಕೊಂಡಿದ್ದೇ ಇಲ್ಲಿ.

ತನ್ನ ಜುಟ್ಟನ್ನು ಬೇರೆಯವರ ಕೈಲಿ ಕೊಡಲಾದೀತೇ? ನುಂಗಣ್ಣಗಳನ್ನು ವಿಚಾರಿಸಿಕೊಳ್ಳಲು ಸರ್ಕಾರಕ್ಕೆ ಇಷ್ಟವಿರುವ ಮಂಗಣ್ಣಗಳೇ ಆಗಬೇಕು ಅನ್ನುವುದು ಬಹುತೇಕ ಎಲ್ಲಾ ರಾಜಕಾರಣಿಗಳ ಉದ್ದೇಶ. ಯಡಿಯೂರಪ್ಪರನ್ನೇ ನೋಡಿ, ತಮ್ಮ ಮೇಲಿನ ಭೂಹಗರಣಗಳ ತನಿಖೆಗೆ ತಾವೇ ತಮಗೆ ಬೇಕಾದವರನ್ನು ತನಿಖೆಗೆ ನೇಮಿಸುತ್ತಾರೆ. ಆದರೆ ಅಪ್ಪಿ ತಪ್ಪಿಯೂ ಲೋಕಾಯುಕ್ತರಿಗೆ ತನಿಖೆ ನಡೆಸಲು ಬಿಡುವುದಿಲ್ಲ. ಇದೇ ಉದ್ದೇಶ ಕೇಂದ್ರದ ನಾಯಕರಿಗೂ ಇರದಿದ್ದರೆ ದೇಶ ಈ ಸ್ಥಿತಿಯಲ್ಲಿ ಇರಬೇಕಾಗಿತ್ತೇ?

ಈ ಭಂಡ ರಾಜಕಾರಣಿಗಳು ಭ್ರಷ್ಟಾಚಾರದ ರೋಗಕ್ಕೆ ಅದೆಷ್ಟು ತುತ್ತಾಗಿದ್ದಾರೆಂದರೆ, ಭ್ರಷ್ಟಾಚಾರವಿಲ್ಲದೇ ರಾಜಕಾರಣವಿಲ್ಲ ಅನ್ನುವ ಮನೋರೋಗಕ್ಕೆ ತುತ್ತಾಗಿದ್ದಾರೆ. ಭ್ರಷ್ಟಾಚಾರದಿಂದಲೇ ದಿನನಿತ್ಯದ ವೈಭೋಗ ನಡೆಯುತ್ತಿರುವಾಗ, ಅದರಿಂದಲೇ ಚುನಾವಣೆಗಳನ್ನು ಎದುರಿಸಿ ಗೆದ್ದು ಬರಲು ಸಾಧ್ಯವಾಗುತ್ತಿರುವಾಗ ಭ್ರಷ್ಟಾಚಾರವೇ ಇರಬಾರದು ಎಂದರೆ ಹೇಗೆ? ಇದು ಅವರ ಅನಿಸಿಕೆ. ಇದನ್ನು ದಿಗ್ವಿಜಯ್ ಸಿಂಗ್, ವೀರಪ್ಪ ಮೊಯ್ಲಿ, ಅಮರ್ ಸಿಂಗ್, ಕಪಿಲ್ ಸಿಬಲ್ ಹಾಗೂ ನಮ್ಮ ರಾಜ್ಯದ ಕುಮಾರಸ್ವಾಮಿ, ಕೃಷ್ಣಬೈರೇಗೌಡ ಮುಂತಾದವರು ಹೇಳಿದರು. ಅದರಲ್ಲೂ ಕಾಂಗ್ರೆಸ್ ಕುಳಗಳು ಜನಲೋಕಪಾಲ ಜಂಟೀ ಸದನ ಸಮಿತಿಯಲ್ಲಿರುವ ಐವರು ಜನಪ್ರತಿನಿಧಿಗಳ ಬಗ್ಗೆ ಇಲ್ಲ ಸಲ್ಲದ ವದಂತಿ ಹರಡಲು ಶುರು ಮಾಡಿದ್ದು ಮಾತ್ರ ಕಳ್ಳ ಕಾಂಗ್ರೆಸ್ಸಿಗರ ಪರಮ ದ್ರೊಹವಾಗಿತ್ತು.

