ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಹೋದರಿ ನಿರ್ಭಯ ದಾಮಿನಿಗೆ ಶ್ರದ್ಧಾಂಜಲಿ

ಕೊನೆಗೂ ಆಹುಡುಗಿ ಬದುಕಲೇ ಇಲ್ಲ, ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯ ದಾಮಿನಿ ಕೊನೆಗೂ ಸಾವನ್ನಪ್ಪಿದ್ದಾಳೆ. ಆದರೆ ಆಕೆಯನ್ನು ಬರ್ಭರವಾಗಿ ಅತ್ಯಾಚಾರವೆಸಗಿ ವಿಕೃತ ಆನಂದ ಪಟ್ಟ ಕದೀಮರು ಜೈಲಲ್ಲಿ ಆರಾಮಾಗಿದ್ದಾರೆ. ಇನ್ನು ನ್ಯಾಯಾಲಯದ ವಿಚಾರಣೆ ಅದೆಷ್ಟು ದಿನ ಎಳೆದಾಡುತ್ತೋ ? ಎಷ್ಟು ಜನರಿಗೆ ಘನ ನ್ಯಾಯಾಲಯ ಜಾಮೀನು ಕೊಟ್ಟು ಕಳಿಸುತ್ತೋ ? ಶಿಕ್ಷೆಯಾದರೂ ಅದೆಷ್ಟು ವರ್ಷ ಜೈಲಲ್ಲಿದ್ದಾರು ? ಈಗ ಭಾರತದ ಜೈಲಲ್ಲಿರುವುದು ಶಿಕ್ಷೆ ಅಂತ ಯಾರು ಹೇಳುತ್ತಾರೆ ? ಹೆಚ್ಚೆಂದರೆ ಜೀವಾವಧಿ ಶಿಕ್ಷೆಯಾಗಬಹುದು. ಎಂಟತ್ತು ವರ್ಷ ಜೈಲಲ್ಲಿದ್ದು ಹೊರ ಬಂದರೆ ಮುಗಿಯಿತು. ಮತ್ತೆ ಆರಾಮಾಗಿ ಜೀವನ ಕಳೆಯಬಹುದು. ಸತ್ತವಳು ಹೋದಳು ಅಷ್ಟೇ ಎಂದು ನಾವೂ ಸುಮ್ಮನಾಗುತ್ತೇವೆ. ಇದು ಮೊದಲಲ್ಲ, ಎಲ್ಲಾ ಕೆಟ್ಟ ಘಟನೆಗಳಂತೆಯೇ ಇದು ಕೊನೆಯಾಗುವುದೂ ಇಲ್ಲ. ಮತ್ತೆ ಮತ್ತೆ ಅತ್ಯಾಚಾರಗಳು, ಕೊಲೆಗಳು ನಡೆಯುತ್ತಲೇ ಇರುತ್ತವೆ. ನಾವು ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿ ನೋಡಿ ಸುಮ್ಮನಗುತ್ತೇವೆ. ಬಿಡು, ನಮ್ಮೆನೆ ಹುಡುಗಿ ಅಲ್ಲವಲ್ಲ ಅಂದುಕೊಳ್ಳುವವರೆ ಹೆಚ್ಚು. ಆದರೆ ಇದೇ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದರೆ ? ಅಪರಾಧಿಗಳನ್ನು ಇಷ್ಟರಲ್ಲೇ ಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಿರುತ್ತಿದ್ದರು... ಆದರೆ ಇದು ಭಾರತ... ನಾವು ಎಲ್ಲವನ್ನೂ ಸಹಿಸಿಕೊಳ್ಳುವಂತಹವರು. ನಮ್ಮಲ್ಲಿ ಶಿಕ್ಷೆ ಆಗುವುದಾದರೂ ಹೇಗೆ ? ನಮ್ಮ ರಾಜಕಾರಣಿಗಳೇ ಹಲವರು ಅತ್ಯಾಚಾರವೆಸಗಿ ಅ

ಕರ್ನಾಟಕವೇನು ರಾಮರಾಜ್ಯವಾಗಿದೆಯೇ ಪ್ರತಾಪ್‌ಸಿಂಹ ?

ಪತ್ರಿಕೋದ್ಯಮ ಒಂದು ನ್ಯಾಯಾಲಯದಂತೆ ವರ್ತಿಸಬೇಕು. ಪತ್ರಕರ್ತರಾದವರು ನ್ಯಾಯಾಧೀಶರಾಗಿ ವರ್ತಿಸಬೇಕು. ಆದರೆ ಕನ್ನಡದ ಖ್ಯಾತ ಪತ್ರಕರ್ತರೆನ್ನಿಸಿಕೊಂಡ ಕೆಲವರು ಮಾಡುತ್ತಿರುವುದೇ ಬೇರೆ. ಹೀಗಾಗಿ ಯಾರನ್ನೂ ನಂಬುವಂತಿಲ್ಲ. ಕನ್ನಡಪ್ರಭದ ಅಂಕಣಕಾರ ಪ್ರತಾಪ್‌ಸಿಂಹ ಕೂಡಾ ಇದೇ ಸಾಲಿಗೆ ಸೇರ್ಪಡೆಯಾಗಿರುವುದು ದುರಂತ. ಇವರು ಬಾಯಿ ಬಿಟ್ಟರೆ ಹಿಂದು-ಹಿಂದುತ್ವ ಎಂದು ಬಡಬಡಿಸುತ್ತಾರೆ. ಆದರೆ ಹಿಂದು ಮೇಲ್ವರ್ಗದವರ ಉಡಾಳತನದ ಬಗ್ಗೆ ಎಂದೂ ಅಂಕಣ ಬರೆಯುವುದಿಲ್ಲ. ಇಂದಿನ ತಮ್ಮ "ಬೆತ್ತಲೆ ಪ್ರಪಂಚ"ದಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರದ ವಿಷಯ ಎತ್ತಿಕೊಂಡು ಕೇಂದ್ರದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ಕೇಂದ್ರವನ್ನು ಟೀಕಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ, ಆದರೆ ಅದರ ಹಿಂದಿರುವ ಉದ್ದೇಶ, ಒಂದು ಕಣ್ಣಿಗೆ ಬೆಣ್ಣೆ-ಒಂದು ಕಣ್ಣಿಗೆ ಸುಣ್ಣ ಎನ್ನುವಂತಹ ಇವರ ಮನೋಭಾವ ಖಂಡನೀಯ. ಇವರ ಲೇಖನದಲ್ಲಿ ಎಲ್ಲೂ ಆ ಅತ್ಯಾಚಾರವನ್ನು ಖಂಡಿಸುವ ಒಂದೇ ಒಂದು ಪದವಿಲ್ಲ! ಬದಲಿಗೆ ಇವರು ಖಂಡಿಸುವುದು ಕೇವಲ ಎಬಿವಿಪಿ ಹೋರಾಟಗರರನ್ನು ಕೇಂದ್ರವು ಸರಿಯಾಗಿ ನಡೆಸಿಕೊಳ್ಳದಿರುವುದನ್ನು ಮಾತ್ರ ! ಆದರೆ ಅದೇ ಹೋರಾಟಗಾರರ ಹೊಡೆತಕ್ಕೆ ಸಿಕ್ಕು ಸತ್ತ ಪೊಲೀಸ್ ಪೇದೆ ಇವರಿಗೆ ಲೆಕ್ಕಕ್ಕಿಲ್ಲ!  "ಡೆಲ್ಲಿಯಲ್ಲಿ ಇಬ್ಬರೇ ಸೇಫ್! ಸೋನಿಯ ಮತ್ತು ಶೀಲಾ" ಎನ್ನುವ ಇವರಿಗೆ ಕರ್ನಾಟಕದಲ್ಲಿ ಎಲ್ಲಾ ಹುಡುಗಿಯರೂ ಸೇಫ್ ಅನ್ನಿಸಿರಬೇಕು. ಕರ್ನಾಟಕದಲ್ಲಿ ಅತ್ಯ

ಆಸ್ತಿ ನೋಂದಣಿಗೆ ಯಾಕೆ ಅಷ್ಟೊಂದು ವೆಚ್ಚ ?

ಮೊನ್ನೆ ಗೆಳೆಯರೊಟ್ಟಿಗೆ ಮಾತಾಡುತ್ತಿರುವಾಗ ಒಬ್ಬ ಗೆಳೆಯ "ಆಸ್ತಿಯ ನೋಂದಣಿ ಮಾಡುವಾಗ ಸುಮಾರು ೧೬ % ಸರ್ಕಾರಕ್ಕೆ ಪಾವತಿ ಮಾಡಬೇಕು. ಇದು ಯಾವ ನ್ಯಾಯ ?" ಎಂದು ಕೇಳಿದ. ಎಲ್ಲರೂ ಅದಕ್ಕೆ ಹೋಗುಟ್ಟಿ ಸರ್ಕಾರದ ಮೇಲೆ ಕೆಂಟ ಕಾರಿದರು,  "ನಿನ್ನ ಆಸ್ತಿಯ ನಿಜವಾದ ಮೌಲ್ಯವನ್ನು ಸರ್ಕಾರಕ್ಕೆ ತಿಳಿಸುತ್ತೀಯ ? ಎಲ್ಲದಕ್ಕೂ ೧೬% ದಂತೆ ಪಾವತಿ ಮಾಡುತ್ತೀಯ?" ಎಂದು ನಾನು ಕೇಳಿದೆ. "ಇಲ್ಲ, ಅವರು ಹಾಗೆ ೧೬% ಪಡೆಯುವ ಕಾರಣಕ್ಕೇ ಆಸ್ತಿಯ ಮೌಲ್ಯವನ್ನು ಕಡಿಮೆ ಹೇಳಬೇಕಾಗಿದೆ. ಎಲ್ಲರೂ ಇದಕ್ಕಾಗಿಯೇ ಆಸ್ತಿ ಮೌಲ್ಯವನ್ನು ಕಡಿಮೆ ತೋರಿಸುತ್ತಾರೆ" ಎಂದು ಹೇಳಿದ ಗೆಳೆಯ. "ಒಂದು ವೇಳೆ ಸರ್ಕಾರದವರು ಕೇವಲ ೨ ಅಥವಾ ೩% ರಷ್ಟು ಮಾತ್ರ ಪಡೆಯುವಂತಿದ್ದರೆ ನೀನು ನಿನ್ನ ಆಸ್ತಿಯ ಸರಿಯಾದ ಮೌಲ್ಯವನ್ನು ತೋರಿಸುತ್ತಿದ್ದೆಯಾ ? ಒಂದು ವೇಳೆ ನೀನು ತೋರಿಸಿದರೂ ಎಲ್ಲ ಸಾರ್ವಜನಿಕರೂ ಪ್ರಾಮಾಣಿಕವಾಗಿ ತೋರಿಸುತ್ತಿದ್ದರೇ ?" ಎಂದು ಮತ್ತೆ ಕೇಳಿದೆ. ಅದಕ್ಕವನು "ಇಲ್ಲ, ನೀನು ಹೇಳಿದ್ದು ಸರಿ, ಯಾರೂ ಹಾಗೆ ಮಾಡುವುದಿಲ್ಲ" ಎಂದ. "ಅದಕ್ಕಾಗಿಯೆ ಸರ್ಕಾರದವರು ಅಷ್ಟೊಂದು ವಸೂಲಿ ಮಾಡುತ್ತಿದ್ದಾರೆ!" ಎಂದೆ. ಅವನು ಸುಮ್ಮನಾದ.

