ವಿಷಯಕ್ಕೆ ಹೋಗಿ

ಮಡಮಡೆಸ್ನಾನ ನಿಷೇಧಿಸಿದರೆ ತಪ್ಪೇನಿಲ್ಲ !ಇತ್ತೀಚಿಗೆ ಬಹು ಚರ್ಚಿತವಾಗುತ್ತಿರುವ ವಿಷಯ ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ್ದು. ಯಾರೋ ಉಂಡ ಎಂಜಲೆಲೆ ಮೇಲೆ ಇನ್ಯಾರೋ ಬಿದ್ದು ಉರುಳಾಡುವುದೇ ಹೇಯ. ಇದರಲ್ಲಿ ಮೇಲ್ಜಾತಿ ಕೆಳಜಾತಿ ಬೇಧ ನೋಡುವ ಅಗತ್ಯ ಇಲ್ಲ. ಮಾಡುತ್ತಿರುವ ಕೃತ್ಯ ಮಾತ್ರ ಅಕ್ಷಮ್ಯ. ಇದನ್ನು ಕೆಲ ಭಟ್ಟಂಗಿಗಳು ಸಮರ್ಥಿಸುತ್ತಿರುವುದು ಖೇದಕರ.

ಈ ಎಂಜಲೆಲೆ ಸ್ನಾನವನ್ನು ಸಮರ್ಥಿಸಿಕೊಳ್ಳಲು ನೂರಾರು ವರ್ಷಗಳ ಆಚರಣೆ ಅನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ. ಅದೊಂದೇ ಒಂದು ಮೂರ್ಖ ಆಚರಣೆಗೆ ನೆಪವಾಗುವುದಾದರೆ ನಮ್ಮ ದೇಶ ಪರಕೀಯರ ಭಾವನೆಯಲ್ಲಿ ಹೇಗಿದೆಯೋ ಹಾಗೇ ಉಳಿದು ಹೋಗುತ್ತದೆ. ಇದನ್ನು ಮಾಡುತ್ತಿರುವ ಮಲೆಕುಡಿಯರು "ಕಷ್ಟ ಹಾಗೂ ರೋಗ ನಿವಾರಣೆಯಾಗುತ್ತದೆ" ಎಂದು ತಪ್ಪಾಗಿ ನಂಬಿಕೊಂಡಿದ್ದಾರೆ. ಹೀಗೆ ನಂಬಿಸಿದವರು ಮೇಲ್ಜಾತಿಯವರೇ ಇರಬೇಕು ಎಂದು ಯಾರ ಮೇಲೋ ಗೂಬೆ ಕೂರಿಸುವ ಅಗತ್ಯ ಈಗ ಇಲ್ಲ. ಆಗಬೇಕಾಗಿರುವುದು ಒಂದು ಅನಿಷ್ಟ ಆಚರಣೆಯ ನಿವಾರಣೆ. ಈ ಆಚರಣೆಗೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಮೇಲಾಗಿ ಇದನ್ನು ಆಚರಿಸುತ್ತಿರುವ ಮಲೆಕುಡಿಯರು ಅನಕ್ಞರಸ್ತರು. ಇವರನ್ನು ಇದರಿಂದ ದೂರ ಮಾಡಬೇಕಾದುದು ಸರ್ಕಾರದ ಧರ್ಮ.

ಆದರೆ ಜಾತೀವಾದವನ್ನು ಪೋಷಿಸಿಕೊಂಡೇ ಬರುವ ನಮ್ಮ ಹಾಳು ರಾಜಕಾರಣಿಗಳು "ಮಡೆಸ್ನಾನಕ್ಕೆ ಯಾರದೂ ಒತ್ತಾಯವಿಲ್ಲ. ಹಾಗಾಗಿ ಅದನ್ನು ನಿಷೇಧಿಸುವ ಅಗತ್ಯ ಇಲ್ಲ" ಎಂದು ಬುರುಡೆ ಬಿಡುತ್ತಿದ್ದಾರೆ. ಒತ್ತಾಯವಿಲ್ಲದ ಆಚರಣೆಯನ್ನು ನಿಷೇಧಿಸುವ ಅಗತ್ಯ ಇಲ್ಲ ಅಂತಾದರೆ ಲಾಟರಿ, ಬಹುಪತ್ನಿತ್ವ, ವೇಶ್ಯಾವಾಟಿಕೆ, ಜೂಜು, ಬಾಲ್ಯ ವಿವಾಹ, ಸತಿಸಹಗಮನ, ದೇವದಾಸಿ ಪದ್ದತಿ ಮುಂತಾದವುಗಳನ್ನು ಯಾಕೆ ನಿಷೇಧಿಸಿದರು ? ಶಿವಮೊಗ್ಗದ ಸೊರಬ ತಾಲೂಕಿನ ಚಂದ್ರಗುತ್ತಿ ಎಂಬಲ್ಲಿ ಹಿಂದೆ ಬೆತ್ತಲೆ ಸೇವೆ ಇತ್ತು. ಅದು ಕೂಡಾ ಒತ್ತಾಯ ಪೂರ್ವಕವಾಗಿ ನಡೆಯುತ್ತಿರಲಿಲ್ಲ. ಹೆಂಗಸರು, ಗಂಡಸರು ಮಕ್ಕಳೆಲ್ಲ ಹರಕೆ ಹೊತ್ತುಕೊಂಡು ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಬೆತ್ತಲೆಯಾಗಿ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಇದನ್ನು ಸರ್ಕಾರ ನಿಷೇಧಿಸಿತು. ಆಗ ಸರ್ಕಾರ ಕೊಟ್ಟ ಕಾರಣ - ಇದು ಅಸಹ್ಯ ಆಚರಣೆ. ಆದರೆ ಈಗ ಸದಾನಂದ ಗೌಡರು ಕೊಡುತ್ತಿರುವ ಕಾರಣ "ಯಾರದೂ ಒತ್ತಾಯವಿಲ್ಲ!"
[ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಸಂಗ್ರಹ ಚಿತ್ರ ]
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…