ವಿಷಯಕ್ಕೆ ಹೋಗಿ

ಮತ್ತೆ ಮತ್ತೆ ಮರಳುವ ಪ್ರೇಮ


ಪ್ರೀತಿಸೋದು ಕುಡಾ ಒಂದು ಲೆಕ್ಕಾಚಾರ. ಅದಕ್ಕೂ ಒಂದು ರೀತಿ ನೀತಿಯಿದೆ. ಕಂಡ ಕಂಡವರನ್ನೆಲ್ಲಾ ಪ್ರೀತಿಸಲು-ಪ್ರೇಮಿಸಲು ಸಾಧ್ಯವಿಲ್ಲ. ಪ್ರೇಮ ಹೇಳದೇ ಸಂಭವಿಸಿಬಿಡಹುದು. ಕೇಳದೇ ಬರಬಹುದು ಕೆಲವರು ಬೆನ್ನು ಬಿದ್ದು ಹೋಗಿ ಪ್ರೀತಿಸಬಹುದು. ಕೆಲವರ ಬೆನ್ನು ಬಿದ್ದು ಪ್ರೀತಿಯೇ ಬರಬಹುದು. ಆದರಿಂದ ಪ್ರೀತಿಸುವವರಿಗಾಗಿ ಈ ಲೇಖನ.

ಹರೆಯದಲ್ಲಿ ಹಂದಿಯೂ ಚೆಂದ !

ಒಮ್ಮೆ ಹಂದಿ ಫಾರಂಗೆ ಹೋಗಿ ನೋಡಿ. ಅಲ್ಲಿ ಮರಿ ಹಂದಿಗಳಿರುತ್ತವೆ. ಮುದಿ ಹಂದಿಗಳೂ ಇರುತ್ತವೆ. ಜೊತೆಗೆ ಇಲ್ಲಿ ಹರೆಯದ ಹಂದಿಗಳೂ ಇರುತ್ತವೆ. ನಿಮ್ಮ ಗಮನವನ್ನು ಸೆಳೆಯುವವೇ ಅವಲ್ಲವೇ? ಆಹಾ! ಎಷ್ಟು ಸೊಕ್ಕಿವೆ ಅನ್ನಿಸದಿರದು. ಹರೆಯ ಹಂದಿಗೇ ಅಂತಹ ಸೊಗಸನ್ನು ಕೊಡುತ್ತವೆಂದರೆ ಹುಡುಗರ, ಹುಡುಗಿಯರ ಪಾಡೇನು?

ಆದ್ದರಿಂದ ಪ್ರೀತಿ-ಪ್ರೇಮ ಸೊಕ್ಕು, ಸೌಂದರ್ಯ ಮನುಷ್ಯ ಮಾತ್ರನಿಗೇ ಇರುವುದು ಎಂಬ ಜಂಬ ಬೇಡ. ಹಂದಿ, ಕಾಗೆಗಳೂ ಪ್ರೀತಿಸುತ್ತವೆಂಬುದು ನೆನಪಿರಲಿ. ಪ್ರೀತಿಸುವವರು ತಾವೇ ಗಂಧರ್ವರೆಂದೋ, ದೇವತೆಗಳೆಂದೋ ಅಂದುಕೊಳ್ಳುವುದು ಮಾಮೂಲು. ಇದೊಂದು ಸಹಜ ಗುಣ.  ಎಲ್ಲಾ ಜೀವರಾಶಿಯೂ ಪ್ರೀತಿಸುತ್ತವೆ ಹಾಗೂ ಪ್ರೀತಿಸಲ್ಪಡುತ್ತವೆ. ಇದೊಂದು ಪ್ರಕೃತಿ ನಿಯಮ ಎಂಬ ವಿಷಯ ನೆನಪಿನಲ್ಲಿಸಿಕೊಂಡು ಪ್ರೀತಿಸುವ ಗೋಜಿಗೆ ಹೋಗಬಹುದು.