ಕನ್ನಡಪ್ರಭದವ್ರು ಹೇಳ್ತಾರೆ... ವೀಕೆಂಡ್‌ಗೆ ತಮಿಳು, ತೆಲುಗು, ಇಂಗ್ಲಿಷ್ ಸಿನೆಮಾ ನೋಡಿ !!!

ಇಂದಿನ ಕನ್ನಡಪ್ರಭದ ನಾಲ್ಕನೇ ಪುಟವನ್ನು ನೋಡಿ ಅಚ್ಚರಿಯಾಯ್ತು. ಕಾರಣ, ಒಂದು ಕಾಲದಲ್ಲಿ ಕನ್ನಡದ ಕಾಳಜಿಯಲ್ಲಿ ಮುನ್ನೆಲೆಯಲ್ಲಿ ಇದ್ದ ಕನ್ನಡಪ್ರಭ ಯಾವ ಮಟ್ಟಕ್ಕೆ ಇಳಿಯಿತು ಎನ್ನಿಸಿತು.  ನಾಲ್ಕನೇ ಪುಟದಲ್ಲಿ "ವೀಕೆಂಡ್‌ ಗೈಡ್" ಎನ್ನುವ ಆಂಗ್ಲ ತಲೆಬರಹದೊಂದಿಗೆ ಯಾವನೋ ತಲೆ ಕೆಟ್ಟ ಉಪ ಸಂಪಾದಕನೊಬ್ಬ ನೀಡಿರುವ ಮಾಹಿತಿ ಈ ಪತ್ರಿಕೆಯನ್ನು ಕ್ಷಮಿಸುವಂತಿಲ್ಲ. ಇದರಲ್ಲಿ ವೀಕೆಂಡ್ ಆಚರಿಸಲು ಕೆಲವೊಂದು ಮಾಹಿತಿ ನೀಡಿದ್ದಾರೆ. ಅವುಗಳಲ್ಲಿ "ಚಿತ್ರದರ್ಶಿನಿ" ಎಂಬ ವಿಭಾಗದಲ್ಲಿ ತೆಲುಗು, ತಮಿಳು ಹಾಗೂ ಇಂಗ್ಲಿಷ್‌ನ ಕೆಲವೊಂದು ಚಿತ್ರಗಳ ವಿವರದೊಂದಿಗೆ ಅವು ಯಾವ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿವೆ ಎಂಬ ಮಾಹಿತಿಯೂ ಇದೆ. ಆದರೆ ಹುಡುಕಿದರೆ ಕನ್ನಡದ ಯಾವುದೇ ಚಿತ್ರದ ಮಾಹಿತಿ ಇಲ್ಲ! ಸಂಗೊಳ್ಳಿ ರಾಯಣ್ಣ, ಎದೆಗಾರಿಕೆ ಮುಂತಾದ ಅನೇಕ ಉತ್ತಮ ಕನ್ನಡ ಚಿತ್ರಗಳು ನಗರದಲ್ಲಿ ಪ್ರದರ್ಶಿತವಾಗುತ್ತಿರುವಾಗ ಕನ್ನಡವನ್ನುಳಿದು ಬೇರೆ ಭಾಷೆಯ ಚಿತ್ರಗಳಿಗೆ ಕನ್ನಡಿಗರನ್ನು ಕಳಿಸುವ ಅಜ್ಞಾನ ಬಹುಶಃ ಕನ್ನಡಪ್ರಭದವರಿಗೆ ಮಾತ್ರ ಇರಬಹುದೇನೋ. ಇಂದು ಆಂಗ್ಲ ಪತ್ರಿಕೆಗಳೂ ಸಹ ಉತ್ತಮ ಕನ್ನಡ ಚಿತ್ರಗಳು ಬಂದಾಗ ಅವುಗಳ ಬಗ್ಗೆ ಉತ್ತಮವಾಗಿ ಲೇಖನ ಬರೆದು ಕನ್ನಡಕ್ಕೆ ಮನ್ನಣೆ ನೀಡುತ್ತಿರುವಾಗ ಕನ್ನಡದ್ದೇ ಹೆಸರಿನ ಈ ಪತ್ರಿಕೆ ಭಟ್ಟರ ಪಡೆಯೊಂದಿಗೆ ಕುಲಗೆಟ್ಟು ಹೋಗುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ.

ತಮಿಳರಿಗೆ ಡಬಲ್ ಧಮಾಕ !

ನಿನ್ನೆ ಚೆನ್ನೈಯಿಂದ ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮರಳುತ್ತಿದ್ದೆ. ಟಿಕೇಟು ಕಾಯ್ದಿರಿಸಿರದಿದ್ದ ಕಾರಣ ಸಾಮಾನ್ಯ ಬೋಗಿಯಲ್ಲೇ ಹತ್ತಿದ್ದೆ. ಅದು ಹೆಸರಿಗೆ ಮಾತ್ರ ಎಕ್ಸ್‌ಪ್ರೆಸ್, ಆದರೆ ಬಹುತೇಕ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುತ್ತೆ. ಚೆನ್ನೈ ನಂತರದ ಒಂದು ನಿಲ್ದಾಣದಲ್ಲಿ ಕೆಲವರು ಅಕ್ಕಿ ಮೂಟೆಗಳನ್ನು ಹೇರಿದರು. ಮೂರ್ನಾಲ್ಕು ನಿಲ್ದಾಣಗಳ ನಂತರ ಒಂದು ನಿಲ್ದಾಣದಲ್ಲಿ ಬಂದ ರೈಲ್ವೇ ಪೊಲೀಸರು ಅವುಗಳನ್ನು ವಶಪಡಿಸಿಕೊಂಡರು. ಆಗ ಮೂಟೆಗಳ ವಾರಸುದಾರರು ಯಾರೂ ಮುಂದೆ ಬರಲಿಲ್ಲ. ರೈಲು ಅಲ್ಲಿಂದ ಹೊರಟ ನಂತರ ಮೂಟೆಗಳನ್ನು ತಂದಿದ್ದವರು 'ಅಷ್ಟು ಕೆ.ಜಿ. ಅಕ್ಕಿ ಇತ್ತು, ಇಷ್ಟು ಕೆ.ಜಿ. ಅಕ್ಕಿ ಇತ್ತು' ಎಂದು ತಮ್ಮ ಅಳಲು ತೋಡಿಕೊಂಡರು. ಆದರೆ ಯಾರ ಮುಖದಲ್ಲೂ ಅಕ್ಕಿ ಹೋದುದರ ದುಃಖ ಕಿಂಚಿತ್ತೂ ಇರದಿದ್ದುದನ್ನು ಕಂಡು ಆಶ್ಚರ್ಯವಾಯ್ತು. ನಂತರ ಅಕ್ಕಪಕ್ಕದವರನ್ನು ವಿಚಾರಿಸಿದೆ. ಆಗ ತಿಳಿದು ಬಂದ ವಿಷಯವೇ ಬೇರೆ. ಅದೇನೆಂದರೆ ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಜಯಲಲಿತ ಪೈಪೋಟಿಯಲ್ಲಿ ಮತಬ್ಯಾಂಕ್ ರಾಜಕಾರಣ ಮಾಡಿದ್ದಾರೆ. ಅವುಗಳ ಅಂಗವಾಗಿ ಮನೆ ಮನೆಗೆ ಟಿವಿ, ಮಿಕ್ಸಿ, ಸೀರೆ ಮುಂತಾದ ವಸ್ತುಗಳು ಬಂದಿವೆ. ಜೊತೆಗೆ ಪಡಿತರ ಕಾರ್ಡುದಾರರಿಗೆ ತಿಂಗಳಿಗೆ ೨೦ ಕಿಲೋ ಅಕ್ಕಿ ಉಚಿತ! ಹಲವರು ಒಂದೇ ಕುಟುಂಬಕ್ಕೆ ನಾಲ್ಕೈದು ಕಾರ್ಡು ಹೊಂದಿದ್ದು ಉಚಿತವಾಗಿ ಸಿಗುವ ಕ್ವಿಂಟಾಲ್‌ಗಟ್ಟಲೇ ಅಕ್ಕಿಯನ್ನು ಬೆಂಗಳೂರು ಮುಂತಾದೆಡೆ ತಂದು ಒಳ್ಳೆ

ವಿವೇಕಾನಂದರನ್ನು ದೇಶದ್ರೋಹಿ ದಾವುದ್‌ಗೆ ಹೋಲಿಸುವ ಹರಕತ್ತು ಏನಿತ್ತು ?

ಬಿಜೆಪಿ ಪುಂಡರು ತಮ್ಮ ಉಡಾಳ ತನವನ್ನು ಮೇಲಿಂದ ಮೇಲೆ ಪ್ರದರ್ಶನ ಮಾಡುತ್ತಲೇ ಬರುತ್ತಿದ್ದಾರೆ. ಅದು ಕರ್ನಾಟಕದ ಶಿಖಾಮಣಿಗಳಿಗೆ ಮಾತ್ರ ಸೀಮಿತವಾಗಿದೆ ಅಂದುಕೊಳ್ಳುತ್ತಿರುವಾಗಲೇ ದೆಹಲಿ ಮುಖಂಡರೂ ಸಹ ತಾವೇನೂ ಕಡಿಮೆ ಇಲ್ಲ ಎಂದು ನಮ್ಮ ರಾಜ್ಯದ ಬಿಜೆಪಿಗರಿಗೆ ಸೆಡ್ಡು ಹೊಡೆದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಗಡ್ಕರಿಗೆ ಸಮಯ ಸರಿ ಇಲ್ಲವೋ ಅಥವಾ ಅವರ ಕೈ ಬಾಯಿ ಶುದ್ಧವಿಲ್ಲವೋ ತಿಳಿಯದು. ಒಟ್ಟಿನಲ್ಲಿ ಮಾಡಿದ ಮಹಪರಾಧವೆಲ್ಲಾ ಒಂದೆಡೆಯಿಂದ ಒಂದೊಂದಾಗಿ ಹೊರ ಬರುತ್ತಿದ್ದರೆ ಇನ್ನೊಂದೆಡೆ ಆಡಬಾರದ್ದನ್ನು ಆಡಿ ಛೀ, ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಅವರು ಹೇಳಿದ್ದಾದರೂ ಏನು ? "ದಾವುದ್‌ ಇಬ್ರಾಹಿಂ (ದೇಶದ್ರೋಹಿ) ಹಾಗೂ ಸ್ವಾಮಿ ವಿವೇಕಾನಂದರ (ದೇಶಭಕ್ತ) ಐಕ್ಯೂ (ಬೌದ್ಧಿಕ ಮಟ್ಟ) ಒಂದೇ ಮಟ್ಟದ್ದು.... ಇದನ್ನು ಇಬ್ಬರೂ ಬೇರೆ ಬೇರೆ ರೀತಿ ಬಳಸಿಕೊಂಡರು". [ವೀಡಿಯೋ ಇಲ್ಲಿದೆ : http://ibnlive.in.com/news/dawood-ibrahims-iq-level-almost-same-as-swami-vivekanandas-nitin-gadkari/303938-37-64.html ] ಅದಾಗಲೇ ಕೆಲವು ದೇಶಭಕ್ತಿಯ ಲೇಬಲ್ ಹಚ್ಚಿಕೊಂಡಿರುವ ಕುಹಕಿಗಳು ಗಡ್ಕರಿ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ತಿಪ್ಪೆ ಸಾರಿಸಲು ಶುರು ಮಾಡಿದ್ದಾರೆ. "ಅವರು ಹೋಲಿಕೆ ಮಾಡಿದ್ದು ವೈರುದ್ಧತೆಯ ಬಗ್ಗೆ ಅಷ್ಟೇ" ಎಂದು ಹೇಳುವ ಮೂಲಕ ವಿಷಯವನ್ನು "ಇಷ್ಟೇ" ಮಾಡಲು ಹರ ಸಾಹಸ ಪಡುತ

ಬೆಂಗಳೂರು ನಗರ ಪೊಲೀಸ್ ಪುಟದಲ್ಲಿ ಕನ್ನಡ ನಾಪತ್ತೆ !

