ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಅಕ್ಷರ ಓದುವ ತಂತ್ರಾಂಶ

ಯಾರಿಗಾದರೂ ಕನ್ನಡ ಅಕ್ಷರಗಳನ್ನು ಓದಲು ಬರುತ್ತಿಲ್ಲ ಎಂದಾದರೆ ಅವರಿಗಾಗಿ ಈ ತಂತ್ರಾಂಶ : http://espeak.sourceforge.net/test/latest.html ಇದು ಕನ್ನಡ ಯೂನೀಕೋಡ್ ಹಾಗೂ ಆಂಗ್ಲ ಅಕ್ಷರಗಳಲ್ಲಿರುವ ಕನ್ನಡ ಪದಗಳನ್ನು ಓದಿ ಹೇಳುತ್ತದೆ. ಈ ತಂತ್ರಾಂಶವನ್ನು ಪ್ರತಿಷ್ಠಾಪಿಸುವಾಗ speaking name ಎಂದು ಕೇಳುವಲ್ಲಿ kn ಎಂದು ನಮೂದಿಸಿಕೊಳ್ಳಬೇಕು.

ಹಾಸ್ಯ ವಲಯ

ಗುಂಡ : ನ್ಮಮ ಕಚೇರಿಯಲ್ಲಿ ಅವಸರದ ಕೆಲಸಗಳನ್ನೆಲ್ಲಾ ನಮ್ಮ ಬಾಸ್ ಮಾಡ್ತಾರೆ. ಗೆಳೆಯ : ಹಾಗಾದರೆ ಅವಸರವಿಲ್ಲದ ಕೆಲಸಗಳನ್ನ ಎಲ್ಲಾ ನೀನು ಮಾಡ್ತೀಯಾ ? ಗುಂಡ : ಇಲ್ಲ, ನಾನು ಅವುಗಳನ್ನು ಮಾಡದೇ ಹಾಗೇ ಬಿಡುವುದರಿಂದ ನಂತರ ಅವು ಅವಸರದ ಕೆಲಸಗಳಾಗುತ್ತವೆ. ಆಗ ಅವನ್ನೂ ನಮ್ಮ ಬಾಸ್ ಮಾಡುತ್ತಾರೆ. *** ಹೆಂಡತಿ : ರೀ, ನಿಮ್ಮ ಗೆಳೆಯ ಚೂರೂ ಚೆನ್ನಾಗಿಲ್ಲದ ಹುಡುಗಿಯನ್ನ ಮದುವೆ ಆಗ್ತಿದಾನೆ. ನೀವಾದ್ರೂ ಸ್ವಲ್ಪ ತಿಳಿ ಹೇಳೋದಲ್ವ ? ಗಂಡ : ನಾನ್ಯಾಕೇ ಹೇಳಲಿ ? ನಾನು ಮದ್ವೆ ಆಗುವಾಗ ಅವನೇನು ಹೇಳಿದ್ನಾ ? *** ಗಂಡ : ನಿನ್ನ ಹಿಂಸೆ ತಡಿಯೋಕ್ ಆಗ್ತಿಲ್ಲ. ಸ್ವಾಮೀಜ ಆಗೋಣ ಅಂತ ಇದೀನಿ. ಹೆಂಡತಿ : ಆ ರೀತಿ ಬೇಗನೆ ಹಣ ಮಾಡಿ ಅಂತ ತಾನೇ ನಾನು ಹಿಂಸೆ ಮಾಡ್ತಿರೋದು.

ಮಡಮಡೆಸ್ನಾನ ನಿಷೇಧಿಸಿದರೆ ತಪ್ಪೇನಿಲ್ಲ !

ಇತ್ತೀಚಿಗೆ ಬಹು ಚರ್ಚಿತವಾಗುತ್ತಿರುವ ವಿಷಯ ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ್ದು. ಯಾರೋ ಉಂಡ ಎಂಜಲೆಲೆ ಮೇಲೆ ಇನ್ಯಾರೋ ಬಿದ್ದು ಉರುಳಾಡುವುದೇ ಹೇಯ. ಇದರಲ್ಲಿ ಮೇಲ್ಜಾತಿ ಕೆಳಜಾತಿ ಬೇಧ ನೋಡುವ ಅಗತ್ಯ ಇಲ್ಲ. ಮಾಡುತ್ತಿರುವ ಕೃತ್ಯ ಮಾತ್ರ ಅಕ್ಷಮ್ಯ. ಇದನ್ನು ಕೆಲ ಭಟ್ಟಂಗಿಗಳು ಸಮರ್ಥಿಸುತ್ತಿರುವುದು ಖೇದಕರ. ಈ ಎಂಜಲೆಲೆ ಸ್ನಾನವನ್ನು ಸಮರ್ಥಿಸಿಕೊಳ್ಳಲು ನೂರಾರು ವರ್ಷಗಳ ಆಚರಣೆ ಅನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ. ಅದೊಂದೇ ಒಂದು ಮೂರ್ಖ ಆಚರಣೆಗೆ ನೆಪವಾಗುವುದಾದರೆ ನಮ್ಮ ದೇಶ ಪರಕೀಯರ ಭಾವನೆಯಲ್ಲಿ ಹೇಗಿದೆಯೋ ಹಾಗೇ ಉಳಿದು ಹೋಗುತ್ತದೆ. ಇದನ್ನು ಮಾಡುತ್ತಿರುವ ಮಲೆಕುಡಿಯರು "ಕಷ್ಟ ಹಾಗೂ ರೋಗ ನಿವಾರಣೆಯಾಗುತ್ತದೆ" ಎಂದು ತಪ್ಪಾಗಿ ನಂಬಿಕೊಂಡಿದ್ದಾರೆ. ಹೀಗೆ ನಂಬಿಸಿದವರು ಮೇಲ್ಜಾತಿಯವರೇ ಇರಬೇಕು ಎಂದು ಯಾರ ಮೇಲೋ ಗೂಬೆ ಕೂರಿಸುವ ಅಗತ್ಯ ಈಗ ಇಲ್ಲ. ಆಗಬೇಕಾಗಿರುವುದು ಒಂದು ಅನಿಷ್ಟ ಆಚರಣೆಯ ನಿವಾರಣೆ. ಈ ಆಚರಣೆಗೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಮೇಲಾಗಿ ಇದನ್ನು ಆಚರಿಸುತ್ತಿರುವ ಮಲೆಕುಡಿಯರು ಅನಕ್ಞರಸ್ತರು. ಇವರನ್ನು ಇದರಿಂದ ದೂರ ಮಾಡಬೇಕಾದುದು ಸರ್ಕಾರದ ಧರ್ಮ. ಆದರೆ ಜಾತೀವಾದವನ್ನು ಪೋಷಿಸಿಕೊಂಡೇ ಬರುವ ನಮ್ಮ ಹಾಳು ರಾಜಕಾರಣಿಗಳು "ಮಡೆಸ್ನಾನಕ್ಕೆ ಯಾರದೂ ಒತ್ತಾಯವಿಲ್ಲ. ಹಾಗಾಗಿ ಅದನ್ನು ನಿಷೇಧಿಸುವ ಅಗತ್ಯ ಇಲ್ಲ" ಎಂದು ಬುರುಡೆ ಬಿಡುತ್ತಿದ್ದಾರೆ. ಒತ್ತಾಯವಿಲ