ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

January, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪತ್ತೇದಾರಿ ಕಥೆ ಬರೆವ ರಹಸ್ಯ

ಪ್ರಾರಂಭ ಹೇಗಿರಬೇಕು ?
ಸಾಧಾರಣ, ಸಾಮಾಜಿಕ ಕಥೆ ಬರೆಯುವುದು ಸುಲಭ. ಆದರೆ ಒಂದು ಪತ್ತೇದಾರಿ ಕಥೆ ಬರೆಯುವುದು ತುಂಬಾ ಕಷ್ಟ. ಸಾಮಾಜಿಕ ಕಥೆ ಬರೆಯಲು ನೂರಾರು ವಿಷಯಗಳು ಸಿಗುತ್ತವೆ. ಅವುಗಳನ್ನು ಎಲ್ಲಿಂದ ಹೇಗೆ ಬೇಕಾದರೂ ಪ್ರಾರಂಭಿಸಬಹುದು. ಹೇಗೆ ಬೇಕಾದರೂ ಮುಕ್ತಾಯ ಮಾಡಬಹುದು. ಇಂತದ್ದೇ ಅನ್ನುವಂತಹ ಅಂತ್ಯ ಕಾಣಿಸುವ ಅಗತ್ಯ ಇರುವುದಿಲ್ಲ. ಮೇಲಾಗಿ ಬರವಣಿಗೆಯ ಶೈಲಿ ಅಷ್ಟೇನೂ ಉತ್ತಮವಾಗಿರದಿದ್ದರೂ ನಡೆದೀತು, ಒಂದು ಉತ್ತಮ ವಿಷಯವನ್ನಿಟ್ಟುಕೊಂಡು ಕಥೆ ಬರೆದು ಬಿಡಬಹುದು. ಆದರೆ ಪತ್ತೇದಾರಿ ಕಥೆಗೆ ಹಾಗಲ್ಲ. ಹೇಗಾದರೂ ಬರೆದರಾದೀತು ಅನ್ನುವಂತಿಲ್ಲ. ಮೊದಲ ಪ್ಯಾರಾದಿಂದಲೇ ಓದುಗರನ್ನು ಹಿಡಿದಿಡುವ ಕುಶಲತೆ ನಮಗಿರಬೇಕು.
ಉದಾ : ವಿಶಾಲವಾದ ಸ್ನಾನಗೃಹದ ಬಕೇಟಿನಲ್ಲಿದ್ದ ಬಿಸಿ ನೀರಿನಿಂದ ಎದ್ದ ಹಬೆ ಆ ಸ್ನಾನದ ಕೋಣೆಯನ್ನು ಪೂರ್ತಿಯಾಗಿ ಮಂಜಿನಂತೆ ಆವರಿಸುತ್ತಿತ್ತು. ಎದುರಿನ ಗೋಡೆಯಲ್ಲಿದ್ದ ನಿಲುವುಗನ್ನಡಿಯ ಮೇಲೆ ಮಂದ್ರವಾಗಿ ಹಬೆ ಅಂಟಿಕೊಂಡು ಸ್ನಾನಕ್ಕಿಳಿದಿದ್ದ ನಿತ್ಯಾಳ ಸುಂದರವಾದ ನಗ್ನ ದೇಹಕ್ಕೆ ತಾನೇ ಉಡುಗೆಯಾದಂತೆ ಭಾಸವಾಗುತ್ತಿತ್ತು. ಇದ್ಯಾವುದರ ಅರಿವೇ ಇಲ್ಲದ ಹದಿನೆಂಟರ ತರುಣಿ ನಿತ್ಯಾ ತನ್ನಷ್ಟಕ್ಕೆ ತಾನು ಸ್ನಾನ ಮುಗಿಸಿ ಆ ಕನ್ನಡಿಯಿಂದ ಎರಡಡಿ ದೂರ ನಿಂತು ಅದರಲ್ಲಿ ಮಂಜು ಮಂಜಾಗಿ ಗೋಚರಿಸುತ್ತಿದ್ದ ತನ್ನ ನಗ್ನ ಪ್ರತಿಬಿಂಬವನ್ನೇ ನೋಡುತ್ತಾ ಮೈ ಒರೆಸಿಕೊಳ್ಳತೊಡಗಿದಳು. ತನ್ನ ಸೌಂದರ್ಯವನ್ನು ತಾನೇ ಸವಿಯಲೋ, ಅಥವಾ ಮೊದಲೇ ಚಂದಿ…

ಮೂರ್ಛೆ ರೋಗದ ಬಾಲಚಂದ್ರನನ್ನು ಮರ ಹತ್ತಿಸುತ್ತಿದ್ದುದು !