ದೇಹವೇ ಕಾರಣ

ಪ್ರೀತಿಗೆ ಮನಸ್ಸು ಒಂದು ಕಾರಣ. ಹಾಗೆಯೇ ದೇಹವೂ ಮತ್ತೊಂದು ಕಾರಣ. ಪ್ರೀತಿಯಲ್ಲಿ ಮನಸ್ಸು ಭಾಗವಹಿಸುತ್ತದೆ. ಪ್ರೇಮದಲ್ಲಿ ಮನಸ್ಸಿನ ಜೊತೆಗೆ ದೇಹ. ಆ ಬೆಟ್ಟ - ಈ ನದಿ ಎಂದೆಲ್ಲಾ ಕವಿಗಳು ಅದೇನೇ ಹಾಡಿದರೂ ಪ್ರೀತಿ ಹುಟ್ಟಲು ಮೂಲ ಕಾರಣ ದೇಹವೇ. ದೇಹದ ಬೆಳವಣಿಗಯಿಂದ ಹರೆಯದಲ್ಲಿ ಸ್ರವಿಸಲ್ಪಡುವ ಕೆಲವು ಹಾರ್ಮೋನುಗಳಿಂದಲೇ ವಾಂಛೆ, ಆ ಮೂಲಕ ಪ್ರೀತಿ-ಪ್ರೇಮಗಳೆಲ್ಲವೂ ಜನ್ಮ ತೆಳೆಯುತ್ತವೆ. ಒಟ್ಟಿನಲ್ಲಿ ದೇಹದ ಬೆಳವಣಿಗೆಯಿಂದಲೇ ಪ್ರೀತಿಯ ಬೆಳವಣಿಗೆ ಸಾಧ್ಯ. ಇಲ್ಲವೆಂದರೆ ಆರು ವರ್ಷದ ಹುಡುಗ ಹದಿನಾರು ವರ್ಷದ ಕುವರಿಯನ್ನು ಪ್ರೀತಿಸಿ ಓಡಿ ಹೋಗುವ  ಅಪಾಯವಿತ್ತು! ಹೀಗೆ ದೇಹ ಮಾಡುವ ಕಾರ್ಯವನ್ನು ಕಾಣದ ಭಾವನೆ ಹೃದಯ ಎಂದೆಲ್ಲಾ ಹಾಡಿ ಹೊಗಳುತ್ತೇವೆ !

ಅಯೋಮೆಯ ಪ್ರೇಮ

ನಾಲ್ಕು ಜನ ಕುರುಡರಿಗೆ ಆನೆಯನ್ನು ತೋರಿಸಿ ಅದರ ಆಕಾರವನ್ನು ತಿಳಿಸಲು ಹೇಳಿದರೆ ಅವರು ಒಂದೊಂದು ಭಾಗವನ್ನು ಮುಟ್ಟಿ ನೋಡಿ, ಆನೆಯೆಂದರೆ ಹೀಗಿರುತ್ತದೆ ಹಾಗಿರುತ್ತದೆ ಎಂದು ಬೇರೆ ಬೇರೆ ರೀತಿಯಿರುತ್ತದೆಂದು ಹೇಳಿದ ಕತೆ ನಿಮಗೆಲ್ಲಾ ಗೊತ್ತು. ಹಾಗೆಯೇ ಪ್ರೀತಿಸಿ ಗೊತ್ತಿಲ್ಲದ ಮುಗ್ಧರು ಕಂಡದ್ದೆಲ್ಲಾ ಪ್ರೀತಿ ಅಂದುಕೊಳ್ಳುತ್ತಾರೆ. ಹುಡುಗರೂ ಅಷ್ಟೇ, ಯಾರಾದರೂ ಯುವತಿ ಯಾಕಾದರೂ ಇವನತ್ತ ನೋಡಿದರೂ ಸಾಕು. ಆಕೆ ತನ್ನನ್ನು ಪ್ರೀತಿಸುತ್ತಿರಬಹುದಾ? ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನತೊಡಗುತ್ತಾರೆ. ಏನೇನೋ ಕಲ್ಪನೆ-ಕನಸು ಕಂಡು ಕೊನೆಗೆ `ಪ್ರೇಮ ಪರೀಕ್ಷೆಯಲ್ಲಿ ಢುಮ್ಕಿ ಹೊಡೆದು ನಪಾಸಾಗುತ್ತಾರೆ ! ಆ ನಂತರ ಬಾರು, ಬೀರು ಎಂದು ಎತ್ತ ಬೇಕಾದರೂ ಅವರ ಮನಸ್ಸು ಮತ್ತು ಕಾಲುಗಳು ನಡೆಯಬಹುದು.