ಬೆಂಗಳೂರು ನಗರ ಪೊಲೀಸ್ ಪುಟದಲ್ಲಿ ಕನ್ನಡ ನಾಪತ್ತೆ ! https://www.facebook.com/ blrcitypolice ಬೆಂಗಳೂರು ನಗರ ಪೊಲೀಸರು ಶುರು ಮಾಡಿರುವ ಫೇಸ್‌ಬುಕ್ ಪುಟದಲ್ಲಿ ಕನ್ನಡವನ್ನೇ ಬಳಸಿಲ್ಲ. ಕನ್ನಡದಲ್ಲಿ ಶುದ್ಧವಾಗಿ ಬೆರೆದ ಚಿತ್ರವನ್ನು ನಾನೇ ಕಳಿಸಿ ಕೊಟ್ಟರೆ ಅದನ್ನು ಅಳಿಸಿ ಹಾಕಿದರು. ಪರ ಭಾಷಿಕರನ್ನು ಮೆಚ್ಚಿಸುವ ಇವರ ಇಂತಹ ಗುಲಾಮಗಿರಿಯ ಭಾವನೆ ಯಾಕೋ ?   ನಾನು ಕಳಿಸಿದ ಚಿತ್ರ ಈ ರೀತಿ ಇತ್ತು....

ಕಾವೇರಿ ಕೊಳ್ಳ ಮತ್ತು ಕದೀಮ ಕಳ್ಳರು !

ಕಾವೇರಿ ಕೊಳ್ಳದ ಕದನ ಸಧ್ಯಕ್ಕೆ ಮುಗಿದು ಅನ್ನಿಸುತ್ತೆ. ಮುಗಿಸುವ ಯೋಚನೆಯೂ ನಮ್ಮ ಯಾವ ರಾಜಕಾರಣಿಗಳಿಗೂ ಇದ್ದಂತಿಲ್ಲ. ಎಲ್ಲರೂ ಕಾವೇರಿಯ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರೆ.  ಅಂದು ನಡೆದ ಪ್ರಧಾನಿಗಳ ಅಧ್ಯಕ್ಷತೆಯ ಕಾವೇರಿ ಪ್ರಾಧಿಕಾರದ ಸಬೆಯಲ್ಲಿ ಸಿಂಗ್ ನೀಡಿದ ಆದೇಶ ನಮ್ಮ ರಾಜ್ಯಕ್ಕೆ ಮಾರಕವಾಗಿತ್ತು. ಜಯಾ ಕೇಳಿದ್ದು ಪ್ರತಿ ದಿನ ೨ ಟಿಎಂಸಿ. ಸಿಂಗ್ ಬಿಡಲು ಹೇಳಿದ್ದು ದಿನವೂ ೯,೦೦೦ ಕ್ಯೂಸೆಕ್ ನೀರು. ಪರವಾಗಿಲ್ಲ, ೨ ಟಿಎಂಸಿ ಕೇಳಿದರೆ ಕೇವಲ ೯,೦೦೦ ಕ್ಯೂಸೆಕ್ ನೀಡಲು ಹೇಳಿ ಕರ್ನಾಟಕದ ಕಡೆಗೇ ನ್ಯಾಯ ಒದಗಿಸಿದ್ದಾರೆ ಅನ್ನುವಂತಿಲ್ಲ. ಏಕೆಂದರೆ ಜಯಾ ಇಲ್ಲಿ ಮಹಾನ್ ನಾಟಕವಾಡಿದ್ದಾಳೆ. ಅದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವಳಿಗೆ ಸಧ್ಯಕ್ಕೆ ನೀರಿನ ಅವಶ್ಯಕತೆಯೇ ಇಲ್ಲ. ಈಗಾಗಲೇ ರಾಜ್ಯದಿಂದ ಸಾಕಷ್ಟು ನೀರು ಹೋಗಿ ಮರಟ್ಟೂರು ಅಣೆ ತುಂಬಿಸಿದೆ. ತಮಿಳುನಾಡಿನಲ್ಲಿ ಹಿಂಗಾರು ಮಳೆಯೇ ಹೆಚ್ಚು. ಅದು ಇನ್ನೂ ಬಂದೇ ಇಲ್ಲ. ಅದು ಬರುವ ಸಮಯಕ್ಕೆ ಬೇಕಾದಷ್ಟು ನೀರು ಸಿಕ್ಕಿ ಅದು ಹೆಚ್ಚಾಗಿ ಸಮುದ್ರವನ್ನೂ ಸೇರುತ್ತದೆ. ಆದರೂ ಅವಳಿಗೆ ಕರ್ನಾಟಕದ ಮೂರ್ಖ ರಾಜಕಾರಣಿಗಳನ್ನು ಆಟ ಆಡಿಸುವ ಚಟ. ಆದುದರಿಂದಲೇ ಆಕೆ ದಿನವೂ ೨ ಟಿಎಂಸಿ ನೀರು ಬೇಕು ಎಂದು ಕೇಳಿದ್ದು.   ಕಾವೇರಿ ವಿಷಯದಲ್ಲಿ ಕರ್ನಾಟಕದ ರಾಜಕಾರಣಿಗಳು ಸರಿಯಾಗಿ ವ್ಯವಹಾರ ನಡೆಸಲ್ಲ ಅನ್ನೊದು ಲಗಾಯ್ತಿನಿಂದಲೂ ತಿಳಿದು ಬಂದಿರುವ

”ಕೂಲಿಗಾಗಿ ಕಾಳು’ ಯೋಜನೆಗೂ ಹಾಕುವರೇ ಕಲ್ಲು ?

ಹೀಗೊಂದು ಅನುಮಾನ ಕಾಡುತ್ತಿದೆ. ಏಕೆಂದರೆ ನಿನ್ನೆ ಸುವರ್ಣಾ ನ್ಯೂಸ್‌ನಲ್ಲಿನ ಒಂದು ಚರ್ಚೆ ನಡೆಯುತ್ತಿತ್ತು. ಅದು ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ಗಳನ್ನು ವರ್ಷಕ್ಕೆ ಆರಕ್ಕೆ ಸೀಮಿತಗೊಳಿಸಿರುವುದರ ಬಗ್ಗೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಹೇಳಿದ್ದು ವರ್ಷಕ್ಕೆ ಹನ್ನೆರಡು ಸಿಲಿಂಡರುಗಳನ್ನು ನೀಡಲೇ ಬೇಕು. ಅದಕ್ಕೆ ಹಣ ಬೇಕಾದರೆ ನರೇಗಾ (ಕೂಲಿಗಾಗಿ ಕಾಳು ಯೋಜನೆ) ವನ್ನು ತೆಗೆದು ಹಾಕಿ ಆ ಹಣದಿಂದ ನೀಡಬೇಕು, ಕೂಲಿಗಾಗಿ ಕಾಳು ಯೋಜನೆಯಲ್ಲಿ ಕೂಲಿಗಳಿಗೆ 100 ರೂ ಹೋದರೆ 20 ರೂಪಾಯಿ ಮಧ್ಯವರ್ತಿ ಜೇಬು ಸೇರುತ್ತಿದೆ. ಅಲ್ಲದೇ ಇದರಿಂದ ಹೊಲಗಳಲ್ಲಿ ದುಡಿಯಲು ಕೂಲಿಗಳೇ ಸಿಗುತ್ತಿಲ್ಲ. ಎಂದರು.  ಅನಿಲ ಸಿಲಿಂಡರ್ ವಿಷಯಕ್ಕೆ ಬಂದರೆ ಅದನ್ನು ಉಪಯೋಗಿಸುತ್ತಿರುವುದು ಬಹುತೇಕ ಮಧ್ಯಮ ಮತ್ತು ಧನಿಕ ವರ್ಗ. ಬಡವರು, ಕಡು ಬಡವರು ಇಂದಿಗೂ ಸೌದೆ, ಸೀಮೆಣ್ಣೆಯನ್ನೇ ನಂಬಿಕೊಂಡಿದ್ದಾರೆ. ಮಧ್ಯಮ ವರ್ಗದ ಒಂದು ಸಾಧಾರಣ ಕುಟುಂಬಕ್ಕೆ ವರ್ಷಕ್ಕೆ 6 ಸಿಲಿಂಡರ್ ಅಡುಗೆ ಮಾಡಿಕೊಳ್ಳಲು ಸಾಕು. ಸ್ನಾನಕ್ಕೆ ನೀರು ಕಾಯಿಸಲೂ ಅದನ್ನೇ ಬಳಸಿದರೆ ಸಾಕಾಗುವುದಿಲ್ಲ. ಆದರೆ ಸರ್ಕಾರ ಸಬ್ಸಿಡಿ ಕೊಡುವುದು ಅಡುಗೆ ಮಾಡಿಕೊಳ್ಳಲಿಕ್ಕೇ ಹೊರತೂ ಪ್ರಜೆಗಳು ಬಿಸಿಬಿಸಿ ನೀರು ಸ್ನಾನ ಮಾಡಿ ಹಾಯಾಗಿರಲಿ ಎಂದೇನಲ್ಲ. ಪ್ರಜೆಗಳ ಎಲ್ಲಾ ಬೇಡಿಕೆಯನ್ನೂ ನೀಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ಮಿತ ಬಳಕೆಯನ್ನು ಸಾರ್ವಜನಿಕರೂ ಸ್ವಲ್ಪ ರೂಢಿಸಿಕೊಂಡರೆ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿಪರೀತ. ಹೀಗೇ ಕಸದ ವಿಲೇವಾರಿಯನ್ನು ಸರಿಯಾಗಿ ಮಾಡದೇ ಹೋದರೆ ಬೆಂಗಳೂರು ಸಹ ಚೆನ್ನೈ, ಮುಂಬೈ ರೀತಿ ಗಬ್ಬು ನಾರಲು ಶುರುವಾಗುತ್ತದೆ. ಕಸದಿಂದ ರಸ ಮಾಡಲು ಮಹಾನಗರ ಪಾಲಿಕೆಯವರಿಗೆ ಸಾಧ್ಯವಿಲ್ಲವಾದರೂ ಕಸದಿಂದ ವಿದ್ಯುತ್ ಆದರು ಮಾಡಬಹುದಿತ್ತು. ಅದಕ್ಕೆಲ್ಲಾ ಇಚ್ಚಾಶಕ್ತಿ ಬೇಕು. ಅದನ್ನು ನಮ್ಮ ಅಧಿಕಾರಿಗಳಿಂದ, ಕಾರ್ಪೋರೇಟರುಗಳಿಂದ ಅಪೇಕ್ಷಿಸಿದರೆ ತಪ್ಪಾಗುವುದೇನೋ. ಅಥವಾ ಅದಕ್ಕೂ ಕಸದ ಮಾಫಿಯಾ ಅಡ್ಡಗಾಲು ಹಾಕಿದೆಯೋ ಎಂಬ ಅನುಮಾನ ಬೇರೆ! ಮಹಾನಗರ ಪಾಲಿಕೆಯ ಮಂಗಾಟ ಅತ್ಲಾಗಿರಲಿ, ಸಾರ್ವಜನಿಕರಾದ ನಾವು ಕಸದ ಸಮಸ್ಯೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬುದೆ ಈಗಿನ ಪ್ರಶ್ನೆ. ನವ್ಯಾರೂ ಕಸದ ಬಗ್ಗೆ ಗಮನ ಹರಿಸಿಯೇ ಇಲ್ಲ. ಹಾಗೇನಾದರೂ ನಮ್ಮ ಗಮನ ಕಸದ ಬಗ್ಗೆ ಇದ್ದರೆ, ಪಾಲಿಕೆಯ ಕಸದ ವಾಹನ ಎಷ್ಟೊತ್ತಿಗೆ ಬರುತ್ತೆ.. ಎನ್ನುವುದರ ಬಗ್ಗೆ ಮಾತ್ರ. ಕಸದ ವಾಹನ ಬಂದು ಅದನ್ನು ಸಾಗ ಹಾಕಿದರೆ ಮುಗಿಯಿತು. ನಂತರ ನಮಗೇನೂ ಚಿಂತೆ ಇಲ್ಲ. ಆ ಕಸವನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕುತ್ತಾರೆ ಎಂಬುದರ ಅರಿವೂ ನಮಗಿಲ್ಲ. ಕಸದ ನಿಯಂತ್ರಣದ ಮಾತು ದೂರವೇ ಉಳಿಯಿತು. ನಾನು ಚೆನ್ನೈಯನ್ನು ಚೆನ್ನಾಗಿ ನೋಡಿದ್ದೇನೆ. ಅಲ್ಲಿಗೆ ಹೋಲಿಸಿದರೆ ಕಸ ವಿಲೇವಾರಿಯಲ್ಲಿ ಬೆಂಗಳೂರು ಪಾಲಿಕೆ ಹತ್ತು ಪಟ್ಟು ಮೇಲು. ಆದರೂ ನಮ್ಮಲ್ಲಿ ಅನೇಕ ಮನೆಯವರು ಆಗಾಗ ಕಸವನ್ನು ಒಂದ