ನಾವು ಏಳನೇ ತರಗತಿಯಲ್ಲಿ ಓದುವಾಗ ನಮ್ಮ ತರಗತಿಯಲ್ಲಿ ಸರಿಯಾಗಿ ಏಳು ವಿದ್ಯಾರ್ಥಿಗಳಿದ್ದೆವು. ಐದು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳು. ನಾವು ಐದು ಜನರೂ ಬಹಳಾ ಒಗ್ಗಟ್ಟಾಗಿ ಇದ್ದು ನಮಗಿಂತಾ ಕಿರಿಯ ಹುಡುಗರನ್ನು ಚೆನ್ನಾಗಿ ತದುಕಿ ಒಂದು ಹದ್ದುಬಸ್ತಿನಲ್ಲಿ ಇಟ್ಟಿದ್ದೆವು. ನಮ್ಮಲ್ಲೊಬ್ಬ ಗೆಳೆಯ ಬಾಲಚಂದ್ರ. ಅವನಿಗೆ ಮೂರ್ಛೆ ರೋಗ ಇತ್ತು. ಇದ್ದಕ್ಕಿದ್ದಂಗೆ ಪ್ರಜ್ಞೆ ತಪ್ಪಿ ಬಿದ್ದು ಹೋಗುತ್ತಿದ್ದನು. ಹಾಗಾಗಿ ಅವನ ಹಿಂದೆ ಮುಂದೆ ನಾವ್ಯಾರಾದರೂ ಇದ್ದೇ ಇರುತ್ತಿದ್ದವು. ಹೆಚ್ಚಾಗಿ ಪ್ರಾರ್ಥನೆಗೆ ನಿಂತಾಗಲೇ ಅವನು ಬೀಳುತ್ತಿದ್ದುದು.

ಶನಿವಾರ ಶಾಲೆ ಬಿಟ್ಟ ನಂತರ ನಾವು ಸೀದಾ ಮನೆಗೆ ಹೋಗುತ್ತಿರಲಿಲ್ಲ. ಹೋದರೆ ಮುಳುಗಡೆಗೆ ಈಜು ಹೊಡೆಯಲು, ಇಲ್ಲಾಂದರೆ ಬೆಟ್ಟ ಗುಡ್ಡದಲ್ಲಿ ಆಯಾ ಕಾಲಕ್ಕೆ ಸಿಗುವ ಕಾಯಿ, ಹಣ್ಣುಗಳನ್ನು ಕಿತ್ತು ತಿನ್ನಲು ಹೊರಡುತ್ತಿದ್ದೆವು. ಅದು ಎಷ್ಟತ್ತರದ ಮರವಾದರೂ ಸರಿ, ಮುಳ್ಳು ಕಂಟಿಯಲ್ಲಿದ್ದರೂ ಸರಿ, ಬಿಡುತ್ತಿರಲಿಲ್ಲ.

ಮುಳುಗಡೆ ಸಮೀಪದಲ್ಲಿ ನಾಲ್ಕು ತೆಂಗಿನ ಮರಗಳು ಇದ್ದವು. ಅವು ಯಾರಿಗೂ ಸೇರಿದ ಮರಗಳಲ್ಲ. ಹಿಂದೆ ಅಲ್ಲಿ ಇದ್ದು ಲಿಂಗನಮಕ್ಕಿ ಅಣೆಕಟ್ಟು ಆದ ನಂತರ ಊರು ಮುಳುಗಿ ಹೋಗಿದ್ದು, ಅವರೆಲ್ಲಾ ಊರು ಬಿಟ್ಟು ಹೋಗಿದ್ದಾರೆ. ಆದರೇನಂತೆ, ಆ ತೆಂಗಿನ ಮರಗಳಲ್ಲಿ ಹುಲುಸಾಗಿ ಎಳನೀರು ಸಿಗುತ್ತಿತ್ತು. ಆದರೆ ನಾವೆಲ್ಲಾ ಬೇರೆ ಮರಗಳನ್ನು ಸಲೀಸಾಗಿ ಹತ್ತುತ್ತಿದ್ದವಾದರೂ ತೆಂಗಿನ ಮರ ಹತ್ತಲು ಬಾರದು. ಅದು ಬರು…

