ವಿಷಯಕ್ಕೆ ಹೋಗಿ

ಭ್ರಷ್ಟಾಚಾರದ ಸುಳಿಯಲ್ಲಿ ಬಡ ಭಾರತ

ಭಾರತಕ್ಕೆ ಉತ್ತಮ ಭವಿಷ್ಯವಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಎಲ್ಲೋ ಒಮ್ಮೊಮ್ಮೆ ಮಿಂಚಿನಂತೆ ಉದಯಿಸುವ ಆಶಾಕಿರಣಗಳು ಸ್ವಲ್ಪ ಸಮಯದಲ್ಲೇ ಭ್ರಷ್ಟ ಮೋಡದ ಸುಳಿಗೆ ಸಿಲುಕಿ ಜನರ ಎದುರಿನಿಂದ ಕಾಣೆಯಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಣ್ಣಾ ಹಜಾರೆ, ಸಂತೋಷ್ ಹೆಗಡೆ ಮುಂತಾದ ನಕ್ಷತ್ರಗಳು ಆಗಾಗ ಉದಯಿಸಿದರೂ ಸಹ ಅವರ ವರ್ಚಸ್ಸು ಮತ್ತು ಪ್ರಾಮಾಣಿಕತೆಯನ್ನು ಈ ಭಂಡ ರಾಜಕಾರಣಿಗಳು ಹೊಸಕಿ ಹಾಕುತ್ತಿದ್ದಾರೆ.

ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. ಬರೇ ರಾಜಕಾರನಿಗಳನ್ನ ದೂರಿ ಪ್ರಯೋಜನವಿಲ್ಲ ಅನ್ನುವವರಿದ್ದಾರೆ. ಅದು ನಿಜ ಕೂಡಾ. ಆದರೆ ಆ ಅಧಿಕಾರಿಗಳನ್ನು ಕೊಬ್ಬಲು ಬಿಟ್ಟಿದ್ದು ಮಾತ್ರ ಇದೇ ರಾಜಕಾರಣಿಗಳೇನೆ. ರಾಜಕಾರಣಿಗಳು ಸರಿಯಾಗಿದ್ದರೆ ಅಧಿಕಾರಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನಲ್ಲ. ಮುಖ್ಯವಾಗಿ ಅಧಿಕಾರಿಗಳು ರಾಜಕಾರಣಿಗಳಷ್ಟು ಭ್ರಷ್ಟರಲ್ಲ. ಅವರಿಗೆ ಕೆಲಸದ ಭಯವಿರುತ್ತದೆ. ಕೆಲಸ ಕಳೆದುಕೊಂಡರೆ ಬದುಕೋದು ಕಷ್ಟ ಎಂಬ ಅರಿವಿರುತ್ತದೆ. ಆದರೆ ರಾಜಕಾರಣಿಗಳಿಗೆ ಯಾವ ಭಯವೂ ಇಲ್ಲ. ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬರಬಹುದು ಎಂಬ ನಂಬಿಕೆ ಅವರಿಗಿದೆ. ಯಡಿಯೂರಪ್ಪನಂತವರ ಕೃಪಾಕಟಾಕ್ಷವಿದ್ದರೆ ಸೋತರೂ ಸೋಮಣ್ಣನಂತೋರು ಮಂತ್ರಿ ಆಗ್ತಾರೆ. ಭಂಡ ರಾಜಕಾರಣಿಗಳಿಗೆ ಇನ್ನೇನು ಬೇಕು ?

ಹೀಗಾಗಿ ಇಂದು ಹಗರಣಗಳ ಮೇಲೆ ಹಗರನಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದರಂತೆ ಸಾವಿರಾರು ಕೋಟಿಗಳ ಹಗರಣ ಹೊರ ಬೀಳುತ್ತಲೇ ಇದೆ. ಒಂದು ಹಗರಣದ ಚಚರ್ೆ ನಡೆಯುತ್ತಿರುವಾಗಲೇ ಅತ್ತ ಸದ್ದಿಲ್ಲದೇ ಮತ್ತೊಂದು ಹಗರಣ ತೆರೆಮರೆಯಲ್ಲಿ ನಡೆಯುತ್ತಲಿರುತ್ತದೆ. ಇದು ಚಚರ್ೆ ಮಾಡಿ ಮಾಡಿ ಮೂಲೆಗುಂಪಾದ ನಂತರ ಅದು ಹೊರ ಬರುತ್ತೆ. ಕೇಂದ್ರ ಸಕರ್ಾರದ್ದು ಲಕ್ಷಾಂತರ ಕೋಟಿ ರೂಪಾಯಿಗಳ ಹಗರಣಗಳಾದರೆ, ನಮ್ಮ ರಾಜ್ಯದ್ದು ಸಾವಿರಾರು ಕೋಟಿಗಳ ಹಗರಣ. ಕೆಲವೊಮ್ಮೆ ಕೇಂದ್ರವನ್ನು ರಾಜ್ಯವೂ, ರಾಜ್ಯವನ್ನು ಕೇಂದ್ರವೂ ಮೀರಿಸಿ ವಿಜ್ರಂಭಿಸುವುದನ್ನು ಕಾಣಬಹುದು. ಯಾರಿಗೆ ಯಾರೂ ಕಡಿಮೆ ಇಲ್ಲ. ಎಲ್ಲಾ ಕಳ್ಳರೇ. ಕಾಂಗ್ರೆಸ್, ಬಿಜೆಪಿ ಎಂಬ ನಾಮಕರಣಗಳೆಲ್ಲಾ ನಗಣ್ಯ. ಅವಕಾಶ ಸಿಕ್ಕರೆ ಇವರನ್ನು ಅವರೂ, ಅವರನ್ನು ಇವರೂ ನುಂಗಿ ನೀರು ಕುಡಿಯಬಲ್ಲ ರಾಕ್ಷಸರು. ಇವರಿಗೆ ಪ್ರಜೆಗಳೆಲ್ಲಾ ಯಾವ ಲೆಕ್ಕ ?