ಪ್ರೇಮಿಗೊಂದು ಪ್ರೇಮದೋಲೆ ಬರೆಯಿರಿ ಇಂದೇ...

ನೀವು ಪ್ರೇಮಿಸಿದ್ದೀರಿ. ಬದಲಿಗೆ ಆಕೆಯೂ ನಿಮ್ಮನ್ನು ನಿಮಗಿಂತಲೂ ಗಾಢವಾಗಿ ಪ್ರೀತಿಸುತ್ತಿದ್ದಾಳೆ. ಬಹುಶಃ ಇಬ್ಬರದೂ ಒಂದೇ ಕಾಲೇಜು. ಬೇಡವೆಂದರೂ ಹೆಚ್ಚು ಕಡಿಮೆ ದಿನವೂ ನೋಡುತ್ತೀರಿ, ಸಂದಿಸುತ್ತೀರಿ. ಬೇಕಾದಷ್ಟು ಮಾತೂ ಆಡ್ತೀರಿ. ಮೆಸೇಜೂ ಮಾಡ್ತೀರಿ... ಆದ್ರೂ ಒಂದು `ಪ್ರೇಮಪತ್ರ`ವನ್ನು ಬರೆದು ಕೊಟ್ಟು ನೋಡಿ. ಅದರ ಸಂಭ್ರಮವೇ ಬೇರೆ. ಅವಳಿಗಾಗುವ ಆನಂದವೂ ಬೇರೆ. ಪ್ರೇಮ ಪತ್ರಕ್ಕೆ ಆ ಶಕ್ತಿಯಿದೆ.  `ಯಾಕೆ ಬಿಡಿ, ದಿನವೂ ನೋಡ್ತಿರ್ತೀವಿ. ಮಾತೂ ಆಡ್ತೀವಿ. ಅವಳ ಹತ್ರ ಮೊಬೈಲ್ ಇದೆ. ನನ್ನ ಹತ್ರಾನೂ ಇದೆ. ನನಗೆ ಮಾತನಾಡಬೇಕೆನ್ನಿಸಿದಾಗ ನಾನು ಕರೆ ಮಾಡ್ತೇನೆ. ಅವಳಿಗೆ ಆಸೆಯಾದಾಗ ಅವಳೇ ಕರೆ ಮಾಡ್ತಾಳೆ. ಇಬ್ಬರೂ ಗಂಟೆಗಟ್ಟಲೇ  ಫೋನ್‌ನಲ್ಲೇ ಮಾತಾಡ್ತೇವೆ. ಸಂದೇಶಗಳಿಗೆ ಲೆಕ್ಕವಿಲ್ಲ, ಎದುರು ಸಿಕ್ಕರಂತೂ ದಿನವೆಲ್ಲಾ ಕೂತು ಹರಟೆ ಹೊಡೀತೀವಿ. ಇನ್ನಾರು ತಿಂಗಳಲ್ಲೇ ಮದುವೆ. ಈಗ ಹೋಗಿ ಪ್ರೇಮ ಪತ್ರ?! ಅದೆಲ್ಲಾ ಓಲ್ಡ್ ಸ್ಟೈಲು. ಫಸ್ಟ್ ಗಿಯರ್ ಅದು. ನಾವು ಈಗಾಗ್ಲೇ ಟಾಪ್ ಗಿಯರಲ್ಲಿದ್ದೀವಿ" ಅಂತಲೂ ಕೆಲವರು ಹೇಳಬಹುದು.  ಅದೆಲ್ಲಾ ನಿಜ. ದಿನವೂ ನೋಡ್ತೀರಿ. ಮೆಸೇಜೂ ಕಳಿಸ್ತೀರಿ. ಫೋನ್‌ನಲ್ಲಿ ಗಂಟೆಗಟ್ಟಲೇ ಮಾತೂ ಆಡ್ತೀರಿ. ಎದುರು ಸಿಕ್ರೆ ದಿನವೆಲ್ಲಾ ಹರಟೆ ಹೊಡಿತೀರಿ. ಎಲ್ಲಾ ನಿಜ... ಆದರೂ ನಿಮ್ಮ ಅಂತರಂಗದ ಪ್ರೇಮದ ತುಡಿತವನ್ನು ಎಂದಾದರೂ ಅವಳೆದುರು ಬಿಚ್ಚಿಟ್ಟಿದ್ದೀರಾ? ಬದಲಿಗೆ ನೀವೇ ನೋಡಿಕೊಂಡಿದ್ದೀರಾ? ದ

ನಿತೀಶ್‌ರನ್ನು ನಿರ್ಲಕ್ಷಿಸಬೇಡಿ !

ಫೇಸ್‌ಬುಕ್‌ ತುಂಬಾ ಮೋದಿ ರಾರಾಜಿಸುತ್ತಿದ್ದಾರೆ. ಅವರೊಬ್ಬ ಧೀಮಂತ ನಾಯಕ, ಅಭಿವೃದ್ದಿಯ ಹರಿಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಬಗ್ಗೆ ನನ್ನ ಅಪಸ್ವರವೂ ಇಲ್ಲ. ಆದರೆ ಹೇಗಿದ್ದ ಬಿಹಾರವನ್ನು ಐದು ವರ್ಷದೊಳಗೆ ಇಂದು ಗುಜರಾಥಿಗೆ ಸೆಡ್ಡು ಹೊಡೆವಂತೆ ಮಾಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ‍್ ಸಹ ಸಾಧಾರಣ ವ್ಯಕ್ತಿಯಲ್ಲ. ಆದರೆ ಇದುವರೆಗೂ ಯಾರೂ ನಿತೀಶ್ ಬಗ್ಗೆಯಾಗಲೀ ಅವರ ಸಾಧನೆ ಬಗ್ಗೆಯಾಗಲೀ ಒಂದೇ ಒಂದು ಫೋಟೋವನ್ನೂ ಷೇರ‍್ ಮಾಡಿದ್ದನ್ನು ನಾನು ಕಂಡಿಲ್ಲ. ಯಾಕೆ ಹೀಗೆ ? ಭಾರತೀಯರಿಗೆ ಒಬ್ಬ ಪ್ರಾಮಾಣಿಕ, ಅಭಿವೃದ್ಧಿಶೀಲ ಮನಸ್ಸಿನ ವ್ಯಕ್ತಿಯನ್ನು ಮೆಚ್ಚಲಿಕ್ಕೂ ಸಂಕೋಚ, ಸಂಕುಚಿತ ಮನೋಭಾವವೇ ? ಅಥವಾ ನಿತೀಶ್ ರನ್ನು ಮೆಚ್ಚಿದರೆ ಎಲ್ಲಿ ಅವರು ಪ್ರಧಾನಿ ಗಾಧಿಗೆ ಮೋದಿಗೆ ಪೈಪೋಟಿ ಆಗಿ ಬಿಡುತ್ತಾರೋ ಎಂಬ ಭಯ ಜನಸಾಮಾನ್ಯರಿಗೂ ಇದೆಯೇ ? ಕರ್ನಾಟಕದ ರಾಜಕಾರಣಿಗಳನ್ನು ಕಂಡು ರೋಸಿ ಹೋದ ನಮಗೆ ದೂರದ ಈ ಇಬ್ಬರೂ ಆದರ್ಶಪ್ರಾಯವಾದಲ್ಲಿ ತಪ್ಪೇನಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡಕ್ಕೂ ಸೇರದ ನಿತೀಶ್‌ರನ್ನು ಈ ರೀತಿ ನಿರ್ಲಕ್ಷಿಸುವುದೂ ಸರಿಯಲ್ಲ. ಏಕೆಂದರೆ ಭಾರತದಲ್ಲಿ ಉತ್ತಮ ರಾಜಕಾರಣಿಗಳಿಗೆ ಬರ!

ಹಾದಿ ತಪ್ಪಿದ ಹೋರಾಟ !

