ವಿಷಯಕ್ಕೆ ಹೋಗಿ

ಕನ್ನಡದ ಪುಸ್ತಕಗಳು


ಕನ್ನಡದ ಪುಸ್ತಕಗಳ ಮಾಹಿತಿ ತಾಣ. ಇಲ್ಲಿ ಯಾರು ಬೇಕಾದರೂ ತಮ್ಮ ಪುಸ್ತಕಗಳನ್ನು ಪರಿಚಯಿಸಬಹುದು.


http://kannadabooks.org/


ಉದ್ದೇಶ :

ಇದು ಕನ್ನಡದ ಪ್ರಕಾಶಕರನ್ನು ಹಾಗೂ ಲೇಖಕರನ್ನು ಮತ್ತು ಓದುಗರನ್ನು ಆನ್‌ಲೈನ್ ಮೂಲಕ ಒಂದು ಮಾಡುವ ಪ್ರಯತ್ನ.

 

ದಿನನಿತ್ಯ ರಾಜ್ಯದ ಒಂದಿಲ್ಲೊಂದು ಕಡೆ ಕನ್ನಡದ ಪುಸ್ತಕಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಷ್ಟೋ ಜನ ಲೇಖಕ/ಪ್ರಕಾಶಕರು ತಮ್ಮ ಪುಸ್ತಕದ ಬಿಡುಗಡೆ ಸಮಾರಂಭದ ಕಾರ್ಯಕ್ರಮವನ್ನೂ ಮಾಡುವುದಿಲ್ಲ. ಮಾಡಿದರೂ ಅದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಅಷ್ಟಕಷ್ಟೇ. ಹಿರಿಯ ಲೇಖಕರ ಪುಸ್ತಕವೊಂದು ಬಿಡುಗಡೆಗೂ ಮುನ್ನ ಸುದ್ದಿ ಮಾಡಿದರೆ, ಕಿರಿಯ ಲೇಖಕರ ಪುಸ್ತಕಗಳನ್ನು ಕೇಳುವವರೇ ಇಲ್ಲ. ಅವರ ಪುಸ್ತಕಗಳು ಚೆನ್ನಾಗಿದ್ದರೂ ಅದು ನಿಜವಾದ ಓದುಗರನ್ನು ತಲುಪುವಲ್ಲಿ ಸೋಲುತ್ತಿದೆ. ಇದಕ್ಕೆ ಕಾರಣ ಲೇಖಕ/ಪ್ರಕಾಶಕ ಮತ್ತು ಓದುಗರ ನಡುವಿನ ಸಂಪರ್ಕದ ಕೊರತೆಯೇ ಆಗಿದೆ.

 

ಓದುಗರು ಯಾವುದೋ ದೊಡ್ಡ ಪುಸ್ತಕ ಮಳಿಗೆಗೆ ಹೋಗಿ ಮೊದಲೇ ಕೇಳಿ ತಿಳಿದಿದ್ದ ಪುಸ್ತಕಗಳನ್ನೇ ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬೇರೆ ಲೇಖಕರ ಉತ್ತಮ ಪುಸ್ತಕಗಳ ಪರಿಚಯವೇ ಓದುಗರಿಗೆ ಆಗಿರುವುದಿಲ್ಲ. ಆದರೆ ಈ ತಾಣದಲ್ಲಿ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಲೇಖಕರು ಮತ್ತು ಪ್ರಕಾಶಕರು ತಮ್ಮ ಪುಸ್ತಕಗಳನ್ನು ನೇರವಾಗಿ ಇಲ್ಲಿ ಪರಿಚಯಿಸಿಕೊಳ್ಳಬಹುದು. ಈ ತಾನವನ್ನು ಜಾಲಾಡುವ ಓದುಗರಿಗೆ ಎಲ್ಲಾ ಪುಸ್ತಕಗಳ ಸ್ಪಷ್ಟ ಮಾಹಿತಿ ದೊರೆಯುತ್ತದೆ.