ಆದರೂ ಇಂದು ವಿಧಿ ಇಲ್ಲದೇ ಗಂಟಲಿಂದ ಮೇಲಕ್ಕೆ ಜನಲೋಕಪಾಲ ಜಾರಿಯಾಗಲಿ ಎಂದು ಹೇಳುವವರಿದ್ದಾರೆ. ಇನ್ನೂ ಕುಚೋಧ್ಯವೆಂದರೆ ಯಾರು ಭ್ರಷ್ಟಾಚಾರ ಮಾಡಿದ್ದಾರೋ, ಆರೋಪ ಎದುರಿಸುತ್ತಿದ್ದಾರೋ ಅವರೇ ಜನಲೋಕಪಾಲ ಜಾರಿಯಾಗಲೇ ಬೇಕು ಎಂದು ಬೊಬ್ಬೆ ಹಾಕುತ್ತಿರುವುದು. ಯಡಿಯೂರಪ್ಪ, ಅಶೋಕ್ ಇವರೆಲ್ಲ ಜನಲೋಕಪಾಲ ಜಾರಿಯಾಗಲಿ ಎಂದು ಹೇಳಿಕೆ ಕೊಡುವುದು ನೋಡಿದರೆ ನಗು ಬರುತ್ತೆ. ಜನರನ್ನು ಹೇಗೆಲ್ಲಾ ಕುರಿ ಮಾಡುತ್ತಾರಲ್ಲ? ಎಂಬ ವೇದನೆ ಕಾಡುತ್ತೆ.

ಬಾಯಿ ಬಿಟ್ಟರೆ ಬಣ್ಣಗೇಡು

ಈ ರಾಜಕಾರಣಿಗಳು ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸುತ್ತಿದ್ದಾರೆ. ಜನಲೋಕಪಾಲ ಅನ್ನುವುದೇ ಇವರಿಗೆ ಅರಗದ ಅನ್ನವಾಗಿದೆ. ಎಲ್ಲಾ ಪಕ್ಷಗಳು ಇಂದು ಭ್ರಷ್ಟತನದಲ್ಲಿ ಬದುಕು ಸವೆಸುತ್ತಿವೆ. ಸುಳ್ಳು ಹೇಳಿ ಪ್ರಜೆಗಳನ್ನು ವಂಚಿಸುತ್ತಿವೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಅಥವಾ ಇನ್ಯಾವುದೇ ಪಕ್ಷವೂ ಹೊರತಲ್ಲ. ಇಲ್ಲಿ ದುಡ್ಡು ಚೆಲ್ಲದಿದ್ದರೆ ಗಾಂಧಿ ಸಹ ಗೆಲ್ಲೋದಿಲ್ಲ ಎಂಬ ಕುಮಾರಸ್ವಾಮಿಯವರ ಮಾತು ಅಕ್ಷರಸಃ ಸತ್ಯ. ಅದಕ್ಕಾಗಿ ಅವರನ್ನು ದೂರಿ ಪ್ರಯೋಜನವಿಲ್ಲ. ಅವರಪ್ಪನ ಕಾಲದಲ್ಲೇ ರಾಜಕಾರಣ ಹದಗೆಟ್ಟು ಹೋಗಿದ್ದ ಮೇಲೆ, ಮಕ್ಕಳ ಕಾಲಕ್ಕೆ ಬೇರೇನು ಕಾಣಲು ಸಾಧ್ಯ? ಹೀಗಾಗಿಯೇ ನೂರಕ್ಕೆ 99ರಷ್ಟು ರಾಜಕಾರಣಿಗಳು ಜನಲೋಕಪಾಲ ಅಂದರೆ ಮೂಗು ಮುರಿಯುತ್ತಾರೆ. ಮಗ್ಗುಲಲ್ಲಿ ಚೇಳು ಬಿಟ್ಟುಕೊಂಡವರಂತೆ, ಬಾಲ ಸುಟ್ಟ ಬೆಕ್ಕಿನಂತೆ ಕಲ್ಲವಿಲಗೊಳ್ಳುತ್ತಿದ್ದಾರೆ.