ಹದಿ ಹರೆಯದಲ್ಲಿ ಅದರಲ್ಲೂ ಟೀನೇಜ್ ಎಂದು ಹೇಳಲ್ಪಡುವ ವಯಸ್ಸಿನಲ್ಲಿ ಹುಡುಗ ಹುಡುಗಿಯರಿಗೆ ಇಂಥಹ ಪ್ಯಾಲೆ ಪ್ರೇಮಗಳುಂಟಾಗದೇ ಇರದು. ಅದೊಂದು ಕ್ಷಣಿಕವಾದ ನೆರೆ ಅಷ್ಟೇ. ಅದೇ ಸತ್ಯ ಅಂದುಕೊಂಡು ಈಜಾಡಲು ಹೋದರೆ ಸ್ವಲ್ಪ ಹೊತ್ತಿಗೇ ನೆರೆ ಇಳಿದು ಬರೇ ಕೆಸರಲ್ಲಿ ಒದ್ದಾಡ ಬೇಕಾಗುತ್ತದೆ. ಎಚ್ಚರಿಕೆ!

ಇವೂ ಕಾರಣಗಳೇ!

ಪ್ರೇಮಿಸಲಿಕ್ಕೆ ದೇಹದ ಬೆಳವಣಿಗೆ, ಮನಸ್ಸು, ವಯಸ್ಸುಗಳಷ್ಟೇ ಕಾರಣವಲ್ಲ. ಮನೆಯಲ್ಲಿ ಸರಿಯಾದ ಪ್ರೀತಿ ದೊರಕದವರು ಪ್ರೇಮ ಪಾಷಕ್ಕೆ ಸಿಲುಕುವುದು ಹೆಚ್ಚು. ಆತ್ಮವಿಶ್ವಾಸ ಕಡಿಮೆಯಿರುವವರೂ ಸಹ ಪ್ರೇಮಿಯ ಒಡನಾಟ ಬಯಸುತ್ತಾರೆ. ಕೆಲವರಿಗೆ ಪೋಲಿ ಮಾತನಾಡಲು, ದೇಹದ ವಾಂಛೆ ತೀರಿಸಿಕೊಳ್ಳಲು ಪ್ರೇಮಿ ಬೇಕಾಗಬಹುದು.

ಕೆಲವರು ಸುಖಸುಮ್ಮನೆ ಇದ್ದವರನ್ನು ತಮ್ಮ ಪ್ರೇಮ ಚಕ್ರದಲ್ಲಿ ಸಿಲುಕಿಸಿಕೊಂಡು ನಂತರ ಅವರನ್ನು `ಬಿಟ್ಟೇನೆಂದರೂ ಬಿಡದೀ ಮಾಯೆ' ಎಂಬಂತೆ ಕಾಡಿ, ಅವರಿಗೂ ಹಿಂಸೆ ನೀಡಿ, ತಾವೂ ಹಿಂಸೆ ಅನುಭವಿಸುತ್ತಾರೆ. ಅದು ಪ್ರೇಮ ಹೇಗಾಗುತ್ತದೋ ದೇವರೇ ಬಲ್ಲ. `ಸಿಕ್ಕಿದ್ದನ್ನು ಸಧ್ಯಕ್ಕೆ ಲವ್ ಮಾಡೋಣ, ಮುಂದಿನದ್ದು ಮುಂದೆ' ಎಂಬ ಅವಸರದ ಗಿರಾಕಿಗಳಿಗೂ ಬರಗಾಲವಿಲ್ಲ. ಅಂಥವರಿಗೆ ಅರ್ಜೆಟಿಗೊಂದು `ಲವ್ವರ್' ಬೇಕಾಗಿರುತ್ತದೆ ಅಷ್ಟೆ. ಇದರಲ್ಲಿ ಹುಡುಗಿಯರೂ ಕಮ್ಮಿ ಇಲ್ಲ.

ಭಯಂಕರವಾದಿಗಳು!