 

ಮಾಹಿತಿ :

 

 • ಈ ತಾಣದ ಸೇವೆಯು ಎಲ್ಲರಿಗೂ ಉಚಿತವಾಗಿದೆ.
 • ಹಾಗೂ ಲೇಖಕ ಪ್ರಕಾಶಕರು ನೇರವಾಗಿ ಓದುಗರಿಗೆ ಪರಿಚಯಗೊಳ್ಳುತ್ತಾರೆ.
 • ಲೇಖಕ/ಪ್ರಕಾಶಕರು ನೇರವಾಗಿ ಓದುಗರಿಗೆ ತಮ್ಮ ಪುಸ್ತಕವನ್ನು ಪರಿಚಯಿಸುವ ಅವಕಾಶ ಇದಾಗಿದೆ.
 • ಕನ್ನಡದಲ್ಲಿ ಪ್ರಕಟಗೊಳ್ಳುವ ತಮ್ಮ ಪುಸ್ತಕವನ್ನು ಸರಿಯಾದ ಓದುಗರಿಗೆ ಲೇಖಕ/ಪ್ರಕಾಶಕರು ಈ ಜಾಲತಾಣದ ಮೂಲಕ ಪರಿಚಯಿಸಬಹುದಾಗಿದೆ.
 • ಓದುಗರು ತಮಗೆ ಇಷ್ಟ ಬಂದ ಪುಸ್ತಕವನ್ನು ನೇರವಾಗಿ ಪ್ರಕಾಶಕರಿಂದ ತರಿಸಿಕೊಳ್ಳುವ ಅವಕಾಶ. ಇದಕ್ಕಾಗಿ ನಮ್ಮ ತಾಣಕ್ಕೆ ಯಾವುದೇ ವೆಚ್ಚ ತೆರುವ ಅಗತ್ಯವಿಲ್ಲ.
 • ಕನ್ನಡದಲ್ಲಿ ಪ್ರಕಟಗೊಳ್ಳುವ ಪುಸ್ತಕಗಳ ಬಗ್ಗೆ ಪ್ರಪಂಚದಾದ್ಯಂತ ಎಲ್ಲಾ ಓದುಗ ಮಿತ್ರರಿಗೂ ದಿನನಿತ್ಯ ಮಾಹಿತಿ ಲಭ್ಯವಾಗುತ್ತದೆ.
 • ಈ ತಾಣದಲ್ಲಿ ಉಚಿತವಾಗಿ ಖಾತೆಯೊಂದನ್ನು ತೆರೆಯುವ ಮೂಲಕ ಯಾರು ಬೇಕಾದರೂ ತಮ್ಮ ಪುಸ್ತಕಗಳನ್ನು ಸೇರ್ಪಡೆ ಮಾಡಬಹುದು.
 • ಉತ್ತಮ ಪುಸ್ತಕಗಳ ಬಗ್ಗೆ ಓದುಗರೂ ಸಹ ಮಾಹಿತಿ ಸೇರಿಸಿ ಬೇರೆ ಓದುಗರಿಗೆ ಸಹಾಯವಾಗುವಂತೆ ಮಾಡಬಹುದು.
 • ಪುಸ್ತಕ ಮಳಿಗೆಯವರೂ ತಮ್ಮ ಬಳಿ ಇರುವ ಪುಸ್ತಕಗಳ ಮಾಹಿತಿ ಒದಗಿಸಿ ಗ್ರಾಹಕರನ್ನು ಪಡೆಯಲು ಅವಕಾಶವಿದೆ.
 • ಪುಸ್ತಕಗಳ ಬಗ್ಗೆ ಓದುಗರು ಪ್ರತಿಕ್ರಿಯೆಯನ್ನೂ ನೀಡಬಹುದು. ( ಇದಕ್ಕೆ ನೀವು ಈ ಜಾಲತಾಣದ ಸದಸ್ಯರಾಗಿರಬೇಕು )
 • ಪುಸ್ತಕಗಳಿಗೆ ಮತ ನೀಡುವ ಮೂಲಕ ಆಯಾ ಪುಸ್ತಕದ ಮೌಲ್ಯದ ಬಗ್ಗೆ ಇತರರಿಗೆ ತಿಳಿಯುವಂತೆ ಮಾಡಬಹುದು.
 • ಪ್ರಕಾಶಕರನ್ನು ನೇರವಾಗಿ ಸಂಪರ್ಕಿಸಬಹುದು.