ಒಂದೊಮ್ಮೆ ಜನಲೋಕಪಾಲ ಜಾರಿಯಾದರೆ ಕಂಡಿತಾ ತಮ್ಮ ಅಂಡಿಗೆ ಒದೆ ಬೀಳುತ್ತೆ ಅಂತ ಎಲ್ಲರಿಗೂ ಅರ್ಥವಾಗಿ ಹೋಗಿದೆ. ತಲೆ ಮೇಲೆ ಬಿಸಿ ನೀರು ಕಾಯಿಸಿಕೊಳ್ಳಲು ಇಂದು ಯಾವ ರಾಜಕಾರಣಿಯೂ ತಯಾರಿಲ್ಲ. ಯಾವುದಾದರೊಂದು ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡಸಲು ವಿರೋಧ ಪಕ್ಷಗಳನ್ನೇ ಸೇರಿಸಿಕೊಳ್ಳಲು ಮೀನಾಮೇಷ ಎಣಿಸುವ ಈ ರಾಜಕಾರಣಿಗಳು ಇನ್ನು ಇಂತಹ ಸ್ವತಂತ್ರ ಲೋಕಪಾಲಕ್ಕೆ ಅಸ್ತು ಎನ್ನಲು ಹೇಗೆ ಸಾಧ್ಯ?

ಜನಲೋಕಪಾಲ ಜಾರಿಗೆ ಬದ್ದರಾಗಿದ್ದೇವೆ ಎಂದು ಹೇಳುತ್ತಿರುವ ದೆಹಲಿ ಕಂಗ್ರೆಸ್ ಮುಖಗಳನ್ನೇ ನೋಡಿ!? ಸೋನಿಯಾ, ಮನ್ಮೋಹನ್ ಸಿಂಗ್, ವೀರಪ್ಪ ಮೊಯ್ಲಿ ಇವರೆಲ್ಲಾ ಹಾಗೆ ಹೇಳದೇ ಬೇರೆ ದಾರಿ ಉಳಿದಿಲ್ಲ. ಅಣ್ಣಾರವರು ಸರಿಯಾದ ಇಕ್ಕಳದಲ್ಲೇ ಹೆಗ್ಗಣಗಳನ್ನು ಸಿಕ್ಕಿ ಹಾಕಿ ದೇಶಕ್ಕೆ ಮಹದುಪಕಾರ ಮಾಡಿದ್ದಾರೆ. ಅವರಿಗೆ ದೇಶದ ಜನತೆ ಚಿರಋಣಿಯಾಗಿರಲೇ ಬೇಕು.

ಅದೆಲ್ಲಕ್ಕೂ ಮೊದಲು ಜನಲೋಕಪಾಲ ಜಾರಿಯಾಗುತ್ತಾ ?

ಅದೇ ಇರುವುದು ಅನುಮಾನ. ಕಾಂಗ್ರೆಸ್ ನಾಯಕರು ಒಂದಾದ ಮೇಲೆ ಒಂದರಂತೆ ವಕ್ರ ಹೇಳಿಕೆ ನೀಡುತ್ತಿರುವುದು ನೋಡಿದರೆ ಎಲ್ಲಿ ಜನಲೋಕಪಾಲಕ್ಕೆ ಎಳ್ಳು ನೀರು ಬಿಡುತ್ತಾರೋ ಎಂಬ ಭಯ ಉಂಟಾಗದಿರದು. ಮೇಲಾಗಿ ಅಲ್ಲೀ ತನಕ ಅಣ್ಣಾ ಹಜಾರೆಯವರನ್ನಾದರೂ ಜೀವಂತ ಉಳಿಸುತ್ತಾರಾ? ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಎ.ರಾಜಾನಿಗೆ ಸಹಕರಿಸಿದ ಒಬ್ಬನನ್ನು ಈಗಾಗಲೇ ಕೊಲೆ ಮಾಡಿ ಬಿಸಾಕಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇನ್ನೂ ಏನೇನು ನಡೆಯುತ್ತೋ ಹೇಳಲಾಗದು.