ಇದೆಲ್ಲಾ ನಡೆಯುತ್ತಿರುವುದು ಹೇಗೆ ?

ಇದಕ್ಕೆ ಉತ್ತರ ಅಷ್ಟು ಸರಳ ಅಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇವರಿಗೆ ಬೇಕಾದ ಎಲ್ಲಾ ನೆರವನ್ನೂ ನಿಡುತ್ತಿದೆ. ಭ್ರಷ್ಟಾಚಾರಿಯೊಬ್ಬ ಸಿಕ್ಕಿ ಹಾಕಿಕೊಳ್ಳುವುದು ಇಂದಿನ ದಿನದಲ್ಲಿ ದೊಡ್ಡ ವಿಷಯವೇ ಅಲ್ಲ. ಆದರೆ ಸಿಕ್ಕಿ ಹಾಕಿಕೊಂಡ ಭ್ರಷ್ಟನಿಗೆ ಶಿಕ್ಷೆಯಾಗಿದ್ದನ್ನು ಎಲ್ಲಾದರೂ ಕೇಳಿದ್ದೀರಾ ? ಕಂಡಿತಾ ಇಲ್ಲ. ಇವರಿಗೆ ಎಂದೂ ಶಿಕ್ಷೆ ಆಗುವುದಿಲ್ಲ. ಆ ಮಟ್ಟಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆ ಇದೆ. ಅದನ್ನು ರಚಿಸಿದ ಡಾ|| ಅಂಬೇಡ್ಕರ್ ಅವರಿಗೆ ಕಂಡಿತವಾಗಿಯೂ ಮುಂದೆ ಇಂತಹ ಕೀಳು ಮನಸ್ಥಿತಿಯ ರಾಜಕಾರಣಿಗಳು ಈ ದೇಶದಲ್ಲಿ ಹುಟ್ಟಿ ಬರುತ್ತಾರೆ ಎಂದು ತಿಳಿದಿರಲಿಕ್ಕಿಲ್ಲ. ತಿಳಿದಿದ್ದರೆ ಅವರು ಕಂಡಿತಾ ಇಷ್ಟೊಂದು ಹಗುರವಾದ ನ್ಯಾಯಾಂಗವನ್ನು ರಚಿಸುತ್ತಿರಲಿಲ್ಲ. ಕೆಲಸಕ್ಕೆ ಬಾರದ ಸಂವಿಧಾನವನ್ನು ರಚಿಸುತ್ತಿರಲಿಲ್ಲ. ಇವುಗಳನ್ನು ಇನ್ನೂ ಅಮೂಲಾಗ್ರ ಬದಲಾಯಿಸುತ್ತಿದ್ದರು. ಆದರೆ ಹಿಂದಿನವರ ಒಳ್ಳೆಯ ತನಗಳನ್ನು ಮೂಲೆಗೆಸೆದ ಇಂದಿನ ರಾಜಕಾರಣಿಗಳು ಸಂವಿದಾನವನ್ನು ತಮ್ಮ ಕಾಲ ಕೆಳಗೆ ಹಾಕಿ ತುಳಿದು ತಮ್ಮ ಕುಟುಂಬ ವರ್ಗದವರ ಸಾಮ್ರಾಜ್ಯ ಕಟ್ಟುತ್ತಿದ್ದಾರೆ. ಇವರಲ್ಲಿ ಎಳ್ಳಷ್ಟೂ ಪ್ರಜೆಗಳ ಮೇಲೆ ಕಾಳಜಿ ಇಲ್ಲ.

ಭಾರತವನ್ನು ಮಾರಲು ಹೊರಟವರು

ಕಳ್ಳ ಕಾಂಗ್ರೆಸ್ಸಿಗರು ಇದೇ ರೀತಿ ಮುಂದುವರಿದರೆ ಭಾರತವನ್ನೇ ಮಾರಿ ಬಿಡುವ ಅಪಾಯವಿದೆ. ಕಾಮನ್ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಮ್ ಹಗರಣಗಳನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಮನಮೋಹನ್ ಸಿಂಗ್ ಏನಾದರೂ ಕತ್ತೆ ಕಾಯ್ತಿದಾರಾ ಅನ್ನುವ ಅನುಮಾನ ಮೂಡದಿರದು. ನಡೆಯುವುದೆಲ್ಲಾ ನಡೆದಿದೆ. ನುಂಗುವವರೆಲ್ಲಾ ನುಂಗಿ ಗುಂಡಗಾಗಿದ್ದಾರೆ. ಕೋಟೆ ಕೊಳ್ಳೆ ಹೋದ ನಂದರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಇವರು ಎಲ್ಲಾ ಮುಗಿದ ನಂತರ ತನಿಖೆ ಎಂಬ ಹೆಸರಲ್ಲಿ ಕಾಲಹರಣ ಮಾಡುತ್ತಿದ್ದಾರೆ.