ತರ್ಲೆ ಬೈರಪ್ಪರ ಸಂಸ್ಕೃತ ರಾಗ

ತರ್ಲೆ ಬೈರಪ್ಪರಿಗೂ ಸಂಸ್ಕೃತಕ್ಕೂ ಅದೇನು ನಿಕಟ ಸಂಬಂಧವೋ ತಿಳಿದಿಲ್ಲ. ಆದರೆ ಆಗಾಗ ತಮ್ಮ ಸಂಸ್ಕೃತ ಪ್ರೀತಿಯನ್ನು ಕನ್ನಡಿಗರ ಮೇಲೆ ಹೇರುತ್ತಲೇ ಇದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ ಸಂಸ್ಕೃತ ವಿ.ವಿ. ಆಗಬೇಕು ಎಂದು ಯಡ್ಡಿಗೆ ಫರ್ಮಾನು ನೀಡಿದ್ದರು. ಈಗ ಹೈಸ್ಕೂಲು ಪಠ್ಯದಲ್ಲಿ ಸಂಸ್ಕೃತ ಕಡ್ಡಾಯವಾಗಲಿ ಎಂದು  ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ "ಸಂಸ್ಕತ ಅಧ್ಯಯನ ಮಾಡಿದವರ ಕನ್ನಡ ಗಟ್ಟಿಯಾಗಿರುತ್ತದೆ, ಅವರ ಮಾತು ಸ್ಪಷ್ಟವಾಗಿರುತ್ತದೆ" ಎಂದೆಲ್ಲಾ ಹೇಳಿದ್ದಾರೆ. ಆದರೆ ಕನ್ನಡವನ್ನು ಇವರಿಗಿಂತಲೂ ಸ್ಪಷ್ಟವಾಗಿ ಮಾತನಾಡುತ್ತಿದ್ದ ರಾಜ್‌ಕುಮಾರ‍್ ಅವರು ಸಂಸ್ಕೃತ ಹಾಗಿರಲಿ, ಕನ್ನಡ ಶಾಲೆಗೂ ಸರಿಯಾಗಿ ಹೋದವರಲ್ಲ ಅನ್ನೋದು ಗೊತ್ತಿಲ್ಲವೋ ಏನೋ. ಹಾಗೆಯೇ ಕನ್ನಡದ ಅನೇಕ ಸಾಹಿತಿಗಳು ಹೆಚ್ಚೇನೂ ಓದದೇನೇ ಉತ್ತಮ ಸಾಹಿತ್ಯ ರಚಿಸಿದ್ದಾರೆ. ಇದೇ ಬೈರಪ್ಪರು ಸಹ ಕನ್ನಡದಲ್ಲೇ ಸಾಹಿತ್ಯ ರಚಿಸಿದ್ದೇ ಹೊರತೂ ಸಂಸ್ಕೃತದಲ್ಲಿ ಅಲ್ಲ. ಸಂಸ್ಕೃತ ಈಗಾಗಲೇ ಒಂದು ಐಚ್ಚಿಕ ವಿಷಯವಾಗಿ ಹೈಸ್ಕೂಲಿನಲ್ಲಿ ಇದೆ. ಅದನ್ನೂ ಕಡ್ಡಾಯ ಮಾಡಿ ಮತ್ತೊಂದಿಷ್ಟು ಕನ್ನಡಿಗ ಮಕ್ಕಳು ಅನುತ್ತೀರ್ಣರಾಗುವ ಹಾಗೆ ಮಾಡದಿರಲಿ.