ಅಣ್ಣಾ ಹಜಾರೆ, ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರೀವಾಲ್ ಮತ್ತು ಸಂತೋಷ್ ಹೆಗಡೆಯವರು ಸೇರಿ ಒಟ್ಟು ಐದು ಜನ ಈ ಜನಲೋಕಪಾಲ ಜಂಟಿ ಸದನ ಸಮಿತಿಯಲ್ಲಿ ಇದ್ದಾರೆ. ಇವರುಗಳ ಮೇಲೆ ಒಂದಾದ ನಂತರ ಒಂದರಂತೆ ಏನೇನೋ ಆರೋಪಗಳನ್ನು ಮಾಡುತ್ತಾ ಅವರನ್ನು ಜನಲೋಕಪಾಲದಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ. ಏನೇ ಆರೋಪ ಬಂದರೂ ಮಾನ, ಮರ್ಯಾದೆ, ನಾಚಿಕೆಗಳನ್ನೆಲ್ಲಾ ಬಿಟ್ಟು ಅಧಿಕಾರದಲ್ಲಿ ಮುಂದುವರಿಯಲು ಅವರ್ಯಾರೂ ಯಡಿಯೂರಪ್ಪ ಅಲ್ಲವಲ್ಲ? ಈಗಾಗಲೇ ಸಂತೋಷ್ ಹೆಗಡೆಯವರು ರಾಜೀನಾಮೆ ಬಿಸಾಕುತ್ತೇನೆ ಎಂದು ಗುಡುಗಿದ್ದಾರೆ. (ಜನತೆಯ ಒತ್ತಾಯದ ಮೇಲೆ ಅವರು ಮುಂದುವರಿಯುತ್ತಿದ್ದಾರೆ)

ವಿವಾದ ಮಾಡಿ ಬೇಳೆ ಬೇಯಿಸುವ ಹುನ್ನಾರ!

ಈ ಐದೂ ಮಂದಿ ಯಾರಿಗೂ ತಲೆ ಬಾಗದ ಪರಮ ದಾಷ್ಠ್ಯರು ಅನ್ನುವುದು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಾಗಿ ಹೋಗಿದೆ. ಹೇಗಾದರೂ ಈ ಸಮಿತಿಯನ್ನು ಒಡೆದು ಹಾಕಿದರೆ ಸಾಕು ಅನ್ನುವುದು ಅವರ ಯೋಚನೆ. ಕಡೇ ಪಕ್ಷ ಈ ಸರ್ಕಾರದ ಅವಧಿ ಮುಗಿಯುವ  ತನಕವಾದರೂ ಜನಲೋಕಪಾಲ ಬೇಡ ಅಂತ ತೀರ್ಮಾನಿಸಿರುವಂತಿದೆ. ನಂತರ ಏನಾದರೂ ಆಗಲಿ, ತಮ್ಮ ಹಗರಣಗಳು ಬಯಲಿಗೆ ಬಂದು ಜೈಲಿಗೆ ಹೋಗದಿದ್ದರೆ ಸಾಕು ಅಂತ.

ಮೊದಲಿಗೆ ಶಾಂತಿಭೂಷಣ್ ವಿರುದ್ಧ ನಕಲಿ ಸಿಡಿಯೊಂದನ್ನು ಹೊರ ತಂದು ಹುಯಿಲೆಬ್ಬಿಸಿದರು. ಅದು ಅಸಲಿಯೇ ಆಗಿದ್ದರೆ ಅದನ್ನು ಈ ಸಮಯದಲ್ಲೇ ಹೊರ ತರಬೇಕಿತ್ತಾ ? ಅಥವಾ ಅದಕ್ಕೂ ಮಸೂದೆಗೂ ಏನು ಸಂಬಂಧ? ಕೊಳಕ ಅಮರ್ ಸಿಂಗ್ ಏನೇನೋ ಬೊಗಳ ತೊಡಗಿದ. ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರು ತಂದೆ ಮಗ, ಒಂದೇ ಸಮಿತಿಯಲ್ಲಿ ತಂದೆ ಮಗ ಯಾಕೆ? ಅನ್ನುವ ತಗಾದೆ ತೆಗೆದರು. ಯಾರು ಏನೇ ಹೇಳಿದರೂ ತಂದೆ-ಮಗನನ್ನು ತೆಗೆಯಲಾಗದು ಎಂದು ಅಣ್ಣಾ ಹೇಳಿದ ಮೇಲೆ ಸುಮ್ಮನಾದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಹೆಚ್ಚು ಕಡಿಮೆ ಒಂದೇ ಕುಟುಂಬ ದೇಶವನ್ನು ಆಳುತ್ತಿದೆ. ಆಗ ಈ ಅಮರ್ಸಿಂಗ್ ಸವಾರಿ ಎಲ್ಲಿ ಹೋಗಿತ್ತು? ಅರವಿಂದ್ ಕೇಜ್ರೀವಾಲ್ ಅವರ ಬಗ್ಗೆ ಸಹ ವಿವಾದ ಹೆಣೆಯಲು ತಿಣುಕಾಡಿದರು.

