ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಾಧ್ಯಮಗಳವರು ಮದ್ಯಮಗಳಾದಾಗ

ಮೊನ್ನೆ ಮೊನ್ನೆ ನೆಟ್‌ನಲ್ಲಿ ಇಂತಹುದೊಂದು ಚಿತ್ರ ದೊರೆಯಿತು. ಒಬ್ಬ ವ್ಯಕ್ತಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಿದಾಗ ಎಂತವರ ಕರುಳುದಾರೂ ಚುರ‍್ ಎನ್ನದಿರದು. ಆದರೆ ಈ ಚಿತ್ರವನ್ನು ನೋಡಿದಾಗ ಅದಕ್ಕಿಂತಲೂ ಮಿಗಿಲಾಗಿ ವೇದನೆ ಕಾಡದಿರದು. ಒಬ್ಬ ವ್ಯಕ್ತಿ ಹೊತ್ತಿ ಉರಿಯುತ್ತಿದ್ದರೂ ಸಹ ಈ ರೀತಿ ಅಮಾನವೀಯವಾಗಿ ಅವನನ್ನು ಫೋಟೋ, ವೀಡಿಯೋ ತೆಗೆದುಕೊಳ್ಳುತ್ತಿರುವ ಮಾಧ್ಯಮದ ಮಂದಿಗೆ ಏನೆಂದು ಹೇಳೋಣ ? ಮಾಧ್ಯಮಗಳವರು ಮದ್ಯಮಗಳಾದಾಗ ಇಂತಹ ಆಘಾತಕಾರಿ ಘಟನೆಗಳು ನಡೆದು ಹೋಗುತ್ತವೆ. ಆ ಚಿತ್ರವನ್ನು ಒಮ್ಮೆ ಕೂಲಂಕುಶವಾಗಿ ನೋಡಿ. ಆದರೆ ಅಲ್ಲಿರುವ ಅಷ್ಟೊಂದು ಮಂದಿ ಮಾಧ್ಯಮ ಮಿತ್ರರು ಒಟ್ಟಾಗಿ ಪ್ರಯತ್ನಿಸಿದ್ದರೆ ಬೇಗನೆ ಬೆಂಕಿ ಆರಿಸಲು ಸಾಧ್ಯವಿತ್ತು. ಅದು ನಮ್ಮ ದೇಶದ್ದಲ್ಲ. ಢಾಕಾದಲ್ಲಿ ನಡೆದ ಘಟನೆ ಅನ್ನುವುದೇನೋ ನಿಜ. ಆದರೆ ವೃತ್ತಿ ಮತ್ತು ಮಾನವೀಯತೆ ಎಲ್ಲಾ ಕಡೆಗು ಒಂದೇ ಅಲ್ಲವೇ ? ಇಂತಹ ಘಟನೆಗಳು ನಮ್ಮ ದೇಶದಲ್ಲೇನೂ ನಡೆಯುವುದೇ ಇಲ್ಲ ಎಂದಲ್ಲ. ಕಳೆದ ವರ್ಷ ತಮಿಳುನಾಡಿನಲ್ಲಿ ವಿದ್ವಂಸಕಾರಿಗಳ ದಾಳಿಗೆ ಸಿಲುಕಿ ಮಂತ್ರಿಗಳ ರಕ್ಷಣಾ ಪಡೆಯ ಸಬ್‌ಇನ್ಸ್‌ಪೆಕ್ಟರ‍್ ಓರ್ವರು ಮೂವರು ಮಂತ್ರಿಗಳ ಎದುರಲ್ಲೇ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟರು. ಅದನ್ನು ಟಿವಿ ವಾಹಿನಿಯವರು ಚಿತ್ರಿಸಿ (ಮಂತ್ರಿಗಳನ್ನೂ ತೋರಿಸುತ್ತಾ) ಜನರಿಗೆ ಹೇಳಿದ್ದು ಏನು ಗೊತ್ತೇ ? "ಮಂತ್ರಿಗಳ ಅಮಾನವೀಯತೆಯಿಂದ ಸಬ

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ   ಸಮ್ಮೋಹನ ಅಂದರೇನು ? ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು. ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ

ಜವಾಬ್ದಾರಿ ಮರೆತ ಕನ್ನಡಿಗರು

ಇತ್ತೀಚಿಗೆ ನನ್ನ ಬ್ಲಾಗ್‌ನ ಲೇಖನವೊಂದನ್ನು ಮೆಚ್ಚಿ ಕನ್ನಡದ ಹಿರಿಯ ಸಂಪಾದಕರೊಬ್ಬರು ಮಿನ್ನಂಚೆ ಕಳಿಸಿದ್ದರು. ಅವರ ಮಿನ್ನಂಚೆಯನ್ನು ನೋಡಿ ಕುಶಿಯಾದರೂ ಅವರು ಬಳಸಿದ ಆಂಗ್ಲವನ್ನು ನೋಡಿ ಬೇಸರವಾಯ್ತು. ಕನ್ನಡದ ಪತ್ರಿಕೆಯ ಸಂಪಾದಕರು ಕನ್ನಡದ ಒಬ್ಬನಿಗೆ ಪತ್ರಿಸುವಾಗ ಯಾಕೆ ಆಂಗ್ಲ ಉಪಯೋಗಿಸಬೇಕು ಅನ್ನುವ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಒಂದು ಕಡೆ ಹಣ ಬರುವ ಉದ್ಯಮವಾಗಿ ಕನ್ನಡದ ಪತ್ರಿಕೆ ನಡೆಸುತ್ತಾ ಇನ್ನೊಂದೆಡೆ ಪತ್ರಗಳನ್ನು ಈ ರೀತಿ ಬೇರೊಂದು ಭಾಷೆಯಲ್ಲಿ ಬರೆಯುವುದು ಎಷ್ಟು ಸರಿ ? ಕಡೇ ಪಕ್ಷ ವಿದೇಶಿ ಸಂಸ್ಥೆಯಾದ ಗೂಗಲ್‌ನವರಿಗೆ ಇರುವ ಜವಾಬ್ದಾರಿ ಸಹ ನಮ್ಮ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಇಲ್ಲವಾಗಿದೆ ಎಂದರೆ ಅಚ್ಚರಿ ಆಗುತ್ತದೆ. ಗೂಗಲ್‌ನವರು ವ್ಯಾಪಾರದ ದೃಷ್ಟಿಯಿಂದಲೇ ಅಂದುಕೊಂಡರೂ ಕನ್ನಡಕ್ಕೆ ಉತ್ತಮ ಸ್ಥಾನಮಾನವನ್ನೇ ನೀಡುತ್ತಿದ್ದಾರೆ. ಅವರ ಎಲ್ಲಾ ವಿಭಾಗದಲ್ಲೂ ಕನ್ನಡವನ್ನೂ ಇತರ ಭಾಷೆಗಲ ಜೊತೆ ತರುತ್ತಿದ್ದಾರೆ. ಆದರೆ ಎಷ್ಟು ಜನ ಕನ್ನಡಿಗರು ಇದನ್ನು ಉಪಯೋಗಿಸುತ್ತಾರೆ ? ಉತ್ತರ ಕಂಡಿತಾ ನಿರಾಶಾದಾಯಕ.