ಕಲ್ಮಾಡಿ, ರಾಜಾ, ಕನಿಮೊಳಿ ಇವರೆಲ್ಲಾ ಇಂದು ಜೈಲಲ್ಲಿ ಕಾಲ ಕಳೆಯುತ್ತಿರಬಹುದು. ಆದರೆ ಅಷ್ಟಕ್ಕೇ ನವು ತೃಪ್ತರಾಗುವಂತಿಲ್ಲ. ಸಾವಿರಾರು ಕೋಟಿ ದೋಚಿದ ಇವರು ಕೆಲವು ವರ್ಷ ಜೈಲಲ್ಲಿ ಕಳೆದರೆ ಏನು ಬಂತು ಭಾಗ್ಯ ? ಇವರು ದೋಚಿರುವ ಹಣ ಎಲ್ಲಿ ಹೋಯ್ತು ಅನ್ನುವುದು ಮುಖ್ಯವಲ್ಲವೇ ? ಅದನ್ನು ಒದ್ದು ವಸೂಲು ಮಾಡುವುದು ಯಾರು ? ಅಂಥಹ ಧೈರ್ಯ ಯಾರಿಗಿದೆ ? ಧೈರ್ಯವಿದ್ದರೂ ಅಂತಹ ಕಾನೂನೇ ನಮ್ಮ ವ್ಯವಸ್ಥೆಯಲ್ಲಿ ಇದ್ದಂತಿಲ್ಲ. ಮತ್ತೆ ಭಾರತ ಉದ್ದಾರ ಆಗುವುದಾದರೂ ಹೇಗೆ ?

ರಾಜ್ಯವನ್ನು ಕೊಳ್ಳೆ ಹೊಡೆದ ಭೂಪರು

ಯಡಿಯೂರಪ್ಪ ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದರು. ಕುಮಾರಸ್ವಾಮಿ ಮಾತು ತಪ್ಪಿದರು ಎಂದು ಜನರನ್ನು ನಂಬಿಸಿದರು. ಆದರೆ ತಾವು ಮಾಡಿದ್ದೇನು. ಅದೇ ರೈತರ ಮೇಲೆ ಗುಂಡು ಹಾರಿಸಿದರು. ಬಳ್ಳಾರಿಯನ್ನು ದೋಚಲು ರೆಡ್ಡಿಗಳಿಗೆ ಅನುಮತಿ ಕೊಟ್ಟು ಅದರ ಕಮಿಷನ್ ತಾವೂ ಪಡೆದು ನಿರಾಳವಾದರು. ಅತ್ತ ರೈತರು ಮುಳುಗುತ್ತಿದ್ದರೂ ಇತ್ತ ರೈತರ ಬಜೆಟ್ ಎಂಬ ಬುನರ್ಾಸು ಬಜೆಟ್ ಮಂಡಿಸಿ ರೈತರ ಮೂಗಿಗೆ ತುಪ್ಪ ಸವರಿದರು. ಕನರ್ಾಟಕವು ಹಿಂದೆಂದೂ ಇಂತಹ ಭ್ರಷ್ಟ ಮಂತ್ರಿಯನ್ನು ಕಂಡಿರಲಿಲ್ಲ.

ಕೆಲವು ವರ್ಷಗಳ ಹಿಂದೆ ಬಿಹಾರವು ಲಾಲೂ ಪ್ರಸಾದ್ ಮತ್ತು ರಾಬ್ಡಿದೇವಿ ಕೈಲಿ ಸಿಕ್ಕಿ ಬಕರ್ಾತ್ತಾಗಿತ್ತು. ಅತ್ಯಂತ ಭ್ರಷ್ಟ ರಾಜ್ಯ ಎಂದು ಹಣೆಪಟ್ಟಿ ಕಟ್ಟಿಕೊಂಡಿತ್ತು. ಆದರೆ ಅದನ್ನು ಮೂರೇ ವರ್ಷದಲ್ಲಿ ನಿವಾಳಿಸಿದ ನಮ್ಮ ಯಡ್ಡಿ ಕನರ್ಾಟಕವನ್ನು ನಂ 1 ಭ್ರಷ್ಟ ರಾಜ್ಯ ಎಂಬ ಕೀತರ್ಿಗೆ ಪಾತ್ರವಾಗುವಂತೆ ಮಾಡಿದರು. ಎಂಥಹ ಸಾಧನೆ ಅಲ್ವಾ ? ಇಂದು ಬಿಹಾರದ ಜನ ನಿತೀಶ್ಕುಮಾರ್ ಅವರ ಆಡಳಿತದಲ್ಲಿ ನಿಟ್ಟುಸಿರು ಬಿಡುತ್ತಿದ್ದರೆ ನಾವು ಎದುಸಿರು ಬಿಡುವಂತಾಗಿದೆ. ಇದು ಬಿಜೆಪಿ ಸಾಧನೆ.