ಅಣ್ಣಾ ನಡೆಸಿದ ಉಪವಾಸ ಸತ್ಯಾಗ್ರಹಕ್ಕೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಮತ್ತೆ ದುಡ್ಡಿಲ್ಲದೇ ಚುನಾವಣೆ ನಡೆಸಲು ಸಾಧ್ಯವಾ?, ಇವರು ತೆರಿಗೆ ಪಾವತಿಸಿದ್ದಾರಾ? ಎಂದು ಯಾರೋ ಕೇಳಿದರು. ಅದು ದೇಶದ ಉಳಿವಿಗಾಗಿ ಮಾಡಿದ ಉಪವಾಸ ಮತ್ತು ಖಚರ್ು. ಅದನ್ನು ಬೇಕಾದರೆ ಎಲ್ಲಾ ಪ್ರಜೆಗಳು ಭರಿಸೋಣ ಬಿಡಿ. ಅಣ್ಣಾ ತಮ್ಮ ಸ್ವಂತಕ್ಕಾಗಿ ಅದನ್ನು ಮಾಡಲಿಲ್ಲವಲ್ಲ?

ವೀರಪ್ಪ ಮೊಯ್ಲಿ ಸಹ ಒಂದು ಬಾರಿ ಇದರಿಂದ ಭ್ರಷ್ಟಾಚಾರ ನಿವಾರಣೆ ಆಗಿ ಹೋಗುತ್ತಾ? ಎಂದರು. ಜನಲೋಕಪಾಲ ಉಪಯೋಗ ಇಲ್ಲದ್ದು ಅಂದಿದ್ದು ಮತ್ತೊಬ್ಬ ಕಾಂಗ್ರೆಸ್ಸಿಗ ಕಪಿಲ್ ಸಿಬಲ್. ಆಶ್ಚರ್ಯವೆಂದರೆ ಇವರಿಬ್ಬರೂ ಸಹ ಜಂಟೀ ಸದನ ಸಮಿತಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಘನ ಸದಸ್ಯರು! ನಂಬಿಕೆ ಇಲ್ಲದವರು ರಾಜೀನಾಮೆ ನೀಡಿ ಹೊರ ಹೋಗಿ ಬೇರೆ ಕೆಲಸ ನೋಡಲಿ ಎಂದು ಯಾವಾಗ ಅಣ್ಣಾ ಗುಡುಗಿದರೋ ಆಗ ಬಾಯಿ ಮುಚ್ಚಿಕೊಂಡು ಸುಮ್ಮನಾಗಿದ್ದಾರೆ.

ಅವರು ಸುಮ್ಮನಾಗುತ್ತಿರುವಂತೆಯೇ ಎದ್ದು ಕೂತರಲ್ಲ ದಿಗ್ವಿಜಯ್ ಸಿಂಗ್. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ, ಅದನ್ನೇ ಸಂತೋಷ್ ಹೆಗಡೆಯವರಿಗೆ ತಡೆಯಲು ಆಗಲಿಲ್ಲ. ಇನ್ನು ಇಲ್ಲಿ ಬಂದು ಅದೇನು ತಡೆಯುತ್ತಾರೋ? ಎಂಬ ಆಣಿಮುತ್ತುಗಳನ್ನುದುರಿಸಿಯೇ ಬಿಟ್ಟರಲ್ಲ? ಇವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಆದರೆ ಹೆಗಡೆ ಇದಕ್ಕೆ ಸರಿಯಾದ ತಿರುಗೇಟನ್ನೇ ನೀಡಿದರು. ತಾವು ಜಂಟಿ ಸದನ ಸಮಿತಿಗೆ ರಾಜೀನಾಮೆ ನೀಡುವುದಾಗಿ ಘೊಷಿಸಿದರು. ಇದು ಸೋನಿಯಾ ಮುಖಕ್ಕೆ ರಪ್ಪನೆ ಬೀಸಿದಂತಾಯ್ತು. ಕೂಡಲೇ ಎಚ್ಚೆತ್ತುಕೊಂಡ ಆಯಮ್ಮ ಇಲ್ಲ, ಮಸೂದೆ ಜಾರಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂಬ ಹಳೇ ಡೈಲಾಗ್ ಬಿಗಿದು, ಆಗಿರುವ ಡ್ಯಾಮೇಜ್ಗೆ ತೇಪೆ ಹಾಕುವ ಕಾರ್ಯ ಕೈಗೊಂಡಳು. ತನ್ನ ಪಕ್ಷದ ನಾಯಕರ್ಯಾರೂ ಈ ವಿಷಯದ ಬಗ್ಗೆ ಚಕಾರ ಎತ್ತಬಾರದು ಎಂದು ಹೆಳಿದಳು. ಒಂದು ವೇಳೆ ಹೆಗಡೆಯವರು ರಾಜೀನಾಮೆ ನೀಡಿದ್ದೇ ಆಗಿದ್ದಲ್ಲಿ ಆ ಕಳಂಕ ಕಾಂಗ್ರೆಸ್ ಅನ್ನು ಹೆಡೆಮುರಿಗೆ ಕಟ್ಟುತ್ತಿತ್ತು.