ಕೊನೆಗೂ ನಮ್ಮ ಕಣ್ಣೆದುರೇ ನಡೆದ ಒಂದು ಭೃಹತ್ ಚಳವಳಿ ನೋಡ ನೋಡುತ್ತಲೇ ಮಣ್ಣು ಪಾಲಾಗಿದೆ. ಗಾಂಧಿಯನ್ನು ನಾವ್ಯಾರೂ ನೋಡಿಲ್ಲ. ಆದರೆ ಅವರ ಅಪರಾವತಾರದಂತೆ ಬಂದ ಅಣ್ಣ ನಮ್ಮೆಲ್ಲರ ಕಣ್ಮಣಿಯಾದುದು ನಿಜ. ಹತ್ತಾರು ವರ್ಷಗಳ ಅಣ್ಣ ಹೋರಾಟ ಒಂದು ಅಂತಿಮ ಘಟ್ಟಕ್ಕೆ ಬಂದುದು ಜನಲೋಕಪಾಲ ಹೋರಾಟದಿಂದ. ಇದರಿಮದಾಗಿ ಅವರು ದೇಶಾಧ್ಯಂತ ಪ್ರಖ್ಯಾತರಾದರು. ಹಾಗೆಯೇ ಜನರ ಒಲವನ್ನೂ ಗಳಿಸಿ ಹೋರಾಟವು ಅತ್ಯಂತ ಯಶಸ್ವಿಯಾಗುವಂತೆ ಮಾಡಿದರು. ಆದರೆ ಅದಕ್ಕೆ ಬಾಗಿದಂತೆ ನಾಟಕವಾಡಿದ ಕಳ್ಳ ಕಾಂಗ್ರೆಸಿಗರು ಪೊಳ್ಳು ಲೋಕಪಾಲವನ್ನೇ ಲೋಕಸಭೆಯಲ್ಲಿ ಮಂಡನೆ ಮಾಡಿತು. ತಾನೇನೋ ಸಂಪನ್ನ ಎಂದು ಬೊಗಳೆ ಬಿಡುವ ಬಿಜೆಪಿ ಸಹ ಅಣ್ಣಾ ಬೆಂಬಲಕ್ಕೆ ನಿಲ್ಲಲಿಲ್ಲ. ಅದರೊಳಗೇ ಹತ್ತಾರು ಹುಳುಕು. ಆದರೂ ಅಣ್ಣಾ ಹೋರಾಟ ಒಂದು ಕ್ರಾಂತಿ ಗೀತೆಯಾಗಿ ಮುಂದುವರಿಯುತ್ತಲೇ ಇತ್ತು. ಅಣ್ಣಾಗೆ ಜೊತೆಯಾಗಿ ನಮ್ಮ ಸಂತೋಷ್ ಹೆಗಡೆ, ಕೇಜ್ರೀವಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್ ಮತ್ತವರ ಮಗ - ಹೀಗೆ ಒಂದು ಪ್ರಾಮಾನಿಕರ ಪಡೆಯೇ ಇತ್ತು. ಆದರೆ ಅದೆಲ್ಲವೂ ಕೇವಲ ಒಂದು ವರ್ಷದ ಅವಧಿಯಲ್ಲಿ ಗಾಳಿಯಲ್ಲಿ ಕರಗಿದ ಕರ್ಪೂರದಂತೆ ನಿಧಾನವಾಗಿ ಮರೆಯಾಗುತ್ತಿದೆ. ಒಂದು ಸಮಯ ಸರ್ಕಾರವನ್ನೇ ನಡುಗಿಸಿದ ಈ ಹೋರಾಟ ನೋಡ ನೋಡುತ್ತಲೇ ಧರಾಶಾಯಿಯಾದುದು ಈ ದೇಶದ ದುರಂತ. ಆದರೆ ಇದು ಅಣ್ಣಾ ಮತ್ತವರ ಸಂಗಡಿಗರು ಮಾಡಿದ ಸ್ವಯಂಕೃತಪರಾಧವಲ್ಲದೇ ಬೇರೇನೂ ಅಲ್ಲ. ಬರೀ ಭ್ರಷ್ಟರಿಂದಲೇ ತುಂಬಿರುವ ಇಂದಿನ ರಾಜಕಾರಣದ

ಕಾರ್ಗಿಲ್ ಕಥೆ : ಸೈನಿಕನೆಂದರೆ

"ನಿನಗೇನಾದರೂ ಪೆಟ್ಟಾಯಿತೆ?" ಎಂದು ಕೇಳಿದನು ಮಹರ್ಷಿ. ನಾನು ನನ್ನ ಕೈ ಮೈಯನ್ನು ನೋಡಿಕೊಂಡೆ. ಮುಂಗೈಗೆ ಒಂದು ಮೊನಚು ಕಲ್ಲು ಹೊಡೆದು ಅರ್ಧ ಇಂಚಿನಷ್ಟು ಅಳಕ್ಕೆ ಗಾಯವಾಗಿತ್ತು. ರಕ್ತದ ಹನಿಗಳು ಪಟಪಟನೆ ಸುರಿಯುತ್ತಿದ್ದವು. ಅದನ್ನು ಕಂಡ ಅವನು  ತನ್ನಲ್ಲಿದ್ದ ಹತ್ತಿಯನ್ನು ಗಾಯದ ಮೇಲಿಟ್ಟು ಕರವಸ್ತ್ರದಿಂದ ಗಟ್ಟಿಯಾಗಿ ಕಟ್ಟು ಹಾಕಿದನು. ಮತ್ತೆ ನಮ್ಮ ನಮ್ಮ ಬಂದೂಕುಗಳನ್ನು ಎತ್ತಿಕೊಂಡೆವು! ಶತ್ರು ಪಡೆಗಳ ಸೆಲ್‌ಗಳೂ ಅವರ ಗನ್‌ಗಳ ಗುಂಡುಗಳೂ ಅಲ್ಲಲ್ಲಿ ಬಿದ್ದು ಸಿಡಿಯುತ್ತಿದ್ದವು. ನಾವಿಬ್ಬರೂ ಈಗ ಆ ದೊಡ್ಡ ಬಂಡೆಯ ಹಿಂದೆ ರಕ್ಷಣೆ ಪಡೆದಿದ್ದೆವು. ಮತ್ತೆ ಕೇಳಿದನು ಮಹರ್ಷಿ...... ``ಈಗೇನು ಮಾಡೋಣ?" ``ಇರು... ನಮ್ಮವರು ಬಂದು ನಮ್ಮನ್ನು ಸೇರಿಕೊಳ್ಳಲಿ. ಇದೀಗ ನಾವು ಆಯಕಟ್ಟಿನ ಸ್ಥಳಕ್ಕೆ ಬಂದಾಗಿದೆ... ಇನ್ನೇನಿದ್ದರೂ ಮುಖಾಮುಖಿ" ಎಂದೆ. ``ಇದು ನಮಗೆ ಎಷ್ಟನೇ ಮುಖಾಮುಖಿ? ಅವನ ಬೆನ್ನು ತಟ್ಟಿ ಹೇಳಿದೆ ``ಮೂರನೆಯದು" ``ಈ ಕುನ್ನಿಗಳಿಂದ ನಮ್ಮನ್ನೇನು ಮಾಡಲು ಸಾಧ್ಯವಿಲ್ಲ ಅಲ್ಲವಾ?" ಎನ್ನುತ್ತ ಅವನು ನನ್ನ ಕೈ ಕುಲಕಿದ್ದನು. ಆದರೆ ನನ್ನ ಮನಸ್ಸು ಮಾತ್ರ ಹಿಂದೆ ಓಡುತ್ತಿತ್ತು. *  *  *  ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ನಮಗೆ ಊರಿನ ಜನರಲ್ಲಿ ಗೆಳೆಯರು ಎಂಬುದಕ್ಕಿಂತ ಅಣ್ಣ ತಮ್ಮಂದಿರೆಂಬ ಪರ್ಯಾಯ ಸಂಬಂಧವಿತ್ತು. ``ಮನು ಮಹರ್ಷಿಯರು ಅಗಲಿದ್ದುದನ್ನು ನಾವೆಂದೂ ನೋಡೇ ಇಲ್ಲ" ಎಂದು ಊರ ಜ

ಮೂಢನಂಬಿಕೆ ಬಿತ್ತುವ ಮಾಧ್ಯಗಳು !

ಯಾವ ಟಿವಿ ವಾಹಿನಿ ನೋಡಿದರೂ ಅಲ್ಲೊಬ್ಬ ನಕಲಿ ಜ್ಯೋತಿಷಿ ಕುಳಿತು ಏನೇನೋ ಪುರಾನ ಹೇಳುತ್ತಿರುತ್ತಾನೆ. ಭಾನುವಾರವಂತೂ ಒಂದೊಂದು ವಾಹಿನಿಯಲ್ಲಿ ಒಬ್ಬೊಬ್ಬರು ತಪ್ಪದೇ ಹಾಜರಾಗುತ್ತಾರೆ. ಒಬ್ಬೊಬ್ಬರದೂ ಒಂದೊಂದು ಆಕಾರ, ವಿಚಾರ. ಒಬ್ಬ ದಢೂತಿಯಾದರೆ ಇನ್ನೊಬ್ಬ ಬಡಕಲು. ಆದರೆ ಇವರೆಲ್ಲರ ಅಜೆಂಡಾ ಮಾತ್ರ ಹಣ ಸಂಪಾದಿಸುವುದು. ಇವರ ಭೇಟಿಗೂ ತಿಂಗಳುಗಟ್ಟಲೇ ಕಾಯಬೇಕಂತೆ... ಅಪಾಯಿಂಟ್‌ ತೆಗೆದುಕೊಂಡು !  ಒಬ್ಬ ಜ್ಯೋತಿಷಿ ಒಂದು ರಾಶಿಯವರಿಗೆ ಈ ವಾರ ಒಳ್ಳೆಯದಾಗುತ್ತೆ ಅಂದರೆ ಇನ್ನೊಬ್ಬ ಅದೇ ರಾಶಿಯವರಿಗೆ "ಈ ವಾರ ಸರಿ ಇಲ್ಲ, ಹುಶಾರಾಗಿರಿ, ಪ್ರಾಣವೇ ಹೋದರೂ ಹೋಗಬಹುದು!" ಎಂದು ಭಯ ಹುಟ್ಟಿಸುತ್ತಾನೆ. ಈ ಜ್ಯೋತಿಷಿಗಳೆಲ್ಲಾ ನಿಜ ಹೇಳುವುದಾದರೆ ಎಲ್ಲರೂ ಒಂದೇ ರೀತಿ ಹೇಳಬೇಕಲ್ಲ ಎಂಬ ಕನಿಷ್ಟ ಜ್ಞಾನ ಜನರಲ್ಲೂ ಇಲ್ಲ. ಮೊದಲನೆಯದಾಗಿ ಜನರು ಯಾವುದಾದರೊಂದು ವಾಹಿನಿಯ ಒಬ್ಬ ಜ್ಯೋತಿಷಿಯನ್ನು ನಂಬಿದರೆ ಮುಗಿಯಿತು. ಅವನು ಹೇಳಿದ್ದು ವೇದವಾಕ್ಯ. ಬೇರೆ ವಾಹಿನಿಯವ ಹೇಳೋದೆಲ್ಲಾ ಬೊಗಳೆ. ಸ್ವಲ್ಪ ದಿನದಲ್ಲಿ ಈತನ ಅಸಲಿಯತ್ತೂ ತಿಳಿಯಿತೆಂದರೆ ಮತ್ತೊಂದು ವಾಹಿನಿಯ ಮತ್ತೊಬ್ಬ ಸುಳ್ಳುಬಾಕನ ಮಾತಿಗೆ ಕಿವಿಯೊಡ್ಡಿ ಕುಳಿತುಬಿಡುತ್ತಾರೆ. ಹೀಗಾಗಿ ಈ ವಾಹಿನಿಗಳಿಗೂ, ಸುಳ್ಳು ವಾಜ್ಮಯಿಗಳಿಗೂ ಒಳ್ಳೆಯ ಬೇಡಿಕೆ.  ಇಲ್ಲ ಸಲ್ಲದ ಕಂತೆ ಪುರಾಣ ಹೇಳಿ ನೆಮ್ಮದಿಯಾಗಿದ್ದವರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಇವರು ಹೇಳುವ ಯಾವ ಭವಿಷ್ಯಕ್ಕೆ ಏನು ಪುರಾವೆ ಒದಗಿ

ದೇವರ ಹೆಸರಲ್ಲಿ ಮೆರೆಯುತ್ತಿರುವವರಿಗೆ ದುಗುಡ ತಂದಿಟ್ಟ ’ದೇವಕಣ’!

ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ' ದೇವಕಣ ' ಪದ ಕಾಲಾನುಕಾಲದಿಂದ 'ದೇವರ' ಹೆಸರಲ್ಲೇ ಮೋಸ, ವಂಚನೆ, ಭಯೋತ್ಪಾಧನೆಗಳೆಲ್ಲವನ್ನೂ ಮಾಡುತ್ತಾ ಬಂದವರಿಗೆಲ್ಲಾ ದುಗುಡ ತಂದಿಟ್ಟಿದೆ. ದೇವರು ಎಂಬ ನಂಬಿಕೆ ಎಷ್ಟೆಲ್ಲಾ ಒಳ್ಳೆಯದನ್ನು ಮಾಡಿದೆಯೋ ಅಷ್ಟೇ ಅನಾಹುತಗಳನ್ನು ಮಾಡಿರುವುದೂ ಸತ್ಯ. ವೈಕ್ತಿಕವಾಗಿ ವ್ಯಕ್ತಿಯೊಬ್ಬ ದೇವರ ಅಸ್ಥಿತ್ವವನ್ನು ನಂಬುವುದರಿಂದ ಸಮಾಜಕ್ಕೆ ಯಾವ ಅಪಾಯವೂ ಇಲ್ಲ. ಅಪಾಯವಿರುವುದು ಆ ನಂಬಿಕೆ ಸಾಮೂಹಿಕವಾಗಿ ಪ್ರಕಟಗೊಳ್ಳುವಾಗ. ಇದರಿಂದಾಗಿಯೇ ದೇವರ ಹೆಸರಲ್ಲೇ ಧರ್ಮಗಳೂ ಹುಟ್ಟಿಕೊಂಡಿರುವುದು. ಇದರ ಅಪಾಯವನ್ನು ಕಂಡೇ ಕುವೆಂಪುರವರು "ಜಗತ್ತಿನ ಎಲ್ಲರಿಗೂ ಧರ್ಮ ಬೇಕು, ಆದರೆ ಅದು ವೈಯಕ್ತಿಕವಾಗಿರಬೇಕು. ಅಂದರೆ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಧರ್ಮಗಳಿರಬೇಕು. ಯಾವಾಗ ಜನ ಧರ್ಮದ ಹೆಸರಲ್ಲಿ ಗುಂಪು ಕಟ್ಟುತ್ತಾರೋ ಆಗ ಅನಾಹುತವಾಗುತ್ತದೆ" ಎಂದಿದ್ದರು. ಅದೇ ರೀತಿ ಸ್ವಾಮಿ ವಿವೇಕಾನಂದರು "ಧರ್ಮ ಪುಸ್ತಕಗಳಲ್ಲಾಗಲೀ, ದೇವಸ್ಥಾನಗಳಲ್ಲಾಗಲೀ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಈ ಕೋಮು ಗಲಭೆ, ಧಾರ್ಮಿಕ ಭೇದ ಭಾವನೆಗಳೆಲ್ಲ ಹೊರಟು ಹೋಗುವವು. ಧರ್ಮವೆಂದರೆ ಪ್ರತ್ಯಕ್ಷಾನುಭವ. ದೇವರ ಮತ್ತು ಆತ್ಮನ ಪ್ರತ್ಯಕ್ಷ ದರ್ಶನವನ್ನು ಪಡೆದವನು ಮಾತ್ರ ಧರ್ಮವನ್ನು ಹೊಂದಿರುವನು." ಎಂದು ಎಚ್ಚರಿಸಿದ್ದರು. ಸರಿಯಾಗಿ ವಿವೇಚಿಸಿದರೆ ದೇವರಿಗೂ ಧರ್ಮಕ್ಕೂ ಸಂಬ

ವಿಶ್ವ ಪಾರಂಪರಿಕ ಪಟ್ಟಿಗೂ ಬಿಜೆಪಿ ಕೊಕ್ಕೆ !

ದೇಶದ ವನ್ಯ ಸಂಪತ್ತು ಹೇರಳವಾಗಿರುವ ಪಶ್ಚಿಮ ಘಟ್ಟ ನಮ್ಮ ರಾಜ್ಯದಲ್ಲಿ ಹಾದು ಹೋಗಿದೆ. ಇದು ನಮಗೆಲ್ಲಾ ಹೆಮ್ಮೆ ಪಡುವ ವಿಷಯ. ಇದು ಕೇಂದ್ರ ಸರ್ಕಾರದ ಪ್ರಯತ್ನದಿಂದ ಅಂತೂ ವಿಶ್ವ ಪಾರಂಪರಿಕ ಪಟ್ಟಿಗೆ ಈ ವರ್ಷ ಸೇರಿದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಅದಕ್ಕೂ ಕೊಕ್ಕೆ ಹಾಕುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.  ಎಲ್ಲರಿಗೂ ತಿಳಿದಿರುವಂತೆ ವಿಶ್ವ ಪರಂಪರಿಕ ಪಟ್ಟಿಗೆ (ಯುನೆಸ್ಕೋ ನಿರ್ಧಾರ) ಸೇರಿಸುವುದು ಸುಲಭದ ಮಾತೇನಲ್ಲ. ಈ ಹಿಂದೆ ಹಂಪಿಯನ್ನು ಈ ಪಟ್ಟಿಗೆ ಸೇರಿಸಲು ಸಹ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹರ ಸಾಹಸ ಮಾಡಿದ್ದವು. ಆದರೆ ಈ ಬಾರಿ  ಅಪಾರ ವನ್ಯ ಸಂಪತ್ತು ಮತ್ತು ಜೀವರಾಶಿ ಹೊಂದಿರುವ ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದ್ದಾಗ್ಯೂ ಸಹ ರಾಜ್ಯದ ಮಂತ್ರಿಗಳು (ಮುಖ್ಯಮಂತ್ರಿ ಸದಾನಂದಗೌಡ ಸೇರಿ) ಇದನ್ನು ವಿರೋಧಿಸಿರುವುದು ದುರ್ದೈವದ ವಿಚಾರ. ಇವರು ನೀಡುತ್ತಿರುವ ಕಾರಣ ವಿಚಿತ್ರವಾಗಿದೆ. "ಅಲ್ಲಿ ಅಭಿವೃದ್ಧಿ ಮಾಡಲು ತೊಂದರೆ ಆಗುತ್ತೆ" ಇದಕ್ಕೆ ಏನು ಹೇಳುತ್ತೀರಿ.  ಇವರ ಸರ್ಕಾರದ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷದಿಂದಲು ನೋಡುತ್ತಲೇ ಇದ್ದೇವೆ. ಬೆಂಗಳೂರಿನಂತಾ ನಗರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಡಾಂಬರು ಹಾಕಿದರೆ ಹಳ್ಳಿಗಳ ಕಡೆ ನಾಲ್ಕು ವರ್ಷಕ್ಕೆ ಒಮ್ಮೆಯೂ ರಸ್ತೆ ಸುಧಾರಣೆ ನಡೆಯುವುದಿಲ್ಲ. ಕೆಲವು ಫುಟ್‌ಪಾತ್‌ಗಳು ಫಳಫಳ ಹೊಳೆದರೆ ಕೆಲವು ಬಾಯಿ ತೆರೆದುಕ

ಕನ್ನಡದ WRONG TURN - ದಂಡುಪಾಳ್ಯ

ದಂಡುಪಾಳ್ಯದಲ್ಲಿ ನಟಿಸಿರುವ ಕರಿಸುಬ್ಬು ಅವರು ನನಗೆ ಪರಿಚಯವಿದ್ದುದರಿಂದ ಈ ಚಿತ್ರವನ್ನು ನೋಡಿದೆ. ನಾನು ನೋಡಿದ ಅತ್ಯಂತ ಕ್ರೂರ ದೃಶ್ಯಗಳ ಚಿತ್ರ ಇಂಗ್ಲೀಷ್‌ನ "ರಾಂಗ್ ಟರ್ನ್‌". ಅದರ ನಂತರದ ಸ್ಥಾನ ಮೊನ್ನೆ ಬಿಡುಗಡೆಯಾದ "ದಂಡುಪಾಳ್ಯ"ಕ್ಕೆ ಸಲ್ಲುತ್ತದೆ. ಆದರೆ ಮೊದಲಿನದು (ಬಹುಶಃ) ಕಾಲ್ಪನಿಕ ಕಥೆಯಾದರೆ ಎರಡನೆಯದು ಸತ್ಯಕಥೆ. ಹಾಗಾಗಿಯೇ ಇದು ಹೆಚ್ಚು ಮನವನ್ನು ಕಲಕುತ್ತದೆ, ಕುಲುಕುತ್ತದೆ. "ಇಂತಹ ಸಮಾಜ ಘಾತುಕರ ಚಿತ್ರಗಳು ಬೇಕಾ?" ಎಂದು ಕೇಳುವವರಿಗೆ ಚಿತ್ರದ ಮೂಲಕವೇ ನಿರ್ದೇಶಕ ಶ್ರೀನಿವಾಸ ರಾಜು ಉತ್ತರ ಹೇಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಬಂದ ನೂರಾರು ರೌಡಿಯಿಸಂ ಚಿತ್ರಗಳಲ್ಲಿ ಓಂ, ಕರಿಯ, ಜೋಗಿ ಮುಂತಾದ ಬೆರಳೆಣಿಕೆಯ ಚಿತ್ರಗಳನ್ನುಳಿದು ಯಾವುದರಲ್ಲಿಯೂ ಒಂದು ಸಂದೇಶವಿಲ್ಲ. ಅಂತಹ ಚಿತ್ರಗಳ ಸಾಲಿಗೆ ಸೇರದಂತೆ ಕರಾರುವಾಕ್ ಆಗಿ ನೋಡಿಕೊಂಡಿದ್ದಾರೆ ಶ್ರೀನಿವಾಸರಾಜು.  ಚಿತ್ರದಲ್ಲಿ ಕೊಲೆ ಮತ್ತು ಅತ್ಯಾಚಾರದ ಸಾಲು ಸಾಲು ದೃಶ್ಯಗಳಿವೆ. ಆದರೆ ಯಾವುದನ್ನೂ ವಿನಾಕಾರಣ ತುರುಕಿಲ್ಲ. ಅಸಹ್ಯಗೊಲಿಸಿಲ್ಲ. ಬದಲಿಗೆ ಪ್ರತಿ ಕೊಲೆ, ಅತ್ಯಾಚಾರದ ದೃಶ್ಯವನ್ನು ನೋಡುವಾಗಲೂ ಸಹ ಅದು ನಿಜವಾಗಿ ನಡೆದ ಒಂದು ಹೇಯ, ಕ್ರೂರ ಕೃತ್ಯ ಎಂದು ಮನಸ್ಸಿಗೆ ನಾಟುವಂತೆ ನಮ್ಮನ್ನು ತಿವಿಯುವಲ್ಲಿ ನಿರ್ದೇಶಕರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ವೆಂಕಟ್‌ಪ್ರಸಾದ್ ಸಹ ಕೈ ಜೋ

ಭಾರತದಲ್ಲೂ ಆಗಲಿ ಸೇನಾ ದಂಗೆ !