 

 

ನಿಯಮಗಳು :

ಕನ್ನಡದ ಲೇಖಕ ಪ್ರಕಾಶಕರಿಗೆ ಅನುಕೂಲ ಮಾಡಿ ಆ ಮೂಲಕ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಲು ನಿರ್ಮಿಸಿರುವ ಜಾಲತಾಣ ಇದು.

ಆದರೆ,

 

 • ಇಲ್ಲಿ ಸೇರಿಸುವ ಪುಸ್ತಕಗಳ ಗುಣಮಟ್ಟದ ಬಗ್ಗೆ ಈ ಜಾಲತಾಣವು ಜವಾಬ್ದಾರಿಯಾಗಿರುವುದಿಲ್ಲ.
 • ಪ್ರಕಾಶಕ/ಲೇಖಕರ ಜೊತೆ ವ್ಯವಹರಿಸುವುದು ಓದುಗರ ಸ್ವಂತ ವಿಚಾರ. ಅದರಲ್ಲಿ ಯಾವುದೇ ರೀತಿಯ ತೊಂದರೆ ಏರ್ಪಟ್ಟರೆ ಅದಕ್ಕೂ ಈ ಜಾಲತಾಣಕ್ಕೂ ಯಾವುದೇ ಸಂಬಂಧವಿಲ್ಲ.
 • ಪ್ರತಿಕ್ರಿಯೆ ನೀಡುವಾಗ ಅಸಭ್ಯ ಪದ ಬಳಕೆ ಮಾಡುವಂತಿಲ್ಲ. ಅಥವಾ ಯಾರಿಗೂ ನೋವಾಗುವಂತೆ ವರ್ತಿಸುವಂತಿಲ್ಲ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಪುಸ್ತಕವನ್ನೂ ತೆಗಳುವಂತಿಲ್ಲ. ವಿಮರ್ಶಾತ್ಮಕವಾದ ಹೇಳಿಕೆಗಳಿಗೆ ಮಾತ್ರ ಅವಕಾಶ.
 • ಒಂದು ಪುಸ್ತಕವು ಚೆನ್ನಾಗಿಲ್ಲ ಎಂದು ಯರಾದರೂ ಪ್ರತಿಕ್ರಿಯೆ ಮಾಡಿದ ಮಾತ್ರಕ್ಕೆ ಅವರೊಂದಿಗೆ ಲೇಖಕ/ಪ್ರಕಾಶಕರು ಎಗರಿ ಹೋಗುವಂತಿಲ್ಲ.
 • ಎಲ್ಲರೊಂದಿಗೂ ಸೌಹಾರ್ದಯುತವಾಗಿ ವರ್ತಿಸಬೇಕು.

 

 

* ನಿಯಮಗಳನ್ನು ಮೀರುವ ಸದಸ್ಯರ ಪ್ರತಿಕ್ರಿಯೆಗಳನ್ನು ಅಳಿಸಲಾಗುವುದು. ಮತ್ತೂ ಮುಂದುವರಿದರೆ ಅವರನ್ನು ತಾಣದಿಂದ ತೆಗೆದು ಹಾಕಲಾಗುವುದು.

ಹೆಚ್ಚಿನ ನಿಯಮಗಳು ತಾಣದ ಮಾಲೀಕರಿಗೆ ಸೇರಿದ್ದು ಯಾವುದೇ ಸಮಯದಲ್ಲಿ ನಿಯಮಗಳನ್ನು ಸೇರಿಸುವ, ಬದಲಯಿಸುವ ಹಕ್ಕು ಇರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…