ಕೆಲವರಿರುತ್ತಾರೆ. ಇವರೊಂಧರಾ ಪ್ರೀತಿಯ ಭಯೋತ್ಪಾಧಕರು! ಸಿಕ್ಕವರನ್ನು ಅಲ್ಲೇ, ಆ ಕ್ಷಣದಲ್ಲೇ ಪ್ರೀತಿಸಿಬಿಡಬೇಕೆಂಬ ಹಂಬಲದವರು. ಯಾರನ್ನಾದರೂ ನೋಡಿದರೆ ಅವರನ್ನು ಪ್ರೀತಿಸಿಯೇ ತೀರಬೇಕು ಅಂದುಕೊಳ್ಳುತ್ತಾರಿವರು. ಸಿನೆಮಾ ನೋಡಿ ಕೆಟ್ಟು ಹೋದವರಂತೆ ವರ್ತಿಸುತ್ತಾರೆ. ಹುಡುಗರ ಕಥೆ ಹಾಗಾದರೆ ಈ ಬಗೆಯ ಹುಡುಗಿಯರು `ತನ್ನನ್ನು ಯಾರಾದರೂ ಕಂಡಲ್ಲಿ ಕಣ್ಣು ಹೊಡೆಯಲಿ, ಹಿಂಬಾಲಿಸಲಿ, ಪ್ರೀತಿಸಲಿ' ಅಂದುಕೊಳ್ಳುತ್ತಾರಂತೆ. ಅದಕ್ಕಾಗಿ ಅವರು ಪಡುವ ಪಾಡು ಅಷ್ಟಿಷ್ಟಲ್ಲ.

ಬೇಕೆಂತಲೇ ಬಳುಕುತ್ತಾರೆ. ಬಳುಕಿ ಬಳುಕಿ ಉಳುಕಿಯೇ ಹೋಗುವಂತೆ ನಡೆಯುತ್ತಾರೆ. ಅಸಹನೀಯ ಅಥವಾ ತುಸು ಹೆಚ್ಚೇ ಎನ್ನಿಸುವ ದೇಹವನ್ನು ಅನಾವರಣ ಮಾಡುವ ಉಡುಗೆ ಧರಿಸುತ್ತಾರೆ. ಮುಖಕ್ಕೆ ವಿಪರೀತ ಮೇಕಪ್ಪು. ಪ್ರೀತಿಗೆ ಕಣ್ಣಿಲ್ಲ ಅನ್ನುತ್ತಾರೆ. ಆದರಿವರು ಅದನ್ನು ತಿರಸ್ಕರಿಸಿ ಕಣ್ಣುಗಳೆಲ್ಲಾ ತಮ್ಮತ್ತಲೇ ನೋಡುವಂತೆ ಮಾಡಿಕೊಳ್ಳುತ್ತಾರೆ. ಪ್ರೀತಿಗೆ ಮನಸ್ಸು ಮುಖ್ಯ ಅನ್ನುವುದನ್ನು ಒಪ್ಪದೇ ದೇಹವೇ ಮುಖ್ಯ ಎಂದು ವಾದಿಸುವ ಪ್ರಾಕ್ಟಿಕಲ್ ಥಿಯರಿಯವರು.

ಪ್ರೇಮವೆಂಬ ಒಗಟು

ಒಂದು ವೇಳೆ ನಿಮಗೊಬ್ಬ ಪ್ರೇಮಿ ಸಿಕ್ಕಿದ್ದೇ ಹೌದಾದರೂ ಕೆಲವು ಅಂಶಗಳನ್ನು ನೆನಪಿನಲ್ಲಿಡಿ. ಆಕೆ ಅಥವಾ ಅವನು ಸಿಕ್ಕಿದ್ದಾನೆಂಬ ಸಂತೋಷದ ಹುಮ್ಮಸ್ಸಿನಲ್ಲಿ ನಿಮ್ಮ ಅಂತರಂಗದ ವಿಷಯಗಳೆನ್ನೆಲ್ಲಾ ಬಿಚ್ಚಿಡಬೇಡಿ. ನಾನು ಹಾಗೆ, ನಮ್ಮನೆ ಹೀಗೆ, ನಮ್ಮ ಜಾತಿ ಇದು, ನಾನು ಮೊದಲು ಇಂತವರನ್ನು ಪ್ರೀತಿಸಿದ್ದೆ, ನನ್ನ ಹಿಂದೆ ಇಂಥವರು ಇಷ್ಟು ದಿನ ಅಲೆದರು. ಮುಂತಾಗಿ ಯಾವ ಕಾರಣಕ್ಕೂ ಹೇಳಿಕೊಳ್ಳಲೇಬೇಡಿ. ಅದುವೇ ಮುಂದೆ ನಿಮ್ಮ ಪ್ರೇಮಕ್ಕೆ ಮುಳುವಾಗಬಹುದು.