ಜಾತಿ ರಾಜಕಾರಣ

ಅಭಿವೃದ್ದಿ ಹೆಸರಲ್ಲಿ ಜನರಿಗೆ ಮರಾ ಮೊಸವನ್ನೇ ಇವರು ಮಾಡಿದರು. ಯಡಿಯೂರಪ್ಪನಂತೂ ತನ್ನ ಜಾತಿಯ ಅಸ್ತ್ರವನ್ನೇ ಬಳಸಿ ಬಿಜೆಪಿ ವರಿಷ್ಠರನ್ನೇ ಮೂಲೆಗೆಸೆವಂತ ಕೀಳು ರಾಜಕಾರಣಕ್ಕಿಳಿದರು. ಜೊತೆಗೆ ಆರ್.ಎಸ್.ಎಸ್.ನ ನಾಯಕರೂ ತುಟಿ ಪಿಟಕ್ ಅನ್ನುವಂತಿಲ್ಲದಂತೆ ಮಾಡಿದರು. ಇದಕ್ಕೆಲ್ಲಾ ಕಾರಣ ಜಾತಿ. ತಮ್ಮದು ಹೆಚ್ಚು ಜನಸಂಖ್ಯೆ ಇರುವ ಜತಿ ಎಂಬ ಒಂದೇ ಕಾರಣಕ್ಕೆ ಈ ರೀತಿ ಅನಿಷ್ಠ ಕಾರ್ಯಗಳಿಗೆಲ್ಲಾ ಜಾತಿಯನ್ನು ಬಳಸಿಕೊಂಡ ಈ ವ್ಯಕ್ತಿಯಿಂದ ಆದ ಅವಘಡಗಳು ಒಂದೆರಡಲ್ಲ. ಯಡ್ಡಿ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಹಗರಣಗಳೂ ಒಂದೆರಡಲ್ಲ. ಯಡ್ಡಿ ಮತ್ತು ರೆಡ್ಡಿ ಬಳಗ ಸೇರಿ ಸ್ಥಾಪಿಸಿದ ಈ ರಾಜ್ಯ ಸರ್ಕರ ರಾಜ್ಯವನ್ನು ದೋಚಲಿಕ್ಕೇ ಹಾಕಿದ ಮಹಾ ಸಂಚಿನಂತೆ ತೋರುತ್ತದೆ. ಅತ್ತ ರೆಡ್ಡಿಗಳು ಅತತ್ ಬಳ್ಳಾರಿ ಗುಡ್ಡಗಳನ್ನೇ ನುಂಗುತ್ತಾ ಹೋದಂತೆ ಇತ್ತ ಯಡ್ಡಿ ಬಳಗೆ ಬೆಂಗಳೂರು ಶಿವಮೊಗ್ಗಗಳಲ್ಲಿ ಭೂಮಾಫಿಯಾ ನಡೆಸುತ್ತಾ ಸಾಗಿತು. ಶಿವಮೊಗ್ಗದಲ್ಲಿ ಯಡ್ಡಿ ಮತ್ತು ಈಶ್ವರಪ್ಪ ಕಂಡ ಕಂಡ ಜಮೀನನ್ನು ನುಂಗಿ ನೀರು ಕುಡಿದ ಪರಿಣಾಮ ಇಂದು ಅಲಲಿ ಭೂಮಿಯ ಬೆಲೆ ತಾರಕಕ್ಕೇರಿ ನಿಂತಿದೆ. ಕೊಂಡರೆ ಇವರಂತಹ ದುಡ್ಡಿನ ಕುಳಗಳು ಮಾತ್ರವೇ ಕೊಳ್ಳಬೇಕು. ಸಾಧಾರಣ ಮಧ್ಯಮ ವರ್ಗದ ಜನ ಸಹೊಂದು ಸೈಟು ಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿಮರ್ಾಣವಾಗಿ ಹೋಗಿದೆ.

ಆಡೋದು ಸುಳ್ಳು, ಮಾಡೋದು ಆಣೆ

ಆತುರಗೆಟ್ಟವನಿಗೆ ಬುದ್ದಿ ಕಮ್ಮಿ ಅನ್ನುವ ಗಾದೆ ಯಡಿಯೂರಪ್ಪನವರನ್ನು ನೋಡಿಯೇ ಹುಟ್ಟಿರಬೇಕು. ಅವರಾಡುವ ಮಾತಿಗೆ, ಕೃತಿಗೆ ಅರ್ಥವೇ ಇರುವುದಿಲ್ಲ. ಒಂದಕ್ಕೊಂದು ಸಂಬಂಧವಿರುವುದಿಲ್ಲ. ಮೊದಲಿಗೆ ಪುತ್ರ ರಾಘವೇಂದ್ರನಿಗೆ ಶಿವಮೊಗ್ಗದಲ್ಲಿ ಸ್ಫಧರ್ಿಸಲು ಅವಕಾಶ ನೀಡುವುದಿಲ್ಲ ಎಂದು ಬೊಗಳಿದ ಇವರು ನಂತರ ಸದ್ದಿಲ್ಲದೇ ಬಿಜೆಪಿಯವರನ್ನು ಹೆದರಿಸಿ ಸೀಟು ಕೊಡಿಸಿ, ಹಣ ಸುರಿದು ಮಗನನ್ನು ಸಂಸದರನ್ನಾಗಿಸಿದರು.

