ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡದ ಪುಸ್ತಕಗಳು

ಕನ್ನಡದ ಪುಸ್ತಕಗಳ ಮಾಹಿತಿ ತಾಣ. ಇಲ್ಲಿ ಯಾರು ಬೇಕಾದರೂ ತಮ್ಮ ಪುಸ್ತಕಗಳನ್ನು ಪರಿಚಯಿಸಬಹುದು. http://kannadabooks.org/ ಉದ್ದೇಶ : ಇದು ಕನ್ನಡದ ಪ್ರಕಾಶಕರನ್ನು ಹಾಗೂ ಲೇಖಕರನ್ನು ಮತ್ತು ಓದುಗರನ್ನು ಆನ್‌ಲೈನ್ ಮೂಲಕ ಒಂದು ಮಾಡುವ ಪ್ರಯತ್ನ.   ದಿನನಿತ್ಯ ರಾಜ್ಯದ ಒಂದಿಲ್ಲೊಂದು ಕಡೆ ಕನ್ನಡದ ಪುಸ್ತಕಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಷ್ಟೋ ಜನ ಲೇಖಕ/ಪ್ರಕಾಶಕರು ತಮ್ಮ ಪುಸ್ತಕದ ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನೂ ಮಾಡುವುದಿಲ್ಲ. ಮಾಡಿದರೂ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಅಷ್ಟಕಷ್ಟೇ. ಹಿರಿಯ ಲೇಖಕರ ಪುಸ್ತಕವೊಂದು ಬಿಡುಗಡೆಗೂ ಮುನ್ನ ಸುದ್ದಿ ಮಾಡಿದರೆ, ಕಿರಿಯ ಲೇಖಕರ ಪುಸ್ತಕಗಳನ್ನು ಕೇಳುವವರೇ ಇಲ್ಲ. ಅವರ ಪುಸ್ತಕಗಳು ಚೆನ್ನಾಗಿದ್ದರೂ ಅದು ನಿಜವಾದ ಓದುಗರನ್ನು ತಲುಪುವಲ್ಲಿ ಸೋಲುತ್ತಿದೆ. ಇದಕ್ಕೆ ಕಾರಣ ಲೇಖಕ/ಪ್ರಕಾಶಕ ಮತ್ತು ಓದುಗರ ನಡುವಿನ ಸಂಪರ್ಕದ ಕೊರತೆಯೇ ಆಗಿದೆ.   ಓದುಗರು ಯಾವುದೋ ದೊಡ್ಡ ಪುಸ್ತಕ ಮಳಿಗೆಗೆ ಹೋಗಿ ಮೊದಲೇ ಕೇಳಿ ತಿಳಿದಿದ್ದ ಪುಸ್ತಕಗಳನ್ನೇ ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬೇರೆ ಲೇಖಕರ ಉತ್ತಮ ಪುಸ್ತಕಗಳ ಪರಿಚಯವೇ ಓದುಗರಿಗೆ ಆಗಿರುವುದಿಲ್ಲ. ಆದರೆ ಈ ತಾಣದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಲೇಖಕರು ಮತ್ತು ಪ್ರಕಾಶಕರು ತಮ್ಮ ಪುಸ್ತಕಗಳನ್ನು ನೇರವಾಗಿ ಇಲ್ಲಿ ಪರಿಚಯಿಸಿಕೊಳ್ಳಬಹುದು. ಈ ತಾನವನ್ನು ಜಾಲಾಡುವ ಓದುಗರಿಗೆ ಎಲ್ಲಾ ಪುಸ್ತ

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ (ಮುಂಗಳೀಮನೆ) ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ನಮ್ಮೂರಾದ ಮುಂಗಳಿಮನೆಗೆ ಇರುವ ಹದಿನೈದು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕ

ಡಬ್ಬಿಂಗ್ ಬೇಕೇ ಬೇಡವೇ ?

"ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಡ" ಎಂದು ಶುರುವಾದ ಹೋರಾಟ ಹಲವು ವರ್ಷಗಳ ತರುವಾಯ ಇಂದು "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಎಂಬ ಹೋರಾಟವಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಕಾಲ ಬದಲಾಗಿದ್ದರೂ, ಹೋರಾಟಗಳ ದಿಕ್ಕೇ ಬದಲಾಗಿದ್ದರೂ, ಹೋರಾಟಗಾರರೂ ಬದಲಾಗಿದ್ದರೂ ಸಹ "ಕನ್ನಡದ ಉಳಿವು" ಎಂಬ ಪೆಡಂಭೂತ ಮಾತ್ರ ಹಾಗೆಯೇ ಉಳಿದುಕೊಂಡಿರುವುದು ದುರ್ದೈವವೇ ಸರಿ. ಆದರೆ ಹಿಂದಿನ ಹೋರಾಟಗಾರರಿಗೂ ಇಂದಿನ ಆನ್‌ಲೈನ್ (ಫೇಸ್‌ಬುಕ್, ಟ್ವಿಟರ‍್) ಹೋರಾಟಗಾರರಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ನಿಜಾವ ಕನ್ನಡಾಭಿಮಾನಿಗಳು ಮನಗಾಣಬೇಕು. ಈ ಆನ್‌ಲೈನ್ ( ಒನ್‌ಲೈನ್ ) ಹೋರಾಟಗಾರರು ಇಂದು "ಪರಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ" ಎಂದು ಹೇಳುತ್ತಿರುವುದೇನೋ ಸರಿ. ಆದರೆ ಅದರ ಹಿಂದೆ ನಿಜಕ್ಕೂ ಕನಡದ ಕಾಳಜಿ ಇದೆಯಾ ? ಎಂಬುದನ್ನು ಸ್ವಲ್ಪ ಪರಿಶೀಲಿಸಬೇಕಾಗಿದೆ. ಏಕೆಂದರೆ ನಾನು ಗಮನಿಸಿದಂತೆ ಇಂತಹ ಡಬ್ಬಿಂಗ್ ಪರವಾದಿಗಳಲ್ಲಿ ಶೇಕಡಾ ಹತ್ತರಷ್ಟು ಜನರೂ ಕನ್ನಡ ಲಿಪಿ ಬಳಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಉಳಿದಂತೆ ಕಂಗ್ಲಿಷ್ ಬಳಸುವವರೇ ಹೆಚ್ಚು. ಇನ್ನು ಕೆಲವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ (ಕಷ್ಟಪಟ್ಟು) ಹಾಕಿ, ಅಲ್ಲಿಗೆ ತಮ್ಮ ಕನ್ನಡ ಕೈಂಕರ್ಯ ಮುಗಿಯಿತೆಂದು ಭಾವಿಸಿ, ನಂತರ ಆಂಗ್ಲವೇ ದೇವರು ಎಂದು ಆಂಗ್ಲಕ್ಕೆ ಮೊರೆ