ಅಲ್ಲದೇ ಪ್ರೇಮವೆಂಬುದೇ ಒಂದು ಒಗಟು. ಅಲ್ಲಿ ಆದಷ್ಟೂ ಮುಚ್ಚು ಮರೆ ಇದ್ದರೇನೇ ಚೆಂದ. ಎಲ್ಲವನ್ನೂ ಬಿಡಿಸಿ ಹೇಳಿದರೆ ಒಗಟಿಗೆಲ್ಲಿಯ ಸ್ವಾರಸ್ಯ? ಬೇಕಾದ್ದನ್ನು, ಬೇಕಾದಾಗ, ಬೇಕಾದಷ್ಟೇ ಹೇಳಿಕೊಳ್ಳುವುದೇ ಜಾಣತನ. ಎಲ್ಲಾ ತಿಳಿದು ಹೋದರೆ `ಇವಳು ಇಷ್ಟೇನಾ?' ಎನ್ನಿಸಿಬಿಡಬಹುದು.

ಒಮ್ಮೆ ಜರುಗುವ ವಿಷಯವಲ್ಲ

`ಬಾಡಿ ಹೋದ ಒಳ್ಳಿಯಿಂದ ಹೂವು ಅರಳ ಬಲ್ಲುದೆ?` ಎಂದು ಅಂದು ಅಣ್ಣಾವ್ರು ಹಾಡಿದ್ದರೂ ಸಹ ಮನುಷ್ಯನ ಜೀವನದಲ್ಲಿ ಪ್ರೀತಿ ಒಮ್ಮೆ ಮಾತ್ರ ಜರುಗುವ ಘಟನೆಯಲ್ಲ. ಆದರೆ ಕೆಲವರು ಪಾಪ. ಅದು ಗೊತ್ತಿಲ್ಲದೇ ಒಬ್ಬ ಪ್ರೇಮಿ ಕೈ ಕೊಟ್ಟೊಡನೆಯೇ ಜೀವನವೇ ಮುಗಿದು ಹೋದಂತೆ ಆತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ. ನಿಜ ಹೇಳಬೇಕೆಂದರೆ ಯಾರ ಜೀವನವೂ ಒಂದೇ ಪ್ರೇಮದಲ್ಲಿ ಮುಕ್ತಾಯವಾಗುವುದಿಲ್ಲ ಒಂದಿಲ್ಲೊಂದು ಕಾರಣಕ್ಕೆ, ಒಂದಿಲ್ಲಿಂದು ಸ್ಥಳದಲ್ಲಿ ಚಿಕ್ಕಪುಟ್ಟ ಪ್ರೇಮದ ಹೂಗಳು ಅರಳಿಯೇ ಅರಳಿರುತ್ತವೆ. ಆದ್ದರಿಂದ ಯಾವ ಪ್ರೇಮವೇ ಆದರೂ ಕೈ ತಪ್ಪಿ ಹೋದಾಗ ಆಕಾಶವೇ ಕಳಚಿ ಬಿದ್ದಂತೆ ವರ್ತಿಸುವುದೇನೂ ಅಗತ್ಯವಿಲ್ಲ. `ನೀ ಹೋದರೆ ಹೋಗು ನನಗೇನು?' ಅಂತ ಹಾಡು ಗುನುಗಿಕೊಂಡು ಮತ್ತೊಂದು ಸರಿಯಾದ ಪ್ರೇಮಿಗಾಗಿ ತಲಾಷ್ ಶುರುಮಾಡಿ.

ಎಂಟಕ್ಕೆ ಒಂದು !