ಇದಾದ ನಂತರ ಅಪ್ಪ ಮಕ್ಕಳ ರಾಜ್ಯಭರ ಶುರುವಾಗಿ ಹೋಯ್ತು. ಯಡ್ಡಿಯ ಡೀಲುಗಳನ್ನೆಲ್ಲಾ ರಾಘವೇಂದ್ರನೇ ನೋಡಿಕೊಳ್ಳತೊಡಗಿದರು. ಬಳ್ಳಾರಿ ಗಣಿಗಳಿಂದ ಅಕ್ರಮ ಹಣ ಮಕ್ಕಳ ಖಾತೆಗೆ ಬಂದು ಬೀಳ ತೊಡಗಿತು. ಹೀಗೆ ಸಾಗಿದ ಅಕ್ರಮಗಳು ಒಂದೊಂದಾಗಿ ಹರಡಿಕೊಳ್ಳ ತೊಡಗಿದೆ. ಕುಮಾರಸ್ವಾಮಿಯವರು ಇವರ ಹಗರಣಗಳನ್ನು ಒಂದೊಂಧಗಿ ದಾಖಲೆ ಸಮೇತ ಬಿಡುಗಡೆ ಮಾಡುತ್ತಿದ್ದರೆ ಅವರೊಂದಿಗೆ ಸಂಧಾನ ನಡೆಸಲು ಲೇಹರ್ಸಿಂಗ್ ರನ್ನು ಕಳಿಸಿದರು. ಅದನ್ನು ಕುಮಾರಸ್ವಾಮಿ ಬಹಿರಂಗ ಪಡಿಸಿದಾಗ ಇಲ್ಲ, ಅದೆಲ್ಲಾ ಸುಳ್ಳು. ಬೇಕಾದರೆ ಧರ್ಮಸ್ಥಳ ಬಂದು ಪ್ರಮಾಣ ಮಾಡಿ. ಎಂದು ಸವಾಲು ಹಾಕಿದರು ಯಡಿಯೂರಪ್ಪ. ಅದು ಸಕರ್ಾರಿ ಹಣವನ್ನು ಚೆಲ್ಲಿ ಸಕರ್ಾರಿ ಜಾಹೀರಾತಿನ ಮುಖಾಂತರ!

ಆದರೆ ಅದಕ್ಕೆ ಕುಮಾರಸ್ವಾಮಿಯೂ ತಯಾರಾಗಿ ನೋಡೇ ಬಿಡುವ ಒಂದು ಕೈ, ಆಣೆಗೆ ನಾನೂ ಜೈ ಅಂತ ಯಾವಾಗ ಅಂದರೋ ಯಡ್ಡಿಗೆ ಒಳಗೊಳಗೇ ನಡುಕ ಸುರುವಾಗಿ ಹೋಯ್ತು. ಕೂಡಲೇ ಅವರಿವರು ಸ್ವಾಮೀಜಿಗಳ ಕಾಲನ್ನು ಕೇರಳದಿಂದಲೇ ಒತ್ತಿ ಹಿಡಿದು ಹೇಗಾದರೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯಿಂದ ಮತ್ತು ಈ ರಾಮನಗರದ ಕುಮಾರಸ್ವಾಮಿಯಿಂದ ಕಾಪಾಡಿ ಎಮದು ಗೋಗರೆದರು. ಅದಕ್ಕೆ ತಥಾಸ್ತು ಎಂದ ಪೇಜಾವರರು ಇಬ್ಬರಿಗೂ ಬುದ್ದಿಮಾತು ಹೇಳುವ ನೆಪದಲ್ಲಿ ಯಡ್ಡಿಯನ್ನು ಬಚಾವು ಮಾಡಿದರು. ದೇವರಿಂದ ಆಗ ಬಚಾವಾದರೂ ಈಗ ಗಣಿ ಹಗರಣದ ರೂಪದಲ್ಲಿ ಪಾಪ ಸುತ್ತಿಕೊಂಡಿರುವುದಂತೂ ನಿಜ.

ಕೇಂದ್ರಕ್ಕೂ ರಾಜ್ಯಕ್ಕೂ ಶ್ಯಾನೆ ಪೈಪೋಟಿ

ಪೈಪೋಟಿ ಬಿದ್ದಿರುವುದು ಅಭಿವೃದ್ದಿಗಲ್ಲ, ಜನರ ಮನಸ್ಸನ್ನು ಗೆಲ್ಲಲು ಅಲ್ಲವೇ ಅಲ್ಲ. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಪೈಪೋಟಿಗಿಳಿದಿರುವುದು ಲೂಟಿ ಮಾಡಲು. ತಮ್ಮ ತಿಜೋರಿ ತುಂಬಿಸಿಕೊಳ್ಳಲು. ಹೀಗಾಗಿ ಎರಡೂ ಕಡೆಯಿಂದ ಒಂದಾದ ನಂತರ ಒಂದರಂತೆ ಹಗರಣಗಳು ಮೇಲೆರಗುತ್ತಲೇ ಇವೆ. ಕನರ್ಾಟಕವು ಗಣಿ ಹಗರಣವನ್ನು ಜೀಣರ್ಿಸಿಕೊಳ್ಳಲಿಕ್ಕೇ ಇನ್ನು ಎಷ್ಟು ವರ್ಷಗಳು ಬೇಕೋ ಗೊತ್ತಿಲ್ಲ.