ಹೌದು ಕಡ್ಡಾಯವಾಗಿ ಭಾರತವೊಮ್ಮೆ ಈ ಹಾಳು ರಾಜಕಾರಣಿಗಳಿಂದ ಮುಕ್ತಿ ಪಡೆಯಲೇ ಬೇಕಾಗಿದೆ. ಈ ಭ್ರಷ್ಟ ಕಾಂಗ್ರೆಸ್, ಬಿಜೆಪಿ, ಜೆಡಿಎಸ್... ಯಾರೂ ಶುದ್ಧರಂತಿರಲಿ, ಯೋಗ್ಯರೇ ಅಲ್ಲ. ಇವರ ಕೈಗೆ ದೇಶ ಸಿಕ್ಕಿ ನಲುಗಿ ಹೋಗುತ್ತಿದೆ. ನಮ್ಮ ಸೇನಾಧಿಕಾರಿಗಳು ಅತಿ ಬೇಗನೆ ಮನಸ್ಸು ಮಾಡಲೇ ಬೇಕು. ಸೇನಾ ದಂಗೆಯ ಮೂಲಕ ಭಾರತವನ್ನು ವಶಪಡಿಸಿಕೊಂಡು ಕನಿಷ್ಟ ಹತ್ತು ವರ್ಷವಾದರೂ ಅವರು ಮುನ್ನಡೆಸಬೇಕು. ಇಲ್ಲವೆಂದರೆವೆಂದರೆ ನಮ್ಮ ದೇಶ ಅಧೋಗತಿಯಾಗುವುದು ಸತ್ಯ. ಈ ದೇಶಕ್ಕೆ ಈ ರಾಜಕಾರಣಿಗಳಿಂದ ಭವಿಷ್ಯ ಇಲ್ಲ. ಇವರ ಮೇಲಾಟ, ಅಧಿಕಾರ ಲಾಲಸೆ, ಲಂಚಗುಳಿತನ, ಭ್ರಷ್ಟಾಚಾರ ಎಲ್ಲವನ್ನೂ ಭಾರತ ಮಾತೆ ಸಹಿಸಲಾರಳು. ಹೀಗೇ ಬಿಟ್ಟರೆ ನಮ್ಮ ಸೈನಿಕರಿಗೂ ಇವರು ಸರಿಯಾದ ಶಸ್ತ್ರಾಸ್ತ್ರ ನೀಡದೇ ಅದರಲ್ಲೂ ಹಗರಣ ಮಾಡಿ ಕೊನೆಗೆ ಚೀನಾ ಅತವಾ ಪಾಕಿಸ್ತಾನ ದಂಡೆತ್ತಿ ಬಂದಾಗ ವಿನಾಕಾರಣ ನಮ್ಮ ಸೇನೆಯನ್ನೇ ಬಲಿ ಕೊಡಬೇಕಾಗುತ್ತದೆ.  ನಿಜ, ಸೇನಾ ಕಾರ್ಯಾಚರಣೆ ನಡೆದು ದೇಶವು ಸೇನೆಯ ತೆಕ್ಕೆಗೆ ಹೋದರೆ ಎಲ್ಲರಿಗೂ ತಾತ್ಕಾಲಿಕವಾಗಿ ಸಮಸ್ಯೆ, ಕಷ್ಟ ಎದುರಾಗಬಹುದು. ಆದರೆ ರಾಜಕಾರಣಿಗಳಿಗಿಂತಲೂ ಸೈನಿಕರು ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು. ( ಉದಾ : ಪಾಕಿಸ್ತಾನದಲ್ಲಿ ಫರವೇಜ್ ಮುಷರಫ್ ಆಡಳಿತದಲ್ಲಿ ಆ ದೇಶ ಸಾಕಷ್ಟು ಅಬಿವೃದ್ದಿಯನ್ನೇ ಹೊಂದಿತು. ಉಳಿದ ಪ್ರಧಾನಿಗಳಂತೆ ತನ್ನ ದೇಶಕ್ಕೇ ಹಾಳಂತೂ ಮಾಡಲಿಲ್ಲ ) ನಮ್ಮ ಸೇನಾಧಿಕಾರಿಗಳಲ್ಲಿ ಅದಕ್ಕಿಂತಲು ಪ್ರಾಮಾಣಿಕತನ, ವ್ಯವಹಾರ ಚ

ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?

ಎಲ್ಲರೂ ಒಮ್ಮೆ ಇಂದಿನ ಕನ್ನಡಪ್ರಭ (ಪುಟ-೭) ನೋಡಿ. ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಹೋರಾಟಕ್ಕೆ ಇಳಿದಿರುವ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿಯವರ ಸಂದರ್ಶನವಿದೆ. ಈ ಹೋರಾಟದ ನೇತೃತ್ವ ಇವರದ್ದೇ. ಅಂದರೆ ಉಳಿದ ಸಾಹಿತಿಗಳನ್ನು, ಕನ್ನಡ ಹೋರಾಟಗಾರರನ್ನು ಸೇರಿಸಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೋರಾಟಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಆಮರಾಣಾಂತ ಉಪವಾಸ ಮಾಡುತ್ತಾರಂತೆ! ಸರಿ ಇವರ ಕನ್ನಡ ಕಾಳಜಿ ಮತ್ತು ಹೋರಾಟವನ್ನು ಮೆಚ್ಚೋಣ. ಆದರೆ ಸಂದರ್ಶನದಲ್ಲಿ ಇವರೇ ಬಾಯಿ ಬಿಟ್ಟಿರುವಂತೆ ಇವರ ಇಬ್ಬರು ಮಕ್ಕಳು ಓದಿದ್ದು ಒಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ!! ಅದಕ್ಕೆ ಇವರು ನೀಡಿರುವ ಕಾರಣ "ನಗರದಲ್ಲಿ ಸುಸಜ್ಜಿತ ಕನ್ನಡ ಮಾಧ್ಯಮ ಶಾಲೆಗಳು ಇಲ್ಲದ್ದರಿಂದ ಹಾಗೆ ಮಾಡಬೇಕಾಯ್ತಂತೆ!" ಎಂಥಹಾ ಕುಚೋಧ್ಯ ನೋಡಿ. ಅಲ್ಲಾ, ಇವರು ಯಾರ ಕಿವಿ ಮೇಲೆ ಹೂವಿಡಲು ಹೊರಟಿದ್ದಾರೆ ? ನಗರದಲ್ಲಿ ಸುಸಜ್ಜಿತ ಕನ್ನಡ ಶಾಲೆ ಸಿಗಲಿಲ್ಲ ಅಂತ ಇವರು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರು. ಅಂದರೆ ಇವರ ಪ್ರಕಾರ ಹಳ್ಳಿಗಳ ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿವೆಯೇ ? ಇವರು ಯಾವುದಾದರೂ ಉತ್ತರ ಕರ್ನಾಟಕದ ಹಳ್ಳಿಯ ಶಾಲೆಯನ್ನು ನೋಡಿದ್ದಾರಾ ? ಇದನ್ನು ಯಾರೂ ಪ್ರಶ್ನಿಸಬಾರದಂತೆ. "ಸಾರ್ವತ್ರಿಕ ವಿಷಯವನ್ನು ಆ ರೀತಿ ವೈಯಕ್ತಿಕವಾಗಿ ನೋಡಬಾರದು" ಎಂಬ ಫಾರ್ಮಾನು ಬೇರೆ. ಇವರ ಮಕ್ಕಳದ್ದು ವೈ

ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?

ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗಳು ಹೇಳುತ್ತಿರುವ ಕಾರಣ "ಕನ್ನಡಕ್ಕೆ ಧಕ್ಕೆ!". ಇದನ್ನು ಸ್ವಲ್ಪ ವಿವೇಚಿಸೋಣ. ನಿಜ, ಕನ್ನಡಕ್ಕೆ ತೊಂದರೆ ಆಗಬಹುದು. ಆದರೆ ಸರ್ಕಾರ ಆಂಗ್ಲ ಮಾಧ್ಯಮ ತರಲು ಹೊರಟಿರುವುದು ಸರ್ಕಾರಿ ಶಾಲೆಗಳಲ್ಲಿ. ಅಂದರೆ ನಿಸ್ಸಂಶಯವಾಗಿ ಅಲ್ಲಿ ಓದುತ್ತಿರುವ ಮಕ್ಕಳು ( ಕನಿಷ್ಟ ೯೫% ) ಬಡ ಮಕ್ಕಳೇ ಹೊರತೂ ಶ್ರೀಮಂತರಲ್ಲ. ಇಂದು ಹಳ್ಳಿಯ ಅಲ್ಪಸ್ವಲ್ಪ ಹಣವಂತರೂ ಸಹ ತಮ್ಮ ಮಕ್ಕಳನ್ನು ಹತ್ತಿರದ ಪಟ್ಟಣದ ಆಂಗ್ಲ (ಖಾಸಗಿ) ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲದೇ ಅವು ಮುಚ್ಚಿಕೊಳ್ಳುತ್ತಿವೆ. ಅಂದರೆ ದುಡ್ಡಿರುವ ಮಕ್ಕಳು ಆಂಗ್ಲ ಕಲಿತು ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಕೆಲಸ ಹಿಡಿಯಲು ತಯಾರಾದರೆ ಬಡ ಮಕ್ಕಳು ಕನ್ನಡವನ್ನು ಮಾತ್ರ ಕಲಿತು ತೀರಾ ಕೆಳ ಮಟ್ಟದ ಕೆಲಸಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಏಕೆಂದರೆ ಬೆಂಗಳೂರಿನ ಚಿಕ್ಕದೊಂದು ರಿಯಲ್ ಎಸ್ಟೇಟ್ ಕಚೇರಿಗೆ ಸಹಾಯಕನಾಗಿ ಸೇರಲಿಕ್ಕೂ ಆಂಗ್ಲ ಬಂದರೆ ಹೆಚ್ಚು ಸಂಬಳ ಮತ್ತು ಅವಕಾಶವಿದೆ. ಅಷ್ಟೇಕೆ ಕೊನೆ ಪಕ್ಷ ದೊಡ್ಡದೊಂದ ಹೋಟೆಲಿನಲ್ಲಿ ಸರ್ವರ‍್ ಆಗಲಿಕ್ಕೂ ಆಂಗ್ಲ ಗೊತ್ತಿದ್ದರೆ ಸಂಬಳ ಜಾಸ್ತಿ ಸಿಗುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳ

ಕನ್ನಡದ ಪುಸ್ತಕಗಳು

ಕನ್ನಡದ ಪುಸ್ತಕಗಳ ಮಾಹಿತಿ ತಾಣ. ಇಲ್ಲಿ ಯಾರು ಬೇಕಾದರೂ ತಮ್ಮ ಪುಸ್ತಕಗಳನ್ನು ಪರಿಚಯಿಸಬಹುದು. http://kannadabooks.org/ ಉದ್ದೇಶ : ಇದು ಕನ್ನಡದ ಪ್ರಕಾಶಕರನ್ನು ಹಾಗೂ ಲೇಖಕರನ್ನು ಮತ್ತು ಓದುಗರನ್ನು ಆನ್‌ಲೈನ್ ಮೂಲಕ ಒಂದು ಮಾಡುವ ಪ್ರಯತ್ನ.   ದಿನನಿತ್ಯ ರಾಜ್ಯದ ಒಂದಿಲ್ಲೊಂದು ಕಡೆ ಕನ್ನಡದ ಪುಸ್ತಕಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಷ್ಟೋ ಜನ ಲೇಖಕ/ಪ್ರಕಾಶಕರು ತಮ್ಮ ಪುಸ್ತಕದ ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನೂ ಮಾಡುವುದಿಲ್ಲ. ಮಾಡಿದರೂ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಅಷ್ಟಕಷ್ಟೇ. ಹಿರಿಯ ಲೇಖಕರ ಪುಸ್ತಕವೊಂದು ಬಿಡುಗಡೆಗೂ ಮುನ್ನ ಸುದ್ದಿ ಮಾಡಿದರೆ, ಕಿರಿಯ ಲೇಖಕರ ಪುಸ್ತಕಗಳನ್ನು ಕೇಳುವವರೇ ಇಲ್ಲ. ಅವರ ಪುಸ್ತಕಗಳು ಚೆನ್ನಾಗಿದ್ದರೂ ಅದು ನಿಜವಾದ ಓದುಗರನ್ನು ತಲುಪುವಲ್ಲಿ ಸೋಲುತ್ತಿದೆ. ಇದಕ್ಕೆ ಕಾರಣ ಲೇಖಕ/ಪ್ರಕಾಶಕ ಮತ್ತು ಓದುಗರ ನಡುವಿನ ಸಂಪರ್ಕದ ಕೊರತೆಯೇ ಆಗಿದೆ.   ಓದುಗರು ಯಾವುದೋ ದೊಡ್ಡ ಪುಸ್ತಕ ಮಳಿಗೆಗೆ ಹೋಗಿ ಮೊದಲೇ ಕೇಳಿ ತಿಳಿದಿದ್ದ ಪುಸ್ತಕಗಳನ್ನೇ ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬೇರೆ ಲೇಖಕರ ಉತ್ತಮ ಪುಸ್ತಕಗಳ ಪರಿಚಯವೇ ಓದುಗರಿಗೆ ಆಗಿರುವುದಿಲ್ಲ. ಆದರೆ ಈ ತಾಣದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಲೇಖಕರು ಮತ್ತು ಪ್ರಕಾಶಕರು ತಮ್ಮ ಪುಸ್ತಕಗಳನ್ನು ನೇರವಾಗಿ ಇಲ್ಲಿ ಪರಿಚಯಿಸಿಕೊಳ್ಳಬಹುದು. ಈ ತಾನವನ್ನು ಜಾಲಾಡುವ ಓದುಗರಿಗೆ ಎಲ್ಲಾ ಪುಸ್ತ

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ನಮ್ಮೂರಾದ ಮುಂಗಳಿಮನೆಗೆ ಇರುವ ಹದಿನೈದು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕ

ಡಬ್ಬಿಂಗ್ ಬೇಕೇ ಬೇಡವೇ ?

"ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಡ" ಎಂದು ಶುರುವಾದ ಹೋರಾಟ ಹಲವು ವರ್ಷಗಳ ತರುವಾಯ ಇಂದು "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಎಂಬ ಹೋರಾಟವಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಕಾಲ ಬದಲಾಗಿದ್ದರೂ, ಹೋರಾಟಗಳ ದಿಕ್ಕೇ ಬದಲಾಗಿದ್ದರೂ, ಹೋರಾಟಗಾರರೂ ಬದಲಾಗಿದ್ದರೂ ಸಹ "ಕನ್ನಡದ ಉಳಿವು" ಎಂಬ ಪೆಡಂಭೂತ ಮಾತ್ರ ಹಾಗೆಯೇ ಉಳಿದುಕೊಂಡಿರುವುದು ದುರ್ದೈವವೇ ಸರಿ. ಆದರೆ ಹಿಂದಿನ ಹೋರಾಟಗಾರರಿಗೂ ಇಂದಿನ ಆನ್‌ಲೈನ್ (ಫೇಸ್‌ಬುಕ್, ಟ್ವಿಟರ‍್) ಹೋರಾಟಗಾರರಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ನಿಜಾವ ಕನ್ನಡಾಭಿಮಾನಿಗಳು ಮನಗಾಣಬೇಕು. ಈ ಆನ್‌ಲೈನ್ ( ಒನ್‌ಲೈನ್ ) ಹೋರಾಟಗಾರರು ಇಂದು "ಪರಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ" ಎಂದು ಹೇಳುತ್ತಿರುವುದೇನೋ ಸರಿ. ಆದರೆ ಅದರ ಹಿಂದೆ ನಿಜಕ್ಕೂ ಕನಡದ ಕಾಳಜಿ ಇದೆಯಾ ? ಎಂಬುದನ್ನು ಸ್ವಲ್ಪ ಪರಿಶೀಲಿಸಬೇಕಾಗಿದೆ. ಏಕೆಂದರೆ ನಾನು ಗಮನಿಸಿದಂತೆ ಇಂತಹ ಡಬ್ಬಿಂಗ್ ಪರವಾದಿಗಳಲ್ಲಿ ಶೇಕಡಾ ಹತ್ತರಷ್ಟು ಜನರೂ ಕನ್ನಡ ಲಿಪಿ ಬಳಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಉಳಿದಂತೆ ಕಂಗ್ಲಿಷ್ ಬಳಸುವವರೇ ಹೆಚ್ಚು. ಇನ್ನು ಕೆಲವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ (ಕಷ್ಟಪಟ್ಟು) ಹಾಕಿ, ಅಲ್ಲಿಗೆ ತಮ್ಮ ಕನ್ನಡ ಕೈಂಕರ್ಯ ಮುಗಿಯಿತೆಂದು ಭಾವಿಸಿ, ನಂತರ ಆಂಗ್ಲವೇ ದೇವರು ಎಂದು ಆಂಗ್ಲಕ್ಕೆ ಮೊರೆ

ಮಾಧ್ಯಮಗಳವರು ಮದ್ಯಮಗಳಾದಾಗ

ಮೊನ್ನೆ ಮೊನ್ನೆ ನೆಟ್‌ನಲ್ಲಿ ಇಂತಹುದೊಂದು ಚಿತ್ರ ದೊರೆಯಿತು. ಒಬ್ಬ ವ್ಯಕ್ತಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಿದಾಗ ಎಂತವರ ಕರುಳುದಾರೂ ಚುರ‍್ ಎನ್ನದಿರದು. ಆದರೆ ಈ ಚಿತ್ರವನ್ನು ನೋಡಿದಾಗ ಅದಕ್ಕಿಂತಲೂ ಮಿಗಿಲಾಗಿ ವೇದನೆ ಕಾಡದಿರದು. ಒಬ್ಬ ವ್ಯಕ್ತಿ ಹೊತ್ತಿ ಉರಿಯುತ್ತಿದ್ದರೂ ಸಹ ಈ ರೀತಿ ಅಮಾನವೀಯವಾಗಿ ಅವನನ್ನು ಫೋಟೋ, ವೀಡಿಯೋ ತೆಗೆದುಕೊಳ್ಳುತ್ತಿರುವ ಮಾಧ್ಯಮದ ಮಂದಿಗೆ ಏನೆಂದು ಹೇಳೋಣ ? ಮಾಧ್ಯಮಗಳವರು ಮದ್ಯಮಗಳಾದಾಗ ಇಂತಹ ಆಘಾತಕಾರಿ ಘಟನೆಗಳು ನಡೆದು ಹೋಗುತ್ತವೆ. ಆ ಚಿತ್ರವನ್ನು ಒಮ್ಮೆ ಕೂಲಂಕುಶವಾಗಿ ನೋಡಿ. ಆದರೆ ಅಲ್ಲಿರುವ ಅಷ್ಟೊಂದು ಮಂದಿ ಮಾಧ್ಯಮ ಮಿತ್ರರು ಒಟ್ಟಾಗಿ ಪ್ರಯತ್ನಿಸಿದ್ದರೆ ಬೇಗನೆ ಬೆಂಕಿ ಆರಿಸಲು ಸಾಧ್ಯವಿತ್ತು. ಅದು ನಮ್ಮ ದೇಶದ್ದಲ್ಲ. ಢಾಕಾದಲ್ಲಿ ನಡೆದ ಘಟನೆ ಅನ್ನುವುದೇನೋ ನಿಜ. ಆದರೆ ವೃತ್ತಿ ಮತ್ತು ಮಾನವೀಯತೆ ಎಲ್ಲಾ ಕಡೆಗು ಒಂದೇ ಅಲ್ಲವೇ ? ಇಂತಹ ಘಟನೆಗಳು ನಮ್ಮ ದೇಶದಲ್ಲೇನೂ ನಡೆಯುವುದೇ ಇಲ್ಲ ಎಂದಲ್ಲ. ಕಳೆದ ವರ್ಷ ತಮಿಳುನಾಡಿನಲ್ಲಿ ವಿದ್ವಂಸಕಾರಿಗಳ ದಾಳಿಗೆ ಸಿಲುಕಿ ಮಂತ್ರಿಗಳ ರಕ್ಷಣಾ ಪಡೆಯ ಸಬ್‌ಇನ್ಸ್‌ಪೆಕ್ಟರ‍್ ಓರ್ವರು ಮೂವರು ಮಂತ್ರಿಗಳ ಎದುರಲ್ಲೇ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟರು. ಅದನ್ನು ಟಿವಿ ವಾಹಿನಿಯವರು ಚಿತ್ರಿಸಿ (ಮಂತ್ರಿಗಳನ್ನೂ ತೋರಿಸುತ್ತಾ) ಜನರಿಗೆ ಹೇಳಿದ್ದು ಏನು ಗೊತ್ತೇ ? "ಮಂತ್ರಿಗಳ ಅಮಾನವೀಯತೆಯಿಂದ ಸಬ

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ   ಸಮ್ಮೋಹನ ಅಂದರೇನು ? ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು. ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