ಸಂಶೋಧಕರು ನಡೆಸಿರುವ ಸಮೀಕ್ಷೆ ಪ್ರಕಾರ ಮನುಷ್ಯ ಹೆಣ್ಣಿರಲಿ ಗಂಡಿರಲಿ ಸರಾಸರಿ ಆರರಿಂದ ಎಂಟು ಪ್ರೇಮ ಪ್ರಕರಣಗಳು. ಆತನ ಜೀವನದಲ್ಲಿ ಘಟಿಸಿರುತ್ತವಂತೆ. ಅದರಲ್ಲಿ ಒಂದು ಮಾತ್ರ ಕೈ ಹಿಡಿದಿರುತ್ತದೆ. ಉಳಿದವ್ಯಾವೂ ಉಪದ್ರವ ಕೊಟ್ಟಿರುವುದಿಲ್ಲ ನೋಡಿ. ಅಂದರೆ ಪ್ರೇಮವೆಂದರೆ ಒಂದು ಪ್ರಶ್ನೆಗೆ ಎಂಟು ಉತ್ತರಗಳಿರುವ ಪ್ರಶ್ನೆ ಪತ್ರಿಕೆಯಂತೆ. ಒಂದೊಂದನ್ನೆ ಟಿಕ್ ಮಾಡುತ್ತಾ ಹೋದರೆ ಯಾವುದಾದರೊಂದು ಗಂಟು ಬೀಳುತ್ತದೆ. ನಿಮ್ಮ ಪ್ರೇಮ ಯಾವುದೋ ಕಾರಣಕ್ಕೆ ಖಲ್ಲಾಸ್ ಆದರೆ ಕಕ್ಕಾಬಿಕ್ಕಿಯಾಗದೇ ಮತ್ತೊಂದು ಪ್ರೇಮಕ್ಕೆ ಅವಕಾಶ ಕೊಟ್ಟವಳಿಗೆ ಕೃತಜ್ಞತೆ ಸಲ್ಲಿಸಿ. ಒಂದು ವರ್ಷ ಮುಗಿದು ಮತ್ತೊಂದು ವಸಂತ ಬಂದವರಂತೆ ಉಲ್ಲಸಿತರಾಗಿರಿ.

ಯಾವುದು ವಿಜಯ?

ನೀವೊಂದು ಪ್ರೇಮಕ್ಕಾಗಿ ಎಷ್ಟೇ ಕಷ್ಟ ಬಿದ್ದರೂ ಏನೋ ಹೋರಾಟ ನಡೆಸಿದರೂ, ಯಾರನ್ನೇ ಎದುರು ಹಾಕಿಕೊಂಡು ಗೆದ್ದರೂ ಅದು ಜನರ ಮನಸ್ಸಿನಲ್ಲಿ ನಿಲ್ಲಲಾರದು. ಎರಡು ಮಕ್ಕಳಾದ ನಂತರ ನಿಮ್ಮ ಮನಸ್ಸಿನಲ್ಲೂ ನಿಲ್ಲಲಾರದು. ಇವಳಿಗಾಗಿಯೂ ಅಷ್ಟೊಂದು ಹೋರಾಡಿದ್ದು? ಕಷ್ಟ ಬಿದ್ದುದ್ದು ಅಂತ ಅಂದುಕೊಳ್ಳಬಹುದು.

ಸತ್ಯ ಸಂಗತಿಯೆಂದರೆ ವಿಜಯವೆಂಬುದು ಪ್ರೀತಿಯಲ್ಲಾಗಲೀ ಪ್ರೇಮದಲ್ಲಾಗಲೀ ಇಲ್ಲವೇ ಇಲ್ಲ. ಮಧ್ಯ ವಯಸ್ಸು ದಾಟಿದ ನಂತರ ಇವೆಲ್ಲಾ ತಮಾಷೆಯಾಗಿ ಕಾಣುತ್ತವೆ. ಇದಕ್ಕಾಗಿಯೇ ಎಷ್ಟೋ ತಂದೆ ತಾಯಿಗಳು ತಮ್ಮಮಕ್ಕಳ ಪ್ರಿತಿಯನ್ನು ವಿರೋಧಿಸುವುದು. ಪ್ರೀತಿಯೇ ಜೀವನದ ಸಾರ್ಥಕತೆ ಏನಲ್ಲ. ನಿಮ್ಮ ಮಕ್ಕಳೂ ಆ ವಿಷಯದಲ್ಲಿ ಚಕಾರವೆತ್ತುವುದಿಲ್ಲ. ಅಷ್ಟೆಲ್ಲಾ ಹೋರಾಡಿ ನಮ್ಮ ಅಪ್ಪ ಅಮ್ಮ ನಮ್ಮನ್ನು ಹಡೆದಿದ್ದಾರೆ ಎಂದು ಅವರೇನೂ ನಿಮ್ಮನ್ನು ಅಭಿನಂದಿಸುವುದಿಲ್ಲ. ಸಂತೋಷ ಪಡುವುದೂ ಇಲ್ಲ. ಬದಲಿಗೆ ಅವರೂ ಸಹ ತಮ್ಮ ಜೋಡಿ ಹುಡುಕಿಕೊಂಡು ಹೋಗಿರುತ್ತಾರೆ.