ಮತದಾರನ ಬುದ್ದಿ, ಆನೆಯ ಲದ್ದಿ

ಜನ ಮರುಳೋ, ಜಾತ್ರೆ ಮರುಳೋ ಅಂತಾರಲ್ಲ ಹಾಗಾಗಿದೆ ಭಾರತದ ಪರಿಸ್ಥಿತಿ. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ಈಗ ಅದು ಪ್ರಜಾ ಮತ್ತು ಪ್ರಭುತ್ವ ಎಂಬ ಎರಡು ಭಾಗ ಆಗಿ ಹೋಗಿದೆ. ಅಮದರೆ ಪ್ರಜೆಗಳೇ ಬೇರೆ, ಪ್ರಜೆಗಳನ್ನು ಆಳುವ ಪ್ರಭುಗಳೇ ಬೇರೆ. ಆ ಪ್ರಭುಗಳನ್ನ ಮತದಾನ ಮಾಡಿ ಗೆಲ್ಲಿಸುವವರು ಪ್ರಜೆಗಳೇ. ಗೆದ್ದ ನಂತರ ಅವರು ಪ್ರಭುಗಳಾಗಿ ಹೋಗುತ್ತಾರೆ. ಈ ಗೆಲ್ಲಿಸುವಲ್ಲಿ ಪ್ರಜೆಗಳು ಕಾಲದಿಂದ ಕಾಲಕ್ಕೆ ಹೆಚ್ಚೆಚ್ಚು ಎಡವುತ್ತಾ ಬಂದಿದ್ದಾರೆ. ಕಳ್ಳ ಕಾಕರನ್ನು, ರೌಡಿಗಳನ್ನು, ಅಡ್ಡಕಸಬಿಗಳನ್ನು, ಕಂಬಿ ಎಣಿಸಿದವರನ್ನು ಕೊನೆಗೆ ತಲೆ ಹಿಡುಕರನ್ನೂ ನೋಡದೇ ಗೆಲ್ಲಿಸಿ ಕಳಿಸಿರುವುದು ನಾವೇ. ಗೆಲ್ಲಿಸುವಾಗ ಆತನ ಪೂವರ್ಾಪರಗಳನ್ನು ಯಾರೂ ಒರೆಗೆ ಹಚ್ಚಿ ನೋಡುವುದಿಲ್ಲ. ನೋಡುವುದು ಮೂರೇ ವಿಷಯ. 1. ಪಕ್ಷ, 2. ಜಾತಿ, 3. ಹಣ. ಈ ಮೂರರಲ್ಲೂ ಪಾಸಾದವ ಚುನಾವಣೆಯಲ್ಲಿ ಗೆದ್ದಂತೆಯೇ. ಶೇ. 90% ಜನ ಅಭ್ಯಥರ್ಿಗಳು ಈ ಮೂರು ಅರ್ಹತೆಗಳಿಂದಲೇ ಗೆಲ್ಲುತ್ತಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಂತಾ ಪಕ್ಷಗಳಲ್ಲಿ ಯಥೇಚ್ಚವಾಗಿ ರೌಡಿಗಳಿದ್ದಾರೆ. ಅವರನ್ನೆಲ್ಲಾ ಗೆಲ್ಲಿಸಿದ್ದು ಮಾನ್ಯ ಮತದಾರರೇ. ಬಳ್ಳಾರಿಯಲ್ಲಿ ರೆಡ್ಡಿಗಳನ್ನು ಗೆಲ್ಲಿಸದೇ ಹೋಗಿದ್ದರೆ ನಮ್ಮ ಗಣಿ ಸಂಪತ್ತು ಇಷ್ಟೊಂದು ಲೂಟಿ ಆಗುತ್ತಿರಲಿಲ್ಲ. ಯಡಿಯೂರಪ್ಪನಂತೋರು ನಂಬಿಸಿ ಹೇಗೋ ಗೆದ್ದರು ಅಂದುಕೊಳ್ಳೋಣ. ಆದರೆ ಎಷ್ಟೊಂದು ಜನರ ಕೆಟ್ಟ ಇತಿಹಾಸ ತಿಳಿದಿದ್ದೂ ನಾವು ಅವರಿಗೆ ಮತ ಹಾಕಿ ಗೆಲ್ಲಿಸಿ ಕಳಿಸಿಲ್ಲ ಹೇಳಿ. ಇದು ಯಾರ ತಪ್ಪು? ನಮ್ಮದೇ. ಒಮ್ಮೆ ಗೆದ್ದು ಹೋದವನನ್ನು ಮತ್ತೆ ವಾಪಸ್ಸು ಕರೆಸಿಕೊಳ್ಳುವ ಅವನ ಶಾಸಕ, ಸಂಸದ ಸ್ಥಾನವನ್ನು ಹಿಂಪಡೆಯುವ ವ್ಯವಸ್ಥೆ ನಮ್ಮ ಪ್ರಜಾಪ್ರಭುತ್ವದಲ್ಲಿ ಇಲ್ಲ. ಅದು ದೊರೆಯುವವರೆಗೂ ಈ ಅನಾಚಾರ ಮುಂದುವರಿದಿದ್ದೇ.

ಒಬ್ಬ ಕಳ್ಳ ಒಮ್ಮೆ ಗೆದ್ದು ಹೋದನೆಂದರೆ ಮುಗಿಯಿತು. ಐದು ವರ್ಷ ಅನಾಯಾಸವಾಗಿ ಹೇಗೆ ಬೇಕೋ ಹಾಗೆ ದೋಚುತ್ತಾ ಕೂರಬಹುದು. ಅವನನ್ನು ಕೇಳುವವರೇ ಇಲ್ಲ. ತನ್ನ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳ ಕಮಿಷನ್ ಹೊಡೆದುಕೊಂಡರೂ ಸಾಕು. ಐದು ವರ್ಷದಲ್ಲಿ ಹತ್ತು ಬಾರಿ ರಸ್ತೆಗೆ ಡಾಂಬರು ಹಾಕುವ ನಮ್ಮ ರಾಜ್ಯದಲ್ಲಿ ಕಮಿಷನ್ ಮೊತ್ತವೇ ಕೋಟ್ಯಾಂತರ ರೂ. ದಾಟುತ್ತದೆ. ಆದರೂ ಕಳ್ಳ ರಾಜಕಾರಣಿಗಳಿಗೆ ದುರಾಸೆ. ಕಳ್ಳತನ ಮಾಡಲು ಅವರಿಗೆ ಮನಸ್ಸೇ ಬರಲ್ಲ... ಅದಕ್ಕಾಗಿಯೇ ಏಕಾಏಕೀ ದರೋಡೆಗಿಳಿದು ಬಿಡುತ್ತಾರೆ. ಇವರಿಂದ ಮುಕ್ತಿ ಎಂದು ?