ನಮ್ಮವರೇನೂ ಕಮ್ಮಿ ಇಲ್ಲ.

ಇತ್ತ ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ತುಟಿ ಪಿಟಕ್ ಅನ್ನದಿದ್ದರೂ ಶಾಸಕ ಕೃಷ್ಣಭೈರೇಗೌಡ ಒಂದು ನುಡಿಮುತ್ತು ಉದುರಿಸಿದ್ದಾರೆ. ಅದೇನೆಂದರೆ ಅವರ ಪ್ರಕಾರ ಜಂಟಿ ಸದನ ಸಮಿತಿ ಅಂತ ಮಾಡಿದರೆ ಸಂಸದರ ಅಧಿಕಾರವನ್ನು ಮೊಟಕು ಗೊಳಿಸಿದಂತೆ ಆಗುತ್ತದೆಯಂತೆ. ಎಂಥಾ ಮಾತು ಅಂತೀರಿ ಗೌಡರದ್ದು? ಸುಶಿಕ್ಷಿತ ರಜಕಾರಣಿ ಅನ್ನಿಸಿಕೊಂಡದ್ದಕ್ಕೆ ಸಾರ್ಥಕವಾಯ್ತಲ್ಲವೇ? ಅಲ್ಲಾ ಸ್ವಾಮೀ, ಇಷ್ಟು ದಿನ ಸಂಸದರಿಗೆ ಎಲ್ಲಾ ಅಧಿಕಾರವೂ ಇತ್ತು. ಇನ್ನು ಮುಂದೂ ಇರುತ್ತೆ. ಅವರ ಅಧಿಕಾರವನ್ನು ಯಾರೂ ಮೊಟಕುಗೊಳಿಸುತ್ತಿಲ್ಲ. ಆದರೆ ಸಂಸದರನ್ನು ಯಾರೂ ಪ್ರಶ್ನೆ ಮಾಡಲೇ ಬಾರದು ಅಂದರೆ ಹೇಗೆ ಹೇಳಿ!? ಅವರ ಅಧಿಕಾರವನ್ನು ಈ ಅರವತ್ತು ವರ್ಷದಲ್ಲಿ ಎಷ್ಟು ಉಪಯೋಗ ಮಾಡಿದ್ದಾರೆ, ಎಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ನಾವು ನೋಡಿಲ್ಲವೇ? ಉಪಯೋಗಕ್ಕಿಂತಾ ದುರುಪಯೋಗವೇ ಜಾಸ್ತಿ ಅಂತ ಭೈರೇಗೌಡರಿಗೆ ಗೊತ್ತಿಲ್ಲವೇ?