`ವಿಜಯವೆಂಬುದು ಸಾಧನೆಯಲ್ಲಿದೆ. ಪರರ ಸೇವೆಯಲ್ಲಿದೆ. ಬೇರೆಯವರಿಗೆ ಉಪಯೋಗ ಆಗುವಂತದ್ದೇನಾದರೂ ಮಾಡಿದ್ದಲ್ಲಿ,  ಅದಕ್ಕಾಗಿ ಹೋರಾಟ ನಡೆಸಿದ್ದರೆ ಜನ ಅದನ್ನು ನೆನೆಸುತ್ತಾರೆ. ನಟ ಜಗ್ಗೇಶ್ ತಮ್ಮ ಪ್ರೇಮಿಗಾಗಿ `ಸುಪ್ರೀಂ ಕೋರ್ಟ್' ಮೆಟ್ಟಿಲೇರಿ ಮದುವೆಯಾದರೂ ಸಹ ಅವರನ್ನು ಜನ ನೆನಪಿಡುವುದು `ಉತ್ತಮ ನಟ' ಎಂಬುದಕ್ಕಾಗಿಯೇ ಹೊರತೂ ಅವರು ಪ್ರೇಮಕ್ಕಾಗಿ ಅಷ್ಟೆಲ್ಲಾ ಕಷ್ಟ ಬಿದ್ದರು ಎಂದಲ್ಲ.

ಪ್ರೀತಿ-ಪ್ರೇಮವೆಂಬುದು ಹದಿನಾರರಿಂದ ಇಪ್ಪತ್ತಾರನೇ ವಯಸ್ಸಿನೊಳಗೆ ನಡೆಯುವ ಕೆಲ ವರ್ಷಗಳ ಜಾತ್ರೆ. ಆದರೆ ಜೀವನವೆಂಬುದು ಇನ್ನೂ ತೀರಾ ದೊಡ್ಡದಾದ ದಾರಿ. ಅದರಲ್ಲಿ ಪ್ರೀತಿಯ ಪರ್ವಕಾಲ ಒಂದು ಸೇತುವೆ ಅಷ್ಟೇ. ಅದನ್ನು ದಾಟಿ ಹೋದ ನಂತರ ಅದೆಷ್ಟೋ ಸುಂದರ ಸೇತುವೆಯಾದರೂ ಅದನ್ನು ಮರೆತು ಮುಂದಿನ ದಾರಿಯೆಡೆಗೆ ಗಮನ ಹರಿಸುತ್ತೇವೆ.

ಆದ್ದರಿಂದ ಪ್ರೀತಿಯ ಬಗ್ಗೆಯೇ ಯೋಚಿಸುತ್ತ ಕಾಲ ಕಳೆಯಬೇಡಿ. ಮುಂದಿನ ಧ್ಯೇಯದೆಡೆಗೆ ಗಮನವಿರಲಿ. ನಡುವಿನಲ್ಲಿ ಪ್ರೀತಿ ಸಿಕ್ಕರೆ ಭೇಷ್ ! ಬಿಡದೇ ಕೈ ಹಿಡಿದುಕೊಳ್ಳಿ. ಸಿಗಲಿಲ್ಲವೋ? ಡೋಂಟ್ ವರಿ. ಮುಂದೆ ಮತ್ತೊಂದು ಪ್ರೀತಿಯ ನಿಲ್ದಾಣ ಸಿಕ್ಕೇ ಸಿಗುತ್ತದೆ. ಪ್ರೇಮ ಒಮ್ಮೆ ಮಾತ್ರ ಘಟಿಸುವುದಲ್ಲ.

ಕಾಮೆಂಟ್‌ಗಳು

sowmya K A ಹೇಳಿದ್ದಾರೆ…
Preethisuvavarige
preethisuvarigaagi
mattu
preetisuvavarigoskara

barediruva navirada prema katheya haagide ee lekhana... matte odabeku enisuttade.. navu heege madiddeve endu namma gathavannu nenesikollo hage maduttade.. im happy :)
Lalitha Poojary ಹೇಳಿದ್ದಾರೆ…
helodu sulbha ri adre marethu munde sagodu thumba kasta..........
shruthi1995mg ಹೇಳಿದ್ದಾರೆ…
mareyodu kashta adru nivu heliddu sari ide sir. bari priti madkondu jeevana hal madkolde life bagge yochne madbeku annodu tumba sari.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…