ಹಿಂದೆ ವಾಜಪೇಯಿ ಕೇಂದ್ರದಲ್ಲಿ ಮತ್ತು ಎಸ್.ಎಂ. ಕೃಷ್ಣ ರಾಜ್ಯದಲ್ಲಿ ಉತ್ತಮ ಆಡಳಿತವನ್ನೇ ಕೊಟ್ಟರು. ಆದರೆ ಮತದಾರರು ಮಾಡಿದ್ದೇನು ? ವಾಜಪೇಯಿ ಇನ್ನೊಂದು ಅವಧಿಗೆ ಪ್ರಧಾನಿಯೇನಾದರೂ ಆಗಿದ್ದರೆ ನಮ್ಮ ದೇಶ ಇನ್ನೂ ಹತ್ತು ವರ್ಷಗಳಷ್ಟು ಮುಂದಿರುತ್ತಿತ್ತು. ಆದರೆ ನಮಗದು ಬೇಕಾಗಿರಲಿಲ್ಲ. ಮತದಾರನಿಗೆ ಅದೇನು ಕಾಣಿಸಿತೋ ಅವರ ಆಡಳಿತದಲ್ಲಿ ಲೋಪ? ಗುಜರಾಥಿಗಳಿಗಿರುವ, ಕೊನೇ ಪಕ್ಷ ಬಿಹಾರಿಗಳಿಗಿರುವ ಬುದ್ದಿಯೂ ನಮಗಿಲ್ಲವೇ ? ಅವರು ಮೋದಿಯನ್ನು ಸತತ ಹತ್ತು ವರ್ಷ ಅಧಿಕಾರದಲ್ಲಿಟ್ಟಿದ್ದಾರೆ. ಆದರೆ ನಾವು ಒಬ್ಬ ಯಡ್ಡಿಯ ವಿರುದ್ಧ ಏನೂ ಮಾಡಲಾಗದೇ ಕೈ ಕಟ್ಟಿ ಕುಳಿತಿದ್ದೇವೆ. ಜನರಲ್ಲಿ ಪ್ರತಿಭಟನೆಯ ಉತ್ಸಾಹ ಹಾಗಿರಲಿ, ಯೋಚನೆಯೇ ಹೊರಟು ಹೋಗಿದೆ. ದೋಚೋನು ದೋಚಿಕೊಳ್ಳಲಿ, ಮುಂದಿನ ಚುನಾವಣೆಯಲ್ಲಿ ಹೆಚ್ಚು ಕೊಡುತ್ತಾನೆ ಅನ್ನುವುದು ಕೆಲವರ ನಂಬಿಕೆ. ದೇಶ ಉದ್ದಾರ ಆಗುವುದಾದರೂ ಹೇಗೆ ?

ಲೋಕಾಯುಕ್ತಕ್ಕೂ ವಕ್ಕರಿಸಿದ ಜಾತಿ !

ಯಡ್ಡಿಯ ಘನಂದಾರಿ ಕೆಲಸಗಳಲ್ಲಿ ಜಾತಿ ರಾಜಕೀಯವನ್ನು ವ್ಯವಸ್ಥಿತವಾಗಿ ಮಾಡಿರುವುದೂ ಒಂದು. ತನ್ನ ಕುರ್ಚಿ
ಉಳಿಸಿಕೊಳ್ಳಲು ಜತಿಯನ್ನು ಉಪಯೋಗಿಸಿಕೊಂಡ ಮೊದಲ ಮುಖ್ಯಮಂತ್ರಿ ಇವರೇ. ಅಲ್ಲದೇ ಈಗ ಉತ್ತಮ ಹೆಸರು ಪಡೆದಿದ್ದ ಲೋಕಾಯುಕ್ತ ಸಂಸ್ಥೆಯನ್ನೂ ಜಾತಿ ರಾಜಕೀಯದಲ್ಲಿ ಹೊಲಸು ಮಾಡಲು ಹೊರಟಿದ್ದಾನೆ.

ಯೆಡ್ಡಿಗೆ ಮಗ್ಗುಲ ಮುಳ್ಳಾಗಿದ್ದ ಲೋಕಾಯುಕ್ತ ಸಂತೋಷ್ ಹೆಗಡೆ ಈ ತಿಂಗಳು ನಿವೃತ್ತಿ ತೆಗೆದುಕೊಳ್ಳುತ್ತಿದ್ದಾರೆ. ಅವರ ಜಾಗಕ್ಕೆ ಲಿಂಗಾಯತ ಲೋಕಾಯುಕ್ತರನ್ನೇ ಹುಡುಕಿ ಇಟ್ಟಿದ್ದಾರೆ ಯಡ್ಡಿ. ಇದೆಂತಾ ಹೊಲಸು ರಾಕೀಯ ನೋಡಿ. ಲೋಕಾಯುಕ್ತ ಸಂಸ್ಥೆಯಾದರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅದನ್ನೂ ಈ ರೀತಿ ಕುಲಗೆಡಿಸಬೇಕಿತ್ತಾ ? ತಮ್ಮದೇ ಜಾತಿಯ ಲೋಕಾಯುಕ್ತರನ್ನು ನೇಮಿಸಿಕೊಂಡರೆ ಅವರೇನಾದರೂ ತನಗೆ ಸಹಕರಿಸಲಿಲ್ಲವೆಂದರೆ ತಾನೇ ದುಡ್ಡು ಕೊಟ್ಟು ಸಾಕಿಕೊಂಡಿರುವ ಯಾವುದಾದರೂ ಸ್ವಾಮೀಜಿ ಕಡೆಯಿಂದ ಒತ್ತಡ ತಂದು ತನ್ನ ಕೆಲಸ ಸಲೀಸು ಮಡಿಕೊಳ್ಳಬಹುದು ಎನ್ನುವುದು ಯಡ್ಡಿ ಯೋಚನೆ ಆಗಿತ್ತು. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದೆ ಅನ್ನಬಹುದು. ಇಂಥಹ ಮುಖ್ಯಮಂತ್ರಿಯನ್ನು ಆರಿಸಿ ಕಳಿಸಿದ ನಾವೇ ಪುಣ್ಯಾತ್ಮರಲ್ಲವೇ ?