ಇನ್ನು ಕುಮಾರಸ್ವಾಮಿ ಗಾಂಧಿ ಬಗ್ಗೆ ಹೇಳಿದ ಒಂದು ಮಾತನ್ನೇ ಇಟ್ಟುಕೊಂಡು ಸಚಿವ ಸುರೇಶ್ಕುಮಾರ್ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ. ಶ್ರೀ ರಾಮನನ್ನೂ ಕುಟುಕಿಯಾರು ಎಂಬ ವೇದಾಂತ ಹೇಳುತ್ತಾರೆ. ಆದರೆ ರಾಮನ ಹೆಸರಲ್ಲಿ ಇವರ ಪಕ್ಷ ಮಾಡಿದ ಅವಘಡಗಳ ಬಗ್ಗೆ ಮಾತ್ರ ತಮ್ಮ ಲೇಖನಿಯನ್ನು ಹರಿಯ ಬಿಡುವುದೇ ಇಲ್ಲ. ತಮ್ಮ ನಾಯಕ ಯಡಿಯೂರಪ್ಪ ಮಾಡಿದ ಹಗರಣಗಳ ಬಗ್ಗೆ ಲೇಖನ ಬರೆಯಲು ಇವರಿಂದ ಸಾಧ್ಯವೇ ? ಕಟ್ಟಾ, ಸಂಪಂಗಿ, ಅಶೋಕ್, ರೇಣುಕಾಚಾರ್ಯ, ಹಾಲಪ್ಪ ಬಗ್ಗೆ? ಇಲ್ಲ, ಅದನ್ನೆಲ್ಲಾ ಕೇಳಬಾರದು ಅಲ್ಲವೇ?

ಈ ಎಲ್ಲಾ ಅಪಸವ್ಯಗಳ ನಡುವೆ ಯಾವ ಯಾವುದೋ ಹಳೆಯ ವಿಷಯಗಳನ್ನು ತೆಗೆದು ಶಾಂತಿ ಭೂಷಣ ಅವರ ವಿರುದ್ಧ ಪಿತೂರಿಗೆ  ತೊಡಗಿದ್ದಾರೆ ಕಾಂಗ್ರೆಸ್ಸಿಗರು. ಜನಲೋಕಪಾಲ ಮಸೂದೆ ಮಂಡನೆಯಾಗುವುದು ಆಗಷ್ಟ್ನಲ್ಲಿ. ಅಲ್ಲೀವರೆಗೂ ಈ ಸಮಿತಿಯನ್ನು ಉಳಿಯಗೊಡುತ್ತಾರಾ ಅನ್ನುವುದೇ ಅನುಮಾನವಾಗಿದೆ.

ಇದ್ದುದರಲ್ಲೇ ಕುಮಾರಸ್ವಾಮಿಯಂತವರು, ಕೆಲವು ಮಠಾಧೀಶರು ಜನಲೋಕಪಾಲ ಜಾರಿಯಾಗಲಿ ಎನ್ನುತ್ತಿದ್ದಾರೆ. ಆದರೆ ಭ್ರಷ್ಟನ ಸೇವೆಗೆ ನಿಂತಿದ್ದ ಅಂದಿನ ಕೆಲವು ಮಠಾಧೀಶರು ಎಲ್ಲಿ ಹೋದರೋ ಕಾಣಿಸುತ್ತಿಲ್ಲ. ಇನ್ನೊಂದೆರಡು ಜಾತೀಯ ಮಠಗಳು ಯಡ್ಡಿ ನಮ್ಮವ ಎಂದು ಬೀಗುವುದರಲ್ಲೇ ತಲ್ಲೀನವಗಿವೆ.

ಇಟ್ಟ ಹೆಜ್ಜೆ ಹಿಂದೆಗೆಯಬಾರದು

ಸದನ ಸಮಿತಿಯಲ್ಲಿರುವ ಐದೂ ಮಂದಿಯಲ್ಲಿ ನಮ್ಮ ಬೇಡಿಕೆ ಇಷ್ಟೇ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದೆಗೆಯಬಾರದು.  ಭಂಡ ರಾಜಕಾರಣಿಗಳು ಏನಾದರೂ ಅಪವಾದ ಹೊರಿಸಲಿ, ಏನಾದರೂ ತೊಂದರೆ ಕೊಡಲಿ. ಅದು ಅವರ ಚಟ, ಸಂಕಟ. ಅದಕ್ಕಾಗಿ ಯಾರೂ ಚಿಂತಿಸದೇ ದೇಶದ ಉಳಿವಿಗಾಗಿ ಜನಲೋಕಪಾಲ ಮಸೂದೆ ಜಾರಿಯಾಗುವವರೆಗೂ ಹಿಂದೆಗೆಯಬಾರದು. ಇದು ದೇಶದ ಪ್ರತಿ ಪ್ರಜೆಯ ಕೂಗು ಮತ್ತು ಪ್ರಾರ್ಥನೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…