ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಾಲತಾಣಗಳ ಬಗ್ಗೆ ಒಂದಿಷ್ಟು ಮಾಹಿತಿ

ಜಾಲತಾಣ (website) ಅಂದರೆ ಎಲ್ಲರಿಗೂ ಗೊತ್ತು. ಆದರೆ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ಎಲ್ಲರಿಗೂ ಪೂರ್ತಿಯಾಗಿ ತಿಳಿದಿರಲಿಕ್ಕಿಲ್ಲ. ನಿಮಗೊಂದು ಜಾಲತಾಣದ ಅಗತ್ಯ ಇದೆ ಎಂದಾದಲ್ಲಿ ಅದರ ಬಗ್ಗೆ ಸ್ವಲ್ಪ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಏನಿದು ಜಾಲತಾಣ ? ಅಂತರ್ಜಾಲದಲ್ಲಿ ನಿರ್ದಿಷ್ಟ ಹೆಸರಿನೊಂದಿಗೆ ಗುರುತಿಸಿಕೊಂಡು ನಿಮ್ಮ / ಸಂಸ್ಥೆಯ / ಅಥವಾ ಯಾವುದೇ ಮಾಹಿತಿಯನ್ನು ಶೇಖರಿಸಿಟ್ಟುಕೊಂಡು ಆ ವಿಳಾಸದಲ್ಲಿ ಬಂದವರಿಗೆ ಅದನ್ನು ತೋರಿಸುವುದೇ ಜಾಲತಾಣ. ಹೀಗೆ ಹೇಳಿದರೆ ಅಷ್ಟಾಗಿ ಅರ್ಥ ಆಗಲಿಕ್ಕಿಲ್ಲ. ಸ್ವಲ್ಪ ವಿವರಿಸಬೇಕಾಗಬಹುದು.  ಜಾಲತಾಣವು ಕಾರ್ಯ ನಿರ್ವಹಿಸುವುದು URL ( uniform resource locator or universal resource locator ) ವಿಳಾಸದ ಆಧಾರದಲ್ಲಿ. ಅಂದರೆ ನೀವು ಒಂದು ನಿರ್ಧಿಷ್ಟ ಜಾಲತಾಣಕ್ಕೆ ಹೋಗಬೇಕಾದರೆ ನಿಮ್ಮ ಬ್ರೌಸರ್‌ನ ವಿಳಾಸದ ಪಟ್ಟಿಯಲ್ಲಿ ನಿಮಗೆ ಬೇಕಾದ URL (ವಿಳಾಸ) ಹಾಕಲೇಬೇಕು. [ ಉದಾ : ಈ ಬ್ಲಾಗ್‌ನ URL ಹೀಗಿದೆ : www.pisumathu4u.blogspot.in ]. ಅಂದರೆ ಪ್ರತಿಯೊಂದು ತಾಣಕ್ಕೂ ಒಂದೊಂದು ವಿಳಾಸ ಇರುತ್ತದೆ. ವಿಳಾಸ ತಪ್ಪಾದರೆ ನೀಮಗೆ ಬೇಕಾದ ತಾಣ ಸಿಗದೇ ಬೇರೆ ತಾಣಕ್ಕೆ ಹೋಗಿರುತ್ತೀರಿ. ಅಥವಾ Not Found ಸಂದೇಶ ಬರುತ್ತದೆ. ಅಂದರೆ ಒಂದು ಅಂಚೆ ಪತ್ರವನ್ನು ಸರಿಯಾದ ಸ್ಥಳಕ್ಕೆ ತಲುಪಿಸಲು ಹೇಗೆ ವಿಳಾಸ ಮುಖ್ಯವೋ ಹಾಗೆಯೇ ನಮಗೆ ಬೇಕಾದ ಜಾಲತಾಣವನ್ನು ತಲುಪಲು ಸರಿಯಾ