ಕಾಮೆಂಟ್‌ಗಳು

ajay ಹೇಳಿದ್ದಾರೆ…
i agree with above all facts :D nice post but one thing i dont agree is
ಲೋಕಾಯುಕ್ತಕ್ಕೂ ವಕ್ಕರಿಸಿದ ಜಾತಿ !

see ಲೋಕಾಯುಕ್ತಕ್ಕೂ is not selected by yeddi only what they can do is just recmond a person thats all..the main power lies on rajyapal in this case he is from opposite party if u think yeddi planned on this there 99% chances are there that rajyapal can reject so in this matter u r wrong sir

secondly lokayukta is not someone who is just local they served in court as judge for few years and have no cases on them so u cant just complain on a person whom u dont know

thirdly when lokayukta venkatachal retired people thought that there will be no more person like him and people dont liked santhosh hegde but as u all see people now there fans i hope this will continue in future also :P ..nice post though
ಪಿಸುಮಾತು ಹೇಳಿದ್ದಾರೆ…
@ ajay

- ಸಂತೋಷ್ ಹೆಗಡೆ ನಿರ್ಗಮಿಸುವ ಮುನ್ನವೇ ಹೊಸ ಲೋಕಾಯುಕ್ತರನ್ನ ಆಯ್ಕೆ ಮಾಡುವ ಅಗತ್ಯ ಇರಲಿಲ್ಲ. ಅಷ್ಟು ಅವಸರಕ್ಕೆ ಕಾರಣ ’ತಾನು ಕುರ್ಚಿಯಿಂದ ಇಳಿವ ಸೂಚನೆ ಇರುವುದರಿಂದ, ತನ್ನ ಜಾತಿಯವರನ್ನು ನೇಮಿಸಿಕೊಂಡು ಬಿಡೋಣ’ ಅನ್ನುವ ಯೆಡ್ಡಿಯ ಯೋಚನೆ. ಇದು ಪಕ್ಕಾ ಜಾತಿ ಲೆಕ್ಕಾಚಾರ. ಅಂದರೆ ತನ್ನ ಜಾತಿ ಬಾಂಧವರನ್ನು ಇನ್ನಷ್ಟು ತೃಪ್ತಿ ಪಡಿಸುವ ಕೆಲಸ. ಹಿಂದಿನ ಉಪ ಲೋಕಾಯುಕ್ತರನ್ನೂ ತಮ್ಮ ಜಾತಿಯವರನ್ನೇ ಆರಿಸಿದ್ದಾರೆ.
ಶಿವರಾಜ್ ಪಾಟೀಲ್ ಸಹ ಯೋಗ್ಯ ವ್ಯಕ್ತಿಯೇ. ಆದುದರಿಂದ ರಾಜ್ಯಪಾಲರು / ವಿರೋಧ ಪಕ್ಷಗಳು ತಗಾದೆ ತೆಗೆಯುವ ಪ್ರಶ್ನೆಯೇ ಇಲ್ಲ. ಆದರೆ ಆಯ್ಕೆ ಮಾಡುವಾಗ ತನ್ನವರನ್ನೇ ಆಯ್ಕೆ ಮಾಡಿದ್ದು ಅನುಮಾನಾಸ್ಪದ. ಅದು ನಿಜ ಕೂಡಾ. ತಾನು ಲಿಂಗಾಯಿತ ಸಮುದಾಯದ ಏಕೈಕ ನಾಯಕ ಅನ್ನುವುದನ್ನು ಭದ್ರಪಡಿಸಿಕೊಳ್ಳುವ ದುರಾಲೋಚನೆಗಳೇ ಇವೆಲ್ಲ. [ ಈಗ ಬೇರೆ ಲಿಂಗಾಯಿತ ನಾಯಕರು ಯಾರೂ ಮೂಖ್ಯಮಂತ್ರಿ ಆಗಬಾರದು ಅನ್ನುತ್ತಿರುವುದೂ ಇದೇ ಕಾರಣಕ್ಕೆ ]

ಶಿವರಾಜ್‌ ಪಾಟೀಲರನ್ನ ನಾನು ಇಷ್ಟ ಪಡುತ್ತಿಲ್ಲ ಅಂತಲ್ಲ. ಅವರು ಸಂತೋಷ್ ಹೆಗಡೆ ಅವರಿಗಿಂತಲೂ ಹೆಚ್ಚು ಕೆಲಸ ಮಾಡಲಿ, ಭ್ರಷ್ಟರಿಗೆ ಸಿಂಹಸ್ವಪ್ನವಾಗಲಿ. [ ನನ್ನ ಲೇಖನದ ಉದ್ದೇಶ ಯೆಡ್ಡಿಯ ಕೃತ್ರಿಮತೆ ಬಗ್ಗೆ ಮಾತ್ರ ]

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…